05/10/2024
ಕನ್ನಡ ಪುಸ್ತಕ ಹಬ್ಬ – 2024ರ ವಿವಿಧ ಸ್ಪರ್ಧೆಗಳ ಭಿತ್ತಿಪತ್ರ ಅನಾವರಣ
Poster of various Competitions during Kannada Pustaka Habba – 2024, was released
ಸಂಪರ್ಕಿಸಿ: 89044 21965
ಇಮೇಲ್: [email protected]
ಬೆಂಗಳೂರು, ಅಕ್ಟೋಬರ್ 1: ರಾಷ್ಟ್ರೋತ್ಥಾನ ಸಾಹಿತ್ಯ ವತಿಯಿಂಂದ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಅಕ್ಟೋಬರ್ 26 ರಿಂದ ಡಿಸೆಂಬರ್ 1 ರ ವರೆಗೆ ನಡೆಯಲಿರುವ ‘ಕನ್ನಡ ಪುಸ್ತಕ ಹಬ್ಬ - 2024’ರ ನಿಮಿತ್ತ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾದ್ದು, ಈ ಸ್ಪರ್ಧೆಗಳ ಭಿತ್ತಿಪತ್ರಗಳನ್ನು ಹಿರಿಯ ಶಿಕ್ಷಣತಜ್ಞ ಶ್ರೀ ಕಜಂಪಾಡಿ ಸುಬ್ರಹ್ಮಣ್ಯ ಭಟ್, ಜನಸೇವಾ ವಿದ್ಯಾಕೇಂದ್ರದ ಶ್ರೀ ನಿರ್ಮಲ್ ಕುಮಾರ್ ಹಾಗೂ ಆರ್.ಎಸ್.ಎಸ್.ನ ಕರ್ನಾಟಕ ದಕ್ಷಿಣ ಪ್ರಾಂತದ ಪ್ರಚಾರ ಪ್ರಮುಖರಾದ ಶ್ರೀ ರಾಜೇಶ್ ಪದ್ಮಾರ್, ಉತ್ಥಾನದ ಸಂಪಾದಕರಾದ ಶ್ರೀ ಅನಿಲ್ ಕುಮಾರ್ ಮೊಳಹಳ್ಳಿ ಅವರುಗಳು ಇಲ್ಲಿನ ಕೆಂಪೇಗೌಡನಗರದಲ್ಲಿರುವ ರಾಷ್ಟ್ರೋತ್ಥಾನ ಪರಿಷತ್‍ನ ಕೇಂದ್ರ ಕಚೇರಿಯಲ್ಲಿ ಬಿಡುಗಡೆ ಮಾಡಿದರು.
ಕನ್ನಡ ಪುಸ್ತಕ ಹಬ್ಬವು ಅಕ್ಟೋಬರ್ 26 ರಿಂದ ಡಿಸೆಂಬರ್ 1ರ ವರೆಗೆ, 37 ದಿನಗಳ ಕಾಲ ಕೇಶವಶಿಲ್ಪ ಸಭಾಂಗಣ, ರಾಷ್ಟ್ರೋತ್ಥಾನ ಪರಿಷತ್, ಕೆಂಪೇಗೌಡನಗರ, ಬೆಂಗಳೂರು, ಇಲ್ಲಿ ನಡೆಯಲಿದೆ.
ಕನ್ನಡ ಪುಸ್ತಕ ಹಬ್ಬದಲ್ಲಿ ಪುಸ್ತಕ ಪ್ರದರ್ಶನ ಹಾಗೂ ಮಾರಾಟವಿರಲಿದ್ದು, ರಾಷ್ಟ್ರೋತ್ಥಾನ ಸಾಹಿತ್ಯವಲ್ಲದೇ ಬೇರೆ ಪ್ರಸಿದ್ಧ ಪುಸ್ತಕಗಳೂ ಲಭ್ಯವಿರುತ್ತವೆ ಹಾಗೂ 50% ವರೆಗೂ ರಿಯಾಯಿತಿಯನ್ನು ಕೊಡಮಾಡಲಾಗುತ್ತದೆ.
ಹೊಸ ಪುಸ್ತಕಗಳ ಲೋಕಾರ್ಪಣೆ, ವಿದ್ಯಾರ್ಥಿಗಳಿಗಾಗಿ ಸ್ಪರ್ಧೆಗಳು, ಸಂಗೀತ, ನೃತ್ಯ ಸೇರಿದಂತೆ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಯೋಜಿಸಲಾಗಿದೆ.
https://www.sahityabooks.com/