Centre for the Study of Local Cultures

Centre for the Study of Local Cultures The Centre for the Study of Local Cultures plays an important role in the project of reinvigorating

Why a professor from Belgium was branded ‘anti-India’ after Delhi lecture on 18th-century Dutch Text. Instead of engagin...
07/09/2024

Why a professor from Belgium was branded ‘anti-India’ after Delhi lecture on 18th-century Dutch Text. Instead of engaging critically with an article in a children’s magazine that upheld racist superiority, some academics chose to silence a colleague.

Instead of engaging critically with an article in a children’s magazine that upheld racist superiority, some academics chose to silence a colleague.

Playlist of all of Balu's talks available on youtube
16/07/2020

Playlist of all of Balu's talks available on youtube

S.N Balagangadhara (Balu)

01/03/2017




ನಾನು ಇಲ್ಲಿ ನನ್ನ ಕುತೂಹಲವನ್ನು ಕೆರಳಿಸಿದ ಇನ್ನೊಂದು ಅಂಶದ ಕುರಿತು ಹಂಚಿಕೊಳ್ಳುತ್ತೇನೆ. ಝಾಕೀರ್ ನಾಯ್ಕ್ ಅವರ ಒಂದು ಕ್ಲಿಪ್ಪಿಂಗ್ ನೋಡಿದಾಗ ಅ...
23/07/2016

ನಾನು ಇಲ್ಲಿ ನನ್ನ ಕುತೂಹಲವನ್ನು ಕೆರಳಿಸಿದ ಇನ್ನೊಂದು ಅಂಶದ ಕುರಿತು ಹಂಚಿಕೊಳ್ಳುತ್ತೇನೆ. ಝಾಕೀರ್ ನಾಯ್ಕ್ ಅವರ ಒಂದು ಕ್ಲಿಪ್ಪಿಂಗ್ ನೋಡಿದಾಗ ಅದರಲ್ಲಿ ಗಣಪತಿಯ ಕಥೆಯನ್ನು ಹಾಸ್ಯ ಮಾಡುತ್ತಿದ್ದರು. ಗಣಪತಿ ತನ್ನ ಮಗ ಎಂಬುದೇ ಗೊತ್ತಾಗದೇ ಅವನ ತಲೆಯನ್ನು ಕತ್ತರಿಸುವ, ಅವನ ಕತ್ತರಿಸಿದ ತಲೆಗೆ ಆನೆ ತಲೆಯನ್ನು ಹಚ್ಚಿಸಿದ, ಎರಡೆರಡು ಕೊಲೆಗಳನ್ನು ಮಾಡಿಸಿದ ಶಿವ ಎಂತಹ ಸರ್ವಶಕ್ತ? ನನಗೆ ಭಾರತದ ಕುರಿತ ಇಡೀ ಪಾಶ್ಚಾತ್ಯ ಸಮಾಜ ವಿಜ್ಞಾನ, ಅದನ್ನು ಪುನರುಚ್ಛರಿಸುವ ನಮ್ಮ ಬುದ್ಧಿಜೀವಿಗಳು ಹಾಗೂ ಝಾಕಿರ್ ನಾಯ್ಕ್ ಎಲ್ಲರೂ ಹಿಂದೂಗಳ ಕುರಿತು ಹೇಳುವ ಕಥೆಯಲ್ಲಿ ಎಂತಹ ಸಾಮ್ಯತೆ ಇದೆಯೆಂಬುದನ್ನು ಗಮನಿಸಿ ಆಶ್ಚರ್ಯಪಟ್ಟೆ. ಮೊಟ್ಟಮೊದಲನೆಯದಾಗಿ ನಮ್ಮ ಪುರಾಣಗಳ ಕುರಿತು ಇಂಥ ಹಾಸ್ಯಗಳು ನಮ್ಮನ್ನು ಬೆಚ್ಚಿಬೀಳಿಸಬೇಕಿಲ್ಲ. ಅನ್ಯರ ಉದಾಹರಣೆಯೇ ಬೇಡ, ನಮ್ಮ ಸಂಸ್ಕೃತ ಸಾಹಿತ್ಯದಲ್ಲಿ ನಮ್ಮ ದೇವತೆಗಳ ಕುರಿತು ಎಷ್ಟೊಂದು ಹಾಸ್ಯಗಳಿವೆ ಎಂದರೆ ಇನ್ನು ಹೊಸದಾಗಿ ಹೇಳಲಿಕ್ಕೆ ಏನೂ ಉಳಿದಿಲ್ಲ. ಆದರೆ ಅವು ಯಾವುವೂ ಹಾಸ್ಯಗಳೇ ವಿನಃ ಅವಹೇಳನಗಳಲ್ಲ.

http://goo.gl/1qduCC — with Rajaram Hegde

08/07/2016
ಅದೇ ರೀತಿಯಲ್ಲಿ ಈ ಸಾಲಿನಲ್ಲಿ ಬರುವ ಬ್ರಾಹ್ಮಣ ಎಂಬ ಶಬ್ದ ಕೂಡ ಹುಟ್ಟನ್ನು ಸೂಚಿಸುವುದಿಲ್ಲ. ಹುಟ್ಟಿನಿಂದಲೇ ಒಂದಷ್ಟು ಜನರನ್ನು ಬ್ರಾಹ್ಮಣರೆಂದು...
08/07/2016

ಅದೇ ರೀತಿಯಲ್ಲಿ ಈ ಸಾಲಿನಲ್ಲಿ ಬರುವ ಬ್ರಾಹ್ಮಣ ಎಂಬ ಶಬ್ದ ಕೂಡ ಹುಟ್ಟನ್ನು ಸೂಚಿಸುವುದಿಲ್ಲ. ಹುಟ್ಟಿನಿಂದಲೇ ಒಂದಷ್ಟು ಜನರನ್ನು ಬ್ರಾಹ್ಮಣರೆಂದು ಕರೆಯಲಾಗುತ್ತಿದ್ದರೂ ಕೂಡ ಈ ಸಾಲಿನಲ್ಲಿ ರಾಜರ್ಷಿ ಎಂಬ ಶಬ್ದದ ಜೊತೆಗೆ ಅದನ್ನು ಇಟ್ಟಿರುವುದರಿಂದ ಅದು ಕೂಡ ಗಳಿಸಿಕೊಂಡ ಪದವಿಯನ್ನೇ ಸೂಚಿಸುತ್ತದೆ ಎಂಬುದು ಸ್ಪಷ್ಟ. ಅಂದರೆ ಇಲ್ಲಿರುವ ಬ್ರಾಹ್ಮಣನು ಬ್ರಹ್ಮತ್ವವನ್ನು ಹೊಂದಿದವನೇ ಹೊರತೂ ಕೇವಲ ಬ್ರಾಹ್ಮಣ ಜಾತಿಯಲ್ಲಿ ಹುಟ್ಟಿದವನಲ್ಲ. ಭಗವದ್ಗೀತೆಯು ಮಹಾಭಾರತದ ಒಂದು ಭಾಗ ಎಂಬುದನ್ನು ಗಮನಿಸಬೇಕು. ಮಹಾಭಾರತದಲ್ಲಿ ಬ್ರಹ್ಮಜ್ಞಾನವನ್ನು ಹೊಂದಿದ ಶೂದ್ರನೂ ಬ್ರಾಹ್ಮಣನಾಗುತ್ತಾನೆ ಹಾಗೂ ಬ್ರಹ್ಮಜ್ಞಾನವನ್ನು ಕಡೆಗಣಿಸಿ ಪಾಪಸಂಚಯ ಮಾಡುವ ಬ್ರಾಹ್ಮಣನೂ ಶೂದ್ರನೇ ಸೈ ಎಂಬುದಾಗಿ ಧರ್ಮವ್ಯಾಧ, ಅಜಗರಪ್ರಶ್ನ, ಯಕ್ಷಪ್ರಶ್ನ, ಇತ್ಯಾದಿ ಪ್ರಸಂಗಗಳಲ್ಲಿ ಅನೇಕ ಬಾರಿ ಸ್ಪಷ್ಟಪಡಿಸಲಾಗಿದೆ. ಆತ್ಮಜ್ಞಾನವನ್ನು ಹೊಂದಿದ ಅನೇಕ ಸ್ತ್ರೀಯರೂ ಅಲ್ಲಿ ಚಿತ್ರಿತರಾಗಿದ್ದಾರೆ.

ಇನ್ನು ಪಾಪಯೋನಿ ಎಂಬ ಕಲ್ಪನೆಯು ಹುಟ್ಟಾ ಬಂದಿರುವ ಅವಸ್ಥೆಯನ್ನು ಸೂಚಿಸುತ್ತದೆ. ಹಾಗಂತ ಇಲ್ಲಿ ಉಲ್ಲೇಖಿಸಿರುವ ಹುಟ್ಟಿಗೂ, ವರ್ಣ, ವೇದಾಧಿಕಾರ ಇತ್ಯಾದಿಗಳಿಗೂ ಸಂಬಂಧ ಕಲ್ಪಿಸುತ್ತಿಲ್ಲ. ಏಕೆಂದರೆ ಶೂದ್ರರ ಜೊತೆಗೆ ವೈಶ್ಯರು ಹಾಗೂ ಸ್ತ್ರೀಯರನ್ನು ತರಲಾಗಿದೆ. ವೈಶ್ಯ ವರ್ಣವನ್ನು ದ್ವಿಜಾತಿ ಎಂದು ಪರಿಗಣಿಸಲಾಗಿತ್ತು ಹಾಗೂ ಅವರಿಗೆ ವೇದಾಧಿಕಾರವನ್ನು ಸಮ್ಮತಿಸಲಾಗಿತ್ತು. ಆದರೆ ಮೇಲಿನ ಶ್ಲೋಕದಲ್ಲಿ ಇಂಥ ದ್ವಿಜ ವರ್ಣವಾದ ವೈಶ್ಯರನ್ನು ಸ್ತ್ರೀ ಶೂದ್ರ, ಪಾಪಯೋನಿಗಳ ಜೊತೆಗೆ ಸೇರಿಸಲಾಗಿದೆಯೇ ಹೊರತೂ ಬ್ರಾಹ್ಮಣ ಕ್ಷತ್ರಿಯರ ಜೊತೆಗಲ್ಲ. ಜೊತೆಗೆ ಸ್ತ್ರೀಯರನ್ನು ಕೂಡ ಸೇರಿಸಲಾಗಿದೆ. ಸ್ತ್ರೀಲಿಂಗ ಎಂಬುದೂ ಕೂಡ ಹುಟ್ಟಿನಿಂದಲೇ ನಿರ್ಧಾರವಾಗುವಂಥದ್ದು. ಅಂದರೆ ಇಲ್ಲಿ ವರ್ಣವಿಭಜನೆಯನ್ನಷ್ಟೇ ತಿಳಿಸಬೇಕಾಗಿದ್ದ ಪಕ್ಷದಲ್ಲಿ ಅದಕ್ಕೆ ಸಂಬಂಧವಿಲ್ಲದ ಸ್ತ್ರೀ ಎಂಬ ವರ್ಗವನ್ನೇಕೆ ತಂದು ಸೇರಿಸುತ್ತಿದ್ದರು? ಎಲ್ಲ ವರ್ಣಗಳಲ್ಲೂ ಸ್ತ್ರೀಯರು ಇರುತ್ತಾರೆಯೇ ಹೊರತೂ ಸ್ತ್ರೀಯೆಂಬ ಪ್ರತ್ಯೇಕ ವರ್ಣ ಇರಲಿಲ್ಲ. ಅಂದರೆ ಈ ಶ್ಲೋಕದಲ್ಲಿ ಹುಟ್ಟನ್ನು ಮಾತ್ರ ಸೂಚಿಸುವ ಸಂದರ್ಭದಲ್ಲಿ ಸ್ತ್ರೀ ಶೂದ್ರರನ್ನು ಒಟ್ಟಿಗೆ ತರಲಾಗಿದೆ. ‘ಜನ್ಮದಿಂದ ಎಲ್ಲರೂ ಶೂದ್ರರಾಗಿಯೇ ಹುಟ್ಟುತ್ತಾರೆ ‘ ಎಂಬ ಉಕ್ತಿಯ ಪ್ರಕಾರ ಶೂದ್ರ ಎಂಬುದೂ ಕೂಡ ಹುಟ್ಟಿನಿಂದಲೇ ಬರುವಂಥದ್ದು. ವೈಶ್ಯವನ್ನೂ ಇಲ್ಲಿ ಸೇರಿಸಿರುವುದರಿಂದ ಸಂಸ್ಕಾರ ಹೊಂದಲಿ, ಹೊಂದದಿರಲಿ, ಹುಟ್ಟಿನಿಂದ ಬಂದ ಅವಸ್ಥೆಯನ್ನು ಸ್ವ ಪ್ರಯತ್ನದಿಂದ ಮೀರದವರು ಎಂಬ ಸಾಮಾನ್ಯ ಪ್ರಭೇದದೊಳಗೆ ಮಾತ್ರ ಇವರೆಲ್ಲರೂ ಬರಲು ಸಾಧ್ಯ.

ಕಂತು 51: ಪಾಪಯೋನಿ ಎಂಬುದು ಏನನ್ನು ಸೂಚಿಸುತ್ತದೆ? ಪ್ರೊ. ರಾಜಾರಾಮ ಹೆಗಡೆ  ಭಗವದ್ಗೀತೆಯ 9ನೆಯ ಅಧ್ಯಾಯದ 32ನೆಯ ಶ್ಲೋಕದಲ್ಲಿ ಬರುವ ಪಾಪಯೋನಿ-ಪುಣ್ಯಯೋನಿ ಎಂಬ ಶಬ್ದಗಳ ಕುರಿತು ಇತ್ತೀಚೆಗೆ ಸಾಕಷ್ಟು ವಿವಾದ ನಡೆಯಿತು. ಈ ಶ್ಲೋಕದ ಕುರಿತ ಆಕ…

… ರೀ ಥಿಂಕಿಂಗ್ ಭಕ್ತಿ “ಆ ಸಂಕಿರಣದಲ್ಲಿ ನಾನೂ ಕೂಡ ಒಂದು ಪ್ರಬಂಧವನ್ನು ಮಂಡಿಸಿದ್ದೆ. ಅವರು ನನ್ನ ಪ್ರಬಂಧವನ್ನು ಕುರಿತು ಒಂದು ಪುಟದಷ್ಟು ಸುಧೀ...
05/07/2016

… ರೀ ಥಿಂಕಿಂಗ್ ಭಕ್ತಿ “ಆ ಸಂಕಿರಣದಲ್ಲಿ ನಾನೂ ಕೂಡ ಒಂದು ಪ್ರಬಂಧವನ್ನು ಮಂಡಿಸಿದ್ದೆ. ಅವರು ನನ್ನ ಪ್ರಬಂಧವನ್ನು ಕುರಿತು ಒಂದು ಪುಟದಷ್ಟು ಸುಧೀರ್ಘವಾದ ಪ್ಯಾರಾದಲ್ಲಿ ತಿಳಿಸುತ್ತಾರೆ. ಆ ಪ್ರಬಂಧದಲ್ಲಿ ನಾನು ಬಾಲಗಂಗಾಧರ ಅವರ ವಾದವನ್ನು ಆಧರಿಸಿ ಭಕ್ತಿ ಎಂಬುದು ಸಮಾಜ ಸುಧಾರಣಾ ಚಳವಳಿ ಎಂಬುದು ಪ್ರಭೇದ ದೋಷ, ಚಳವಳಿಗಳೆಲ್ಲಾ ಮೂಲತಃ ಆಧ್ಯಾತ್ಮಿಕ ಮಾರ್ಗಗಳಾಗಿವೆ ಎಂಬುದಾಗಿ ವಾದಿಸಿದ್ದೆ. ಮಂಡನೆಯ ನಂತರ ಹಾವ್ಲೆಯವರು ಅದನ್ನು ತುಂಬಾ ಮೆಚ್ಚಿಕೊಂಡು ಸಮರ್ಥನೆಯ ಮಾತುಗಳನ್ನು ಕೂಡಾ ಆಡಿದ್ದರು. ಅನ್ಯರಿಂದ ಸಾಕಷ್ಟು ಬಿಸಿ ಬಿಸಿಯಾದ ಚರ್ಚೆಗಳೂ ಎದ್ದವು. ಅದನ್ನು ಹಾವ್ಲೆ ಒಂದು ಪ್ಯಾರಾದಲ್ಲಿ ಉಲ್ಲೇಖಿಸಿದ್ದಾರೆ. ಅದರ ವಿವರಗಳು ಇಲ್ಲಿ ಪ್ರಸ್ತುತವಲ್ಲ.

ಆದರೆ ನಂತರ ಅವರು ದಾಖಲಿಸಿದ ವಿಚಾರಗಳನ್ನು ಓದಿದಾಗ ನನಗೆ ಆಶ್ಚರ್ಯವಾಯಿತು. ಅದರಲ್ಲಿ ಭಾಗವಹಿಸಿದ ಒಬ್ಬರು ಹಾವ್ಲೆಗೆ ನಮ್ಮ ಸಂಶೊಧನೆಯ ಕುರಿತು ತಿಳಸಿದ ವಿಚಾರಗಳಿವೆ. ವಿಚಾರ ಸಂಕಿರಣದಲ್ಲಿ ಅವು ಚರ್ಚೆಗೆ ಬಂದ ನೆನಪು ನನಗೆ ಕಾಣುತ್ತಿಲ್ಲ. ಅದನ್ನು ಅವರು ಎಲ್ಲೇ ಹೇಳಿರಲಿ, ಒಂದು ಗುಂಪು ಎಷ್ಟು ವ್ಯವಸ್ಥಿತವಾಗಿ ನಮ್ಮ ವಿಚಾರಗಳ ಕುರಿತು ಜನರಲ್ಲಿ ತಪ್ಪು ಅಭಿಪ್ರಾಯಗಳನ್ನು ಮೂಡಿಸುವುದನ್ನೇ ತನ್ನ ಕಾಯಕವನ್ನಾಗಿ ಮಾಡಿಕೊಂಡಿದೆ ಎನ್ನುವುದನ್ನು ಮನದಟ್ಟು ಮಾಡುವಂತಿದ್ದವು…”

(ಹೊಸದಿಗಂತ(04-07-2016) ದಿನಪತ್ರಿಕೆಯಲ್ಲಿ Rajaram Hegde ಸರ್ ರವರ ಲೇಖನ. http://www.hosadigantha.in/index.php…).

ಈ ಸಾಲುಗಳನ್ನು ಸರ್ಮಥಿಸಬೇಕೆಂದು ನನ್ನ ಸೂಚನೆಯಲ್ಲ. ಯಾರಾದರೂ ಇಂಥ ಸಾಲುಗಳನ್ನು ಒಪ್ಪಿಕೊಳ್ಳಲು ನಿರಾಕರಿಸಿದರೂ ತೊಂದರೆಯೇನಿಲ್ಲ. ಕುವೆಂಪು ಅವರು...
04/07/2016

ಈ ಸಾಲುಗಳನ್ನು ಸರ್ಮಥಿಸಬೇಕೆಂದು ನನ್ನ ಸೂಚನೆಯಲ್ಲ. ಯಾರಾದರೂ ಇಂಥ ಸಾಲುಗಳನ್ನು ಒಪ್ಪಿಕೊಳ್ಳಲು ನಿರಾಕರಿಸಿದರೂ ತೊಂದರೆಯೇನಿಲ್ಲ. ಕುವೆಂಪು ಅವರು ಇಂಥ ಸಾಲುಗಳನ್ನು ತರದೇ, ಆಧುನಿಕ ಪ್ರಜ್ಞೆಗೆ ಒಪ್ಪುವಂತೇ ರಾಮಾಯಣ ದರ್ಶನಂ ರಚಿಸಿಲ್ಲವೆ? ಅದರಿಂದ ರಾಮಾಯಣಕ್ಕೇನಾದರೂ ಅನ್ಯಾಯವಾಗಿದೆಯೆ? ಭಾರತದಲ್ಲಿ ದೇಶೀ ರಿಲಿಜನ್ನುಗಳು ಇಲ್ಲ ಅಂತಾದಮೇಲೆ ಏಕಮೇವ ಪವಿತ್ರಗ್ರಂಥ, ದೇವವಾಣಿ, ಇತ್ಯಾದಿಗಳೂ ಇರಲಿಕ್ಕೆ ಸಾಧ್ಯವಿಲ್ಲ. ಅಂದಮೇಲೆ ಅವುಗಳ ಕೆಲವು ಸಾಲುಗಳನ್ನು ಕಿತ್ತುಹಾಕುವುದಾಗಲೀ, ಮತ್ತೆ ಕೆಲವನ್ನು ಸೇರಿಸುವುದಾಗಲೀ ದೈವವಿರೋಧೀ ಕೃತ್ಯವಂತೂ ಆಗಲು ಸಾಧ್ಯವಿಲ್ಲ. ನಮ್ಮ ಮಹಾಕಾವ್ಯ, ಪುರಾಣಾದಿಗಳು ಇಂದಿನ ರೂಪವನ್ನು ತಳೆದು ಬಂದದ್ದೇ ಹೀಗಲ್ಲವೆ? ಬ್ರಿಟಿಷರು ಭಾರತಕ್ಕೆ ಬಂದ ಮೇಲೆ ಇವುಗಳಲ್ಲಿ ಮೂಲ, ಪ್ರಕ್ಷಿಪ್ತ ಅಂತೆಲ್ಲ ಭೇದಗಳನ್ನು ಹುಟ್ಟುಹಾಕಿದ್ದಾರೆ. ಅದಕ್ಕೂ ಮೊದಲು ಅದೊಂದು ಸಹಜಕ್ರಿಯೆಯಾಗಿತ್ತು. ಇಂಥ ಸಂದರ್ಭದಲ್ಲಿ ಇಂಥ ಸಾಲುಗಳನ್ನು ಅವುಗಳ ಅಪಾರ್ಥಕ್ಕೆ ಹೊರತಾಗಿಯೂ ಉಳಿಸಿಕೊಳ್ಳುತ್ತೇವೆ ಎಂದರೆ ಅದೊಂದು ಹುನ್ನಾರದಂತೆ ಕಂಡರೂ ಆಶ್ಚರ್ಯವಿಲ್ಲ.

ಕಂತು 50:ಯಥೇಚ್ಛಸಿ ತಥಾ ಕುರು ಪ್ರೊ. ರಾಜಾರಾಮ ಹೆಗಡೆ  ನಮ್ಮ ಪ್ರಾಚೀನ ಮಹಾಕಾವ್ಯ ಹಾಗೂ ಪುರಾಣಗಳ ಕುರಿತು ಇಂದು ಅನೇಕ ಚರ್ಚೆಗಳು ವಿವಾದಗಳು ಎದ್ದುಕೊಂಡಿವೆ.  ಇಂಥ ವಿವಾದಗಳು ಅವುಗಳಲ್ಲಿ ಕಾಣಿಸಿಕೊಳ್ಳುವ ನಿರ್ಧಿಷ್ಟ ಸಾಲುಗಳ ಅಥವಾ ಘಟನೆಗಳ…

ಅಸುರ ಸಂಹಾರವನ್ನು ಜನಾಂಗೀಯ ಸಂಘರ್ಷಕ್ಕೆ ಜೋಡಿಸುವುದು ನಿರಾಧಾರ ಎಂಬುದು ಸ್ಪಷ್ಟಗೊಂಡರೂ ಅಸುರ ಸಂಹಾರದ ಕಥೆ ಏಕೆ ಪುರಾಣಗಳಿಗೆ ಮುಖ್ಯವಾಗಿದೆ ಎಂಬ...
02/07/2016

ಅಸುರ ಸಂಹಾರವನ್ನು ಜನಾಂಗೀಯ ಸಂಘರ್ಷಕ್ಕೆ ಜೋಡಿಸುವುದು ನಿರಾಧಾರ ಎಂಬುದು ಸ್ಪಷ್ಟಗೊಂಡರೂ ಅಸುರ ಸಂಹಾರದ ಕಥೆ ಏಕೆ ಪುರಾಣಗಳಿಗೆ ಮುಖ್ಯವಾಗಿದೆ ಎಂಬ ಪ್ರಶ್ನೆ ಹಾಗೇ ಉಳಿಯುತ್ತದೆ. ಸಂಸ್ಕೃತ ಪುರಾಣಗಳು ಅದನ್ನು ಹೇಗೆ ಬಿಂಬಿಸುತ್ತವೆ? ಅವು ಅಸುರ ಎಂದರೆ ತಮಸ್ಸು ಅಥವಾ ಅಜ್ಞಾನ ಎಂದು ನಿರೂಪಿಸುತ್ತವೆ. ಅದನ್ನು ನಿವಾರಿಸಿ ಬೆಳಕನ್ನು, ಅಥವಾ ಜ್ಞಾನವನ್ನು ಸ್ಥಾಪಿಸುವುದೇ ಅಸುರ ಸಂಹಾರದ ಕೆಲಸ. ಮುಖ್ಯವಾಗಿ ದೇವೀ ಮಾಹಾತ್ಮ್ಯದ ಕುರಿತು ಈ ನಿರೂಪಣೆಯನ್ನೇ ವಿದ್ವಾಂಸರೆಲ್ಲ ಮಂಡಿಸುವುದನ್ನು ನಾನು ಗಮನಿಸಿದ್ದೇನೆ. ಅಷ್ಟಾಗಿಯೂ ಅಸುರ ಸಂಹಾರವು ಅಂಧಕಾರದ ನಿವಾರಣೆ ಹಾಗೂ ಜ್ಞಾನದ ಸ್ಥಾಪನೆ ಹೇಗಾಗುತ್ತದೆ ಎಂಬ ಒಗಟು ಹಾಗೇ ಉಳಿದುಕೊಳ್ಳಬಹುದು. ಹಾಗೂ ಎಲ್ಲಾ ಪೌರಾಣಿಕ ದೇವತೆಗಳೂ ಅಸುರ ಸಂಹಾರವನ್ನು ಮಾಡುವುದನ್ನು ಹೀಗೇ ಅರ್ಥೈಸುವುದು ಸಾಧ್ಯವೆ? ಅದೇಕೆ ಒಂದೇ ಕೆಲಸವನ್ನು ಮಾಡಲಿಕ್ಕೆ ಇಷ್ಟೊಂದು ದೇವತೆಗಳನ್ನು ಭಾರತೀಯರು ಸೃಷ್ಟಿಸಬೇಕು?

ಕಂತು 49: ದೇವಾಸುರ ಹೋರಾಟದ ಮನೋಭೂಮಿಕೆ ಪ್ರೊ. ರಾಜಾರಾಮ ಹೆಗಡೆ  ಈ ದಸರಾದಲ್ಲಿ ಮಹಿಷಾಸುರನನ್ನು ಪೂಜಿಸುವ ಕಾರ್ಯಕ್ರಮವೂ ನಡೆದು ಸುದ್ದಿಯಾಯಿತು. ಈ ಪೂಜೆಯ ಹಿಂದಿನ ತರ್ಕವೆಂದರೆ, ಆರ್ಯರು ಈ ಭಾಗವನ್ನು ಆಕ್ರಮಣ ಮಾಡಿಕೊಂಡಾಗ  ಸ್ಥಳೀಯ ಮೂಲನಿ…

ಇಂದು ನಾವು ಬದುಕುತ್ತಿರುವ ಜಗತ್ತಿನಲ್ಲಿ ದುಡ್ಡುತೆಗೆದುಕೊಂಡು ಮಾಡುವ ಕೆಲಸಗಳನ್ನೂ ಸೇವೆ ಎನ್ನಲು ತೊಂದರೆ ಇಲ್ಲ. ಆದರೂ ಕೂಡ ಭಾರತೀಯರಿಗೆ ಇವೆಲ್...
21/04/2016

ಇಂದು ನಾವು ಬದುಕುತ್ತಿರುವ ಜಗತ್ತಿನಲ್ಲಿ ದುಡ್ಡುತೆಗೆದುಕೊಂಡು ಮಾಡುವ ಕೆಲಸಗಳನ್ನೂ ಸೇವೆ ಎನ್ನಲು ತೊಂದರೆ ಇಲ್ಲ. ಆದರೂ ಕೂಡ ಭಾರತೀಯರಿಗೆ ಇವೆಲ್ಲ ಸೇವೆಗಳು ಎಂಬುದನ್ನು ಒಪ್ಪಲು ಕಷ್ಟವಾಗುತ್ತದೆ, ಏಕೆಂದರೆ ನಮ್ಮ ಪ್ರಕಾರ ಪ್ರತಿಫಲವನ್ನು ಬಯಸದೇ ಮಾಡುವುದೇ ಸೇವೆ. ಏಕೆಂದರೆ ಇದುವರೆಗೆ ಉಲ್ಲೇಖಿಸಿದ ಉದಾಹರಣೆಗಳಲ್ಲಿ ಇಂಗ್ಲೀಷಿನ ಸರ್ವಿಸ್ ಎಂಬ ಶಬ್ದವನ್ನು ಸೇವೆ ಎಂದು ಭಾಷಾಂತರಿಸಲಾಗಿದೆ ಎಂಬುದನ್ನು ಗಮನಿಸಬೇಕು. ನಮ್ಮ ಸಂಪ್ರದಾಯಗಳಲ್ಲಿ ಸೇವೆಯ ಕಲ್ಪನೆಯೇ ಬೇರೆ, ಇಂದು ಪ್ರಚಲಿತದಲ್ಲಿ ಇರುವ ಸರ್ವಿಸ್ ಕಲ್ಪನೆಯೇ ಬೇರೆ. ಸರ್ವಿಸ್ ಸೆಕ್ಟರ್ ಅಥವಾ ಸೇವಾ ವಲಯ ಎಂದರೆ ಅಗತ್ಯ ಪರಿಣತಿಯನ್ನು ಸಮಾಜಕ್ಕೆ ‘ಒದಗಿಸುವ’, ‘ನೀಡುವ’ ಉದ್ಯೋಗಗಳು ಎಂಬ ಅರ್ಥ ಬರುತ್ತದೆ. ಹಾಗೂ ಅದು ಉಚಿತವಾಗಿರಬೇಕಾದ್ದಿಲ್ಲ. ಆದರೆ ಸೋಶಿಯಲ್ ಸರ್ವಿಸ್ ಎಂಬ ನಿರ್ಧಿಷ್ಟ ಶಬ್ದವು ಸಮಾಜಕ್ಕಾಗಿ ನಿಸ್ವಾರ್ಥದಿಂದ ಕೆಲಸ ಮಾಡುವುದು ಎಂಬ ನಿರ್ದಿಷ್ಟಾರ್ಥವನ್ನೇ ಹೊಂದಿದೆ. ಅಂದರೆ ಸರ್ವಿಸ್ ಎನ್ನುವುದು ಎರಡೂ ಸಂದರ್ಭದಲ್ಲೂ ಬಳಕೆಯಾಗಬಲ್ಲದು.

ಕಂತು 48: ಅಹಂಕಾರ ಹಾಗೂ ಹೊಟ್ಟೆಪಾಡಿಗೆ ಮಾಡಿದ್ದು ಸೇವೆಯೆ? ಪ್ರೊ. ರಾಜಾರಾಮ ಹೆಗಡೆ   ಇಂದು ಸಮಾಜಸೇವೆ ಎಂಬ ಶಬ್ದಕ್ಕೆ ವಿಶೇಷ ಮಹತ್ವವು ಪ್ರಾಪ್ತಿಯಾಗಿದೆ. ಅದೊಂದು ಉದಾತ್ತ ಕೆಲಸವಾಗಿದ್ದು ವ್ಯಕ್ತಿಯೊಬ್ಬನ ಆದರ್ಶವಾಗಿದೆ. ಸಮಾಜ ಸೇವೆ ಎಂದ…

ಇದಕ್ಕಿಂತಲೂ ವಿಚಿತ್ರವೊಂದಿದೆ. ಒಂದೆಡೆ ಇವರೆಲ್ಲ ಸೆಕ್ಯುಲರ್ವಾದಿಗಳಾಗಿ ಭಾರತೀಯ ಸಾಂಸ್ಕೃತಿಕ ವೈವಿಧ್ಯತೆಯೇ ಅದರ ಸೆಕ್ಯುಲರ್ ಎಳೆಗಳನ್ನು ಬಲಪಡಿ...
19/04/2016

ಇದಕ್ಕಿಂತಲೂ ವಿಚಿತ್ರವೊಂದಿದೆ. ಒಂದೆಡೆ ಇವರೆಲ್ಲ ಸೆಕ್ಯುಲರ್ವಾದಿಗಳಾಗಿ ಭಾರತೀಯ ಸಾಂಸ್ಕೃತಿಕ ವೈವಿಧ್ಯತೆಯೇ ಅದರ ಸೆಕ್ಯುಲರ್ ಎಳೆಗಳನ್ನು ಬಲಪಡಿಸಿದೆ ಹಾಗಾಗಿ ಕೋಮು ಸೌಹಾರ್ದಕ್ಕಾಗಿ ಅದನ್ನು ಉಳಿಸಿಕೊಂಡು ಬರಬೇಕೆನ್ನುತ್ತಾರೆ. ಆ ಕಾರಣದಿಂದ ಹಿಂದುತ್ವವಾದಿಗಳು ಭಾರತೀಯ ಸಂಸ್ಕೃತಿಯನ್ನು ಹಿಂದೂ ಎಂಬ ಏಕಾಕೃತಿಗೆ ಇಳಿಸುತ್ತಿದ್ದಾರೆ, ಅದು ಅಪಾಯಕಾರಿ ಎನ್ನುತ್ತಾರೆ. ಆದರೆ ಅದೇ ವೇಳೆಗೆ ಇವರೇ ಪ್ರಗತಿಪರರಾಗಿ ಮಾತನಾಡುವಾಗ ಭಾರತದಲ್ಲಿರುವ ಜಾತಿ ಮತಗಳ ಭೇದಗಳೆಲ್ಲ ಅಳಿದು ಎಲ್ಲರೂ ಒಂದಾಗಬೇಕೆನ್ನುತ್ತಾರೆ, ಹಾಗೂ ಹಿಂದುತ್ವವಾದವೆಂಬುದು ಭಾರತೀಯ ಸಮಾಜವನ್ನು ಜಾತಿಗಳ ತರತಮಗಳಲ್ಲಿ ಒಡೆಯುವ ಪುರೋಹಿತಶಾಹಿಯ ಹುನ್ನಾರ ಎಂದೂ ಹೇಳುತ್ತಾರೆ. ಭಾರತೀಯ ಸಂಸ್ಕೃತಿಯ ವೈವಿಧ್ಯತೆ ಎಂದರೆ ನಮಗೆ ಪುಸ್ತಕಗಳಲ್ಲಿ ಸಿಗುವ ಚಿತ್ರಣಗಳೇನು? ವಿಭಿನ್ನ ಪೂಜಾ ಪಂಥಗಳು, ಸಂಪ್ರದಾಯಗಳು, ಜಾತಿ, ಬುಡಕಟ್ಟು ಹಾಗೂ ಪ್ರಾದೇಶಿಕ ಸಂಪ್ರದಾಯಗಳನ್ನು ಆಧರಿಸಿದ ವಿಭಿನ್ನ ವೇಷಭೂಷಣ, ಆಹಾರ, ಆಚರಣೆ ಹಾಗೂ ಜೀವನ ಪದ್ಧತಿಗಳು. ಬಹು ಸಂಸ್ಕೃತಿಯೆಂದರೆ ಇದೇ ಆಗಿದ್ದಲ್ಲಿ ಭಾರತೀಯ ಸಮಾಜವು ಜಾತಿಮತಗಳಾಗಿ ಒಡೆದುಕೊಳ್ಳದೇ ಇದರ ಬಹುತ್ವ ಮತ್ತೆ ಹೇಗೆ ಸಿದ್ಧಿಸುತ್ತದೆ ಎಂಬುದನ್ನು ವಿವರಿಸುವುದಿಲ್ಲ. ಅದಕ್ಕಿಂತಲೂ, ಅವರೇ ತಿಳಿಸುವಂತೆ ಅದೇ ಕೆಲಸವನ್ನು ಮಾಡಿದ ಪುರೋಹಿತಶಾಹಿಯು ಸೆಕ್ಯುಲರ್ವಾದಿಯೇಕಲ್ಲ ಎನ್ನುವುದೂ ತಿಳಿಯುವುದಿಲ್ಲ.

Rajaram Hegde

ಕಂತು 46: ಕೆಲವು ಅರ್ಥವಾಗದ ಸಾಂಸ್ಕೃತಿಕ ಚರ್ಚೆಗಳು ಪ್ರೊ. ರಾಜಾರಾಮ ಹೆಗಡೆ    ಇಂದಿನ ಕೆಲವು ಚರ್ಚೆಗಳ ವರಸೆ ಹೀಗಿದೆ: ಒಂದೆಡೆ ನಾವು ಜಾಗತೀಕರಣವನ್ನು ತಡೆಯಬೇಕು ಏಕೆಂದರೆ ನಮ್ಮ ಪಾರಂಪರಿಕ ಜೀವನಕ್ರಮವನ್ನು ಅದು ನಾಶಮಾಡಿಬಿಡುತ್ತದೆ ಎಂದು …

ರಾಮಾಯಣ ಮಹಾಭಾರತಗಳನ್ನು ದಾಟಿಸಿಕೊಂಡು ಬಂದ ಸಾವಿರಾರು ವರ್ಷಗಳ ಪರಂಪರೆಯು ಅವುಗಳ ಲೌಕಿಕ ಸತ್ಯ ಸುಳ್ಳುಗಳ ಕುರಿತು ಯಾವುದೇ ಚರ್ಚೆಯನ್ನೂ ಮಾಡುವುದ...
28/03/2016

ರಾಮಾಯಣ ಮಹಾಭಾರತಗಳನ್ನು ದಾಟಿಸಿಕೊಂಡು ಬಂದ ಸಾವಿರಾರು ವರ್ಷಗಳ ಪರಂಪರೆಯು ಅವುಗಳ ಲೌಕಿಕ ಸತ್ಯ ಸುಳ್ಳುಗಳ ಕುರಿತು ಯಾವುದೇ ಚರ್ಚೆಯನ್ನೂ ಮಾಡುವುದಿಲ್ಲ. ಇಂಥ ಚರ್ಚೆಗಳು ಅವಕ್ಕೆ ನಿಷ್ಪ್ರಯೋಜಕ. ಅವುಗಳು ಸತ್ಯವೆ ಸುಳ್ಳೆ ಎಂಬ ಚರ್ಚೆಯನ್ನು ಹುಟ್ಟುಹಾಕಿದವರು ಪಾಶ್ಚಾತ್ಯರು. ಪಾಶ್ಚಾತ್ಯರಿಗೆ ಗತಕಾಲದ ಘಟನೆಗಳು ಸತ್ಯವಾಗಿದ್ದರೆ ಮಾತ್ರ ಅವು ಪ್ರಯೋಜಕ ಎಂಬ ಧೋರಣೆಯಿದೆ. ಅವುಗಳ ಪಾಠಾಂತರಗಳಲ್ಲಿ ಸೇರ್ಪಡೆಯಾದ ಪ್ರಕ್ಷಿಪ್ತ ಭಾಗಗಳನ್ನು ಗುರುತಿಸಿ ತೊಡೆದು ಮೂಲ ಶುದ್ಧ ಕೃತಿಗಳನ್ನು ಸಂಪಾದಿಸುವ ಕಾರ್ಯಕ್ರಮವನ್ನೂ ಅವರೇ ಪ್ರಾರಂಭಿಸಿದ್ದು. ಜೊತೆಗೇ ಭಾರತೀಯರು ನೈಜ ಘಟನೆಗಳನ್ನು ಅಜ್ಞಾನದಿಂದಲೋ, ದುರುದ್ದೇಶದಿಂದಲೋ ಮರೆಮಾಚಿ ಕಥೆಗಳ ರೂಪದಲ್ಲಿ ತಿಳಿಸಿದ್ದಾರೆ ಎಂಬ ಧೋರಣೆ ಕೂಡ ಪಾಶ್ಚಾತ್ಯರಿಗಿತ್ತು. ಹಾಗೂ ಭಾರತೀಯರಿಗೆ ನಿಜವಾದ ಗತಕಾಲವನ್ನು ದಾಖಲಿಸುವ ತಿಳಿವಳಿಕೆ ಇಲ್ಲ ಎಂದು ತೀರ್ಮಾನಿಸಿದರು. ತದನಂತರ ಭಾರತದಲ್ಲಿ ಈ ಕೃತಿಗಳ ಕುರಿತು ನಡೆದ ಆಧುನಿಕ ಅಧ್ಯಯನಗಳೆಲ್ಲವೂ ಪಾಶ್ಚಾತ್ಯರ ಇಂಥ ಗ್ರಹಿಕೆಗಳ ಮುಂದುವರಿದ ರೂಪಗಳೇ ಆಗಿವೆ. ಈ ಮೇಲೆ ಉಲ್ಲೇಖಿಸಿದ ಎಲ್ಲರೂ ಪಾಶ್ಚಾತ್ಯರದೇ ಧೋರಣೆಗಳನ್ನು ಮುಂದುವರಿಸಿಕೊಂಡು ಬರುತ್ತಿದ್ದಾರೆ.

ಕಂತು 45: ರಾಮಾಯಣ ಮಹಾಭಾರತಗಳ ಕುರಿತ ವಿಸ್ಮೃತಿ ಪ್ರೊ. ರಾಜಾರಾಮ ಹೆಗಡೆ  ರಾಮಾಯಣ ಮಹಾಭಾರತಗಳು ಭಾರತೀಯ ಜೀವನದಲ್ಲಿ ಹಾಸು ಹೊಕ್ಕಾಗಿವೆ. ಸಾವಿರಾರು ವರ್ಷಗಳಿಂದ ಬೇರೆ ಬೇರೆ ಭಾಷೆಗಳಲ್ಲಿ ಅವು ಅವತಾರವೆತ್ತಿವೆ. ಗ್ರಾಂಥಿಕ ರೂಪದಲ್ಲಿರಬಹುದು,…

Address

Room No. 7, Examination Building, Kuvempu University, Shankaraghatta
Shimogga
577451

Alerts

Be the first to know and let us send you an email when Centre for the Study of Local Cultures posts news and promotions. Your email address will not be used for any other purpose, and you can unsubscribe at any time.

Contact The School

Send a message to Centre for the Study of Local Cultures:

Shortcuts

Share