21/11/2024
ಶ್ರೀ ನಾರಾಯಣ ಢೋಂಗ್ರೆ ಸ್ಮರಣಾರ್ಥ ಕಾರ್ಯಕ್ರಮ.
ಪಂಡಿತ್ ರಾಜೀವ್ ತಾರಾನಾಥರ ಸಂಗೀತ ಪರಂಪರೆಯನ್ನು ಸಮರ್ಥವಾಗಿ ಮುಂದುವರೆಸುತ್ತಿರುವ ಯುವ ಕಲಾವಿದ ಶ್ರೀ ಸಚಿನ್ ಹಂಪಿಯವರ ಸರೋದ್ ಕಾರ್ಯಕ್ರಮ, ಪಂಡಿತ್ ಭೀಮಾಶಂಕರ್ ಬಿದನೂರರ ತಬಲಾ ಸಹಕಾರದೊಂದಿಗೆ. ಬನ್ನಿ.
07/11/2024
ಈ ತಿಂಗಳ ವಿಶೇಷ ಕಾರ್ಯಕ್ರಮ.
ಕನ್ನಡ ಕವಿಗಳ ರಚನೆಗಳು ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಪ್ರಸ್ತುತಿ
ವಿದ್ವಾನ್ ಮಾನಸ ನಯನ ಅವರಿಂದ.
ಅವರೊಡನೆಯ ವಾದ್ಯ ಸಹಕಾರದಲ್ಲಿ
ಪಿಟೀಲು: ವಿದ್ವಾನ್ ಕೇಶವಚಂದ್ರ ಮೋಹನ್ ಕುಮಾರ್
ಮೃದಂಗ: ವಿದ್ವಾನ್ ಸುನಿಲ್ ಸುಬ್ರಹ್ಮಣ್ಯ
ಘಟ: ವಿದ್ವಾನ್ ಶರತ್ ಕೌಶಿಕ್
ಬನ್ನಿ , ಪಾಲ್ಗೊಳ್ಳಿ
18/10/2024
ತರುಣ ಭಾರತೀ ಕಾರ್ಯಕ್ರಮ
ಅಕ್ಟೋಬರ್ 18 ಶುಕ್ರವಾರ.
ಬನ್ನಿ! ತರುಣರನ್ನು ಹುರಿದುಂಬಿಸೋಣ.
27/08/2024
ಗಾನಭಾರತೀಯ ವಾರ್ಷಿಕ ಕೃಷ್ಣ ಜಯಂತಿ ಕಾರ್ಯಕ್ರಮವು 30,31 ಆಗಸ್ಟ್ ಮತ್ತು 1 ಸೆಪ್ಟಂಬರ್ ಇದೆ.
ಸಂಗೀತ ಕಛೇರಿಗಳಲ್ಲದೇ, ಸಂಗೀತ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ನಾಡಿನ ಹಿರಿಯರಿಗೆ ಸನ್ಮಾನ ಸಮಾರಂಭವೂ ಇದೆ. ಮೂರು ದಿನವೂ ಪಾಲ್ಗೊಳ್ಳಿ.
14/08/2024
ಜಯದೇವನ ಗೀತಗೋವಿಂದ ಆಧಾರಿತ ನೃತ್ಯರೂಪಕ ಪ್ರದರ್ಶನ.
ರಾಸವೃಂದ ತಂಡದಿಂದ.
17-08-2024 ರಂದು
09/08/2024
ಇವತ್ತಿನ ವಿದುಷಿ ವಾಣಿ ರಾವ್ ಅವರ ಹಿಂದುಸ್ತಾನಿ ಸಂಗೀತ ಕಾರ್ಯಕ್ರಮ ಸಂಜೆ 6ಗಂಟೆಗೆ ಇದೆ. ಬನ್ನಿ.
26/07/2024
ಜಿ ಟಿ ನಾರಾಯಣರಾವ್ ಸಂಸ್ಮರಣ ಕಾರ್ಯಕ್ರಮ.
ಹಾಡುಗಾರಿಕೆ: ವಿದ್ವಾನ್ ಡಾ ಕೆ. ವಾಗೀಶ್
ಪಿಟೀಲು : ವಿದ್ವಾನ್ ಅನಂತಪದ್ಮನಾಭ
ಮೃದಂಗ : ವಿದ್ವಾನ್ ಎನ್ ವಾಸುದೇವ್
ಘಟ : ವಿದ್ವಾನ್ ಶರತ್ ಕೌಶಿಕ್
ಇವತ್ತು ಸಂಜೆ 6 ಗಂಟೆಗೆ
19/07/2024
ಶ್ರೀಮತಿ ವರದಾ ಢೋಂಗ್ರೆ ಸಂಸ್ಮರಣೆ ಕಾರ್ಯಕ್ರಮ
19 ಜುಲೈ 2024, ಸಂಜೆ 6:00 ಗಂಟೆಗೆ
ಹಾಡುಗಾರಿಕೆ : ವಿದುಷಿ ಇಳಾ ಸಂಗೀತಾ ದಿಲೀಪ್
ಪಿಟೀಲು : ವಿದುಷಿ ಸಿ. ವಿ. ಶೃತಿ
ಮೃದಂಗ : ವಿದ್ವಾನ್ ಅನೂರು ಅನಂತಕೃಷ್ಣ ಶರ್ಮಾ
ಖಂಜಿರಾ : ವಿದ್ವಾನ್ ಸುನಾದ್ ಅನೂರು
12/07/2024
ವಿದ್ವಾನ್ ಚಕ್ರಕೋಡಿ ನಾರಾಯಣ ಶಾಸ್ತ್ರಿ ನೆನಪಿನ ಸಂಗೀತ ಕಛೇರಿ
ಹಾಡುಗಾರಿಕೆ : ವಿ||ಎಂ.ಎ. ಜ್ಯೋತಿ
ಪಿಟೀಲು : ವಿ|| ಪೃಥ್ವೀ ಭಾಸ್ಕರ್
ಮೃದಂಗ : ವಿ|| ನೈವೇಲಿ ಕೆ ವಿ ರಾಮಕುಮಾರ್
ಘಟ : ವಿ|| ಶ್ರೀನಿಧಿ ಕೌಂಡಿನ್ಯ.
ದಿನಾಂಕ : 13 ಜುಲೈ, 2024 , ಶನಿವಾರ
05/07/2024
ನಾಡಿನ ಪ್ರಖ್ಯಾತ ಭಾಗವತರು, ಅರ್ಥಧಾರಿ ಗಳು, ಚಂಡೆ, ಮದ್ದಳೆ ಕಲಾವಿದರು ಎಲ್ಲರೂ ಮೇಳೈಸಿ ಮೈಸೂರಿಗರಿಗೆ ಅದ್ದೂರಿ ತಾಳಮದ್ದಳೆ ಉಣಬಡಿಸಲಿದ್ದಾರೆ.
ಪ್ರಸಂಗ: ಶಲ್ಯ ಸಖ್ಯ
ದಿನಾಂಕ:11.07.2024 ಗುರುವಾರ ಸಮಯ: ಸಂಜೆ 6.00 ರಿಂದ 9:30
ಬನ್ನಿ.
27/06/2024
ಗಾನಭಾರತೀ ಮತ್ತು ಮೈಸೂರು ಸಂಗೀತಸಭೆಗಳ ಒಕ್ಕೂಟ ಸೇರಿ ಆಯೋಜಿಸಿರುವ ವಿಶೇಷ ಕಾರ್ಯಕ್ರಮ: 'ಕರ್ನಾಟಕ ವಾಗ್ಗೇಯ ವೈಭವ'.
ಈ ಆವೃತ್ತಿಯಲ್ಲಿ ಮೈಸೂರಿನ ವಾಗ್ಗೇಯಕಾರರ ಕೃತಿಗಳನ್ನು ತಮ್ಮ ಸಂಗೀತದಲ್ಲಿ ಹೆಸರಾಂತ ಕಲಾವಿದರು ಪ್ರಸ್ತುತ ಪಡಿಸುತ್ತಿದ್ದಾರೆ .
ಈ ಕಾರ್ಯಕ್ರಮವು ಇವತ್ತಿನಿಂದ 4 ದಿನ ಜರುಗಲಿದ್ದು, ಭಾನುವಾರ ಮಧ್ಯಾಹ್ನ 1 ಗಂಟೆಗೆ ಸಮಾರೋಪ ಇರಲಿದೆ.
ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ.