19/09/2020
ನಿಟ್ಟೂರು ಎಜುಕೇಶನಲ್ ಸೊಸೈಟಿಯ ಅಧ್ಯಕ್ಷರಾಗಿ ಕೆ. ರಘುಪತಿ ಭಟ್ ಆಯ್ಕೆ:
ನಿಟ್ಟೂರು ಎಜುಕೇಶನಲ್ ಸೊಸೈಟಿಯ ವಾರ್ಷಿಕ ಮಹಾಸಭೆ ಸೆಪ್ಟೆಂಬರ್ 18ರಂದು ಕೆ. ರಘುಪತಿ ಭಟ್‍ರ ಅಧ್ಯಕ್ಷತೆಯಲ್ಲಿ ಜರಗಿತು.
ಕಾರ್ಯದರ್ಶಿ ಭಾಸ್ಕರ್ ಡಿ. ಸುವರ್ಣ ವಾರ್ಷಿಕ ವರದಿ ಮಂಡಿಸಿದರು. ಕೋಶಾಧಿಕಾರಿ ಮುರಲಿ ಕಡೆಕಾರ್ ಪರಿಶೋಧಿತ ಲೆಕ್ಕಪತ್ರ ಮಂಡಿಸಿದರು. ಬಳಿಕ 2020-21ನೇ ಸಾಲಿಗೆ ನೂತನ ಆಡಳಿತ ಮಂಡಳಿಯನ್ನು ಈ ಕೆಳಗಿನಂತೆ ಆಯ್ಕೆ ಮಾಡಲಾಯಿತು.
ಅಧ್ಯಕ್ಷ : ಕೆ. ರಘುಪತಿ ಭಟ್, ಉಪಾಧ್ಯಕ್ಷರು : ಎಸ್. ವಿ. ಭಟ್, ಎಂ. ಗಂಗಾಧರ ರಾವ್, ಯೋಗೀಶ್ಚಂದ್ರಾಧರ, ಕಾರ್ಯದರ್ಶಿ : ಮುರಲಿ ಕಡೆಕಾರ್, ಜತೆ ಕಾರ್ಯದರ್ಶಿ : ಪಿ. ದಿನೇಶ್ ಪೂಜಾರಿ, ಕೋಶಾಧಿಕಾರಿ : ಅನಸೂಯ.
ಸದಸ್ಯರು : ಭಾಸ್ಕರ ಡಿ ಸುವರ್ಣ, ಕೆ. ಸುಬ್ರಹ್ಮಣ್ಯ ಭಟ್, ರವೀಕಾಂತ, ಆಲ್ಫ್ರೆಡ್ ಕರ್ನೇಲಿಯೋ, ಸಂತೋಷ ಕರ್ನೇಲಿಯೋ, ರಾಮಚಂದ್ರ ಆಚಾರ್, ಯು. ಬಿ. ಅಜಿತ್ ಕುಮಾರ್, ಕೃಷ್ಣಮೂರ್ತಿ ಭಟ್, ಪಿ. ಪರಶುರಾಮ ಶೆಟ್ಟಿ, ಕೆ. ಎ. ಪಿ. ಭಟ್, ಪ್ರಭಾಕರ ಪೂಜಾರಿ, ಪ್ರಭಾಕರ ಜಿ, ವಸಂತ ಎನ್.
ಲೆಕ್ಕ ಪರಿಶೋಧಕರಾಗಿ ಸಿ. ಎ. ಪ್ರದೀಪ್ ಜೋಗಿಯವರನ್ನು ನಿಯುಕ್ತಿಗೊಳಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಕೆ. ರಘುಪತಿ ಭಟ್‍ರವರು ಕರೋನಾದ ನಡುವೆಯೂ 50 ಎಕ್ರೆ ಹಡಿಲುಗದ್ದೆ ಬೇಸಾಯ ಮಾಡಿ ಸುವರ್ಣ ಪರ್ವವನ್ನು ಅರ್ಥಪೂರ್ಣವಾಗಿ ಆಚರಿಸುವಂತಾಯಿತು. ಶಾಲೆಯ ಎಲ್ಲ ಅಭಿವೃದ್ಧಿ ಕಾಮಗಾರಿಗಳನ್ನು ಮುಂದಿನ ತಿಂಗಳೊಳಗೆ ಪೂರೈಸಿ, ಸಮಾಜ ಮೆಚ್ಚುವ ರೀತಿಯಲ್ಲಿ ಈ ಕನ್ನಡ ಮಾಧ್ಯಮ ಶಾಲೆಯನ್ನು ಉಳಿಸಿ ಬೆಳೆಸುವ ಹೊಣೆಗಾರಿಕೆ ನಮ್ಮ ಮೇಲಿದೆ ಎಂದು ನುಡಿದರು. ಆರಂಭದಲ್ಲಿ ಶಾಲೆಯ ಸ್ಥಾಪಕ ಸದಸ್ಯರಾದ ಪಿ. ಎಂ. ರಾಮಕೃಷ್ಣ ಆಚಾರ್ ಮತ್ತು ಪಿ. ರಾಮ ಭಟ್ ಹಾಗೂ ಲೆಕ್ಕ ಪರಿಶೋಧಕರಾದ ಬಿ. ಡಿ. ಶೆಟ್ಟರ ನಿಧನಕ್ಕೆ ಸಭೆಯಲ್ಲಿ ಗಾಢ ಸಂತಾಪ ಸೂಚಿಸಲಾಯಿತು.