Kannada Deevige

Kannada Deevige ಕನ್ನಡ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಕ?

https://youtu.be/1sfYzDkoLa0ಕನ್ನಡ ಅಭಿಮಾನವನ್ನು ಕುರಿತು ರಚಿಸಿ ಹಾಡಿರುವಈ ಗೀತೆಯನ್ನು ನೋಡಿ/ಆಲಿಸಿ... ಎಲ್ಲರಿಗೂ ಕಳುಹಿಸಿ..
07/11/2022

https://youtu.be/1sfYzDkoLa0
ಕನ್ನಡ ಅಭಿಮಾನವನ್ನು ಕುರಿತು ರಚಿಸಿ ಹಾಡಿರುವ
ಈ ಗೀತೆಯನ್ನು ನೋಡಿ/ಆಲಿಸಿ... ಎಲ್ಲರಿಗೂ ಕಳುಹಿಸಿ..

ಕನ್ನಡ ಭಾಷೆ ಸುಮಾರು ೨ ಸಾವಿರಕ್ಕೂ ಹೆಚ್ಚು ವರ್ಷಗಳ ಇತಿಹಾಸವನ್ನು ಹೊಂದಿರುವ ಸಮೃದ್ಧವಾದ ಭಾಷೆ. ತನ್ನ ಬೆಳವಣಿಗೆಯುದ್ದಕ್ಕೂ ಹಲವಾರ....

ಈ ಬಾರಿ ಕನ್ನಡ ರಾಜ್ಯೊತ್ಸವವನ್ನು ವಿಶೇಷವಾಗಿ ಆಚರಿಸುವ ಬಗ್ಗೆ ಸುತ್ತೋಲೆ.ಇದೇ 28/10/2021 ರ ಗುರುವಾರ ಬೆಳಿಗ್ಗೆ ಎಲ್ಲ ಶಾಲೆಗಳಲ್ಲಿ ಮೂರು ಗೀತ...
25/10/2021

ಈ ಬಾರಿ ಕನ್ನಡ ರಾಜ್ಯೊತ್ಸವವನ್ನು ವಿಶೇಷವಾಗಿ ಆಚರಿಸುವ ಬಗ್ಗೆ ಸುತ್ತೋಲೆ.
ಇದೇ 28/10/2021 ರ ಗುರುವಾರ ಬೆಳಿಗ್ಗೆ ಎಲ್ಲ ಶಾಲೆಗಳಲ್ಲಿ ಮೂರು ಗೀತೆಗಳನ್ನು ಹಾಡುವುದು ಹಾಗೂ ಕನ್ನಡ ದೇಶೀತನ ಸಾರುವ ವೇಷಭೂಷಣ ಹಾಗೂ ಕನ್ನಡ ಭಾಷಣ ದ ಕಾರ್ಯಕ್ರಮಗಳ ಆಯೋಜಿಸುವ ಕುರಿತು ಇಲಾಖೆಯ ಆದೇಶ.

ಮಹೇಶ ಎಸ್

*ಕೆಂಡದಂತಿರುತ್ತೇನೆ, ಇದ್ದಿಲಾಗಿ ಮಾರ್ಪಡುವುದಿಲ್ಲ!*  ಒಂದು ಊರಿನಲ್ಲಿ ನಿವೃತ್ತಿ ಹೊಂದಿದ ಹಿರಿಯರೆಲ್ಲಾ ಸೇರಿ ಒಂದು ಸಂಘವನ್ನು ಸ್ಥಾಪಿಸಿಕೊಂಡ...
25/10/2021

*ಕೆಂಡದಂತಿರುತ್ತೇನೆ, ಇದ್ದಿಲಾಗಿ ಮಾರ್ಪಡುವುದಿಲ್ಲ!*

ಒಂದು ಊರಿನಲ್ಲಿ ನಿವೃತ್ತಿ ಹೊಂದಿದ ಹಿರಿಯರೆಲ್ಲಾ ಸೇರಿ ಒಂದು ಸಂಘವನ್ನು ಸ್ಥಾಪಿಸಿಕೊಂಡರು. ಆ ಸಂಘದ ಉದ್ದೇಶವೇನೆಂದರೆ ಸಂಘದ ಸದಸ್ಯರೆಲ್ಲರೂ ಪರಸ್ಪರರ ಕಷ್ಟ ಸುಖಗಳಲ್ಲಿ ಭಾಗಿಯಾಗಿ ಅವರ ಒಳಿತು ಕೆಡಕುಗಳಿಗೆ ಸ್ಪಂದಿಸುವುದಾಗಿತ್ತು. ಇದರಿಂದಾಗಿ ಬಹಳಷ್ಟು ಮಂದಿಗೆ ಉಪಯೋಗವಾಗಿದ್ದಲ್ಲದೆ,ತಮ್ಮ ಜೀವನದ ಸಂಧ್ಯಾ ಕಾಲವು ಸಾರ್ಥಕವಾಗಿ ನಡೆಯುತ್ತಿದೆ ಎನ್ನುವ ಸಂತೃಪ್ತಿಯೂ ಅವರಲ್ಲಿ ಉಂಟಾಗಿತ್ತು. ಸಂಘದ ಸದಸ್ಯರು ಪ್ರತಿದಿನ ಸಾಯಂಕಾಲ ಒಂದೆಡೆ ನಿಯಮಿತವಾಗಿ ಸೇರಿ ತಮ್ಮ ಕಷ್ಟ ಸುಖಗಳನ್ನು ಹಂಚಿಕೊಳ್ಳುತ್ತಿದ್ದರು. ಹೀಗಿರಲಾಗಿ ಒಂದು ದಿನವೂ ತಪ್ಪದೇ ಸಂಜೆಯ ಕಾರ್ಯ ಕಲಾಪಗಳಲ್ಲಿ ಭಾಗಿಯಾಗುತ್ತಿದ್ದ ಆ ಸಂಘದ ಕಾರ್ಯದರ್ಶಿಗಳು ಸಾಲಾಗಿ ಮೂರು ದಿನಗಳ ಕಾಲ ಬರಲಿಲ್ಲ. ಇದರಿಂದ ಆತಂಕಗೊಂಡ ಆ ಸಂಘದ ಅಧ್ಯಕ್ಷರು ಕಾರ್ಯದರ್ಶಿಗಳ ಯೋಗಕ್ಷೇಮದ ಕುರಿತು ತಿಳಿದುಕೊಂಡು ಬರಲು ಒಬ್ಬ ಸದಸ್ಯನನ್ನು ಅವರ ಮನೆಗೆ ಕಳುಹಿಸಿದರು. ಅವನಿಂದ ತಿಳಿದು ಬಂದ ವಿಷಯವೇನೆಂದರೆ, ಕಾರ್ಯದರ್ಶಿಗಳ ಮಗನಿಗೆ ಬೇರೊಂದು ಊರಿಗೆ ವರ್ಗವಾಗಿತ್ತು. ಅವರ ಪತ್ನಿಯೂ ಸಹ ಕೆಲವು ವರ್ಷಗಳ ಹಿಂದೆ ಕಾಲವಾಗಿದ್ದರಿಂದ ದಿಕ್ಕು ತೋಚದಂತಾಗಿ ಒಂಟಿತನದಿಂದ ಅವರು ಖಿನ್ನರಾಗಿದ್ದರು. ಇದನ್ನು ತಿಳಿದುಕೊಂಡ ಅಧ್ಯಕ್ಷರು ನೇರವಾಗಿ ಕಾರ್ಯದರ್ಶಿಗಳ ಮನೆಗೆ ಹೋದರು. ಹೊರಗಡೆ ಬಹಳ ಚಳಿ ಇದ್ದದ್ದರಿಂದ ಇಬ್ಬರೂ ಅಡಿಗೆ ಮನೆಯಲ್ಲಿದ್ದ ಒಲೆಯ ಬಳಿಗೆ ಹೋದರು. ಒಲೆಯಲ್ಲಿದ್ದ ಕಟ್ಟಿಗೆಗಳು ನಿಗಿ ನಿಗಿ ಕೆಂಡವಾಗಿ ಚೆನ್ನಾಗಿ ಉರಿಯುತ್ತಿದ್ದವು. ಅಧ್ಯಕ್ಷರು ಒಂದು ಮಾತನ್ನೂ ಆಡದೆ ಒಲೆಯಲ್ಲಿ ಉರಿಯುತ್ತಿದ್ದ ಒಂದು ಕೆಂಡವನ್ನು ತೆಗೆದು ದೂರದಲ್ಲಿರಿಸಿದರು. ಒಂದೆರಡು ಕ್ಷಣಗಳಲ್ಲಿ ಅದು ಆರಿ ಇದ್ದಿಲಾಯಿತು. ಅಧ್ಯಕ್ಷರು ತಕ್ಷಣವೇ ಎದ್ದು, "ಹೋಗಿ ಬರುತ್ತೇನೆ" ಎಂದು ಹೇಳಿದರು. ಮನೆಯ ಅಂಗಳದವರೆಗೆ ಅವರೊಂದಿಗೆ ಬಂದ ಕಾರ್ಯದರ್ಶಿಗಳು, "ನನಗೆ ಒಳ್ಳೆಯ ಗುಣ ಪಾಠವನ್ನು ಹೇಳಿದಿರಿ. ನಾಳೆಯಿಂದ ನಾನು ಪ್ರತಿದಿನ ಸಂಜೆ ನಡೆಯುವ ಸಂಸ್ಥೆಯ ಕಾರ್ಯ ಕಲಾಪಗಳಲ್ಲಿ ತಪ್ಪದೇ ಪಾಲ್ಗೊಳ್ಳುತ್ತೇನೆ" ಎಂದರು. "ಹೌದಾ!" ಎಂದ ಅಧ್ಯಕ್ಷರ ಮಾತಿಗೆ ಪ್ರತಿಯಾಗಿ ಕಾರ್ಯದರ್ಶಿಗಳು, "ಒಲೆಯಲ್ಲಿನ ಇತರ ಕೆಂಡಗಳ ಜೊತೆಯಲ್ಲಿ ಇದ್ದಾಗ ಒಂಟಿ ಕೆಂಡವು ನಿಗಿ ನಿಗಿಯಾಗಿ ಉರಿದು ಶಾಖ ಮತ್ತು ಬೆಳಕನ್ನು ಕೊಡುತ್ತಿತ್ತು. ಅದನ್ನು ಪ್ರತ್ಯೇಕಿಸಿ ಬೇರೆ ಮಾಡಿದಾಗ ಅದು ತನ್ನ ಸ್ವಭಾವವನ್ನು ಕಳೆದುಕೊಂಡು ಇದ್ದಿಲಾಗಿ ಮಾರ್ಪಟ್ಟಿತು. ನಾನು ಕೆಂಡದಂತಿರುತ್ತೇನೆ.... ಇದ್ದಲಾಗಿ ಮಾರ್ಪಡುವುದಿಲ್ಲ" ಎಂದು ಪಶ್ಚಾತ್ತಾಪ ಪಡುತ್ತಾ ಹೇಳಿದರು.

ವ್ಯಕ್ತಿಯೊಬ್ಬ ಸಮಾಜಮುಖಿಯಾಗಿದ್ದರೆ ಅವನಲ್ಲಿನ ಶಕ್ತಿ ಪ್ರಜ್ವಲಿಸಿ ಪ್ರವರ್ಧಮಾನಕ್ಕೆ ಬರುತ್ತದೆ. ಅದೇ ಒಂಟಿಯಾಗಿದ್ದರೆ ಅವನಲ್ಲಿನ ಕರ್ತೃತ್ವ ಶಕ್ತಿ ಕ್ಷೀಣಿಸಿ ಅವನು ಕಳಾಹೀನನಾಗುತ್ತಾನೆ.

(ಆಧಾರ: ತೆಲುಗಿನಲ್ಲಿ ಹೈಂದವಿಯವರು ಬರೆದ ಆಕಾಶ ದೀಪಾಲು - ಆಕಾಶ ದೀಪಗಳು ಎನ್ನುವ ನೀತಿ ಕಥೆಗಳ ಸಂಗ್ರಹದಿಂದ ಆಯ್ದ ಕಥೆ)

#ಆಕಾಶ_ದೀಪಗಳು
****

ಮಹೇಶ ಎಸ್

ಈ ದಿನ ಬಿಜಾಪುರದ ಜ್ಞಾನಯೋಗಾಶ್ರಮದ ಮಹಾಸಂತರು, ಸರಳ ಸಜ್ಜನಿಕೆಯ ಸಾಕಾರಮೂರ್ತಿ, ಸಿದ್ಧೇಶ್ವರಸ್ವಾಮೀಜಿ ಅವರ ಜನುಮ ದಿನ. ಅವರ ಕುರಿತ ಈ ಮುಂದಿನ ಮ...
25/10/2021

ಈ ದಿನ ಬಿಜಾಪುರದ ಜ್ಞಾನಯೋಗಾಶ್ರಮದ ಮಹಾಸಂತರು, ಸರಳ ಸಜ್ಜನಿಕೆಯ ಸಾಕಾರಮೂರ್ತಿ, ಸಿದ್ಧೇಶ್ವರಸ್ವಾಮೀಜಿ ಅವರ ಜನುಮ ದಿನ. ಅವರ ಕುರಿತ ಈ ಮುಂದಿನ ಮಾಹಿತಿಯ ಮೂಲಕ ಅವರಿಗೆ ನನ್ನ ಈ ಭಕ್ತಿಪೂರ್ವಕ ನಮನಗಳು...

ಶ್ರೀ ಸಿದ್ಧೇಶ್ವರ ಸ್ವಾಮಿಗಳು (ಇಂದು ಜನ್ಮದಿನ)
**********************************
ಅತ್ಯಂತ ಸರಳ ಸಜ್ಜನಿಕೆಯ ಸಾಕಾರ ಮೂರ್ತಿ, ನನ್ನದು-ತನ್ನದೆಂಬ ಮಮಕಾರ ತೊರೆದ ಮಹಾಪುರುಷರೇ ಶ್ರೀ ಸಿದ್ಧೇಶ್ವರ ಸ್ವಾಮಿಗಳವರು,
ಇವರು ಸಂತರಷ್ಟೇ ಅಲ್ಲ ಜ್ಞಾನೋಪಾಸಕರು ಕೂಡ. ಸಂತರು ನಾಡಿನಲ್ಲಿ ಬಹಳ ಜನ ಇದ್ದರು, ಈಗಲೂ ಇದ್ದಾರೆ. ಆದರೆ ಜ್ಞಾನಯೋಗಿಗಳು ಬಹಳ ಅಪರೂಪ. ಅಂಥವರಲ್ಲೊಬ್ಬರು ಶ್ರೀ ಸಿದ್ಧೇಶ್ವರ ಸ್ವಾಮಿಗಳು.
ಬಿಜಾಪುರ(ವಿಜಯಪುರ)ದ ಜ್ಞಾನಯೋಗಾಶ್ರಮ ಜನತೆಗೆ ಜ್ಞಾನದಾಸೋಹ ನೀಡುವ ವಿಶಿಷ್ಟ ಕೇಂದ್ರ. ಗದುಗಿನ ಶಿವಾನಂದ ಶ್ರೀಗಳ ಪರಂಪರೆಯಲ್ಲಿ ಬಂದ ಈ ಆಶ್ರಮ ಇವರ ಗುರುಗಳಾದ ವೇದಾಂತ ಕೇಸರಿ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳ ಕಾಲದಲ್ಲಿ ಅತ್ಯಂತ ಪ್ರವರ್ಧಮಾನಕ್ಕೆ ಬಂತು.
ಉತ್ತರ ಕರ್ನಾಟಕದ ಜನಮಾನಸದಲ್ಲಿ ಬಹಳವಾಗಿ ಮಹತ್ವ ಪಡೆಯಿತು. ನಿಸ್ವಾರ್ಥ ಸೇವೆ, ಮಮಕಾರಗಳಿಲ್ಲದೆ, ಯಾರ ಹಂಗಿಗೂ ಒಳಗಾಗದೆ ಸರ್ವಜನರಿಂದಲೂ ಪ್ರೀತಿ, ವಿಶ್ವಾಸದ ಆಶ್ರಯತಾಣವಾಗಿ ಬೆಳೆಯಿತು.
ಪೂಜ್ಯ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ಪ್ರವಚನದ ಮೂಲಕ ಜನರಲ್ಲಿ ಜ್ಞಾನದ ಜ್ಯೋತಿಯನ್ನು ಬೆಳಗುತ್ತಿದ್ದರು. ಕರ್ನಾಟಕವಲ್ಲದೆ ಮಹಾರಾಷ್ಟ್ರದ ಪ್ರಮುಖ ನಗರಗಳಲ್ಲಿ ತಿಂಗಳುಗಟ್ಟಲೆ ಪ್ರವಚನ ನೀಡುತ್ತಿದ್ದರು. ಇವರ ಗಾಢ ಪ್ರಭಾವ ಸುತ್ತಮುತ್ತಲ ಜನರ ಮೇಲೆ ಉಂಟಾಗಿ ಕ್ರಮೇಣ ಶ್ರೀಗಳು ಗ್ರಾಮೀಣ ಪ್ರದೇಶದ ಮಕ್ಕಳು ವಿದ್ಯೆಗಾಗಿ ಕಷ್ಟಪಡುತ್ತಿದ್ದುದನ್ನು ಗಮನಿಸಿ ಅವರಿಗಾಗಿ ವಿದ್ಯಾಸಂಸ್ಥೆಗಳನ್ನು ಪ್ರಾರಂಭಿಸಿ ಅವರಿಗೆ ಊಟ, ವಸತಿಗಳಿಗೆ ವ್ಯವಸ್ಥೆ ಮಾಡಿದರು. ಇದರಿಂದಾಗಿ ಸಾವಿರಾರು ಮಕ್ಕಳು ವಿದ್ಯಾವಂತರಾದರು. ಹಾಗೆ ವಿದ್ಯೆ ಕಲಿಯಲು ಬಂದ ಸಾವಿರಾರು ಮಕ್ಕಳಲ್ಲಿ ಶ್ರೀ ಸಿದ್ದೇಶ್ವರರೂ ಒಬ್ಬರು.
ವಿಜಾಪುರ ಜಿಲ್ಲೆ ಬಿಜ್ಜರಗಿ ಗ್ರಾಮದ ಸಾಮಾನ್ಯ ರೈತ ಕುಟುಂಬದಲ್ಲಿ 1941 ಅಕ್ಟೋಬರ್ 24 ರಂದು ಶ್ರೀ ಸಿದ್ಧೇಶ್ವರರು ಜನಿಸಿದರು. ರೈತ ಕುಟುಂಬ ಎಂದ ಮೇಲೆ ಅಲ್ಲಿನ ಬಡತನ, ನಿರಕ್ಷರತೆಯ ವಾತಾವರಣವನ್ನು ವಿವರಿಸಿ ಹೇಳಬೇಕಾಗಿಲ್ಲ. ಊರಿನ ಶಾಲೆಯಲ್ಲಿಯೇ ನಾಲ್ಕನೇ ತರಗತಿವರೆಗೆ ಓದಿದ ನಂತರ ಅವರು ಮಲ್ಲಿಕಾರ್ಜುನ ಸ್ವಾಮಿಗಳ ಬಳಿ ಬಂದರು. ‘ಬೆಳೆಯುವ ಪೈರು ಮೊಳಕೆಯಲ್ಲೇ’ ಎಂಬಂತೆ ಬಾಲಕ ಸಿದ್ಧೇಶ್ವರನ ಚುರುಕುತನ ಮಲ್ಲಿಕಾರ್ಜುನ ಸ್ವಾಮಿಗಳ ಗಮನಕ್ಕೆ ಬರಲು ತಡವಾಗಲಿಲ್ಲ. ತಾವು ಪ್ರವಚನ ಮಾಡುವ ಸ್ಥಳಗಳಿಗೆ ಅವರು ಸಿದ್ಧೇಶ್ವರರನ್ನು ಕರೆದೊಯ್ಯ ತೊಡಗಿದರು. ಜೊತೆಯಲ್ಲಿಯೇ ಅವರ ಶಾಲಾ ಕಾಲೇಜುಗಳ ವಿದ್ಯಾಭ್ಯಾಸವೂ ಮುಂದುವರಿಯುವಂತೆ ನೋಡಿಕೊಂಡರು.
ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪದವಿ ನಂತರ ಸ್ನಾತಕೋತ್ತರ ವಿದ್ಯಾಭ್ಯಾಸಕ್ಕೆ ಕೊಲ್ಹಾಪುರ ವಿಶ್ವವಿದ್ಯಾನಿಲಯದಿಂದ ತತ್ವಶಾಸ್ತ ವಿಷಯದಲ್ಲಿ ಎಂ.ಎ ಪದವಿಯನ್ನು ಉನ್ನತ ಶ್ರೇಣಿಯಲ್ಲಿ ಪಾಸು ಮಾಡಿದರು.
ಎಂ.ಎ. ಪದವಿಯ ಅಭ್ಯಾಸದ ಸಮಯದಲ್ಲಿ ಶ್ರೀ ಸಿದ್ಧೇಶ್ವರರರು ಕೊಲ್ಹಾಪುರದಲ್ಲಿ ಶ್ರೀ ವಿಜಯ ಪಾಟೀಲರ ಮನೆಯಲ್ಲಿ ವಾಸವಿದ್ದರು. ಆ ಅವಧಿಯಲ್ಲಿಯೇ ತಮ್ಮ ಗುರುಗಳಾದ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ಮಾಡಿದ ಪ್ರವಚನಗಳನ್ನು
ಒಂದುಗೂಡಿಸಿ “ಸಿದ್ದಾಂತ ಶಿಖಾಮಣಿ “ಎಂಬ ಪುಸ್ತಕ ಬರೆದು ಗುರುಗಳ ಹೆಸರಿನಲ್ಲೇ ಪ್ರಕಟಿಸಿದ್ದರು.ಆಗ ಅವರಿಗೆ ಕೇವಲ 19 ವರ್ಷ ಮಾತ್ರ ಆಗಿತ್ತೆಂಬುದು ಗಮನಾರ್ಹ.
ಸಿದ್ದೇಶ್ವರರ ಮಾತು ಎಂದರೆ ಮಲ್ಲಿಕಾರ್ಜುನ ಸ್ವಾಮಿಗಳಿಗೆ ಬಲು ಪ್ರೀತಿ. ಆತ ಮಹಾ ಬುದ್ದಿವಂತ, ಆಧ್ಯಾತ್ಮಿಕದಂತೆ ಲೌಕಿಕ ವಿಷಯಗಳಲ್ಲೂ ವಿಶೇಷ ಪರಿಜ್ಞಾನವಿದೆ. ಮುಂದೆ ಜಗತ್ತಿಗೇ ದೊಡ್ಡವನಾಗುತ್ತಾನೆ ಎಂದು ವಿಶ್ವಾಸದಿಂದ ಎಲ್ಲರೆದುರು ಹೇಳುತ್ತಿದ್ದರು.
ಸ್ನಾತಕೋತ್ತರ ಪದವಿ ಪಡೆದು ಬಿಜಾಪುರಕ್ಕೆ ಹಿಂದಿರುಗಿದ ನಂತರ ಸಿದ್ದೇಶ್ವರರಿಗೆ ಭಗವದ್ಗೀತೆಯ ಬಗ್ಗೆ, ಉಪನಿಷತ್ತುಗಳ ಬಗ್ಗೆ ಮಲ್ಲಿಕಾರ್ಜುನ ಸ್ವಾಮಿಗಳು ವ್ಯಾಖ್ಯಾನವನ್ನು ನೀಡಿ ಅವರ ಜ್ಙಾನದಿಗಂತವನ್ನು ವಿಸೃತಗೊಳಿಸಿದರು. ಪೂಜ್ಯರು ಉಪನಿಷತ್ತುಗಳು, ಭಗವದ್ಗೀತೆ,ಯೋಗಸೂತ್ರ,ವಚನಶಾಸ್ತ್ರ ಮುಂತಾದ ವಿಷಯಗಳ ಬಗೆಗೆ ತಾವು ಹೇಗೆ ಗುರು ಮುಖೇನ ಕಲಿತ ಜ್ಙಾನವನ್ನು ಬಳಸಿಕೊಂಡು ಬೋದಪ್ರದ ಪ್ರವಚನಗಳನ್ನು ನೀಡುತ್ತಿದ್ದಾರೆ. ಗಹನವಾದ ವೇದಾಂತ ತತ್ವಗಳನ್ನು ಅತ್ಯಂತ ಸರಳವಾಗಿ ಜನಮಾನಸದಲ್ಲಿ ಉಳಿಯುವಂತೆ ವಿವರಿಸುವುದೇ ಅವರ ವೈಶಿಷ್ಟ್ಯ.
ಬಿಜಾಪುರ ಜ್ಞಾನಯೋಗಾಶ್ರಮದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಶ್ರೀ ಸಿದ್ಧೇಶ್ವರರು ತಮ್ಮ ಗುರುಗಳ ಮಾರ್ಗದರ್ಶನದಲ್ಲೇ ಆಶ್ರಮದ ಚಟುವಟಿಕೆಗಳನ್ನು ಮುಂದುವರಿಸಿಕೊಂಡು ಬರುತ್ತಿದ್ದಾರೆ. ಸಿದ್ದೇಶ್ವರರ ಪ್ರವಚನ ಕೇಳಿದವರು ಅದರಲ್ಲೇ ಅನುರಕ್ತರಾಗಿ ಬಿಡುತ್ತಾರೆ. ಅವರ ಪ್ರವಚನ ಕಾರ್ಯಕ್ರಮ ಎಲ್ಲಿ ಏರ್ಪಡಿಸಿದರೂ ಸಹ ಅಲ್ಲಿಗೆ ಸಾವಿರಾರು ಸಂಖ್ಯೆಯಲ್ಲಿ ಜನ ಸೇರುತ್ತಾರೆ.. ಒಂದು ಗಂಟೆಯ ಅವರ ಪ್ರವಚನದುದ್ದಕ್ಕೂ ಸೇರಿದ ಅಷ್ಟು ತುಂಬು ತನ್ಮಯತೆಯಿಂದ ಕುಳಿತಿರುತ್ತಾರೆ. ಸೂಜಿಗಲ್ಲಿನಂತಹ ಸೆಳೆತ, ಅವರು ಭಾಷೆ,ಧಾಟಿ,ಪ್ರದಪ್ರಯೋಗ,ಉದಾಹಣೆಗಳ ಮೂಲಕ ಪ್ರಚಲಿತ ಸಂಗತಿಗಳನ್ನು ಸಮ್ಮಿಳಿತಗೊಳಿಸುವರು. ಜೊತೆಗೆ ಕಲ್ಲು,ಮಣ್ಣು,ಗಿಡ,ಮರ,ಹೂ,ಹಕ್ಕು,ಪಕ್ಷಿ,ಪ್ರಾಣಿಗಳಲ್ಲಿ ಜೀವಚೈತನ್ಯವಿದೆ ಎಂಬುದನ್ನು ಅವರು ವಿವರಿಸುವ ರೀತಿ ಅದ್ಬುತವಾದುದು.
ತಮ್ಮ ಗುರುಗಳು ಸ್ಥಾಪಿಸಿದ ನೂರಾರು ವಿದ್ಯಾ ಸಂಸ್ಥೆಗಳನ್ನು ಸಿದ್ದೇಶ್ವರರು ಮುಂದುವರಿಸಿಕೊಂಡು ಬರುತ್ತಿದ್ದರೂ ಅವರ ಯಾವ ಸಂಸ್ಥೆಗಳಿಗೂ ಆಶ್ರಮದ ಹೆಸರಾಗಲಿ,ಅವರ ಹೆಸರಾಗಲಿ ಇರುವುದಿಲ್ಲ ಎಂದರೆ ಆಶ್ಚರ್ಯವಲ್ಲವೆ?
ಕೆರೆಯ ನೀರನ್ನು ಕೆರೆಗೆ ಚೆಲ್ಲಿ… ಎಂಬ ದಾಸ ವಾಣಿಯಂತೆ ನನ್ನದೇನಿದೆ,ಎಲ್ಲವೂ ಭಗವಂತನದು,ಇಲ್ಲಿರುವ ಪ್ರತಿಯೊಬ್ಬ ಮನುಷ್ಯನೂ ದೇವರು.ಎಲ್ಲರಲ್ಲೂ ದೇವರನ್ನು ಕಾಣಬೇಕು. ನಾನು ನನ್ನದೆಂಬ ಮಮಕಾರ ಸಲ್ಲದು. ಇಹಪರ ಎರಡೂ ಒಂದೆ ಎಂದು ಸಾರುತ್ತ ಅದರಂತೆ ನಡೆಯುತ್ತ ಇರುವ ಅಪರೂಪದ ಯೋಗಿಗಳು ಶ್ರೀ ಸಿದ್ದೇಶ್ವರರು.

ಮಹೇಶ ಎಸ್

"ನೀವು ಯಾರು.....?"ಶ್ರೀ ಸಿದ್ದೇಶ್ವರ ಸ್ವಾಮೀಜಿಯವರಿಂದ ಪ್ರವಚನ....ಪೂರ್ಣ ಕೇಳಿ...
23/10/2021

"ನೀವು ಯಾರು.....?"
ಶ್ರೀ ಸಿದ್ದೇಶ್ವರ ಸ್ವಾಮೀಜಿಯವರಿಂದ ಪ್ರವಚನ....
ಪೂರ್ಣ ಕೇಳಿ...

ಮಹೇಶ ಎಸ್

ಕನ್ನಡ ದೀವಿಗೆ ಕುಟುಂಬದ ಸರ್ವರಿಗೂ ಮಹರ್ಷಿ ವಾಲ್ಮೀಕಿ ಜಯಂತಿಯ ಶುಭಾಶಯಗಳು💐💐💐💐💐
20/10/2021

ಕನ್ನಡ ದೀವಿಗೆ ಕುಟುಂಬದ ಸರ್ವರಿಗೂ ಮಹರ್ಷಿ ವಾಲ್ಮೀಕಿ ಜಯಂತಿಯ ಶುಭಾಶಯಗಳು💐💐💐💐💐

ಮಹೇಶ ಎಸ್

ಇಂದಿನ ಚಿಂತನ :
20/10/2021

ಇಂದಿನ ಚಿಂತನ :

ಮಹೇಶ ಎಸ್

ಸಂಬಳದ ಶಿಕ್ಷಕರಾಗಬೇಡಿ..ಜ್ಞಾನವನ್ನು ಹೆಚ್ಚಿಸುವ ಶಿಕ್ಷಕರಾಗಿ.."ಶಿಕ್ಷಕರಿಗೆ ಗುರುರಾಜ ಕರ್ಜಗಿ ಅವರ ಕಿವಿಮಾತು..
19/10/2021

ಸಂಬಳದ ಶಿಕ್ಷಕರಾಗಬೇಡಿ..
ಜ್ಞಾನವನ್ನು ಹೆಚ್ಚಿಸುವ ಶಿಕ್ಷಕರಾಗಿ.."
ಶಿಕ್ಷಕರಿಗೆ ಗುರುರಾಜ ಕರ್ಜಗಿ ಅವರ ಕಿವಿಮಾತು..

ಮಹೇಶ ಎಸ್

ಮಾನವ ಮತ್ತು ಪ್ರಾಣಿಗಳ ಅಕ್ಕರೆ...
19/10/2021

ಮಾನವ ಮತ್ತು ಪ್ರಾಣಿಗಳ ಅಕ್ಕರೆ...

ಮಹೇಶ ಎಸ್

ಆತ್ಮೀಯ ಸಂಘದ ಪದಾಧಿಕಾರಿಗಳೇ.....🙏*ಮಧ್ಯಂತರ ರಜೆ ಮತ್ತು ಬೇಸಿಗೆ ರಜೆ ಕಡಿತಗೊಳಿಸಿರುವ ಕುರಿತು**Vacation ಸೌಲಭ್ಯ ವಿರುವ ಶಿಕ್ಷಕರಿಗೆ ಪ್ರತಿ...
19/10/2021

ಆತ್ಮೀಯ ಸಂಘದ ಪದಾಧಿಕಾರಿಗಳೇ.....🙏

*ಮಧ್ಯಂತರ ರಜೆ ಮತ್ತು ಬೇಸಿಗೆ ರಜೆ ಕಡಿತಗೊಳಿಸಿರುವ ಕುರಿತು*

*Vacation ಸೌಲಭ್ಯ ವಿರುವ ಶಿಕ್ಷಕರಿಗೆ ಪ್ರತಿ ವರ್ಷ ಕೇವಲ 10 ಗಳಿಕೆ ರಜೆ ನೀಡಲಾಗುತ್ತದೆ. ಉಳಿದ non vacation ನೌಕರರಿಗೆ 30 ಗಳಿಕೆ ರಜೆ ನೀಡಲಾಗುತ್ತದೆ.*!!

ಶಿಕ್ಷಕರಿಗೆ(ಶಾಲೆಗಳಿಗೆ) ಈ ವರ್ಷ ಮಧ್ಯಂತರ ರಜೆ *ಅಕ್ಟೋಬರ್ 10 ರಿಂದ 20 ರ ವರೆಗೆ 11 ದಿನ ನೀಡಿದ್ದು* ಅದರಲ್ಲಿ 6 ದಿನಗಳು ಸರ್ಕಾರಿ ರಜೆ ಸೇರಿವೆ. ಇವು ಎಲ್ಲಾ ರಾಜ್ಯ ಸರಕಾರಿ ರಜೆ ರಹಿತ ನೌಕರರಿಗೂ ದೊರೆಯುತ್ತವೆ. ಹಾಗಾಗಿ *ಶಿಕ್ಷಕರಿಗೆ ಈ ವರ್ಷ ಮಧ್ಯಂತರ ರಜೆ ದೊರೆತಿದ್ದು ಕೇವಲ 5 ದಿನ ಮಾತ್ರ!!*

👉ಪ್ರತಿ ವರ್ಷ ಶಿಕ್ಷಕರಿಗೆ ಮಧ್ಯಂತರ ರಜೆ ಅಕ್ಟೋಬರ್ ತಿಂಗಳಲ್ಲಿ 22 ರಿಂದ 26 ದಿನಗಳವರೆಗೆ ನೀಡಲಾಗುತ್ತದೆ.(ಪ್ರತಿ ವರ್ಷ ಮಧ್ಯಂತರ ರಜೆ ಹಂತ‌ಹಂತವಾಗಿ ಕಡಿಮೆ ಮಾಡುತ್ತ ಬರುತ್ತಿದ್ದಾರೆ ಯಾಕೆ?)

ಉದಾ: *2014-15 ಸಾಲಿನಲ್ಲಿ ಮಧ್ಯಂತರ ರಜೆಯನ್ನು ಅಕ್ಟೋಬರ್ 3 ರಿಂದ 28 ವರೆಗೆ 26 ದಿನಗಳ ರಜೆ* ನೀಡಲಾಗಿದೆ. (ಈ ಕುರಿತು ದಾಖಲೆಯನ್ನು ಲಗತ್ತಿಸಿದ್ದೇನೆ.)

👉ಜೊತೆಗೆ
ಪ್ರತಿ ವರ್ಷ ಬೇಸಿಗೆ ರಜೆ 48 ರಿಂದ 50 ದಿನಗಳು ನೀಡಲಾಗುತ್ತಿದ್ದು
*ಬೇಸಿಗೆ ರಜೆಯನ್ನು ಈ ವರ್ಷ ಕಡಿತಗೊಳಿಸಲಾಗಿದೆ. ಮೇ 1 ರಿಂದ 28 ರ ವರೆಗೆ ಕೇವಲ 28 ದಿನಗಳು ಮಾತ್ರ...!!* ಈ ಕುರಿತು ದಾಖಲೆ ಲಗತ್ತಿಸಿದ್ದೇನೆ.

(ಬೇಸಿಗೆ ರಜೆ ಹಂತ ಹಂತವಾಗಿ ಕಡಿತಗೊಳಿಸುತ್ತಿದ್ದಾರೆ)..!

*ಕೋವಿಡ್ ಕಾರಣ ಮುಂದಿಟ್ಟು ಬೇಸಿಗೆ ರಜೆ ಕಡಿತಗೊಳಿಸಲಾಗಿದೆ.*

ಈ ವರ್ಷ ರಜೆ ಕಡಿತಗೊಳಿಸಲು ನೀಡಿದ ಕಾರಣ
ಈ ವರ್ಷ ಭೌತಿಕ ತರಗತಿಗಳು ಪ್ರೌಢ ವಿಭಾಗದಲ್ಲಿ ಅಗಸ್ಟ್ 23 ರಿಂದ ಹಾಗೂ ಪ್ರಾಥಮಿಕ ವಿಭಾಗ ಸೆಪ್ಟೆಂಬರ್ 6 ರಿಂದ ಪ್ರಾರಂಭಿಸಿರುವುದು ಎಂದು ಹೇಳಬಹುದು.....!

*ವಾಸ್ತವವಾಗಿ ಶಿಕ್ಷಕರು ಜೂನ್ 1 ರಿಂದಲೇ ಶಾಲೆಗಳಿಗೆ ಹೋಗಿ ಕರ್ತವ್ಯ ನಿರ್ವಹಿಸಿದ್ದಾರೆ online ತರಗತಿ ಮಾಡಿದ್ದಾರೆ...!*

ಈ ಎಲ್ಲಾ ಅಂಶಗಳನ್ನು ಗಮನಿಸಿರುವ ಶಿಕ್ಷಕರು ಮಕ್ಕಳ ಹಿತದೃಷ್ಟಿಯಿಂದ ಮಧ್ಯಂತರ ರಜೆ ಮತ್ತು ಬೇಸಿಗೆ ರಜೆ ಕಡಿತಗೊಳಿಸಿದ್ದರೂ ಸುಮ್ಮನಿದ್ದಾರೆ.

ಆದರೆ ಇದನ್ನು ನೌಕರರ ಹಿತದೃಷ್ಟಿಯಿಂದ ನೋಡಲಾಗಿ ಪ್ರತಿ ಶೈಕ್ಷಣಿಕ ವರ್ಷ 74 ದಿನಗಳಿಗಿಂತ ಹೆಚ್ಚು ರಜೆ ಪಡೆಯುತ್ತಿದ್ದು ಅದರಲ್ಲಿ ಸರಕಾರಿ ರಜೆ ಮತ್ತು ರವಿವಾರ ಗಳನ್ನು ಕಳೆದರೂ *ವಾರ್ಷಿಕ ಕನಿಷ್ಠ 60 ದಿನಗಳ ರಜೆ ಶಿಕ್ಷಕರಿಗೆ ದೊರೆಯುತ್ತವೆ. ಇದೇ ಕಾರಣಕ್ಕೆ ಶಿಕ್ಷಕರಿಗೆ ವಾರ್ಷಿಕ ಕೇವಲ 10 ಗಳಿಕೆ ರಜೆ ಜಮಾ ಮಾಡಲಾಗುತ್ತದೆ....!*

ಈ ವರ್ಷ ಮಧ್ಯಂತರ ರಜೆ
*5 ದಿನ ಬೇಸಿಗೆ ರಜೆ 21 ದಿನ ಒಟ್ಟು 26 ದಿನಗಳ ರಜೆ ಮಾತ್ರ ನೀಡಲಾಗಿದೆ...!!*

ರಜೆ ಸೌಲಭ್ಯವಿರುವ ಸಿಬ್ಬಂದಗಳಿಗೆ KCSR ಪ್ರಕಾರ ವಾರ್ಷಿಕ ಕೇವಲ 10 ಗಳಿಕೆ ರಜೆ ಜಮಾ ಮಾಡಲಾಗುತ್ತದೆ.

ಆದರೆ ಇತ್ತೀಚಿನ ವರ್ಷಗಳಲ್ಲಿ ಶಿಕ್ಷಕರಿಗೆ ಸಿಗುವ ಮಧ್ಯಂತರ ರಜೆ ಮತ್ತು ಬೇಸಿಗೆ ರಜೆಯನ್ನು ಇಲಾಖೆಯ ಮೇಲಾಧಿಕಾರಿಗಳು ಹಂತ ಹಂತವಾಗಿ ಕಡಿತಗೊಳಿಸಿ ಆದೇಶ ಮಾಡುತ್ತಲೇ ಬರುತ್ತಿದ್ದಾರೆ....

*ಈ ವರ್ಷ ಶಿಕ್ಷಕರಿಗೆ ಸಿಗಬೇಕಾದ ಸುಮಾರು 39 ದಿನಗಳ ರಜೆ ಕಡಿತಗೊಳಿಸಲಾಗಿದೆ!!*

ಈಗ ಮಾನ್ಯ ಸಚಿವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ರವಿವಾರ ಸಹ ಶಾಲೆ ನಡೆಸುವ ಬಗ್ಗೆ ಚಿಂತನೆ ನಡೆಸಿದ್ದಾರೆ. ಈ ವರ್ಷದ ಶೈಕ್ಷಣಿಕ ಹಿನ್ನಡೆಯನ್ನು ಗಮನಿಸಿ.!!

ಕಡಿತಗೊಳಿಸಿರುವುದರ ಬಗ್ಗೆ ನನ್ನ ಚಕಾರವಿಲ್ಲ...! ನಾವೆಲ್ಲಾ ಖಂಡಿತವಾಗಿಯೂ ದುಡಿಯೋಣ... ಮಕ್ಕಳ ಪ್ರಗತಿಗಾಗಿ ಎಲ್ಲಾ ದಿನಗಳ ಬೋಧನೆಗೆ ನಾವೆಲ್ಲ ಸಿದ್ಧರಿದ್ದೇವೆ....

ಆದರೆ *ಕಡಿತಗೊಳಿಸಿರುವ 39 ದಿನಗಳಿಗೆ ಗಳಿಕೆ ರಜೆ ಮಂಜೂರು ಮಾಡಿ ಸೇವಾ ಪುಸ್ತಕದಲ್ಲಿ ನಮೂದಿಸಲು ಇಲಾಖೆ ಮೇಲಾಧಿಕಾರಿಗಳು ಆದೇಶ ಮಾಡುವರೇ??!*

ಯಾಕೆಂದರೆ ಶಿಕ್ಷಕರಾದ ನಾವು KCSR ಪ್ರಕಾರ ರಜೆ ಸಹಿತ (Vacation) ಹುದ್ದೆಗಳಿಗೆ ಸೇರಿದವರು.
*ವಾರ್ಷಿಕವಾಗಿ ಮಧ್ಯಂತರ ಮತ್ತು ಬೇಸಿಗೆ ರಜೆ ಸೇರಿ‌ 26 ದಿನಗಳ ರಜೆ ನೀಡಿ ವಾರ್ಷಿಕವಾಗಿ ಮೊದಲಿನಂತೆ ಕೇವಲ 10 ಗಳಿಕೆ ರಜೆ ನೀಡಿ ವರ್ಷಪೂರ್ತಿ ದುಡಿಸುವುದು ಎಷ್ಟರ ಮಟ್ಟಿಗೆ ನ್ಯಾಯ ಸಮ್ಮತ??!*

🙏🙏👇👇
*ಈ ಕುರಿತು ಜಿಲ್ಲಾ ಮತ್ತು ರಾಜ್ಯ ಸಂಘದ ಸಂಬಂಧಪಟ್ಟ ಅಧ್ಯಕ್ಷರಾಧಿಯಾಗಿ ಎಲ್ಲ ಪದಾಧಿಕಾರಿಗಳು ಮೇಲಾಧಿಕಾರಿಗಳು/ ಸಚಿವರ ಗಮನಕ್ಕೆ ತರುವರೇ?

(ಶ್ರೀ ಅರುಣ್ ಆರ್ಯ ಅವರ whatsapp ಸಂದೇಶದ ಯಥಾವತ್ತು)

ಮಹೇಶ ಎಸ್

ವಾರದ ಏಳೂ ದಿನ ಪೂರ್ಣದಿನ ಶಾಲೆ ನಡೆಸುವ ಅವೈಜ್ಞಾನಿಕ ಕ್ರಮವನ್ನು ಕೈಬಿಡುವಂತೆ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದಿಂದ ಮಾನ್ಯ ಮುಖ್ಯ ಮಂತ್ರಿಗಳ...
19/10/2021

ವಾರದ ಏಳೂ ದಿನ ಪೂರ್ಣದಿನ ಶಾಲೆ ನಡೆಸುವ ಅವೈಜ್ಞಾನಿಕ ಕ್ರಮವನ್ನು ಕೈಬಿಡುವಂತೆ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದಿಂದ ಮಾನ್ಯ ಮುಖ್ಯ ಮಂತ್ರಿಗಳಿಗೆ ಮನವಿ ಪತ್ರ...

ಮಹೇಶ ಎಸ್

ಮಹಾ ಮಾರಿ ಕೊರೋನಾ ಕುರಿತ ಪ್ರಬಂಧ
19/10/2021

ಮಹಾ ಮಾರಿ ಕೊರೋನಾ ಕುರಿತ ಪ್ರಬಂಧ

ಮಹೇಶ ಎಸ್

Address

Nanjangud
Mysore
571301

Telephone

+919481817617

Website

Alerts

Be the first to know and let us send you an email when Kannada Deevige posts news and promotions. Your email address will not be used for any other purpose, and you can unsubscribe at any time.

Contact The School

Send a message to Kannada Deevige:

Shortcuts

Share

Category