29/09/2026
*ಕರಾವಳಿ ಹೈಕೋರ್ಟ್ ಸಂಚಾರಿ ಪೀಠ ರಚನೆಯ ಬಗ್ಗೆ ಇಂದು ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಂದ 3 ನ್ಯಾಯಮೂರ್ತಿಗಳನ್ನೊಳಗೊಂಡ ಸಮಿತಿ ರಚನೆ - ಉಡುಪಿ ಜಿಲ್ಲಾ ಹೋರಾಟ ಸಮಿತಿ ಸ್ವಾಗತ*
ಕರಾವಳಿ ಕರ್ನಾಟಕ ಪ್ರದೇಶದಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗಾಗಿ ನಡೆಯುತ್ತಿರುವ ಹೋರಾಟವನ್ನು ಗಮನಿಸಿ ಹಾಗೂ ಮನವಿಗಳನ್ನು ಪುರಸ್ಕರಿಸಿ ಇಂದು ಕರ್ನಾಟಕ ಹೈಕೋರ್ಟ್
ಮುಖ್ಯ ನ್ಯಾಯಮೂರ್ತಿಗಳು ಜಸ್ಟೀಸ್ ಅನು ಶಿವರಾಮನ್, ಜಸ್ಟೀಸ್ ಎಸ್ ಜಿ ಪಂಡಿತ್ ಹಾಗೂ ಜಸ್ಟೀಸ್ ಮೊಹಮ್ಮದ್ ನವಾಜ್ ಅವರನ್ನೊಳಗೊಂಡ ಮೂವರು ನ್ಯಾಯಾಧೀಶರ ಸಮಿತಿಯನ್ನು ರಚಿಸಿ, ಈ ಸಂಭಂದ ಎಲ್ಲ ಪಾಲುದಾರರ ಜೊತೆ ಸಮಾಲೋಚನೆ ನಡೆಸಿ ವರದಿ ಸಲ್ಲಿಸಲು ಸುತ್ತೋಲೆ ಹೊರಡಿಸಿರುವ ಕ್ರಮವನ್ನು ಕರಾವಳಿ ಹೈಕೋರ್ಟ್ ಪೀಠ ಹೋರಾಟ ಸಮಿತಿ ಉಡುಪಿ ಜಿಲ್ಲಾ ಸಂಚಾಲಕ, ಯೂ -ಆಕ್ಟ್ ಸಂಸ್ಥಾಪಕ ನ್ಯಾಯವಾದಿ ಪ್ರೇಮ್ ಪ್ರಸಾದ್ ಶೆಟ್ಟಿ ಯವರು ಸ್ವಾಗತಿಸುತ್ತಾ, " ಸದರಿ ಈ ಸಮಿತಿ ರಚನೆಯ ಘೋಷಣೆಯು ಕರಾವಳಿ ಪೀಠ ಸ್ಥಾಪನೆಯ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿದ್ದು, ಅತೀ ಶೀಘ್ರದಲ್ಲಿ ಪೀಠ ಸ್ಥಾಪನೆ ಈಡೇರಲಿದೆ, ಈ ನಿಟ್ಟಿನಲ್ಲಿ ನಮ್ಮೊಂದಿಗೆ ಸಹಕರಿಸಿದ ವಿವಿಧ ಸಂಘ ಸಂಸ್ಥೆಗಳು, ವಕೀಲರ ಸಮೂಹ ಹಾಗೂ ಸಾರ್ವಜನಿಕರನ್ನು ಆಭಿನಂದಿಸುತ್ತಾ, ಮುಂದಿನ ದಿನಗಳಲ್ಲಿ ಈ ನಮ್ಮ ಹೋರಾಟವನ್ನು ಇನ್ನಷ್ಟು ಸಂಘಟಿತವಾಗಿ ಮಾಡಬೇಕಾದ ಅವಶ್ಯಕತೆ ಇದೆ, ಸಮಿತಿಯ ಮುಂದೆ ನಮ್ಮ ನ್ಯಾಯಯೋಚಿತ ಬೇಡಿಕೆಯನ್ನು ಇಟ್ಟು ಅತೀ ಶೀಘ್ರದಲ್ಲಿ ಪೀಠ ಸ್ಥಾಪನೆಯಾಗುವಂತೆ ನಾವು ಮನವಿ ಮಾಡಲಿದ್ದೇವೆ" ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.