KPS Primary Begaru, Sringeri

KPS Primary Begaru, Sringeri Contact information, map and directions, contact form, opening hours, services, ratings, photos, videos and announcements from KPS Primary Begaru, Sringeri, School, begaru, Sringeri.

19/03/2026
ದಿ :11-12-2025ರಂದು ಕೀರ್ತನ ಮೇಡಂ ಮಾನ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತ್ ಚಿಕ್ಕಮಗಳೂರು ಇವರು ಶಾಲೆಗೆ ಅನಿರೀಕ್ಷಿತ ಭೇಟಿ ನೀ...
02/01/2026

ದಿ :11-12-2025ರಂದು ಕೀರ್ತನ ಮೇಡಂ ಮಾನ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತ್ ಚಿಕ್ಕಮಗಳೂರು ಇವರು ಶಾಲೆಗೆ ಅನಿರೀಕ್ಷಿತ ಭೇಟಿ ನೀಡಿ ಶಾಲೆಯಲ್ಲಿ ಮೂಲಭೂತ ಸೌಕರ್ಯಗಳ ಸದ್ಬಳಕೆ, ಸ್ವಚ್ಛತೆ ಹಾಗೂ ಅಡುಗೆಯ ತಯಾರಿ, ಶುಚಿತ್ವ, ಮಕ್ಕಳ ಕಲಿಕೆ ಬಗ್ಗೆ ಪರಿಶೀಲಿಸಿ ಹೋಗಿದ್ದರು.
ಇಂದು ಅಂಚೆಯ ಮೂಲಕ ಪ್ರಸಂಸೆಯ ಪತ್ರವನ್ನು ಕಳುಹಿಸಿದ್ದಾರೆ. ನಮ್ಮ ಶಾಲೆಯನ್ನು ಜಿಲ್ಲಾ ಮಟ್ಟದ ಅಧಿಕಾರಿಗಳು ಗುರುತಿಸಿ ಗೌರವಿಸಿದ್ದು ಜೊತೆಗೆ ಪ್ರೋತ್ಸಾಹದಾಯಕ ಬೆಂಬಲ ನೀಡಿದ್ದು ತುಂಬಾ ಖುಷಿ ತಂದಿದೆ.
ನಮ್ಮ ಶಾಲೆಯನ್ನು ಗುರುತಿಸಿ ಗೌರವಿಸಿದ ಚಿಕ್ಕಮಗಳೂರು ಮಾನ್ಯ ಕಾರ್ಯ ನಿರ್ವಾಹಕ ಅಧಿಕಾರಿ ಶ್ರೀಮತಿ ಕೀರ್ತನ ಮೇಡಂರವರಿಗೆ ಶಾಲಾ SDMC ಯವರು, ಪೋಷಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಪರವಾಗಿ ಧನ್ಯವಾದಗಳು
🙏🙏🙏🙏🙏🙏🙏🙏.

*ವಿಶ್ವನಾಥ್ ಗದ್ದೆಮನೆ ಮತ್ತು ಅವರ ಅಭಿಮಾನಿ ಬಳಗದಿಂದ* *ಸಮವಸ್ತ್ರ ಬ್ಯಾಗ್ ವಿತರಣಾ ಕಾರ್ಯಕ್ರಮ.* 🙏🙏🙏🙏🙏 *ಇಂದು ಶನಿವಾರ ದಿ -2-8-25*✒️✒️✒️✒...
02/08/2025

*ವಿಶ್ವನಾಥ್ ಗದ್ದೆಮನೆ ಮತ್ತು ಅವರ ಅಭಿಮಾನಿ ಬಳಗದಿಂದ*
*ಸಮವಸ್ತ್ರ ಬ್ಯಾಗ್ ವಿತರಣಾ ಕಾರ್ಯಕ್ರಮ.*
🙏🙏🙏🙏🙏
*ಇಂದು ಶನಿವಾರ ದಿ -2-8-25*
✒️✒️✒️✒️✒️
N R ಪುರದ ವಿಶ್ವನಾಥ್ ಗದ್ದೆಮನೆ ಮತ್ತು ಅವರ ಅಭಿಮಾನಿ ಬಳಗದವರು ಇಂದು ಶಾಲೆಗೆ ಆಗಮಿಸಿದ್ದರು.
ಬರುವಾಗ ಎಲ್ಲ ಮಕ್ಕಳಿಗೂ ಕ್ರೀಡಾ ಸಮವಸ್ತ್ರ ಹಾಗೂ ಶಾಲಾ ಸಮವಸ್ತ್ರ ಹಾಗೂ ಒಂದು ಶಾಲಾ ಬ್ಯಾಗ್ ತಂದಿದ್ದರು.
ವಿಶ್ವನಾಥ್ ಗದ್ದೆಮನೆ ಸರ್ ಇಂದಿನ ಕಾರ್ಯಕ್ರಮಕ್ಕೆ ಅನಿವಾರ್ಯ ಕಾರಣಗಳಿಂದ ಶಾಲೆಗೆ ಬರಲಾಗಲಿಲ್ಲ. ಬದಲಾಗಿ ಅವರ ಸಹೋದರ ಶ್ರೀ ಸತೀಶ್ ರವರು, ಅವರ ಕುಟುಂಬ ಸದಸ್ಯರಾದ ಶ್ರೀಮತಿ ಬೀನ ಮೇಡಂ, ಶ್ರೀಮತಿ ಪ್ರಕೃತಿ ಮೇಡಂ ಹಾಗೂ ವಿಜಯ ಕರ್ನಾಟಕ ಪತ್ರಕರ್ತರಾದ ಶ್ರೀ ಪುರುಷೋತ್ತಮ್ ಸರ್ ಬಂದಿದ್ದರು.
ಪ್ರಾರಂಭದಲ್ಲಿ ಗಣ್ಯರನ್ನು ಮಕ್ಕಳ ಮೂಲಕ ಹೂಗುಚ್ಚ ನೀಡಿ ಸ್ವಾಗತ ಕೋರಲಾಯಿತು.
ನಂತರ ಶಾಲೆಯ ವಿಶ್ವ ಭಾರತೀ ಸಭಾಂಗಣದಲ್ಲಿ ವೇದಿಕೆ ಕಾರ್ಯಕ್ರಮ ಏರ್ಪಡಿಸಲಾಯಿತು. ಮಾನ್ಯ ಪ್ರಾoಶುಪಾಲರಾದ ಶ್ರೀ ಶಿವರಾಮ್ ಸರ್ ಅಧ್ಯಕ್ಷತೆಯಲ್ಲಿ ವೇದಿಕೆ ಕಾರ್ಯಕ್ರಮ ನೆರವೇರಿತು. ಅನೇಕ sdmc ಸದಸ್ಯರು ಪೋಷಕರು ಕಾರ್ಯಕ್ರಮದಲ್ಲಿ ಉಪಸ್ಥಿತ ರಿದ್ದರು.
ಪತ್ರಕರ್ತ ಪುರುಷೋತ್ತಮ ಸರ್ ಪ್ರಸ್ತಾವಿಕ ನುಡಿಯಲ್ಲಿ ವಿಶ್ವನಾಥ್ ಗದ್ದೆಮನೆ ಹಾಗೂ ಅವರ ಕುಟುಂಬದವರು ಕೈಗೊಂಡಿರುವ ಸಮಾಜಸೇವೆ, ಶಿಕ್ಷಣ ಸೇವೆ ಮತ್ತು ಧಾರ್ಮಿಕ ಸ್ಥಳಗಳಿಗೆ ನೀಡುತ್ತಿರುವ ನೆರವಿನ ಬಗ್ಗೆ ಮಾಹಿತಿ ನೀಡಿದರು.
ಗಣ್ಯರೆಲ್ಲರೂ ಸೇರಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ವಿಶ್ವನಾಥ್ ಕುಟುಂಬ ಸದಸ್ಯರಾದ ಶ್ರೀಮತಿ ಪ್ರಕೃತಿ ಮೇಡಂ ರವರು ಮಾತನಾಡುತ್ತ ನಮಗೆ ಈ ಶಾಲೆಗೆ ಬರಲು ಹೆಮ್ಮೆ ಎನಿಸುತ್ತದೆ. ಕಾರಣ ನಾನು ಇದೆ ಶಾಲೆಯಲ್ಲಿ ವ್ಯಾಸಂಗ ಮಾಡಿರುವುದು. ಈಗ ಇದೆ ಶಾಲೆಯ ಮಕ್ಕಳಿಗೆ ನನ್ನ ಭಾವನವರು ಕೊಡುಗೆ ನೀಡುತ್ತಿರುವುದು ಹೆಮ್ಮೆ ಎನಿಸುತ್ತದೆ. ಮುಂದೆ ನೀವು ಸಹ ದೊಡ್ಡವರಾದ ಮೇಲೆ ಇದೆ ರೀತಿ ದಾನ ನೀಡುವ ಪ್ರವೃತ್ತಿ ಬೆಳೆಸಿಕೊಳ್ಳಿ ಎಂದರು. ನಂತರ ವಿಶ್ವನಾಥ್ ಸರ್ ರವರಿಗೆ ಸನ್ಮಾನ ಮಾಡಲಾಯಿತು. ಸರ್ ರವರ ಸಹೋದರ ಸತೀಶ್ ರವರು ಸನ್ಮಾನವನ್ನು ಪ್ರೀತಿಯಿಂದ ಸ್ವೀಕರಿಸಿದರು.
ನಮ್ಮ ಶಾಲಾ ಶಿಕ್ಷಕರು ತಾವೇ ತಯಾರಿಸಿದ greeting ಕಾರ್ಡ್ ಶ್ರೀಯುತರಿಗೆ ನೀಡಿದರು.
ಮಕ್ಕಳಿಗೆ ಗಣ್ಯರು ತಾವು ತಂದ ಸಾಮಗ್ರಿಗಳನ್ನು ಮಕ್ಕಳಿಗೆ ವಿತರಿಸಿದರು.
ಮಾನ್ಯ ಪ್ರಾoಶುಪಾಲರು ಅಧ್ಯಕ್ಷ ನುಡಿಯಲ್ಲಿ ವಿಶ್ವನಾಥ್ ಸರ್ ಹಾಗೂ ಅವರ ಕುಟುಂಬ, ಅಭಿಮಾನಿ ಬಳಗವನ್ನು ಕೊಂಡಾಡಿದರು.
ಮಕ್ಕಳು ಪ್ರಾರ್ಥನೆ ಮಾಡಿದರೆ ಸುಷ್ಮಾ ಸರ್ವರನ್ನು ಸ್ವಾಗತಿಸಿದರು.
ಶಶಿಕುಮಾರ್ ಕೊನೆಯಲ್ಲಿ ವಂದಿಸಿದರೆ ಸುರೇಶ್ ಜೆ ಇವರು ಇಡೀ ಕಾರ್ಯಕ್ರಮ ನಿರೂಪಿಸಿದರು.
ಮುಖ್ಯ ಶಿಕ್ಷಕರು ಮತ್ತು ಎಲ್ಲಾ ಶಿಕ್ಷಕರ ನೇತೃತ್ವದಲ್ಲಿ ಕಾರ್ಯಕ್ರಮ ಯಶಸ್ವಿ ಯಾಯಿತು.

17/02/2025

Story telling

09/08/2024

Address

Begaru
Sringeri
577120

Opening Hours

Monday 9am - 6pm
Tuesday 9am - 6pm
Wednesday 6am - 6pm
Thursday 9am - 6pm
Friday 9am - 6pm
Saturday 9am - 6pm
Sunday 9am - 6pm

Website

Alerts

Be the first to know and let us send you an email when KPS Primary Begaru, Sringeri posts news and promotions. Your email address will not be used for any other purpose, and you can unsubscribe at any time.

Shortcuts

Share

Category