11/08/2021
*ದ.ಕ.ಜಿ.ಪಂ.ಹಿ.ಪ್ರಾ.ಶಾಲೆ, ಕೆದಂಬಾಡಿ*
🙏 *"ಶಾಲಾ ಹಿತೈಷಿಗಳ ಸಹಭಾಗಿತ್ವವೇ ಶಾಲಾ ಅಭ್ಯುದಯದ ಹಾದಿ"*🙏
🌈ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸವಿ ನೆನಪಿನ ಸ್ವಚ್ಛತಾ ಅಭಿಯಾನ!!🌈
ದ.ಕ. ಜಿ.ಪಂ.ಹಿ.ಪ್ರಾ.ಶಾಲೆ, ಕೆದಂಬಾಡಿ ಇಲ್ಲಿ ದಿನಾಂಕ 11-08-2021 ರಂದು ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ರಾದ *ಇಕ್ಬಾಲ್ ಎಚ್.ಎ ಸಾರೆಪುಣಿ* ಇವರ ನೇತೃತ್ವ ಹಾಗೂ *ಗ್ರೀನ್ ಸ್ಟಾರ್ ಗಟ್ಟಮನೆ* ಮತ್ತು *ಶಾಲಾ ಎಸ್.ಡಿ.ಎಂ.ಸಿ* ಇವರ ಸಹಯೋಗದೊಂದಿಗೆ ಶಾಲಾ ಆವರಣದ ಸ್ವಚ್ಛತಾ ಕಾರ್ಯಕ್ರಮವು ಅಭೂತಪೂರ್ವವಾಗಿ ನಡೆಯಿತು.
ಶಾಲಾ ಮುಂಭಾಗದ ಸ್ವಚ್ಛತೆ, ಅನಗತ್ಯವಾಗಿ ಬೆಳೆದ ಕಾಡು ಪೊದೆಗಳನ್ನು ಕಡಿದು ಶಾಲಾ ಆವರಣ ಗೋಡೆಯ ಸುತ್ತಲೂ ಬೆಳೆದಿದ್ದ ಮರಗಿಡಗಳನ್ನು ತೆರವುಗೊಳಿಸಿ , ಶಾಲೆಯ ಸುತ್ತಮುತ್ತ ಬೆಳೆದ ಹುಲ್ಲು ಪೊದೆಗಳನ್ನು ತೆಗೆದು ಸ್ವಚ್ಛಗೊಳಿಸಿ ಆಕರ್ಷಕವಾಗಿ ಕಾಣುವಂತೆ ಮಾಡಲಾಯಿತು. ಈ ಸ್ವಚ್ಛತಾ ಅಭಿಯಾನ ಕಾರ್ಯಕ್ರಮದಲ್ಲಿ *ಗ್ರೀನ್ ಸ್ಟಾರ್* *ಗಟ್ಟಮನೆ* ಇದರ ಸದಸ್ಯರಾದ ಸಿನಾನ್ ಗಟ್ಟಮನೆ, ಬಾತಿಷ ಇದ್ಪಾಡಿ, ಮುಸ್ತಾಪ ಗಟ್ಟಮನೆ, ಆಸಿಫ್ ಕುಂಬ್ರ, ಲತಿಫ್ B.G, ಶೌಕತ್ ಗಟ್ಟಮನೆ , ಸಮದ್ ಗಟ್ಟಮನೆ, ಇಕ್ಬಾಲ್ ಕಾಟ್ರೆಸ್, ಸುಹೈಬ್ ಗಟ್ಟಮನೆ , ಮುಹಾದ್ ಗಟ್ಟಮನೆ , ಹನೀಫ್ ಟಿ.ಕೆ., ಸಲೀಂ ಗಟ್ಟಮನೆ, ಆಶಿಕ್ ಕ್ವಾಟ್ರಸ್, ಬದ್ರುದ್ದೀನ್ ಕ್ವಾಟ್ರಸ್, ಶರೀಫ್ GFC, ಝಕರೀಯ, ಆರಿಸ್ ಗಟ್ಟಮನೆ ಇವರು ಭಾಗವಹಿಸಿದ್ದರು.
ಶಾಲಾ ಎಸ್.ಡಿ.ಎಂ.ಸಿ ಸದಸ್ಯರಾದ _ಶ್ರೀ ಸಾಂತಪ್ಪ ಮುಂಡಾಳ_ ಇವರು ಹುಲ್ಲು ತೆಗೆಯುವ ಯಂತ್ರದಿಂದ ಶಾಲೆಯ ಸುತ್ತಲಿನ ಹುಲ್ಲು ಪೊದೆಗಳನ್ನು ತೆಗೆದು ಶಾಲೆಯು ಸುಂದರವಾಗಿ ಕಾಣುವಂತೆ ಸ್ವಚ್ಛಗೊಳಿಸಿದರು. ಇವರೊಂದಿಗೆ ವಿದ್ಯಾಭಿಮಾನಿಗಳಾದ _ಕೃಷ್ಣಪ್ಪ_ , ಹಾಗೂ ಎಸ್.ಡಿ.ಎಂ.ಸಿ ಸದಸ್ಯರಾದ _ಆದಂ ಇದ್ಪಾಡಿ_ ಯವರೂ ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಶ್ರೀ ಇಕ್ಬಾಲ್ ಎಚ್.ಎ ಸಾರೆಪುಣಿ,ಎಸ್.ಡಿ.ಎಂ.ಸಿ ಸದಸ್ಯರಾದ ಕೃಷ್ಣ ಕುಮಾರ್ ಇದ್ಯಪೆ ಹಾಗೂ ಅಬ್ದುಲ್ಲಾ ಕೂವೆಂಜ ಬೆದ್ರುಮಾರ್ ಇವರು ಶ್ರಮದಾನ ಮಾಡಿದ ಎಲ್ಲಾ ಶಾಲಾಭಿಮಾನಿಗಳಿಗೆ ಲಘು ಉಪಾಹಾರದ ವ್ಯವಸ್ಥೆ ಮಾಡಿದ್ದರು.
ಸಹಕರಿಸಿದ ಎಲ್ಲರಿಗೂ ಶಾಲಾ ಪರವಾಗಿ ಮುಖ್ಯ ಗುರುಗಳು ಹೃದಯಾಂತರಾಳದ ಧನ್ಯವಾದಗಳನ್ನು ಅರ್ಪಿಸಿದರು. ಶಾಲಾ ಶಿಕ್ಷಕರು ಸಹಕರಿಸಿದರು.
💐💐💐💐💐💐💐💐