Gjc Sringeri Old Student Association

Gjc Sringeri Old Student Association GJC OLD STUDENTS ASSOCIATION (High School)

ಮಾನ್ಯ.  ಶಶಿಧರ್. ಕೆ ಉಪ ಪ್ರಾಂಶುಪಾಲರು ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ ಶೃಂಗೇರಿ,  ಪದಗಳಿಂದ ವರ್ಣಿಸಲು ಸಾಲದು ಮೇರು ವ್ಯಕ್...
30/04/2026

ಮಾನ್ಯ. ಶಶಿಧರ್. ಕೆ
ಉಪ ಪ್ರಾಂಶುಪಾಲರು
ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ ಶೃಂಗೇರಿ,

ಪದಗಳಿಂದ ವರ್ಣಿಸಲು ಸಾಲದು ಮೇರು ವ್ಯಕ್ತಿತ್ವವನ್ನು, ಸಂಖ್ಯೆಯಿಂದ ಎಣಿಸಲು ಸಾಧ್ಯವಾಗದು ಸಹೋದ್ಯೋಗಿ ಸ್ನೇಹ ಬಳಗವನ್ನ, ಹೊಗಳಿಕೆಗಳಿಗೆ ಹಿಗ್ಗದೆ ತೆಗಳಿಕೆಗಳಿಗೆ ಕುಗ್ಗದ ಸಮಾನ ಸೇವಾ ಮನೋಭಾವದ ಸಹಕಾರ ಮೂರ್ತಿ, ಶಾಲೆಯ ಅಮೃತ ಮಹೋತ್ಸವದ ರಥದ ಸಾರಥಿ, ಶಾಲೆಯ ಇತಿಹಾಸ ಪುಟಗಳಲ್ಲಿ ದಾಖಲಾದ ಶೇಕಡ 100 ಫಲಿತಾಂಶದ ರೂವಾರಿ (ಎರಡು ಬಾರಿ), ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಚಾಮಯ್ಯ ಮೇಷ್ಟ್ರು ಈ ನಮ್ಮ ಶಶಿಧರ್ ಮೇಷ್ಟ್ರು, ಶೈಕ್ಷಣಿಕ ಕ್ಷೇತ್ರಕ್ಕೆ ನಿಮ್ಮ ಕೊಡುಗೆ ಅಪಾರ ಮುಂದಿನ ದಿನಗಳಲ್ಲಿಯೂ ನಿಮ್ಮ ಸೇವೆ ಶಿಕ್ಷಣ ಕ್ಷೇತ್ರಕ್ಕೆ ದೊರೆಯುವಂತಾಗಲಿ, ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಅಜಾತಶತ್ರುವಿಗೆ ಗೌರವಪೂರ್ಣ ಸೇವಾ ನಿವೃತ್ತಿಯ ಶುಭ ಹಾರೈಕೆಗಳು... ವಂದನೆಗಳೊಂದಿಗೆ 💐💐💐
ಅಧ್ಯಕ್ಷರು ಮತ್ತು ಪದಾಧಿಕಾರಿಗಳು,
ಹಳೆ ವಿದ್ಯಾರ್ಥಿಗಳ ಸಂಘ,
ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ ಶೃಂಗೇರಿ,

Congratulations 💐💐💐 SSLC  100% Results
23/04/2026

Congratulations 💐💐💐 SSLC 100% Results

ಹಳೆ ವಿದ್ಯಾರ್ಥಿ ಸಂಘ ,ಗುಡ್ಡದ ಹೈಸ್ಕೂಲ್,    ಶೃಂಗೇರಿ.ಆತ್ಮೀಯ ಬಂಧುಗಳೇ ,ಅದ್ದೂರಿ ಅಮೃತ ಮಹೋತ್ಸವದ ನಂತರ ಇನ್ನೊಮ್ಮೆ ಒಟ್ಟು ಸೇರುವ ಸುವರ್ಣ ...
11/03/2026

ಹಳೆ ವಿದ್ಯಾರ್ಥಿ ಸಂಘ ,ಗುಡ್ಡದ ಹೈಸ್ಕೂಲ್, ಶೃಂಗೇರಿ.
ಆತ್ಮೀಯ ಬಂಧುಗಳೇ ,
ಅದ್ದೂರಿ ಅಮೃತ ಮಹೋತ್ಸವದ ನಂತರ ಇನ್ನೊಮ್ಮೆ ಒಟ್ಟು ಸೇರುವ ಸುವರ್ಣ ಅವಕಾಶ.
ದಿನಾಂಕ 15. 3 .2026 ಭಾನುವಾರ ಸಂಜೆ 4:00ಗೆ ಕನ್ನಡ ಭವನದಲ್ಲಿ ಗುಡ್ಡದ ಹೈಸ್ಕೂಲ್ ನ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ "ಹಳೆ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ" ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ .ಈ ಕಾರ್ಯಕ್ರಮದಲ್ಲಿ ನಮ್ಮ ಪ್ರೌಢ ಶಾಲೆಯ ಹೆಮ್ಮೆಯ ಹಳೆಯ ವಿದ್ಯಾರ್ಥಿ ಹಾಗೂ ಶಿವಮೊಗ್ಗದ ಡಿ.ವಿ.ಎಸ್. ಕಲಾ ಮತ್ತು ವಿಜ್ಞಾನ ಕಾಲೇಜಿನ ನಿವೃತ್ತ ಪ್ರಾಂಶುಪಾಲರು ಆಗಿರುವಂತಹ ಡಾ. ಹೆಚ್ ಟಿ. ಕೃಷ್ಣಮೂರ್ತಿ, ಇವರು ತಮ್ಮ ಅನುಭವಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಲಿದ್ದಾರೆ. ತದನಂತರ ಹಿರಿಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಒಬ್ಬರಿಗೆ ಐದು ನಿಮಿಷಗಳ ಕಾಲಾವಕಾಶವನ್ನು ಸಾಂಸ್ಕೃತಿಕ ಕಾರ್ಯಕ್ರಮಕ್ಕಾಗಿ ನೀಡಲಾಗುತ್ತದೆ. ಆಸಕ್ತರು ಭಾಗವಹಿಸಬಹುದಾಗಿದೆ.ಸಂಘದ ಗೌರವ ಅಧ್ಯಕ್ಷರಾದ ಡಾ. ನಿರಂಜನ್ ಕುಮಾರ್ ಇವರು ಹಳೆಯ ವಿದ್ಯಾರ್ಥಿಗಳಿಗಾಗಿ ರಸಪ್ರಶ್ನೆ ಸ್ಪರ್ಧೆ ನಡೆಸಿಕೊಡಲಿದ್ದಾರೆ .ಕೊನೆಯಲ್ಲಿ ಲಘು ಉಪಹಾರದ ವ್ಯವಸ್ಥೆ ಇದೆ. ನಾವೆಲ್ಲರೂ ಪರಸ್ಪರ ಪರಿಚಯ ಮಾಡಿಕೊಳ್ಳೋಣ .ಒಂದಷ್ಟು ಹೊತ್ತು ಸಂತಸದಿಂದ ಕಳೆಯೋಣ. ತಾವೆಲ್ಲರೂ ತಮ್ಮ ಸ್ನೇಹಿತರಾದ ಹಳೆಯ ವಿದ್ಯಾರ್ಥಿಗಳಿಗೆ ಈ ವಿಷಯವನ್ನು ತಿಳಿಸಿ ಕಾರ್ಯಕ್ರಮಕ್ಕೆ ಬರುವಂತೆ ಮಾಡಬೇಕಾಗಿ ವಿನಂತಿ. ದಯಮಾಡಿ ನೀವೂ ಬನ್ನಿ ,ನಿಮ್ಮ ಸ್ನೇಹಿತರನ್ನು ಕರೆತನ್ನಿ.
ತಮ್ಮ ಆಗಮನದ ನಿರೀಕ್ಷೆಯಲ್ಲಿ ,
ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಸದಸ್ಯರು,
ಹಳೆ ವಿದ್ಯಾರ್ಥಿ ಸಂಘ, ಗುಡ್ಡದ ಹೈಸ್ಕೂಲ್, ಶೃಂಗೇರಿ.

17/02/2026
ಆತ್ಮೀಯ ಹಳೆ ವಿದ್ಯಾರ್ಥಿ ಸಂಘದ ಎಲ್ಲಾ ಸದಸ್ಯರಿಗೆ ಸ್ವಪ್ರೇಮ ವಂದನೆಗಳು 🙏 ಆತ್ಮೀಯ ಬಂಧುಗಳೇ  ಹಳೆ ವಿದ್ಯಾರ್ಥಿ ಸಂಘದ ಎಲ್ಲಾ ಸದಸ್ಯರು ಒಂದುಗೂಡ...
17/02/2026

ಆತ್ಮೀಯ ಹಳೆ ವಿದ್ಯಾರ್ಥಿ ಸಂಘದ ಎಲ್ಲಾ ಸದಸ್ಯರಿಗೆ
ಸ್ವಪ್ರೇಮ ವಂದನೆಗಳು 🙏

ಆತ್ಮೀಯ ಬಂಧುಗಳೇ
ಹಳೆ ವಿದ್ಯಾರ್ಥಿ ಸಂಘದ ಎಲ್ಲಾ ಸದಸ್ಯರು ಒಂದುಗೂಡಿ ಗುಡ್ಡದ ಹೈಸ್ಕೂಲ್ನಲ್ಲಿ
*ಅಮೃತ ಮಹೋತ್ಸವ* ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಿ ಅದರ ಸವಿ ಅನುಭವವನ್ನು ತಾವುಗಳೆಲ್ಲರೂ ಅನುಭವಿಸಿದ್ದೀರಿ, ಆನಂದಿಸಿದ್ದೀರಿ, ಎಂದುಕೊಂಡಿದ್ದೇವೆ.
ಇದರ ಸವಿ ನೆನಪು ಮಾಸುವ ಮುನ್ನವೇ ನಾವುಗಳೆಲ್ಲ ಸೇರಿ *ಪುನರ್ ಸಮ್ಮಿಲನ* ಎಂಬ ಶೀರ್ಷಿಕೆಯಡಿಯಲ್ಲಿ ಒಂದುಗೂಡುವ ಒಂದು ಕಾರ್ಯಕ್ರಮ ಹಮ್ಮಿಕೊಳ್ಳುವ ಉದ್ದೇಶದಿಂದ.
18/02/2026 ರ ಸಂಜೆ4.30 ಕ್ಕೆ ಗುಡ್ಡದ ಹೈಸ್ಕೂಲ್ನಲ್ಲಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ *ಪ್ರಕಾಶ್ H A* ಇವರ ಅಧ್ಯಕ್ಷತೆಯಲ್ಲಿ ಸಭೆಯನ್ನು ಕರೆಯಲಾಗಿದೆ ಎಲ್ಲಾ ಹಳೆ ವಿದ್ಯಾರ್ಥಿ ಸಂಘದ ಸದಸ್ಯರು ಬಂದು ಸಲಹೆ ಮತ್ತು ಸಹಕಾರವನ್ನು ನೀಡಬೇಕಾಗಿ ಕೇಳಿಕೊಳ್ಳುತ್ತಿದ್ದೇವೆ. 🙏

04/10/2025
04/10/2025

2025 -2027 ನೇ ಸಾಲಿನ ಹಳೆ ವಿದ್ಯಾರ್ಥಿ ಸಂಘದ ನೂತನ ಕಾರ್ಯಕಾರಿ ಮಂಡಳಿ
ಅಧ್ಯಕ್ಷರು: *H A ಪ್ರಕಾಶ್*
ಗೌರವಾಧ್ಯಕ್ಷರು : Dr. ನಿರಂಜನ್ ಕುಮಾರ್
ಉಪಾಧ್ಯಕ್ಷರು : R ಸುಧಾಕರ್
ಪ್ರಧಾನ ಕಾರ್ಯದರ್ಶಿ : *ಸುಬ್ರಹ್ಮಣ್ಯ ಅಂಬಲಮನೆ*
ಸಹ ಕಾರ್ಯದರ್ಶಿ: M ಛಾಯಾಪತಿ
ಖಜಾಂಚಿ : *ಕಿರಣ್ ಕುಮಾರ್ G*
ಪ್ರಧಾನ ಸಂಚಾಲಕರು : ಆನಂದ ಸ್ವಾಮಿ
ಕಾರ್ಯಕಾರಿ ಸಮಿತಿ ಸದಸ್ಯರು
ಹರೀಶ P
H S ಸುಬ್ರಹ್ಮಣ್ಯ (ಶೃಂಗೇರಿ ಸುಬ್ಬಣ್ಣ)
ಶ್ರೀಮತಿ ಜ್ಯೋತಿ ಮಂಜುನಾಥ್
ಶಿವಶಂಕರ್ U S
ಶಿವಮೂರ್ತಿ H A

ವಿಶೇಷ ಆಹ್ವಾನಿತರು
ಶಶಿಧರ್ K ಉಪ ಪ್ರಾಂಶುಪಾಲರು
ರಾಜೇಶ್ SDMC ಅಧ್ಯಕ್ಷರು

ಸಂಘದ ಗೌರವ ಸಲಹೆಗಾರರು
K R ಅವಿನಾಶ್
B ಶಿವಶಂಕರ್ (ಶೃಂಗೇರಿ ಶಿವಣ್ಣ)
ಶ್ರೀನಿವಾಸ್ H A
ಕೌಸ್ತುಬಾ ಭಟ್
K L ಗೋಪಾಲಕೃಷ್ಣ
ಗೋಪಾಲ್ K M
ಅಭಿರಾಮ್ K
T A ಶಿವಪ್ಪ ಗೌಡರು ತಿಪ್ಪನ ಮಕ್ಕಿ
ದೀಪಕ್ N S
S L ರಾಘವೇಂದ್ರ

ಇಂದು ಮಧ್ಯಾಹ್ನ 2:30ಕ್ಕೆ ಹಳೆ ವಿದ್ಯಾರ್ಥಿ ಸಂಘದ ಸರ್ವ ಸದಸ್ಯರ ಸಭೆ ಎಲ್ಲರಿಗೂ ಆತ್ಮೀಯ ಆಹ್ವಾನ
04/10/2025

ಇಂದು ಮಧ್ಯಾಹ್ನ 2:30ಕ್ಕೆ ಹಳೆ ವಿದ್ಯಾರ್ಥಿ ಸಂಘದ ಸರ್ವ ಸದಸ್ಯರ ಸಭೆ ಎಲ್ಲರಿಗೂ ಆತ್ಮೀಯ ಆಹ್ವಾನ

04/10/2025

ಹಳೇ ವಿದ್ಯಾರ್ಥಿ ಸಂಘ ,ಪ್ರೌಢಶಾಲಾ ವಿಭಾಗ ,ಸರ್ಕಾರಿ ಪದವಿ ಪೂರ್ವ ಕಾಲೇಜು ,ಶೃಂಗೇರಿ.
ಸರ್ವ ಸದಸ್ಯರ ಸಭೆಗೆ ಸೂಚನೆ.
ಮಾನ್ಯರೇ,
ನಮ್ಮ ಸಂಘದ ಸರ್ವ ಸದಸ್ಯರ ಸಭೆಯನ್ನು ದಿನಾಂಕ 4.10.2025 ನೇ ಶನಿವಾರ ಅಪರಾಹ್ನ 2.30 ಗಂಟೆಗೆ ಸಂಘದ ಅಧ್ಯಕ್ಷರಾದ ಡಾಕ್ಟರ್ ನಿರಂಜನ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ,ಸರ್ಕಾರಿ ಪ್ರೌಢಶಾಲೆ ಶೃಂಗೇರಿಯ ಸಭಾಂಗಣದಲ್ಲಿ ನಡೆಸಲಾಗುವುದು. ತಾವುಗಳು ಸಮಯಕ್ಕೆ ಸರಿಯಾಗಿ ಆಗಮಿಸಿ ಸಭೆಯ ನಡವಳಿಕೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕಾಗಿ ವಿನಂತಿ.
ಕಾರ್ಯಕ್ರಮ
1 .ಸ್ವಾಗತ
2.ಕೋರಂ ದೃಢೀಕರಣ ಮತ್ತು
ಸಭೆಯನ್ನು ಅಸ್ತಿತ್ವಕ್ಕೆ ತರುವುದು.
3. ಸಭೆಯ ಸೂಚನೆ ಜಾರಿಯಾಗಿರುವುದನ್ನು ಓದಿ ಉಲ್ಲೇಖಿಸುವುದು
4. ಹಿಂದಿನ ಸಭೆಯ ನಡವಳಿಕೆಗಳನ್ನು ಓದಿ ದಾಖಲಿಸುವುದು.
5. ಸಂಘದ ವಾರ್ಷಿಕ ಆಯ ವ್ಯಯವನ್ನು ಪರಿಶೀಲಿಸಿ ಅನುಮೋದಿಸುವುದು
6. ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶಶಿಧರ್ ರವರಿಗೆ ಸನ್ಮಾನ.
7. ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಘಟಕದ ಉದ್ಘಾಟನೆ ಎಸ್. ಡಿ.ಎಂ. ಸಿ ಅಧ್ಯಕ್ಷರಿಂದ.
8. ಹೊಸ ಕಾರ್ಯಕಾರಿ ಮಂಡಳಿಯ ರಚನೆ .
9. ಅಧ್ಯಕ್ಷರ ಅನುಮತಿಯ ಮೇರೆಗೆ ಬರಬಹುದಾದ ಇತರೆ ವಿಷಯಗಳು
10. ಅಧ್ಯಕ್ಷರ ಭಾಷಣ
11. ವಂದನಾರ್ಪಣೆ.
ಅಧ್ಯಕ್ಷರ ಅಪ್ಪಣೆ ಮೇರೆಗೆ
ಎಚ್ .ಎ .ಪ್ರಕಾಶ್ ,ಕಾರ್ಯದರ್ಶಿ
ಹಳೇ ವಿದ್ಯಾರ್ಥಿ ಸಂಘ.

ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ಶೃಂಗೇರಿಯ ಉಪ ಪ್ರಾಂಶುಪಾಲರು . ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕರು . ಸರಳ ಸಜ್ಜನಿಕೆಯ ವ್ಯ...
09/09/2025

ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ಶೃಂಗೇರಿಯ ಉಪ ಪ್ರಾಂಶುಪಾಲರು . ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕರು . ಸರಳ ಸಜ್ಜನಿಕೆಯ ವ್ಯಕ್ತಿತ್ವದ ಶ್ರೀಯುತ *ಶಶಿಧರ್ ಕೆ* ಸರ್ ಅವರಿಗೆ 2025 ನೇ ಸಾಲಿನ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ದೊರೆತಿರುವುದು ನಮ್ಮ ಶಾಲೆಗೆ ಹಾಗೂ ಇಡೀ ಶೃಂಗೇರಿ ತಾಲೂಕಿಗೆ ಹೆಮ್ಮೆಪಡುವ ಸಂಗತಿ ... ಪ್ರಶಸ್ತಿ ಪುರಸ್ಕೃತರಿಗೆ ಹಳೆ ವಿದ್ಯಾರ್ಥಿಗಳ ಸಂಘದ ಪರವಾಗಿ ತುಂಬು ಹೃದಯದ ಅಭಿನಂದನೆಗಳು 💐💐💐🙏

https://youtu.be/57FFfoY9jBAಸರ್ಕಾರಿ ಶಾಲೆಯಲ್ಲಿ ಓದಿದ ಪ್ರತಿಯೊಬ್ಬರ ಶಾಲಾ ದಿನಗಳು ಹೇಗಿದ್ದವು ಎಂಬ ಚಿತ್ರಣವನ್ನ ನಿಮ್ಮ ಮುಂದೆ ಇಡುವ ಪ್ರ...
14/01/2025

https://youtu.be/57FFfoY9jBA
ಸರ್ಕಾರಿ ಶಾಲೆಯಲ್ಲಿ ಓದಿದ ಪ್ರತಿಯೊಬ್ಬರ ಶಾಲಾ ದಿನಗಳು ಹೇಗಿದ್ದವು ಎಂಬ ಚಿತ್ರಣವನ್ನ ನಿಮ್ಮ ಮುಂದೆ ಇಡುವ ಪ್ರಯತ್ನ ಈ video ದಾಗಿದೆ,ತಮ್ಮ ಅನುಭವದ ಮಾತುಗಳು ಕೇಳಿದಾಗೆಲ್ಲ ನಮ್ಮನ್ನು ಹಿಂದಿನ ದಿನಗಳಿಗೆ ಕರೆದು ಕೊಂಡು ಹೋಗುತ್ತದೆ ಮೊದಲ ಬಾರಿಗೆ ಶೃಂಗೇರಿಯ ಗುಡ್ಡದ ಹೈಸ್ಕೂಲ್ ನೆನಪುಗಳನ್ನು ಹಂಚಿಕೊಳ್ಳಲು ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು,3ನೇ ಭಾಗದ ಈ video ಇಷ್ಟವಾದರೆ like 👍 ಮಾಡಿ,ನಿಮ್ಮ ಅನುಭವವನ್ನ Comment ಮೂಲಕ ತಿಳಿಸಿ. Naveen Chandrasutha 9448784087

Don't forgot to subcribe,share,like,commentಗುಡ್ಡದ ಹೈಸ್ಕೂಲ್ ! ಶೃಂಗೇರಿ PART-3 ್ಕಾರಿ ಶಾಲೆಯ...

Address

Sringeri
577139

Telephone

+919964675275

Website

Alerts

Be the first to know and let us send you an email when Gjc Sringeri Old Student Association posts news and promotions. Your email address will not be used for any other purpose, and you can unsubscribe at any time.

Contact The School

Send a message to Gjc Sringeri Old Student Association:

Shortcuts

Share

Category