09/08/2023
ಚೌಕಿಂಗಡಿ ಮಾಳ ಶಾಲೆಯಲ್ಲಿ ಉಚಿತ ಸ್ಫೋಕ ಇಂಗ್ಲಿಷ್ ತರಬೇತಿ ಉದ್ಘಾಟನೆ
ಸ್ಪೋಕನ್ ಇಂಗ್ಲಿಷ್ ಕಲಿಸುವ ಮೂಲಕ ಕನ್ನಡ ಮಾಧ್ಯಮ ಶಾಲೆ ಉಳಿಸಿ ಆಂದೋಲನದಡಿಯಲ್ಲಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಅತಿಥಿ ಹಾಗೂ ಗೌರವ ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ವರ್ಷಪೂರ್ತಿ ಉಚಿತ ಸ್ಫೋಕನ್ ಇಂಗ್ಲಿಷ್ ತರಬೇತಿ ನೀಡಲಾಗುತ್ತದೆ.
ಶಿಕ್ಷಕಿಯರು ಆರಂಭದ ಹಂತದ ತರಬೇತಿಯನ್ನು ಪಡೆದ ಬಳಿಕ ಅವರುಗಳ ಶಾಲೆಗಳಲ್ಲಿ ವಿದ್ಯಾರ್ಥಿಗಳ ತರಬೇತಿ ಕಾರ್ಯಕ್ರಮಗಳನ್ನು ಉದ್ಘಾಟನೆ ಮಾಡಲಾಗುತ್ತದೆ.
ಕಾರ್ಕಳ ತಾಲೂಕು, ಚೌಕಿಯಂಗಡಿ ಮಾಳ ಶಾಲೆಯ ಅತಿಥಿ ಶಿಕ್ಷಕಿಯರಾದ ಶ್ರೀಮತಿ ಉಷಾ ಮತ್ತು ಕುಮಾರಿ ಶ್ರೇಯ ಇವರು ಈಗಾಗಲೇ ಶೆಫಿನ್ಸ್ ನಿಂದ ತರಬೇತಿಯನ್ನು ಪಡೆದಿದ್ದು, ಸದ್ರಿ ಶಾಲೆಯ ವಿದ್ಯಾರ್ಥಿಗಳಿಗಾಗಿ ಸ್ಪೋಕನ್ ಇಂಗ್ಲೀಷ್ ತರಬೇತಿಯನ್ನು ಉದ್ಘಾಟಿಸಲಾಯಿತು.
ವರ್ಷಂತ್ಯದವರೆಗೆ ಮಕ್ಕಳಿಗೆ ವಾರದಲ್ಲಿ ಮೂರು ದಿನ ತಲಾ ಒಂದೊಂದು ಪಿರೇಡ್ನಂತೆ ಸ್ಪೋಕನ್ ಇಂಗ್ಲೀಷ್ ತರಬೇತಿ ನೀಡಲಾಗುವುದು. ಈ ಮೂಲಕ ಮಕ್ಕಳಲ್ಲಿ ಇಂಗ್ಲಿಷ್ ಬಗ್ಗೆ ಆಸಕ್ತಿಯನ್ನು ಹೆಚ್ಚು ಮೂಡಿಸುವಂಥದ್ದು ಹಾಗೂ ಕನ್ನಡ ಮಾಧ್ಯಮ ಶಾಲೆಗಳಲ್ಲಿಯೇ ಉಳಿದು, ಇಂಗ್ಲಿಷ್ ಸಂವಹನವನ್ನು ಚೆನ್ನಾಗಿ ಮಾಡುತ್ತ ಬದುಕಿನಲ್ಲಿ ಮುಂದೆ ಬರಲು ಅವಕಾಶಗಳನ್ನು ಒದಗಿಸಿಕೊಡುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಹಾಗೂ ಈ ಮೂಲಕ ಎಲ್ಲಾ ಸರಕಾರಿ ಮತ್ತು ಅನುದಾನಿತ ಶಾಲೆಗಳನ್ನು ಉಳಿಸಿಕೊಳ್ಳುವುದು ಈ ಒಂದು ಆಂದೋಲನದ ಉದ್ದೇಶವಾಗಿದೆ ಎಂದು ಶೆಫಿನ್ಸ್ ನ ನಿರ್ದೇಶಕ ಮನೋಜ್ ಕಡಬ ಹೇಳಿದರು.
ಉದ್ಘಾಟನೆಯನ್ನು ಮಾಳ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ರಕ್ಷಿತಾ ಶೆಟ್ಟಿ ಅವರು ನೆರವೇರಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ತರಬೇತಿದಾರರಾದ ಕುಮಾರಿ ಅಕ್ಷತಾ ಶೆಣೈ ವಿದ್ಯಾರ್ಥಿಗಳ ಚಟುವಟಿಕೆಗಳನ್ನು ಶ್ಲಾಘಿಸಿದರು. ತರಬೇತಿ ಪಡೆದ ಶಿಕ್ಷಕಿಯರಾದ ಶ್ರೀಮತಿ ಉಷಾ ಹಾಗೂ ಕುಮಾರಿ ಶ್ರೇಯ ಇವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಎಸ್ ಡಿ ಎಂ ಸಿ ಅಧ್ಯಕ್ಷರಾದ ಶ್ರೀ ಚಂದ್ರನಾಥ ಇಂದ್ರ, ಉಪಾಧ್ಯಕ್ಷರಾದ ಶ್ರೀಮತಿ ಮಂಜುಳಾ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀ ಯಶೋಧರ ಶೆಟ್ಟಿ ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕರಾದ ಶ್ರೀ ಭುಜಂಗ ಅವರು ಸ್ವಾಗತಿಸಿದರು. ಹಿರಿಯ ಶಿಕ್ಷಕಿ ಶ್ರೀಮತಿ ಪುಷ್ಪಾವತಿ ವಂದಿಸಿ, ಸಹಶಿಕ್ಷಕ ಶ್ರೀ ಸುಭಾಷ್ ಕಾರ್ಯಕ್ರಮ ನಿರೂಪಣೆಗೈದರು.