23/06/2021
ವಿದ್ಯಾರ್ಥಿ ವೇತನ ಹಾಗೂ ಸಂಕಷ್ಟಕ್ಕೆ ಒಳಗಾದ,ರೈತರ ಮಕ್ಕಳಿಗಾಗಿ ಉಚಿತ 500 ಅಭ್ಯಾಸ ಸಲಕರಣೆಯ ಚೀಲ(ಪಠ್ಯ ಪುಸ್ತಕಗಳು) ವಿತರಿಸಲಾಗುತ್ತಿದೆ
ನಿಶಾರ್ಡ ಸೇವಾ ಸಂಸ್ಥೆ ಹಾಗೂ ಓಂ ಪಬ್ಲಿಕ್ ಸ್ಕೂಲ್ ಸಂಯೋಗದೊಂದಿಗೆ ಸರ್ವರಿಗೂ ಶಿಕ್ಷಣ ಎಂಬ ಗುರಿ ಇಟ್ಟುಕೊಂಡು ಯಾರು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಧ್ಯೇಯದೊಂದಿಗೆ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ರುಕ್ಮಿಣಿ ಸಾಹುಕಾರ ಅವರ ಮಾರ್ಗದರ್ಶನದಲ್ಲಿ ಕೋವಿಡ್ ನಿಂದ ಸಂಕಷ್ಟಕ್ಕೆ ಒಳಗಾದ ಪಾಲಕರ ಮಕ್ಕಳಿಗಾಗಿ ಹಾಗೂ ರೈತರ ಮಕ್ಕಳಿಗಾಗಿ ಉಚಿತ 500 ಪುಸ್ತಕ ಕಿಟ್ಗಳನ್ನು ವಿತರಿಸಲಾಗುತ್ತಿದೆ. ಅಲ್ಲದೆ ಶಿಕ್ಷಣದಲ್ಲಿ ಉತ್ತಮವಾಗಿ ಅಭ್ಯಾಸ ಮಾಡುತ್ತಿರುವ ಹಾಗೂ ಬಡ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ನೀಡುವ ವ್ಯವಸ್ಥೆ ಮಾಡಲಾಗಿದೆ.
ಓಂ ಪಬ್ಲಿಕ್ ಸಿ ಬಿ ಎಸ್ ಸಿ ಪಠ್ಯ ವಿರುವ ಶಾಲೆಯಲ್ಲಿ ಕೋವಿಡ್ ನಿಂದ ತಂದೆತಾಯಿ ಕಳೆದುಕೊಂಡು ಅನಾಥರಾದ ಮಕ್ಕಳಿಗೆ ಉಚಿತ ಶಿಕ್ಷಣವನ್ನು ಹಾಗೂ ಕೋವಿಡ್ ನಿಂದ ತಂದೆ ಅಥವಾ ತಾಯಿ ಕಳೆದುಕೊಂಡ ಮಕ್ಕಳಿಗೆ ಶಿಕ್ಷಣದಲ್ಲಿ ರಿಯಾಯಿತಿಯನ್ನು ನೀಡುವ ಮೂಲಕ ತನ್ನ ಸಮಾಜಮುಖೀ ಕಾರ್ಯದಲ್ಲಿ ಮತ್ತೊಂದು ದಾಪುಕಾಲಿನ್ನಿರಿಸಿದೆ.
ಮಾತೃಹೃದಯಿ ರುಕ್ಮಿಣಿ ಸಾಹುಕಾರ ಅವರು ಸಮಾಜದ ಉದಯೋನ್ಮುಖ ಬೆಳವಣಿಗೆಗಾಗಿ ತಮ್ಮ ರಾಜಕೀಯ ಜೀವನವನ್ನು ಇಲ್ಲಿಯವರೆಗೂ ಮೀಸಲಿಟ್ಟಿದ್ದು ಎಲ್ಲಾ ವರ್ಗದ ಜನರ ಏಳಿಗೆಗಾಗಿ ನೂರಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಅದರಲ್ಲಿ ಒಂದು ಭಾಗ ಎಂಬಂತೆ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗಾಗಿ ತಮ್ಮ ಓಂ ಟ್ರೈಬಲ್ ಸ್ಕೂಲ್ ಎಂಬ ಸಂಸ್ಥೆಯಿಂದ ಉಚಿತ ಶಿಕ್ಷಣದೊಂದಿಗೆ ಉಚಿತ ವಸತಿ,ಪುಸ್ತಕ,ಸಮವಸ್ತ್ರ ಹೀಗೆ ಅವರನ್ನು ತಮ್ಮ ಮಕ್ಕಳಂತೆ ದತ್ತು
ತೆಗೆದುಕೊಂಡಿದ್ದು ಇಲ್ಲಿಯವರೆಗೂ 150 ವಿದ್ಯಾರ್ಥಿಗಳು ಈ ಶಿಕ್ಷಣ ಸಂಸ್ಥೆಯಲ್ಲಿ ಓದುತ್ತಿದ್ದಾರೆ ಇದರ ಸದುಪಯೋಗ ಪಡೆದುಕೊಳ್ಳುವುದು ಪಾಲಕರ ಜವಾಬ್ದಾರಿಯಾಗಿದೆ.ಇಂಗ್ಲೀಷ್,ಹಿಂದಿ,ಕನ್ನಡ ಭಾಷೆಗಳಲ್ಲಿ ಪರಿಣಿತಿ ಹಾಗೂ ವೃತ್ತಿಪರ ಶಿಕ್ಷಣಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ. ಈ ಶಾಲೆಯ ಮಕ್ಕಳು ತಾಲೂಕು ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಚಿತ್ರಕಲೆ ನೃತ್ಯ ಕ್ರೀಡೆ ಸಂಗೀತ ಹೀಗೆ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ.ರುಕ್ಮಿಣಿ ಸಾಹುಕಾರ ಅವರ ಆಕಾಂಕ್ಷೆಯಂತೆ ಈ ಸಂಸ್ಥೆಗೆ ಸೇರಿದ ಎಲ್ಲಾ ಮಕ್ಕಳು ಉತ್ತಮ ಶಿಕ್ಷಣ ಪಡೆದು ಸ್ವಯಂ ಉದ್ಯೋಗಿಗಳಾಗಿ ಅಲ್ಲದೆ ಬೇರೆ ಬೇರೆ ಕ್ಷೇತ್ರಗಳಲ್ಲಿ ತಮ್ಮ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲು ಸಹಕಾರಿಯಾಗಿರುತ್ತದೆ.