Vishwadarshana Group

Vishwadarshana Group

Share

Vishwadarshana group of institutions is committed to fostering the best in students by providing high-quality and holistic learning.

19/08/2026

ತುಳಸೀದಾಸರು ಭಾರತೀಯ ಸನಾತನ ಧರ್ಮದ ಶ್ರೇಷ್ಠ ಹರಿ ದಾಸರು, ಕವಿಗಳು ಹಾಗೂ ತತ್ವಜ್ಞಾನಿಗಳಲ್ಲಿ ಒಬ್ಬರಾಗಿದ್ದು, ಭಕ್ತಿ ಸಾಹಿತ್ಯಕ್ಕೆ ನೀಡಿದ ಅಪಾರ ಕೊಡುಗೆಗೆ ಪ್ರಸಿದ್ಧರಾಗಿದ್ದಾರೆ. ಶ್ರಾವಣ ಮಾಸದ ಶುಕ್ಲ ಪಕ್ಷದ ಸಪ್ತಮಿ ತಿಥಿಯಂದು ಶ್ರೀ ಗೋಸ್ವಾಮಿ ತುಳಸೀದಾಸರ ಜಯಂತಿಯನ್ನು ಭಾರತದಾದ್ಯಂತ ಅತ್ಯಂತ ಶ್ರದ್ಧೆ ಮತ್ತು ಭಕ್ತಿಯಿಂದ ಆಚರಿಸಲಾಗುತ್ತದೆ. ಇವರು 16ನೇ ಶತಮಾನದಲ್ಲಿ ಉತ್ತರ ಪ್ರದೇಶದ ರಾಜಾಪುರ ಎಂಬಲ್ಲಿ ಜನಿಸಿದರು. ಶ್ರೀರಾಮನ ಪರಮ ಭಕ್ತರಾಗಿದ್ದ ತುಳಸೀದಾಸರು ತಮ್ಮ ಇಡೀ ಜೀವನವನ್ನು ಶ್ರೀರಾಮನ ಗುಣಗಾನ ಹಾಗೂ ಸಮಾಜದ ಧಾರ್ಮಿಕ ಜಾಗೃತಿಗಾಗಿ ಮುಡಿಪಾಗಿಟ್ಟರು.

ತುಳಸೀದಾಸರ ಅತ್ಯಂತ ಮಹತ್ತರವಾದ ಕೊಡುಗೆ ಎಂದರೆ 'ಶ್ರೀರಾಮಚರಿತಮಾನಸ' ಎಂಬ ಮಹಾಕಾವ್ಯವನ್ನು ಅವಧಿ ಭಾಷೆಯಲ್ಲಿ ರಚಿಸಿದ್ದು. ಆ ಕಾಲದಲ್ಲಿ ಸಂಸ್ಕೃತದಲ್ಲಿದ್ದ ರಾಮಾಯಣವು ಸಾಮಾನ್ಯ ಜನರಿಗೆ ತಲುಪುವುದು ಕಷ್ಟಕರವಾಗಿದ್ದಾಗ, ತುಳಸೀದಾಸರು ಸರಳ ಜನಭಾಷೆಯಲ್ಲಿ ಈ ಗ್ರಂಥವನ್ನು ಬರೆದು ಪ್ರತಿಯೊಂದು ಮನೆಗೂ ರಾಮನ ಕಥೆಯನ್ನು ತಲುಪಿಸಿದರು. ಇದು ಕೇವಲ ಧಾರ್ಮಿಕ ಗ್ರಂಥವಾಗಿರದೆ, ಮೌಲ್ಯಗಳು, ಕೌಟುಂಬಿಕ ಪ್ರೀತಿ, ಧರ್ಮ ಮತ್ತು ಭಕ್ತಿಯ ಆದರ್ಶ ಮಾರ್ಗದರ್ಶಿಯಾಗಿದೆ. ಇದರ ಜೊತೆಗೆ ಇವರು ಹನುಮಾನ್ ಚಾಲೀಸಾ, ವಿನಯ ಪತ್ರಿಕಾ ಮತ್ತು ಕವಿತಾವಳಿಯಂತಹ ಪ್ರಸಿದ್ಧ ಕೃತಿಗಳನ್ನು ರಚಿಸಿ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ.

ಸಂತ ತುಳಸೀದಾಸರ ಜಯಂತಿಯು ಅವರ ಪವಿತ್ರವಾದ ವಿಚಾರ ಧಾರೆಗಳು, ನಿಷ್ಕಲ್ಮಶ ರಾಮಭಕ್ತಿ ಹಾಗೂ ಅಮೂಲ್ಯವಾದ ಸಾಹಿತ್ಯ ಸೇವೆಯನ್ನು ಭಕ್ತಿಪೂರ್ವಕವಾಗಿ ಸ್ಮರಿಸುವ ಪಾವನ ಪರ್ವದಿನವಾಗಿದೆ. ತುಳಸೀದಾಸರು ತಮ್ಮ ಕಾಲಾತೀತ ಕೃತಿಗಳ ಮೂಲಕ ಜಗತ್ತಿಗೆ ಸಾರಿದ ಸತ್ಯ, ಪ್ರೀತಿ, ಅಹಿಂಸೆ, ಕರುಣೆ ಹಾಗೂ ಅನನ್ಯ ಭಕ್ತಿಯ ಸಂದೇಶಗಳು ಇಂದಿನ ಆಧುನಿಕ ಸಮಾಜಕ್ಕೂ ಅತ್ಯಂತ ಪ್ರಸ್ತುತವಾಗಿದ್ದು, ಮಾನವಕುಲಕ್ಕೆ ಧರ್ಮ ಮತ್ತು ಸನ್ಮಾರ್ಗದಲ್ಲಿ ನಡೆಯಲು ನಿರಂತರ ದಿವ್ಯ ಪ್ರೇರಣೆಯನ್ನು ನೀಡುತ್ತವೆ. ಅಂತಹ ಮಹಾನ್ ಯುಗಪುರುಷ, ರಾಮಚರಿತಮಾನಸ ಕಾವ್ಯದ ರಚನಾಕಾರ ಸಂತ ತುಳಸೀದಾಸರ ಜಯಂತಿಯ ಹಾರ್ದಿಕ ಶುಭಾಶಯಗಳು.


18/08/2026

ಪ್ರಶ್ನೆಪತ್ರಿಕೆಗಳಲ್ಲಿ ಲೋಪಗಳು ಕಂಡುಬಂದ ಹಿನ್ನೆಲೆಯಲ್ಲಿ ಮೂರು ವಿಷಯಗಳ ಯುಜಿಸಿ-ನೆಟ್ ಪರೀಕ್ಷೆಯನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ರದ್ದುಗೊಳಿಸಿದ ಬೆನ್ನಲ್ಲೇ, ಎಲ್ಲಾ ಪರೀಕ್ಷಾ ಪ್ರಕ್ರಿಯೆಗಳ ಸಮಗ್ರ ಲೆಕ್ಕಪರಿಶೋಧನೆ ನಡೆಸುವಂತೆ ಹಾಗೂ ಸುಧಾರಣಾ ಕ್ರಮಗಳ ಕುರಿತು ವರದಿ ಸಲ್ಲಿಸುವಂತೆ ಕೇಂದ್ರ ಶಿಕ್ಷಣ ಸಚಿವಾಲಯವು ಎನ್‍ಟಿಎಗೆ ನಿರ್ದೇಶನ ನೀಡಿದೆ. ಕೇಂದ್ರ ಶಿಕ್ಷಣ ಸಚಿವ ಪ್ರಲ್ಹಾದ್ ಜೋಶಿ ಅವರು ಸಚಿವಾಲಯದ ಹಿರಿಯ ಅಧಿಕಾರಿಗಳು ಮತ್ತು ಎನ್‍ಟಿಎ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಈ ಆದೇಶ ಹೊರಡಿಸಿದ್ದಾರೆ. ಈ ಮಧ್ಯೆ, ಪ್ರಶ್ನೆಪತ್ರಿಕೆ ದೋಷಕ್ಕೆ ಸಂಬಂಧಿಸಿದಂತೆ 50ಕ್ಕೂ ಹೆಚ್ಚು ಸಿಬ್ಬಂದಿಯನ್ನು ಎನ್‍ಟಿಎ ವಜಾಗೊಳಿಸಿದ್ದು, ಒಟ್ಟಾರೆ ಪರೀಕ್ಷಾ ವ್ಯವಸ್ಥೆಯ ಸುಧಾರಣೆಗಾಗಿ ಪ್ರಮುಖ ಹುದ್ದೆಗಳಿಗೆ ವೃತ್ತಿಪರರನ್ನು ನಿಯೋಜಿಸಿದೆ.

ಕಳೆದ ಜೂನ್‌ನಲ್ಲಿ ನಡೆದ ಯುಜಿಸಿ-ನೆಟ್ ಪರೀಕ್ಷೆಯ ಇಂಗ್ಲಿಷ್, ವಾಣಿಜ್ಯ ಮತ್ತು ಸಮಾಜಶಾಸ್ತ್ರ ವಿಷಯಗಳ ಪ್ರಶ್ನೆಪತ್ರಿಕೆಗಳಲ್ಲಿ ಹಲವಾರು ದೋಷಗಳು ಪತ್ತೆಯಾಗಿದ್ದವು. ಈ ದೋಷಗಳ ಬಗ್ಗೆ ವಿದ್ಯಾರ್ಥಿಗಳು ಮೊದಲಿನಿಂದಲೂ ಕಳವಳ ವ್ಯಕ್ತಪಡಿಸಿದ್ದು, ಭಾನುವಾರಷ್ಟೇ ಈ ಸಮಸ್ಯೆಗಳನ್ನು ಒಪ್ಪಿಕೊಂಡ ಎನ್‍ಟಿಎ ಈ ಮೂರು ವಿಷಯಗಳ ಪರೀಕ್ಷೆಯನ್ನು ರದ್ದುಗೊಳಿಸಿ, ಸೆಪ್ಟೆಂಬರ್ 9 ಮತ್ತು 10ರಂದು ಹೊಸದಾಗಿ ನಡೆಸುವುದಾಗಿ ಘೋಷಿಸಿದೆ. ಈ ಕುರಿತು ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ವರದಿ ಪ್ರಕಟವಾಗಿದೆ.
Vijay Karnataka
Hariprakash Konemane


18/08/2026

ರಾಜ್ಯದ ಕೈಗಾರಿಕೆಗಳು ಮತ್ತು ಉದ್ಯಮಗಳ ಬೇಡಿಕೆಗೆ ತಕ್ಕಂತೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲು ಕರ್ನಾಟಕ ಸರ್ಕಾರ ಮುಂದಾಗಿದ್ದು, 2026ನೇ ಸಾಲಿನ ಬಜೆಟ್ ಘೋಷಣೆಯಂತೆ ರಾಜ್ಯದ 120 ಸರ್ಕಾರಿ ಐಟಿಐ ಕಾಲೇಜುಗಳಲ್ಲಿ ಆಧುನಿಕ ಸ್ಕಿಲ್ ಲ್ಯಾಬ್ ಗಳನ್ನು ಸ್ಥಾಪಿಸಲು ನಿರ್ಧರಿಸಿದೆ. ಕೆ-ಸ್ಕಿಪ್ ಹೆಸರಿನ ಈ ಯೋಜನೆಯಡಿ ಮುಂದಿನ ಐದು ವರ್ಷಗಳಲ್ಲಿ ಹಂತ ಹಂತವಾಗಿ 120 ಕಾಲೇಜುಗಳ ಮೂಲಸೌಕರ್ಯ ಉನ್ನತೀಕರಣ, ಕಲಿಪೋ ಪಕರಣಗಳ ನವೀಕರಣ ಹಾಗೂ ಬೋಧಕರ ಸಾಮರ್ಥ್ಯ ವೃದ್ಧಿಗೆ ಬರೋಬ್ಬರಿ 1,386 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ. ಈ ಯೋಜನೆಗೆ ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ 980 ಕೋಟಿ ರೂ. ಅನುದಾನ ನೀಡಲಿದ್ದು, ಉಳಿದ ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಲಿದೆ.

ತರಗತಿಯ ಸೈದ್ಧಾಂತಿಕ ಪಾಠಗಳ ಹೊರತಾಗಿ ಉದ್ಯಮಗಳಲ್ಲಿನ ಕಾರ್ಯತಂತ್ರ, ಹೊಸ ತಂತ್ರಜ್ಞಾನದ ಬಳಕೆ ಹಾಗೂ ಪ್ರಾಯೋಗಿಕ ಜ್ಞಾನವನ್ನು ನೀಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಸರ್ಕಾರಿ ಐಟಿಐ ಕಾಲೇಜುಗಳು, ಕರ್ನಾಟಕ ಜರ್ಮನ್ ತಾಂತ್ರಿಕ ತರಬೇತಿ ಸಂಸ್ಥೆ, ಕರ್ನಾಟಕ ಕೌಶಲ ಅಭಿವೃದ್ಧಿ ನಿಗಮ ಹಾಗೂ ಜೂನಿಯರ್ ಟ್ರೈನಿಂಗ್ ಸ್ಕೂಲ್ ಸಂಸ್ಥೆಗಳಲ್ಲಿ ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ಯೋಜನೆಯಡಿ ಪ್ರತಿಯೊಂದು ಕಾಲೇಜಿನಲ್ಲಿ ತಲಾ ಒಂದು ಸ್ಕಿಲ್ ಲ್ಯಾಬ್ ಸ್ಥಾಪಿಸುವ ಗುರಿ ಹೊಂದಲಾಗಿದ್ದು, ತರಬೇತುದಾರರಿಗೆ ಟ್ರೈನಿಂಗ್ ಆಫ್ ಟ್ರೈನರ್ಸ್ ಮೂಲಕ ಆಧುನಿಕ ಕೌಶಲಗಳ ತರಬೇತಿ ನೀಡಲಾಗುತ್ತದೆ.

ಈ ಯೋಜನೆಯ ಕುರಿತು ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸುಬೋಧ್ ಯಾದವ್ ಅವರು ಮಾತನಾಡಿ, ಐಟಿಐ ಕಾಲೇಜುಗಳ ವಿದ್ಯಾರ್ಥಿಗಳಿಗೆ ಸಂವಹನ, ತಂತ್ರಜ್ಞಾನ ಮತ್ತು ಉದ್ಯೋಗ ಕೌಶಲಗಳ ತರಬೇತಿ ಸಿಗಲಿದ್ದು, ಇದು ತಾಂತ್ರಿಕ ಶಿಕ್ಷಣಕ್ಕೆ ಮತ್ತಷ್ಟು ಬಲ ತುಂಬಲಿದೆ ಹಾಗೂ ವಿದ್ಯಾರ್ಥಿಗಳು ಉದ್ಯೋಗ ಕ್ಷೇತ್ರಕ್ಕೆ ಬಂದಾಗ ಅಲ್ಲಿನ ಪರಿಸರಕ್ಕೆ ತಕ್ಷಣ ಹೊಂದಿಕೊಳ್ಳಲು ನೆರವಾಗಲಿದೆ ಎಂದು ತಿಳಿಸಿದ್ದಾರೆ. ಈ ಕುರಿತು ವಿಜಯಕರ್ನಾಟಕ ದಿನಪತ್ರಿಕೆಯಲ್ಲಿ ವರದಿ ಪ್ರಕಟವಾಗಿದೆ.
Vijay Karnataka
Hariprakash Konemane

18/08/2026

ನಾಗತಿಹಳ್ಳಿ ಚಂದ್ರಶೇಖರ್
ಡಾ. ನಾಗತಿಹಳ್ಳಿ ಚಂದ್ರಶೇಖರ್ ಅವರು ಕನ್ನಡದ ಪ್ರಸಿದ್ಧ ಚಲನಚಿತ್ರ ನಿರ್ದೇಶಕರು, ಕಥೆಗಾರರು, ಸಾಹಿತಿ, ಗೀತ ರಚನೆಕಾರರು, ನಟರು ಮತ್ತು ಪತ್ರಕರ್ತರು. ಬಹುಮುಖ ಪ್ರತಿಭೆಯುಳ್ಳ ವ್ಯಕ್ತಿತ್ವದವರು. * ಇವರು 1958 ರ ಅಗಸ್ಟ್ 15ರಂದು ಮಂಡ್ಯ ಜಿಲ್ಲೆಯ ನಾಗತಿಹಳ್ಳಿ ಎಂಬ ಗ್ರಾಮದಲ್ಲಿ ಜನಿಸಿದರು.
*ಇವರ ತಂದೆ ತಿಮ್ಮ ಶೆಟ್ಟಿ ಗೌಡರು, ತಾಯಿ ಪಾರ್ವತಮ್ಮ.
*ಇವರನ್ನು ಎಲ್ಲರೂ ಪ್ರೀತಿಯಿಂದ ಮೇಷ್ಟ್ರು ಎಂದು ಕರೆಯುತ್ತಾರೆ. * ಇವರು ಕಥೆ ಕಾದಂಬ ಯಾವ ಪ್ರವಾಸ ಕಥನಗಳನ್ನು ಬರೆದಿದ್ದಾರೆ.
*ಇವರು ಪ್ರಮುಖ ಪತ್ರಿಕೆಗಳಲ್ಲಿ ಅಂಕಣಕಾರರಾಗಿ ಸೇವೆ ಸಲ್ಲಿಸಿದ್ದಾರೆ. * "ಅಮೇರಿಕಾ' "ನೂರು ಜನ್ಮಕೂ' "ಒಲವೇ ಜೀವನ'
"ಹೂ ಮಳೆ ' "ಉಂಡು ಹೋದ' ಕೊಂಡು ಹೋದ ' ಅನೇಕ ಜನ ಪ್ರೀ ಚಿತ್ರಗಳನ್ನು ನಿರ್ದೇಶಿಸಿದ್ದಾರೆ.
* ರಾಷ್ಟ್ರಮಟ್ಟ ಮತ್ತು ರಾಜ್ಯಮಟ್ಟದ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ.
*ಕನ್ನಡ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸಿದ್ದಾರೆ.
*ಇವರು ಬರೆದ "ಕಾಡಿನ ಬೆಂಕಿ ' ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದಾರೆ. ಹಾಗೂ ಅವರ ನಿರ್ದೇಶನದ ಹಲವು ಚಲನಚಿತ್ರಗಳು ಪ್ರಶಸ್ತಿಯನ್ನು ತನ್ನ ಭಾವಿಸಿಕೊಂಡಿದೆ.


17/08/2026

ಜಾಗತಿಕ ವಾಹನ ತಯಾರಿಕಾ ವಲಯದಲ್ಲಿ ಅತಿಯಾದ ಆಟೋಮೇಷನ್ ಹಾಗೂ ಮಾನವಾಕೃತಿಯ ಹ್ಯೂಮನಾಯ್ಡ್ ರೋಬಾಟ್‌ಗಳ ಬಳಕೆ ನಿರೀಕ್ಷಿತ ಯಶಸ್ಸು ಕಾಣುವಲ್ಲಿ ವಿಫಲವಾಗಿದ್ದು, ಜಾಗತಿಕ ಆಟೋಮೊಬೈಲ್ ದೈತ್ಯ ಕಂಪನಿಗಳು ಮರಳಿ ಮಾನವ ಶ್ರಮದತ್ತ ಮುಖ ಮಾಡುತ್ತಿವೆ. ಕಾರು ಕಾರ್ಖಾನೆಗಳಲ್ಲಿ ರೋಬಾಟ್‌ಗಳ ಮೇಲೆ ಬಿಲಿಯನ್‌ಗಟ್ಟಲೆ ಹಣ ಹೂಡಿಕೆ ಮಾಡಿದರೂ, ಅವುಗಳ ಉತ್ಪಾದಕತೆ ಹಾಗೂ ಕಾರ್ಯನಿರ್ವಹಣೆಯ ವೇಗ ಮನುಷ್ಯರಿಗಿಂತ ತೀರ ಕಡಿಮೆಯಾಗಿದೆ. ಅಮೆರಿಕದ ದಕ್ಷಿಣ ಕೆರೊಲಿನಾದ ಬಿಎಂಡಬ್ಲ್ಯೂ ಹಾಗೂ ಜಾರ್ಜಿಯಾದ ಹುಂಡೈ ಪ್ಲಾಂಟ್‌ಗಳಲ್ಲಿ ರೋಬಾಟ್‌ಗಳು ಅತ್ಯಂತ ನಿಧಾನವಾಗಿ ಕೆಲಸ ಮಾಡುತ್ತಿರುವುದು ಬೆಳಕಿಗೆ ಬಂದಿದ್ದು, ಬಿಎಂಡಬ್ಲ್ಯೂ ಕಂಪನಿಯು ರೋಬಾಟ್‌ಗಳನ್ನು ಕೈಬಿಟ್ಟು 350 ನುರಿತ ಮ್ಯಾನುಫ್ಯಾಕ್ಚರಿಂಗ್ ಇಂಜಿನಿಯರ್‌ಗಳನ್ನು ನೇಮಿಸಿಕೊಂಡ ನಂತರ ಕಾರುಗಳ ಗುಣಮಟ್ಟ ಹಾಗೂ ಉತ್ಪಾದನಾ ವೇಗ ಗಣನೀಯವಾಗಿ ಹೆಚ್ಚಾಗಿದೆ.

ಆಟೋಮೇಷನ್ ಕೊರತೆಯಿಂದ ಕೆಲಸ ನಿಧಾನವಾಗುತ್ತದೆ ಎಂಬ ಕಾರಣಕ್ಕೆ ಕಾರು ಕಂಪನಿಗಳು ರೋಬಾಟ್‌ಗಳನ್ನು ತಂದರೂ, ಅವು ಪದೇ ಪದೆ ತಾಂತ್ರಿಕ ದೋಷಕ್ಕೆ ಒಳಗಾಗಿ ಇಡೀ ಅಸೆಂಬ್ಲಿ ಲೈನ್ ಸ್ಥಗಿತಗೊಳ್ಳುವಂತೆ ಮಾಡುತ್ತಿದ್ದವು. ಟೆಸ್ಲಾ ಕಂಪನಿಯ ಎಲಾನ್ ಮಸ್ಕ್ ಕೂಡ ಈ ಹಿಂದೆ ಮಾದರಿ-3 ಕಾರುಗಳ ಉತ್ಪಾದನೆಯಲ್ಲಿ ಏಲಿಯನ್ ಡ್ರೆಡ್‌ನಾಟ್ ಎಂಬ ಸಂಪೂರ್ಣ ಮಾನವರಹಿತ ಸ್ವಯಂಚಾಲಿತ ಫ್ಯಾಕ್ಟರಿಯ ಕಲ್ಪನೆಯನ್ನು ಜಾರಿಗೆ ತರಲು ಹೋಗಿ ವಿಫಲರಾಗಿದ್ದರು. ವೈರಿಂಗ್ ಹಾಗೂ ಬ್ಯಾಟರಿ ಪ್ಯಾಕ್ ಜೋಡಣೆಯಲ್ಲಿ ರೋಬಾಟ್‌ಗಳ ವಿಫಲತೆಯನ್ನು ಒಪ್ಪಿಕೊಂಡಿದ್ದ ಮಸ್ಕ್, ಆಟೋಮೇಷನ್ ತಪ್ಪು, ಮನುಷ್ಯರ ಸಾಮರ್ಥ್ಯವನ್ನು ನಾವು ಕಡೆಗಣಿಸಿದ್ದೆವು ಎಂದು ಬಹಿರಂಗವಾಗಿ ಹೇಳಿದ್ದರು. ಅಂತೆಯೇ ಮರ್ಸಿಡೀಸ್-ಬೆಂಜ್ ಕಂಪನಿಯು ಸಹ ತನ್ನ ಜರ್ಮನಿಯ ಸಿಂಡೆಲ್‌ಫಿಂಗನ್ ಕಾರ್ಖಾನೆಯಲ್ಲಿ ಎಸ್-ಕ್ಲಾಸ್ ಕಾರುಗಳ ಉತ್ಪಾದನಾ ಸಾಲಿನಿಂದ ಬೃಹತ್ ರೋಬಾಟ್‌ಗಳನ್ನು ತೆಗೆದುಹಾಕಿ, ಗ್ರಾಹಕರ ವೈವಿಧ್ಯಮಯ ಆಯ್ಕೆಗಳಿಗೆ ತಕ್ಕಂತೆ ಬೇಗ ಸ್ಪಂದಿಸುವ ಮಾನವ ಉದ್ಯೋಗಿಗಳನ್ನು ನೇಮಿಸಿಕೊಂಡಿದೆ.

ಮಾನವನಿಗೆ ರೋಬಾಟ್‌ಗಳು ಎಂದಿಗೂ ಸರಿಸಾಟಿಯಾಗಲು ಸಾಧ್ಯವಿಲ್ಲ ಎಂಬುದು ಈ ಪ್ರಯೋಗಗಳಿಂದ ಸಾಬೀತಾಗಿದೆ. ನಿಯಮಾವಳಿಗಳು ಬದಲಾದಾಗ ಅಥವಾ ಹೊಸ ಸನ್ನಿವೇಶ ಎದುರಾದಾಗ ಮನುಷ್ಯರು ತಮ್ಮ ಸಾಮಾನ್ಯ ಜ್ಞಾನ, ಅನುಭವ, ಸಮಯಪ್ರಜ್ಞೆ ಹಾಗೂ ಚಾತುರ್ಯದಿಂದ ತಕ್ಷಣ ನಿರ್ಧಾರ ತೆಗೆದುಕೊಳ್ಳುತ್ತಾರೆ. ಆದರೆ ರೋಬಾಟ್‌ಗಳಿಗೆ ಮರು ಕೋಡಿಂಗ್ ಮಾಡಲು ದಿನಗಟ್ಟಲೆ ಸಮಯ ಹಾಗೂ ಭಾರಿ ಹಣ ಬೇಕಾಗುತ್ತದೆ. ಕಠಿಣ ನೋಟ ಹಾಗೂ ಸ್ಪರ್ಶ ಅನುಭವಕ್ಕೆ ಸರಿಯಾದ ನಿರ್ಣಯ ತೆಗೆದುಕೊಳ್ಳುವ ಮಾನವನ ಇಂದ್ರಿಯಗಳ ಸೂಕ್ಷ್ಮತೆಯನ್ನು ಯಾವುದೇ ಸಂವೇದಕಗಳು ಮೀರಿಸಲು ಸಾಧ್ಯವಿಲ್ಲ. ಹೀಗಾಗಿ, ಸಂಪೂರ್ಣ ಆಟೋಮೇಷನ್ ಬದಲಿಗೆ ಮನುಷ್ಯ ಮತ್ತು ಯಂತ್ರಗಳು ಜತೆಗೂಡಿ ಕೆಲಸ ಮಾಡುವ ಕೋಬಾಟ್ಸ್ ಪರಿಕಲ್ಪನೆ ಈಗ ಜಾಗತಿಕ ವಲಯದಲ್ಲಿ ಹೊಸ ಭರವಸೆಯಾಗಿ ಹೊರಹೊಮ್ಮುತ್ತಿದೆ. ಈ ಕುರಿತು ವಿಜಯವಾಣಿ ದಿನಪತ್ರಿಕೆಯಲ್ಲಿ ವರದಿ ಪ್ರಕಟವಾಗಿದೆ.


17/08/2026

ನಾಡಿನ ಸಮಸ್ತ ಜನತೆಗೆ ನಾಗರ ಪಂಚಮಿ ಹಬ್ಬದ ಹಾರ್ದಿಕ ಶುಭಾಶಯಗಳು. ನಾಗರ ಪಂಚಮಿಯು ಶ್ರಾವಣ ಮಾಸದ ಮೊದಲ ಪ್ರಮುಖ ಹಬ್ಬವಾಗಿದ್ದು, ಸನಾತನ ಧರ್ಮದಲ್ಲಿ ಇದಕ್ಕೆ ಅತ್ಯಂತ ಪವಿತ್ರ ಹಾಗೂ ವಿಶೇಷ ಸಾಂಸ್ಕೃತಿಕ ಪ್ರಾಮುಖ್ಯತೆಯಿದೆ. ಈ ಶುಭ ದಿನದಂದು ನಾಗದೇವರನ್ನು ಭಕ್ತಿ-ಶ್ರದ್ಧೆಗಳಿಂದ ಪೂಜಿಸಿ, ಹಾಲಿನ ಅಭಿಷೇಕ ಮಾಡುವುದು ಪುರಾತನ ಸಂಪ್ರದಾಯ. ಪರಿಸರ ಮತ್ತು ಮಾನವನ ನಡುವಿನ ಅವಿನಾಭಾವ ಬಾಂಧವ್ಯವನ್ನು ಸ್ಮರಿಸುವ ಈ ಹಬ್ಬವು ಪ್ರಕೃತಿ ಮಾತೆಗೆ ನಾವು ಸಲ್ಲಿಸುವ ಗೌರವದ ಸಂಕೇತವಾಗಿದೆ.

ನಾಡಿನಾದ್ಯಂತ ಸಂಭ್ರಮದಿಂದ ಆಚರಿಸಲಾಗುವ ಈ ಪರ್ವದಿನವು ಸೋದರ-ಸೋದರಿಯರ ನಡುವಿನ ಸ್ನೇಹ ಮತ್ತು ಪ್ರೀತಿಯ ಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ. ಹೆಣ್ಣುಮಕ್ಕಳು ತಮ್ಮ ತವರುಮನೆಗೆ ಆಗಮಿಸಿ ನೆಂಟರಿಷ್ಟರೊಂದಿಗೆ ಹಬ್ಬ ಆಚರಿಸುವುದು, ನಾಗದೇವರ ಕೃಪೆಯಿಂದ ಎಲ್ಲರ ಜೀವನದಲ್ಲೂ ಭಯ ಬಾಧೆಗಳು ದೂರವಾಗಿ, ಸುಖ ಶಾಂತಿ, ಸಮೃದ್ಧಿ ನೆಲೆಸಲಿ ಎಂದು ಪ್ರಾರ್ಥಿಸೋಣ.


16/08/2026

ವಿಶ್ವದರ್ಶನ ಶಿಕ್ಷಣ ಸಮೂಹ ಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ 80ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ವಾಯುಪಡೆಯ ನಿವೃತ್ತ ಯೋಧ ಮಹಾದೇವಚಂದ್ರ ಪಂಡರಾಪುರ ಅವರು ಧ್ವಜಾರೋಹಣ ನೆರವೇರಿಸಿದರು. ನಂತರ ಮಾತನಾಡಿದ ಅವರು ನಮಗೆ ದೊರೆತಿರುವ ಸ್ವಾತಂತ್ರ್ಯವು ಬ್ರಿಟಿಷರ ಕೊಡುಗೆಯಲ್ಲ, ಅದರ ಹಿಂದೆ ನಮ್ಮ ಹಿರಿಯರ ಅಪಾರ ಹೋರಾಟ, ತ್ಯಾಗ ಹಾಗೂ ಬಲಿದಾನಗಳಿವೆ ಎಂದರು. ನಾವು ಇಲ್ಲಿ ಕ್ಷೇಮವಾಗಿರಲು ಗಡಿಯಲ್ಲಿ ಸೈನಿಕರು ಹಗಲಿರುಳು ಶ್ರಮಿಸುತ್ತಿದ್ದಾರೆ. ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಸೇನೆಗೆ ಸೇರ್ಪಡೆಯಾಗಬೇಕು ಹಾಗೂ ಲಭ್ಯವಿರುವ ಅತ್ಯಾಧುನಿಕ ತಂತ್ರಜ್ಞಾನವನ್ನು ಧನಾತ್ಮಕ ಚಿಂತನೆಗಳೊಂದಿಗೆ ದೇಶದ ಪ್ರಗತಿಗೆ ಬಳಸಿಕೊಳ್ಳಬೇಕು ಎಂದು ತಿಳಿಸಿದರು.

ವಿಶ್ವದರ್ಶನ ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಹರಿಪ್ರಕಾಶ ಕೋಣೆಮನೆ ಅವರು ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಬಂದು 80 ವರ್ಷಗಳಾಗುತ್ತಿದ್ದು, ಸ್ವಾತಂತ್ರ್ಯ ಬಂದ ಸಮಯದಲ್ಲಿ ದೇಶದಲ್ಲಿದ್ದ 500ಕ್ಕೂ ಹೆಚ್ಚು ಸಂಸ್ಥಾನಗಳನ್ನು ಒಗ್ಗೂಡಿಸಿದ ಮಹಾನ್ ನಾಯಕರನ್ನು ಸ್ಮರಿಸುವುದು ನಮ್ಮ ಕರ್ತವ್ಯವಾಗಿದೆ. ಸಂವಿಧಾನ ಜಾರಿಯಾದಾಗ ದೇಶದಲ್ಲಿ ಎರಡು ಧ್ವಜಗಳಿದ್ದವು, ಆದರೆ 370ನೇ ವಿಧಿಯನ್ನು ರದ್ದುಪಡಿಸುವ ಮೂಲಕ ಕಾಶ್ಮೀರವನ್ನು ಪೂರ್ಣವಾಗಿ ವಿಲೀನಗೊಳಿಸಿ ಅಖಂಡ ಭಾರತವನ್ನು ರೂಪಿಸುವ ಕನಸು ನನಸಾಗಿದೆ. ಹರ್ ಘರ್ ತಿರಂಗಾ ಅಭಿಯಾನದ ಮೂಲಕ ಪ್ರತಿಯೊಬ್ಬರ ಮನೆಗಳಲ್ಲೂ ರಾಷ್ಟ್ರಧ್ವಜ ಹಾರಿಸಿ ನಾಗರಿಕರಲ್ಲಿ ದೇಶಪ್ರೇಮದ ಭಾವನೆಗಳನ್ನು ಜಾಗೃತಗೊಳಿಸುವ ಮಹತ್ತರ ಕೆಲಸವಾಗುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ವಿವಿಧ ವಿಭಾಗಗಳ ಮುಖ್ಯಸ್ಥರು, ಶಿಕ್ಷಕ ವೃಂದ, ಉಪನ್ಯಾಸಕರು, ಪೋಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿಶ್ವದರ್ಶನ ಕೇಂದ್ರೀಯ ಶಾಲೆಯ ಪ್ರಾಂಶುಪಾಲೆ ಮಹಾದೇವಿ ಭಟ್ಟ ಎಲ್ಲರನ್ನೂ ಸ್ವಾಗತಿಸಿದರು. ಶಿವಪ್ರಸಾದ ಭಟ್ಟ ಕಾರ್ಯಕ್ರಮ ನಿರೂಪಣೆಯನ್ನು ನೆರವೇರಿಸಿದರೆ, ಶಿಕ್ಷಕ ಜಾಕೀರ ವಂದನಾರ್ಪಣೆ ಮಾಡಿದರು. ಈ ಕುರಿತು ರಾಜ್ಯದ ಪ್ರಮುಖ ದಿನಪತ್ರಿಕೆಯಲ್ಲಿ ವರದಿ ಪ್ರಕಟವಾಗಿದೆ.
Vijayavani
Udayavani


16/08/2026

सभी को शुभोदय।

आज प्रसिद्ध भारतीय कवयित्री एवं लेखिका सुभद्रा कुमारी चौहान जी की जयंती है।

इनका जन्म 16 अगस्त 1904 को निहालपुर, इलाहाबाद (उत्तर प्रदेश) में हुआ था। वे 1921 में महात्मा गांधी द्वारा चलाए गए असहयोग आंदोलन में भाग लेने वाली प्रथम महिला सत्याग्रही थीं।

उन्होंने लगभग 46 कहानियाँ लिखीं, जिनमें बिखरे मोती, उन्मादिनी, और सीधे-साधे चित्र जैसे संग्रह प्रमुख हैं। उनकी प्रसिद्ध कविताओं में झाँसी की रानी, वीरों का जैसा हो बसंत, राखी की चुनौती, और विदा विशेष रूप से उल्लेखनीय हैं।

उन्हें उनकी साहित्यिक उपलब्धियों के लिए 1931 में 'मुकुल' कविता संग्रह हेतु सेठ गोविंददास सेकसरिया परितोषिक और 1932 में 'बिखरे मोती' कविता संग्रह के लिए सम्मानित किया गया था।

उनका निधन 15 फरवरी 1948 को हुआ।

हम सभी की ओर से उन्हें श्रद्धांजलि।

धन्यवाद।


15/08/2026

ಬ್ರಿಟಿಷರ ಆಡಳಿತದಂತೆಯೇ ಅಂದಿನ ಕಾಂಗ್ರೆಸ್ ಕೂಡ ದೇಶದಲ್ಲಿ ಒಡೆದು ಆಳುವ ನೀತಿಯನ್ನು ಅನುಸರಿಸಿತ್ತು ಮತ್ತು ಮಹಾತ್ಮ ಗಾಂಧೀಜಿಯವರ ತೀವ್ರ ವಿರೋಧದ ನಡುವೆಯೂ ಭಾರತದ ವಿಭಜನೆಯಾಯಿತು ಎಂದು ಉದ್ಯಮಿ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ ಅಭಿಪ್ರಾಯಪಟ್ಟಿದ್ದಾರೆ. ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಸಭಾಭವನದಲ್ಲಿ ಆಯೋಜಿಸಲಾಗಿದ್ದ ಹರ್ ಘರ್ ತಿರಂಗಾ ಅಭಿಯಾನ ಮತ್ತು ವಿಭಜನೆಯ ವಿಭೀಷಿಕಾ ಸ್ಮೃತಿ ದಿವಸ್ ಕಾರ್ಯಕ್ರಮದಲ್ಲಿ ಮುಖ್ಯ ವಕ್ತಾರರಾಗಿ ಭಾಗವಹಿಸಿ ಅವರು ಮಾತನಾಡಿದರು. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹರ್ ಘರ್ ತಿರಂಗಾ ಅಭಿಯಾನದ ಮೂಲಕ ಪ್ರತಿಯೊಬ್ಬ ಪ್ರಜೆಯಲ್ಲೂ ದೇಶಾಭಿಮಾನ ಹಾಗೂ ಕರ್ತವ್ಯ ಪ್ರಜ್ಞೆಯನ್ನು ಮೂಡಿಸಿದ್ದಾರೆ ಎಂದು ಅವರು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಶ್ವದರ್ಶನ ಶಿಕ್ಷಣ ಸಮೂಹದ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಅವರು ಮಾತನಾಡಿ, ಯುವಜನತೆಯಲ್ಲಿ ದೇಶಪ್ರೇಮ ಹಾಗೂ ಸ್ವಾಭಿಮಾನ ಬೆಳೆಸಲು ರಾಷ್ಟ್ರಧ್ವಜಕ್ಕೆ ಗೌರವ ತರುವ ಇಂತಹ ಅಭಿಯಾನಗಳು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತವೆ ಎಂದರು. ಕಾರ್ಯಕ್ರಮದಲ್ಲಿ ಜಿಲ್ಲಾ ಸಂಚಾಲಕ ಸುಬ್ರಾಯ ವಾಳೆ ಹಾಗೂ ಸಾಮಾಜಿಕ ಕಾರ್ಯಕರ್ತ ಎಲ್.ಟಿ. ಪಾಟೀಲ ಉಪಸ್ಥಿತರಿದ್ದರು. ಡಾ. ಡಿ.ಕೆ. ಗಾಂವ್ಕರ ನಿರೂಪಿಸಿದ ಈ ಕಾರ್ಯಕ್ರಮದಲ್ಲಿ ಮುಕ್ತಾ ಶಂಕರ ವಂದೇ ಮಾತರಂ ಗೀತೆ ಗಾಯನ ಮಾಡಿದರು. ಅಂತಿಮವಾಗಿ ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. ಈ ಕುರಿತು ರಾಜ್ಯದ ಪ್ರಮುಖ ದಿನಪತ್ರಿಕೆಯಲ್ಲಿ ವರದಿ ಪ್ರಕಟವಾಗಿದೆ.
Vijay Karnataka
Udayavani


Want your school to be the top-listed School/college in Yellapur?

Click here to claim your Sponsored Listing.

Location

Category

Telephone

Address


Yellapur
581359