Epoojaseva

Epoojaseva

Share

Positive thinkers are always winners. Follow "EPOOJASEVA" Poojas. We help you to take the right decisions and make your life the best. Epoojaseva
Working Team..

Epoojaseva web site about-

In life, when all doors of opportunities seem closed, when we are neck deep in problems and don't know whom to count on, we often turn towards God to seek solutions to all our problems.. in brings to you a powerful platform where you can join in at any stage of your life whether you are student, a home -maker, working professional or a senior citizen. In Indian culture

27/03/2026

ಎಲ್ಲ ಕಷ್ಟನಿವಾರಿಸುವ , ಸಂಪತ್ತನ್ನು ಕರುಣಿಸುವ ಶ್ರೀರಾಮನ ಮಂತ್ರಗಳು -

ಆಪದಾಮಪಹರ್ತಾರಂ ದಾತಾರಂ ಸರ್ವಸಂಪದಾಂ|
ಲೋಕಾಭಿರಾಮಂ ಶ್ರೀರಾಮಂ ಭೂಯೋ ಭೂಯೋ ನಮಾಮ್ಯಹಮ್ ||

ಯತ್ರ ಯತ್ರ ರಘುನಾಥ ಕೀರ್ತನಂ ತತ್ರ ತತ್ರ ಕೃತಮಸ್ತಕಾಂಜಲಿಂ| ಬಾಷ್ಪವಾರಿ ಪರಿಪೂರ್ಣಲೋಚನಂ ಮಾರುತಿಂ ನಮತ ರಾಕ್ಷಸಾಂತಕಮ್ ||

ತ್ರಯೋದಶಾಕ್ಷರೀ ಶ್ರೀರಾಮತಾರಕ ಮಂತ್ರ -

ಶ್ರೀರಾಮ ಜಯ ರಾಮ ಜಯ ಜಯ ರಾಮ||

ಶ್ರೀರಾಮ ಗಾಯತ್ರೀ ಮಂತ್ರ -
ಓಂ ದಶರಥಾಯ ವಿದ್ಮಹೇ, ಸೀತಾವಲ್ಲಭಾಯ ಧೀಮಹಿ|
ತನ್ನೋ ರಾಮ: ಪ್ರಚೋದಯಾತ್||

ಶ್ರೀರಾಮ ಮೂಲ ಮಂತ್ರ -
ಓಂ ಶ್ರೀರಾಮಾಯ ನಮ: ||

ಲೋಕಾಭಿರಾಮಂ ರಣರಂಗಧೀರಂ ರಾಜೀವನೇತ್ರಂ ರಘುವಂಶನಾಥಂ |
ಕಾರುಣ್ಯರೂಪಂ ಕರುಣಾಕರಂ ತಂ ಶ್ರೀರಾಮಚಂದ್ರಂ ಶರಣಂ ಪ್ರಪದ್ಯೇ ||

ಎಲ್ಲ ಸನಾತನೀ ಬಂಧುಗಳಿಗೆ ಶ್ರೀರಾಮ ನವಮಿಯ ಶುಭಾಶಯಗಳು.
#ಶ್ರೀರಾಮನವಮಿ

15/02/2026

ಎಲ್ಲರಿಗೂ ಮಹಾ ಶಿವರಾತ್ರಿ ಹಬ್ಬದ ಶುಭಾಶಯಗಳು.
ಓಂ ನಮ: ಶಿವಾಯ ಶಿವಾಯ ನಮ ಓಂ |
ಓಂ ನಮಸ್ತೇ ಅಸ್ತು ಭಗವನ್ವಿಶ್ವೇಶ್ವರಾಯ ಮಹಾದೇವಾಯ ತ್ರ್ಯಂಬಕಾಯ ತ್ರಿಪುರಾಂತಕಾಯ ತ್ರಿಕಾಗ್ನಿಕಾಲಾಯ ಕಾಲಾಗ್ನಿರುದ್ರಾಯ ನೀಲಕಂಠಾಯ ಮೃತ್ಯುಂಜಯಾಯ ಸರ್ವೇಶ್ವರಾಯ ಸದಾಶಿವಾಯ ಶ್ರೀಮನ್ಮಹಾದೇವಾಯ ನಮ:
#ನುಡಿಮುತ್ತುಗಳು #ಸುಭಾಷಿತ #ಶಿವರಾತ್ರಿ

07/02/2026

* #ಮೂರು_ತರದ_ಜನರು*

ಬಹಳ ಹಿಂದೆ ಗುರು ಶಿಷ್ಯರಿಬ್ಬರು ಯಾತ್ರಾರ್ಥಿಗಳಾಗಿ ವಾರಣಾಸಿಗೆ ಹೋಗುವಾಗ ಒಂದು ಊರ ಹೊರಗಿನ ನದಿತಟದ ದೇವಸ್ಥಾನವೊಂದರಲ್ಲಿ ತಂಗಿದರು. ಆ ದಿನದ ತಮ್ಮ ಒಪ್ಪೊತ್ತಿನ ಊಟಕ್ಕಾಗಿ ಧಾನ್ಯ ತರಲು ಶಿಷ್ಯ ಅನತಿ ದೂರದ ಊರಿನಲ್ಲಿ ಭಿಕ್ಷೆಗಾಗಿ ಜೋಳಿಗೆ ಹಿಡಿದು ಹೊರಟ. ಊರಿನಲ್ಲಿ ಭಿಕ್ಷೆ ಎತ್ತಿದ ನಂತರ ಶಿಷ್ಯ ದೇಗುಲಕ್ಕೆ ಬಂದ. ಗುರು, ಶಿಷ್ಯರಿಬ್ಬರೂ ದೇಗುಲದ ಪಕ್ಕದಲ್ಲೇ ಹರಿಯುತ್ತಿದ್ದ ಹೊಳೆಯಲ್ಲಿ ಸಂಧ್ಯಾವಂದನೆ ಮುಗಿಸಿ ದೇವಸ್ಥಾನದಲ್ಲಿ ಆರಾಧನೆ, ಧ್ಯಾನ, ಮಂತ್ರ, ಜಪ ಮುಗಿಸಿದ ನಂತರ ದೇಗುಲದ ಪಕ್ಕದ ಅಂಗಳದಲ್ಲಿ ಅಡುಗೆ ತಯಾರಿಗೆ ತೊಡಗಿದರು. ಅಡುಗೆ ತಯಾರಿ ಮಾಡುತ್ತಲೆ ಶಿಷ್ಯ ಗುರುವಿಗೆ ಹೇಳಿದ.

"ಗುರುಗಳೇ.., ನಾನು ಭಿಕ್ಷೆಗೆ ಹೋದಾಗ ಈ ಊರಿನಲ್ಲಿ ಮೂರು ವಿಧದ ಜನರನ್ನು ಕಂಡೆ.. ಈ ಊರಲ್ಲಿ....

೧) ಒಬ್ಬ ಸಿರಿವಂತನಿದ್ದಾನೆ, ಕೊಡುಗೈ ದಾನಿ. ಕೇಳಿದವರಿಗೆ ಇಲ್ಲ ಎನ್ನದೇ ಕೈ ಎತ್ತಿ ಕೊಡುತ್ತಾನಂತೆ. ನನಗೂ ದುಡ್ಡು ಕಾಸು ಕೊಡಲು ಬಂದರು, ಆಗ ನಾನು ಹೇಳಿದೆ "ನಾವು ಸನ್ಯಾಸಿಗಳು, ಈ ದಿನದ ಒಪ್ಪೊತ್ತಿನ ಊಟಕ್ಕಾಗುವಷ್ಟು ಧಾನ್ಯವಲ್ಲದೇ ನಮಗೆ ಹೆಚ್ಚಿನದೇನೂ ಬೇಡ" ಎಂದೆ

೨) ಇನ್ನೊಬ್ಬ ಇವನಿಗಿಂತಲೂ ಸಿರಿವಂತನಿದ್ದಾನೆ, ಆದರೆ ಮಹಾಜಿಪುಣ. ಯಾರಿಗೂ, ಎಂದಿಗೂ ಕೈ ಎತ್ತಿ ಬಿಡಿಗಾಸು ಕೊಟ್ಟವನಲ್ಲವಂತೆ. ನಾನು ಹೋದಾಗ ನನಗೂ ಕೂಡ ಬೈದು ಕಳಿಸಿದ.

೩) ಮತ್ತೊಬ್ಬನಿದ್ದಾನೆ, ಆದರೆ ಅವನು ಬಡವ. ಯಾರಾದರೂ ಒಬ್ಬ ಭಿಕ್ಷುಕ ಅವನ ಮನೆ ಬಾಗಿಲಿಗೆ ಬಂದರೆ ತನ್ನಲ್ಲಿರುವುದರಲ್ಲಿಯೇ ಹಂಚಿ ತಿನ್ನುತ್ತಾನಂತೆ. ಸಾಲದಿದ್ದರೆ ಎಲ್ಲವನ್ನೂ ಹಸಿದು ಬಂದವರಿಗೆ ಕೊಟ್ಟುಬಿಡುತ್ತಾನಂತೆ. ನಾನು ಹೋದಾಗ ಕೊಡಲು ಅವನ ಹತ್ತಿರ ಏನೂ ಇದ್ದಿಲ್ಲ, ಈ ದಿನ ಕೊಡಲು ನನ್ನ ಹತ್ತಿರ ಏನೂ ಇಲ್ಲ ಎಂದು ಕೈ ಕೈ ಹಿಸುಕಿಕೊಂಡು ಮರುಗಿದ. ನಾನೇ ಅವನಿಗೆ ನನ್ನಲ್ಲಿರುವ ಧಾನ್ಯದಲ್ಲಿ ಸ್ವಲ್ಪ ಕೊಡಲು ಹೋದೆ. ಏನು ಮಾಡಿದರೂ ತೆಗೆದುಕೊಳ್ಳಲಿಲ್ಲ. ನೀವು ಯಾತ್ರಾರ್ಥಿಗಳು, ನಮ್ಮ ಊರಿಗೆ ಅತಿಥಿಗಳಾಗಿ ಬಂದವರು, ನಿಮ್ಮಂತವರಿಂದ ಪಡೆಯುವುದೇ, ದೇವರಿದ್ದಾನೆ.., ಸಂಜೆ ಒಳಗೆ ಏನಾದರೂ ಕರುಣಿಸುತ್ತಾನೆ ಎಂದು ವಿನಯದಿಂದಲೇ ನಿರಾಕರಿಸಿದ.

"ದೇವನ ಸೃಷ್ಟಿಯಲ್ಲಿ ಜನರ ಸ್ವಭಾವ ಹೀಗೇಕೆ" ಎಂದು ಶಿಷ್ಯ ಗುರುವನ್ನು ಪ್ರಶ್ನಿಸಿದ. ಆಗ ಗುರು ಹೇಳುವನು

೧) ಮೊದಲನೆಯವ.., ಸಿರಿವಂತ, ಕೊಡುಗೈ ದಾನಿ. ಕೇಳಿದ ಅರ್ಹರಿಗೆ ಇಲ್ಲ ಎನ್ನದೇ ಕೈ ಎತ್ತಿ ಕೊಡುತ್ತಿದ್ದ ಎನ್ನುತ್ತಿದ್ದೆಯಲ್ಲ..

ಇವನು ಪಡೆದುಕೊಂಡೂ ಬಂದಿದ್ದಾನೆ, ಹಾಗೇ ಮತ್ತೆ ಪಡೆದುಕೊಂಡೂ ಹೋಗುತ್ತಾನೆ.

೨) ಇನ್ನೊಬ್ಬ ಎರಡನೆಯವನು ಇವನಿಗಿಂತಲೂ ಸಿರಿವಂತ, ಆದರೆ ಮಹಾಜಿಪುಣ. ಯಾರಿಗೂ, ಎಂದಿಗೂ ಕೈ ಎತ್ತಿ ಬಿಡಿಗಾಸು ಕೊಟ್ಟವನಲ್ಲ, ನಿನಗೆ ಬೈದು ಕಳಿಸಿದ ಎಂದೆಯಲ್ಲ...

ಇವನೂ ಪಡೆದುಕೊಂಡು ಬಂದವನು, ಆದರೆ ಪಡೆದದ್ದನ್ನು ಇಲ್ಲೇ ಕಳೆದುಕೊಂಡು ಬರಿಗೈಯಲ್ಲೇ ಹೋಗುವನು.

೩) ಮತ್ತೊಬ್ಬ, ಮೂರನೆಯವ.., ಅವನು ಬಡವ. ಯಾರಾದರೂ ಒಬ್ಬ ಭಿಕ್ಷುಕ ಅವನ ಮನೆ ಬಾಗಿಲಿಗೆ ಬಂದರೆ ತನ್ನಲ್ಲಿರುವುದನ್ನು ಹಂಚಿ ತಿನ್ನುತ್ತಿದ್ದ ಎಂದೆಯಲ್ಲ....

ಇವನು ಬರುವಾಗ ಪಡೆದುಕೊಂಡು ಬಂದಿಲ್ಲ, ಆದರೆ ಇಲ್ಲಿಂದ ಹೋಗುವಾಗ ಪಡೆದುಕೊಂಡು ಹೋಗುತ್ತಾನೆ.

ಹೀಗೆ ಗುರು ಶಿಷ್ಯನಿಗೆ ಹೇಳಿದರು:....

"ದೇವರು ಜೀವಿಗಳಿಗೆ ಯಾವಾಗ, ಏನೇನು, ಎಷ್ಟೆಷ್ಟು ಕೊಡಬೇಕೋ ಅದನ್ನು ದಯಪಾಲಿಸುತ್ತಾನೆ. ಆದರೆ ಅವನಲ್ಲಿ ನಂಬಿಕೆ ಇಲ್ಲದ ಸ್ವಾರ್ಥಿ ಮನುಜರು ದುರಾಸೆಯಿಂದ ಸಂಗ್ರಹದಲ್ಲಿ ತೊಡಗಿ ಮತ್ತೊಬ್ಬರ ಬಡತನಕ್ಕೆ ಕಾರಣರಾಗುತ್ತಾರೆ. ಬಡತನ ದೇವರ ಸೃಷ್ಟಿಯಲ್ಲ. ದೇವರು ಎಲ್ಲರಿಗೂ ಸಮಾನ ಅವಕಾಶ ಕೊಟ್ಟಿರುತ್ತಾನೆ. ನರರು ತಮ್ಮ ಸ್ವಾರ್ಥಪರ ಕಾರ್ಯಗಳನ್ನೆಸಗಿ ಕರ್ಮಬಂಧನಗಳಿಗೆ ಸಿಲುಕಿ ಜನ್ಮಾಂತರದಲ್ಲಿ ಅವರು ಮಾಡಿದ್ದನ್ನೇ ಅವರು ಅನುಭವಿಸುವಂತಾಗುತ್ತದಷ್ಟೆ.., ಮನುಷ್ಯನ ಸುಖದುಃಖಗಳಿಗೆ ಮನುಷ್ಯನೇ ಕಾರಣನೇ ಹೊರತು ದೇವರಲ್ಲ".
(ಸಂಗ್ರಹ. ಮೂಲ ಲೇಖಕರು ಯಾರು ಅಂತ ಗೊತ್ತಿಲ್ಲ)

Photos from Epoojaseva's post 26/01/2026

ಗಣರಾಜ್ಯೋತ್ಸವದ ಶುಭಾಶಯಗಳು.

Photos from Epoojaseva's post 15/01/2026

ಎಳ್ಳು - ಬೆಲ್ಲವ ತಿಂದು ಒಳ್ಳೆಯ ಮಾತಾಡೋಣ. ಎಲ್ಲರಿಗೂ ಮಕರಸಂಕ್ರಾಂತಿಯ ಶುಭಾಶಯಗಳು.

ದ್ಯೇಯ: ಸದಾ ಸವಿತೃಮಂಡಲಮಧ್ಯವರ್ತೀ ನಾರಾಯಣ: ಸರಸಿಜಾಸನಸನ್ನಿವಿಷ್ಟ:| ಕೇಯೂರವಾನ್ ಮಕರಕುಂಡಲವಾನ್ ಕಿರೀಟೀ ಹಾರೀ ಹಿರಣ್ಮಯವಪು: ಧೃತ ಶಂಖಚಕ್ರ:||

#ಶ್ರೀರಾಮಜಯರಾಮಜಯಜಯರಾಮ
#ಮಕರಸಂಕ್ರಾಂತಿ #ಶುಭಾಶಯಗಳು #ಹಬ್ಬಗಳು #ಸಂಸ್ಕೃತಿ #ಭಾರತೀಯಹಬ್ಬಗಳು

12/12/2025

ದೇವರು ಎಂಬುವವನು ಯಾರ ಪಾಲಿಗೆ ಯಾವಾಗ, ಯಾವ ರೂಪದಲ್ಲಿ ಒಲಿದು ಬರುವನೆಂದು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಅಂತಹುದೇ ಒಂದು ಘಟನೆ 2016ರಲ್ಲಿ ನಡೆಯಿತು.

ಕಗ್ಗತ್ತಲೆಯ ಕೂಪದಲ್ಲಿ, ಬಡತನದ ಬೇಗೆಯಲ್ಲಿ, ಹಸಿವಿನ ಸಂಕಟದಲ್ಲಿ, ದಾಹದ ಹಾಹಾಕಾರದಲ್ಲಿ ಬಳಲಿ ಬಸವಳಿದು ಬೆಂಡಾಗಿ ಎಲುಬಿನ ಗೂಡಿನಂತಾಗಿದ್ದ ಮಗುವಿನ ಪಾಲಿಗೆ ಅಂದು ದೇವತೆಯಂತೆ ಒಲಿದು ಬಂದಿದ್ದು ಇದೇ Anja Ringgren

ಚಾರಿಟಬಲ್ ವರ್ಕರ್ ಆಗಿ ಕೆಲಸ ಮಾಡುತ್ತಿದ್ದ ಈಕೆ ಅಂದು ನೈಜೀರಿಯಾ ದೇಶದಲ್ಲಿ ಪ್ರವಾಸ ಮಾಡುವಾಗ ಆಕಸ್ಮಿಕವಾಗಿ ಕಣ್ಣಿಗೆ ಬಿದ್ದ ಈ ಮಗುವಿನ ಸ್ಥಿತಿ ನೋಡಿ ಹೆಣ್ಮನ ಕರಗಿಬಿಟ್ಟಿತ್ತು. ಹಸಿವು ಬಾಯಾರಿಕೆಗಳಿಂದ ಕಂಗೆಟ್ಟು ದಿಕ್ಕೆಟ್ಟು ರಸ್ತೆಯಲ್ಲಿ ಅಲೆಯುತ್ತಿದ್ದ ಮಗುವನ್ನು ನೋಡಿದಾಕೆಗೆ ಹೃದಯ ತುಂಬಿ ಬಂದಿತ್ತು.

ಮಗುವನ್ನು ನೋಡಿದ ತಕ್ಷಣ ಕೈಯಲ್ಲೊಂದು ನೀರಿನ ಬಾಟಲಿ, ಬಿಸ್ಕೇಟಿನ ಪ್ಯಾಕೆಟ್ ಹಿಡಿದು ಆ ಮಗುವಿನತ್ತ ಆಕೆ ಹೆಜ್ಜೆ ಹಾಕುತ್ತಿದ್ದರೆ.. ಯಾರೋ ದೇವತೆಯೊಬ್ಬಳು ನನ್ನತ್ತ ಬರುತ್ತಿದ್ದಾಳೆ ಎಂಬ ಭರವಸೆ ಆ ಮಗುವಿಗೆ.

ಹೊಟ್ಟೆಯಲ್ಲಿ ಹಸಿವಿನ ಬೆಂಕಿಯನ್ನಿಟ್ಟುಕೊಂಡಿದ್ದ ಮಗುವಿನ ಗಂಟಲಲ್ಲಿ ನೀರಿಳಿದ ತಕ್ಷಣ ಬೆಂಕಿ ಆರಿ ಹೋಗಿ ದಾಹ ತಣಿಸಿ ಕಾಣದ ಯಾವುದೋ ಒಂದು ಆನಂದವಾಗಿರಬೇಕು ಆ ಮಗುವಿಗೆ.

ಮಗುವಿನ ನಿತ್ರಾಣ ಸ್ಥಿತಿಯ ಕಂಡು ಅಂಜಾ ಮನಸಿಗೆ ಅದೇನನಿಸಿತೋ ನೀರುಣಿಸಿ ತನ್ನ ದಾರಿ ಹಿಡಿಯದ ಅಂಜಾ ಆ ಮಗುವನ್ನು ದತ್ತು ಪಡೆದು ತನ್ನ ಟ್ರಸ್ಟಿನ ಮೂಲಕ ಅಗತ್ಯ ಚಿಕಿತ್ಸೆ ಒದಗಿಸಿದಳು ನಂತರ ಅದಕ್ಕೆ "ಹೋಪ್" ಅಂದರೆ ಭರವಸೆ ಎಂಬ ಹೆಸರಿಟ್ಟಳು.

ಅಂದು ಅಪೌಷ್ಟಕತೆಯಿಂದ ಬಳಲಿ ಎಲುಬಿನ ಗೂಡಾಗಿದ್ದ ಮಗುವನ್ನು ಮುಂದೆ ಒಬ್ಬ ಸದೃಢ ಅಥ್ಲೀಟ್ ಆಗಿ ಕಾಣುವ ಭರವಸೆಯೊಂದಿಗೆ ತನ್ನ ಜೊತೆಯಲ್ಲಿರಿಕೊಂಡು ಸಾಕಿ ಸಲಹುತ್ತಿದ್ದಾಳೆ ಅಂಜಾ.

ಮಗುವಿಗೆ ನೀರುಣಿಸುವ ದೃಶ್ಯ ಅದೆಷ್ಟು ಜನರ ಮನ ಕಲಕಿತೋ ಏನೋ... ಸಾಮಾಜಿಕ ಜಾಲತಾಣಗಳು, ಅಂತರಾಷ್ಟ್ರೀಯ ಮಾಧ್ಯಮಗಳಲ್ಲಿ ನೀರುಣಿಸುವ ಆ ಒಂದು ದೃಶ್ಯ ಮಗುವಿನ ಪಾಲಿಗೆ ಒಂದು ಚರಿತ್ರೆಯನ್ನೇ ಸೃಷ್ಟಿಸಿಬಿಟ್ಟಿತ್ತು.

ವಿಶ್ವಸಂಸ್ಥೆಯಲ್ಲಿ ಆ ದೃಶ್ಯದ ಭೀಕರತೆಯ ಬಗ್ಗೆ ಚರ್ಚೆಯಾಯಿತು. ಆಫ್ರಿಕಾ ಖಂಡದ ಬಡರಾಷ್ಟ್ರಗಳಲ್ಲಿ ಕಾಡುತ್ತಿರುವ ಅಪೌಷ್ಟಿಕತೆಯ ಪರಿಹಾರಕ್ಕಾಗಿ ಹತ್ತು ಹಲವಾರು ಯೋಜನೆಗಳಿಗೆ ನಾಂದಿಯಾಯಿತು.

ಟಿವಿಯಲ್ಲಿ ನೋಡಿದ ಅದ್ಯಾವುದೋ ದೃಶ್ಯ ಇಂದು ನಡೆದು ಹೋದ ಈ ಘಟನೆಯನ್ನು ಮತ್ತೆ ನೆನಪಿಸಿತು. ಈಗ ಹೇಗಿದ್ದಾನೆ ಆ ಹುಡುಗ ನೋಡೋಣವೆಂದು ಗೂಗಲ್ ಹೊಕ್ಕಾಗ ಸಿಕ್ಕಿದ್ದು ಮರುಜೀವ ಪಡೆದು ಮುಗುಳುನಗೆಯೊಂದಿಗೆ ಮನಸೂರೆಗೊಳ್ಳುತ್ತಿರುವ "ಹೋಪ್" (ಭರವಸೆ)

ಸಣ್ಣ ಸಣ್ಣ ಘಟನೆಗಳೇ ಜೀವನದಲ್ಲಿ ದೊಡ್ಡ ಬದಲಾವಣೆಗಳನ್ನು ತರುತ್ತವೆ.. ಭಗವಂತ ಇನ್ನೊಬ್ಬರ ಕಷ್ಟಕ್ಕೆ ನೆರವಾಗುವ ಶಕ್ತಿಯನ್ನು ನಮಗೆ ಕೊಟ್ಟಿದ್ದಾನೋ ಇಲ್ಲವೋ ಎಂಬುದನ್ನು ಕಾಲ ನಿರ್ಧರಿಸಲಿ. ಸಾಧ್ಯವಾದರೆ ಅಲ್ಲಿಯವರೆಗೂ ಮಿಡಿಯುವ ಮನಸುಗಳನ್ನು ಪ್ರೋತ್ಸಾಹಿಸಿ ಮತ್ತಷ್ಟು ಸತ್ಕಾರ್ಯಗಳಿಗೆ ಶಕ್ತಿ ತುಂಬೋಣ.

- ಬದುಕಲು ಕಲಿಯಿರಿ ಸಂಗ್ರಹದಿಂದ

19/11/2025

ಇಂದು ವೀರನಾರಿ ಝಾನ್ಸಿ ರಾಣಿ ಲಕ್ಷ್ಮೀಬಾಯಿ ರವರ ಜಯಂತಿ

*ಮರೆಯಬೇಡಿ ಭಾರತೀಯರೇ. ಭಾರತಾಂಬೆಯ ಬಂಧಮುಕ್ತಗೊಳಿಸಲು ಬ್ರಿಟಿಷರಿಗೆ ಸಿಂಹ ಸ್ವಪ್ನವಾದ ವೀರನಾರಿ ಝಾನ್ಸಿ ರಾಣಿ ಲಕ್ಷ್ಮೀಬಾಯಿ ರವರ ಜಯಂತಿ ನವೆಂಬರ್ 19 ರಂದು...*

ಈ ವೀರ ಮಾತೆ ಕೇವಲ 22 ವರ್ಷ 7 ತಿಂಗಳಲ್ಲಿ ತಾಯಿ ಭಾರತಿಗಾಗಿ ಯುದ್ಧ ದಲ್ಲಿಯೇ ಪ್ರಾಣಾರ್ಪಣೆ ಮಾಡಿದ್ದನ್ನು ಮರೆತರೆ ನಾವು ಭಾರತೀಯರೇ ಅಲ್ಲ

ಪ್ರಥಮಭಾರಿಗೆ ಬ್ರಿಟಿಷ್ ರನ್ನು ಭಾರತದಿಂದಲೇ ಹೋಡಿಸಬೇಕು ಎಂದು ನಿರ್ಧರಿಸಿ 1857ರಲ್ಲಿ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಮೀರತ್’ನಲ್ಲಿ ಪ್ರಾರಂಭವಾಗುತ್ತದೆ. ಈ ಸಂಗ್ರಾಮ ಬಹಳಾ ಬೇಗ ಭಾರತದ ಹಲವಾರು ಪ್ರದೇಶಗಳಿಗೆ ಹರಡುತ್ತದೆ. ಮಾರ್ಚ್ 29ನೇ ತಾರೀಖು ಭಾರತದ ಹೆಮ್ಮೆಯ ಸಿಪಾಯಿ ಮಂಗಲ್ ಪಾಂಡೆ ಬ್ರಿಟೀಷ್ ಆಡಳಿತದ ವಿರುದ್ಧ ದಂಗೆ ಏಳುತ್ತಾನೆ. ಬ್ರಿಟಿಷ್ ಆಡಳಿತವನ್ನು ವಿರೋಧಿಸುತ್ತಾನೆ. ಇದರಿಂದ ಎಲ್ಲೆಡೆ ಬ್ರಿಟಿಷರ ವಿರುದ್ಧ ಸಶಸ್ತ್ರ ಸ್ವಾತಂತ್ರ್ಯ ಹೋರಾಟ ಪ್ರಾರಂಭವಾಯಿತು.

ಝಾನ್ಸಿ ರಾಣಿ ಲಕ್ಷ್ಮೀಬಾಯಿ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬಹು ಮುಖ್ಯ ಪಾತ್ರ ವಹಿಸಿದ್ದಾಳೆ. ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ದಬ್ಬಾಳಿಕೆಯನ್ನು ವಿರೋಧಿಸಿದ ದಿಟ್ಟ ಮಹಿಳೆ ಈಕೆ. ಇವರುಗಳ ಜೊತೆ ನಾನಾ ಸಾಹಿಬ್, ತಾಂತ್ಯ ಟೋಪೆ, ಬೇಗಮ್ ಹಜರತ್ ಮಹಲ್, ಕನ್ವರ್ ಸಿಂಗ್ ಹಾಗೂ ಇನ್ನೂ ಹಲವಾರು ನಾಯಕರು ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡು ಬ್ರಿಟಿಷರ ನಿದ್ದೆಗೆಡಿಸಿದ್ದಾರೆ.

ಸ್ವಾತಂತ್ರ್ಯ ಸಂಗ್ರಾಮದ ಮಹತ್ವದ ಘಟ್ಟದಲ್ಲಿ ಭಾರತದ ಎರಡು ರಾಜ್ಯಗಳಲ್ಲಿ ಬ್ರಿಟಿಷ್ ಸೈನ್ಯ ಏಕಕಾಲದಲ್ಲಿ ಸಂಕಷ್ಟಕ್ಕೆ ಸಿಲುಕಿತ್ತು. ಅಷ್ಟೇ ಅಲ್ಲದೇ ಈ ದಾಳಿಗೆ ಬ್ರಿಟಿಷ್ ಸೈನ್ಯ ತತ್ತರಿಸಿ ಹೋಗಿತ್ತಲ್ಲದೇ ಕಾನ್ ಪುರದಲ್ಲಿ ನಾನಾ ಸಾಹೇಬ ಎನ್ನುವ ವೀರಯೋಧನ ಪರಾಕ್ರಮಕ್ಕೆ ಸರಿಸಾಟಿಯಾಗಿ ಯುದ್ಧದಲ್ಲಿ ಹೋರಾಡಲಾಗದೆ ಬ್ರಿಟಿಷ್ ಸೇನೆ ಕಂಗೆಟ್ಟಿತ್ತು.

ಅದೇ ಸಮಯದಲ್ಲಿ ಆ ಪ್ರದೇಶ ವೀರ ವನಿತೆಯ ಸೈನ್ಯಬಲವನ್ನು ಎದುರಿಸಲಾಗದೆ ಬ್ರಿಟಿಷ್ ಸೈನ್ಯ ಹಿಮ್ಮೆಟ್ಟತೊಡಗಿತು. ಅಂದು ಬ್ರಿಟಿಷರ ಎದೆಯಲ್ಲಿ ನಗಾರಿ ಬಾರಿಸಿದಂತಹ ವೀರ ಮಹಿಳೆ ಬೇರಾರು ಅಲ್ಲ… ಆಕೆಯ ಸೌಂದರ್ಯ, ಶೌರ್ಯ, ನಡವಳಿಕೆ, ಜನರ ಮೇಲೆ ಪ್ರೀತಿ, ದೇಶದ ಪ್ರೇಮ, ಹೋರಾಟ, ನೋವು-ನಲಿವು ಇವೆಲ್ಲವೂ ಯಾರಿಗೂ ಸಮಾನವಿಲ್ಲ. ಅವಳೇ ಭಾರತದ ಏಕಮಾತ್ರ ವೀರಮಹಿಳೆ ಬ್ರಿಟಿಷರ ವಿರುದ್ಧ ಹೋರಾಡಿದ ಸಿಂಹಿಣಿ ಝಾನ್ಸಿ ರಾಣಿ ಲಕ್ಷ್ಮೀಬಾಯಿ!!

ಅಂದು ಬ್ರಿಟಿಷರ ಸಂಕೋಲೆಗಳಿಂದ ತನ್ನ ರಾಜ್ಯವನ್ನು ಮರಳಿ ಪಡೆದ ಝಾನ್ಸಿ ರಾಣಿ ಲಕ್ಷ್ಮೀಬಾಯಿ, “ನನ್ನ ಝಾನ್ಸಿಯನ್ನು ಎಂದೆಂದೂ ಕೊಡುವುದಿಲ್ಲ” ಎನ್ನುವ ರಾಣಿಯ ಸಿಂಹಘರ್ಜನೆ ಯುದ್ಧಭೂಮಿಯಲ್ಲಿ ಮುಗಿಲು ಮುಟ್ಟಿತ್ತು. ಅದೇ ಸಂದರ್ಭದಲ್ಲಿ ಝಾನ್ಸಿ ರಾಣಿಯು ಯುದ್ಧದಲ್ಲಿ ಮದ್ದುಗುಂಡುಗಳಿಗೆ ಇರುವ ಮಹತ್ವನ್ನು ಅರಿತ ಭಾರತದ ಪ್ರಥಮ ರಾಣಿಯಾಗಿದ್ದಳು.

ಭಾರತದಲ್ಲಿ ರಾಣಿಯು ಮದ್ದುಗುಂಡುಗಳನ್ನು ತಯಾರಿಸುವಲ್ಲಿ ಮೊದಲನೇಯವಳಾಗಿದ್ದರೂ ರಾಣಿಯ ಆಡಳಿತಾವಧಿಯು ಕಡಿಮೆ ಇದ್ದುದರಿಂದ ಮಹತ್ವದ ಪರಿಣಾಮವಾಗಲಿಲ್ಲ. ಇಡೀ ಮಹಿಳಾ ಕುಲವೇ ಹೆಮ್ಮೆಪಡಬೇಕಾದ, ಭಾರತೀಯರೆಲ್ಲರೂ ಎಂದಿಗೂ ಚಿರಋಣಿಗಳಾಗಿರಬೇಕಾದ ವೀರ ಮಹಿಳೆ ಝಾನ್ಸಿ ರಾಣಿ ಲಕ್ಷ್ಮೀಬಾಯಿಯು ಕಾರ್ತಿಕ ಮಾಸದ ಬಿದಿಗೆಯ ದಿನ 1835 ನೇ ಇಸವಿ ನವೆಂಬರ್ 19 ರಂದು ಕಾಶಿ(ವಾರಣಸಿ) ಯಲ್ಲಿ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಇವರ ಬಾಲ್ಯದ ಹೆಸರೇ ಮಣಿಕರ್ಣಿಕಾ!!

ಹಾಗಾಗಿ ಪ್ರೀತಿಯಿಂದ ಎಲ್ಲರೂ ಮನು ಎಂದು ಕರೆಯುತ್ತಿದ್ದರು. ಈಕೆಯ ತಂದೆ ಮೋರೋಪಂತ್, ತಾಯಿ ಭಾಗೀರಥಿಬಾಯಿ!! ಮನೂಬಾಯಿಗೆ ನಾಲ್ಕು ವರ್ಷದವಳಾಗಿದ್ದಾಗ ತಾಯಿ ತೀರಿಕೊಂಡಿದ್ದರಿಂದ ಅವಳ ಪೂರ್ಣ ಜವಾಬ್ದಾರಿ ತಂದೆಯದಾಯಿತು. ಚಿಕ್ಕವಯಸ್ಸಿನಿಂದಲೇ ನಾನಾಸಾಹೇಬ್, ರಾವ್ ಸಾಹೇಬರ ಜೊತೆಗೆ ಆಪ್ತಳಾಗಿದ್ದರಿಂದ ಅವರ ಜೊತೆ ಹುಡುಗಾಟ, ಕುದುರೆಸವಾರಿ ಮಾಡುತ್ತಿದ್ದರು. ಅಷ್ಟೇ ಅಲ್ಲದೇ ಮಣಿಕರ್ಣಿಕಾ ತಂದೆಯವರಿಂದ ಸಾಧ್ವಿಸೀತೆ, ವೀರಮಾತೆ ಜೀಜಾಬಾಯಿ, ವೀರಾಂಗನೆ ತಾರಾಬಾಯಿಯವರ ಜೀವನ ಆದರ್ಶಗಳನ್ನು ರೂಢಿಸಿಕೊಂಡಿದ್ದರು.

ಕತ್ತಿವರಸೆ, ಕುದುರೆಸವಾರಿ, ಬಂದೂಕುಗುರಿ ಸಾಧನೆಗಳ ಜೊತೆಯಲ್ಲೇ ವಿದ್ಯಾಭ್ಯಾಸವೂ ದೊರಕಿತ್ತು. ಆದರೆ ಮನುಬಾಯಿ ಏಳು ವರ್ಷ ಆಗಿದ್ದಾಗಲೇ ನಲವತ್ತೈದು ವರ್ಷದ ಝಾನ್ಸಿ ಮಹಾರಾಜ ಗಂಗಾಧರರಾಯರ ಗೃಹಲಕ್ಷ್ಮಿಯಾದಳು. ಅಷ್ಟೇ ಅಲ್ಲದೇ ಝಾನ್ಸಿ ರಾಜ್ಯದ ರಾಣಿ ಲಕ್ಷ್ಮೀಬಾಯಿಯಾದರು!!

ಆದರೆ ವಿಧಿಯಾಟವೇ ಬೇರೆಯದೇ ಆಗಿತ್ತು!! ಲಕ್ಷ್ಮೀಬಾಯಿ 1851 ರಲ್ಲಿ ಒಂದು ಗಂಡುಮಗುವಿಗೆ ಜನ್ಮ ನೀಡಿದ್ದಲ್ಲದೇ ಆ ಮಗು 4 ತಿಂಗಳಿರುವಾಗ ಮರಣವನ್ನಪ್ಪಿತು. ಮಗನ ಸಾವಿನ ದುಃಖ ತಾಳಲಾರದೆ ರಾಜ ಬಾಲಗಂಗಾಧರ್‍ರವರು 21 ನವೆಂಬರ್ 1853 ರಲ್ಲಿ ಮರಣವನ್ನಪ್ಪಿದರು. ಆದರೆ ಲಕ್ಷ್ಮೀಬಾಯಿ ಮಗುವಾಗಿದ್ದಾಗಲೇ ತಾಯಿಯನ್ನು ಕಳೆದುಕೊಂಡು, ತಾಯಿಯಾದಾಗ ಮಗುವನ್ನು ಕಳೆದುಕೊಂಡು ಕೊನೆಗೆ ಆಸರೆಯಾಗಿದ್ದ ಪತಿಯನ್ನು ಕಳೆದುಕೊಂಡು ಧೃತಿಗೆಡದೆ, ಧೈರ್ಯವಾಗಿ ಝಾನ್ಸಿಗೆ ರಾಣಿಯಾಗಿ ಬ್ರಿಟಿಷರನ್ನು ಎದುರಿಸಿದ ವೀರ ಮಹಿಳೆ.

19ನೆಯ ಶತಮಾನದ ಆರಂಭ!! ಸಾಗರೋತ್ತರ ವ್ಯಾಪಾರಕ್ಕೆಂದು ಭಾರತಕ್ಕೆ ಬಂದ ಬ್ರಿಟಿಷರು ಈಸ್ಟ್ ಇಂಡಿಯಾ ಕಂಪೆನಿಯ ಹೆಸರಿನಲ್ಲಿ ದಿನ ಕ್ರಮದಲ್ಲಿ ರಾಜ್ಯಸೂತ್ರವನ್ನೂ ಹಿಡಿಯತೊಡಗಿದ್ದರು. ಅಂತಃಕಲಹಗಳಲ್ಲಿ ನಿರತರಾಗಿದ್ದ ಭಾರತೀಯ ರಾಜ ಮಹಾರಾಜರು ಪೈಪೆÇೀಟಿಯ ಮೇಲೆ ಬ್ರಿಟಿಷರ ಕೈಗೊಂಬೆಗಳಾಗಿದ್ದರು. ಅಂದಿನ ಭಾರತದ ಪ್ರತಿ ದುರ್ಘಟನೆಯನ್ನೂ ಇಂಗ್ಲಿಷ್ ಸಾಮ್ರಾಜ್ಯದ ವಿಸ್ತಾರಕ್ಕೆ ಬಳಸಿಕೊಳ್ಳಲಾಯಿತು. ಇಂಗ್ಲಿಷರ ಕೈಮೇಲಾದಾಗ ಒಂದು ರೀತಿಯ ಒಪ್ಪಂದವಾದರೆ ಅವರು ಸೋಲನ್ನು ಅನುಭವಿಸಿದಾಗ ಬೇರೊಂದು ಬಗೆಯ ಒಪ್ಪಂದ. ಅಂತೂ ಹಾನಿ ಭಾರತೀಯರಿಗಾಗಿತ್ತು!!

ರಾಣಿ ಲಕ್ಷ್ಮೀಬಾಯಿ ತಮ್ಮ ಮೊದಲನೆಯ ಮಗುವಿನ ಮರಣದ ನಂತರ ಅವರು ದಾಮೋದರ ರಾವ್ ಅವರನ್ನು ದತ್ತು ಪಡೆದರು. ಆದರೆ ದಾಮೋದರ ರಾವ್ ರವರು ರಾಜನಿಗೆ ರಕ್ತಸಂಬಂಧಿಲ್ಲದಿದ್ದರಿಂದ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಯ ಲಾರ್ಡ್ ಡಾಲ್ ಹೌಸಿಯು ದಾಮೋದರ ರಾವ್ ಅವರಿಗೆ ರಾಜಾಭಿಷೇಕ ಮಾಡಲು ಬಿಡಲಿಲ್ಲ. ಲಾರ್ಡ್ ಡಾಲ್ ಹೌಸಿಯು ಝಾನ್ಸಿಯ ರಕ್ಷಣೆ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಯ ಜವಾಬ್ಡಾರಿಯೆಂದು ರಾಣಿ ಲಕ್ಷ್ಮೀಬಾಯಿಯವರಿಗೆ ರೂಪಾಯಿ 60,000 ಪಿಂಚಣಿ ಹಣವನ್ನು ಕೊಟ್ಟು ಝಾನ್ಸಿಕೋಟೆಯನ್ನು ಬಿಟ್ಟು ಹೋಗಲು ಆಜ್ಞೆ ಮಾಡಿದನು. ಆದರೆ ಇದನ್ನು ಒಮ್ಮೆಲೇ ನಂಬಲು ರಾಣಿಗೆ ಸಾಧ್ಯವಾಗಲಿಲ್ಲ!!

ಕ್ಷಣಕಾಲ ಮೈಮರೆತ ಮಹಾರಾಣಿ “ಇಲ್ಲ, ಸಾಧ್ಯವಿಲ್ಲ. ನಾನು ಝಾನ್ಸಿಯನ್ನು ಬಿಟ್ಟುಕೊಡಲಾರೆ” ಎಂದು ಉದ್ಗರಿಸಿದಳು. ಆಡಳಿತದ ಹೊಣೆ ತಪ್ಪಿದ ಮೇಲೆ ರಾಣಿ ಬ್ರಿಟಿಷರನ್ನು ತೊಲಗಿಸಲು ಯುದ್ಧಕ್ಕೆ ಸಜ್ಜಾಗಲು ಕುದುರೆ ಸವಾರಿ, ಬಂದೂಕುಗುರಿ, ಬಾಯಲ್ಲಿ ಲಗಾಮು ಕಚ್ಚಿಕೊಂಡು ಎರಡು ಕೈಗಳಿಂದ ಕತ್ತಿವರಸೆ, ಧನುರ್ವಿದ್ಯ ಇವುಗಳೆಲ್ಲವನ್ನು ಅಭ್ಯಾಸ ಮಾಡಿದರು. ಅಲ್ಲದೇ ಪೂಜೆ, ದೇವರ ಸ್ಮರಣೆ, ಧ್ಯಾನ, ವ್ಯಾಯಾಮ ಮಾಡುವುದರ ಜೊತೆಗೆ ತನ್ನೆಲ್ಲಾ ಕಾರ್ಯಗಳನ್ನು ನಿಯಮಬದ್ಧವಾಗಿ ಮಾಡುತ್ತಿದ್ದರು!!

ಅದೇ ಸಂದರ್ಭದಲ್ಲಿ ತಾತ್ಯಾಟೋಪಿ, ರಘುನಾಥ ಸಿಂಹ, ಜವಾಹರ ಸಿಂಹ ಮುಂತಾದ ಸ್ವಾತಂತ್ರ್ಯ ಪ್ರಿಯರು ರಾಣಿ ಲಕ್ಷ್ಮೀಬಾಯಿಯ ಭೇಟಿಗೆ ರಹಸ್ಯವಾಗಿ ಆಗಮಿಸುತ್ತಿದ್ದರು. ಜನತೆಯ ಅತೃಪ್ತಿ ಅಸಮಾಧಾನಗಳ ವಿವರಗಳನ್ನು ನೀಡುತ್ತಿದ್ದರು. ತನ್ನ ರಾಜ್ಯದ ಸುತ್ತಮುತ್ತಲಿನ ಭೌಗೋಳಿಕ ಪರಿಸ್ಥಿತಿ, ಆಯಕಟ್ಟಿನ ಸ್ಥಳಗಳು, ಪಂಜಾಬಿನ ಸಿಖ್ಖರು ಬ್ರಿಟಿಷರೊಡನೆ ಸೆಣಸಿದ ವಿಧಾನ-ವ್ಯೂಹಗಳನ್ನು ಕುರಿತು ರಾಣಿ ಲಕ್ಷ್ಮೀಬಾಯಿ ಎಚ್ಚರಿಕೆಯಿಂದ ಅಭ್ಯಾಸ ನಡೆಸಿದ್ದಳು. ರಾಣಿ ಕುದುರೆ ಸವಾರಿಗೆಂದು ಹೊರಹೊರಟಾಗ ವೀರಯೋಧನ ಉಡುಪು ಧರಿಸುತ್ತಿದ್ದಳು. ಗಾಳ-ಮೇಳ-ಮನೋಲ್ಲಾಸದ ರೂಪದಲ್ಲಿ ಸೇನಾ ಶಿಬಿರದಲ್ಲಿ ಅತೃಪ್ತಿಯ ಅಗ್ನಿಯನ್ನು ಪ್ರಜ್ವಲಗೊಳಿಸುವ ಕಾರ್ಯದಲ್ಲಿ ಮಹಿಳೆಯರೂ ತೊಡಗಿದರು. ಎಲ್ಲ ಸಮಾಚಾರಗಳೂ ರಾಣಿಗೆ ತಲುಪುತ್ತಿದ್ದವು. ಮೇ 31ನೇ ತಾರೀಖು ಭಾನುವಾರ ದೇಶದಲ್ಲಿ ದಂಗೆಯಾಗಬೇಕೆಂದು ತೀರ್ಮಾನವಾಯಿತು.

ದಾಮೋದರನೆಂಬ ಮಗುವನ್ನು ಲಕ್ಷ್ಮೀಬಾಯಿ ದತ್ತು ತೆಗೆದುಕೊಂಡರೂ ಬ್ರಿಟಿಷರು ದತ್ತು ಮಕ್ಕಳಿಗೆ ಹಕ್ಕಿಲ್ಲವೆಂಬ ನೀತಿಯನ್ನು ಅನುಸರಿಸಿ ಝಾನ್ಸಿಯನ್ನು ವಶಪಡಿಸಿಕೊಳ್ಳಲು ಯತ್ನಿಸಿದರು. ಆದರೆ ಝಾನ್ಸಿರಾಣಿ ತನ್ನ ಚಿಕ್ಕ ಸೈನ್ಯದೊಂದಿಗೆ ಬ್ರಿಟಿಷರನ್ನು ಸೋಲಿಸಲು ಹೊರಟ ಧೈರ್ಯವಂತ ರಾಣಿಯಾಗಿದ್ದರು!! ಅಷ್ಟೇ ಅಲ್ಲದೇ, ರಾಣಿಗೆ ಮುಂದರ ಮತ್ತು ಜೂಹಿ ಎಂಬ ಅಂಗರಕ್ಷಕಿಯರಿದ್ದರು. ಅವರೂ ಸಹ ವೀರ ಮಹಿಳೆಯರೇ ಆಗಿದ್ದರು. ಬದುಕಿರುವವರೆಗೂ ನಿಮ್ಮ ಜೊತೆಯಲ್ಲಿಯೇ ಇದ್ದು, ಸಾಯುವಾಗಲೂ ಸಹ ನಿಮ್ಮ ಜೊತೆಯಲ್ಲಿಯೇ ಇರುತ್ತೇವೆಂದು ಹೇಳಿ ವಚನವನ್ನು ನಿಭಾಯಿಸಿದ ವೀರ ಅಂಗರಕ್ಷಕಿಯರು!!

ಇತ್ತ ಡಾಲ್ ಹೌಸಿಯು ಸಂಸ್ಥಾನವನ್ನು ಪ್ರಾಂತ್ಯಗಳನ್ನಾಗಿ ಮಾಡಿದನು. ಆಗಿನ ಕಾಲದ ರಾಣಿಯ ಪತ್ರ ವ್ಯವಹಾರದಲ್ಲಿನ ಚಾತುರ್ಯವು ಅವರ ಬುದ್ಧಿಯ ಸಾಕ್ಷಿಯಾಗಿದೆ. ಉತ್ತರ ಹಿಂದುಸ್ಥಾನದ ಧುಮಸತ್ಯಾ ಸಂಘರ್ಷದಲ್ಲಿ ಇನ್ನೊಂದು ಕಿಡಿ ಸೇರಿಕೊಂಡಿತು. ರಾಣಿಯು ನಾನಾಸಾಹೇಬ ಹಾಗೂ ತಾತ್ಯಾಟೋಪೆಯೊಂದಿಗೆ ಸಂಧಾನ ಮಾಡಿದಳು. ಹ್ಯೂ ರೋಜನು ಝಾನ್ಸಿಯ ಮೇಲೆ ಆಕ್ರಮಣ ಮಾಡಲು ಬಂದಾಗ ರಾಣಿಯು “ಮೇರಿ ಝಾನ್ಸಿ ನಹಿ ದೂಂಗಿ” ಎಂದು ಸರ್ವಸಾಮಾನ್ಯ ಜನರೊಂದಿಗೆ ಹೋರಾಡಲು ಸಿದ್ಧಳಾದಳು. ಭಯಂಕರ ಯುದ್ಧವಾಯಿತು.

ಸರ್ ಹ್ಯೂರೋಜನ ಸೇನೆ 1858 ರ ಮಾರ್ಚ್ 23 ರಂದು ಸಮರ ಸಾರಿತು. ಪುಟ್ಟ ರಾಜ್ಯವಾದ ಝಾನ್ಸಿ 10-12 ದಿನಗಳವರೆಗೆ ಸೋಲು-ಗೆಲುವುಗಳ ನೆರಳು-ಬೆಳಕಿನಲ್ಲೇ ಸಾಗಿತು. ಒಮ್ಮೆ ಗೆಲುವು ಕಂಡು ನೆಮ್ಮದಿಯುಂಟಾದರೆ ಮರುಗಳಿಗೆಯಲ್ಲೇ ಸೋಲಿನ ಆಘಾತ. ನಿಷ್ಠರಾಗಿದ್ದ ಅನೇಕ ಸರದಾರರು ನೆಲವನ್ನಪಿದ್ದರು. ದುರ್ದೈವದಿಂದ ಹೊರಗಿನ ನೆರವೂ ಬಾರದಾಯಿತು. ಇಂಗ್ಲಿಷರ ಕೈ ಮೇಲಾಗಿ ಹ್ಯೂರೋಸ್‍ನ ಸೇನೆ ಝಾನ್ಸಿ ನಗರವನ್ನು ಪ್ರವೇಶಿಸಿದಾಗ ರಾಣಿಯೇ ಸ್ವಯಂಶಸ್ತ್ರ ಧರಿಸಿದಳು.

ಪುರುಷವೇಷ ಧರಿಸಿ ರಣಚಂಡಿಯಂತೆ ಸೆಣಸಿದಳು. ಅವಳು ಎಲ್ಲಿ ನುಗ್ಗಿದರೆ ಅಲ್ಲಿ ಬ್ರಿಟಿಷರ ಸೇನೆಯು ಆಹುತಿಯಾಗುತ್ತಿತ್ತು. ಆಕೆಯ ಸಮರ ಸಂಚಾಲನ ಕಾರ್ಯ ಮತ್ತು ಪುರುಷ ಸಹಜವಾದ ಕೆಚ್ಚಿನ ಕಾದಾಟ ಹ್ಯೂರೋಜನನ್ನೂ ಬೆರಗುಗೊಳಿಸಿತು. ಪರಿಸ್ಥಿತಿ ಹತೋಟಿ ತಪ್ಪಿದಾಗ ಮಹಾರಾಣಿ ಕೆಲವು ವೀರರೊಡನೆ ಶತ್ರು ಸೇನೆಯನ್ನು ಸೀಳಿಕೊಂಡು ಝಾನ್ಸಿಯನ್ನು ಬಿಟ್ಟು ಹೊರನಡೆದಳು. ಬೋಕರ್ ಎಂಬಾತ ಸೈನ್ಯದೊಡನೆ ಹಿಂಬಾಲಿಸಿದ. ಕದನದಲ್ಲಿ ಅವನೇ ಗಾಯಗೊಂಡು ಹಿಂದಿರುಗಿದ. ರಾಣಿಯ ಕುದುರೆ ಸಾವನ್ನಪ್ಪಿತು. ಆದರೂ ಆಕೆ ಎದೆಗುಂದದೆ ಕಾಲಪಿಗೆ ಹೋಗಿ ತಾತ್ಯಾಟೋಪಿ ಮತ್ತು ರಾವ್‍ಸಾಹೇಬ್ ಜೊತೆಗೂಡಿದಳು.

ಸೂರ್ಯೋದಯಕ್ಕೆ ಮೊದಲೇ ಇಂಗ್ಲಿಷರ ರಣಕಹಳೆ ಮೊಳಗಿತು. ರಾವ್ ಸಾಹೇಬರ ಅಧೀನದಲ್ಲಿದ್ದ ಎರಡು ದಳಗಳು ಮತ್ತೆ ಇಂಗ್ಲಿಷರ ಪರ ವಹಿಸಿದ ಸುದ್ದಿಯೂ ತಿಳಿಯಿತು. ರಾಣಿ ಲಕ್ಷ್ಮೀಬಾಯಿ ರಾಮಚಂದ್ರರಾವ್ ದೇಶಮುಖರನ್ನು ಕರೆಸಿ ಹೇಳಿದಳು : “ಇಂದು ಯುದ್ಧದ ಮುಕ್ತಾಯವೆಂದು ತೋರುತ್ತದೆ. ನಾನು ಸತ್ತರೆ ಮಗು ದಾಮೋದರನನ್ನು ನನ್ನ ಪ್ರಾಣಕ್ಕಿಂತಲೂ ಹೆಚ್ಚು ಮುಖ್ಯ ಎಂದು ಕಾಪಾಡಿ. ಇನ್ನೊಂದು ಮಾತು, ನಾನು ಸತ್ತರೆ ನನ್ನ ಶರೀರವನ್ನು ವಿಧರ್ಮೀಯರ ಕೈ ಸೇರದಂತೆ ನೋಡಿಕೊಳ್ಳಿ” ಎಂದು!!

ವೀರ ಮಾದಕ ತನ್ನ ಪುಟ್ಟ ಕಂದನನ್ನು ಬೆನ್ನ ಹಿಂದೆ ಕಟ್ಟಿ, ತನ್ನ ಕುದುರೆಯನ್ನೇರಿದ ರಾಣಿ ವೀರಾವೇಶದಿಂದ ಹೋರಾಡಿದಳು. ಮೂರು ದಿನಗಳ ಹೋರಾಟದ ನಂತರ ಕೋಟೆಯನ್ನು ಬ್ರಿಟಿಷರು ಮುತ್ತಿಗೆ ಹಾಕತೊಡಗಿದರು. ಬ್ರಿಟಿಷ್ ಸೇನೆಯ ಕೈಸೆರೆಯಾಗಲು ಇಚ್ಛಿಸದ ರಾಣಿ ಆಪ್ತಸೈನಿಕರೊಂದಿಗೆ ಕಲ್ಪಿ ತಲುಪಿದರು. ಅಲ್ಲಿಂದ ತಾತ್ಯಾ ಟೋಪೆಯ ಸೇನೆಯೊಂದಿಗೆ ಗ್ವಾಲಿಯರ್ ನತ್ತ ಪಯಣಿಸಿದಳು. ಮತ್ತೆ ಅವರು ಗ್ವಾಲಿಯರ್ ನ ರಕ್ಷಣೆಗೆ ಹೋರಾಡತೊಡಗಿದರು.

ವೀರಾವೇಷದಿಂದ ಹೋರಾಡುತ್ತಿದ್ದ ಸೈನಿಕರಿಗೆ ಅವಳು ಸಾಕ್ಷಾತ್ ದುರ್ಗೆಯಂತೆ ಕಂಡಳು. ಜೂನ್ 18, ಯುದ್ಧದ ಕೊನೆಯ ದಿನ.. ಬ್ರಿಟಿಷರ ಸೇನೆ 5 ಸಾವಿರ ಭಾರತೀಯ ಯೋಧರನ್ನು ಬಲಿತೆಗೆದುಕೊಂಡಿತ್ತು. ಎದೆಗುಂದದೆ ರಾಣಿ ಹೋರಾಡುತ್ತಲೇ ಇದ್ದಳು. ಕುದುರೆಯ ಲಗಾಮನ್ನು ಹಲ್ಲಿನಿಂದ ಕಚ್ಚಿಕೊಂಡು ಎರಡೂ ಕೈಗಳಿಂದ ಕತ್ತಿ ಬೀಸುತ್ತಾ ರಾಣಿ ಮುನ್ನಡೆದಳು. ಹಿಡಿಮಂದಿ ಪಠಾಣ ಸರದಾರರು, ರಘುನಾಥ ಸಿಂಹ, ರಾಮಚಂದ್ರರಾವ್ ದೇಶಮುಖ್ ಜೊತೆಗಿದ್ದರು. ಇಂಗ್ಲಿಷರ ಸೇನೆ ಸುತ್ತುಗಟ್ಟಿತ್ತು. ರಕ್ತದ ಓಕುಳಿ ನಡೆಯುತ್ತಿತ್ತು. ಪಚ್ಚಿಮ ದಿಗಂತದಲ್ಲಿ ಸೂರ್ಯನೂ ಅದೇ ಬಣ್ಣ ತೊಟ್ಟಿದ್ದ.

ಮಧ್ಯರಾತ್ರಿಯವರೆಗೆ ಒಂದೇ ಸಮನೆ ಹೋರಾಡಿದ್ದರೂ ಆಯಾಸದ ಕುರುಹೂ ಇಲ್ಲದಂತೆ ನದಿಯನ್ನು ದಾಟತೊಡಗಿದಳು. 400 ಬ್ರಿಟಿಷ್ ಸೈನಿಕರು ಅವಳ ಕುದುರೆಯನ್ನು ಹಿಂಬಾಲಿಸುತ್ತಿದ್ದರು. ಅತ್ಯಂತ ಸಮೀಪಕ್ಕೆ ಬಂದ ಇಂಗ್ಲಿಷ್ ಸೈನಿಕನೊಬ್ಬ ರಾಣಿಯ ಎದೆಗೆ ಗುರಿ ಇಟ್ಟು ಚೂರಿಯನ್ನೆಸೆದ. ಅದು ಸ್ವಲ್ಪ ಕೆಳಕ್ಕೆ ತಗುಲಿತು. ರಾಣಿ ಅದನ್ನೆಸೆದ ಸೈನಿಕನನ್ನು ಯಮಸದನಕ್ಕೆ ಕಳುಹಿಸಿದಳು. ಆಕೆಯ ಶರೀರದಿಂದ ರಕ್ತ ಸುರಿಯುತ್ತಿತ್ತು. ರಾಣಿ ಸ್ವರ್ಣರೇಖಾ ನಾಲೆಯನ್ನು ಹಾಯ್ದು ಹೋಗಬೇಕೆನ್ನುವಷ್ಟರಲ್ಲಿ ಅಲ್ಲಿಗೆ ಧಾವಿಸಿ ಬಂದ ಇಂಗ್ಲಿಷ್ ಸೈನ್ಯದ ಸರದಾರನೊಬ್ಬ ಹಾರಿಸಿದ ಗುಂಡು ಬಲತೊಡೆಗೆ ತಗುಲಿತು. ಎಡಗೈಯಿಂದಲೇ ಖಡ್ಗ ಪ್ರಹಾರ ಮಾಡಿದ ರಾಣಿ ಅವನಿಗೆ ಕೊನೆಗಾಣಿಸಿದಳು. ವೇಗವಾಗಿ ಹಿಂಬಾಲಿಸಿದ ಇಂಗ್ಲಿಷ್ ಸೈನಿಕನೊಬ್ಬನ ಖಡ್ಗ ಪ್ರಹಾರದಿಂದ ಬಲಕೆನ್ನೆಯೇ ಹರಿಯಿತು. ಆಕೆಯ ಕಣ್ಣು ಗುಡ್ಡೆಯೇ ಕಿತ್ತು ಬಂತು. ಆದರೂ ರಾಣಿ ಎಡಗೈಯಿಂದಲೇ ಆ ಸೈನಿಕನ ಭುಜವನ್ನು ಕತ್ತರಿಸಿದಳು.

ರಾಣಿಯ ಬೆಂಗಾವಲಾಗಿ ಕಾಯುತ್ತಿದ್ದ ಗುಲ್ ಮಹಮದ್‍ನಿಗೆ ತನ್ನ ದುಃಖವನ್ನು ತಡೆದುಕೊಳ್ಳಲಾಗಲಿಲ್ಲ. ಶೌರ್ಯದಿಂದ ಕಾದಾಡಿದ ಆ ಶೂರ ಬಿಕ್ಕಿಬಿಕ್ಕಿ ಅಳತೊಡಗಿದ. ರಘುನಾಥಸಿಂಹ ಮತ್ತು ರಾಮಚಂದ್ರರಾವ್ ದೇಶಮುಖ್ ರಾಣಿಯನ್ನು ಕುದುರೆಯಿಂದ ಕೆಳಗಿಸಿಕೊಂಡರು. ಕಣ್ಣೀರಿಡುತ್ತಿದ್ದ ಮಗು ದಾಮೋದರನನ್ನು ಕುದುರೆಯ ಮೇಲೆ ಕೂರಿಸಿದ ರಾಮಚಂದ್ರರಾವ್ ರಾಣಿಯ ಶರೀರವನ್ನು ತನ್ನ ತೊಡೆಯ ಮೇಲಿಟ್ಟುಕೊಂಡು ಗಂಗಾದಾಸರ ಕುಟೀರಕ್ಕೆ ಧಾವಿಸಿದ.

ರಘುನಾಥಸಿಂಹ ಮತ್ತು ಗುಲ್ ಮಹಮದ್ ಬೆಂಗಾವಲಾಗಿ ನಡೆದರು. ಇರುಳಿನಲ್ಲೂ ಬಾಬಾ ಗಂಗಾದಾಸ್ ರಾಣಿಯ ರಕ್ತಮಯ ಮುಖವನ್ನು ಗುರುತಿಸಿದರು. ತಣ್ಣೀರಿನಲ್ಲಿ ಮುಖ ತೊಳೆದರು. ಕೂಡಲೇ ಗಂಗಾಜಲ ಕುಡಿಸಿದರು. ಸ್ವಲ್ಪ ಚೇತರಿಸಿಕೊಂಡ ರಾಣಿ ನಡುಗುತ್ತಿದ್ದ ತುಟಿಗಳಿಂದ “ಹರಹರ ಮಹಾದೇವ್” ಎಂದು ಅಸ್ಪಷ್ಟವಾಗಿ ಹೇಳಿದಳು. ತಕ್ಷಣ ಮೂರ್ಛಿತಳಾದಳು. ಸ್ವಲ್ಪ ವೇಳೆಯ ನಂತರ ರಾಣಿ ಪ್ರಯಾಸದಿಂದ ಕಣ್ತೆರೆದಳು. ಆಗ ಅವಳು ತನಗೆ ಬಾಲ್ಯದಿಂದ ಬಾಯಿ ಪಾಠವಾಗಿದ್ದ ಭಗವದ್ಗೀತೆಯ ಶ್ಲೋಕಗಳನ್ನು ಮೆಲುಕು ಹಾಕುತ್ತಿದ್ದಳು. ಧ್ವನಿ ಕ್ಷೀಣವಾಗುತ್ತ ಕೊನೆಗೆ, “ಓಂ ನಮೋ ಭಗವತೇ ವಾಸುದೇವಾಯ” ಎಂದು ಕೇಳಿಬಂತು. ಝಾನ್ಸಿಯ ರಾಣಿ ವೀರಾಘೋಷಗಳನ್ನು ಕೂಗುತ್ತಲೇ ಕೊನೆಯುಸಿರೆಳೆದಳು!!

ಲಕ್ಷ್ಮೀಬಾಯಿಯವರ ಇತಿಹಾಸವನ್ನು ಓದುತ್ತಿದ್ದರೆ ಮೈ ಜುಮ್ಮೆನಿಸುತ್ತದೆ. ಲಕ್ಷ್ಮೀಬಾಯಿಗಿದ್ದ ಧೃಡ ಮನಸ್ಸು, ಧೈರ್ಯ, ಅಪಾರವಾದ ದೇಶಭಕ್ತಿ, ಜೀವನದಲ್ಲಿ ಎಲ್ಲವನ್ನೂ ಕಳೆದುಕೊಂಡರೂ ಧೃತಿಗೆಡದೆ ಜೀವನದ ಎಲ್ಲಾ ಸಮಸ್ಯೆಗಳನ್ನು ಮೆಟ್ಟಿ ಮುನ್ನಡೆಯುವುದು, ತನ್ನ ಪವಿತ್ರ ದೇಹದ ಬಗ್ಗೆಯಿದ್ದ ಕಾಳಜಿ ಎಲ್ಲರೂ ಮೆಚ್ಚುವಂಥದ್ದು. ಅಲ್ಲದೇ ಎಲ್ಲಾ ಮಹಿಳಾಕುಲವೇ ಇವರನ್ನು ಆದರ್ಶವಾಗಿಟ್ಟುಕೊಂಡು ಜೀವಿಸಿದರೆ ಜೀವನದ ಎಲ್ಲಾ ಸಮಸ್ಯೆಗಳನ್ನು ಧೈರ್ಯವಾಗಿ ಎದುರಿಸಿ ಬದುಕುವ ಛಲ ಬಂದೀತು. ಹೀಗೆ ಗುಣದಲ್ಲಿ ಲಕ್ಷ್ಮಿಯಾಗಿ ಜ್ಞಾನದಲ್ಲಿ ಸರಸ್ವತಿಯಾಗಿ ಸಾಹಸದಲ್ಲಿ ದುರ್ಗೆಯಾಗಿ ತನ್ನ ಝಾನ್ಸಿಯ ರಕ್ಷಣೆಗೆ ಪ್ರಾಣಕೊಟ್ಟ ವೀರನಾರಿ ಲಕ್ಷ್ಮಿಯ ಹೆಸರು ಇಂದಿಗೂ ಅಜರಾಮರ!!!
ಹೆಚ್ಚಿನ ಮಾಹಿತಿ ಕೃಪೆ:ಅಲೋಖಾ

ಬ್ರಿಟಿಷ್ ರು ಅಂದು ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ವನ್ನು ಕುತಂತ್ರದಿಂದ ಸಿಪಾಯಿ ದಂಗೆ ಎಂದು ಹೆಸರಿಟ್ಟರು. ಕಾರಣ ಸ್ವಾತಂತ್ರ್ಯ ಸಂಗ್ರಾಮ ಎನ್ನುವ ಪದ ಭಾರತೀಯರು ಮನಸ್ಸಲ್ಲಿ ಮೂಡಬಾರದು ಎಂದು. ಅಂದರೆ ಮತ್ತೆಲ್ಲಿ ಇದು ನಿರಂತರವಾಗುತ್ತೆ ಎಂಬ ಭಯದಲ್ಲಿ .

ಆದರೆ ಇದನ್ನು ಅರಿತ ಕ್ರಾಂತಿರತ್ನ ವೀರ ಸಾವರ್ಕರ್ ರವರು ಬ್ರಿಟಿಷರ ಆಶಯ ವಿರುದ್ಧವಾಗಿ "1857 ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ" ಎಂಬ ಮಹಾಗ್ರಂಥವನ್ನೆ ಬರೆದರು . ಮೊದಲಿಗೆ ಇದನ್ನು ಬ್ರಿಟಿಷ್ ರು ಬ್ಯಾನ್ ಮಾಡಿದರು . ಆದರೂ ನಮ್ಮ ಕ್ರಾಂತಿಕಾರಿಗಳ ಈ ಮಹಾಗ್ರಂಥ ಭಗವದ್ಗೀತೆ ಯಾಗಿತ್ತು. ಈ ಪುಸ್ತಕ ಈಗಲೂ ಸಿಗುತ್ತವೆ

ಕೇವಲ 22 ವರ್ಷಕ್ಕೆ ಭಾರತಾಂಬೆಗಾಗಿ ಯುದ್ದದಲ್ಲಿ ವೀರ ಹೋರಾಡುತ್ತಲೆ ಬಲಿದಾನವಾದ ಝಾನ್ಸಿ ರಾಣಿ ಲಕ್ಷ್ಮೀಬಾಯಿ ರವರ ಜಯಂತಿ ನವೆಂಬರ್ 19ರಂದು. ಒಮ್ಮೆಯಾದರು ಈ ಮಹಾತಾಯಿಯನ್ನು ನೆನೆದು ಹೃದಯದಿಂದ ಜೋರಾಗಿ ಜೈ ಘೋಷ ಹೇಳುವ ಮತ್ತು ಮಾತೆಗೆ ಜನ್ಮದಿನದ ಶುಭಾಶಯಗಳು ತಿಳಿಸಲು ಮರೆಯದಿರಿ.
ಜೈ ಝಾನ್ಸಿ ರಾಣಿ ಲಕ್ಷ್ಮೀಬಾಯಿ.
ಜೈಹಿಂದ್

ಕೃಪೆ # # #ವಂದೇಮಾತರಂ ಸೋಮಶಂಕರ
ಜೈ ಹಿಂದ್ ಜೈ ಕರ್ನಾಟಕ ಮಾತೆ🙏🙏🙏🙏🙏🙏🙏🙏🙏🙏🚩🚩🚩🚩🚩🚩🚩
#ಜಂಯಂತಿ

06/11/2025

“ದೃಷ್ಟಿಯಂತೆ ಸೃಷ್ಟಿ”

ದುರ್ಯೋಧನನಿಗೆ ಒಳ್ಳೆಯವರು ಯಾರೂ ಕಾಣಿಸಲಿಲ್ಲ!!

ಧರ್ಮರಾಜನಿಗೆ ಕೆಟ್ಟವರು ಯಾರೂ ಕಾಣಿಸಲಿಲ್ಲ!!!

ರಸ್ತೆಯಲ್ಲಿ ವಾಹನವನ್ನು ಓಡಿಸುವ ಚಾಲಕನ ಮನಸ್ಸು, ದೃಷ್ಟಿ ಪಕ್ಕದ ಚರಂಡಿಯ ಕಡೆಗೆ ತಿರುಗಿದರೆ ವಾಹನವೂ ಚರಂಡಿಗೇ ಹೋಗಿ ಬೀಳುವುದು!!

ನಮ್ಮ ಶರೀರವೆಂಬ ರಥವು ಸರಿಯಾದ ಮಾರ್ಗದಲ್ಲಿ ನಡೆಯಲು ನಮ್ಮ ಮನಸ್ಸು ಮತ್ತು ದೃಷ್ಟಿ ಅತ್ಯಂತ ಮುಖ್ಯವಾದುದು.

ಯಾವ ವ್ಯಕ್ತಿಗಳ, ವಸ್ತುಗಳ ಮತ್ತು ದೇವರ ವಿಷಯದಲ್ಲಿ ನಮ್ಮ ಮನಸ್ಸು ದೃಷ್ಟಿ ಹೇಗಿರುವುದೋ ಫಲವೂ, ಪರಿಣಾಮವೂ ಸಹ ಹಾಗೇ ಇರುವುದು.

ಒಳ್ಳೆಯ ಗುಣ, ಆದರ್ಶ ವ್ಯಕ್ತಿಗಳನ್ನು ಪ್ರೀತಿಸುವ, ಆರಾಧಿಸುವ ಮನುಷ್ಯರಿಗೆ ಅದರ ಫಲ ಸಿಗುವುದು.

ದುರ್ಗುಣಗಳನ್ನು, ದುಷ್ಟ ವ್ಯಕ್ತಿಗಳನ್ನು ಪ್ರೀತಿಸುವರಿಗೆ,ಆರಾಧಿಸುವವರಿಗೆ ಅದರ ಪರಿಣಾಮವಾಗಿ ಕೆಟ್ಟ ಫಲ ಸಿಗುವುದು.

ಸುಭಾಷಿತ -

ಮಂತ್ರೇ ತೀರ್ಥೇ ತಥಾ ದೈವೇ ದೈವಜ್ಞೇ ಭೇಷಜೇ ಗುರೌl
ಯಾದೃಶೀ ಭಾವನಾ ಭವತಿ ಸಿದ್ಧಿರ್ಭವತಿ ತಾದೃಶೀll

ಮಂತ್ರ, ತೀರ್ಥ, ದೈವ, ದೈವಜ್ಞ, ಔಷಧ ಮತ್ತು ಗುರುಗಳ ವಿಷಯದಲ್ಲಿ ನಮಗೆ ಯಾವ ರೀತಿಯ ಭಾವನೆ ಇರುವುದೋ ಫಲವೂ ಹಾಗೇ ಸಿಗುವುದು.

ದೇವರನ್ನು ಪೂಜಿಸಿದರೆ ದೇವರಾಗುತ್ತೇವೆ.
ದೆವ್ವಗಳನ್ನು ಪೂಜಿಸಿದರೆ ದೆವ್ವಗಳಾಗುತ್ತೇವೆ.
#ಸುಭಾಷಿತ #ನುಡಿಮುತ್ತುಗಳು

05/11/2025

ಅಂದಿನ ಕಡೆಯ ರೈಲು ಪ್ಲಾಟ್‌ಫಾರ್ಮ್ ಬಿಟ್ಟು ಹೊರಟುಹೋಗಿತ್ತು. ವೃದ್ಧ ಮಹಿಳೆಯೊಬ್ಬರು ಒಬ್ಬಂಟಿಯಾಗಿ ಕುಳಿತಿದ್ದರು. ಗಮನಿಸಿದ ಕೂಲಿಯೊಬ್ಬ ಹತ್ತಿರ ಬಂದು "ಅಮ್ಮಾ, ಯಾರಿಗೆ ಕಾಯುತ್ತಿದ್ದೀರಿ? ಎಲ್ಲಿಗೆ ಹೋಗಬೇಕು?" ಎಂದು ಕೇಳಿದ.

"ನಾನು ದೆಹಲಿಗೆ ಹೋಗಬೇಕಿದೆ ಮಗ" ಅಂದರು ಆಕೆ.

"ಅಮ್ಮ, ಇವತ್ತು ಇನ್ನು ರೈಲುಗಳಿಲ್ಲ. ನಾಳೆ ಬೆಳಿಗ್ಗೆ ಬರುತ್ತೆ. ಬನ್ನಿ. ಇಲ್ಲಿ ರೆಸ್ಟ್ ತೆಗೆದುಕೊಳ್ಳಿ" ಅಂದ ಕೂಲಿ ಅವರನ್ನು ವೇಯ್ಟಿಂಗ್ ರೂಮಿಗೆ ಕರೆದೊಯ್ದ. ಸ್ವಲ್ಪ ಹೊತ್ತಾದ ಬಳಿಕ "ನಿಮ್ಮ ಮಗನ ಹೆಸರೇನು?" ಅಂತ ಕೇಳಿದ.

"ಅವನೂ ರೈಲ್ವೇ ಇಲಾಖೆಯಲ್ಲಿ ಕೆಲಸ ಮಾಡ್ತಿದ್ದಾನಂತೆ. ಏನು ಕೆಲಸ ಅಂತ ನನಗೂ ಗೊತ್ತಿಲ್ಲ" ಅಂದರು.

"ಹೆಸರೇನು ಅಮ್ಮ? ಅವರನ್ನು ಕಾಂಟ್ಯಾಕ್ಟ್ ಮಾಡಲು ಸಾಧ್ಯವಾ ನೋಡೋಣ" ಅಂದ.

"ಅವನ ಹೆಸರು ಲಾಲ್ ಬಹಾದ್ದೂರ್ ಶಾಸ್ತ್ರಿ. ನನಗೆ ಅವನು ಲಾಲ್" ಅಂದರು ಆ ತಾಯಿ ಮುಗ್ಧತೆಯಿಂದ ನಗುತ್ತಾ. ಶಾಸ್ತ್ರೀಜಿ ಆಗ ಕೇಂದ್ರ ರೈಲ್ವೇ ಮಂತ್ರಿ!

ಶಾಕ್ ಆದ ಕೂಲಿಯವ ಸುದ್ಧಿ ತಲುಪಿಸುತ್ತಲೇ ಇಡೀ ರೈಲುನಿಲ್ದಾಣದಲ್ಲಿ ಮಿಂಚಿನ ಸಂಚಲನ. ಕೆಲವೇ ಹೊತ್ತಿನಲ್ಲಿ ಅಲ್ಲಿಗೆ ಕಾರ್ ಬಂತು. ಆಕೆಗೂ ಆಶ್ಚರ್ಯವೋ ಆಶ್ಚರ್ಯ.

ದೆಹಲಿ ತಲುಪಿ ಮಗನ ಬಳಿ ಮುಗ್ಧತೆಯಿಂದ "ಮಗಾ, ನೀನು ಏನು ಕೆಲಸ ಮಾಡ್ತೀಯ ಅಂತಲೇ ನನಗೆ ಗೊತ್ತಿಲ್ಲ. ಇವರೆಲ್ಲ ಕೇಳಿದ್ರು. ನನಗೆ ಹೇಳಲಿಕ್ಕೇ ಗೊತ್ತಾಗಲಿಲ್ಲ" ಅಂದರಾಕೆ ಮುಗ್ಧತೆ ತುಂಬಿದ ಮುಜುಗರದಿಂದ, ಸಂಕೋಚದಿಂದ ನಗುತ್ತಾ.

"ಸಣ್ಣದೊಂದು ಕೆಲಸ ಬಿಡು ಅಮ್ಮ" ಅಂದರು ಲಾಲ್ ಬಹುದ್ದೂರ್ ಶಾಸ್ತ್ರಿ ಅದೇ ಮುಗ್ಧತೆಯಿಂದ, ಅದೇ ಸಂಕೋಚದಿಂದ. 🙏

ದುರಾದೃಷ್ಟ ಇವತ್ತು ಒಬ್ಬ ಪಂಚಾಯಿತಿ ಮೆಂಬರ್ ಗತ್ತು ಯಾವ ರೀತಿ ಇರುತ್ತೆ ಅಂತ ಬಿಡಿಸಿ ಹೇಳಬೇಕಿಲ್ಲ ಅಲ್ವೇ ?
(ಕೃಪೆ - Bharatiy Sanskar)

04/11/2025

ವಿಧಿಯಾಟ ಬಲ್ಲವರು ಯಾರು? ಅದು ಒಬ್ಬೊಬ್ಬರ ಜೀವನದಲ್ಲಿ ಒಂದೊಂದು ರೀತಿಯ ಆಟವಾಡುತ್ತದೆ ಅಲ್ಲವೇ...

ಈಕೆಯನ್ನೇ ತಗೆದುಕೊಳ್ಳಿ, ಹೆಸರು ಪ್ರತೀಕ್ಷಾ. ಪುಣೆಯ ಬಡ ಕುಟುಂಬವೊಂದರಲ್ಲಿ ಜನಿಸಿದ ಈಕೆಗೆ ಮನೆಯ ಆರ್ಥಿಕ ಕಷ್ಟಗಳಿಂದ ಹತ್ತನೇ ತರಗತಿಯನ್ನೂ ಪೋರೈಸಲಾಗಿರಲಿಲ್ಲ. ಮನೆಯವರು ಆಕೆಯ 17 ನೇ ವಯಸ್ಸಿಗೆ ಮುಂಬೈನ ಎಸ್ ಬಿ ಐ ಬ್ಯಾಂಕಿನಲ್ಲಿ ಬುಕ್ ಬೈಂಡರ್ ಆಗಿ ಕೆಲಸ ಮಾಡುತ್ತಿದ್ದ ಸದಾಶಿವ ಕಾಡು ಎಂಬ ಹುಡುಗನೊಂದಿಗೆ ಮದುವೆ ಮಾಡಿದರು. ಗಂಡನೊಂದಿಗೆ ಮುಂಬೈಗೆ ತೆರಳಿ ಸಂಸಾರ ಹೂಡಿದಳು.

ಒಂದೂವರೆ ವರ್ಷದಲ್ಲಿ ವಿನಾಯಕ ಎಂಬ ಗಂಡು ಮಗುವೂ ಆಯಿತು. ಅನುಕೂಲ ನೋಡಿಕೊಂಡು ಊರ ದೇವರಿಗೆ ಮಗುವಿನ ಮುಡಿ ಕೊಟ್ಟು ಹರಕೆ ಸಲ್ಲಿಸಲು ಮುಂಬೈಯಿಂದ ತಮ್ಮೂರಿಗೆ ಪ್ರಯಾಣ ಹೊರಟರು. ಆದರೆ ಮಾರ್ಗಮಧ್ಯದಲ್ಲಿ ಅಪಘಾತ ನಡೆದು ಸದಾಶಿವ ಕಾಡು ಮರಣಹೊಂದಿದ. ಹೆಚ್ಚು ಓದದ, ಲೌಕಿಕ ಜ್ಞಾನವಿಲ್ಲದ ಪ್ರತೀಕ್ಷಾ ಎಂಬ ಹುಡುಗಿಯನ್ನ, ಆ ವಿಧಿ ಆಕೆಯ 20 ನೇ ವಯಸ್ಸಿಗೆ ವಿಧವೆಯನ್ನಾಗಿಸಿ ರಸ್ತೆ ಮಧ್ಯೆ ನಿಲ್ಲಿಸಿಬಿಟ್ಟಿತು.

ತಾನೊಬ್ಬಳೇ ಆಗಿದ್ದರೆ ಬದುಕು ಹೇಗೆ ಕಳೆಯುತ್ತಿತ್ತೋ? ಮಡಿಲಲ್ಲೊಂದು ಮಗುವಿದೆ, ತನ್ನ ಕೈಯಲ್ಲಿ ಅದರ ಭವಿಷ್ಯವಿದೆ. ಗಂಡನೊಂದಿಗೆ ಕುಟುಂಬಕ್ಕೆ ಬರುವ ವರಮಾನವೂ ನಿಂತು ಹೋಯಿತು. ಮುಂದೆ ಹೇಗೆ?

ಯಾರದೋ ಸಲಹೆಯ ಮೇರೆಗೆ ಗಂಡನ ಉಳಿದ ಬಾಕಿ ಹಣವನ್ನು ಪಡೆಯಲು ಬ್ಯಾಂಕಿಗೆ ಬಂದವಳು ತನಗೆ ಯಾವುದಾದರೂ ಕೆಲಸ ನೀಡಲು ಸಾಧ್ಯವೇ ಎಂದು ವಿಚಾರಿಸುತ್ತಾಳೆ. ಬ್ಯಾಂಕಿನ ಕೆಲಸಕ್ಕೆ ಬೇಕಾದ ವಿದ್ಯರ್ಹತೆ ಆಕೆಗಿಲ್ಲದ ಕಾರಣ ಕಸಗುಡಿಸುವ ಕೆಲಸ ಕೊಡುತ್ತಾರೆ. ಅದೂ ಅರೆಕಾಲಿಕ. ಕಸಗುಡಿಸುವ, ಶೌಚಾಲಯ ತೊಳೆಯುವ, ಪಿಠೋಪಕರಣಗಳನ್ನು ಒರೆಸುವ 2 ತಾಸು ಕೆಲಸಕ್ಕೆ 1984-85 ರ ವೇಳೆಗೆ ಆಕೆಗೆ ದೊರೆಯುತ್ತಿದ್ದ ಸಂಬಳ 60-65 ರೂಪಾಯಿ. ಅಷ್ಟು ಹಣ ಮನೆ ಖರ್ಚಿಗೆ ಸಾಲದ್ದರಿಂದ ಮತ್ತೊಂದೆರಡು ಮನೆ ಕಸ-ಮುಸುರೆಯಂತಹ ಕೆಲಸ ನೋಡಿಕೊಂಡಳು.

ಜೀವನೊಪಾಯದ ಚಿಂತೆ ಕಳೆದು ತನ್ನ ಕೆಲಸವನ್ನು ಶ್ರದ್ಧೆಯಿಂದ ಮಾಡಿಕೊಂಡು ಹೊರಟವಳು ಪ್ರತಿದಿನ ಬ್ಯಾಂಕಿನಲ್ಲಿ ನಡೆಯುವ ಕೆಲಸ, ಅಲ್ಲಿಯ ನೌಕರರನ್ನು ನೋಡುವಾಗ ಆ ಕೆಲಸ ತನ್ನಿಂದಾಗದ್ದೇನಲ್ಲ, ತಾನೂ ಏಕೆ ಪ್ರಯತ್ನಿಸಬಾರದು ಎಂಬ ಆಸೆ ಹುಟ್ಟತೊಡಗಿತು, ಅದು ಹಠವಾಯಿತು. ಅದಕ್ಕೇನು ಮಾಡಬೇಕೆಂದು ತಿಳಿದವರನ್ನು ಕೇಳತೊಡಗಿದಳು. ಅದಕ್ಕಾಗಿ ಇಂತಿಷ್ಟು ವಿದ್ಯಾರ್ಹತೆ ಬೇಕೆಂಬುದನ್ನು ತಿಳಿದುಕೊಂಡಳು..

ಬ್ಯಾಂಕಿನ ಸಿಬ್ಬಂದಿ ಮತ್ತು ಕೆಲ ಹಿತೈಷಿಗಳ ಸಲಹೆಯಂತೆ ಹತ್ತನೇ ತರಗತಿ ಪರೀಕ್ಷೆಗೆ ಸಿದ್ಧವಾದಳು. ಬಿಡುವು ಮಾಡಿಕೊಂಡು ಕಷ್ಟಪಟ್ಟು ಓದಿ ಹತ್ತನೇ ತರಗತಿ 60% ಅಂಕಗಳೊಂದಿಗೆ ಪಾಸುಮಾಡಿದಳು. ತಾನು ಮಾಡುತ್ತಿರುವ ಕೆಲಸ ಖಾಯಂ ಆಗಬೇಕಾದರೆ 12 ನೇ ತರಗತಿಯಾದರೂ ಪೋರೈಸಿರಬೇಕು ಹೀಗಾಗಿ ಸಮೀಪದ SNDT ಕಾಲೇಜಿನಲ್ಲಿ ಸಂಜೆ ತರಗತಿಗೆ ಸೇರಿ ಉತ್ತಮ ಅಂಕಗಳೊಂದಿಗೆ ಅದನ್ನೂ ಮುಗಿಸಿದವಳಿಗೆ ಇದ್ದ ಅರೆಕಾಲಿಕ ಕೆಲಸ ಖಾಯಂ ಆದಾಗ ವರ್ಣಿಸಲಾಗದಷ್ಟು ಖುಷಿಯಾಯಿತು. ತನ್ನ ಜೀವನದಲ್ಲಿ ಸ್ವಯಂ ಸಾಧಿಸಿದ ಮೊದಲ ವಿಜಯ ಅದಾಗಿತ್ತು.

ಮಗನ ಆರೈಕೆ, ಓದು, ಬ್ಯಾಂಕಿನ ಕೆಲಸದ ನಡುವೆ ಬಿಡುವು ಮಾಡಿಕೊಂಡು ಅದೇ ಸಂಜೆ ಕಾಲೇಜಿಗೆ ಸೇರಿ 1995 ರ ವೇಳೆಗೆ ಮನಶ್ಯಾಸ್ತ್ರ ವಿಭಾಗದಲ್ಲಿ ಪದವಿ ಪೋರೈಸಿದಳು. ಬ್ಯಾಂಕ್ ಆಕೆಗೆ ಕ್ಲರ್ಕ್ ಹುದ್ದೆ ನೀಡಿತು.

ಅಲ್ಲಿಂದಾಚೆಗೆ ಆಕೆ ಹಿಂತುರುಗಿ ನೋಡಿದ್ದೆ ಇಲ್ಲ. 2004 ರಲ್ಲಿ ಟ್ರೈನಿ ಆಫೀಸರ್ ಆಗಿ ನೇಮಕವಾದಳು, ಆ ನಂತರ ಸಿಜಿಎಂ ಆಗಿ, ಕೊನೆಗೆ 2021 ರಲ್ಲಿ ಎಜಿಎಂ ಹುದ್ದೆಗೆ ಬಡ್ತಿ ದೊರೆಯಿತು. ಯಾವ ಬ್ಯಾಂಕಿನಲ್ಲಿ ಕಸಗುಡಿಸುವ ಕೆಲಸಕ್ಕೆ ಅಂಗಲಾಚಿ ನಿಂತಿದ್ದಳೋ ಅದೇ ಬ್ಯಾಂಕಿನ ಎಜಿಎಂ ಆಗಿ ಆಡಳಿತವಹಿಸಿಕೊಂಡಳು.

ನಿಜವಾಗಿಯೂ ಇಂದಿನ ಯುವ ಪೀಳಿಗೆಗೆ ಆದರ್ಶವಾಗಿ, ಸ್ಪೂರ್ತಿಯಾಗಿ ನಿಲ್ಲಬೇಕಾದದ್ದು ದುಡ್ಡು ಕೊಟ್ಟವರು ಹೇಳಿದಂತೆ ನರ್ತಿಸುವ ನಟನಟಿಯರಲ್ಲ, ವಿಧಿಗೆ ಸೆಡ್ಡು ಹೊಡೆದು ನಿಂತು ಬದುಕು ಕಟ್ಟಿಕೊಂಡ ಪ್ರತೀಕ್ಷಾ ತೊಂಡ್ವಾಲ್ಕರ್ ಅಂತವರು..

ಬರಹ-- ಶ್ರೀ ಅಮರೇಶ ದೇಸಾಯಿ


🌷🎁🌷

01/11/2025

೭೦ ನೇ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು.
ಕನ್ನಡದ / ಕರ್ನಾಟಕದ ಮೊದಲಿಗರು
ಕನ್ನಡದ ಮೊದಲುಗಳು-

ದೊರೆ - ಮಯೂರವರ್ಮ

ಗಣಿತ ಶಾಸ್ತ್ರಜ್ಞ - ಮಹಾವೀರಾಚಾರ್ಯ

ವಚನಗಾರ - ದೇವರದಾಸಿಮಯ್ಯ

ಕನ್ನಡ ಅಕ್ಷರ ಅಚ್ಚಿನಮೊಳೆ ವಿನ್ಯಾಸ - ಅತ್ತಾವರ ಅನಂತಾಚಾರಿ

ಕನ್ನಡ ಬೆರಳಚ್ಚು ಯಂತ್ರ / ಕೀಲಿಮಣೆ - ಅನಂತ ಸುಬ್ಬರಾವ್

ಕನ್ನಡ ಲಿಪಿಯನ್ನ ಕಂಪ್ಯೂಟರ್ ಗಳವಡಿಸಿ ಸರಳ FONT ರಚನೆ - ಕೆ.ಪಿ.ರಾವ್

ಕನ್ನಡ ಶೀಘ್ರಲಿಪಿ - ರೆವರೆಂಡ್ ಬಿ.ಲೂಥಿ

ಪ್ರಾಧ್ಯಾಪಕ - ಟಿ.ಎಸ್.ವೆಂಕಣ್ಣಯ್ಯ

ರಾಜಕೀಯ / ಅತ್ಯುನ್ನತ ಹುದ್ದೆ

ಸೇನಾ ದಂಡನಾಯಕ - ಕೆ.ಎಂ.ಕಾರ್ಯಪ್ಪ

ಪ್ರಧಾನಮಂತ್ರಿ - ಹೆಚ್.ಡಿ.ದೇವೇಗೌಡ

ರಾಜ್ಯಪಾಲ - ಜಯಚಾಮರಾಜೇಂದ್ರ ಒಡೆಯರ್

ಮುಖ್ಯಮಂತ್ರಿ - ಕೆ.ಸಿ.ರೆಡ್ಡಿ

ಏಕೀಕೃತ ಕರ್ನಾಟಕದ ಮೊದಲ ಮುಖ್ಯಮಂತ್ರಿ - ಎಸ್.ನಿಜಲಿಂಗಪ್ಪ

ಪ್ರಶಸ್ತಿ ವಿಜೇತರು

ಭಾರತರತ್ನ ಪ್ರಶಸ್ತಿ ವಿಜೇತರು - ಸರ್ ಎಂ.ವಿಶ್ವೇಶ್ವರಯ್ಯ

ಮ್ಯಾಗ್ಸೆಸೇ ಪ್ರಶಸ್ತಿ ವಿಜೇತರು - ಕೆ.ವಿ.ಸುಬ್ಬಣ್ಣ

ಜ್ಞಾನಪೀಠ ಪ್ರಶಸ್ತಿ ವಿಜೇತರು - ಕುವೆಂಪು

ಪಂಪ ಪ್ರಶಸ್ತಿ ವಿಜೇತರು - ಕುವೆಂಪು

ರಾಷ್ಟ್ರಕವಿ - ಗೋವಿಂದ ಪೈ

ಕಾಳಿದಾಸ್ ಸಮ್ಮಾನ್ ವಿಜೇತರು - ಮಲ್ಲಿಕಾರ್ಜುನ ಮನ್ಸೂರ್

ಕಬೀರ್ ಸಮ್ಮಾನ್ ವಿಜೇತರು - ಗೋಪಾಲಕೃಷ್ಣ ಅಡಿಗ

ಜಮನ್ ಲಾಲ್ ಪ್ರಶಸ್ತಿ ವಿಜೇತರು - ತಗಡೂರು ರಾಮಚಂದ್ರರಾವ್

ಗೋಯೆಂಕಾ ಪ್ರಶಸ್ತಿ ವಿಜೇತರು - ಪಾ.ವೆಂ.ಆಚಾರ್ಯ

ರಾಷ್ಟ್ರ ಪ್ರಶಸ್ತಿ ಪಡೆದ ಯಕ್ಷಗಾನ ಕಲಾವಿದ - ಹಾರಾಡಿ ರಾಮಗಾಣಿಗ

ಕನ್ನಡ ಕೆಲಸಕ್ಕೆ ಡಾಕ್ಟರೇಟ್ - ಫರ್ಡಿನೆಂಡ್ ಕಿಟ್ಟೆಲ್

ಚಲನಚಿತ್ರ ಹಿನ್ನೆಲೆ ಗಾಯನಕ್ಕೆ ರಾಷ್ಟ್ರ ಪ್ರಶಸ್ತಿ - ಶಿವಮೊಗ್ಗ ಸುಬ್ಬಣ್ಣ

ಪುಸ್ತಕ ಪ್ರಕಾಶನಕ್ಕೆ ಪದ್ಮಶ್ರೀ - ಜಿ.ಬಿ.ಜೋಷಿ

ಸೋವಿಯತ್ ಲ್ಯಾಂಡ್ ಪ್ರಶಸ್ತಿ - ಬಸವರಾಜ್ ಕಟ್ಟಿಮನಿ

ಮೊದಲಿಗ ಮಹಿಳೆಯರು

ವಚನಗಾರ್ತಿ - ಅಕ್ಕಮಹಾದೇವಿ

ಪತ್ರಕರ್ತೆ / ಪ್ರಕಾಶಕಿ - ನಂಜನಗೂಡು ತಿರುಮಲಾಂಬಾ

ನಾಟಕ ರಂಗದ ಮೇಲೆ ಮೊದಲ ಸ್ತ್ರೀ - ಗಂಗೂಬಾಯಿ ಗುಳೇದಗುಡ್ಡ

ಮಹಿಳಾ ಮಂತ್ರಿ - ಗ್ರೇಸ್ ಠಕ್ಕರ್

ಸಾಹಿತ್ಯ ಸಮ್ಮೇಳನದ ಮಹಿಳಾ ಅಧ್ಯಕ್ಷರು - ಜಯದೇವಿ ತಾಯಿ ಲಿಗಾಡೆ

ಸೋವಿಯತ್ ಲ್ಯಾಂಡ್ ಪ್ರಶಸ್ತಿ ಪಡೆದ ಕನ್ನಡಿತಿ - ಅನುಪಮಾ ನಿರಂಜನ

ನವೋದಯ ಕವಯಿತ್ರಿ - ಬೆಳಗೆರೆ ಜಾನಕಮ್ಮ

ಪತ್ರಿಕಾ ಲೋಕ

ಪತ್ರಿಕೆ - ಮಂಗಳೂರು ಸಮಾಚಾರ (೧೮೪೮)

ದಿನಪತ್ರಿಕೆ - ಸೂರ್ಯೋದಯ ಪ್ರಕಾಶಿಕ (೧೮೭೦)

ಕನ್ನಡ e-ಪತ್ರಿಕೆ - ವಿಶ್ವಕನ್ನಡ

ವಾರ ಪತ್ರಿಕೆ - ಸುಬುದ್ಧಿ ಪ್ರಕಾಶ (೧೮೫೦)

ವಿಜ್ಞಾನ ಪತ್ರಿಕೆ - ವಿಜ್ಞಾನ

ವಿಡಿಯೋ ಪತ್ರಿಕೆ - ಬೆಳ್ಳಿಚುಕ್ಕಿ

ಮಕ್ಕಳ ಪತ್ರಿಕೆ - ಮಕ್ಕಳ ಪುಸ್ತಕ

ಮಹಿಳಾ ಪತ್ರಿಕೆ - ಕರ್ನಾಟಕ ನಂದಿನಿ (೧೯೧೩)

ಸಾಹಿತ್ಯಿಕ ವೈಜ್ಞಾನಿಕ ಪತ್ರಿಕೆ - ಕರ್ನಾಟಕ ಜ್ಞಾನ ಮಂಜರಿ (೧೮೭೮)

ಶಿಕ್ಷಣ ಪತ್ರಿಕೆ - ಕನ್ನಡ ಜ್ಞಾನ ಬೋಧಿನಿ (೧೮೬೨)

ಜಿಲ್ಲಾ ಪತ್ರಿಕೆ - ಜ್ಞಾನೋದಯ (ಶಿವಮೊಗ್ಗ)

ಕಾಮಶಾಸ್ತ್ರ ಪತ್ರಿಕೆ - ಪ್ರೇಮ

ಕಾನೂನು ಪತ್ರಿಕೆ - ನ್ಯಾಯ ಸಂಗ್ರಹ

ಚಲನಚಿತ್ರ ಪತ್ರಿಕೆ - ಸಿನಿಮಾ

ಹಾಸ್ಯ ಪತ್ರಿಕೆ - ವಿಕಟ ಪ್ರತಾಪ

ಅತಿ ಹೆಚ್ಚು ರಾಷ್ಟ್ರೀಯ ಪ್ರಶಸ್ತಿ ಪಡೆದಿರುವ ಪತ್ರಿಕೆ - ಉದಯವಾಣಿ

ಸಾಹಿತ್ಯ ಲೋಕ

ಕೃತಿ - ಕವಿರಾಜಮಾರ್ಗ

ಕಾವ್ಯ - ಆದಿಪುರಾಣ

ಗದ್ಯ - ವಡ್ಡಾರಾಧನೆ

ನಾಟಕ - ಮಿತ್ರಾವಿಂದಾ ಗೋವಿಂದಾ

ಗೀತ ನಾಟಕ - ಮುಕ್ತದ್ವಾರ

ಜ್ಯೋತಿಷ್ಯ ಗ್ರಂಥ - ಜಾತಕ ತಿಲಕ ( ಶ್ರೀಧರಾಚಾರ್ಯ )

ಸ್ವತಂತ್ರ ಪೌರಾಣಿಕ ನಾಟಕ - ಪೃಥು ವಿಜಯ

ಗಾದೆಗಳ ಸಂಕಲನ - ಕನ್ನಡ ಗಾದೆಗಳು

ಒಗಟುಗಳ ಸಂಗ್ರಹ - ಮಕ್ಕಳ ಒಡಪುಗಳು

ಪ್ರಬಂಧ ಸಂಕಲನ - ಲೋಕರಹಸ್ಯ

ಛಂದಶಾಸ್ತ್ರ ಗ್ರಂಥ - ಛಂದೋಂಬುಧಿ

ವೈದ್ಯ ಗ್ರಂಥ - ಗೋವೈದ್ಯ ( ಕೀರ್ತಿವರ್ಮ )

ವಿಷಯ ವಿಶ್ವಕೋಶ - ವಿವೇಕ ಚಿಂತಾಮಣಿ

ವಿಶ್ವಕೋಶ - ಲೋಕೋಪಕಾರ

ಮಕ್ಕಳ ವಿಶ್ವಕೋಶ - ಬಾಲ ಪ್ರಪಂಚ

ನವ್ಯತೆಯನ್ನೊಳಗೊಂಡ ಕಾದಂಬರಿ - ವಿಶ್ವಾಮಿತ್ರನ ಸೃಷ್ಟಿ (ಶ್ರೀರಂಗ)

ಮನೋವೈಜ್ಞಾನಿಕ ಕಾದಂಬರಿ - ಅಂತರಂಗ ( ದೇವುಡು )

ವ್ಯಾಕರಣ ಗ್ರಂಥ - ಶಬ್ದಮಣಿ ದರ್ಪಣ

ಲಾಕ್ಷಣಿಕ ಗ್ರಂಥ - ಕವಿರಾಜ ಮಾರ್ಗ

ಬೈಬಲ್ ಕನ್ನಡೀಕರಣ - ಜಾನ್ ಹ್ಯಾಂಡ್ಸ್

ಐತಿಹಾಸಿಕ ನಾಟಕಕಾರ - ಸಂಸ

ಪ್ರವಾಸ ಕಥನ - ದಕ್ಷಿಣ ಭಾರತ ಯಾತ್ರೆ

ಪತ್ತೇದಾರಿ ಕಾದಂಬರಿ - ಚೋರಗ್ರಹಣ ತಂತ್ರ

ಆಯುರ್ವೇದ ಗ್ರಂಥ - ಕರ್ಣಾಟಕ ಕಲ್ಯಾಣಕಾರಕ

ಸ್ವತಂತ್ರ ಸಾಮಾಜಿಕ ಕಾದಂಬರಿ - ಇಂದಿರಾಬಾಯಿ

ಐತಿಹಾಸಿಕ ಕಾದಂಬರಿ - ಮುದ್ರಾಮಂಜೂಷ

ಜೀವನಚರಿತ್ರೆ - ಕುಣಿಗಲ್ ರಾಮಾಶಾಸ್ತ್ರಿಗಳ ಜೀವನ ಚರಿತ್ರೆ

ಅಭಿನಂದನಾ ಗ್ರಂಥ - ಸಂಭಾವನೆ ( ಬಿ.ಎಂ.ಶ್ರೀ.ಯವರಿಗೆ )

ಇಂಗ್ಲೀಷ್ - ಕನ್ನಡ ನಿಘಂಟುಕಾರ - ವಿಲಿಯಮ್ ರೀವ್ಸ್

ತಾಂತ್ರಿಕ ಪದಕೋಶ - ಔದ್ಯಮಿಕ ನಿಘಂಟು

ಕಾವ್ಯ ನಿಘಂಟು - ರನ್ನಕಂದ

ಗದ್ಯ ನಿಘಂಟು - ಕರ್ಣಾಟಕ ಶಬ್ದಸಾರ

ವೈದ್ಯಕೀಯ ನಿಘಂಟು - ವೈದ್ಯ ಪದಕೋಶ

ಬಣ್ಣದ ಲೋಕ

ರಾಷ್ಟ್ರ ಪ್ರಶಸ್ತಿ ಪಡೆದ ಚಿತ್ರ - ಬೇಡರ ಕಣ್ಣಪ್ಪ

ಐತಿಹಾಸಿಕ ಚಿತ್ರ - ರಣಧೀರ ಕಂಠೀರವ

ಮೂಕಿ ಚಿತ್ರ - ಮೃಚ್ಛಕಟಿಕ

ವರ್ಣ ಚಲನಚಿತ್ರ - ಅಮರಶಿಲ್ಪಿ ಜಕಣಾಚಾರಿ

ಚಿತ್ರಮಂದಿರ - ಪ್ಯಾರಾಮೌಂಟ್ ( ೧೯೦೫ )

ಕಾದಂಬರಿ ಆಧಾರಿತ ಚಲನಚಿತ್ರ - ಕರುಣೆಯೇ ಕುಟುಂಬದ ಕಣ್ಣು

ರಿಯಾಯಿತಿ (ಸಬ್ಸಿಡಿ ) ಪಡೆದ ಚಿತ್ರ - ನಕ್ಕರೆ ಅದೇ ಸ್ವರ್ಗ

ಸಾಮಾಜಿಕ ಚಲನಚಿತ್ರ - ಸಂಸಾರ ನೌಕೆ (೧೯೩೬)

ಚಲನಚಿತ್ರ ಹಿನ್ನೆಲೆ ಗಾಯನಕ್ಕೆ ರಾಷ್ಟ್ರ ಪ್ರಶಸ್ತಿ - ಶಿವಮೊಗ್ಗ ಸುಬ್ಬಣ್ಣ

ಚಿತ್ರ ಸಂಗೀತಕ್ಕೆ ೨ ಬಾರಿ ರಾಷ್ಟ್ರ ಪ್ರಶಸ್ತಿ - ಬಿ.ವಿ.ಕಾರಂತ್

ಭಾವಗೀತೆ ಧ್ವನಿಸುರುಳಿ - ನಿತ್ಯೋತ್ಸವ

ವೃತ್ತಿನಾಟಕ ಕಂಪೆನಿ - ಶ್ರೀ ವೀರನಾರಾಯಣ ಪ್ರಾಸಾದಿತ ಕೃತಪುರ ನಾಟಕ ಮಂಡಳಿ

ಬೀದಿ ನಾಟಕ ಪ್ರಯೋಗ - ಕಟ್ಟು

ಹವ್ಯಾಸಿ ನಾಟಕ ತಂಡ - ಭಾರತ ಕಲೋತ್ತೇಜಕ ಸಂಗೀತ ಸಮಾಜ

ರೇಡಿಯೋ ನಾಟಕ - ನೀರಗಂಟಿ ಮಾರ ( ವಿ.ಕೆ.ಶ್ರೀನಿವಾಸನ್ )

ಪ್ರದರ್ಶನಗೊಂಡ ಅಸಂಗತ ನಾಟಕ - ಬೊಕ್ಕತಲೆಯ ನರ್ತಕಿ ( ಸುಮತೀಂದ್ರ ನಾಡಿಗ್ )

ನಾಡಿನ ಮೊದಲುಗಳು

ರಾಜವಂಶ - ಕದಂಬ

ಕೆರೆ - ಚಂದ್ರವಳ್ಳಿ

ಶಿಲ್ಪ - ನಾಗಶಿಲ್ಪ

ಶಾಸನ - ಹಲ್ಮಿಡಿ

ಕೋಟೆ - ಬಾದಾಮಿ ಕೋಟೆ

ಜೈನ ದೇವಾಲಯ - ಪ್ರಣವೇಶ್ವರ ದೇವಾಲಯ, ತಾಳಗುಂದ

ಬೌದ್ಧ ವಿಹಾರ - ಬನವಾಸಿ

ಅತಿ ಪ್ರಾಚೀನ ಕಲ್ಲಿನ ನಿರ್ಮಿತ ಕಟ್ಟಡ - ಹಲಸಿಯ ಜೈನ ಬಸದಿ

ವಿಶ್ವವಿದ್ಯಾಲಯ - ಮೈಸೂರು ವಿ.ವಿ.

ಕಾಲೇಜು - ಸೆಂಟ್ರಲ್ ಕಾಲೇಜು, ಬೆಂಗಳೂರು

ವೈದ್ಯಕೀಯ ಕಾಲೇಜು - ಮೈಸೂರು

ಪಾಲಿಟೆಕ್ನಿಕ್ ಕಾಲೇಜು - ಶ್ರೀ ಜಯಚಾಮರಾಜೇಂದ್ರ ಪಾಲಿಟೆಕ್ನಿಕ್ ಕಾಲೇಜು, ಬೆಂಗಳೂರು.
#ಕನ್ನಡ #ರಾಜ್ಯೋತ್ಸವ

Want your school to be the top-listed School/college in Mysore?

Click here to claim your Sponsored Listing.

Location

Category

Telephone

Website

Address


Mysore