Shree School Of Dance

Shree School Of Dance Shree School of Arts conducts classes on Bharathanatyam and Carnatic music.

04/05/2026
Namaste,We cordially invite you for the inauguration of our Carnatic Music Classes in Tiptur.We are immensely happy in e...
29/06/2024

Namaste,
We cordially invite you for the inauguration of our Carnatic Music Classes in Tiptur.

We are immensely happy in extending our art family. Smt Mahima B Srivatsa by conducting music classes in Tiptur will now pay her sincere tribute to this beautiful lineage of art and culture.

Date : 30th June Sunday
Time : 10AM onwards
Venue : Sri Sringeri Shankar Mut, Tiptur.

Please grace the occasion.

ನಮ್ಮ ಶಾಲೆಯ ಸಂಗೀತ ಶಿಕ್ಷಕಿಯಾದ ಶ್ರೀಮತಿ ಮಹಿಮಾ ಶ್ರೀವತ್ಸ ಅವರ ಕಿರು ಪರಿಚಯ      ಬಾಲ್ಯದಿಂದಲೇ ಸಂಗೀತದಲ್ಲಿ  ಆಸಕ್ತಿಹೊಂದಿದ್ದ ಮಹಿಮಾ ಅವರು...
22/05/2024

ನಮ್ಮ ಶಾಲೆಯ ಸಂಗೀತ ಶಿಕ್ಷಕಿಯಾದ ಶ್ರೀಮತಿ ಮಹಿಮಾ ಶ್ರೀವತ್ಸ ಅವರ ಕಿರು ಪರಿಚಯ

ಬಾಲ್ಯದಿಂದಲೇ ಸಂಗೀತದಲ್ಲಿ ಆಸಕ್ತಿಹೊಂದಿದ್ದ ಮಹಿಮಾ ಅವರು ಅವರ ಅಜ್ಜಿಯವರಾದ ಹಿರಿಯ ಗಮಕಿ ಮಾ ಶ್ರೀ ಜಿ. ಆರ್. ಲಲಿತಮ್ಮನವರಿಂದ ಗಮಕ, ದೇವರನಾಮ, ಸಂಪ್ರದಾಯದ ಹಾಡುಗಳನ್ನು ಚಿಕ್ಕಂದಿನಿಂದಲೇ ಕೇಳುತ್ತಾ ಕಲಿತವರು. ಅವರೇ ಇವರ ಮೊದಲ ಗುರುಗಳು.

ಸಂಗೀತಾಸಕ್ತಿ ನುರಿತಂತೆ ಜನಪದಗೀತೆ, ರಂಗಗೀತೆ, ಸುಗಮಸಂಗೀತ, ಭಾವಗೀತೆ, ಭಕ್ತಿಗೀತೆಗಳನ್ನು ಕಲಿತು ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿ ಸಾಕಷ್ಟು ಬಹುಮಾನಗಳಿಸಿರುತ್ತಾರೆ.

ನಿರಂತರ ಅಭ್ಯಾಸದ ಬೆಲೆ ಅರಿತ ಮಹಿಮಾ ಅವರು ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಮೈಸೂರಿನ ವಿದುಷಿ ||ಡಾ|| ಸುಕನ್ಯಾ ಪ್ರಭಾಕರ್ ಅವರಲ್ಲಿ ಅಭ್ಯಾಸಮಾಡುತ್ತಿದ್ದು, ಗಮಕ ಕಾವ್ಯ ವಾಚನವನ್ನು ನಾಡಿನ ಪ್ರಖ್ಯಾತ ಗಮಕಿಗಳಾದ ಶಿವಮೊಗ್ಗ ಜಿಲ್ಲೆಯ ಸಂಸ್ಕೃತ ಗ್ರಾಮ ಮತ್ತೂರಿನ ವೇ॥ಮೂ॥ಡಾ॥ ಎಂ.ಎಸ್. ಸನತ್ಕುಮಾರ ಸೋಮಯಾಜಿ ಅವರಲ್ಲಿ ಅಭ್ಯಾಸ ಮಾಡುತ್ತಿದ್ದಾರೆ.

ಅದೇ ಕ್ಷೇತ್ರದಲ್ಲಿ 2016 ರಲ್ಲಿ ಹಾಸನದ ಗಮಕ ಕಲಾ ಪರಿಷತ್ತು ಕೊಡಮಾಡುವ *ಗಂಗಮ್ಮ ಕೇಶವಮೂರ್ತಿ* ಪ್ರಶಸ್ತಿಗೆ ಭಾಜನರಾಗಿದ್ದಾರೆ. ಹಾಗೂ ಸಂಸ್ಕೃತ ಗ್ರಾಮ ಮತ್ತೂರಿನ ಕಲಾಯನ ಸಂಸ್ಥೆಯಿಂದ 2022ನೇ *ಯುವ ಕಲಾಮೇರು ಪ್ರಶಸ್ತಿ* ಗೆ ಭಾಜನರಾಗಿರುತ್ತಾರೆ.

ಮೈಸೂರಿನ ಪ್ರತಿಷ್ಠಿತ ಲಲಿತ ಕಲಾ ಕಾಲೇಜಿನಲ್ಲಿ ಕರ್ನಾಟಕ ಸಂಗೀತದ ಸ್ನಾತಕೋತ್ತರ ಪದವಿಯನ್ನು (ಎಂ.ಎ ಸಂಗೀತ) ಉತ್ತಮ ಶ್ರೇಣಿಯಲ್ಲಿ ಪೂರ್ಣಗೊಳಿಸಿದ್ದಾರೆ.

ಚಂದನವಾಹಿನಿಯಲ್ಲಿ ಹಿರಿಯ ಗಮಕ ವ್ಯಾಖ್ಯಾತೃವಾದ ಶ್ರೀ ಎ ವಿ ಪ್ರಸನ್ನ ಅವರೊಂದಿಗೆ *ಗಮಕಸೌರಭ* ಕಾರ್ಯಕ್ರಮದಲ್ಲಿ ಇವರ ಗಮಕ ವಾಚನದ ಹಲವಾರು ಸಂಚಿಕೆಗಳು ಪ್ರದರ್ಶನಗೊಂಡಿದೆ. ನಾಡಿನ ಅನೇಕ ಹಿರಿಯ ವಿದ್ವಾಂಸರು, ವ್ಯಾಖ್ಯಾತರುತೃಗಳೊಂದಿಗೆ ಕಾರ್ಯಕ್ರಮ ನೀಡುವ ಸುಯೋಗ ಇವರದ್ದಾಗಿದೆ.

ಪ್ರಸ್ತುತ ತಿಪಟೂರಿನ ಶ್ರೀ ಕಲಾ ಶಾಲೆಯಲ್ಲಿ ಹಾಗೂ ಆನ್ಲೈನ್ ಮಾಧ್ಯಮದಲ್ಲೂ ಅನೇಕ ಆಸಕ್ತರಿಗೆ ಗಮಕ ಹಾಗೂ ಸಂಗೀತ ಶಿಕ್ಷಣ ಪ್ರದಾನ ಮಾಡುತ್ತಾ ಮುಂದಿನ ಪೀಳಿಗೆಗೂ ಈ ಭಾರತೀಯ ವಿದ್ಯೆಗಳ ಅಭಿರುಚಿ ಬೆಳೆಸುವ ಆಶಯ ಹೊಂದಿದ್ದಾರೆ.

ನಮ್ಮ ಶಾಲೆಯ ಭರತನಾಟ್ಯ ಶಿಕ್ಷಕಿ ಶ್ರೀಮತಿ ಸೌಮ್ಯಶ್ರೀ ಶ್ರೀಕಂಠ ಅವರ ಪರಿಚಯ Sowmya Shree Athmaramಹಾಸನದ ಭಾರತೀಯ ಸಂಗೀತ ನೃತ್ಯಕಲಾಶಾಲೆಯ ಗು...
22/05/2024

ನಮ್ಮ ಶಾಲೆಯ ಭರತನಾಟ್ಯ ಶಿಕ್ಷಕಿ ಶ್ರೀಮತಿ ಸೌಮ್ಯಶ್ರೀ ಶ್ರೀಕಂಠ ಅವರ ಪರಿಚಯ
Sowmya Shree Athmaram

ಹಾಸನದ ಭಾರತೀಯ ಸಂಗೀತ ನೃತ್ಯಕಲಾಶಾಲೆಯ ಗುರು, ರಾಜ್ಯಪ್ರಶಸ್ತಿ ಪುರಸ್ಕೃತೆ ವಿದುಷಿ ಅಂಬಳೆ ರಾಜೇಶ್ವರಿ ಅವರಲ್ಲಿ ಭರತನಾಟ್ಯವನ್ನು ಅಭ್ಯಾಸ ಮಾಡಿ, ರಾಜ್ಯದಾದ್ಯಂತ ಅನೇಕ ಕಾರ್ಯಕ್ರಮಗಳನ್ನು ನೀಡಿ ಸಹೃದಯರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ತಮ್ಮ ಗುರುಗಳ ಮಾರ್ಗದರ್ಶನದಲ್ಲಿ ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯ 2011ನೇ ಸಾಲಿನ ವಿದ್ವತ್ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನಗಳಿಸಿದ್ದಾರೆ.

ಪ್ರಸ್ತುತ ಬೆಂಗಳೂರಿನ ಉಪಾಧ್ಯ ನೃತ್ಯಶಾಲೆಯ ಅಂತರ್ಶಾಲಾ ಮೂಲಕ ಗುರು ವಿದ್ವಾನ್ ಶ್ರೀ Parshwanath S. Upadhye, ವಿದುಷಿ ಶ್ರೀಮತಿ ಶೃತಿ ಉಪಾಧ್ಯೆ ಹಾಗೂ ವಿದ್ವಾನ್ ಶ್ರೀ ಆದಿತ್ಯ ಅವರಲ್ಲಿ ತಮ್ಮ ನೃತ್ಯಾಭ್ಯಾಸ ಮುಂದುವರೆಸುತ್ತಾ, ಕಲೆಯ ಮೇಲಿನ ಗೌರವದಿಂದ ಅದರ ಬೆಳವಣಿಗೆಗಾಗಿ ತಿಪಟೂರಿನಲ್ಲಿ ಶ್ರೀ ನೃತ್ಯ ಶಾಲೆಯನ್ನು ಸ್ಥಾಪಿಸಿ ಅನೇಕ ತಿಪಟೂರಿನ ಮಕ್ಕಳಿಗೂ ಹಾಗೆಯೇ ಆನ್ಲೈನ್ ಮೂಲಕ ಅನೇಕ ನೃತ್ಯಾಸಕ್ತರಿಗೂ ಕಳೆದ 8 ವರ್ಷಗಳಿಂದ ಶಿಕ್ಷಣ ಪ್ರದಾನ ಮಾಡುತ್ತಿದ್ದಾರೆ.

ಕರ್ನಾಟಕಶಾಸ್ತ್ರೀಯ ಸಂಗೀತ ಕಲಿಕೆಯನ್ನು ಗುರು ವಿದ್ವಾನ್ ಬಿ ಎನ್ ಎಸ್ ಮುರಳಿ ಅವರಲ್ಲಿ ಆರಂಭಿಸಿ, ಮೈಸೂರಿನ ರಾಜ್ಯಪ್ರಶಸ್ತಿ ಪುರಸ್ಕೃತೆ ವಿದುಷಿ ಸುಕನ್ಯಾ ಪ್ರಭಾಕರ್ ಅವರಲ್ಲೂ ಶಿಷ್ಯವೃತ್ತಿ ಮಾಡಿದ್ದಾರೆ .

ಸಾಹಿತ್ಯದ ಮೇಲಿನ ಒಲವಿನಿಂದ ಗಮಕ ಕಲೆಗೆ ಆಕರ್ಷಿತರಾಗಿ, ಚಿಕ್ಕಂದಿನಿಂದಲೇ ಹಾಸನದ ಶ್ರೀಮತಿ ರುಕ್ಮಿಣಿ ನಾಗೇಂದ್ರ ಅವರಲ್ಲಿ ಗಮಕಾಭ್ಯಾಸ ಪ್ರಾರಂಭಿಸಿ ವ್ಯಾಖ್ಯಾನಕಾರರಾಗಿ ಅನೇಕ ಕಾರ್ಯಕ್ರಮಗಳನ್ನು ನೀಡಿದ್ದಾರೆ. 2010ರ ಅಖಿಲ ಕರ್ನಾಟಕ ಪ್ರಥಮ ಮಕ್ಕಳ ಗಮಕ ಕಲಾ ಸಮ್ಮೇಳನದ ಸರ್ವಾಧ್ಯಕ್ಷೆಯಾಗಿ, ಗಮಕ ಚಿಗುರು ಎಂಬ ಬಿರುದಿಗೂ ಭಾಜನರಾಗಿದ್ದಾರೆ.


ಕನ್ನಡ ಕಾವ್ಯಗಳ ಛಂದೋ ಗತಿಗೆ ಭರತನಾಟ್ಯವನ್ನು ಅಳವಡಿಸಿ, ಕಾವ್ಯಗಳನ್ನು ರಸಿಕರಿಗೆ ತಲುಪಿಸುವ ನಿಟ್ಟಿನಲ್ಲಿ 'ಕಾವ್ಯ-ನೃತ್ಯ'-ಎಂಬ ವಿಶಿಷ್ಟ ಪರಿಕಲ್ಪನೆಯಲ್ಲಿ ಈವರೆಗೆ ವಿದ್ವಾನ್ ಜಿ ಎಸ್ ಮಂಜುನಾಥ್ ಅವರ ಮಾರ್ಗದರ್ಶನದಲ್ಲಿ ಎರಡು ನೃತ್ಯ ರೂಪಕಗಳನ್ನು ಸಂಯೋಜಿಸಿ ಪ್ರದರ್ಶಿಸಿ ಹಿರಿಯ ಕಲಾವಿದರ, ವಿದ್ವಾಂಸರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

೨೦೦೯-೧೦ ನೇ ಸಾಲಿನ ಸಂಗೀತ ನೃತ್ಯ ಅಕಾಡಮಿಯ ಶಿಷ್ಯವೇತನ ಪಡೆದಿರುವ ಇವರು ಕಳೆದ ಸಾಲಿನ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ.

ಕಾವ್ಯಗಳ, ಸಾಹಿತ್ಯದ ಅಧ್ಯಯನ ಮಾಡುತ್ತಾ ಶಿಷ್ಟ ಕಾವ್ಯಗಳ ಪ್ರಸಾರಕ್ಕೆ ವೈವಿಧ್ಯಮಯ ಕಾರ್ಯಕ್ರಮಗಳನ್ನು ರೂಪಿಸುವ ಹಂಬಲ ಹೊಂದಿದ್ದಾರೆ. ಭಾರತೀಯ ಶಾಸ್ತ್ರೀಯ ಕಲೆಗಳಲ್ಲಿ ಆಸಕ್ತರಾಗಿರುವ ಇವರು ನಿರಂತರ ಸಾಧನೆ ಮಾಡುತ್ತಾ, ಕಲಿಸುತ್ತಾ ,ಮಕ್ಕಳಲ್ಲೂ ಕಲಾಭಿರುಚಿ ಮೂಡಿಸುವ ಆಶಯ ಹೊಂದಿದ್ದಾರೆ.

26/02/2024

We take immense pleasure to announce that all the 36 students who appeared for Gandharva Exams this year have cleared it in distinction.

Congratulations dear kids. ⭐️

Wish you all success and happiness 😍

ಇಂದು ತುಮಕೂರಿನ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಮ್ಮ ಕಾರ್ಯಕ್ರಮ ನಡೆದ ಸಂದರ್ಭದಲ್ಲಿ
29/12/2023

ಇಂದು ತುಮಕೂರಿನ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಮ್ಮ ಕಾರ್ಯಕ್ರಮ ನಡೆದ ಸಂದರ್ಭದಲ್ಲಿ

Our team will be performing this Friday in Tumkur - Kannada Sahitya Sammelana. All are invited 🙏
25/12/2023

Our team will be performing this Friday in Tumkur - Kannada Sahitya Sammelana.
All are invited 🙏

Three of our students appeared for Praveshika Poorna exams today.
23/12/2023

Three of our students appeared for Praveshika Poorna exams today.

Students of our school appeared for Gandharva Maha Vidyalaya exams. They all had given their best. We wish them all the ...
18/12/2023

Students of our school appeared for Gandharva Maha Vidyalaya exams. They all had given their best.
We wish them all the best for the results.

Address

Tiptur
572201

Alerts

Be the first to know and let us send you an email when Shree School Of Dance posts news and promotions. Your email address will not be used for any other purpose, and you can unsubscribe at any time.

Contact The School

Send a message to Shree School Of Dance:

Shortcuts

Share

Category