11/11/2025
ತುಮಕೂರು ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ 2025–26ನೇ ಸಾಲಿನ ಕಾನೂನು ವಿದ್ಯಾರ್ಥಿಗಳಿಗೆ ವಲಯ ಮಟ್ಟದ “ಮಾದರಿ ವಿಧಾನಸಭಾ ಅಧಿವೇಶನ ಸ್ಪರ್ಧೆ” ಯನ್ನು ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆ (ಬೆಂಗಳೂರು) ಹಾಗೂ ಸುಫಿಯಾ ಕಾನೂನು ಮಹಾವಿದ್ಯಾಲಯ, ತುಮಕೂರು ಇವರು ಸಂಯುಕ್ತವಾಗಿ ಆಯೋಜಿಸಿದರು.
ಈ ಸಂದರ್ಭದಲ್ಲಿ ಶ್ರೀ ಟಿ. ಬಿ. ಜಯಚಂದ್ರ (ವಿಧಾನಸಭಾ ಸದಸ್ಯರು, ಸಿರಾ ಮತ್ತು ಕರ್ನಾಟಕ ಸರ್ಕಾರದ ನವದೆಹಲಿಯ ವಿಶೇಷ ಪ್ರತಿನಿಧಿ) ಶ್ರೀ ಕೆ. ಎನ್. ರಾಜಣ್ಣ (ಮಾಜಿ ಸಚಿವರು ಹಾಗೂ ವಿಧಾನಸಭಾ ಸದಸ್ಯರು, ಮಧುಗಿರಿ), ಶ್ರೀ ಜ್ಯೋತಿ ಗಣೇಶ್ ( ಶಾಸಕರು ತುಮಕೂರು ನಗರ), ಡಾ. ಶಫೀ ಅಹಮ್ಮದ್ (ಮಾಜಿ ಶಾಸಕರು ಮತ್ತು ಅಧ್ಯಕ್ಷರು, ಎಚ್‌ಎಂಎಸ್ ಶಿಕ್ಷಣ ಸಂಸ್ಥೆ), ಡಾ. ರಫೀಕ್ ಅಹಮ್ಮದ್ (ಮಾಜಿ ಶಾಸಕರು ಮತ್ತು ನಿರ್ದೇಶಕರು, ಎಚ್‌ಎಂಎಸ್ ಶಿಕ್ಷಣ ಸಂಸ್ಥೆ), ಡಾ. ಸಿ. ಎಸ್. ಪಾಟೀಲ್ (ನಿರ್ದೇಶಕರು, ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆ), ಡಾ. ರೇವಯ್ಯ ಒಡೆಯರ್ (ಸಂಶೋಧನಾ ಮುಖ್ಯಸ್ಥರು, ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆ), ಡಾ. ರಮೇಶ್ ಎಸ್. (ಪ್ರಾಂಶುಪಾಲರು, ಸುಫಿಯಾ ಕಾನೂನು ಮಹಾವಿದ್ಯಾಲಯ) ಮತ್ತು ಶ್ರೀ ಮೊಹಮ್ಮದ್ ಜೈದ್ (ನಿರ್ದೇಶಕರು, ಸುಫಿಯಾ ಕಾನೂನು ಮಹಾವಿದ್ಯಾಲಯ) ಸೇರಿದಂತೆ ಅನೇಕ ಗಣ್ಯರು ಹಾಗೂ ವಿವಿಧ ಕಾಲೇಜುಗಳಿಂದ ಆಗಮಿಸಿದ ಅನೇಕ ಕಾನೂನು ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.
At the Zilla Panchayat Auditorium in Tumakuru city, a zonal-level “Model Legislative Assembly Session Competition” for law students for the year 2025–26 was jointly organized by the Karnataka Institute for Law and Parliamentary Reform (Bengaluru) and Sufiya Law College, Tumakuru.
On this occasion, Shri TB Jaychandra (Fomer Law Minister MLA, Sira) & Special Representative of the Government of Karnataka at New Delhi), Shri K. N. Rajanna (Former Minister and MLA, Madhugiri Shri. G B JyothiGanesh (MLA, Tumakuru City), Dr. Shafi Ahmad (Former MLA and Chairman, HMS Education Society), Dr. Rafeeq Ahmed (Former MLA and Director, HMS Education Society), Dr. C.S. Patil (Director, Karnataka Institute for Law and Parliamentary Reform), Dr. Revayya Odeyar (Head of Research, Karnataka Institute for Law and Parliamentary Reform), Dr. Ramesh S. (Principal, Sufiya Law College), and Shri Mohammed Zaid (Director, Sufiya Law College) were present, along with several distinguished guests and numerous law students from various colleges who actively participated in the session.