Ahlussunnah Kannada

Ahlussunnah Kannada عقيدة، أحكام، سنن، فوائد

02/03/2025
ಸತ್ಕರ್ಮಗಳ ಜಾಹೀರಾತುದಾರರಾಗದಿರಿ!📸❌❌📸بِسْمِ اللَّـهِ الرَّحْمَـٰنِ الرَّحِيمِಬಂಡೆಗಲ್ಲೊಂದು ಅಡ್ಡ ಬಂದು ಗುಹೆಯಲ್ಲಿ ಸಿಲುಕಿಕೊಂಡ ಮೂವ...
15/01/2025

ಸತ್ಕರ್ಮಗಳ ಜಾಹೀರಾತುದಾರರಾಗದಿರಿ!
📸❌❌📸
بِسْمِ اللَّـهِ الرَّحْمَـٰنِ الرَّحِيمِ

ಬಂಡೆಗಲ್ಲೊಂದು ಅಡ್ಡ ಬಂದು ಗುಹೆಯಲ್ಲಿ ಸಿಲುಕಿಕೊಂಡ ಮೂವರು ತಮ್ಮ ಸತ್ಕರ್ಮಗಳನ್ನು ತವಸ್ಸುಲ್ ಮಾಡಿಕೊಂಡು ಪ್ರಾರ್ಥಿಸಿದಾಗ ಬಂಡೆಗಲ್ಲು ನೀಗಿ ಅವರು ಗುಹೆಯಿಂದ ಪಾರಾದ ಘಟನೆಯನ್ನು ವಿವರಿಸುವ ರಸೂಲ್ ﷺ ರವರ ಪ್ರಸಿದ್ದ ಹದೀಸ್ ನೀವೆಲ್ಲಾ ತಿಳಿದಿರುವಿರಿ ತಾನೇ!?
عَنِ ابْنِ عُمَرَ، عَنِ النَّبِيِّ صَلَّى اللهُ عَلَيْهِ وَسَلَّمَ وَذَكَرَ حَدِيثَ الْغَارِ. وَقَالَ فِي آخِرِهِ: فَقَالَ رَسُولُ اللَّهِ صَلَّى اللهُ عَلَيْهِ وَسَلَّمَ: «مَنِ اسْتَطَاعَ مِنْكُمْ أَنْ تَكُونَ لَهُ خَبِيئَةٌ مِنْ عَمَلٍ صَالِحٍ فَلْيَفْعَلْ» (القضاعي في مسند الشهاب)
ಈ ಘಟನೆಯನ್ನು ವಿವರಿಸುವ ಇಬ್ನ್ ಉಮರ್رضي الله عنهما ರವರಿಂದ ವರದಿಯಾದ ಹದೀಸೊಂದರ ಕೊನೆಯಲ್ಲಿ, ರಸೂಲ್ﷺ ರವರು ಹೇಳುತ್ತಾರೆ ;
"ನಿಮ್ಮ ಪೈಕಿ ಯಾರಿಗಾದರೂ ತನ್ನ ಸತ್ಕರ್ಮಗಳ ಪೈಕಿ ರಹಸ್ಯವಾಗಿರುವುದನ್ನು ನಿರ್ವಹಿಸಲು ಸಾಧ್ಯವಾಗುವುದಾದರೆ ಅವನದನ್ನು ನಿರ್ವಹಿಸಲಿ".

عن الحسن قال: إنْ كانَ الرجل لقد جمع القرآن، وما يشعرُ جارُه. وإن كان الرجل لقد فَقُه الفقهَ الكثير، وما يشعرُ به الناس. وإن كان الرجل ليصلي الصلاة الطويلة في بيته وعنده الزَّوْر، وما يشعرون به. ولقد أدركنا أقوامًا ما كان على الأرض من عمل يقدرون على أن يعملوه في السرّ فيكون علانية أبدًا! ولقد كان المسلمون يجتهدون في الدعاء، وما يُسمع لهم صوت، إن كان إلا همسًا بينهم وبين ربهم، وذلك أن الله يقول:"ادعوا ربكم تضرعًا وخفية"، وذلك أن الله ذكر عبدًا صالحًا فرضِي فعله فقال: ﴿إِذْ نَادَى رَبَّهُ نِدَاءً خَفِيًّا﴾ ، [سورة مريم: ٣] . ( تفسير الطبري)

ನಮ್ಮ ಸಲಫ್'ಗಳು ತಮ್ಮ ಇಲ್ಮ್ ಮತ್ತು ಅಮಲನ್ನು (ಜ್ಞಾನ ಮತ್ತು ಸತ್ಕರ್ಮ) ಅದೆಷ್ಟು ಗುಪ್ತವಾಗಿಟ್ಟುಕೊಂಡಿದ್ದರೆಂಬುದನ್ನು ಕುರ್'ಆನ್ ಮುಫಸ್ಸಿರ್ ಇಮಾಮ್ ಇಬ್ನ್ ಜರೀರ್ ಅತ್ತಬ್ರೀ رحمه الله ತಮ್ಮ ತಫ್ಸೀರ್'ನಲ್ಲಿ ಉಲ್ಲೇಖಿಸುತ್ತಾರೆ...
ಹಸನ್ ಅಲ್ ಬಸರೀ رحمه الله ಹೇಳುತ್ತಾರೆ,
ಓರ್ವ ವ್ಯಕ್ತಿಯು ಕುರ್'ಆನ್ ಪೂರ್ಣವಾಗಿ ಕಂಠಪಾಠ ಮಾಡಿರುವನು, ಆದರೆ ಅವನ ನೆರೆಮನೆಯವನಿಗೆ ಕೂಡಾ ಅದು ತಿಳಿದಿರಲಾರದು. ಓರ್ವನು ಅಗಾಧ ಜ್ಞಾನವನ್ನು ಗಳಿಸಿರುವನು, ಆದರೆ ಜನರಿಗೆ ಅದು ತಿಳಿದಿರಲಾರದು. ಓರ್ವನು ತನ್ನ ಮನೆಯಲ್ಲಿ ದೀರ್ಘ ನಮಾಝ್ ನಿರ್ವಹಿಸುವನು, ತನ್ನ ಮನೆಯಲ್ಲಿ ಅತಿಥಿಗಳಿದ್ದೂ ಅವರಾರೂ ಅದನ್ನು ಗಮನಿಸಿರಲಾರರು. ಅದೆಷ್ಟೋ ಸಮೂಹವನ್ನು ನಾವು ಭೇಟಿಯಾಗಿರುವೆವು, ಅವರಾರೂ ಭೂಮುಖದಲ್ಲಿ ಗುಪ್ತವಾಗಿ ನಿರ್ವಹಿಸಲು ಸಾಧ್ಯವಾಗುವ ಯಾವುದೇ ಕರ್ಮವನ್ನೂ ಅದೆಂದಿಗೂ ಬಹಿರಂಗಗೊಳಿಸಲಿಲ್ಲ. ಮುಸ್ಲಿಮರು ದುಆ ಮಾಡುವುದರಲ್ಲಿ ತೀವ್ರವಾಗಿ ಪರಿಶ್ರಮಿಸುತ್ತಿದ್ದರು, ಆದರೆ ಅವರ ಪ್ರಾರ್ಥನೆಯ ಶಬ್ಧ (ಗದ್ದಲ) ಯಾರೂ ಆಲಿಸುತ್ತಿರಲಿಲ್ಲ - ಅದು ಅವರ ಮತ್ತು ಅವರ ರಬ್ಬ್'ನ ಮಧ್ಯೆಯಿರುವ ಪಿಸುಗುಟ್ಟುವಿಕೆ ಮಾತ್ರವಾಗಿತ್ತು. ಅದೇಕೆಂದರೆ ಅಲ್ಲಾಹು ಹೇಳುತ್ತಾನೆ,
ادْعُوا رَبَّكُمْ تَضَرُّعًا وَخُفْيَةً
'ನೀವು ನಿಮ್ಮ ರಬ್ಬ್'ನೊಂದಿಗೆ ವಿನಮ್ರರಾಗಿ ಮತ್ತು ಗುಪ್ತವಾಗಿ ಪ್ರಾರ್ಥಿಸಿರಿ'
[ಕುರ್'ಆನ್ - 7:55]

ಅದೇ ಪ್ರಕಾರ ಅಲ್ಲಾಹು ತನ್ನ ಓರ್ವ ಸಜ್ಜನ ದಾಸನ ಬಗ್ಗೆ ಅವರೆಸಗಿದ ಕಾರ್ಯವನ್ನು ಸಂತೃಪ್ತನಾಗಿ ಪ್ರಸ್ತಾಪಿಸುತ್ತಾನೆ,
﴿إِذْ نَادَى رَبَّهُ نِدَاءً خَفِيًّا﴾
ಅವರು ತನ್ನ ರಬ್ಬನ್ನು ಮೆಲುದನಿಯಲ್ಲಿ ಕರೆದು ಪ್ರಾರ್ಥಿಸಿದ ಸಂದರ್ಭವನ್ನು (ಸ್ಮರಿಸಿರಿ)
[ಕುರ್'ಆನ್ -19:3]

ಇಮಾಮ್ ಮಾಲಿಕ್ رحمه الله ರವರಿಂದ ಅತಿ ಹೆಚ್ಚಾಗಿ ಆಲಿಸಿದ್ದಾಗಿ ಇಬ್ನ್ ಮುಬಾರಕ್ رحمه الله ಹೇಳುತ್ತಾರೆ
"من أحب أن يفتح له فرجة في قلبه وينجو من غمرات الموت وأهوال يوم القيامة، فليكن في عمله في السر أكثر منه في العلانية."
ಯಾರು ತನ್ನ ಹೃದಯವು ವಿಶಾಲವಾಗಬೇಕೆಂದು ಬಯಸುತ್ತಾನೋ (ಮಾನಸಿಕ ದುಃಖ, ದುಮ್ಮಾನ, ಅಸ್ವಸ್ಥತೆಗಳಿಗೆ ಪರಿಹಾರ ಬಯಸುತ್ತಾನೋ) ಮತ್ತು ಮರಣದ ವೇದನೆಯಿಂದ ಹಾಗೂ ಅಂತ್ಯದಿನದ ಭಯಾನಕತೆಯಿಂದ ರಕ್ಷೆ ಹೊಂದಬೇಕೆಂದು ಬಯಸುತ್ತಾನೋ
ಅವನಿಗೆ ತನ್ನ ಬಾಹ್ಯಕರ್ಮಗಳಿಗಿಂತಲೂ ಹೆಚ್ಚು ರಹಸ್ಯ ಸತ್ಕರ್ಮಗಳಿರಲಿ!
- ترتيب المدارك للقاضي عياض - ٥١|٢

ಸಹೋದರರೇ! ಅಲ್ಲಾಹುವಿಗಾಗಿ ನಿಷ್ಕಳಂಕವಾಗಿ ನಿರ್ವಹಿಸಬೇಕಾದ ಪ್ರತಿಯೊಂದು ಕರ್ಮವನ್ನೂ ಫೋಟೋ- ವಿಡಿಯೋ ಮಾಡಿ, ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿ - ಮಿಂಚಿ ಸತ್ಕರ್ಮಗಳ ಜಾಹೀರಾತುದಾರರಾಗಿ ಮಾರ್ಪಡದಿರಿ. ಇಹಲೋಕದ ಸಂಕಷ್ಟಗಳಿಂದ ಪಾರಾಗಲು ಅಲ್ಲಾಹುವಿನ ಮುಂದಿಟ್ಟು ಪ್ರಾರ್ಥಿಸಲು ಮತ್ತು ಪರಲೋಕದಲ್ಲಿ, ಜನ್ನತ್ತಿನಲ್ಲಿ ಅಲ್ಲಾಹುವಿನ ಮುಖ ನೋಡಿ ಆನಂದ ತುಂದಿಲರಾಗಲು ನಮ್ಮ ಸತ್ಕರ್ಮಗಳನ್ನು ಮುಚ್ಚಿಡೋಣ, ಬಚ್ಚಿಡೋಣ! ಅಲ್ಲಾಹು ಅನುಗ್ರಹಿಸಲಿ...
ನೆನಪಿರಲಿ, ಇಸ್ಲಾಂ ಕಲಿಸುವ ಸತ್ಕರ್ಮಗಳಿಗೆ ಜಾಹೀರಾತುದಾರರ ಅಗತ್ಯವಿಲ್ಲ!!!

✍️ ವೀಕೆ

06/01/2025
21/12/2024

ಅಂದು 'ಮುಶ್ರಿಕರು ಕೇಳಿದ ಪ್ರಶ್ನೆ'
ಇಂದು 'ಮುಸ್ಲಿಯಾರರು ಕೇಳುತ್ತಿದ್ದಾರೆ'!"
عَنِ الزُّهْرِيِّ ، قَالَ : أَخْبَرَنِي سَعِيدُ بْنُ الْمُسَيَّبِ ، عَنْ أَبِيهِ قَالَ : لَمَّا حَضَرَتْ أَبَا طَالِبٍ الْوَفَاةُ جَاءَهُ رَسُولُ اللَّهِ صَلَّى اللَّهُ عَلَيْهِ وَسَلَّمَ، فَوَجَدَ عِنْدَهُ أَبَا جَهْلٍ، وَعَبْدَ اللَّهِ بْنَ أَبِي أُمَيَّةَ، فَقَالَ : " أَيْ عَمِّ، قُلْ : لَا إِلَهَ إِلَّا اللَّهُ، كَلِمَةً أُحَاجُّ لَكَ بِهَا عِنْدَ اللَّهِ ". فَقَالَ أَبُو جَهْلٍ، وَعَبْدُ اللَّهِ بْنُ أَبِي أُمَيَّةَ : أَتَرْغَبُ عَنْ مِلَّةِ عَبْدِ الْمُطَّلِبِ ؟ فَلَمْ يَزَلْ رَسُولُ اللَّهِ صَلَّى اللَّهُ عَلَيْهِ وَسَلَّمَ يَعْرِضُهَا عَلَيْهِ، وَيُعِيدَانِهِ بِتِلْكَ الْمَقَالَةِ حَتَّى قَالَ أَبُو طَالِبٍ آخِرَ مَا كَلَّمَهُمْ : عَلَى مِلَّةِ عَبْدِ الْمُطَّلِبِ. وَأَبَى أَنْ يَقُولَ : لَا إِلَهَ إِلَّا اللَّهُ. قَالَ : قَالَ رَسُولُ اللَّهِ صَلَّى اللَّهُ عَلَيْهِ وَسَلَّمَ : " وَاللَّهِ، لَأَسْتَغْفِرَنَّ لَكَ مَا لَمْ أُنْهَ عَنْكَ ". فَأَنْزَلَ اللَّهُ : { مَا كَانَ لِلنَّبِيِّ وَالَّذِينَ آمَنُوا أَنْ يَسْتَغْفِرُوا لِلْمُشْرِكِينَ } ، وَأَنْزَلَ اللَّهُ فِي أَبِي طَالِبٍ، فَقَالَ لِرَسُولِ اللَّهِ صَلَّى اللَّهُ عَلَيْهِ وَسَلَّمَ : { إِنَّكَ لَا تَهْدِي مَنْ أَحْبَبْتَ وَلَكِنَّ اللَّهَ يَهْدِي مَنْ يَشَاءُ }
ಸಈದ್ ಇಬ್ನ್ ಅಲ್ ಮುಸಯ್ಯಿಬ್ رحمه الله ತನ್ನ ತಂದೆಯಿಂದ, ವರದಿ ಮಾಡುತ್ತಾರೆ, ಅವರು ಹೇಳಿದರು, ಅಬೂ ತಾಲಿಬ್ ಮರಣಾಸನ್ನರಾದಾಗ ರಸೂಲ್ ﷺ ರವರು ಅವರ ಬಳಿ ಬಂದರು. ಆ ವೇಳೆ ಅವರ (ಅಬೂತಾಲಿಬ್'ರ) ಬಳಿ ಅಬೂ ಜಹಲ್ ಮತ್ತು ಅಬ್ದುಲ್ಲಾ ಬಿನ್ ಅಬೂ ಉಮಯ್ಯ (ಕುರೈಷಿ ಮುಶ್ರಿಕ್ ನೇತಾರರು) ಉಪಸ್ಥಿತರಿದ್ದರು. ರಸೂಲ್ ﷺ ರವರು ಅಬೂತಾಲಿಬ್ ರೊಂದಿಗೆ ಹೇಳಿದರು, 'ಓ ದೊಡ್ಡಪ್ಪಾ! ನೀವು لَا إِلَهَ إِلَّا اللَّهُ (ಅಲ್ಲಾಹುವಿನ ಹೊರತು ಆರಾಧನೆಗೆ ಹಕ್ಕುದಾರನಾಗಿ ಅನ್ಯರಿಲ್ಲ ) ಎಂದು ಹೇಳಿರಿ, ಆ (ಸಾಕ್ಷ್ಯ) ವಚನದಿಂದ ತಮಗಾಗಿ ಅಲ್ಲಾಹುವಿನ ಬಳಿ ನಾನು ವಾದಿಸುವೆನು. ಆಗ ಅಬೂ ಜಹಲ್ ಮತ್ತು ಅಬ್ದುಲ್ಲಾ ಬಿನ್ ಅಬೂ ಉಮಯ್ಯ (ಅಬೂತಾಲಿಬ್'ರೊಂದಿಗೆ) ಕೇಳಿದರು, ತಾವು (ತಮ್ಮ ತಂದೆ ) ಅಬ್ದುಲ್ ಮುತ್ತಲಿಬ್'ರ ಹಾದಿಯನ್ನು ( ಧರ್ಮವನ್ನು ) ತೊರೆಯುವಿರಾ? ರಸೂಲ್ ﷺ ರವರು ಅಬೂ ತಾಲಿಬ್'ರೊಂದಿಗೆ ಅದನ್ನು ಹೇಳುವುದನ್ನು ನಿಲ್ಲಿಸಲೇ ಇಲ್ಲ. ಅವರೀರ್ವರೂ ಕೂಡ
ಅಬೂ ತಾಲಿಬ್ لَا إِلَهَ إِلَّا اللَّهُ ಎಂದು ಹೇಳಲು ನಿರಾಕರಿಸಿ, ಅವರೊಂದಿಗೆ ತಾನಿದೋ ಅಬ್ದುಲ್ ಮುತ್ತಲಿಬ್ ರ ಧರ್ಮದಲ್ಲೇ (ಮರಣ ಹೊಂದುವೆನು)ಆಗಿರುವೆನು ಎಂದು ಅಂತಿಮವಾಗಿ ಹೇಳುವ ತನಕ ಅದನ್ನು (ತಾವು ಅಬ್ದುಲ್ ಮುತ್ತಲಿಬ್'ರ ಧರ್ಮವನ್ನು ತೊರೆಯುವಿರಾ ಎಂಬುದನ್ನು) ಪುನರಾವರ್ತಿಸುತ್ತಲೇ ಇದ್ದರು. ರಸೂಲ್ ﷺ ರವರು ಹೇಳಿದರು, ಅಲ್ಲಾಹುವಿನಾಣೆ! ಅಲ್ಲಾಹು ನನ್ನನ್ನು ತಡೆಯುವ ತನಕ ನಾನು ತಮಗಾಗಿ ಅಲ್ಲಾಹುವಿನೊಂದಿಗೆ ಪಾಪ ವಿಮೋಚನೆಯನ್ನು ಬೇಡುತ್ತಲೇ ಇರುವೆನು. ಆಗ ಅಲ್ಲಾಹು
{ مَا كَانَ لِلنَّبِيِّ وَالَّذِينَ آمَنُوا أَنْ يَسْتَغْفِرُوا لِلْمُشْرِكِينَ }
ಬಹುದೇವವಿಶ್ವಾಸಿಗಳು ಹೊತ್ತಿಯುರಿಯುವ ನರಕಾಗ್ನಿಯ ವಾಸಿಗಳಾಗಿ ರುವರೆಂದು ತಮಗೆ ಸ್ಪಷ್ಟವಾದ ಬಳಿಕ ಅವರಿಗಾಗಿ ಪಾಪಮುಕ್ತಿ ಯನ್ನು ಬೇಡುವುದು ಅವರು ಆಪ್ತ ಸಂಬಂಧಿಕರಾಗಿದ್ದರೂ ಸರಿ- ಪ್ರವಾದಿಯವರಿಗಾಗಲಿ ಸತ್ಯವಿಶ್ವಾಸಿಗಳಿಗಾಗಲಿ ಸಲ್ಲದು."
9: 113
ಎಂಬ ಕುರ್'ಆನ್ ಸೂಕ್ತಿಯನ್ನು ಅವತೀರ್ಣಗೊಳಿಸಿದನು.
ಅದೇ ರೀತಿ ಅಬೂತಾಲಿಬ್'ರ ಕಾರ್ಯದಲ್ಲಿ ಅವತೀರ್ಣಗೊಳಿಸುತ್ತಾ ಅಲ್ಲಾಹು ರಸೂಲ್ﷺರವರೊಂದಿಗೆ ಹೇಳಿದನು.
{ إِنَّكَ لَا تَهْدِي مَنْ أَحْبَبْتَ وَلَكِنَّ اللَّهَ يَهْدِي مَنْ يَشَاءُ }
ಖಂಡಿತವಾಗಿಯೂ ತಾವು ಇಷ್ಟಪಡುವವರನ್ನು ಸನ್ಮಾರ್ಗದಲ್ಲಿ ಸೇರಿಸಲು ತಮಗೆ ಸಾಧ್ಯವಾಗಲಾರದು. ಆದರೆ ಅಲ್ಲಾಹು ತಾನಿಚ್ಛಿಸುವವರನ್ನು ಸನ್ಮಾರ್ಗದಲ್ಲಿ ಸೇರಿಸುವನು. ಸನ್ಮಾರ್ಗ ಪಡೆದವರ ಕುರಿತು ಅವನು ಚೆನ್ನಾಗಿ ಅರಿತಿರುವನು.
(ಕುರ್'ಆನ್ -28:56) ಸಹೀಹ್ ಅಲ್ ಬುಖಾರಿ :4772

ಈ ಘಟನೆಯನ್ನು ಇಂದಿನ ಕಾಲಘಟ್ಟಕ್ಕೆ ತುಲನಾತ್ಮಕವಾಗಿ ಅಧ್ಯಯನಕ್ಕೊಳಪಡಿಸಿದರೆ ಇಂದೂ ಕೂಡಾ ಅಬೂ ಜಹಲ್ ಮತ್ತು ಅಬ್ದುಲ್ಲಾ ಬಿನ್ ಅಬೂ ಉಮಯ್ಯನ ಪಾತ್ರ ನಿರ್ವಹಿಸುವವರನ್ನು ನಾವು ಧಾರಾಳವಾಗಿ ಕಾಣಬಹುದು. ಇಸ್ಲಾಮಿನ ಮೂಲಭೂತ ವಿಶ್ವಾಸವಾದ ತೌಹೀದ್'ನೆಡೆಗೆ ಅದರ ಬಗ್ಗೆ ಅಜ್ಞರಾಗಿರುವ ಪಾಮರ ಜನತೆಯನ್ನು ನೀವು ಆಹ್ವಾನಿಸಿದರೆ, ಜನರ ಅಜ್ಞಾನವನ್ನೇ ತಮ್ಮ ಬಂಡವಾಳವನ್ನಾಗಿಸಿಕೊಂಡ ಪುರೋಹಿತ ವರ್ಗವು ನಿಮ್ಮ ತಂದೆ, ತಾತ,ಮುತ್ತಾತಂದಿರ ಹಾದಿಯನ್ನು ನೀವು ತೊರೆಯುವಿರಾ ಎಂಬ ಭಾವನಾತ್ಮಕ ಪ್ರಶ್ನೆಯನ್ನು ಕೇಳಿ ಜನ ಸಾಮಾನ್ಯರನ್ನು ಮರುಳುಗೊಳಿಸುವುದನ್ನು ಕಾಣಬಹುದು. ವಾಸ್ತವಿಕವಾಗಿ, ವ್ಯತ್ಯಾಸವಿಷ್ಟೇ! ಈ ಪ್ರಶ್ನೆಯನ್ನು 'ಅಂದು ಕುರೈಷಿ ಮುಶ್ರಿಕ್ ನೇತಾರರು' ಕೇಳಿದ್ದರೆ 'ಇಂದು ಸಮಸ್ತ ಮುಸ್ಲಿಯಾರರು' ಕೇಳುತ್ತಿದ್ದಾರೆ!
ಅಂದು ಆ ಮುಶ್ರಿಕರೊಂದಿಗೆ ಅಲ್ಲಾಹು ಮರುತ್ತರವಾಗಿ ಕೇಳಿದ ಪ್ರಶ್ನೆಯನ್ನೇ ತಮ್ಮ ಚಿಂತನಾ ಶಕ್ತಿಯನ್ನೆಲ್ಲಾ ಮುಸ್ಲಿಯಾರರ ಪಾದಬುಡದಲ್ಲಿ ಅಡವಿಟ್ಟ ಬಡಪಾಯಿಗಳೊಂದಿಗೆ ನಾವೂ ಕೂಡಾ ನೆನಪಿಸುತ್ತೇವೆ.

'ಅಲ್ಲಾಹು ಅವತೀರ್ಣಗೊಳಿಸಿರುವುದನ್ನು ಅನುಸರಿಸಿರಿ' ಎಂದು ಅವರೊಂದಿಗೆ ಹೇಳಲಾದರೆ 'ಇಲ್ಲ, ನಮ್ಮ ಪೂರ್ವಿಕರು ಯಾವುದನ್ನು ಅನುಸರಿಸುವುದಾಗಿ ನಾವು ಕಂಡಿರುವೆವೋ ಅದನ್ನೇ ನಾವು ಅನುಸರಿಸುವೆವು' ಎಂದು ಅವರು ಹೇಳುವರು. ಅವರ ಪೂರ್ವಿಕರು ಏನನ್ನೂ ಚಿಂತಿಸದವರು ಮತ್ತು ಸನ್ಮಾರ್ಗ ಪಡೆಯದವರಾಗಿದ್ದರೂ ಕೂಡ (ಇವರು ಅವರನ್ನು ಅನುಸರಿಸುವರೇ?)
(ಕುರ್'ಆನ್-2:170)

"ಅಲ್ಲಾಹು ಅವತೀರ್ಣಗೊಳಿಸಿರುವುದರೆಡೆಗೆ ಮತ್ತು ಸಂದೇಶವಾಹಕರೆಡೆಗೆ ಬನ್ನಿರಿ' ಎಂದು ಅವರೊಂದಿಗೆ ಹೇಳಲಾದರೆ 'ನಮ್ಮ ಪೂರ್ವಿಕರು ಯಾವ ಸ್ಥಿತಿಯಲ್ಲಿರುವುದಾಗಿ ನಾವು ಕಂಡಿರುವೆವೋ ಅದು ನಮಗೆ ಸಾಕು' ಎಂದು ಅವರು ಹೇಳುವರು. ಅವರ ಪೂರ್ವಿಕರು ಏನನ್ನೂ ಅರಿಯದವರೂ ಸನ್ಮಾರ್ಗ ಪಡೆಯದವರಾಗಿದ್ದರೂ (ಅದು ಅವರಿಗೆ ಸಾಕೇ?)
(ಕುರ್ 'ಆನ್ - 5:104)

✍️ಹಿದಾಯತುಲ್ಲಾ ವೀಕೆ

Address

Mangalore

Alerts

Be the first to know and let us send you an email when Ahlussunnah Kannada posts news and promotions. Your email address will not be used for any other purpose, and you can unsubscribe at any time.

Shortcuts

Share