Saraswathi mandira school uchila

Saraswathi mandira school uchila ಸರಸ್ವತಿ ಮಂದಿರ

21/05/2025

*ಗೂಗಲ್ ಕೃಪೆ:~~~~*

*ಹೀಗಿರಲಿ ಶಾಲೆಯಲ್ಲಿ ಮಗುವಿನ ಮೊದಲ ದಿನ*


ಶಾಲೆಗಳ ಎದುರು ಅಳುವ ಪುಟಾಣಿ ಮಕ್ಕಳು; ತಂದೆ ಅಥವಾ ತಾಯಿ ಬಿಟ್ಟು ಹೋದರೆ ಎಂಬ ಭಯದಿಂದ ಅವರನ್ನು ಅಪ್ಪಿಕೊಂಡು ಶಾಲೆಯೊಳಗೆ ಹೋಗಲು ಒಲ್ಲದ ಚಿಣ್ಣರು; ಮಕ್ಕಳನ್ನು ರಮಿಸುತ್ತ ಒಳಗೆ ಒಯ್ಯುವ ಶಾಲೆಯ ಶಿಕ್ಷಕ/ ಶಿಕ್ಷಕಿಯರು, ಆಯಾಗಳು.. ಇನ್ನೊಂದು ಶೈಕ್ಷಣಿಕ ವರ್ಷದ ಆರಂಭದಲ್ಲಿ ಶಾಲೆಗಳ ಸಮೀಪ ಕಾಣುವ ಸಾಮಾನ್ಯ ದೃಶ್ಯಗಳಿವು.

ಮನೆಯಲ್ಲಿ ತಂದೆ– ತಾಯಿಯ ಅಕ್ಕರೆ, ಅಜ್ಜ– ಅಜ್ಜಿಯರ ಮುದ್ದಿನ ಮಧ್ಯೆ ಕಳೆದ ಪುಟಾಣಿಗಳು ಸಮವಸ್ತ್ರ, ಪುಟ್ಟ ಬ್ಯಾಗ್‌ ಹೊತ್ತು ಶಾಲೆಗೆ ಕಾಲಿಡುವ ಈ ಹೊತ್ತು ಅವರ ತಲೆಯೊಳಗೆ ಭಯ, ಆತಂಕವನ್ನು ಹುಟ್ಟು ಹಾಕುವುದು ಸಹಜ. ತಂದೆ– ತಾಯಿಯರಿಂದ ಬೇರ್ಪಡುವ ಈ ಸಂದರ್ಭ ಆ ಮಕ್ಕಳಿಗೆ ನಿಜಕ್ಕೂ ಆಘಾತಕರ. ಪೋಷಕರೂ ಅಷ್ಟೆ, ತಮ್ಮ ಮಕ್ಕಳು ಅನುಭವಿಸುವ ಈ ಯಾತನೆಯಿಂದ ಒತ್ತಡಕ್ಕೆ ಒಳಗಾಗುತ್ತಾರೆ.

ಪೋಷಕರಿಂದ ಬೇರ್ಪಡುವ ಆತಂಕ

ಮಕ್ಕಳು ತಮ್ಮನ್ನು ಪ್ರೀತಿಯಿಂದ ನೋಡಿಕೊಳ್ಳುವ ಪೋಷಕರಿಗೆ ಅದರಲ್ಲೂ ತಾಯಿಗೆ ಹೆಚ್ಚು ಅಂಟಿಕೊಳ್ಳುವುದು ಸಹಜ. ಹುಟ್ಟಿದ ಕೂಸನ್ನು ತಾಯಿಯಿಂದ ಬೇರ್ಪಡಿಸಿದಾಗ ಅಳುವುದು ಈ ಕಾರಣದಿಂದಲೇ. ಅದರಲ್ಲೂ ಎರಡೂವರೆ– ಮೂರು ವರ್ಷಗಳ ಮಕ್ಕಳಿಗೆ ಪೋಷಕರ ಜೊತೆಗಿನ ಸಂಬಂಧ ಹೆಚ್ಚು ನಿಕಟವಾಗಿರುತ್ತದೆ. ಸ್ವಲ್ಪ ಹೊತ್ತು ಪೋಷಕರು ಕಾಣದಿದ್ದರೂ ಭಯದಿಂದ ಕಂಗಾಲಾಗುತ್ತಾರೆ. ಹೀಗಿರುವಾಗ ತಂದೆ– ತಾಯಿಯರಿಂದ ಬೇರ್ಪಡಿಸಿ ಶಾಲೆಯೆಂಬ ಯಾವುದೋ ಅಪರಿಚಿತ ಜಾಗಕ್ಕೆ ದೂಡಿದರೆ ಪುಟ್ಟ ಮನಸ್ಸಿಗೆ ಹೇಗಾಗಬೇಡ? ತಾನು ಅಲ್ಲಿ ಸುರಕ್ಷಿತವಲ್ಲ ಎಂಬ ಆತಂಕ ಸಹಜವಾಗಿ ಹೊರಹೊಮ್ಮಿ ತಂದೆ– ತಾಯಂದಿರಿಗೆ ಅಂಟಿಕೊಳ್ಳುವಂತೆ ಮಾಡಿಬಿಡುತ್ತದೆ.

ತನ್ನನ್ನು ಇಷ್ಟು ದಿನ ನೋಡಿಕೊಂಡ, ಪ್ರೀತಿಯ ಮಳೆ ಸುರಿಸಿದ ತಂದೆ– ತಾಯಿ ದೂರವಾಗುತ್ತಾರೆ ಎಂಬ ಭಯದಿಂದ ಅದು ಅಳಲು ಶುರುಮಾಡುತ್ತದೆ. ಶಾಲೆಯಲ್ಲಿನ ಅಪರಿಚಿತ ಮುಖಗಳು ಈ ದಿಗಿಲನ್ನು ಇನ್ನಷ್ಟು ಹೆಚ್ಚಿಸುತ್ತವೆ. ಹೀಗಾಗಿ ಮಗುವಿನಲ್ಲಿ ಕಾಣಿಸಿಕೊಳ್ಳುವ ಈ ಅಸುರಕ್ಷಿತ ಭಾವನೆಗಳನ್ನು ಹೋಗಲಾಡಿಸಿ, ಶಾಲೆಯ ಶಿಕ್ಷಕ/ ಶಿಕ್ಷಕಿಯರೆಂಬ ಅಪರಿಚಿತ ವ್ಯಕ್ತಿಗಳು, ಉಳಿದ ಮಕ್ಕಳ ಜೊತೆ ಬಾಂಧವ್ಯ ಏರ್ಪಡಿಸಿದರೆ ಮಾತ್ರ ಅದು ಶಾಲಾ ವಾತಾವರಣಕ್ಕೆ ಹೊಂದಿಕೊಳ್ಳಲಾರಂಭಿಸುತ್ತದೆ. ಈ ಮನೆ ವಾತಾವರಣದಿಂದ ಬದಲಾ
ಗುವ ಶಾಲೆಯ ವಾತಾವರಣಕ್ಕೆ ಹೊಂದಿಕೊಳ್ಳಲು ಮಗುವನ್ನು ಮಾನಸಿಕವಾಗಿ ಸಿದ್ಧಪಡಿಸಬೇಕಾಗುತ್ತದೆ.

*ಬದಲಾವಣೆಗೆ ಸಮಯ ಬೇಕು*
ಈ ಬದಲಾವಣೆಗೆ ಸ್ವಲ್ಪ ಸಮಯ ಬೇಕು. ಪೋಷಕರು ಅವಸರದಿಂದ ವರ್ತಿಸಿದರೆ, ಮಗುವನ್ನು ಗದರಿಸಿದರೆ ಸಾಧ್ಯವಿಲ್ಲ. ನಗರದಲ್ಲಿ ಪೋಷಕರು ಮಗುವನ್ನು ಪ್ಲೇಹೋಮಿಗೆ ಸೇರಿಸಿದರೆ, ಹಳ್ಳಿಗಳಲ್ಲೂ ಅಂಗನವಾಡಿಗೆ ಸೇರಿಸುವ ಪರಿಪಾಠವಿದೆ. ಮಗು ಒಂದಿಷ್ಟು ಬಾಲಿಕವಿತೆಗಳನ್ನು ಹಾಡಬಹುದು, ಅಕ್ಷರಗಳನ್ನು ಕಲಿತು ರಾಗವಾಗಿ ಹೇಳಬಹುದು. ಆದರೆ ಸಾಂಪ್ರದಾಯಕ ಶಾಲೆಗೆ ಸೇರಲು ಮಗುವಿಗೆ ಇಷ್ಟೇ ಸಾಕಾಗಲಾರದು.

ಅಷ್ಟೇ ಅಲ್ಲ, ಪ್ರತಿಯೊಂದು ಮಗುವಿನ ಮನಸ್ಸೂ ಒಂದೇ ರೀತಿ ಇರುವುದಿಲ್ಲ. ಇನ್ನೊಂದು ಮಗುವನ್ನು ತೋರಿಸಿ, ‘ನೋಡು ಅದು ಹೇಗೆ ಸುಮ್ಮನೆ ಶಾಲೆಗೆ ಹೋಗುತ್ತಿದೆ. ನೀನು ದಡ್ಡ’ ಎಂಬಿತ್ಯಾದಿ ಹೋಲಿಸಿ ಮೂದಲಿಸುವುದೂ ಸರಿಯಲ್ಲ. ಪೋಷಕರು ತಮ್ಮ ಮಗು ಶಾಲೆಗೆ ಹೋಗಲು ಮಾನಸಿಕವಾಗಿ ಸಿದ್ಧವಾಗಿದೆಯೇ ಎಂಬುದನ್ನು ಅವಲೋಕಿಸಬೇಕಾಗುತ್ತದೆ. ಅಕ್ಕಪಕ್ಕದ ಮನೆಗಳ ಮಕ್ಕಳ ಜೊತೆ ಅದು ಹೇಗೆ ಬೇರೆಯುತ್ತದೆ ಎಂಬುದನ್ನೂ ಗಮನಿಸಿ. ನಿಮ್ಮ ಸುರಕ್ಷಿತ ವಲಯದಿಂದ ಹೊರಗೆ ಹೋಗಿ ಯಾವುದೇ ತೊಂದರೆಯಿಲ್ಲದೇ ಆಟ ಆಡುವುದೇ ಎಂಬುದನ್ನು ಕೂಡ ನೋಡಬೇಕಾಗುತ್ತದೆ.

ಶಾಲಾ ಶಿಕ್ಷಕರು ಮಗುವಿನ ಭಾವನೆಗಳಿಗೆ ಲಕ್ಷ್ಯ ಕೊಡಬೇಕಾಗುತ್ತದೆ. ಆದರೆ ಶಿಕ್ಷಕರು ಪ್ರತಿ ವರ್ಷ ಇಂತಹ ಮಕ್ಕಳನ್ನು ನೋಡಿ ನೋಡಿ ನಿರ್ಲಕ್ಷ್ಯ ಮಾಡುವುದು ಸಹಜ. ಇದು ಖಂಡಿತ ಕೂಡದು. ಆತಂಕಗೊಂಡ ಮಗುವಿಗೆ ಅಭಯ ಕೊಡುತ್ತ ಅದಕ್ಕೆ ಸುರಕ್ಷಿತ ಭಾವನೆಯನ್ನು ಮೂಡಿಸಬೇಕು. ಮಗು ಭಯಗೊಂಡರೆ ಅದರ ಕಲಿಕಾ ಸಾಮರ್ಥ್ಯ ಕಡಿಮೆಯಾಗಬಹುದು. ಜೊತೆಗೆ ಸ್ಮರಣ ಶಕ್ತಿ ಕೂಡ ಕಡಿಮೆಯಾಗಬಹುದು. ಮಗುವಿನ ಜೊತೆ ಬಾಂಧವ್ಯ, ಪ್ರೀತಿ ಗಟ್ಟಿಯಾದರೆ ಅದರ ಕಲಿಕಾ ಸಾಮರ್ಥ್ಯವೂ ಹೆಚ್ಚುತ್ತದೆ.

*ಪೋಷಕರು ಹೀಗೆ ಮಾಡಬಹುದು*.

ಶಾಲೆಯೆಂಬ ಹೊಸ ವಾತಾವರಣವನ್ನು ಮಗುವಿಗೆ ಪರಿಚಯ ಮಾಡಿಕೊಟ್ಟು ನಿಧಾನವಾಗಿ ಹೊಂದಿಕೊಳ್ಳುವಂತೆ ಮಾಡಿ.

ಕೆಲವು ದಿನಗಳ ಕಾಲ ನೀವೂ ಶಾಲಾ ಕೊಠಡಿಯ ಹೊರಗೆ ನಿಂತು ‘ನಾನಿದ್ದೇನೆ. ಹೆದರುವ ಕಾರಣವಿಲ್ಲ’ ಎಂದು ಮಗುವಿಗೆ ಮನದಟ್ಟು ಮಾಡಿ.

ಅಕ್ಕಪಕ್ಕದ ಮನೆಗಳ ಮಕ್ಕಳು ನಿಮ್ಮ ಮಗುವಿನ ವಯಸ್ಸಿನವರೇ ಎಂದು ತಿಳಿದುಕೊಂಡು ಅವರ ಜೊತೆ ಮಗು ಬೆರೆಯುವಂತೆ ಮಾಡಿ.

ಮಗುವಿಗೆ ಗದರಿಸದೆ, ಅದರ ಭಾವನೆಗಳನ್ನು ಅರ್ಥ ಮಾಡಿಕೊಂಡು ಸಹಕರಿಸಿ. ಅದು ಹೇಳುವ ಮಾತುಗಳನ್ನೆಲ್ಲ ಆಲಿಸಿ ಧನಾತ್ಮಕವಾಗಿ ಪ್ರತಿಕ್ರಿಯಿಸಿ.

ಮಗು ಸಂಪೂರ್ಣವಾಗಿ ಸಿದ್ಧವಾಗದಿದ್ದರೆ, ಕೆಲವು ದಿನಗಳ ಕಾಲ ಶಾಲೆಗೆ ಸೇರಿಸುವುದನ್ನು ಮುಂದೂಡಿ.

ಮಗುವಿಗೆ ದಿನನಿತ್ಯದ ಕೆಲಸಗಳನ್ನು ರೂಢಿಸಿದರೆ, ಅಂದರೆ ಬೆಳಿಗ್ಗೆ ಎದ್ದ ಕೂಡಲೇ ಮಾಡಬೇಕಾದ ಕೆಲಸಗಳು– ಶೌಚ, ಸ್ನಾನ, ತಿಂಡಿ.. ಹೀಗೆ ಇವುಗಳಿಗೆ ಒಗ್ಗಿಸಿದರೆ ಶಾಲೆಗೆ ಹೋಗುವುದೂ ಅದರಲ್ಲಿ ಸೇರುತ್ತದೆ ಎಂಬುದನ್ನು ತಿಳಿಹೇಳಿ. ಹೀಗಾಗಿ ಇದೊಂದು ವಿಶೇಷವಾದ ಕೆಲಸ ಎಂಬುದು ಅವರಿಗೆ ಅನಿಸದು.

ಶಾಲೆಯಲ್ಲಿರುವ ಆಕರ್ಷಣೆಗಳನ್ನು ವರ್ಣಿಸಿ. ಇತರ ಪೋಷಕರ ಜೊತೆ ಮಾತನಾಡಿ. ಸಮಯ ಸಿಕ್ಕಾಗ ಅವರ ಮಕ್ಕಳ ಜೊತೆ ನಿಮ್ಮ ಮಗು ಬೆರೆಯುವಂತೆ ನೋಡಿಕೊಳ್ಳಿ.

ಕೇವಲ ಶಾಲೆ, ಓದಿನ ಬಗ್ಗೆ ಮಾತನಾಡದೆ ಇತರ ವಿಷಯಗಳನ್ನು ಹೇಳಿ. ನಡವಳಿಕೆಯನ್ನು ಗಮನಿಸಿ. ಮಗು ಆತಂಕಗೊಂಡಿದೆಯಾ ಅಥವಾ ಶಾಲೆಯ ಬಗ್ಗೆ ಭಯ ಬಿಟ್ಟಿದೆಯಾ ಎಂಬುದು ಅರಿವಾಗುತ್ತದೆ. ನಿಧಾನವಾಗಿ ಧೈರ್ಯ ತುಂಬುತ್ತ ಹೋಗಿ.

ಶಾಲೆಯ ಸ್ನೇಹಿತರು, ಇತರ ತರಗತಿಗಳ ಮಕ್ಕಳ ಬಗ್ಗೆ ಕೇಳಿ. ಆಟ, ಊಟದ ಬಗ್ಗೆ ಮೊದಲು ಕೇಳಿ. ನಂತರ ಓದಿನ ಬಗ್ಗೆ, ಶಿಕ್ಷಕರ ಬಗ್ಗೆ ಪ್ರಸ್ತಾಪಿಸಿ. ಶಾಲೆಗೆ ಆಗಾಗ ಭೇಟಿ ನೀಡಿ. ಶಿಕ್ಷಕರ ಜೊತೆ ಮಾತನಾಡಿ.

ನಿಮ್ಮ ಶಾಲೆಯ ದಿನಗಳ ಬಗ್ಗೆ ಮಾತನಾಡಿ. ಇದು ಸಹಜ ಎಂಬ ಭಾವನೆ ಮಗುವಿಗೆ ಬರುತ್ತದೆ

11/05/2025

ಹಳೆ ನೆನಪುಗಳು🎉🎉🎉🎉

1️⃣ ನಾಳೆ ಬರುವಾಗ ಅಮ್ಮನನ್ನು ಕರ್ಕೊಂಡು ಬಾ
2️⃣ ಇದೆಂತಾ ಕ್ಲಾಸಾ ಇಲ್ಲಾ ಮಾರ್ಕೆಟಾ?
3️⃣ ನಿಮಿಗಿಂತ ಲಾಸ್ಟ್ ಇಯರ್ ಬ್ಯಾಚ್ ಚೆನ್ನಾಗಿತ್ತು..
4️⃣ ಇದಕ್ಕಿಂತ ನಿಂಗೆ ಕತ್ತೆ ಕಾಯಿಲಿಕ್ಕೆ ಆಗುದಿಲ್ವಾ?
5️⃣ ತಗೋ ನೀನು ಬರ್ದದದ್ದನ್ನು ನೀನೇ ಓದು,
6️⃣ 0 ಮಾರ್ಕ್ಸ್ ತೆಗಿಲಿಕ್ಕೆ ಕಾಲೇಜಿಗೆ ಬರ್ಬೇಕಾ?
7️⃣ ಆಚೆ ಕ್ಲಾಸಿಗೆ ಪೊರ್ಶನ್ ಮುಗೀತು,ನಿಮ್ಮ ಕ್ಲಾಸಿಗೆ ಈ ವರ್ಷ ಮುಗಿಯುದಿಲ್ಲ..
8️⃣ ಎಷ್ಟು ರಜೆಮಾಡ್ತಿ? ಲೀವ್ ಲೆಟರ್ ಲ್ಲಿ ಅಜ್ಜನನ್ನು ಎಷ್ಟು ಸಲ ಸಾಯಿಸ್ತಿ ಮಾರಾಯಾ?
9️⃣ ನೀವು ಒಮ್ಮೆ ಶಾಲೆ ಮುಗಿಸಿ ಹೋದ್ರೆ ಸಾಕು..
🔟 ನೋಟ್ಸ್ ಇಲ್ಲ ಅಂದ್ರೆ ಕ್ಲಾಸಿಗೆ ಯಾಕೆ ಬಂದದ್ದು?
1️⃣1️⃣ ನಡಿ ಕ್ಲಾಸ್ ಹೊರಗಡೆ ನಿಂತುಕೊ
1️⃣2️⃣ಮತ್ತೆ ಸ್ಟಾಫ್ ರೂಮಿಗೆ ಬಾ
1️⃣3️⃣ಮದುವೆ ಆಗೋ ಪ್ರಾಯ ಆಯ್ತು ಇನ್ನೂ ಬುದ್ದಿಬರ್ಲಿಲ್ಲ
1️⃣4️⃣ಟೀಚರ್ ಬರುವಾಗ ಎದ್ದು ನಿಲ್ಬೇಕು ಅಂತ ಗೊತ್ತಿಲ್ವಾ?
1️⃣5️⃣ಇದು ಹ್ಯಾಂಡ್ ರೈಟಿಂಗಾ ಇಲ್ಲಾ ಕಾಗೆಕಾಲ?
1️⃣6️⃣ನಿಂಗೆ ಎಕ್ಸಾಮಿಗೆ ಬರುವಾಗ ಪೆನ್ ಪೆನ್ಸಿಲ್ ರಬ್ಬರ್ ಸ್ಕೆಲ್ ತರಬೇಕು ಅಂತ ಗೊತ್ತಿರ್ಲಿಲ್ವಾ?
1️⃣7️⃣ ಯುನಿಫಾರ್ಮ್ ಹಾಕೊಂಡು ಯಾಕೆ ಬರ್ಲಿಲ್ಲ? ನೀನೇನು ಸ್ಪೆಶಲ್ ಮಂತ್ರಿಯ ಮಗನ
1️⃣8️⃣ ನೀನು ಪಾಸ್ ಆದದ್ದು ಅಲ್ಲ, ನಾನು ಪಾಸ್ ಮಾಡಿದ್ದು!
1️⃣9️⃣ ಹೊರಗಡೆ ಯಾಕೆ ನೋಡ್ತಿ, ಕರಡಿ ಕುಣಿತಾ ಇದೆಯಾ ಅಲ್ಲಿ?
2️⃣0️⃣ ಸರಿ ಕೂತ್ಕೋಳ ನಿಂದು ಸೊಂಟ ಮುರ್ದಿದಾ?
2️⃣1️⃣ ನೀನು ಅವನ ಜೊತೆ ಸೇರಿಯೇ ಹಾಳದ್ದು, ಕೋತಿ ತಾನು ಕೆಡುವುದಲ್ಲದೆ ಎಲ್ಲರನ್ನು ಕೆಡಿಸುತ್ತಿದೆ.
2️⃣2️⃣ ಮಾರ್ಜಿನ್ ಹೊರಗಡೆ question ನಂಬರ್ ಬಿಟ್ಟು ಬೇರೇನೂ ಬರೆಯೋಕೆ ಇಲ್ಲ ಅಂತ ಗೊತ್ತಿಲ್ವಾ?
2️⃣3️⃣ಬರ್ದಾಯಿತಾ ಬೋರ್ಡ್ ಒರೆಸ್ತೇನೆ, ಆಗ್ಲಿಲ್ಲ ಅಂದ್ರೆ ಪಕ್ಕದವರದ್ದು ನೋಡಿ ಬರೆಯಿರಿ.
2️⃣4️⃣ ಕ್ಲಾಸಿಗೆ ಎಸ್ಟೋತ್ತಿಗೆ ಬರುದಾ? ಟೈಂ ಸೆನ್ಸ್ ಇಲ್ವಾ?
2️⃣5️⃣ ಬಾಯಲ್ಲಿ ಎಂತಾ ಉಂಟಾ ಆಆಆ ಮಾಡ....
2️⃣6️⃣ ಎಂತಾ ಗುಟ್ಟು ಮಾತಾಡಿದ್ದು ನಮಗೂ ಹೇಳಿ..
2️⃣7️⃣ ಇದ್ಯಾವ ಭಾಷೆ? ಜಪಾನಿಸೋ ಸ್ಪಾನಿಷೋ?
2️⃣8️⃣ ಪಾಸ್ ಆಗದವರೆಲ್ಲಾ ಎರಡು ಎಮ್ಮೆ ತಗೊಂಡು ಸಾಕಿ
2️⃣9️⃣ ನನ್ನ ಕ್ಲಾಸಲ್ಲಿ ನೀನು ಇಲ್ಲ ಅಂದ್ರೆ ಕ್ಲಾಸ್ ಸರಿ ಇರ್ತದೆ.
3️⃣0️⃣ ಪರೀಕ್ಷೆಗೆ ಬರ್ದದ್ದು ಒಂದು ಪೇಜ್, ಅದಿಕ್ಕೆ ದಾರ ಬೇರೆ ಕಟ್ಟಿದ್ದಿ, ಇದು ಬೇರೆ ಕೇಡು...
3️⃣1️⃣ ನಿಮಿಗೆ ದಡ್ಡರಿಗೆ ಆಟ ಬಿಟ್ಟು ಬೇರೇನೂ ಗೊತ್ತಿಲ್ಲ.
3️⃣2️⃣ ನಾಳೆಯಿಂದ ನಾನು ನಿಮ್ಮ ಕ್ಲಾಸಿಗೆ ಬರುದಿಲ್ಲ.🤣😂

ಇನ್ನೂ ಇದೆ ಶಿಕ್ಷಕರ ಅಮೃತ ಬೈಗಳುಗಳು

ಮರಳಿ ಸಿಗದ ಅನುಭವಗಳು

26/04/2025
01/04/2025
03/10/2024

ನಮ್ಮ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಯುತ ಶಶಿಶೇಕರ್ ಭಟ್ ಇವತ್ತು ಬೆಳಿಗ್ಗೆ ದೈವಾಧೀನರಾದರು
ಶಾಲೆ ಒಬ್ಬ ಆದರ್ಶ ಶಿಕ್ಷಕ
ಜನ ಮೆಚ್ಚಿದ ಶಿಕ್ಷಕ ಎಂಬ ಪ್ರಶಸ್ತಿಯನ್ನು ಗಳಿಸಿದವರು

Happy teachers day
05/09/2024

Happy teachers day

Address

Udipi

Website

Alerts

Be the first to know and let us send you an email when Saraswathi mandira school uchila posts news and promotions. Your email address will not be used for any other purpose, and you can unsubscribe at any time.

Shortcuts

Share

Category