18/02/2026
ಬಸವ ನಾಡಿನಲ್ಲಿ ಅಂಗಾಂಗ ದಾನ ಜಾಗೃತಿ ಅಭಿಯಾನ
ಅಂಗಾಂಗ ದಾನ, ನಮ್ಮ ವಾಗ್ದಾನ
ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ವಿಜಯಪುರದ ಯುವಕ ಬಲರಾಮ ಕೃಷ್ಣ ಬಾಗಲಕೋಟ ಅವರು ನಮಗೆಲ್ಲರಿಗೂ ಸಾಮಾಜಿಕ ಕಳಕಳಿಯ ಸ್ಪೂರ್ತಿ ನೀಡಿದ್ದಾರೆ. ಅದರಂತೆ ನಾನು ಕೂಡ ಅಂಗಾಂಗ ದಾನದ ವಾಗ್ದಾನ ಮಾಡಿದ್ದೇನೆ. ಅಷ್ಟೇ ಅಲ್ಲದೆ ಅಂಗಾಂಗ ದಾನದ ಕುರಿತಾಗಿ ಜಾಗೃತಿ ಮೂಡಿಸಲು ಬಸವನಾಡಿನಿಂದಲೇ ಅಭಿಯಾನ ಹಮ್ಮಿಕೊಳ್ಳಲಾಗುವುದು. 'ಮಿಷನ್ ಬಲರಾಮ' ಅಭಿಯಾನದ ನೇತೃತ್ವವನ್ನು BLDE ಸಂಸ್ಥೆಯೇ ವಹಿಸಿಕೊಳ್ಳಲಿದೆ.
ಅಂಗಾಂಗ ದಾನ ಎಲ್ಲದಕ್ಕಿಂತ ಶ್ರೇಷ್ಠ ದಾನ. ಎಲ್ಲರೂ ಅಂಗಾಂಗ ದಾನದ ವಾಗ್ದಾನ ಕೈಗೊಳ್ಳೋಣ. ಇನ್ನೊಬ್ಬರ ಬಾಳಿಗೆ ಬೆಳಕಾಗುವ ಮೂಲಕ ನಮ್ಮೆಲ್ಲರ ಜೀವನವೂ ಸಾರ್ಥಕತೆ ಹೊಂದಲಿ.
#ಅಂಗಾಂಗದಾನ