Shrikrishna Institutions Patte

Directions

Shrikrishna Institutions Patte Empowering young minds through quality education since 1951.

We nurture academic excellence, discipline, and holistic development to shape responsible citizens of tomorrow.

03/10/2026
Congratulations
23/09/2026

Congratulations

ಶ್ರೀ ಕೃಷ್ಣ ವಿದ್ಯಾ ಸಂಸ್ಥೆಗಳು ಪಟ್ಟೆ, ಬಡಗನ್ನೂರು ಕನಕಾಭಿಯಾನ -ರಾಮಧಾನ್ಯ ಚರಿತೆ -ಗಮಕ.ಪಟ್ಟೆ ಬಡನ್ನೂರು : ಶ್ರೀ ಕೃಷ್ಣ ವಿದ್ಯಾ ಸಂಸ್ಥೆಗಳು...
19/09/2026

ಶ್ರೀ ಕೃಷ್ಣ ವಿದ್ಯಾ ಸಂಸ್ಥೆಗಳು ಪಟ್ಟೆ, ಬಡಗನ್ನೂರು ಕನಕಾಭಿಯಾನ -ರಾಮಧಾನ್ಯ ಚರಿತೆ -ಗಮಕ.
ಪಟ್ಟೆ ಬಡನ್ನೂರು : ಶ್ರೀ ಕೃಷ್ಣ ವಿದ್ಯಾ ಸಂಸ್ಥೆಗಳು ಪಟ್ಟೆ, ಬಡಗನ್ನೂರು ಹಾಗೂ ಕನಕದಾಸ ಅಧ್ಯಯನ ಪೀಠ, ಮಂಗಳೂರು ವಿಶ್ವ ವಿದ್ಯಾನಿಲಯ ಮಂಗಳ ಗಂಗೋತ್ರಿ ಸಂಯುಕ್ತವಾಗಿ ಪಟ್ಟೆ ವಿದ್ಯಾ ಸಂಸ್ಥೆಯ ಸಭಾಭವನದಲ್ಲಿ ರಾಮಧಾನ್ಯ ಚರಿತೆ ಗಮಕ ನಡೆಯಿತು.

ಈ ಕಾರ್ಯಕ್ರಮವನ್ನು ಪಟ್ಟೆ ವಿದ್ಯಾ ಸಂಸ್ಥೆಗಳ ನಿರ್ದೇಶಕರಾದ ಶ್ರೀಮತಿ ಅಶ್ವಿನಿ ಮಾತಾಜಿಯವರು ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು.

"ಹಿರಿಯರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ನಮ್ಮ ಜೀವನವು ಪಾವನವಾಗುತ್ತದೆ. ಭಕ್ತಿಯಿಂದ ದೇವರನ್ನು ಬೇಡಿದಾಗ ನಮ್ಮ ಅಹಂಕಾರವನ್ನು ಕರಗಿಸಿಕೊಳ್ಳಬಹುದು. ಒಟ್ಟಾಗಿ ಸಮಾನತೆಯಿಂದ ಬಾಳಬೇಕೆಂದು ಕನಕದಾಸರ ಆಶಯ" ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಮುಖ್ಯಸ್ಥರು ಹಾಗೂ ಕನಕದಾಸ ಅಧ್ಯಯನ ಪೀಠದ ಸಂಯೋಜಕರು ಆಗಿರುವ ಡಾ. ಧನಂಜಯ ಕುಂಬ್ಳೆಯವರು ಆಶಯದ ನುಡಿಗಳನ್ನು ಆಡಿದರು.

ಈ ಕಾರ್ಯಕ್ರಮದಲ್ಲಿ ಗಮಕ ವ್ಯಾಖ್ಯಾನವನ್ನು ಪಟ್ಟೆ ವಿದ್ಯಾ ಸಂಸ್ಥೆಗಳ ನಿರ್ದೇಶಕರು, ನಿವೃತ್ತ ಪ್ರಾಚಾರ್ಯರು, ಕಲಾವಿದರು ಆದ ಶ್ರೀ ಗಣರಾಜ ಕುಂಬ್ಳೆ, ಗಮಕ ವಾಚಕರಾಗಿ ಮೂಡಬಿದ್ರೆ ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಶ್ರೀರಾಮ ಪ್ರಸಾದ್ ಕಾಂಚೋಡು ಭಾಗವಹಿಸಿದ್ದರು.

ಪಟ್ಟೆ ವಿದ್ಯಾಸಂಸ್ಥೆಗಳ ನಿರ್ದೇಶಕರಾದ ಶ್ರೀ ಜಿ,ಪರಮೇಶ್ವರ್ ಭಟ್, ಸಂಸ್ಥೆಗಳ ಸಂಚಾಲಕರಾದ ಶ್ರೀ ವಿಘ್ನೇಶ್ ಹಿರಣ್ಯ, ಪ್ರೌಢ ಶಾಲಾಮುಖ್ಯಗುರುಗಳಾದ ಶ್ರೀಮತಿ ಸುಮನಾ ಮಾತಾಜಿ, ಪ್ರಾಥಮಿಕ ಶಾಲಾ ಮುಖ್ಯಗುರುಗಳಾದ ಶ್ರೀ ರಾಜಗೋಪಾಲ್ ಎನ್, ಉಪಸ್ಥಿತರಿದ್ದರು.

ಶ್ರೀಯುತ ರಾಜಗೋಪಾಲ್ ಎನ್, ಸ್ವಾಗತಿಸಿ, ಪ್ರೌಢಶಾಲಾ ಶಿಕ್ಷಕರಾದ ಶ್ರೀ ವಿಶ್ವನಾಥ ಬೊಳ್ಳಾಡಿ ಧನ್ಯವಾದವನ್ನಿತ್ತರು. ಶ್ರೀಮತಿ ಜ್ಯೋತಿ ಕುಮಾರಿ ಕಾರ್ಯಕ್ರಮ ನಿರೂಪಿಸಿದರು.

ಈ ಕಾರ್ಯಕ್ರಮದಲ್ಲಿ ಕನಕದಾಸ ಅಧ್ಯಯನ ಪೀಠ, ಮಂಗಳೂರು ವಿಶ್ವವಿದ್ಯಾನಿಲಯದ ಸಿಬ್ಬಂದಿಗಳಾದ ಶ್ರೀಯುತ ಕಿರಣ್,ಸರಿತಾ ವಿದ್ಯಾರ್ಥಿಗಳಾದ ಕುಮಾರಿ ಸ್ನೇಹ ಮತ್ತು ನೇತ್ರಾವತಿ, ಶ್ರೀ ಕೃಷ್ಣ ವಿದ್ಯಾಸಂಸ್ಥೆಗಳ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಶ್ರೀ ಕೃಷ್ಣ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳು ವಾಲಿಬಾಲ್ ಪಂದ್ಯಾಟದಲ್ಲಿ ವಲಯ ಮಟ್ಟದಿಂದ ತಾಲೂಕು ಮಟ್ಟಕ್ಕೆ ಆಯ್ಕೆ. ಪಟ್ಟೆ ಬಡಗನ್ನೂರು: ದಕ್ಷಿ...
03/09/2026

ಶ್ರೀ ಕೃಷ್ಣ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳು ವಾಲಿಬಾಲ್ ಪಂದ್ಯಾಟದಲ್ಲಿ ವಲಯ ಮಟ್ಟದಿಂದ ತಾಲೂಕು ಮಟ್ಟಕ್ಕೆ ಆಯ್ಕೆ.

ಪಟ್ಟೆ ಬಡಗನ್ನೂರು: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಪಾಪೆ ಮಜಲು ಇಲ್ಲಿ ನಡೆದ ಪುತ್ತೂರು ವಲಯ ಮಟ್ಟದ 14ರ ವಯೋಮಾನದ ಬಾಲಕರ ವಾಲಿಬಾಲ್ ಪಂದ್ಯಾಟದಲ್ಲಿ ಶ್ರೀ ಕೃಷ್ಣ ವಿದ್ಯಾ ಸಂಸ್ಥೆಗಳ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಆಯ್ಕೆಗೊಂಡಿರುವ ವಿದ್ಯಾರ್ಥಿಗಳನ್ನು ಹಾಗೂ ತರಬೇತಿ ನೀಡಿದ ದೈಹಿಕ ಶಿಕ್ಷಣ ಶಿಕ್ಷಕರಿಗೆ ಆಡಳಿತ ಮಂಡಳಿ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಮತ್ತು ಶಾಲಾ ಮುಖ್ಯಗುರುಗಳು ಹಾಗೂ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.

29/08/2026

Address

Patte Badagannur Post
Puttur
574223

Opening Hours

Monday 9am - 5pm
Tuesday 9am - 5pm
Wednesday 9am - 5pm
Thursday 9am - 5pm
Friday 9am - 5pm
Saturday 9am - 5pm

Website

Alerts

Be the first to know and let us send you an email when Shrikrishna Institutions Patte posts news and promotions. Your email address will not be used for any other purpose, and you can unsubscribe at any time.

Shortcuts

Share