05/10/2024
ಇರಲಿ ದಶಾಂತರ ಕಿಟಕಿಗಳು
ಮನೆಗೆ ಇರುವ ಕಿಟಕಿಗಳಂತೆ
ನನ್ನ ಬದುಕಿನ ಕೋಣೆಗೆ
ಇರಲಿ ದಶಾಂತರ ಕಿಟಕಿಗಳು…
ಹೊಸ ಕಿರಣಗಳಂತೆ ಬರಲಿ
ಹೊಸ ಹೊಸ ವಿಚಾರಗಳು,
ತನ್ನವಿಕಾರಗಳನ್ನು ತಿದ್ದುವ
ನಯವಾದ ಆಕಾರಗಳು,
ಶ್ರೇಷ್ಠ ಗುರುವಿನಂತೆ …
ಸೌಮ್ಯ ಗಾಳಿಯಂತೆ ಬರಲಿ
ಹೊಸ ಅನುಭವಗಳು,
ತಮ್ಮ ದಿವ್ಯ ಶಬ್ದಗಳಿಂದ
ಮನತಣಿಸುವ
ಅನಂತ ಗೆಳೆಯನಂತೆ…
ಬದುಕಿನ ದೃಷ್ಟಿಗೆ ಕಾಣಿಸಲಿ
ಅಗಾಧ ಸಮುದ್ರ,
ಅಹಿತ ಶೂನ್ಯ ಆಕಾಶ,
ವೈವಿಧ್ಯದ ಸೊಗಸಿನ ಕಾಡು,
ಇವೆಲ್ಲವೂ ಸೇರಿ
ಜ್ಞಾನದ ಕೈಪಿಡಿಯಾಗಿ ಒಡಕೊಡಲಿ
ಬದುಕಿನ ಪಾಠದ ದಾರಿಗೆ.
ಮನದ ಮಂದಿರದಲ್ಲಿರುವ
ಎಲ್ಲ ಬೇಡಿಕೆಗಳಿಗೆ
ಅಗತ್ಯವಿದೆ ಗೋಡೆಗಳ ನಡುವೆ
ಅನಂತತೆ ಸೂಚಿಸುವ ತೆರೆದ ಕಿಟಕಿಗಳ ಸಾಲು.
ಜೊತೆಗೆ,
ಆ ಕಿಟಕಿಗಳ ಬಾಗಿಲು ತೆರೆದು
ಅನುಭವಿಸಲು
ಚೈತನ್ಯವಿದ್ದ ಮನಸ್ಸಿನ
ಸುಂದರ ದೃಷ್ಟಿ…
- ಜೋವಿ