ನಮ್ಮ ಮಸಗಲ್ಲಿ ಶಾಲೆ

ನಮ್ಮ ಮಸಗಲ್ಲಿ ಶಾಲೆ Contact information, map and directions, contact form, opening hours, services, ratings, photos, videos and announcements from ನಮ್ಮ ಮಸಗಲ್ಲಿ ಶಾಲೆ, Middle School, Masagalli hosanagara, Shimoga.

19/06/2021

ನಮ್ಮ ಮಸಗಲ್ಲಿ ಶಾಲೆ

Happy Farmers day.. ರೈತ ದಿನಾಚರಣೆಯ ಶುಭಾಶಯಗಳು..---------------------------------------------------------------------------...
23/12/2020

Happy Farmers day..

ರೈತ ದಿನಾಚರಣೆಯ ಶುಭಾಶಯಗಳು..

----------------------------------------------------------------------------🇦🇹🇦🇹. ರೈತರಿಲ್ಲದ ಭೂಮಿ ಬರಡು🇦🇹🇺🇿
----------------------------------------------------------------------------
------------------------------------------------------------------------------
..

ರೈತರು ದೇಶದ ಜೀವಾಳ ಎನ್ನಬಹುದು. ನಮ್ಮಲ್ಲಿ ಎಷ್ಟೇ ಧನ, ಕನಕ ಇದ್ದರೂ ಊಟ ಮಾಡಲು ಆಹಾರ ಇಲ್ಲದೆ ನಾವು ಬದುಕಲು ಅಸಾಧ್ಯ. ಬದುಕಲು, ಆರೋಗ್ಯದಿಂದ ಇರಲು ಪೌಷ್ಟಿಕ ಆಹಾರ ತಿನ್ನಬೇಕು. ಇದನ್ನು ಬೆಳೆಯುವುದು ಯಾರು?ರೈತರು. ಅವರಿಲ್ಲದ ಲೋಕವನ್ನು ಕಲ್ಪಿಸಲೂ ಅಸಾಧ್ಯ.

ಮಳೆ, ಬೆಳೆ, ಇದ್ದರೇ ಭೂಮಿ ಹಚ್ಚ ಹಸಿರು ಸೀರೆ ಉಟ್ಟು ಕಂಗೊಳಿಸುವುದು. ಭತ್ತ, ಗೋಧಿ, ರಾಗಿ ಅನೇಕ ಧಾನ್ಯಗಳನ್ನು ಬೆಳೆಸಿ ಮಾರುಕಟ್ಟೆಗೆ ತರುವವನು ರೈತ. ಅವನಿಲ್ಲದೆ ಪಟ್ಟಣದವರಿಗೆ ಊಟ ಮಾಡುವ ಸಾಮಾನು ಸಿಗದು. ಪಟ್ಟಣದವರ ಬೆನ್ನೆಲುಬು ರೈತನು ಆಗಿರುವನು.

ರೈತರ ಜೀವನ ತುಂಬಾ ಕಷ್ಟಕರ. ಚಂಡಮಾರುತ, ನೆರೆ, ಭೂಕಂಪ, ಬರಗಾಲ ಇವೆಲ್ಲವನ್ನೂ ರೈತ ಎದುರಿಸಿ ಕೃಷಿ ಮಾಡುವಾಗ ಕೆಲವೊಮ್ಮೆ ಬೇಸತ್ತು ಹೋಗುವನು. ಸಾಲದಲ್ಲಿ ಮುಳುಗಿ ಆತ್ಮಹತ್ಯೆ ಮಾಡುವ ಮಟ್ಟಕ್ಕೆ ತಲಪುವನು.ಅವನು ಬೆಳೆದ ಬೆಳೆಗೆ ಯೋಗ್ಯ ಬೆಲೆಯೂ ಅವನಿಗೆ ಹಲವು ಸಲ ಸಿಗುವುದಿಲ್ಲ.
ಆದುದರಿಂದ ರೈತರಿಗೆ ಆದಷ್ಟೂ ಸಹಕಾರ ಎಲ್ಲರೂ ನೀಡಬೇಕು. ರೈತನಿಲ್ಲದೆ ಆಹಾರ ಪದಾರ್ಥಗಳೂ ಇಲ್ಲ. ನಮಗೆ ರೈತರಿಲ್ಲದೆ ಬದುಕಲು ಕಷ್ಟ. ಅವನಿಲ್ಲದ ಈ ಭೂಮಿಯೇ ಬರಡು ಎಂದು ಹೇಳಬಹುದು.

ಭೂಮಿ ಬರಡಾದರೆ ಮಾನವ ಕುಲಕ್ಕೆ ಸಂಕಷ್ಟ ಮತ್ತು ಮಾನವ ಸಂತತಿಯೇ ವಿನಾಶದ ಅಂಚಿಗೆ ತಲಪುವ ಸಾಧ್ಯತೆ ಇದೆ.

🌲ಜೈ ಜವಾನ್ , ಜೈ ಕಿಸಾನ್ ನಮ್ಮ ಮಂತ್ರವಾಗಲಿ🌲

-----------------------------------------------------------------------------

wಟ್ A TRUE """ and"""" Beautiful words"""" from""""" ಅಲೆಕ್ಸಾಂಡರ್""""""❤🙏
13/12/2020

wಟ್ A TRUE """ and"""" Beautiful words"""" from""""" ಅಲೆಕ್ಸಾಂಡರ್""""""❤🙏

 #ಆಚರಣೆಗೊಂದು_ಮಹತ್ವವಿದೆ 😍ಈ ಸಾಮಾಜಿಕ ಜಾಲತಾಣ ಎನ್ನುವುದು ನನಗೆ ಬರೀ ಮನೋರಂಜನೆಯ ತಾಣವಾಗಿಲ್ಲ.ಬದಲಾಗಿ ಸಾಲು ಸಾಲು ಸಹೋದರರ ಪ್ರೀತಿ,ವಿಶ್ವಾಸ,...
03/08/2020

#ಆಚರಣೆಗೊಂದು_ಮಹತ್ವವಿದೆ 😍

ಈ ಸಾಮಾಜಿಕ ಜಾಲತಾಣ ಎನ್ನುವುದು ನನಗೆ ಬರೀ ಮನೋರಂಜನೆಯ ತಾಣವಾಗಿಲ್ಲ.
ಬದಲಾಗಿ ಸಾಲು ಸಾಲು ಸಹೋದರರ ಪ್ರೀತಿ,ವಿಶ್ವಾಸ,ಕಾಳಜಿ,ನಂಬಿಕೆಯನ್ನು ನನಗೆ ಕರುಣಿಸಿದ ಸುಂದರ ತಾಣವಾಗಿದೆ.

ಶ್ರಾವಣ ಮಾಸದ ಹುಣ್ಣಿಮೆಯ ದಿನ ಸಹೋದರಿಯರು ತನ್ನ ಸಹೋದರರಿಗೆ ಹಾಗೂ ಸಹೋದರ ಸಮಾನರಾದ ಅಪರಿಚಿತ ಪುರುಷರ ಕೈಗೆ ರಕ್ಷೆಯನ್ನು ಕಟ್ಟಿ ಸಹೋದರರ ಯಶಸ್ಸನ್ನು ಬಯಸಿ ಅವರ ಆಯುರಾರೋಗ್ಯ ವೃದ್ಧಿಯಾಗಲಿ ತಮ್ಮ ಸಹೋದರರ ಮೇಲೆ ಯಾವ ದುಷ್ಟ ಶಕ್ತಿಯ ದೃಷ್ಟಿಯು ಬೀಳದಿರಲಿ ಹಾಗೆ ಸಹೋದರಿಯಾದ ನನ್ನನ್ನು ಪರಪುರುಷರಿಂದ ರಕ್ಷಿಸುವ ಹೊಣೆ ನಿನ್ನದೇ ಅಣ್ಣ.
ನನ್ನ ಪಾಲಿನ ರಕ್ಷಾಕವಚವು ನೀನೆ..ನಿನ್ನ ಯಶಸ್ಸೇ ನನ್ನ ಆಯಸ್ಸು ಎಂದು ಮನದುಂಬಿ ಹಾರೈಸಿ ಮನಸಾರೆ ರಕ್ಷೆಯನ್ನು ಕಟ್ಟುವ ಶಾಸ್ತ್ರ ಎನ್ನುವುದು ಸಂಪ್ರದಾಯ ಬದ್ಧವಾಗಿರುತ್ತದೆ.

ಆದರೆ..ಇದೀಗ ಕೆಲವರು ರಕ್ಷಾಬಂಧನವನ್ನು ಕಟ್ಟುವುದಕ್ಕಿಂತ ಒಂದು ಕಡೆಯಿಂದ ಇನ್ನೊಂದು ಕಡೆಗೆ ಕಳುಹಿಸುವ ಮುಖಾಂತರ ಈ ಹಬ್ಬವನ್ನು ವಿಭಿನ್ನವಾಗಿ ಆಚರಿಸುತ್ತಿರುವುದು ವಿಪರ್ಯಾಸವೇ ಸರಿ.

ಅದೇನೆ ಇರಲಿ ಆಚರಣೆಗಳು ಅವರವರ ಭಾವನೆಗಳಿಗೆ ಬಿಟ್ಟಿದ್ದು..ನಾ ಯಾರಿಗೂ ರಕ್ಷಾಬಂಧನವನ್ನು ಇದುವರೆಗೂ ಕಳಿಸಿಲ್ಲ ಕಾರಣ ನನಗೆ ನೂರಾರು ಅಣ್ಣಂದಿರು ಇದ್ದಾರೆ ಎಲ್ಲರೂ ಆಪ್ತರೆ ಹಾಗಿರುವಾಗ ಒಬ್ಬರನ್ನ,ಇಬ್ಬರನ್ನ ಆಯ್ಕೆ ಮಾಡಿ ರಾಖಿ ಕಳಿಸುವ ಕಾರ್ಯ ನಾನೆಂದೂ ಮಾಡಲಾರೆ.ನನಗೆಲ್ಲ ಸಹೋದರರು ಒಂದೇ ಹಾಗಾಗಿ ನೀವು ನನಗೆ ಸಿಕ್ಕಾಗ ಖಂಡಿತವಾಗಿ ನಿಮಗೆ ರಾಖಿ ಕಟ್ಟಿ ಆಶೀರ್ವಾದ ಪಡೆಯುವೆ.

ಸಹೋದರ-ಸಹೋದರಿಯರ ಸಂಬಂಧ ಅನ್ನೋದು ಕೊಂಡುಕೊಳ್ಳುವ ವಸ್ತುವಲ್ಲ.
ಹಾಗೆ ರಕ್ಷಾಬಂಧನ ಅನ್ನೋದು ಕಳುಹಿಸಿ ಕೊಡುವಂತದ್ದಲ್ಲ ಕಟ್ಟಿಸಿಕೊಳ್ಳುವಂತದ್ದು ಜೊತೆಗೆ ಕಟ್ಟುವಂತದ್ದು.
ಆ ದಿನ ಅಸಾಧ್ಯವಾದರೆ ರಕ್ಷೆ ಕಟ್ಟಲು ಸಾಧ್ಯವಾದ ದಿನವೇ ರಕ್ಷಾಬಂಧನ ಎಂದು ಸಂಭ್ರಮಿಸುತ್ತಾ ಸಹೋದರತ್ವತೆಯ ಸಂಬಂಧವನ್ನು ಉಳಿಸಿಕೊಳ್ಳುವಂತದ್ದು.

(ಇದು ಕೇವಲ ನನ್ನಭಿಪ್ರಾಯ ಅಷ್ಟೇ)

(ಸಂಗ್ರಹ) ✍️

ನಿಮ್ಮ ಹೆಸರಿನ ಮೊದಲ ಅಕ್ಷರ ಯಾವುದು ಶೇರ್ ಮಾಡಿ...!Share the First Letter of Your Name...!  🚩   🚩🚩जय श्री राम 🚩🚩🚩ಜೈ ಶ್ರೀರಾಮ 🚩 ಜ...
02/08/2020

ನಿಮ್ಮ ಹೆಸರಿನ ಮೊದಲ ಅಕ್ಷರ ಯಾವುದು ಶೇರ್ ಮಾಡಿ...!

Share the First Letter of Your Name...!

🚩
🚩🚩
जय श्री राम 🚩🚩🚩
ಜೈ ಶ್ರೀರಾಮ 🚩 ಜೈ ಶ್ರೀರಾಮ 🚩 ಜೈ ಶ್ರೀರಾಮ🚩 ಜೈ ಶ್ರೀ ರಾಮ 🚩 ಜೈ ಶ್ರೀರಾಮ 🚩ಜೈ ಶ್ರೀರಾಮ🚩 ಜೈ ಶ್ರೀರಾಮ🚩 ಜೈ ಶ್ರೀರಾಮ 🚩 ಜೈ ಶ್ರೀರಾಮ 🚩 ಜೈ ಶ್ರೀ ರಾಮ 🚩

ಒಂದಿನ....ದೊಡ್ಡವರಿಗೆ ಏರ್ಪಡಿಸಿದ್ದ ಮನೋಶಾಸ್ತ್ರ ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ಮನಶಾಸ್ತ್ರ ಶಿಕ್ಷಕ ' ಇವತ್ತು ಒಂದು ಆಟ ಆಡೋಣ ' ಎನ್ನುತ್ತಾ...
02/08/2020

ಒಂದಿನ....
ದೊಡ್ಡವರಿಗೆ ಏರ್ಪಡಿಸಿದ್ದ ಮನೋಶಾಸ್ತ್ರ ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ಮನಶಾಸ್ತ್ರ ಶಿಕ್ಷಕ ' ಇವತ್ತು ಒಂದು ಆಟ ಆಡೋಣ ' ಎನ್ನುತ್ತಾನೆ.

' ಯಾವ ಆಟ ? '

ವಿದ್ಯಾರ್ಥಿನಿಯೊಬ್ಬಳಿಗೆ ಬರಲು ಹೇಳುತ್ತಾನೆ ಶಿಕ್ಷಕ.

ಹೇಮಾ ಎಂಬ ಹೆಣ್ಣುಮಗಳು ಎದ್ದು ಬರುತ್ತಾಳೆ.

ನಿನ್ನ ಜೀವನದಲ್ಲಿ ತುಂಬಾ ಮುಖ್ಯ ಅನಿಸುವ 30 ಜನರ ಹೆಸರುಗಳನ್ನು ಬೋರ್ಡ್ ಮೇಲೆ ಬರಿ ಎಂದ ಶಿಕ್ಷಕ.

ಹೇಮಾ 30 ಹೆಸರು ಬರೆದಳು.
ಅದರಲ್ಲಿ ....

ಆಕೆಯ ಕುಟುಂಬದ ಸದಸ್ಯರು, ಸಂಬಂಧಿಕರು, ಗೆಳೆಯ-ಗೆಳತಿಯರು, ಸಹೋದ್ಯೋಗಿಗಳು ಹಾಗೂ ನೆರೆಹೊರೆಯವರ ಹೆಸರುಗಳಿದ್ದವು.

' ಇವುಗಳ ಪೈಕಿ ಯಾವುದಾದರೂ ಮೂರನ್ನು ಅಳಿಸು '.

ಆಕೆ ತನ್ನ ಸಹೋದ್ಯೋಗಿಗಳ ಹೆಸರು ಅಳಿಸಿದಳು.

' ಮುಖ್ಯ ಅನಿಸದ ಐದು ಹೆಸರುಗಳನ್ನು ಅಳಿಸು '

ತನ್ನ ನೆರೆಹೊರೆಯವರ ಹೆಸರುಗಳನ್ನು ಅಳಿಸಿದಳು ಹೇಮಾ.

ಹೀಗೆ ಅಳಿಸುವ ಕೆಲಸ ಮುಂದುವರೆದು,
ಕೊನೆಗೆ ಕೇವಲ ನಾಲ್ಕು ಹೆಸರುಗಳು
ಮಾತ್ರ ಬೋರ್ಡ್ ಮೇಲೆ ಉಳಿದವು.

ಅವು...

ಹೇಮಾಳ ತಂದೆ, ತಾಯಿ, ಗಂಡ ಮತ್ತು ಮಗನದಾಗಿತ್ತು.

ಇಷ್ಟೊತ್ತಿಗೆ ಇಡೀ ಕ್ಲಾಸು ಸ್ತಬ್ಧವಾಗಿತ್ತು.

ಏಕೆಂದರೆ...

ಈ ಅಳಿಸುವ ಆಟ ಕೇವಲ ಹೇಮಾಳೊಬ್ಬಳಿಗೇ ಸಂಬಂಧಿಸಿದ್ದಲ್ಲ ಎಂಬುದು ಸ್ಪಷ್ಟವಾಗಿತ್ತು.

ಈಗ...

ಶಿಕ್ಷಕ ಪ್ರಮುಖ ಅನಿಸದ ಇನ್ನೆರಡು ಹೆಸರು ಅಳಿಸಲು ಹೇಳಿದ.

ಇದು ನಿಜಕ್ಕೂ ಸವಾಲಿನದಾಗಿತ್ತು.

ಅತ್ಯಂತ ಕಷ್ಟದಿಂದ ಹೇಮಾ ತನ್ನ ತಂದೆತಾಯಿಗಳ ಹೆಸರುಗಳನ್ನು ಅಳಿಸಿದಳು.

ಉಳಿದಿದ್ದು ಗಂಡ ಮತ್ತು ಮಗನ ಹೆಸರುಗಳು ಮಾತ್ರ.

' ದಯವಿಟ್ಟು ಹೇಮಾ, ಇನ್ನೊಂದು ಹೆಸರನ್ನೂ ಅಳಿಸಿ '

ನಿಸ್ತೇಜಳಾದಳು ಹೇಮಾ.

ಕೈಗಳು ನಡುಗಲಾರಂಭಿಸಿದವು.
ಕಣ್ಣುಗಳು ತುಂಬಿ ಬಂದವು.
ಅಳುತ್ತಲೇ ಆಕೆ ತನ್ನ ಮಗನ ಹೆಸರನ್ನು ಅಳಿಸಿದಳು. ನಂತರ ಜೋರಾಗಿ ಅತ್ತುಬಿಟ್ಟಳು.

ಹೇಮಾಳನ್ನು ಆಕೆಯ ಸೀಟ್‍ನಲ್ಲಿ ಕೂಡಲು ಹೇಳಿದ ಶಿಕ್ಷಕ ತರಗತಿ ಉದ್ದೇಶಿಸಿ ಕೇಳಿದ: '
ನಿನ್ನ ಗಂಡನ ಹೆಸರನ್ನಷ್ಟೇ ಏಕೆ ಉಳಿಸಿಕೊಂಡೆ ? ತಂದೆತಾಯಿ ನಿನಗೆ ಜನ್ಮವಿತ್ತು, ಸಾಕಿ ಸಲಹಿದವರು. ಇನ್ನು ಒಬ್ಬ ಮಗನಿಗೆ ನೀನೇ ಜನ್ಮವಿತ್ತಿದ್ದೀ. ಅವರ್ಯಾರೂ ನಿನಗೆ ಮತ್ತೆ ಸಿಗುವವರಲ್ಲ.
ಆದರೆ, ಬೇಕೆಂದರೆ ಬೇರೊಬ್ಬನನ್ನು ನೀನು ಗಂಡನನ್ನಾಗಿ ಮಾಡಿಕೊಳ್ಳುವ ಅವಕಾಶ ಇದ್ದೇ ಇದೆ '.

ಇಡೀ ತರಗತಿ ಉಸಿರು ಬಿಡದೇ ಹೇಮಾಳ
ಉತ್ತರಕ್ಕಾಗಿ ಕಾಯುತ್ತಿತ್ತು.

ಹೇಮಾ ಶಾಂತಳಾಗಿ, ನಿಧಾನವಾಗಿ ಉತ್ತರಿಸಿದಳು:
' ಒಂದಿನ ತಂದೆತಾಯಿ ನನ್ನನ್ನು ಬಿಟ್ಟು ಹೋಗುವರು.
'ಮಗ ಕೂಡ ದೊಡ್ಡವನಾದ ಮೇಲೆ ತನ್ನ ಓದು, ಕೆಲಸ ಅಥವಾ ಇತರ ಕಾರಣಗಳಿಗಾಗಿ ನನ್ನನ್ನು ಬಿಟ್ಟು ಹೋಗಬಹುದು.

'ಆದರೆ, ಗಂಡ ಜೀವನದುದ್ದಕ್ಕೂ ನನ್ನ ಜೊತೆಗೇ ಇರುವವನು '.
ಇಡೀ ತರಗತಿ ಎದ್ದು ನಿಂತು ಚಪ್ಪಾಳೆ ತಟ್ಟಿತು.

ಇದೇ ಜೀವನದ ಸತ್ಯ.
ಆದ್ದರಿಂದ...

ನಿಮ್ಮ ಸಂಗಾತಿಯೇ ಮುಖ್ಯ.

ಇದು ಹೆಂಡತಿಯರಿಗಷ್ಟೇ ಅಲ್ಲ, ಗಂಡಂದಿರಿಗೂ ಅನ್ವಯಿಸುತ್ತದೆ.......

(ಸಂಗ್ರಹ) ✍️

ನಿಮ್ಮ ಹೆಸರಿನ ಮೊದಲ ಅಕ್ಷರ ಯಾವುದು ಶೇರ್ ಮಾಡಿ...!Share the First Letter of Your Name...!  🚩🚩🚩
30/07/2020

ನಿಮ್ಮ ಹೆಸರಿನ ಮೊದಲ ಅಕ್ಷರ ಯಾವುದು ಶೇರ್ ಮಾಡಿ...!

Share the First Letter of Your Name...!

🚩🚩🚩

 #ಯುವತಿಯಾಗೆ_ಜನಿಸಿದವಳು  #ದ್ರೌಪದಿಸೇಡಿನಿಂದ ಜನಿಸಿದವಳು ದ್ರೌಪದಿಯೆಂದು ಹೇಳಲಾಗುತ್ತದೆ. ಪಾಂಚಾಲ ರಾಜ್ಯದ ರಾಜನಾದ ದ್ರುಪದನನ್ನು ದ್ರೋಣರ ಪರವ...
30/07/2020

#ಯುವತಿಯಾಗೆ_ಜನಿಸಿದವಳು

#ದ್ರೌಪದಿ
ಸೇಡಿನಿಂದ ಜನಿಸಿದವಳು ದ್ರೌಪದಿಯೆಂದು ಹೇಳಲಾಗುತ್ತದೆ. ಪಾಂಚಾಲ ರಾಜ್ಯದ ರಾಜನಾದ ದ್ರುಪದನನ್ನು ದ್ರೋಣರ ಪರವಾಗಿ ಅರ್ಜುನನು ಸೋಲಿಸಿ ಆತನಿಂದ ಅರ್ಧ ರಾಜ್ಯವನ್ನು ಪಡೆದುಕೊಳ್ಳುತ್ತಾನೆ. ಇದರಿಂದ ಕೋಪಗೊಂಡ ದ್ರುಪದನು ಅರ್ಜುನನಿಗಿಂತ ತಾನು ಶಕ್ತಿಶಾಲಿಯಾಗಬೇಕೆಂದು ಯಜ್ಞವನ್ನು ಮಾಡುತ್ತಾನೆ. ಆ ಯಜ್ಞದಲ್ಲಿ ದುಷ್ಟದ್ಯುಮ್ನನ ನಂತರ ಜನಿಸಿದ ಮಗುವೇ ಈ ದ್ರೌಪದಿ. ದ್ರೌಪದಿ ಕಪ್ಪು ಮೈಬಣ್ಣದೊಂದಿಗೆ ಯಜ್ಞದಿಂದ ಹೊರಬರುತ್ತಾಳೆ. ದ್ರುಪದನ ಮಗ ಧೃಷ್ಟದ್ಯುಮ್ನನ ನಂತರ ದ್ರೌಪದಿಯು ದ್ರುಪದನಿಗೆ ಸಿಗುತ್ತಾಳೆ. ಈಕೆ ಯಜ್ಞದಿಂದ ಹೊರಹೊಮ್ಮುವಾಗ ಮುಂದೆ ಭವಿಷ್ಯದಲ್ಲಿ ದೊಡ್ಡ ಬದಲಾವಣೆಯನ್ನೇ ತರುತ್ತಾಳೆಂದು ಸ್ವರ್ಗೀಯ ಧ್ವನಿ ಹೇಳುತ್ತದೆ. ದ್ರೌಪದಿಯು ಯಜ್ಞದಿಂದ ಬಂದ ಅನಗತ್ಯ ಮಗುವಾಗಿದ್ದು, ಈಕೆ ವಯಸ್ಕ ಹುಡುಗಿಯಂತೇ ಅಗ್ನಿಯಿಂದ ಹೊರಹೊಮ್ಮಿದವಳೇ ಹೊರತು, ಶಿಶುವಿನಂತಲ್ಲ.

ದ್ರೌಪದಿಯ ನಾನಾ ಹೆಸರುಗಳು
ಮಹಾಭಾರತದ ಪ್ರಮುಖ ಪಾತ್ರಗಳಲ್ಲಿ ಒಂದಾದ ದ್ರೌಪದಿಯು ಅನೇಕ ಹೆಸರುಗಳನ್ನು ಹೊಂದಿದ್ದಾಳೆ. ಅವಳಿಗಿರುವ ಪ್ರತಿಯೊಂದು ಹೆಸರು ಆಕೆಯ ಗುಣವನ್ನು ವಿವರಿಸುತ್ತದೆ.

ದ್ರೌಪದಿ - ದ್ರುಪದ ರಾಜನ ಮಗಳು
ಪಾಂಚಾಲಿ - ಪಾಂಚಾಲ ರಾಜ್ಯದ ರಾಜಕುಮಾರಿ
ಯಜ್ಞಸೇನಿ - ಯಜ್ಞದ ಬೆಂಕಿಯಿಂದ ಜನಿಸಿದವಳು
ಸೈರಂಧ್ರಿ - ಪರಿಣಿತ ಸೇವಕಿ
ನಿತ್ಯಾಯುವಾಣಿ - ಎಂದಿಗೂ ವಯಸ್ಸಾಗದ ಶಕ್ತಿಯನ್ನು ಹೊಂದಿದವಳು
ಮಾಲಿನಿ - ಹೂಮಾಲೆ ಕಟ್ಟುವವಳು
ಕೃಷ್ಣೆ - ಅವಳ ಕಪ್ಪು ಮೈಬಣ್ಣದ ಸಂಕೇತ

(ಸಂಗ್ರಹ) ✍️

 #ಕರ್ಣ 🌞 #ಗುರು_ಶಾಪಕ್ಕೆ_ತುತ್ತಾದ_ಕಾರಣ_ಮತ್ತು_ಸಂದರ್ಭ 👇ಒಂದು ದಿನ ಪರಶುರಾಮ  #ಕರ್ಣನ ತೊಡೆಯಮೇಲೆ ತಲೆಯಿಟ್ಟು ನಿದ್ರಿಸುತ್ತಿದ್ದಾಗ...ಇಂದ್ರ...
27/07/2020

#ಕರ್ಣ 🌞

#ಗುರು_ಶಾಪಕ್ಕೆ_ತುತ್ತಾದ_ಕಾರಣ_ಮತ್ತು_ಸಂದರ್ಭ 👇

ಒಂದು ದಿನ ಪರಶುರಾಮ #ಕರ್ಣನ ತೊಡೆಯಮೇಲೆ ತಲೆಯಿಟ್ಟು ನಿದ್ರಿಸುತ್ತಿದ್ದಾಗ...
ಇಂದ್ರನ ಆಜ್ಞೆಯ ಮೇರೆಗೆ ಅಲರ್ಕವೆಂಬ ದುಂಬಿಯೊಂದು ಬಂದು ಆತನ ತೊಡೆಯನ್ನು ಬಗಿಯಲಾರಂಭಿಸಿತು.

ಆಗ ತಾನು ಅಲುಗಾಡಿದರೆ ಗುರುವಿಗೆ ನಿದ್ರಾಭಂಗವಾದೀತೆಂದು ಎಣಿಸಿ #ಕರ್ಣ ತನಗಾದ ಅಗಾಧ ನೋವನ್ನು ಲೆಕ್ಕಿಸದೆ ಹಾಗೆಯೇ ಸಹಿಸಿಕೊಂಡಿದ್ದ.

ಅವನ ರಕ್ತದ ಸೋಂಕಿನಿಂದ ಪರಶುರಾಮ ಎಚ್ಚೆತ್ತು, ಶಿಷ್ಯನ ವರ್ತನೆಯನ್ನು ಕಂಡು ಮೆಚ್ಚಿದರೂ ಕೂಡ ಅವನು ಬ್ರಾಹ್ಮಣನಿರಲಾರನೆಂದೂ ಕ್ಷತ್ರಿಯನೇ ಇರಬೇಕೆಂದೂ ತಿಳಿದು ಕೋಪಗೊಳ್ಳುತ್ತಾರೆ.

ಆಗ #ಕರ್ಣ ನಿಗೆ ಅನಿವಾರ್ಯವಾಗಿ ಸತ್ಯ ಹೇಳಬೇಕಾಗಿ ಬಂತು.
ಆಗ ಸತ್ಯಾಂಶವನ್ನು ತಿಳಿದ ಗುರುಗಳು..

ತನ್ನ ವ್ರತಭಂಗವಾದುದಕ್ಕೆ ಕೆರಳಿದ ಪರಶುರಾಮ "ಬ್ರಾಹ್ಮಣನೆಂದು ಸುಳ್ಳುಹೇಳಿ ಶಸ್ತ್ರವಿದ್ಯೆ ಕಲಿತಿದ್ದಕ್ಕಾಗಿ ಅವಸಾನ ಕಾಲದಲ್ಲಿ ಅಂದರೆ ಅವಶ್ಯಕತೆ ಇರುವ ಸಮಯದಲ್ಲಿ ತಾನು ಅನುಗ್ರಹಿಸಿದ ಮಹಾಸ್ತ್ರಗಳಾವುವೂ ಫಲಿಸದಿರಲಿ" ಎಂದು ಕರ್ಣನಿಗೆ ಶಾಪವಿತ್ತ.

ಗುರುಶಾಪದಿಂದ ಕರ್ಣ ನಿರ್ವಿಣ್ಣನಾದ.

🚩
(ಸಂಗ್ರಹ) ✍️

 #ಕರ್ಣನ_ಜನ್ಮರಹಸ್ಯ 🌞 ಯಾದವರಲ್ಲಿ ಶೂರಸೇನ ರಾಜನ ಮಗನು ವಸುದೇವ ಹಾಗೂ  #ಪೃಥಾ ಎಂಬ ಮಗಳು ಇದ್ದಳು.ವಸುದೇವನ ಮಗ ಶ್ರೀ ಕೃಷ್ಣ.ಕುಂತಿಭೋಜನು ಶೂರಸೇ...
27/07/2020

#ಕರ್ಣನ_ಜನ್ಮರಹಸ್ಯ 🌞

ಯಾದವರಲ್ಲಿ ಶೂರಸೇನ ರಾಜನ ಮಗನು ವಸುದೇವ ಹಾಗೂ #ಪೃಥಾ ಎಂಬ ಮಗಳು ಇದ್ದಳು.
ವಸುದೇವನ ಮಗ ಶ್ರೀ ಕೃಷ್ಣ.
ಕುಂತಿಭೋಜನು ಶೂರಸೇನನ ಗೆಳೆಯನಾಗಿದ್ದನು.
ಕುಂತಿಭೋಜನು ಸಾಕಿದ್ದರಿಂದ #ಪೃಥಾಳನ್ನು #ಕುಂತಿ ಎಂದೂ ಸಹ ಕರೆಯುತ್ತಿದ್ದರು.ಅವಳು ಸುಂದರಿ ಹಾಗೂ ಗುಣವತಿ ಸಹ ಆಗಿದ್ದಳು.

ಪಾಂಡವರ ತಾಯಿ #ಕುಂತಿ ಬಾಲ್ಯದಲ್ಲಿ ದುರ್ವಾಸ ಮುನಿಗಳಿಗೆ ತನ್ನ ಆಶ್ರಮದಲ್ಲಿ ಆತಿಥ್ಯ ನೀಡಿದ್ದಳು.
ಆ ಒಂದು ಆತಿಥ್ಯದಿಂದ ಸಂತೋಷಗೊಂಡ ಋಷಿಮುನಿ ಕುಂತಿಗೆ ಮಂತ್ರದಿಂದ ಮಕ್ಕಳನ್ನು ಪಡೆಯುವ ವರವನ್ನು ನೀಡುತ್ತಾರೆ.

ಆದರೆ... #ಕುಂತಿ ಅದನ್ನು ಪರೀಕ್ಷೆ ಮಾಡಲು ಹೋಗಿ ಸೂರ್ಯ ದೇವನ ಕುರಿತು ಮಂತ್ರೋಚ್ಛಾರ ಮಾಡುತ್ತಾಳೆ. ಆಗ ಸೂರ್ಯದೇವ ಪ್ರತ್ಯಕ್ಷಗೊಂಡು ವರವನ್ನು ನೀಡುತ್ತಾನೆ.

ಇದರಿಂದ ಹೆದರಿದ #ಕುಂತಿ

"ದೇವ ಕ್ಷಮಿಸಿ ಅಜ್ಞಾನದಿಂದ ನಾನು ಮಂತ್ರವನ್ನು ಪಠಿಸಿದೆ ನಾನು ಇನ್ನೂ ಅವಿವಾಹಿತೆ ನನಗೆ ಮಗು ಬೇಡ" ಎಂದು ನುಡಿದಳು.

ಆದರೆ..ಒಮ್ಮೆ ಮಂತ್ರ ಪಠಿಸಿದ ಮೇಲೆ ಮರಳಿ ಸುಮ್ಮನೆ ಹೋಗಲು ಸಾಧ್ಯವಿಲ್ಲವೆಂದು ಅವಳಿಗೆ ಕರ್ಣ ಕವಚ ಮತ್ತು ಕುಂಡಲ ಧರಿಸಿದ ಮುದ್ದಾದ ಮಗುವನ್ನು ನೀಡುತ್ತಾನೆ. ಆ ಮಗುವೇ #ಸೂರ್ಯಪುತ್ರ,
#ದಾನವೀರ_ಕರ್ಣ.

🚩
(ಸಂಗ್ರಹ) ✍️

 #ಕರ್ಣನ_ಬಾಲ್ಯ_ಮತ್ತು_ವಿದ್ಯಾಭ್ಯಾಸ 🌞ಕುಂತಿಯು ಮಂತ್ರೋಚ್ಛಾರ ಮಾಡಿ ಸೂರ್ಯನಿಂದ ಪಡೆದ ಆ ಮಗುವನ್ನು ಸಮಾಜಕ್ಕೆ ಹೆದರಿ ಗಂಗೆಯಲ್ಲಿ ತೇಲಿ ಬಿಡುತ್...
27/07/2020

#ಕರ್ಣನ_ಬಾಲ್ಯ_ಮತ್ತು_ವಿದ್ಯಾಭ್ಯಾಸ 🌞

ಕುಂತಿಯು ಮಂತ್ರೋಚ್ಛಾರ ಮಾಡಿ ಸೂರ್ಯನಿಂದ ಪಡೆದ ಆ ಮಗುವನ್ನು ಸಮಾಜಕ್ಕೆ ಹೆದರಿ ಗಂಗೆಯಲ್ಲಿ ತೇಲಿ ಬಿಡುತ್ತಾಳೆ.

ಆ ಮಗು ಭೀಷ್ಮ ಪಿತಾಮಹರ ರಥ ಸಾರಥಿ ಅಧಿರಥ ಮತ್ತು ಅವನ ಪತ್ನಿ ರಾಧೆಯ ಕೈಗೆ ಸಿಕ್ಕು ಮಗನಾಗಿ ಸ್ವೀಕಾರ ಮಾಡಿ ಅದನ್ನು ಪಾಲನೆ ಪೊಷಣೆ ಮಾಡುತ್ತಾರೆ.

ಅಪೂರ್ವ ತೇಜೋಶಾಲಿಯಾದ ಆ ಮಗುವಿಗೆ #ವಸುಷೇಣ ಎಂಬ ಹೆಸರನ್ನು ಇಡುತ್ತಾರೆ.ಇದಲ್ಲದೆ ಅವನನ್ನು ಸೂತಪುತ್ರ,ರಾಧೇಯ,ಕಾನೀನನೆಂಬ ಹೆಸರು ಕೂಡ ಉಂಟು.

ಆದರೆ..ದಿನಗಳೆದಂತೆ..

ಎದೆಯಲ್ಲಿ #ಕವಚ ಮತ್ತು ಕಿವಿಯಲ್ಲಿ #ಕುಂಡಲವನ್ನು ಪಡೆದುಕೊಂಡು ಜನಿಸಿದ ಮಗು ಹಾಗಾಗಿ ಆತನ ಹೆಸರು #ಕರ್ಣ ಎಂದು ಜಗತ್ಪ್ರಸಿದ್ಧಿಗೊಳ್ಳುತ್ತದೆ.

ಉಳಿದವರಂತೆ ಇರದ ಈ ಮಗು ತುಂಬಾ ಕ್ಷಾತ್ರ ತೇಜದಿಂದ ಬೆಳಿಯುತ್ತಿರುತ್ತಾನೆ. ಅವನಲ್ಲಿ ಹರಿಯುತ್ತಿರುವುದು ಕ್ಷತ್ರಿಯ ರಕ್ತ ಹಾಗಾಗಿ ಆತ ವಿದ್ಯೆಗಾಗಿ ಪರಿತಪಿಸುತ್ತ ದ್ರೋಣಾಚಾರ್ಯರ ಹತ್ತಿರ ಹೊಗುತ್ತಾನೆ.

ಆದರೆ...ಗುರು ದ್ರೋಣಾಚಾರ್ಯರು ನಾನು ಕೇವಲ ಕುರುವಂಶದವರಿಗೆ ಮಾತ್ರ ವಿದ್ಯೆಕಲಿಸುವೆ. ಸೂತಪುತ್ರನಿಗೆ ನಾನು ಕಲಿಸಲಾರೆ ಎಂದು ಹೇಳಿದ್ದಕ್ಕೆ ಕರ್ಣ ನೇರವಾಗಿ ಕ್ಷತ್ರಿಯರನ್ನು ದ್ವೇಷಿಸುತ್ತಿದ್ದ. ಕೇವಲ ಬ್ರಾಹ್ಮಣರಿಗೆ ಮಾತ್ರ ವಿದ್ಯೆಯನ್ನು ಕಲಿಸುವ ಪರಶುರಾಮರ ಹತ್ತಿರ ನಾನು ಬ್ರಾಹ್ಮಣ ಪುತ್ರ ಎಂದು ಸುಳ್ಳು ಹೇಳಿ ವಿದ್ಯೆಯನ್ನು ಕಲಿಯುತ್ತಾನೆ.

ಆದರೆ.. ಒಂದು ದಿನ ಗುರು ಪರಶುರಾಮರಿಗೆ ಇವನು ಬ್ರಾಹ್ಮಣನಲ್ಲ ಕ್ಷತ್ರಿಯ ಎಂದು ಗೊತ್ತಾದಾಗ ಕೋಪದಲ್ಲಿ ಕರ್ಣನಿಗೆ..
"ನಿನಗೆ ಸರಿಯಾದ ಸಮಯದಲ್ಲಿ ನಿನ್ನ ವಿದ್ಯೆ ನಿನ್ನ ಸ್ಮರಣೆಗೆ ಬಾರದಿರಲಿ" ಎಂದು ಶಾಪವನ್ನು ನೀಡುತ್ತಾರೆ.

🚩
(ಸಂಗ್ರಹ) ✍️

 #ಕರ್ಣ_ಮತ್ತು_ದುರ್ಯೋಧನನ #ಸ್ನೇಹದ_ಶುಭಾರಂಭ 😍👇 #ಕರ್ಣ ಪರಶುರಾಮರ ಕೋಪಕ್ಕೆ ತುತ್ತಾಗಿ ಶಾಪ ಪಡೆದ ವೇಳೆಯಲ್ಲಿ...ಹಸ್ತಿನಾವತಿಯಲ್ಲಿ ಪಾಂಡವರಿಗೂ...
27/07/2020

#ಕರ್ಣ_ಮತ್ತು_ದುರ್ಯೋಧನನ
#ಸ್ನೇಹದ_ಶುಭಾರಂಭ 😍👇

#ಕರ್ಣ ಪರಶುರಾಮರ ಕೋಪಕ್ಕೆ ತುತ್ತಾಗಿ ಶಾಪ ಪಡೆದ ವೇಳೆಯಲ್ಲಿ...
ಹಸ್ತಿನಾವತಿಯಲ್ಲಿ ಪಾಂಡವರಿಗೂ ಕೌರವರಿಗೂ #ದ್ರೋಣಾಚಾರ್ಯರು ಶಸ್ತ್ರವಿದ್ಯೆಯನ್ನು ಕಲಿಸುತ್ತಿದ್ದರು.

ಆ ರಾಜಪುತ್ರರ ವಿದ್ಯಾಪರಿಣತಿಯನ್ನು ಪ್ರದರ್ಶಿಸುವುದಕ್ಕಾಗಿ ಸಕಲ ಏರ್ಪಾಡುಗಳನ್ನು ಮಾಡಿಕೊಂಡರು.

ಆ ಸಭೆಯಲ್ಲಿ ಪಾಂಡವ ಮತ್ತು ಕೌರವರ ಶಸ್ತ್ರಕೌಶಲ ತಾನೇ ತಾನಾಗಿ ಮೆರೆಯಲಾರಂಭಿಸಿತ್ತು.

ಅರ್ಜುನ ರಂಗಕ್ಕೆ ಪ್ರವೇಶಿಸುವುದೇ ತಡ, ಆತನನ್ನು ಅದ್ವಿತೀಯನೆಂದು ಗುರುಗಳು ಮೊದಲ್ಗೊಂಡು ಎಲ್ಲರೂ ಪ್ರಶಂಸಿಸಿದರು.

ಈ ಮಾತುಗಳನ್ನು ಆಲಿಸಿದ #ಕರ್ಣ ಮುಂದೆ ಬಂದು ತಾನು ಅರ್ಜುನನನ್ನು ಎದುರಿಸುವುದಾಗಿ ಸವಾಲುಹಾಕಿದ.

ಆಗ ಅಲ್ಲಿಯೇ ಇದ್ದ #ಕೃಪಾಚಾರ್ಯ ಎದ್ದುನಿಂತು ಸೂತಪುತ್ರನಾದ ಕರ್ಣನನ್ನು ಅರ್ಜುನನೊಂದಿಗೆ ಸರಿಸಮನಾಗಿ ಭಾವಿಸಲು ಸಾಧ್ಯವಿಲ್ಲವೆಂದು ವಿರೋಧಿಸಿದ.

ಈ ಅಸೂಯೆಯ ಮಾತುಗಳನ್ನು ಕೇಳಿ, ಆಗತಾನೆ ಭೀಮನಿಂದ ಪರಾಜಿತನಾಗಿದ್ದ #ದುರ್ಯೋಧನ ಮುಂದೆ ಬಂದು #ಕರ್ಣನ ಪರವಾಗಿ ವಾದಿಸಿ, ಅವನಿಗೆ ಅಂಗರಾಜ್ಯಾಭಿಷೇಕವನ್ನಿತ್ತು ಗೌರವಿಸಿದ.

ಅಲ್ಲಿಂದ #ಕರ್ಣ_ದುರ್ಯೋಧನರ ಸ್ನೇಹ ತುಂಬಾ ಗಾಢವಾಗಿ ಬೆಳೆಯಲಾರಂಭಿಸಿತು.

🚩
(ಸಂಗ್ರಹ) ✍️

Address

Masagalli Hosanagara
Shimoga
577418

Website

Alerts

Be the first to know and let us send you an email when ನಮ್ಮ ಮಸಗಲ್ಲಿ ಶಾಲೆ posts news and promotions. Your email address will not be used for any other purpose, and you can unsubscribe at any time.

Shortcuts

Share

Category