23/04/2023
ನೋರ್ತ್ ಶಾಲೆಯಲ್ಲಿ ಉಚಿತ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ:
ಉಡುಪಿ ನೋರ್ತ್ ಶಾಲಾ ಹಳೇ ವಿದ್ಯಾರ್ಥಿ ಮತ್ತು ಶಾಲಾಭಿವೃದ್ಧಿ ಸಮಿತಿಯ ವತಿಯಿಂದ ಎಂಟು ದಿನಗಳ ಕಾಲ ನೋರ್ತ್ ಶಾಲೆಯಲ್ಲಿ ಆಯೋಜಿಸಿದ್ದ ಉಚಿತ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭವು ಇಂದು ರವಿವಾರ (ಎಪ್ರಿಲ್ 23 ರಂದು) ಶಾಲಾ ಆವರಣದಲ್ಲಿ ಆಯೋಜಿಸಲ್ಪಟ್ಟಿತು. ಕಳೆದ ವಾರ, ಎಪ್ರಿಲ್ 16 ರಂದು, ಉಡುಪಿಯ ಪ್ರಸಿದ್ಧ ಯುವ ಉದ್ಯಮಿ ಶ್ರೀ ಅಜಯ್ ಪಿ. ಶೆಟ್ಟಿ ಯವರು ಬೇಸಿಗೆ ಶಿಬಿರವನ್ನು ಉದ್ಘಾಟಿಸಿದ್ದರು.
ಇಂದಿನ ಸಮಾರೋಪ ಸಮಾರಂಭ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀಮತಿ ರಂಜಿತಾ ರಮಾನಾಥ್ ನಾಯಕ್ (ಕೊಡುಗೈ ದಾನಿ ಮತ್ತು ಸಮಾಜ ಸೇವಕರು, ಉಡುಪಿ), ಶ್ರೀ ಮುರಳಿ ಬಲ್ಲಾಳ್ (ಮಾಲಕರು-ಬಲ್ಲಾಳ್ ಫೈನಾನ್ಸ್ ಹಾಗೂ ಸಮಾಜ ಸೇವಕರು), ಶ್ರೀಮತಿ ಭಾಗ್ಯಶ್ರೀ ದೊಡ್ಡಮನಿ (ಸಹಾಯಕ ಅಭಿಯಂತರರು, ಮೆಸ್ಕಾಂ, ಉಡುಪಿ) ಮತ್ತು ಶ್ರೀಮತಿ ಕಲ್ಯಾಣಿ ಪೈ (ನಿವ್ರತ್ತ ಮುಖ್ಯೋಪಾಧ್ಯಾಯರು, ವಾಸುದೇವ ಕ್ರಪಾ ವಿದ್ಯಾಮಂದಿರ, ಬೈಲೂರು) ರವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಪ್ರೊ. ಶ್ರೀನಾಥ್ ರಾವ್ ಕೆ (ಅಧ್ಯಕ್ಷರು, ನೋರ್ತ್ ಶಾಲಾ ಹಳೆ ವಿದ್ಯಾರ್ಥಿ ಮತ್ತು ಶಾಲಾಭಿವೃದ್ಧಿ ಸಮಿತಿ) ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಶ್ರೀಮತಿ ಶುಭಾ ರಾವ್ ಕಾರ್ಯಕ್ರಮದ ನಿರೂಪಣೆ ಮಾಡಿದರು.
ಕುಮಾರಿ ಅನನ್ಯಾ ಚೇತನ್ ನಾಯಕ್ ಪ್ರಾರ್ಥನೆ ಸಲ್ಲಿಸಿದರು.
ಶ್ರೀಮತಿ ಶ್ರೀದೇವಿ (ಕೋಶಾಧಿಕಾರಿ, ಶಾಲಾ ಹಳೆ ವಿದ್ಯಾರ್ಥಿ ಮತ್ತು ಶಾಲಾಭಿವೃದ್ಧಿ ಸಮಿತಿ) ಸ್ವಾಗತ ಭಾಷಣ ಮಾಡಿದರು.
ಪ್ರೊ. ಕೆ. ಶ್ರೀನಾಥ್ ರಾವ್ ರವರು ಪ್ರಾಸ್ತಾವಿಕ ಭಾಷಣ ಮಾಡಿದರು ಹಾಗೂ ಉಚಿತ ಬೇಸಿಗೆ ಶಿಬಿರದ ಸದುದ್ದೇಶ ಮತ್ತು ಶತಮಾನೋತ್ಸವದ ಹೊಸ್ತಿಲಲ್ಲಿ ಇರುವ ನೋರ್ತ್ ಶಾಲೆಯ ಅಭಿವೃದ್ಧಿ ಕಾರ್ಯಕ್ರಮಗಳ ಮುಂದಿನ ರೂಪುರೇಷೆಗಳ ಕುರಿತು ಮಾಹಿತಿಯನ್ನು ನೀಡಿದರು.
ಶ್ರೀ ರಂಜನ್ ಭಾಗವತ್ ರವರು ಧನ್ಯವಾದ ಸಮರ್ಪಣೆ ಮಾಡಿದರು.
ಮುಖ್ಯ ಅತಿಥಿಗಳು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು ಹಾಗೂ ಉಚಿತ ಬೇಸಿಗೆ ಶಿಬಿರದ ಕಾರ್ಯವೈಖರಿಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು.
ಎಂಟು ದಿನಗಳ ಕಾಲ, ಉಡುಪಿ ಜಿಲ್ಲೆಯ ವಿವಿಧ ಭಾಗಗಳಿಂದ ಭಾಗವಹಿಸಿದ ಸುಮಾರು 45 ಮಕ್ಕಳಿಗೆ ನ್ರತ್ಯ, ಚಿತ್ರಕಲೆ, ಕರಕುಶಲ ತರಬೇತಿ, ವ್ಯಕ್ತಿತ್ವ ವಿಕಸನ, ಪೇಪರ್ ಕ್ರಾಫ್ಟ್, ನೀತಿ ಕಥೆಗಳು, ಗ್ರಾಮೀಣ ಕ್ರೀಡೆಗಳು ಮುಂತಾದ ವಿವಿಧ ವಿಷಯಗಳ ಕುರಿತು ಚಟುವಟಿಕೆಗಳನ್ನು ಆಯೋಜಿಸಲಾಯಿತು. ಶಿಬಿರದಲ್ಲಿ ಭಾಗವಹಿಸಿದ ಮಕ್ಕಳು ಮತ್ತು ಅವರ ಹೆತ್ತವರು ಶಿಬಿರದಲ್ಲಿ ಆಯೋಜಿಸಿದ್ದ ಚಟುವಟಿಕೆಗಳ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಶಿಬಿರದಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಪ್ರಶಂಸಾ ಪತ್ರ, ಡ್ರಾಯಿಂಗ್ ಕಿಟ್, ಸ್ಟೈನ್ ಲೆಸ್ ಸ್ಟೀಲ್ ವಾಟರ್ ಬಾಟಲ್‌ಗಳನ್ನು ವಿತರಿಸಲಾಯಿತು.
ಶಿಬಿರದಲ್ಲಿ ಭಾಗವಹಿಸಿದ ಅಂತರರಾಷ್ಟ್ರೀಯ ಯೋಗ ಪ್ರಶಸ್ತಿ ವಿಜೇತೆ ಕುಮಾರಿ ಶಿವಾನಿ ಶೆಟ್ಟಿ ಮತ್ತು ಶಿಬಿರಕ್ಕೆ ಮಾರ್ಗದರ್ಶನ ನೀಡಿ ಸಹಕರಿಸಿದ ಶ್ರೀಮತಿ ಕಲ್ಯಾಣಿ ಪೈ ಯವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಶಾಲಾ ಹಳೇ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಮಹೇಶ್ ನಾಯಕ್, ಜಂಟಿ ಕಾರ್ಯದರ್ಶಿ ಹರೀಶ್ ಶೇರಿಗಾರ್, ಸಂಘದ ಸದಸ್ಯರುಗಳಾದ ಅಮರನಾಥ್ ಭಟ್, ಶೇಖ್ ಮಕ್ಬೂಲ್, ಚೇತನ್ ಕುಮಾರ್ ನಾಯಕ್, ಸತೀಶ್ ಹೆಗಡೆ, ಅನಿಲ್ ಬೈಲಕೆರೆ, ಸತೀಶ್ ಶೇಟ್, ಸುಧೀಂದ್ರ ರಾವ್, ವಿಶ್ವನಾಥ್ ಬಾಳಿಗಾ, ಚಂದ್ರಕಲಾ ಬಾಳಿಗಾ, ಶಾಂತಾ ಬಾಳಿಗಾ, ಜ್ಯೋತಿ ಬಲ್ಲಾಳ್, ಶಾಲಾ ಶಿಕ್ಷಕಿ ಶೋಭಾ ಶೆಟ್ಟಿ, ಶಿಬಿರದ ಸಂಪನ್ಮೂಲ ವ್ಯಕ್ತಿಗಳಾದ ಸ್ರಜನ್ ಶೇರಿಗಾರ್, ಹರಿಪ್ರಸಾದ್, ಶ್ರೀದೇವಿ ಮತ್ತಿತರರು ಉಪಸ್ಥಿತರಿದ್ದರು.
#ಉಡುಪಿ #ನಮ್ಮಶಾಲೆನಮ್ಮಹೆಮ್ಮೆ #ನೋರ್ತ್_ಶಾಲೆ #ನೋರ್ತ್_ಶಾಲೆ_ಉಡುಪಿ