ಶ್ರೀ ಭಾರತೀ ಶಾಲೆ

ಶ್ರೀ ಭಾರತೀ ಶಾಲೆ ಆಲಂಕಾರು ಕಡಬ ತಾಲ್ಲೂಕು

ನಾಡಿಗೇ ಮಾದರಿ ಶ್ರೀ ಭಾರತಿ ಹಿರಿಯ ಪ್ರಾಥಮಿಕ ಶಾಲೆ
ಮಾನಸಿಕವಾಗಿ ಸಬಲಗೊಳಿಸುವ, ಚರಿತ್ರೆಯನ್ನು ನಿರ್ಮಿಸುವ, ಬುದ್ಧಿಯನ್ನು ವಿಕಸಿತಗೊಳಿಸುವ ಹಾಗೂ ವ್ಯಕ್ತಿಯನ್ನು ಸ್ವಾವಲಂಬಿಗೊಳಿಸುವ ಶಿಕ್ಷಣವೇ ನಿಜವಾದ ಶಿಕ್ಷಣ
- ಸ್ವಾಮಿ ವಿವೇಕಾನಂದ
ಶ್ರೀ ಭಾರತಿ ಹಿರಿಯ ಪ್ರಾಥಮಿಕ ಶಾಲೆ ಆರಂಭವಾದುದು ಕೇವಲ ಆಲಂಕಾರು ಸುತ್ತಮುತ್ತಲೆಲ್ಲೂ ಶಾಲೆಗಳಿರವೆಂದಲ್ಲ. ಬದಲಾಗಿ, ಅಲ್ಲಿರುವ ಸರಕಾರೀ ಶಾಲೆಗಳಿಗೆ ತನ್ನದೇ ಆದ ಇತಿಮಿತಿಗಳಿರುತ್ತವೆ, ಕಟ್ಟುಪಾಡುಗಳಿರುತ್ತವೆ. ಇಂತಹ ಶಿಕ್ಷಣ ಮಕ್ಕಳನ್ನು ಬುದ್ಧಿವಂತರನ್ನಾಗಿಸುತ್ತದೆಯೇ ಹೊರತು ಪ್ರಜ್ಞಾವಂತ ನಾಗರಿಕರನ್ನಾಗಿಸುವುದಿಲ್ಲ ಎಂಬುದನ್ನು ಅರಿತು, ಮೆಕಾಲೆ ಪದ್ಧತಿಯ ಶಿಕ್ಷಣದ ಬದಲಾಗಿ, ಮಕ್ಕಳಿಗೆ ತಮ್ಮ ಮುಂದಿನ ಬದುಕಿಗೆ ಬೇಕಾದ ನಡವಳಿಕೆಗೆ ಬೇಕಾದ ನಡವಳಿಕೆಗಳು ತಿಳುವಳಿಕೆಗಳನ್ನು ನೀಡುವ ಸದುದ್ದೇಶದಿಂದ 1994 ರಲ್ಲಿ ಆರಂಭವಾಯಿತು. ನಮ್ಮ ಪ್ರಾಚೀನ ಪದ್ಧತಿಯ ಗುರುಕುಲ ಪದ್ಧತಿಯ ಶಿಕ್ಷಣ, ಮಾತೃಭಾಷಾ ಮಾಧ್ಯಮದಲ್ಲಿ ಅತೀ ಕಡಿಮೆ ವೆಚ್ಚದಲ್ಲಿ ಹಾಗೂ ಮುಂದಿನ ಉನ್ನತ ವಿದ್ಯಾಭ್ಯಾಸವನ್ನು ಉಚಿತವಾಗಿ ನೀಡುವ ಉದ್ದೇಶವನ್ನು ಇಟ್ಟುಕೊಂಡಿದೆ ಈ ಭಾರತೀ ವಿದ್ಯಾಸಂಸ್ಥೆ.
ಸಂಸ್ಕೃತಿ ನಡವಳಿಕೆ
ವಿದ್ಯಾ ದಧಾತಿ ವಿನಯಂ ಎಂಬಂತೆ ಗುರುಹಿರಿಯರಿಗೆ ವಿಧೇಯರಾಗಿರುವುದು, ದೇವರಲ್ಲಿ ಭಕ್ತಿ, ಗೌರವವನ್ನು ಕಾಣುವುದು ಮೊದಲಾದ ನಮ್ಮ ಸಂಸ್ಕೃತಿಯನ್ನು ಪ್ರಾಥಮಿಕ ಹಂತದಲ್ಲೇ ತಿಳಿಹೇಳಲಾಗುತ್ತದೆ. ಮೊದಲು ಇದನ್ನೇ ಕಲಿಕೆ ಎಂದು ತಿಳಿಯುವ ಮಕ್ಕಳು, ಮುಂದಕ್ಕೆ ಅದನ್ನೇ ರಕ್ತಗತವಾಗಿಸಿಕೊಳ್ಳುತ್ತಾರೆ.
ಅಖಿಲ ಭಾರತ ವ್ಯಾಪ್ತಿಯಲ್ಲಿರುವ ‘ವಿದ್ಯಾ ಭಾರತಿ’ ಸಂಘಟನೆ ನಮಗೆ ಮಾರ್ಗದರ್ಶನ ನೀಡುತ್ತಿದೆ. ನಮ್ಮ ಶಾಲೆಯಲ್ಲಿ ಪಂಚಮುಖಿ ಶಿಕ್ಷಣಕ್ಕೆ ಆದ್ಯತೆ ನೀಡಲಾಗುತ್ತದೆ, ಅಂದರೆ,
ಯೋಗ
ಸಂಸ್ಕೃತ
ಸಂಗೀತ
ಇತರ ಕಲೆಗಳು
ಶಾರೀರಿಕ, ಮೌಲ್ಯ ಶಿಕ್ಷಣ
ಹೀಗೆ ಎಲ್ಲಾ ಚಟುವಟಿಕೆಗಳು ಪಂಚಮುಖಿ ಶಿಕ್ಷಣದ ವಿಭಾಗದಲ್ಲಿ ನಡೆಯುತ್ತವೆ. ಮಕ್ಕಳು ಆಟ ಪಾಠ ಎನ್ನುತ್ತಲೇ ತಮಗರಿವಿಲ್ಲದಂತೆಯೇ ಹಲವಾರು ವಿಷಯಗಳನ್ನು ಕಲಿಯುತ್ತಾರೆ. ವಾತಾವರಣವೇ ಕಲಿಕೆಗೆ ಮೂಲ ಎನ್ನುವಂತೆ ಉತ್ತಮ ವಾತಾವರಣ ಅವರ ಕಲಿಕೆಗೆ ಪ್ರೇರಣೆ ನೀಡುತ್ತದೆ. ಗೋಡೆಯ ಮೇಲಿರುವ ಮಹಾ ಪುರುಷರ ಚಿತ್ರಪಟಗಳು ಮಕ್ಕಳ ಬದುಕಿನ ಆದರ್ಶಪ್ರಾಯವಾಗುತ್ತವೆ. ವಿದ್ಯಾರ್ಥಿಗಳಿಗೆ ತಮ್ಮ ಕಲಿಕಾವಧಿಯಲ್ಲಿ ಇವೆಲ್ಲದರ ಪರಿಚಯ ಮಾಡಿಕೊಡಲಾಗುತ್ತದೆ.

26/07/2023
21/07/2023

💥ಶ್ರೀ ಭಾರತಿ ವಿದ್ಯಾಸಂಸ್ಥೆ ಆಲಂಕಾರಿನಲ್ಲಿ ವಿದ್ಯಾರ್ಥಿಗಳಿಂದ ದಾಖಲೆಯ ವಿಜ್ಞಾನ ಮಾದರಿಗಳ ಪ್ರದರ್ಶನ

ಆಲಂಕಾರು:-(ಜು.20) ನಮ್ಮ ವಿದ್ಯಾಸಂಸ್ಥೆಯಲ್ಲಿ ಮಕ್ಕಳ ಸ್ವಂತಿಕೆ ಮತ್ತು ಸ್ವ ಇಚ್ಛಾಶಕ್ತಿಯಿಂದ 52 ವಿಜ್ಞಾನ ಮಾದರಿಗಳು ಮತ್ತು 18 ಗಣಿತಮಾದರಿಗಳು ಪ್ರದರ್ಶನಗೊಂಡಿತ್ತು.ಈ ಕಾರ್ಯಕ್ರಮವನ್ನು ಸಂಸ್ಥೆಯ ಸಂಚಾಲಕ ಗಂಗಾಧರಗೌಡ ಕುಂಡಡ್ಕ ದೀಪಬೆಳಗಿಸುವುದರ ಮೂಲಕ ಉದ್ಘಾಟನೆ ಗೈದರು.ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ಇಂದುಶೇಖರ ಶೆಟ್ಟಿ ಬರೆಪುದೇಲು,ಸದಸ್ಯರಾದ ಈಶ್ವರ ಭಟ್ ಕೊಂಡಾಡಿ,ಕನ್ನಡ ಮಾಧ್ಯಮದ ಮುಖ್ಯಮಾತಾಜಿ ಶ್ರೀಮತಿ ಆಶಾ ಎಸ್.ರೈ,ಆಂಗ್ಲ ಮಾಧ್ಯಮದ ಮುಖ್ಯಶ್ರೀಮಾನ್ ಸತೀಶ್ ಕುಮಾರ್ ಜಿ.ಆರ್.ಸೇರಿದಂತೆ ಮಾತಾಜಿ ಶ್ರೀಮಾನ್ ವೃಂದ ಉಪಸ್ಥಿತರಿದ್ದರು.

ತೀರ್ಪುಗಾರರಾಗಿ ಮಾತಾಜಿ ಶ್ರೀಮತಿ ವೇದಾವತಿ,ಶ್ರೀಮಾನ್ ಚಂದ್ರಹಾಸ ಕೆ.ಸಿ,ಶ್ರೀಮಾನ್ ಸುಬ್ರಹ್ಮಣ್ಯ ಸಿ.ಕೆ ,ಶ್ರೀಮಾನ್ ಸಂತೋಷ್ ಸಹಕರಿಸಿದರು.

ಒಟ್ಟು ಪ್ರದರ್ಶನದ ಯೋಚನೆ ಮತ್ತು ಯೋಜನೆಯನ್ನು ವಿಜ್ಞಾನ ಸಂಘದ ಮಾರ್ಗದರ್ಶಕಿ ಮಾತಾಜಿ ಶ್ರೀಮತಿ ಜ್ಯೋತಿ ಹಾಗು ಗಣಿತ ಸಂಘದ ಮಾರ್ಗದರ್ಶಕಿ ಮಾತಾಜಿ ಶ್ರೀಮತಿ ದೀಕ್ಷಿತಾ ರೂಪಿಸಿದ್ದರು.

22/10/2022
ನಮ್ಮ ಶಾಲೆ ಮುಖ್ಯ ಮಾತಾಜಿ ಕನಕಲತಾ ಯಾಸ್ ಯಾನ್ ಭಟ್ ಮತ್ತು ಯದುಶ್ರೀ ಶ್ರೀಮಾನ್ ಅವರ ಬೀಳ್ಕೊಡುವ ಸಮಾರಂಭ...
19/10/2022

ನಮ್ಮ ಶಾಲೆ ಮುಖ್ಯ ಮಾತಾಜಿ ಕನಕಲತಾ ಯಾಸ್ ಯಾನ್ ಭಟ್ ಮತ್ತು ಯದುಶ್ರೀ ಶ್ರೀಮಾನ್ ಅವರ ಬೀಳ್ಕೊಡುವ ಸಮಾರಂಭ...

🔥🔥ಇಂದು ..ಮಂಗಳಾ ಕ್ರೀಡಾಂಗಣ, ಮಂಗಳೂರು ಇಲ್ಲಿ ನಡೆದ ವಿದ್ಯಾಭಾರತಿ ಜಿಲ್ಲಾ ಮಟ್ಟದ ಕ್ರೀಡಾಕೂಟ....ನಮ್ಮ ಭಾರತಿ ಶಾಲೆ ಚೊಚ್ಚಲ 2 ಪ್ರಥಮ ಬಹುಮಾನ...
08/10/2022

🔥🔥ಇಂದು ..ಮಂಗಳಾ ಕ್ರೀಡಾಂಗಣ, ಮಂಗಳೂರು ಇಲ್ಲಿ ನಡೆದ ವಿದ್ಯಾಭಾರತಿ ಜಿಲ್ಲಾ ಮಟ್ಟದ ಕ್ರೀಡಾಕೂಟ....

ನಮ್ಮ ಭಾರತಿ ಶಾಲೆ ಚೊಚ್ಚಲ 2 ಪ್ರಥಮ ಬಹುಮಾನ ದೊಂದಿಗೆ ರಾಜ್ಯಮಟ್ಟಕ್ಕೆ ಆಯ್ಕೆ... 🚩🚩🚩🚩
ಚೊಚ್ಚಲ ಬಾರಿಗೆ ನಮ್ಮ ಪ್ರಥಮ ಸಾಧನೆ

ಎತ್ತರ ಜಿಗಿತ ಸ್ಪರ್ಧೆಯಲ್ಲಿ Gold medal ನೊಂದಿಗೆ ದಿಕ್ಷನ್ ನಡುಮನೆಗೆ ರಾಜ್ಯಮಟ್ಟಕ್ಕೆ ಆಯ್ಕೆ ಶುಭಾಶಯಗಳು 💐💐💐💐💐💐💐🚩🚩🚩🚩

ದುಗ್ಗಪ್ಪ ಗೌಡ ನೆಲ್ಯಾಡಿ ,ವಿಶ್ರಾಂತ ಉಪನ್ಯಾಸಕರು ಇವರಿಂದ ಆಲಂಕಾರು ಭಾರತಿ ಶಾಲೆಗೆ ಗಿಡಹಸ್ತಾಂತರ ಮತ್ತು ಗಿಡಗಳ ಮಾಹಿತಿ...
03/09/2022

ದುಗ್ಗಪ್ಪ ಗೌಡ ನೆಲ್ಯಾಡಿ ,ವಿಶ್ರಾಂತ ಉಪನ್ಯಾಸಕರು ಇವರಿಂದ ಆಲಂಕಾರು ಭಾರತಿ ಶಾಲೆಗೆ ಗಿಡಹಸ್ತಾಂತರ ಮತ್ತು ಗಿಡಗಳ ಮಾಹಿತಿ...

ಸಂಭ್ರಮದ ಸ್ವಾತಂತ್ರ್ಯ ಅಮೃತಮಹೋತ್ಸವ...
16/08/2022

ಸಂಭ್ರಮದ ಸ್ವಾತಂತ್ರ್ಯ ಅಮೃತಮಹೋತ್ಸವ...

Address

Alankar
Puttur
574285

Opening Hours

Monday 9am - 4:30pm
Tuesday 9am - 4:30pm
Wednesday 9am - 4:30pm
Thursday 9am - 4:30pm
Friday 9am - 4:30pm
Saturday 9am - 4:30pm

Telephone

+919900900649

Alerts

Be the first to know and let us send you an email when ಶ್ರೀ ಭಾರತೀ ಶಾಲೆ posts news and promotions. Your email address will not be used for any other purpose, and you can unsubscribe at any time.

Contact The School

Send a message to ಶ್ರೀ ಭಾರತೀ ಶಾಲೆ:

Shortcuts

Share

Category