22/07/2026
ಪ್ರಿಯರೇ ,
ಉಡುಪಿ ಜಿಲ್ಲೆಯ ಪ್ರವಾಸೋದ್ಯಮವನ್ನು ಮನೆಮನೆಗಳಲ್ಲಿ, ಜಗದಗಲ ವಿಸ್ತರಿಸುವ ಉದ್ದೇಶದಿಂದ 'ಮಾಸ್ಕಾಟ್' ರಚನೆಯ ಸ್ಪರ್ಧೆಯನ್ನು ಜಿಲ್ಲಾಡಳಿತದ ಸೂಚನೆಯ ಮೆರೆಗೆ, ನಮ್ಮ ಶಿಕ್ಷಣ ಸಂಸ್ಥೆಯಾದ ಎಸ್ ಅರ್ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಲಾಗಿದೆ. ದಿನಾಂಕ 25.7.2026 ರ ಶನಿವಾರ ಮಧ್ಯಾಹ್ನ 2.00 ಗಂಟೆಯಿಂದ 4.00 ಗಂಟೆವರೆಗೆ ನಡೆಯುವ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಎಲ್ಲರಿಗೂ ಮುಕ್ತ ಅವಕಾಶ ಕಲ್ಪಿಸಲಾಗಿದೆ.
ವಿಜೇತರಿಗೆ ದಿನಾಂಕ 15.8.2026 ರ ಜಿಲ್ಲಾ ಸ್ವಾತಂತ್ರ್ಯ ದಿನಾಚರಣೆ (ಅಜ್ಜರಕಾಡು ಕ್ರೀಡಾಂಗಣದಲ್ಲಿ ) ಬೆಳಿಗ್ಗೆ 9.00 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಬಹುಮಾನವನ್ನು ನೀಡಲಾಗುವುದು ಮತ್ತು ಆಯ್ಕೆಗೊಂಡ ಮಾಸ್ಕಾಟ್‌ನ್ನು ಜಿಲ್ಲೆಯ ಪ್ರಮುಖ ಸ್ಥಳಗಳಲ್ಲಿ ಪ್ರದರ್ಶಿಸಲಾಗುವುದು ಹಾಗೂ ಉಡುಪಿ ಜಿಲ್ಲೆಯ ಪ್ರವಾಸೋದ್ಯಮದ ಬ್ರಾಂಡಿಂಗ್‌ಗೆ ಬಳಸಿಕೊಳ್ಳಲಾಗುವುದು. ಆದ್ದರಿಂದ, ನಮ್ಮ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಯ ಕನಸನ್ನು ಹೊಂದಿರುವ ತಾವೆಲ್ಲರೂ ಈ ಸ್ಪರ್ಧೆಯಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಜಿಲ್ಲಾ ಅಭಿವೃದ್ಧಿಯ ಕನಸಿಗೆ ಪ್ರೇರಕರಾಗಬೇಕಾಗಿ ವಿನಂತಿ.
ನಿಮ್ಮ ಮಾಸ್ಕಾಟ್ ರಚನೆ ಹೀಗಿರಲಿ:
• ಸ್ಪಿರಿಟ್ ಆಫ್ ಉಡುಪಿ (Spirit of Udupi) ಯನ್ನು ಪ್ರತಿಬಿಂಬಿಸಬೇಕು.
• ಸ್ಥಳೀಯ ಭಾಷೆ, ಸಂಸ್ಕೃತಿ ಹಾಗೂ ಜೀವನ ಶೈಲಿಯೊಂದಿಗೆ ರೂಟೆಡ್ (rooted) ಆಗಿರಬೇಕು.
• ಮಾಸ್ಕಾಟ್ ನೈಜ ಅಥವಾ ಕಾಲ್ಪನಿಕ ಆಗಿರಬಹುದು.
• ನಿಮ್ಮ ಮಾಸ್ಕಾಟ್‌ಗೆ ಒಂದು ವಿಶಿಷ್ಟವಾದ ಹೆಸರನ್ನು ನೀಡಿ
• ನೈಜತೆಗೆ ಪ್ರಮುಖ್ಯತೆಯನ್ನು ನೀಡಲಾಗುವುದು.
• ಬರೆವಣಿಗೆಗೆ ಬೇಕಾದ ಡ್ರಾಯಿಂಗ್ ಹಾಳೆ ಎ4 ಸೈಜ್‌ನ್ನು ಸಂಘಟಕರು ನೀಡುತ್ತಾರೆ.
• ಇತರೆ ಗಾತ್ರದ ಡ್ರಾಯಿಂಗ್ ಹಾಳೆ (ಬೇಕಾದಲ್ಲಿ), ಬಣ್ಣ ಮತ್ತು ಲೇಖನ ಸಾಮಗ್ರಿಗಳನ್ನು ಸ್ಪರ್ಧಾಳುಗಳೇ ಸ್ವಂತ ಖರ್ಚಿನಲ್ಲಿ ತಂದು ಬಳಸಬೇಕು.
ಬನ್ನಿ, ನಿಮ್ಮ ಪ್ರತಿಭೆಯನ್ನು ಪ್ರದರ್ಶಿಸಿ, ಉಡುಪಿಯ ನೈಜ ಸೊಗಡನ್ನು ಎತ್ತಿಹಿಡಿಯಿರಿ ಮತ್ತು "ಉಡುಪಿಯ ಮ್ಯಾಸ್ಕಾಟ್ ಸೃಷ್ಟಿಕರ್ತ" ಎಂಬ ಗೌರವಕ್ಕೆ ಪಾತ್ರರಾಗಿ!
ವಿ.ಸೂ : ಭಾಗವಹಿಸುವ ಎಲ್ಲರೂ ದಯವಿಟ್ಟು ತಮ್ಮ ಹೆಸರನ್ನು ನೋಂದಾಯಿಸಿ . ಇದರಿಂದ ಸ್ಪರ್ಧೆಯ ಆಯೋಜಕರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅನುಕೂಲವಾಗುತ್ತದೆ. ನೋಂದಾಯಿಸಲು ಹೆಸರು , ಮೊಬೈಲ್ ಸಂಖ್ಯೆಯನ್ನು ಈ ನಂಬರ್ ಗೆ ಸಂದೇಶದ ಮೂಲಕ ತಿಳಿಸಿ. Mob : 9844588589
ಧನ್ಯವಾದಗಳು .