10/04/2026
ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ BLDE ಸಂಸ್ಥೆಯ ನಾಲ್ವರು ವಿದ್ಯಾರ್ಥಿಗಳು ಕಲಾ ವಿಭಾಗದಲ್ಲಿ ರ‌್ಯಾಂಕ್ ಪಡೆದು ಬಸವನಾಡಿಗೆ ಕೀರ್ತಿ ತಂದಿದ್ದಾರೆ. ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.
ವಿಜಯಪುರ ಎಸ್. ಎಸ್. ಪಿಯು ಕಾಲೇಜಿನ
ಸಾನಿಕಾ ಮೆಟಗಾರ ಮತ್ತು ಜಮಖಂಡಿಯ ವಾಣಿಜ್ಯ ಬಿ. ಎಚ್. ಎಸ್ ಕಲೆ ಮತ್ತು ಟಿ. ಜಿ. ಪಿ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯದ
ಮ.ಅ. ನದಾಫ್ ತಲಾ 595 ಅಂಕ ಪಡೆದು ರಾಜ್ಯಕ್ಕೆ ದ್ವಿತೀಯ ಮತ್ತು ಅಂಕ ಗಳಿಸಿದ್ದಾರೆ. ವಿಜಯಪುರ ಎಸ್. ಎಸ್. ಪಿಯು ಕಾಲೇಜಿನ ಅಕ್ಷತಾ ಚವ್ಹಾಣ 594 ಅಂಕ ಪಡೆದು ರಾಜ್ಯಕ್ಕೆ ತೃತೀಯ ಹಾಗೂ ಇದೇ ಕಾಲೇಜಿನ ಯುವರಾಜ ಬಗಲಿ 593 ಅಂಕ ಪಡೆದು ರಾಜ್ಯಕ್ಕೇ ನಾಲ್ಕನೇ ರ‌್ಯಾಂಕ್ ಗಳಿಸಿದ್ದಾರೆ.
ಇವರ ಸಾಧನೆ ಇನ್ನಷ್ಟು ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿ, ಬಸವನಾಡಿನ ಕೀರ್ತಿ ಮತ್ತಷ್ಟು ವಿಸ್ತಾರಗೊಳ್ಳಲಿ.