Govt. HPS Rajola K

Govt. HPS Rajola K Dise Code 29040908302
Rajola(k)
Irnapalli
Sedam
Kaluburgi 585318 ಶಿಕ್ಷಣ ಪ್ರತಿ ಮಗುವಿನ ಹಕ್ಕು
ಎಲ್ಲರೂ ಕಲಿಯೋಣ ಎಲ್ಲರೂ ಬೆಳೆಯೋಣ

25/10/2021

ಹಸಿರೇ ನಮ್ಮ ಉಸಿರು

Save Water
Save Earth

23/10/2021

We feel greatly honoured and esteemed to extend our heartfelt thanks to the entire team of TEACHMINT for your wholehearted support and encouragement . We always remain grateful for your technological support which will greatly enhance our educational progress.

Give your vote to our school during your busy time.Your one vote can change the future of our government school children...
16/08/2021

Give your vote to our school during your busy time.
Your one vote can change the future of our government school children
Just liking does not get vote.
Please vote using the link

Vote for Your Favorite Teacher to Win!

ನನ್ನ ಪ್ರೀತಿಯ ಫೇಸ್ಬುಕ್ ಬೆಂಬಲಿಗರೇPlease ನಮ್ಮ ಶಾಲೆಗಾಗಿ ನಿಮ್ಮದೊಂದು ವೋಟ್ ನೀಡಿ ಮೊದಲು ನೀವು ನಾನು ಕಳುಹಿಸಿರುವ ಲಿಂಕನ್ನು ಒತ್ತಬೇಕು.  ...
16/08/2021

ನನ್ನ ಪ್ರೀತಿಯ ಫೇಸ್ಬುಕ್ ಬೆಂಬಲಿಗರೇ
Please ನಮ್ಮ ಶಾಲೆಗಾಗಿ ನಿಮ್ಮದೊಂದು ವೋಟ್ ನೀಡಿ

ಮೊದಲು ನೀವು ನಾನು ಕಳುಹಿಸಿರುವ ಲಿಂಕನ್ನು ಒತ್ತಬೇಕು. ಆಗ ನಿಮಗೆ ವೋಟ್ ಎನ್ನುವ ಹಸಿರು ಬಣ್ಣದ ಬಾಕ್ಸ್ ಕಾಣಿಸುತ್ತದೆ, ಅದರೊಂದಿಗೆ ಇನ್ನೊಂದು ಖಾಲಿ ಬಾಕ್ಸ್ ಕಾಣಿಸುತ್ತದೆ.
ಆ ಖಾಲಿ ಬಾಕ್ಸ್ ನಲ್ಲಿ ನೀವು ನಿಮ್ಮ ಇಮೇಲ್ ಐಡಿ ಅನ್ನು ನಮೂದಿಸಬೇಕು, ನಂತರ VOTE ಎಂದಿರುವ ಬಾಕ್ಸ್ ಅನ್ನು ಒತ್ತಬೇಕು.ಆಗ ಅದು Allow Pop up ಎಂದು ತೋರಿಸುತ್ತದೆ, ಅದನ್ನು ನೀವು allow ಮಾಡಬೇಕು. ಕೆಲವೊಮ್ಮೆ Allow Pop up ಎಂದು ಬರುವುದಿಲ್ಲ.
ನಂತರ ಅದು ನೇರವಾಗಿ ನಿಮ್ಮ ಫೇಸ್ಬುಕ್ ಲಾಗಿನ್ ಗೆ ಹೋಗುತ್ತದೆ.
ಹೋಗದಿದ್ದಲ್ಲಿ refresh ಮಾಡಿ, ಪುನಃ ಫೇಸ್ಬುಕ್ email id ಹಾಕಿ vote ಬಾಕ್ಸ್ ಅನ್ನು ಒತ್ತಿ, ಆಗ ಫೇಸ್ಬುಕ್ ಲಾಗಿನ್ ಗೆ ಹೋಗಲು ನಿಮ್ಮ ಅನುಮತಿಯನ್ನು ಕೇಳುತ್ತದೆ. ನೀವು ಅನುಮತಿಸಬೇಕು.
ನಿಮ್ಮ ಫೇಸ್ ಬುಕ್ ಲಾಗಿನ್ ಆದ ನಂತರವೇ ನೀವು ಚಲಾಯಿಸಿರುವ VOTE ಚಲಾಯಿಸಲ್ಪಡುತ್ತದೆ.
ನೀವು ಚಲಾಯಿಸುವ ಮೊದಲು ಒಟ್ಟು ಇದ್ದ ಮತಗಳ ಸಂಖ್ಯೆಯನ್ನು ಗಮನಿಸಿ, ನೀವು ಚಲಾಯಿಸಿದ ನಂತರ ಮೊದಲಿರುವ ಸಂಖ್ಯೆಗಿಂತ ಒಂದು ಅಧಿಕ ಮತ ಸೇರ್ಪಡೆಗೊಂಡಿದ್ದರೆ, ನಿಮ್ಮ ಮತ ಚಲಾವಣೆ ಆಗಿದೆ ಎಂದು..
ನಿಮ್ಮ ಮತ ಚಲಾವಣೆಯಾಗಿದೆಯೇ ಅಥವಾ ಇಲ್ಲವೇ ಎಂದು ಪರೀಕ್ಷಿಸಲು ನೀವು ಮತ್ತೊಮ್ಮೆ ನಿಮ್ಮ ಲಿಂಕ್ ಅನ್ನು ಒತ್ತಿದಾಗ ಅಲ್ಲಿ ಕೇವಲ ಚಲಾವಣೆಯಾದ ಮತಗಳು ಮಾತ್ರ ಕಾಣಿಸುತ್ತದೆ ಹಾಗೂ ನಿಮ್ಮ E-mail ಮತ್ತು ವೋಟ್ ಎನ್ನುವ ಬಾಕ್ಸ್ ಕಾಣಿಸುವುದಿಲ್ಲ
ನಿಮ್ಮ ಮತ ಚಲಾವಣೆ ಆಗದಿದ್ದಲ್ಲಿ ಪುನಃ VOTE ಎನ್ನುವ ಹಸಿರು ಬಣ್ಣದ ಬಾಕ್ಸ್ ಕಾಣಿಸುತ್ತದೆ.

ಆಗ ನೀವು ನಾನು ಹಿಂದೆ ಹೇಳಿದ ಹಾಗೆ ಪುನಹ ಇಮೇಲ್ ಐಡಿಯನ್ನು ನಮೂದಿಸಿ ಮತವನ್ನು ಚಲಾಯಿಸಬೇಕು.

ಕೇವಲ like ಮಾಡುವುದರಿಂದ vote ಸಿಗುವುದಿಲ್ಲ. ದಯವಿಟ್ಟು ಲಿಂಕ್ ಅನ್ನು ಬಳಸಿ ವೋಟ್ ಮಾಡಿ

Vote for Your Favorite Teacher to Win!

09/08/2021

Vote for Your Favorite Teacher to Win!

ಆತ್ಮೀಯ ಶಿಕ್ಷಕರೇ/ಪಾಲಕರೇ/ಪೋಷಕರೇ6ರಿಂದ 10ನೇ ತರಗತಿ ಓದುತ್ತಿರುವ ಸರ್ಕಾರಿ ಶಾಲಾ ಮಕ್ಕಳಿಗಾಗಿ ಉಚಿತವಾಗಿ ಗಣಿತ ಮತ್ತು ವಿಜ್ಞಾನ ವಿಷಯಗಳ ಆನ್ಲ...
06/08/2021

ಆತ್ಮೀಯ ಶಿಕ್ಷಕರೇ/ಪಾಲಕರೇ/ಪೋಷಕರೇ
6ರಿಂದ 10ನೇ ತರಗತಿ ಓದುತ್ತಿರುವ ಸರ್ಕಾರಿ ಶಾಲಾ ಮಕ್ಕಳಿಗಾಗಿ ಉಚಿತವಾಗಿ ಗಣಿತ ಮತ್ತು ವಿಜ್ಞಾನ ವಿಷಯಗಳ ಆನ್ಲೈನ್ ತರಗತಿಗಳು ಪ್ರಾರಂಭವಾಗುತ್ತಿವೆ.
ಅತ್ಯಂತ ತ್ವರಿತವಾಗಿ ನೊಂದಣಿ ಮಾಡಿ
https://bit.ly/3xrXTZu
👨‍👨‍👧‍👧👨‍👩‍👦‍👦👨‍👩‍👧‍👦👩‍👩‍👦👨‍👩‍👧‍👧👨‍👩‍👦‍👦
ನಿಮ್ಮ ನೆಚ್ಚಿನ ಪಾಲಕ ಮಿತ್ರರಿಗೆ ಶೇರ್ ಮಾಡಿ
🙏🏻🙏🏻🙏🏻🙏🏻🙏🏻
ಸಿರಿಗನ್ನಡಂ ಗೆಲ್ಗೆ
ಸಿರಿಗನ್ನಡಂ ಬಾಳ್ಗೆ

*99.99%* are fail to Comment👉🏻it's Challenge to all👇🏼Happy Comment 🌞day
30/07/2021

*99.99%* are fail to Comment
👉🏻it's Challenge to all👇🏼
Happy Comment 🌞day

ಕಾರ್ಗಿಲ್‌ ಯುದ್ಧ... ಈ ಪದವೇ ಭಾರತೀಯರನ್ನು ರೋಮಾಂಚನಗೊಳಿಸುತ್ತದೆ. ಭಾರತೀಯ ಸೈನಿಕರ ಹೋರಾಟದ ಛಲ, ಶಕ್ತಿಗೆ ಸಾಕ್ಷಿಯಾದ ಯುದ್ಧವದು. ಅಲ್ಲದೆ ಪಾ...
26/07/2021

ಕಾರ್ಗಿಲ್‌ ಯುದ್ಧ... ಈ ಪದವೇ ಭಾರತೀಯರನ್ನು ರೋಮಾಂಚನಗೊಳಿಸುತ್ತದೆ. ಭಾರತೀಯ ಸೈನಿಕರ ಹೋರಾಟದ ಛಲ, ಶಕ್ತಿಗೆ ಸಾಕ್ಷಿಯಾದ ಯುದ್ಧವದು. ಅಲ್ಲದೆ ಪಾಕಿಸ್ತಾನ ಶಾಂತಿಯ ಮಾತಿನ ಬೆನ್ನಲ್ಲೇ ಭಾರತಕ್ಕೆ ಇರಿದ ಚೂರಿಯ ಗಾಯದ ಗುರುತೇ ಈ ಕಾರ್ಗಿಲ್‌. ಚಳಿಗಾಲದಲ್ಲಿ ಭಾರತದ ಪ್ರದೇಶವನ್ನು ಅಕ್ರಮಿಸಿಕೊಂಡಿದ್ದ ಪಾಕಿಸ್ತಾನಕ್ಕೆ ಭಾರತ ಗಡಿಯಲ್ಲಿ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೊಟ್ಟಹೊಡೆತದ ನೆನಪಿನ ದಿನವೇ ಕಾರ್ಗಿಲ್‌ ವಿಜಯ್‌ ದಿವಸ್‌.

ಕಾರ್ಗಿಲ್‌ ಎಲ್ಲಿದೆ?

ಭಾರತದ ಮುಕುಟ ಮಣಿಯಂತಿರುವ ಕಾಶ್ಮೀರದಲ್ಲಿದೆ. ಇಂದಿನ ಕೇಂದ್ರಾಡಳಿತ ಪ್ರದೇಶವಾದ ಲಡಾಕ್‌ನ ಒಂದು ತಹಸೀಲ್‌ ಈ ಕಾರ್ಗಿಲ್‌. ಹಿಮಾಲಯದ ಬೆಟ್ಟಗುಡ್ಡಗಳಿಂದ ಆವೃತವಾದ ಪ್ರದೇಶ. ಕಾರ್ಗಿಲ್‌ ಕಾಶ್ಮೀರದ ರಾಜಧಾನಿ ಶ್ರೀನಗರದಿಂದ 205 ಕಿ.ಮೀ. ದೂರದಲ್ಲಿದೆ.ಲೇಹ್‌ ಮತ್ತು ಶ್ರೀನಗರವನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 1 ಕಾರ್ಗಿಲ್‌ ಮೂಲಕ ಹಾದು ಹೋಗುತ್ತದೆ. ನೆನಪಿರಲಿ ಈ ಪ್ರದೇಶದಲ್ಲಿರುವ ಏಕೈಕ ಹೆದ್ದಾರಿ ಇದೊಂದೆ. ಅಲ್ಲದೆ ವಿಶ್ವದ ಅತ್ಯಂತ ಎತ್ತರದಲ್ಲಿರುವ ಯುದ್ಧ ಭೂಮಿ ಸಿಯಾಚಿನ್‌ಗೂ ಸಂಪರ್ಕ ಕಲ್ಪಿಸುತ್ತದೆ ಈ ಹೆದ್ದಾರಿ.

1999ರಲ್ಲಿ ಆಗಿದ್ದೇನು?

ಕಾರ್ಗಿಲ್‌ ಪ್ರದೇಶದಲ್ಲಿ ಭಾರತ ಮತ್ತು ಪಾಕಿಸ್ತಾನದ ಲೈನ್‌ ಆಫ್‌ ಕಂಟ್ರೋಲ್‌ (ಎಲ್‌ಒಸಿ) ಇದೆ. ಇಲ್ಲಿ ಚಳಿಗಾಲದಲ್ಲಿ ಉಷ್ಣಾಂಶ ಮೈನಸ್‌ 48 ಡಿಗ್ರಿ ಸೆಲ್ಸಿಯಸ್‌ವರೆಗೂ ಇಳಿಯುತ್ತದೆ. ಇದರಿಂದ ಇಲ್ಲಿ ಗಡಿ ಕಾಯುವುದು ಭಾರತಕ್ಕೆ ಸವಾಲಿನ ಕೆಲಸ. ಚಳಿಗಾಲದಲ್ಲಿ ಭಾರತೀಯ ಸೈನಿಕರು ಇಲ್ಲಿಂದ ಸ್ಥಳಾಂತರಗೊಳ್ಳುತ್ತಾರೆ. ಚಳಿಗಾಲ ಮುಗಿದ ಬಳಿಕ ಇಲ್ಲಿಗೆ ಮತ್ತೆ ಕಾವಲು ಕಾಯಲು ಹೋಗುವುದು 1999ರ ವರೆಗೂ ಇದ್ದ ಪದ್ಧತಿ. ಈ ಸಂದರ್ಭವನ್ನೇ ಬಳಸಿಕೊಂಡ ಪಾಕಿಸ್ತಾನ, ಕಾಶ್ಮೀರದ ಹೋರಾಟಗಾರರ ಹೆಸರಿನಲ್ಲಿ ತನ್ನದೇ ಸೈನಿಕರು, ಪ್ಯಾರಾಮಿಲಿಟರಿ ಪಡೆಯನ್ನು ಬಳಸಿ ಭಾರತದ ಪ್ರಮುಖ ಭಾಗಗಳನ್ನು ತನ್ನ ವಶಕ್ಕೆ ಪಡೆದುಕೊಂಡಿತ್ತು. ಅಲ್ಲದೆ 107 ಕಿ.ಮೀ. ದೂರದಲ್ಲಿರುವ ಸ್ಕರ್ದು (ಪಾಕ್‌ ಅಕ್ರಮಿತ ಪ್ರದೇಶ)ವಿನಿಂದ ಕಾರ್ಗಿಲ್‌ನ ಗುಡ್ಡಗಾಡು ಪ್ರದೇಶದಲ್ಲಿ ಅಡಗಿ ಕುಳಿತ ಉಗ್ರರಿಗೆ ಶಸ್ತಾರಸ್ತ್ರ ಪೂರೈಸಲು ಅನುಕೂಲವಾಗುತ್ತದೆ ಎಂದು ಪಾಕ್‌ ಯೋಜಿಸಿತ್ತು.

ಶಾಂತಿ ಮಂತ್ರದ ಬೆನ್ನಲ್ಲೇ ಪಾಕಿಸ್ತಾನದ ಮೋಸದಾಟ

ಅಂದಿನ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರು 1999ರ ಫೆಬ್ರವರಿಯಲ್ಲಿ ಪಾಕಿಸ್ತಾನಕ್ಕೆ ಗಡಿಯ ಮೂಲಕವೇ ತೆರಳಿ ಶಾಂತಿ ಮಂತ್ರ ಪಠಿಸಿದ್ದರು. ಅಲ್ಲದೆ ಕಾಶ್ಮೀರದ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ನಡೆಸಿದ್ದರು. ದೆಹಲಿ-ಲಾಹೋರ್‌ ನಡುವೆ ಶಾಂತಿಯ ಸೂಚಕವಾಗಿ ಬಸ್‌ ಸಂಚಾರಕ್ಕೆ ಚಾಲನೆ ನೀಡಿದ್ದರು. ಇದಾದ ಕೆಲವೇ ದಿನಗಳಲ್ಲಿ ಪಾಕಿಸ್ತಾನ ಕಾರ್ಗಿಲ್‌ನಲ್ಲಿ ತನ್ನ ಕುಚೇಷ್ಟೆಯನ್ನು ಪ್ರದರ್ಶಿಸಿತು.

ಕುರಿಗಾಹಿಗಳು ನೀಡಿದ ಸುಳಿವು

1999ರ ಮೇ 3ರಂದು ಕಾರ್ಗಿಲ್‌ ಗುಡ್ಡಗಾಡು ಪ್ರದೇಶದಲ್ಲಿ ಕುರಿ ಮೇಯಿಸಲು ಹೋಗಿದ್ದ ಕುರಿಗಾಹಿಗಳು ನಮ್ಮ ಪ್ರದೇಶದಲ್ಲಿ ಪಾಕಿಸ್ತಾನಿಗಳ ಇರುವಿಕೆಯ ಸುಳಿವನ್ನು ಭಾರತದ ಸೈನ್ಯಕ್ಕೆ ನೀಡಿದರು. ಮೇ 5ರಂದು ಭಾರತೀಯ ಸೇನೆಯ ಪೆಟ್ರೋಲಿಂಗ್‌ ತಂಡವು ಕಾರ್ಗಿಲ್‌ ಪ್ರದೇಶದ ಸ್ಥಿತಿ ಅವಲೋಕಿಸಲು ತೆರಳಿದಾಗ ಅವರನ್ನು ಸೆರೆ ಹಿಡಿದ ಪಾಕ್‌ ಸೈನಿಕರು, ನಮ್ಮ ಸೈನಿಕರನ್ನು ಅತ್ಯಂತ ಹೀನವಾಗಿ ಕೊಂದುಹಾಕಿದರು. ಇದಾದ ಬಳಿಕ ಸಂಪೂರ್ಣವಾಗಿ ಎಚ್ಚೆತ್ತ ಭಾರತೀಯ ಸೇನೆಯು ಯುದ್ಧಕ್ಕೆ ಸಜ್ಜಾಯಿತು. ಇಡೀ ಕಾರ್ಯಾಚರಣೆಗೆ ಆಪರೇಷನ್‌ ವಿಜಯ್‌ ಎಂದು ಹೆಸರಿಸಿ ಯುದ್ಧಕ್ಕೆ ಇಳಿಯಿತು.

ಇದು ಜಗತ್ತಿನ ಅತ್ಯಂತ ವಿಶಿಷ್ಟ ಯುದ್ಧ ಏಕೆ?

ಬೆಟ್ಟದ ಮೇಲೆ ಕುಳಿತಿದ್ದ ಪಾಕ್‌ಗೆ ಯುದ್ಧ ಮಾಡಲು ಹೆಚ್ಚು ಅನುಕೂಲಗಳಿದ್ದವು. ಬೆಟ್ಟಗಳ ತಳಭಾಗದಿಂದ ಮೇಲಕ್ಕೆ ಹೋಗುವುದು ಭಾರತೀಯ ಸೈನಿಕರಿಗೆ ಅತ್ಯಂತ ಸವಾಲಿನ ಕೆಲಸವಾಗಿತ್ತು. ಮದ್ದುಗುಂಡುಗಳನ್ನು ಹೊತ್ತು ಬೆಟ್ಟಹತ್ತಿ ಪಾಕ್‌ ಸೈನಿಕರನ್ನು ಬಗ್ಗು ಬಡಿದದ್ದು, ಪ್ರಪಂಚದ ಯುದ್ಧ ಇತಿಹಾಸದಲ್ಲಿ ಒಂದು ಮೈಲುಗಲ್ಲು. ಪಾಯಿಂಟ್‌ 5353ಯನ್ನು ಮರುವಶ ಮಾಡಿಕೊಂಡ ಭಾರತೀಯ ಸೇನೆಯು ಬಳಿಕ ಬಟಾಲಿಕ್‌ ಪ್ರದೇಶವನ್ನು ತನ್ನದಾಗಿಸಿಕೊಂಡಿತು. ಟೈಗರ್‌ ಹಿಲ್‌ ಪ್ರದೇಶವನ್ನು ವಶಕ್ಕೆ ಪಡೆದಿದ್ದು ಭಾರತೀಯ ಸೇನೆಗೆ ಸಿಕ್ಕಿ ಅತಿ ದೊಡ್ಡ ಜಯ. ಬಳಿಕ ಇನ್ನಿತರ ಪ್ರದೇಶವನ್ನು ಒಂದೊಂದಾಗಿ ತನ್ನದಾಗಿಸಿಕೊಂಡ ಭಾರತೀಯ ಸೇನೆಯು ತನ್ನ ತಾಕತ್ತು ಏನು ಎಂಬುದನ್ನು ಪಾಕಿಸ್ತಾನಕ್ಕಷ್ಟೇ ಅಲ್ಲ, ಇಡೀ ಪ್ರಪಂಚಕ್ಕೆ ತೋರಿಸಿಕೊಟ್ಟಿತು.

ಆಪರೇಷನ್‌ ಸಫೇದ್‌ ಸಾಗರ್‌

ಕಾರ್ಗಿಲ್‌ ಯುದ್ಧದ ವೇಳೆ ಕಾಶ್ಮೀರದ ಪಾಕ್‌ ಆಕ್ರಮಿತ ಪ್ರದೇಶಗಳ ಮೇಲೆ ಭಾರತೀಯ ವಾಯು ಸೇನೆಯು ಆಪರೇಷನ್‌ ಸಫೇದ್‌ ಸಾಗರ್‌ ಹೆಸರಲ್ಲಿ ಮೇ 26ರಂದು ದಾಳಿ ಆರಂಭಿಸಿತು. ಎಂಐಜಿ 21, 27 ಎರಡು ಯುದ್ಧ ವಿಮಾನಗಳನ್ನು ಭಾರತ ಕಳೆದುಕೊಂಡಿತು. ಮೇ 27ರಂದು ಎಂಐಜಿ-27 ಯುದ್ಧ ವಿಮಾನವನ್ನು ಪಾಕಿಸ್ತಾನ ಹೊಡೆದುರಳಿಸಿತು. ಅದರಲ್ಲಿದ್ದ ಲೆಫ್ಟಿನೆಂಟ್‌ ಕಂಬಂಪತಿ ನಚಿಕೇತ ಅವರನ್ನು ಪಾಕ್‌ ಸೆರೆ ಹಿಡಿಯಿತು. ಯುದ್ಧದ ಬಳಿಕ ಅವರನ್ನು ಬಿಡುಗಡೆ ಮಾಡಿತು.

ಆಪರೇಷನ್‌ ತಳವಾರ್‌

ನೌಕಾ ಪಡೆಯು 'ಆಪರೇಷನ್‌ ತಳವಾರ್‌' ಹೆಸರಿನಲ್ಲಿ ಪಾಕಿಸ್ತಾನದ ವಾಣಿಜ್ಯ ನಗರ ಕರಾಚಿಯ ಮೇಲೆ ಕಣ್ಣಿಟ್ಟಿತ್ತು. ಅರಬ್ಬಿ ಸಮುದ್ರದಲ್ಲಿ ತನ್ನ ಹಿಡಿತ ಹೆಚ್ಚಿಸಿದ್ದ ನೌಕಾ ಪಡೆಯು ಪಾಕಿಸ್ತಾನಕ್ಕೆ ಪೆಟ್ರೋಲಿಯಂ ಉತ್ಪನ್ನ ಹೋಗದಂತೆ ತಡೆದಿತ್ತು. ಒಂದು ವೇಳೆ ಯುದ್ಧ ಇನ್ನು 10 ದಿನ ಮುಂದುವರಿದಿದ್ದರೂ ಪಾಕಿಸ್ತಾನದ ಸ್ಥಿತಿ ಅಧೋಗತಿಗೆ ತಲುಪುತ್ತಿತ್ತು. ಏಕೆಂದರೆ ಪೆಟ್ರೋಲಿಯಂ ಉತ್ಪನ್ನಗಳೇ ಪಾಕಿಸ್ತಾನದಲ್ಲಿ ಮುಗಿಯುವ ಹಂತಕ್ಕೆ ಬಂದಿದ್ದವು ಎಂದು ಅಂದಿನ ಪಾಕ್‌ ಪ್ರಧಾನಿ ನವಾಜ್‌ ಶರೀಫ್‌ ಹೇಳಿಕೊಂಡಿದ್ದರು.

ಜುಲೈ 14ರಂದು ಅಂದಿನ ಪ್ರಧಾನಿ ವಾಜಪೇಯಿ ಅವರು ಯುದ್ಧದಲ್ಲಿ ಭಾರತ ಗೆದ್ದಿದೆ ಎಂದು ಘೋಷಿಸಿದರು. ಜುಲೈ 24ರಂದು ಭಾರತೀಯ ಸೇನೆಯು ಕಾರ್ಗಿಲ್‌ ಯುದ್ಧ ಮುಗಿದ ಬಗ್ಗೆ ಅಧಿಕೃತ ಘೋಷಣೆ ಮಾಡಿತು. ಬಳಿಕ ಪ್ರತಿವರ್ಷ ಜೂನ್‌ 26ರಂದು ವಿಜಯ್‌ ದಿವಸ್‌ ಆಚರಣೆ ಆರಂಭವಾಯಿತು.

ಪಾಕ್‌ ಈ ಯುದ್ಧ ಆರಂಭಿಸಿದ್ದೇಕೆ?

- ಕಾರ್ಗಿಲ್‌ ಪ್ರದೇಶವನ್ನು ಹೋರಾಟಗಾರರು ವಶಕ್ಕೆ ಪಡೆದಿದ್ದಾರೆ, ಹಾಗಾಗಿ ಕಾಶ್ಮೀರವನ್ನು ಸ್ವತಂತ್ರ ದೇಶ ಎಂದು ಘೋಷಿಸಲು ಭಾರತದ ಮೇಲೆ ಅಂತಾರಾಷ್ಟ್ರೀಯ ಒತ್ತಡ ಸೃಷ್ಟಿಸುವುದು.

- ಭಾರತವು ವಿಶ್ವದ ಅತಿ ಎತ್ತರದ ಯುದ್ಧ ಪ್ರದೇಶವಾದ ಸಿಯಾಚಿನ್‌ನಲ್ಲಿರುವ ತನ್ನ ಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳುವಂತೆ ಮಾಡಲು ಪಾಕ್‌ ಯೋಜಿಸಿತ್ತು. ಏಕೆಂದರೆ ಈ ಪ್ರದೇಶ ಎರಡೂ ದೇಶಗಳ ಆಯಾಕಟ್ಟಿನ ಜಾಗದಲ್ಲಿದ್ದು, ಮಹತ್ವದ ಪ್ರದೇಶವಾಗಿದೆ.

- ಕಾರ್ಗಿಲ್‌ನಲ್ಲಿ ಎನ್‌ಎಚ್‌-1 ಹಾದು ಹೋಗುತ್ತದೆ. ಈ ಹೆದ್ದಾರಿಯು ಶ್ರೀನಗರ ಮತ್ತು ಲೇಹ್‌ ಅನ್ನು ಸಂಪರ್ಕಿಸುವ ಏಕೈಕ ಮಾರ್ಗ. ಇದರ ಮೇಲೆ ಹಿಡಿತ ಸಾಧಿಸಿದರೆ ಭಾರತವನ್ನು ತನಗೆ ಬೇಕಾದಂತೆ ಬಗ್ಗಿಸಬಹುದು ಎಂಬ ಕಲ್ಪನೆ ಪಾಕಿಸ್ತಾನಕ್ಕಿತ್ತು. ಆದರೆ ಅದು ಸಂಪೂರ್ಣ ವಿಫಲವಾಯಿತು.

- ಇಷ್ಟೆಲ್ಲಾ ಘಟನೆ ನಡೆಯುತ್ತಿದ್ದರೂ ಭಾರತದ ಸಂಯಮವನ್ನು ವಿಶ್ವವೇ ಮೆಚ್ಚಿತು. ಏಕೆಂದರೆ ತನ್ನ ಪ್ರದೇಶವನ್ನು ಮಾತ್ರ ವಶಕ್ಕೆ ಪಡೆದ ಭಾರತ ಒಮ್ಮೆಯೂ ಕೂಡ ಗಡಿ ದಾಟಿ ಪಾಕಿಸ್ತಾನದ ಮೇಲೆ ಮುಗಿಬೀಳಲಿಲ್ಲ.

25/07/2021

There’s no Indian women’s team at Tokyo 2020 – only Deepika Kumari will shoot at the Olympics – but the talent is definitely there for the future. 💪🇮🇳

25/07/2021

Tokyo2020, india, Olympics, India in Tokyo, India, Tokyo2020 participents, Olympics Participentce, India Olympics, India in Tokyo, 2020, Gold Medal

ಟೋಕಿಯೋ ಒಲಿಂಪಿಕ್ ನಲ್ಲಿ ಪದಕದ ಬೇಟೆ ಆರಂಭಿಸಿದ ಭಾರತ.https://bit.ly/3x2rdWcಚಾನು ಮೀರಾಭಾಯಿ ರವರಿಗೆ ಅಭಿನಂದನೆಗಳು...
24/07/2021

ಟೋಕಿಯೋ ಒಲಿಂಪಿಕ್ ನಲ್ಲಿ ಪದಕದ ಬೇಟೆ ಆರಂಭಿಸಿದ ಭಾರತ.
https://bit.ly/3x2rdWc
ಚಾನು ಮೀರಾಭಾಯಿ ರವರಿಗೆ ಅಭಿನಂದನೆಗಳು...

Tokyo2020, india, Olympics, India in Tokyo, India, Tokyo2020 participents, Olympics Participentce, India Olympics, India in Tokyo, 2020, 2021, Tokyo,

ನಮ್ಮ ಶಾಲೆಯ ಬಗ್ಗೆ ನಿಮಗೆಷ್ಟು ಗೊತ್ತು?ನಿಮ್ಮ ಶಾಲೆಯ ಬಗ್ಗೆ ನಮಗೆಷ್ಟು ಗೊತ್ತು?👇👇👇👇👇👇👇👇👇👇👇👇👇
18/07/2021

ನಮ್ಮ ಶಾಲೆಯ ಬಗ್ಗೆ ನಿಮಗೆಷ್ಟು ಗೊತ್ತು?
ನಿಮ್ಮ ಶಾಲೆಯ ಬಗ್ಗೆ ನಮಗೆಷ್ಟು ಗೊತ್ತು?

👇👇👇👇👇👇👇👇👇👇👇👇👇

GOVT HPS RAJOLA (K) GOVT HPS RAJOLA (K) was established in 1972 and it is managed by the Department of Education. It is locate...

Address

Sedam
585318

Opening Hours

Monday 9am - 5pm
Tuesday 9am - 5pm
Wednesday 9am - 5pm
Thursday 9am - 5pm
Friday 9am - 5pm
Saturday 7am - 12pm

Alerts

Be the first to know and let us send you an email when Govt. HPS Rajola K posts news and promotions. Your email address will not be used for any other purpose, and you can unsubscribe at any time.

Contact The School

Send a message to Govt. HPS Rajola K:

Shortcuts

Share

Category