SMSP Sanskrit College Udupi

SMSP Sanskrit College Udupi SMSP Samskrita College was established in 1904 by the seers of the eight mutts for free education..

15/08/2026

🇮🇳न स्वातन्त्र्यात् परं सौख्यम्...🇮🇳

ಉಡುಪಿಯ ಶ್ರೀಮನ್ಮಧ್ವಸಿದ್ಧಾಂತಪ್ರಬೋಧಿನೀ ಸಂಸ್ಕೃತಮಹಾವಿದ್ಯಾಲಯದಲ್ಲಿ 80ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು 15.08.2026 ಆಚರಿಸಲಾಯಿತು. ...
15/08/2026

ಉಡುಪಿಯ ಶ್ರೀಮನ್ಮಧ್ವಸಿದ್ಧಾಂತಪ್ರಬೋಧಿನೀ ಸಂಸ್ಕೃತಮಹಾವಿದ್ಯಾಲಯದಲ್ಲಿ 80ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು 15.08.2026 ಆಚರಿಸಲಾಯಿತು. ಪರ್ಯಾಯ ಶ್ರೀಶೀರೂರುಮಠದ ದಿವಾನರಾದ ಡಾ. ಉದಯಕುಮಾರ ಸರಳತ್ತಾಯರು ಧ್ವಜಾರೋಹಣವನ್ನು ನೆರವೇರಿಸಿದರು.

ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಅಮೃತೇಶಾಚಾರ್ಯರು ಸ್ವಾಗತಿಸಿದರು.
ಎಸ್.ಎಮ್. ಎಸ್. ಪಿ. ಹೈಸ್ಕೂಲ್ ನ ಮುಖ್ಯೋಪಾಧ್ಯಾಯೆಯಾದ ಶ್ರೀಮತಿ ಪುಷ್ಪಲತಾ ಇವರು ಧನ್ಯವಾದಗೈದರು.
ಬಳಿಕ ಪರ್ಯಾಯ ಮಠದ ವತಿಯಿಂದ ಸಿಹಿತಿಂಡಿಯನ್ನು ವಿತರಿಸಲಾಯಿತು.

15/08/2026
ಕ.ಸಂ.ವಿ ಯ ಸಂಸ್ಕೃತ ಗ್ರಂಥಪುರಸ್ಕಾರಉಡುಪಿಯ ಶ್ರೀಮನ್ಮಧ್ವಸಿದ್ಧಾಂತಪ್ರಬೋಧಕಸಂಸ್ಕೃತಸ್ನಾತಕಸ್ನಾತಕೋತ್ತರಾಧ್ಯಯನಕೇಂದ್ರದ ಜ್ಯೋತಿಷ್ಯವಿಭಾಗದ ಪ್...
11/08/2026

ಕ.ಸಂ.ವಿ ಯ ಸಂಸ್ಕೃತ ಗ್ರಂಥಪುರಸ್ಕಾರ
ಉಡುಪಿಯ ಶ್ರೀಮನ್ಮಧ್ವಸಿದ್ಧಾಂತಪ್ರಬೋಧಕಸಂಸ್ಕೃತಸ್ನಾತಕಸ್ನಾತಕೋತ್ತರಾಧ್ಯಯನಕೇಂದ್ರದ ಜ್ಯೋತಿಷ್ಯವಿಭಾಗದ ಪ್ರಾಧಾಪಕರಾದ ಪ್ರೊ. ಡಿ. ಶಿವಪ್ರಸಾದ ತಂತ್ರೀ ಇವರು ಬರೆದಿರುವ ವರಾಹಮಿಹಿರಾಚಾರ್ಯರ ಬೃಹಜ್ಜಾತಕದ ಸಾರಗಳನ್ನು ಒಳಗೊಂಡಿರುವ ಪ್ರಬಂಧಗಳ ಗುಚ್ಛವಾಗಿರುವ "ಹೋರಾನಿಬಂಧಸಂಗ್ರಹ" ಗ್ರಂಥಕ್ಕೆ ಡಾ. ಆರ್ ಶಾಮ ಶಾಸ್ತ್ರಿ ಗ್ರಂಥಪುರಸ್ಕಾರವು ಲಭಿಸಿದೆ. ದ್ವೈತವೇದಾಂತ ವಿಭಾಗದ ಪ್ರಾಧ್ಯಾಪಕರಾದ ಪ್ರೊ. ಷಣ್ಮುಖ ಹೆಬ್ಬಾರ್ ಇವರು ವಿದ್ವಾಂಸರಾದ ಶತಾವಧಾನಿ ಡಾ. ಉಡುಪಿ ರಾಮನಾಥ ಆಚಾರ್ಯರಿಂದ ರಚಿಸಲ್ಪಟ್ಟ ಅಕ್ಷರ ಗ್ರಂಥದ ಸಂಸ್ಕೃತಾನುವಾದ "ಅಕ್ಷರಸಮೀಕ್ಷಾ" ಗ್ರಂಥಕ್ಕೆ ಪ್ರೊ. ಮಲ್ಲಿಕಾರ್ಜುನ ಪರಡ್ಡಿ ಗ್ರಂಥಪುರಸ್ಕಾರವು ಲಭಿಸಿದೆ.
2022/23/24ನೇ ಸಾಲಿನ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಈ ಪ್ರಶಸ್ತಿಪ್ರದಾನ ಕಾರ್ಯಕ್ರಮವು ಶ್ರೀಕೃಷ್ಣ ಪರಿಷನ್ಮಂದಿರ, ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರಿನಲ್ಲಿ ನಡೆಯಿತು. ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಎಸ್. ಅಹಲ್ಯಾ, ಪದ್ಮಭೂಷಣ ಶತಾವಧಾನಿ ಡಾ. ಆರ್.ಗಣೇಶ್, ಡಾ. ಉಮಾಕಾಂತಭಟ್ಟ ಮೊದಲಾದ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

31/07/2026

ಉಡುಪಿ: ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದಿಂದ ಮಾನ್ಯತೆಯನ್ನು ಪಡೆದಿರುವ ಉಡುಪಿಯ ಶ್ರೀಮನ್ಮಧ್ವಸಿದ್ಧಾಂತಪ್ರಬೋಧಕಸಂಸ್ಕೃತಸ್ನಾತಕಸ್ನಾತಕೋತ್ತರಾಧ್ಯಯನಕೇಂದ್ರದ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಪೆರಂಪಳ್ಳಿಯಲ್ಲಿ "ಸಸ್ಯಾರೋಪಣಮ್" ಕಾರ್ಯಕ್ರಮವು ನಡೆಯಿತು.

ಮಾನವೀಯತೆಯ ದೃಷ್ಟಿಕೋನದಲ್ಲಿ ಪ್ರಾಣಿಪಕ್ಷಿಗಳ ಸಂರಕ್ಷಣೆಯ ಪರಿಕಲ್ಪನೆಯಲ್ಲಿ ವಿವಿಧಫಲಗಳ ಸಸಿಗಳನ್ನು ನೆಡಲಾಯಿತು.

ಅಭ್ಯಾಗತರಾಗಿ ಸಾಹಿತ್ಯವಿಭಾಗದ ಪ್ರಾಧ್ಯಾಪಿಕೆ ಡಾ. ಭಾಗ್ಯಲಕ್ಷ್ಮಿ ವಿ ಇವರು ಆಗಮಿಸಿ ಸಸ್ಯಾರೋಪಣವನ್ನು ಮಾಡುವ ಮೂಲಕ ಈ ಕಾರ್ಯಕ್ರಮಕ್ಕೆ ಶುಭಹಾರೈಸಿದರು.

ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ. ಡಿ.ಎಸ್ ಅಮೃತೇಶ ಆಚಾರ್ಯರು, ರಾ.ಸೇ.ಯೋ. ಘಟಕದ ಸಂಯೋಜನಾಧಿಕಾರಿ ಡಾ. ರಾಧಾಕೃಷ್ಣ ಬಿ, ಸಹಸಂಯೋಜನಾಧಿಕಾರಿ ಕು.ಸಂಧ್ಯಾ ಮತ್ತು ವಿದ್ಯಾರ್ಥಿಗಳು ಗಿಡಗಳನ್ನು ನೆಡುವ ಮೂಲಕ ಕಾರ್ಯಕ್ರಮವು ಯಶಸ್ವಿಯಾಗಿ ಸಂಪನ್ನವಾಯಿತು.

ಸಕಲ ಶಬ್ದಗಳಿಂದಲೂ ಪ್ರತಿಪಾದಿತನಾದವನು ಭಗವಂತ : ಡಾ. ಶ್ರೀನಿವಾಸಮೂರ್ತಿ ಉಡುಪಿ: ಶ್ರೀಮನ್ಮಧ್ವಸಿದ್ಧಾಂತಪ್ರಬೋಧಕ ಸಂಸ್ಕೃತಸ್ನಾತಕಸ್ನಾತಕೋತ್ತರಾ...
26/07/2026

ಸಕಲ ಶಬ್ದಗಳಿಂದಲೂ ಪ್ರತಿಪಾದಿತನಾದವನು ಭಗವಂತ : ಡಾ. ಶ್ರೀನಿವಾಸಮೂರ್ತಿ

ಉಡುಪಿ: ಶ್ರೀಮನ್ಮಧ್ವಸಿದ್ಧಾಂತಪ್ರಬೋಧಕ ಸಂಸ್ಕೃತಸ್ನಾತಕಸ್ನಾತಕೋತ್ತರಾಧ್ಯಯನಕೇಂದ್ರದಲ್ಲಿ ಶ್ರೀರಾಜಾರಾಮ್ ಚೆನ್ನೈ, ಶ್ರೀಸುಬ್ಬಯ್ಯ ಶೆಟ್ಟಿ ಮುಂಬೈ, ವಿ.ಪ್ರಸನ್ನ ಆಚಾರ್ಯ ಪುತ್ತಿಗೆ ಮಠ ಇವರ ದತ್ತಿನಿಧಿಯ ಪ್ರಾಯೋಜಕತ್ವದಲ್ಲಿ ನಡೆದ ಕಾವ್ಯಶಾಸ್ತ್ರವಿಚಾರಪರಿಷತ್ ನ ಪ್ರಥಮ ವಿಚಾರ ಸಂಕಿರಣಲ್ಲಿ "ವೇದಾಂತೇ ವೃತ್ತ್ಯಾದಿಸ್ವರೂಪವಿಮರ್ಶಃ" ಎಂಬ ವಿಷಯದ ಕುರಿತಾಗಿ ಉಪನ್ಯಾಸವನ್ನು ನೀಡಿದ ಮೈಸೂರಿನ ಡಾ. ಶ್ರೀನಿವಾಸಮೂರ್ತಿ ಆಚಾರ್ಯರು "ಎಲ್ಲಾ ಶಬ್ದಗಳಿಂದಲೂ, ಅಕ್ಷರಗಳಿಂದಲೂ ಪ್ರತಿಪಾದಿತನಾದವನು ಪದ್ಮನಾಭ. ಮುಖ್ಯ ವೃತ್ತಿಯ ಮೂಲಕ ಲೌಕಿಕವಾದ ಅರ್ಥವು ಪ್ರತಿಪಾದಿತವಾದರೂ ಪರಮಮುಖ್ಯವೃತ್ತಿಯಲ್ಲಿ ಎಲ್ಲವೂ ಭಗವದ್ವಾಚಕ ಪದಗಳೇ ಆಗಿವೆ" ಎಂಬ ಆಚಾರ್ಯ ಮಧ್ವರ ಸಿದ್ಧಾಂತವನ್ನು ಪ್ರಸ್ತುತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಪ್ರೊ. ಡಾ. ಡಿ.ಎಸ್ ಅಮೃತೇಶ ಆಚಾರ್ಯರು ವಿದ್ಯಾರ್ಥಿಗಳನ್ನು ಕುರಿತು ಹಿತನುಡಿಗಳನ್ನಾಡಿದರು. ಕಾವ್ಯಶಾಸ್ತ್ರವಿಚಾರಪರಿಷತ್ ನ ಸಂಚಾಲಕರಾದ ಡಾ. ಅಜಿತ ಕುಮಾರ ಆಚಾರ್ಯರು ಸ್ವಾಗತಿಸಿದರು. ವಿದ್ಯಾರ್ಥಿಗಳಾದ ಸುಮುಖ ಅಡಿಗ ಧನ್ಯವಾದಗೈದರು. ಕು. ಸುದೀಕ್ಷಾ ಪ್ರಾರ್ಥಿಸಿದರು.
ಕು. ಐಶ್ವರ್ಯ ಕಾರ್ಯಕ್ರಮವನ್ನು ನಿರೂಪಿಸಿದರು.

ಗ್ರಂಥಂ ಯತ್ನೇನ ಪಾಲಯೇತ್ : ಡಾ. ಬಿ. ಗೋಪಾಲಾಚಾರ್ಯ ಉಡುಪಿ: ಶ್ರೀಮನ್ಮಧ್ವಸಿದ್ಧಾಂತಪ್ರಬೋಧಕಸಂಸ್ಕೃತಸ್ನಾತಕಸ್ನಾತಕೋತ್ತರಾಧ್ಯಯನಕೇಂದ್ರದಲ್ಲಿ ಭ...
26/07/2026

ಗ್ರಂಥಂ ಯತ್ನೇನ ಪಾಲಯೇತ್ : ಡಾ. ಬಿ. ಗೋಪಾಲಾಚಾರ್ಯ
ಉಡುಪಿ: ಶ್ರೀಮನ್ಮಧ್ವಸಿದ್ಧಾಂತಪ್ರಬೋಧಕಸಂಸ್ಕೃತಸ್ನಾತಕಸ್ನಾತಕೋತ್ತರಾಧ್ಯಯನಕೇಂದ್ರದಲ್ಲಿ ಭಾರತ ಸರಕಾರದ ಸನ್ಮಾನ್ಯ ಪ್ರಧಾನಮಂತ್ರಿಗಳ ನೇತೃತ್ವದಲ್ಲಿ ನಡೆಯುತ್ತಿರುವ "ಜ್ಞಾನಭಾರತೀ ಮಿಷನ್" ಕಾರ್ಯಕ್ರಮದ ಅಂಗವಾಗಿ ಉಡುಪಿ ಜಿಲ್ಲಾಮಟ್ಟದ ಜ್ಞಾನಭಾರತೀಮಿಷನ್ ನ ಪ್ರಧಾನ ಸಂಚಾಲಕರಾದ ಡಾ. ಬಿ. ಗೋಪಾಲಾಚಾರ್ಯರು "ಜ್ಞಾನಭಂಡಾರವು ಹಿರಿಯರ ಕಠಿಣಪರಿಶ್ರಮ. ಅವುಗಳು ತಾಡವಾಲೆಯ ಮೂಲಕ ನಮ್ಮ ಪೀಳಿಗೆಗೆ ಬಂದಿದೆ. ಅವುಗಳ ರಕ್ಷಣೆ ನಮ್ಮ ಮಹತ್ತರವಾಗಿರುವ ಜವಾಬ್ದಾರಿ" ಎಂದು ವಿದ್ಯಾರ್ಥಿಗಳಿಗೆ ಪ್ರಾಚೀನ ತಾಡವಾಲೆ ಗ್ರಂಥಗಳ ಸಂರಕ್ಷಣೆಯ ಕುರಿತಾಗಿ ಜಾಗೃತಿಯನ್ನು ಮೂಡಿಸಿದರು.
ಈ ಸಂದರ್ಭದಲ್ಲಿ 2026-27 ನೇ ಸಾಲಿನ ಶೈಕ್ಷಣಿಕವರ್ಷದ ಪಠ್ಯೇತರಚಟುವಟಿಕೆಗಳ " ಪ್ರತಿಭಾಪ್ರದೀಪಿನೀ"ಯ ಉದ್ಘಾಟನಾ ಕಾರ್ಯಕ್ರಮವನ್ನು ನೆರವೇರಿಸಿದರು.
ಮಹಾವಿದ್ಯಾಲಯದ ಪ್ರಾಂಶುಪಾಲರಾದ ಪ್ರೊ. ಡಿ. ಅಮೃತೇಶಾಚಾರ್ಯರು ಅಧ್ಯಕ್ಷತೆಯನ್ನು ವಹಿಸಿ ವ್ಯುತ್ಪತ್ತಿ ಮತ್ತೆ ಪ್ರತಿಭೆಯ ಸ್ವರೂಪವನ್ನು ತಿಳಿಸಿ ಸ್ಪರ್ಧಾತ್ಮಕ ಜಗತ್ತಿನಲ್ಲಿ ಪಠ್ಯೇತರಚಟುವಟಿಕೆಯಲ್ಲಿ ವಿದ್ಯಾರ್ಥಿಗಳನ್ನು ಭಾಗವಹಿಸುವಂತೆ ಪ್ರೇರಣಾದಾಯಕ ನುಡಿಗಳನ್ನಾಡಿದರು. ಅಭ್ಯಾಗತರಾಗಿ ಪ್ರೊ. ಸತ್ಯನಾರಾಯಣ ವಿ ರಾವ್ ಉಪಸ್ಥಿತರಿದ್ದರು. ಪ್ರಹ್ಲಾದ ಇವರು ಸ್ವಾಗತಿಸಿದರು. ಚಿದಾನಂದ ನಾಯಕ್ ಧನ್ಯವಾದಗೈದರು. ಹೇಮಂತಕೃಷ್ಣ ಕಾರ್ಯಕ್ರಮವನ್ನು ನಿರೂಪಿಸಿದರು.

23/07/2026

ಶ್ರೀಮನ್ಮಧ್ವಸಿದ್ಧಾಂತಪ್ರಬೋಧಕಸಂಸ್ಕೃತಸ್ನಾತಕಸ್ನಾತಕೋತ್ತರಾಧ್ಯಯನಕೇಂದ್ರದ 2026-27 ನೇ ಸಾಲಿನ ಶೈಕ್ಷಣಿಕವರ್ಷದ ಪಠ್ಯೇತರಚಟುವಟಿಕೆಗಳ " ಪ್ರತಿಭಾಪ್ರದೀಪಿನೀ"ಯ ಉದ್ಘಾಟನಾ ಕಾರ್ಯಕ್ರಮ...

2024-25 ನೇ ಸಾಲಿನ ಆಚಾರ್ಯ ಅಂತಿಮವರ್ಷದ ವಿದ್ಯಾರ್ಥಿಗಳು 💐
21/07/2026

2024-25 ನೇ ಸಾಲಿನ ಆಚಾರ್ಯ ಅಂತಿಮವರ್ಷದ ವಿದ್ಯಾರ್ಥಿಗಳು 💐

13/07/2026

2025-26 ಶೈಕ್ಷಣಿಕ ವರ್ಷದ ಆಚಾರ್ಯ ಅಂತಿಮವರ್ಷದ ವಿದ್ಯಾರ್ಥಿಗಳನ್ನು ಬೀಳ್ಕೊಡುವ "ಆಪೃಚ್ಛಾಸಮಾರಂಭ"ವು 11•07•2026 ರಂದು ಶ್ರೀಮನ್ಮಧ್ವಸಿದ್ಧಾಂತಪ್ರಬೋಧಕಸಂಸ್ಕೃತಸ್ನಾತಕ-ಸ್ನಾತಕೋತ್ತರಾಧ್ಯಯನಕೇಂದ್ರದ ಭೀಮಸಭಾಂಗಣದಲ್ಲಿ ನಡೆಯಿತು.

Address

SMSP SANSKRIT COLLEGE Road
Udupi

Opening Hours

Monday 9am - 4:30pm
Tuesday 9am - 4:30pm
Wednesday 9am - 4:30pm
Thursday 9am - 4:30pm
Friday 9am - 4:30pm
Saturday 9am - 4:30pm
Sunday 9am - 4:30pm

Alerts

Be the first to know and let us send you an email when SMSP Sanskrit College Udupi posts news and promotions. Your email address will not be used for any other purpose, and you can unsubscribe at any time.

Contact The School

Send a message to SMSP Sanskrit College Udupi:

Shortcuts

Share

Category