Konkan CVSK High School, Kumta

Konkan CVSK High School, Kumta Contact information, map and directions, contact form, opening hours, services, ratings, photos, videos and announcements from Konkan CVSK High School, Kumta, High School, Vidyagiri, Kalbhag, Kumta.

A Proud Moment for CVSK High School, Kumta.🎶 A Moment of Pride and Joy! 🎙️🏆It is a matter of great happiness and pride f...
17/08/2026

A Proud Moment for CVSK High School, Kumta.

🎶 A Moment of Pride and Joy! 🎙️🏆

It is a matter of great happiness and pride for Konkan Education Trust’s CVSK High School, Kumta, to celebrate the musical achievement of our talented student Kumari Shree Rao, daughter of Shri Vasanth Rao.

Shree has reportedly emerged as the Runner-Up in the Studio Singing Competition organised by Hola Studios, earning appreciation for her impressive singing talent.

Adding a special touch to this achievement, Shree had the wonderful opportunity to sing the popular Kannada song “Krishna Nee Begane Baro” in the presence of renowned music director Stephen Prayog, who composed the song. The song is also especially remembered as one of the popular Kannada songs sung by celebrated singer Shreya Ghoshal, marking her first Kannada song.

Such recognition is a proud moment not only for Shree and her family, but also for her school. Her achievement purely shows her dedication, confidence and love for music.

We congratulate Kumari Shree Rao on this wonderful accomplishment and wish her continued success in her musical journey. May her talent reach greater heights and inspire many more young students to follow their passions.

Heartiest congratulations, Shree! 💐

The entire Konkan Education Trust family is very proud of you!

Konkan Kumta
Konkan CVSK High School, Kumta

*💢ಸಿ.ವಿ.ಎಸ್.ಕೆ ಪ್ರೌಢಶಾಲೆಯಲ್ಲಿ ವಿಜ್ಞಾನ ಮತ್ತು ಗಣಿತ ವಸ್ತು ಮಾದರಿ ಪ್ರದರ್ಶನ*💢  *ಕುಮಟಾ ಅ.14:* ಕುಮಟಾದ ಕೊಂಕಣ ಎಜ್ಯುಕೇಶನ ಟ್ರಸ್ಟ್ ನ್...
15/08/2026

*💢ಸಿ.ವಿ.ಎಸ್.ಕೆ ಪ್ರೌಢಶಾಲೆಯಲ್ಲಿ ವಿಜ್ಞಾನ ಮತ್ತು ಗಣಿತ ವಸ್ತು ಮಾದರಿ ಪ್ರದರ್ಶನ*💢

*ಕುಮಟಾ ಅ.14:* ಕುಮಟಾದ ಕೊಂಕಣ ಎಜ್ಯುಕೇಶನ ಟ್ರಸ್ಟ್ ನ್ ಸಿ.ವಿ.ಎಸ್.ಕೆ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ, ಸೃಜನಶೀಲತೆ ಹಾಗೂ ಗಣಿತದ ಬಗ್ಗೆ ಆಸಕ್ತಿ ಬೆಳೆಸುವ ಉದ್ದೇಶದಿಂದ ಎ.ಪಿ.ಜೆ ಅಬ್ದುಲ್ ಕಲಾಂ ವಿಜ್ಞಾನ ಮತ್ತು ಗಣಿತ ಸಂಘದ ಅಡಿಯಲ್ಲಿ ವಿಜ್ಞಾನ ಮತ್ತು ಗಣಿತ ವಸ್ತು ಮಾದರಿ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಕುಮಟಾದ ಖ್ಯಾತ ಭೌತಶಾಸ್ತ್ರದ ಪ್ರೋಫೆಸರ್ ಡಾ.ನರೇಂದ್ರ.ಡಿ.ನಾಯಕ ಉದ್ಘಾಟಿಸಿ "ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತರುವಲ್ಲಿ ಇಂತಹ ಪ್ರದರ್ಶನಗಳು ಮಹತ್ವದ ಪಾತ್ರ ವಹಿಸುತ್ತವೆ. ವೈಜ್ಞಾನಿಕ ಜ್ಞಾನ ಪ್ರತಿಯೊಬ್ಬರಿಗೂ ಅವಶ್ಯಕ. ಅದು ಚಿಕ್ಕ ವಯಸ್ಸಿನಲ್ಲಿಯೇ ದೊರೆತಾಗ ಮುಂದೆ ಪ್ರಯೋಜನಕ್ಕೆ ಬರುತ್ತದೆ" ಎಂದು ತಿಳಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕುಮಟಾದ ಪ್ರತಿಸ್ಠಿತ ಕಾಲೇಜಿನ ಖ್ಯಾತ ಭೌತಶಾಸ್ತ್ರದ ಪ್ರೋಫೆಸರ್ ಡಾ.ಈಶ್ವರ ಕೆ.ನಾಯಕ ಮಾತನಾಡಿ "ನೈಜ ಕಲಿಕೆಗೆ ದೈನಂದಿನ ವ್ಯವಹಾರಕ್ಕೆ ವಿಜ್ಞಾನ ಮತ್ತು ಗಣಿತ ಅಧ್ಯಯನ ಮುಖ್ಯ. ಮಕ್ಕಳೇ ವಿಜ್ಞಾನ ಹಾಗೂ ಗಣಿತದ ಕುರಿತು ಸಾಮಾನ್ಯ ಜ್ಞಾನವನ್ನು ಮೊದಲು ಪಡೆಯಿರಿ.ನಂತರ ಹೊಸತನ್ನು ಸೃಷ್ಟಿಸಲು ಪ್ರಯತ್ನಿಸಿ. ಸಂಶೋಧನಾ ಗುಣವನ್ನು ಬೆಳೆಸಿಕೊಳ್ಳಿ" ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಸಲಹೆಗಾರರಾದ ಆರ್.ಎಚ್.ದೇಶಭಂಡಾರಿ ಮಾತನಾಡಿ "ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಳ್ಳಬೇಕು.ಪ್ರಯೋಗಗಳ ಮೂಲಕ ವಾಸ್ತವತೆಯನ್ನು ಅರಿತುಕೊಳ್ಳಬೇಕು.ಮಕ್ಕಳು ಪ್ರಶ್ನಿಸುವ ಹವ್ಯಾಸ ಬೆಳೆಸಿಕೊಳ್ಳಬೇಕು" ಎಂದರು. ವಿಜ್ಞಾನ ಮತ್ತು ಗಣಿತ ಮಾದರಿ ತಯಾರಿಕೆಗಾಗಿ ಮಕ್ಕಳು ತೋರಿದ ಪರಿಶ್ರಮವನ್ನು ಪ್ರಶಂಸಿಸಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಿ.ವಿ.ಎಸ್‌.ಕೆ ಪ್ರೌಢಶಾಲೆಯ ಪ್ರಾಂಶುಪಾಲರಾದ ಸುಮಾ ಪ್ರಭು ಮಾತನಾಡಿ" ಮಕ್ಕಳೇ ಇವತ್ತಿನ ನಮ್ಮ ಕಾರ್ಯಕ್ರಮದಲ್ಲಿ ನಮ್ಮೊಂದಿಗೆ ಇರುವ ವ್ಯಕ್ತಿಗಳ ಸಾಧನೆ ಅಪಾರ ಇಂತಹ ಸಾಧಕರೇ ನಿಮ್ಮ ಮುಂದಿನ ಯಶಸ್ಸಿಗೆ ಸ್ಪೂರ್ತಿ" ಎಂದರು. ವಿಜ್ಞಾನ ಮತ್ತು ಗಣಿತ ವಸ್ತು ಮಾದರಿ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳ ಹಾಗೂ ಮಾರ್ಗದರ್ಶಿಸಿದ ಶಿಕ್ಷಕರ ಕಾರ್ಯಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿ ಮಕ್ಕಳ ಮುಂದಿನ ಭವಿಷ್ಯಕ್ಕೆ ಶುಭ ಕೋರಿದರು.

ವಿಜ್ಞಾನ ವಿಭಾಗದಲ್ಲಿ ಸೌರಶಕ್ತಿ, ಜಲ ಸಂರಕ್ಷಣೆ, ಪರಿಸರ ಸಂರಕ್ಷಣೆ, ಮಳೆನೀರು ಕೊಯ್ಲು, ವಿದ್ಯುತ್ ಉತ್ಪಾದನೆ ಹಾಗೂ ವಿವಿಧ ವೈಜ್ಞಾನಿಕ ತತ್ವಗಳನ್ನು ಆಧರಿಸಿದ ಮಾದರಿಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು.
ಗಣಿತ ವಿಭಾಗದಲ್ಲಿ ಜ್ಯಾಮಿತೀಯ ಆಕೃತಿಗಳು, ಗಣಿತದ ಸೂತ್ರಗಳು, ಸಂಖ್ಯಾ ಮಾದರಿಗಳು, ಮಾಪನ ವಿಧಾನಗಳು ಹಾಗೂ ದೈನಂದಿನ ಜೀವನದಲ್ಲಿ ಗಣಿತದ ಬಳಕೆಯನ್ನು ವಿವರಿಸುವ ವಿವಿಧ ಮಾದರಿಗಳನ್ನು ಪ್ರದರ್ಶಿಸಲಾಯಿತು. ವಿದ್ಯಾರ್ಥಿಗಳು ತಮ್ಮ ಮಾದರಿಗಳ ಕಾರ್ಯವಿಧಾನವನ್ನು ಶಿಕ್ಷಕರು, ಪೋಷಕರು ಮತ್ತು ಅತಿಥಿಗಳಿಗೆ ವಿವರಿಸಿದರು.
ಪ್ರದರ್ಶನಕ್ಕೆ ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳು ಉತ್ತಮ ಸ್ಪಂದನೆ ನೀಡಿದರು. ವಿದ್ಯಾರ್ಥಿಗಳ ಸೃಜನಶೀಲತೆ ಮತ್ತು ವಿಷಯಜ್ಞಾನವನ್ನು ಮೆಚ್ಚಿ ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಸಿ.ವಿ.ಎಸ್.ಕೆ ಪ್ರೌಢಶಾಲೆಯ ವಿಜ್ಞಾನ ಮತ್ತು ಗಣಿತ ಶಿಕ್ಷಕರು, ಇನ್ನುಳಿದ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ರಕ್ಷಾ ಹೆಗಡೆ ಹಾಗೂ ಯಶಸ್ ನಾಯರ್ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದಳು.

ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ವಿಜ್ಞಾನ ಮತ್ತು ಗಣಿತ ವಿಷಯಗಳ ಕುರಿತು ಆಸಕ್ತಿ ಹಾಗೂ ಆತ್ಮವಿಶ್ವಾಸವನ್ನು ಹೆಚ್ಚಿಸುವಲ್ಲಿ ಯಶಸ್ವಿಯಾಯಿತು.


🇮🇳 ಕೊಂಕಣದಲ್ಲಿ ಸಂಭ್ರಮದ 80 ನೇ  ಸ್ವಾತಂತ್ರೋತ್ಸವ ದಿನಾಚರಣೆ 🇮🇳 *ಕುಮಟಾ* : ಇಲ್ಲಿನ ಕೊಂಕಣ ಎಜ್ಯುಕೇಶನ್ ಟ್ರಸ್ಟನ್ ರಂಗಾದಾಸ ಶಾನಭಾಗ ಹೆಗಡೆಕ...
15/08/2026

🇮🇳 ಕೊಂಕಣದಲ್ಲಿ ಸಂಭ್ರಮದ 80 ನೇ ಸ್ವಾತಂತ್ರೋತ್ಸವ ದಿನಾಚರಣೆ 🇮🇳

*ಕುಮಟಾ* : ಇಲ್ಲಿನ ಕೊಂಕಣ ಎಜ್ಯುಕೇಶನ್ ಟ್ರಸ್ಟನ್ ರಂಗಾದಾಸ ಶಾನಭಾಗ ಹೆಗಡೆಕರ ಬಾಲ ಮಂದಿರ, ಸರಸ್ವತಿ ವಿದ್ಯಾ ಕೇಂದ್ರ, ಸಿ.ವಿ.ಎಸ್‌.ಕೆ ಪ್ರೌಢಶಾಲೆ, ಸರಸ್ವತಿ ಪದವಿ ಪೂರ್ವ ಕಾಲೇಜು ಇವುಗಳ ಸಹಯೋಗದಲ್ಲಿ 80ನೇ ಸ್ವಾತಂತ್ರ್ಯೋತ್ಸವವನ್ನು ವಿಜೃಂಭಣೆಯಿಂದ ಸಂಭ್ರಮದಿಂದ ಆಚರಿಸಲಾಯಿತು.

ಸಂಸ್ಥೆಯ ಗೌರವಾನ್ವಿತ ಉಪಾಧ್ಯಕ್ಷರಾದ ಶ್ರೀ ರಮೇಶ ಪ್ರಭುರವರು ಧ್ವಜಾರೋಹಣೆ ನೆರವೇರಿಸಿ, ಧ್ವಜವಂದನೆಗೈದರು.ನಂತರ ಸ್ವಾತಂತ್ರೋತ್ಸವದ ಸಂದೇಶ ನೀಡುತ್ತ," ನಮ್ಮ ಪೂರ್ವಜರ ತ್ಯಾಗ ಬಲಿದಾನ ಸ್ಮರಿಸಿ,ಸ್ವಾತಂತ್ರ್ಯದ ಅರ್ಥವನ್ನು ಸಾರ್ಥಕ ಮಾಡಬೇಕು. ಭಾರತದ ಸಂಸ್ಕೃತಿ, ಪರಂಪರೆ ವಿಶ್ವಮಾದರಿಯಾಗಿದೆ ಅದನ್ನು ಅನ್ವಯಿಸಿ ಮುನ್ನಡೆಸಿಕೊಂಡು ಹೋಗಬೇಕಾಗಿರುವುದು ನಮ್ಮ ಜವಾಬ್ದಾರಿ. ಸ್ವಚ್ಛ ಭಾರತ ನಿರ್ಮಾಣದ ಕಾರ್ಯಕ್ಕೆ ನಾವೆಲ್ಲರೂ ಕೈಜೋಡಿಸಬೇಕು. ಭಾರತ ದೇಶ ವಿಶ್ವಗುರುವಾಗಬೇಕು. ಅದಕ್ಕೆ ಪ್ರತಿಯೊಬ್ಬರೂ ರಾಷ್ಟ್ರಪ್ರಜ್ಞೆ ಬೆಳೆಸಿಕೊಂಡು ಆ ನಿಟ್ಟಿನಲ್ಲಿ ಪ್ರಯತ್ನ ಮಾಡಬೇಕು." ಎಂದರು.
ಸ್ವಾತಂತ್ರ್ಯ ದಿನದ ಅಂಗವಾಗಿ ವಿದ್ಯಾರ್ಥಿಗಳಿಗಾಗಿ ಚಿತ್ರಕಲೆ,ಕವನ ರಚನೆ,ರಂಗೋಲಿ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.ಇದೇ ಸಂದರ್ಭದಲ್ಲಿ ಥೈಲ್ಯಾಂಡ್ ನಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಯೋಗ ಸ್ಪರ್ಧೆಗೆ ಆಯ್ಕೆಯಾಗಿರುವ ಸಿವಿಎಸ್‌ಕೆ ಪ್ರೌಢಶಾಲೆಯ 9ನೇ ತರಗತಿಯ ಸಾಧಕ ವಿದ್ಯಾರ್ಥಿ ಕೆ.ಬಿ. ಅನೀಶ್ ನನ್ನು ಸಂಸ್ಥೆಯ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು. ಬಾಲ ಮಂದಿರದ ಪುಟಾಣಿಗಳು ಹೋರಾಟಗಾರರ ವೇಷ-ಭೂಷಣ ತೊಟ್ಟು, ಧ್ವಜಾರೋಹಣ ಸಂದರ್ಭದಲ್ಲಿ ಹಾಜರಿದ್ದು, ಸ್ವಾತಂತ್ರ್ಯಕ್ಕಾಗಿ ಪ್ರಾಣ ತೆತ್ತ ಮಹನೀಯರನ್ನು ಸ್ಮರಿಸುವಂತೆ ಮಾಡಿದರು.
ಅದೇ ರೀತಿ ಸಂಸ್ಥೆಯ ಉಪಾಧ್ಯಕ್ಷರಾದ ರಮೇಶ ಪ್ರಭು,ಕಾರ್ಯದರ್ಶಿಗಳಾದ ಶ್ರೀ ಮುರುಳೀಧರ ಪ್ರಭು,ಜಂಟಿ ಕಾರ್ಯದರ್ಶಿಗಳಾದ ಶೇಷಗಿರಿ ಶಾನಭಾಗ, ರಾಮಕೃಷ್ಣ ಗೋಳಿ,ಶೈಕ್ಷಣಿಕ ಸಲಹೆಗಾರರ ಆರ್.ಎಚ್. ದೇಶಭಂಡಾರಿ, ಎಲ್ಲಾ ಅಂಗ ಸಂಸ್ಥೆಗಳ ಮುಖ್ಯೋಪಾಧ್ಯಾಯರು,ವಿಧಾತ್ರಿ ಅಕಾಡೆಮಿಯ ಗುರುರಾಜ ಶೆಟ್ಟಿ,ಪ್ರಾಂಶುಪಾಲರಾದ ಜಿ.ಎಸ್.ಹೆಗಡೆ, ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಗಳು, ಚಾಲಕ-ನಿರ್ವಾಹಕರು, ಪಾಲಕರು,ಛಾಯಾಗ್ರಾಹಕರು, ಮಾಧ್ಯಮ ಮಿತ್ರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳ ವಂದೇ ಮಾತರಂ, ರಾಷ್ಟ್ರಗೀತೆ, ರೈತಗೀತೆ, ಹಾಗೂ ಸಿ.ವಿ.ಎಸ್.ಕೆ ಪ್ರೌಢಶಾಲೆಯ ವಿದ್ಯಾರ್ಥಿಗಳ ನೃತ್ಯರೂಪಕ,ಕೊಳಲು ವಾದ್ಯ ಎಲ್ಲರ ಮನಸೆಳೆಯಿತು. ಸರಸ್ವತಿ ಪಿಯು ಕಾಲೇಜಿನ ವಿದ್ಯಾರ್ಥಿಗಳ ದೇಶಭಕ್ತಿಗೀತೆ, ಭಾಷಣ, ಮನರಂಜನಾ ಕಾರ್ಯಕ್ರಮಗಳು ನೆರೆದವರನ್ನು ರಂಜಿಸಿದವು.
ಶಿಕ್ಷಕ ಚಿದಾನಂದ ಭಂಡಾರಿ ಸ್ವಾಗತಿಸಿದರು. ಶಿಕ್ಷಕ ಗೌರೀಶ ಭಂಡಾರಿ ಹಾಗೂ ಆದರ್ಶ ರೇವಣಕರ ಕಾರ್ಯಕ್ರಮವನ್ನು ನಿರೂಪಿಸಿದರು. ಸಿಹಿ ವಿತರಣೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.


🌱 *ಸಿ.ವಿ.ಎಸ್.ಕೆ ಪ್ರೌಢಶಾಲೆಯಲ್ಲಿ ವನಮಹೋತ್ಸವ ಕಾರ್ಯಕ್ರಮ🌱*  *ಕುಮಟಾ ಜು.27* :ಇಲ್ಲಿನ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ಸಿ.ವಿ.ಎಸ್‌.ಕೆ ಪ್ರ...
27/07/2026

🌱 *ಸಿ.ವಿ.ಎಸ್.ಕೆ ಪ್ರೌಢಶಾಲೆಯಲ್ಲಿ ವನಮಹೋತ್ಸವ ಕಾರ್ಯಕ್ರಮ🌱*

*ಕುಮಟಾ ಜು.27* :ಇಲ್ಲಿನ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ಸಿ.ವಿ.ಎಸ್‌.ಕೆ ಪ್ರೌಢಶಾಲೆಯಲ್ಲಿ ಇಂದು ವನಮಹೋತ್ಸವ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಸಂಸ್ಥೆಯ ಶೈಕ್ಷಣಿಕ ಸಲಹೆಗಾರರಾದ ಆರ್.ಎಚ್.
ದೇಶಭಂಡಾರಿ ಆಗಮಿಸಿದ್ದರು. ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಸುಮಾ ಪ್ರಭು, ಸರ್ವ ಶಿಕ್ಷಕ ವೃಂದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು. ಬಳಿಕ ಮುಖ್ಯ ಅತಿಥಿಗಳಾದ ಆರ್.ಎಚ್. ದೇಶಭಂಡಾರಿ ಅವರು ಮಾತನಾಡಿ "ಮರಗಳ ಮಹತ್ವ, ಪರಿಸರ ಸಂರಕ್ಷಣೆ ಹಾಗೂ ಹಸಿರು ಪರಿಸರದ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಪಾತ್ರದ ಕುರಿತು ಪ್ರೇರಣಾದಾಯಕವಾದ ಮಾತನ್ನಾಡಿದರು. ಪ್ರತಿಯೊಬ್ಬರೂ ವರ್ಷಕ್ಕೆ ಕನಿಷ್ಠ ಒಂದು ಗಿಡವನ್ನು ನೆಟ್ಟು ಅದರ ಪೋಷಣೆಯ ಜವಾಬ್ದಾರಿಯನ್ನು ವಹಿಸಿಕೊಳ್ಳುವಂತೆ ಕರೆ ನೀಡಿದರು.ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ಪರಿಸರ ಜಾಗೃತಿ ಮೂಡಿಸುವ ನೃತ್ಯ ರೂಪಕವನ್ನು ಪ್ರದರ್ಶಿಸಿ ಎಲ್ಲರ ಗಮನ ಸೆಳೆದರು.

ನಂತರ ಶಾಲಾ ಕೈತೋಟದಲ್ಲಿ ಸಿಬ್ಬಂದಿ ರಾಮಚಂದ್ರ ಪಟಗಾರ ಸಹಾಯದೊಂದಿಗೆ ವಿವಿಧ ಜಾತಿಯ ಹೂವು, ಹಣ್ಣಿನ ಸಸಿಗಳನ್ನು ನೆಡಲಾಯಿತು. ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಅತಿಥಿಗಳು ಉತ್ಸಾಹದಿಂದ ಗಿಡ ನೆಡುವ ಕಾರ್ಯದಲ್ಲಿ ಪಾಲ್ಗೊಂಡರು.

ಕಾರ್ಯಕ್ರಮದ ಕೊನೆಯಲ್ಲಿ ಸಿ.ವಿ.ಎಸ್.ಕೆ ಪ್ರೌಢಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಸುಮಾ ಪ್ರಭು ಅವರು ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿ, ನೆಟ್ಟಿರುವ ಗಿಡಗಳನ್ನು ಸಂರಕ್ಷಿಸುವ ಜವಾಬ್ದಾರಿಯನ್ನು ವಿದ್ಯಾರ್ಥಿಗಳಿಗೆ ವಹಿಸಿದರು.

ವನಮಹೋತ್ಸವ ಕಾರ್ಯಕ್ರಮವು ಪರಿಸರದ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮತ್ತು ಜವಾಬ್ದಾರಿಯ ಮನೋಭಾವವನ್ನು ಬೆಳೆಸುವಲ್ಲಿ ಯಶಸ್ವಿಯಾಯಿತು.


▶🥇 ರಾಷ್ಟ್ರಮಟ್ಟದ ಯೋಗ ಸ್ಪರ್ಧೆಯಲ್ಲಿ ಕೊಂಕಣದ ಅನೀಶ್ ಗೆ ಚಿನ್ನದ ಪದಕ🥇▶ಕುಮಟಾ ಜು 11:  ಕುಮಟಾದ ಕೊಂಕಣ ಎಜ್ಯಕೇಶನ್ ಟ್ರಸ್ಟ್ ನ ಸಿ.ವಿ.ಎಸ್.ಕೆ...
13/07/2026

▶🥇 ರಾಷ್ಟ್ರಮಟ್ಟದ ಯೋಗ ಸ್ಪರ್ಧೆಯಲ್ಲಿ ಕೊಂಕಣದ ಅನೀಶ್ ಗೆ ಚಿನ್ನದ ಪದಕ🥇▶

ಕುಮಟಾ ಜು 11: ಕುಮಟಾದ ಕೊಂಕಣ ಎಜ್ಯಕೇಶನ್ ಟ್ರಸ್ಟ್ ನ ಸಿ.ವಿ.ಎಸ್.ಕೆ ಪ್ರೌಢಶಾಲೆಯ 9ನೇ ತರಗತಿಯ ವಿದ್ಯಾರ್ಥಿ ಹಾಗೂ ಹೊನ್ನಾವರದ ಕೊಂಡದಕುಳಿ ಬೇರಂಕಿಯ ಕಲಾಧರ ಹಾಗೂ ಮುಕ್ತಾ ದಂಪತಿಗಳ ಸುಪುತ್ರ ಕುಮಾರ ಕೆ.ಬಿ.ಅನೀಶ್ ದಿನಾಂಕ 11.07.2026 ರಂದು ವಲ್ಡ್೯ ಯೋಗಾ ಎಂಡ್ ಸ್ಪೋರ್ಟ್ಸ್ ಎಜ್ಯುಕೇಶನ್ ಕೌನ್ಸಿಲ್ ನವರು ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಆಯೋಜಿಸಿದ್ದ 11ರಿಂದ 15 ವರ್ಷ ವಯೋಮಿತಿಯೊಳಗಿನ ರಾಷ್ಟ್ರ ಮಟ್ಟದ ಯೋಗ ಚಾಂಪಿಯನ್ ಶಿಪ್ ನ ಆರ್ಟಿಸ್ಟಿಕ್ ವಿಭಾಗದಲ್ಲಿ ಭರ್ಜರಿ ಪ್ರದರ್ಶನ ನೀಡಿ, ಪ್ರಥಮ ಸ್ಥಾನ ಪಡೆದು ರಾಜ್ಯಕ್ಕೆ ಚಿನ್ನದ ಪದಕವನ್ನು ಗಳಿಸಿಕೊಟ್ಟಿರುತ್ತಾನೆ. ಅಲ್ಲದೆ ಮುಂದಿನ ಅಕ್ಟೋಬರ್ ತಿಂಗಳಲ್ಲಿ ಥೈಲ್ಯಾಂಡ್ ನಲ್ಲಿ ನಡೆಯುವ ಅಂತರಾಷ್ಟ್ರೀಯ ಯೋಗಾ ಚಾಂಪಿಯನ್ಶಿಪ್ ಗೆ ಆಯ್ಕೆಯಾಗಿರುತ್ತಾನೆ. ತನ್ಮೂಲಕ ಶಾಲೆಯ,ರಾಜ್ಯದ ಕೀರ್ತಿಯನ್ನು ರಾಜ್ಯಮಟ್ಟದಲ್ಲಿ ಮಾತ್ರವಲ್ಲದೇ
ರಾಷ್ಟ್ರಮಟ್ಟದಲ್ಲಿ ಗುರುತಿಸುವಂತೆ ಮಾಡಿ ಅಂತರಾಷ್ಟ್ರೀಯಮಟ್ಟದಲ್ಲಿ ಸಾಧನೆ ಮಾಡಲು ಅವಕಾಶ ಪಡೆದಿರುತ್ತಾನೆ.

ವಿದ್ಯಾರ್ಥಿಯ ಈ ಅಭೂತ ಪೂರ್ವ ಸಾಧನೆಗೆ ಶಾಲೆಯ ಆಡಳಿತ ಮಂಡಳಿ, ಶೈಕ್ಷಣಿಕ ಸಲಹೆಗಾರರು, ಶಾಲೆಯ ಪ್ರಾಂಶುಪಾಲರು, ದೈಹಿಕ ಶಿಕ್ಷಕರು, ಸಮಸ್ತ ಬೋಧಕ- ಬೋಧಕೇತರ ಸಿಬ್ಬಂದಿ, ಪಾಲಕರು, ಉಪನಿರ್ದೇಶಕರು,ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕಚೇರಿ ಸಿಬ್ಬಂದಿಗಳು ಅತೀವ ಸಂತಸ ವ್ಯಕ್ತಪಡಿಸಿ ಮುಂದಿನ ಹಂತಕ್ಕೆ ಶುಭ ಹಾರೈಸಿದ್ದಾರೆ. 💐💐


▶🥇 ರಾಷ್ಟ್ರಮಟ್ಟದ ಯೋಗ ಸ್ಪರ್ಧೆಯಲ್ಲಿ ಕೊಂಕಣದ ಅನೀಶ್ ಗೆ ಚಿನ್ನದ ಪದಕ🥇▶ಕುಮಟಾ ಜು 11:  ಕುಮಟಾದ ಕೊಂಕಣ ಎಜ್ಯಕೇಶನ್ ಟ್ರಸ್ಟ್ ನ ಸಿ.ವಿ.ಎಸ್.ಕೆ...
13/07/2026

▶🥇 ರಾಷ್ಟ್ರಮಟ್ಟದ ಯೋಗ ಸ್ಪರ್ಧೆಯಲ್ಲಿ ಕೊಂಕಣದ ಅನೀಶ್ ಗೆ ಚಿನ್ನದ ಪದಕ🥇▶

ಕುಮಟಾ ಜು 11: ಕುಮಟಾದ ಕೊಂಕಣ ಎಜ್ಯಕೇಶನ್ ಟ್ರಸ್ಟ್ ನ ಸಿ.ವಿ.ಎಸ್.ಕೆ ಪ್ರೌಢಶಾಲೆಯ 9ನೇ ತರಗತಿಯ ವಿದ್ಯಾರ್ಥಿ ಹಾಗೂ ಹೊನ್ನಾವರದ ಕೊಂಡದಕುಳಿ ಬೇರಂಕಿಯ ಕಲಾಧರ ಹಾಗೂ ಮುಕ್ತಾ ದಂಪತಿಗಳ ಸುಪುತ್ರ ಕುಮಾರ ಕೆ.ಬಿ.ಅನೀಶ್ ದಿನಾಂಕ 11.07.2026 ರಂದು ವಲ್ಡ್೯ ಯೋಗಾ ಎಂಡ್ ಸ್ಪೋರ್ಟ್ಸ್ ಎಜ್ಯುಕೇಶನ್ ಕೌನ್ಸಿಲ್ ನವರು ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಆಯೋಜಿಸಿದ್ದ 11ರಿಂದ 15 ವರ್ಷ ವಯೋಮಿತಿಯೊಳಗಿನ ರಾಷ್ಟ್ರ ಮಟ್ಟದ ಯೋಗ ಚಾಂಪಿಯನ್ ಶಿಪ್ ನ ಆರ್ಟಿಸ್ಟಿಕ್ ವಿಭಾಗದಲ್ಲಿ ಭರ್ಜರಿ ಪ್ರದರ್ಶನ ನೀಡಿ, ಪ್ರಥಮ ಸ್ಥಾನ ಪಡೆದು ರಾಜ್ಯಕ್ಕೆ ಚಿನ್ನದ ಪದಕವನ್ನು ಗಳಿಸಿಕೊಟ್ಟಿರುತ್ತಾನೆ. ಅಲ್ಲದೆ ಮುಂದಿನ ಅಕ್ಟೋಬರ್ ತಿಂಗಳಲ್ಲಿ ಥೈಲ್ಯಾಂಡ್ ನಲ್ಲಿ ನಡೆಯುವ ಅಂತರಾಷ್ಟ್ರೀಯ ಯೋಗಾ ಚಾಂಪಿಯನ್ಶಿಪ್ ಗೆ ಆಯ್ಕೆಯಾಗಿರುತ್ತಾನೆ. ತನ್ಮೂಲಕ ಶಾಲೆಯ,ರಾಜ್ಯದ ಕೀರ್ತಿಯನ್ನು ರಾಜ್ಯಮಟ್ಟದಲ್ಲಿ ಮಾತ್ರವಲ್ಲದೇ
ರಾಷ್ಟ್ರಮಟ್ಟದಲ್ಲಿ ಗುರುತಿಸುವಂತೆ ಮಾಡಿ ಅಂತರಾಷ್ಟ್ರೀಯಮಟ್ಟದ ಸಾಧನೆ ಮಾಡಲು ಸದವಕಾಶವನ್ನು ಪಡೆದಿರುತ್ತಾನೆ.

ವಿದ್ಯಾರ್ಥಿಯ ಈ ಅಭೂತ ಪೂರ್ವ ಸಾಧನೆಗೆ ಶಾಲೆಯ ಆಡಳಿತ ಮಂಡಳಿ, ಶೈಕ್ಷಣಿಕ ಸಲಹೆಗಾರರು, ಶಾಲೆಯ ಪ್ರಾಂಶುಪಾಲರು, ದೈಹಿಕ ಶಿಕ್ಷಕರು, ಸಮಸ್ತ ಬೋಧಕ- ಬೋಧಕೇತರ ಸಿಬ್ಬಂದಿ, ಪಾಲಕರು, ಉಪನಿರ್ದೇಶಕರು,ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕಚೇರಿ ಸಿಬ್ಬಂದಿಗಳು ಅತೀವ ಸಂತಸ ವ್ಯಕ್ತಪಡಿಸಿ ಮುಂದಿನ ಹಂತಕ್ಕೆ ಶುಭ ಹಾರೈಸಿದ್ದಾರೆ. 💐💐


06/07/2026
💢ಅಭಿಪ್ರೇರಣಾ ಮಹೋತ್ಸವ - 2026💢▶ಬದ್ಧತೆ,ಪರಿಶ್ರಮ,ಛಲ ಇವೇ ಸಾಧನೆಯ ಮೂಲ ಮಂತ್ರ  : ಶ್ರೀ ಆದರ್ಶ ಗೋಖಲೆ ▶ಕುಮಟಾ ಜು. 04: ಮಾನವ ಬದುಕಿಗೆ ಸಾರ್ಥ...
05/07/2026

💢ಅಭಿಪ್ರೇರಣಾ ಮಹೋತ್ಸವ - 2026💢

▶ಬದ್ಧತೆ,ಪರಿಶ್ರಮ,ಛಲ ಇವೇ ಸಾಧನೆಯ ಮೂಲ ಮಂತ್ರ : ಶ್ರೀ ಆದರ್ಶ ಗೋಖಲೆ ▶

ಕುಮಟಾ ಜು. 04: ಮಾನವ ಬದುಕಿಗೆ ಸಾರ್ಥಕತೆ ಬರುವುದು ಏನನ್ನಾದರು ಸಾಧಿಸಿದಾಗ ಮಾತ್ರ. ಸಾಧನೆಗೆ ಬದ್ಧತೆ,ಸತತ ಪರಿಶ್ರಮ ಹಾಗೂ ಛಲಬೇಕು. ಕಲಿಕೆಯ ಸಾಧನೆಗೆ ಕೊನೆಯ ಬಿಂದು ಎಂಬುವುದಿಲ್ಲ. ಶಿಷ್ಯ ಗುರುವನ್ನು ಮೀರಿಸುವಂತಾಗಬೇಕು. ಪ್ರೀತಿ ವಾತ್ಸಲ್ಯ ನೀಡಿದ ತಂದೆ ತಾಯಿ,ವಿದ್ಯೆ ನೀಡಿದ ಗುರುವಿಗೆ ಮಕ್ಕಳಿಂದ ಗೌರವ ಸನ್ಮಾನ ಲಭಿಸುವಂತಾಗಬೇಕು ಎಂದು ಕಾರ್ಕಳದ ಖ್ಯಾತ ಅಂಕಣಬರಹಗಾರರು ವಾಗ್ಮಿಗಳು ಹಾಗೂ ಉಪನ್ಯಾಸಕರಾದ ಶ್ರೀ ಆದರ್ಶ ಗೋಖಲೆ ಅಭಿಪ್ರಾಯಪಟ್ಟರು. ಅವರು ಇಲ್ಲಿನ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ಸಿ.ವಿ.ಎಸ್‌.ಕೆ ಪ್ರೌಢಶಾಲೆಯ 2025-26 ನೇ ಸಾಲಿನ ಹತ್ತನೇ ವರ್ಗ ಹಾಗೂ ಬಿ‌.ಕೆ. ಭಂಡಾರ್ಕರ ಸರಸ್ವತಿ ಪಿ.ಯು ಕಾಲೇಜಿನ ದ್ವಿತೀಯ ವರ್ಷದ ಸಾಧಕ ವಿದ್ಯಾರ್ಥಿಗಳಿಗೆ ಮತ್ತು ಅದಕ್ಕೆ ಕಾರಣೀಭೂತರಾದ ಗುರುವೃಂದದವರಿಗೆ ಅಭಿನಂದಿಸುವ ಕುರಿತಾಗಿ ಹಮ್ಮಿಕೊಂಡ ಅಭಿಪ್ರೇರಣಾ ಮಹೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ಭೌತಿಕ ಸೌಂದರ್ಯವು ಅಸ್ಥಾಯಿಯಾದುದು. ಆದರ್ಶ ವ್ಯಕ್ತಿತ್ವವನ್ನು ಹೊಂದಿ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಳ್ಳಿರಿ. UPSC ಅಂತಹ ಪರೀಕ್ಷೆಗೆ ಸಿದ್ಧತೆ ನಡೆಸಿ ಉನ್ನತ ಹುದ್ದೆಗಳನ್ನು ಅಲಂಕರಿಸಿ ದೇಶದ ಸೇವೆಗೆ ಸನ್ನದ್ಧರಾಗಿ ದೇಶ ಕಟ್ಟುವ ಕಾಯಕದಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ. ಜಗತ್ತು ಭಾರತಕ್ಕೆ ತಲೆಬಾಗಿ ಜೈ ಎನ್ನಬೇಕು. ಅಂತಹ ಭವ್ಯ ನಾಡನ್ನು ಕಟ್ಟುವ ಪರಂಪರೆಯನ್ನು ಉಳಿಸುವ ನಾಗರಿಕರಾಗಿ ಎಂದು ಅವರು ಮಕ್ಕಳಿಗೆ ತಿಳಿ ಹೇಳಿದರು.ದೇಶ ನಮಗೆ ಬೇಕಾದಷ್ಟು ನೀಡಿದೆ, ಪ್ರತಿಯಾಗಿ ನಾವು ಸಹ ದೇಶಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂಬ ಸದ್ಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂದು ಆಶಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕುಮಟಾದ ಖ್ಯಾತ ದಂತ ವೈದ್ಯರಾದ ಡಾ.ಹರ್ಷಾ ಹೆಗಡೆ ವಿದ್ಯಾರ್ಥಿಗಳಿಗೆ ಪ್ರೇರಣಾ ನುಡಿಗಳನ್ನು ಆಡುತ್ತಾ, ಮುಂದಿನ ಭವಿಷ್ಯಕ್ಕೆ ಇಂದೇ ಸರಿಯಾದ ನಿರ್ಧಾರ ಕೈಗೊಳ್ಳಬೇಕು. ಅಂಕಗಳಿಸುವುದಷ್ಟೇ ಮುಖ್ಯವಲ್ಲ ನಿಮಗಿಷ್ಟವಾದ ವಿಷಯವನ್ನು ಆಯ್ದುಕೊಂಡು ಆಸಕ್ತಿಯಿಂದ ಓದಿದರೆ ಯಶಸ್ಸು ಸಾಧ್ಯ. ಶಿಕ್ಷಣ ಸಂಸ್ಥೆ ಕಟ್ಟುವುದು ಸುಲಭದ ಕೆಲಸವಲ್ಲ. ವಿದ್ಯಾರ್ಥಿ, ಅಧ್ಯಾಪಕರು, ಪೋಷಕರು, ಆಡಳಿತ ವರ್ಗ ಈ ನಾಲ್ಕು ಚಕ್ರಗಳು ಸರಿಯಾಗಿದ್ದರೆ ಮಾತ್ರ ವಿದ್ಯಾ ಸಂಸ್ಥೆಯ ರಥ ಅಭಿವೃದ್ಧಿಯ ಪಥದಲ್ಲಿ ಸಾಗುತ್ತದೆ. ಮೌಲ್ಯ ಶಿಕ್ಷಣ ಹಾಗೂ ಕೌಶಲ್ಯ ಶಿಕ್ಷಣಕ್ಕೆ ಒತ್ತು ನೀಡಿಬೇಕು. ಭಾಷಾ, ಬರವಣಿಗೆ,ಪ್ರದರ್ಶನ ಕೌಶಲ್ಯ ಗಳಿಸಿ ಆತ್ಮವಿಶ್ವಾಸವನ್ನು ಸಂಪಾದಿಸಿ, ಉತ್ತರೋತ್ತರ ಅಭಿವೃದ್ಧಿಗಳಿಸಿರಿ ಎಂದು ಹಾರೈಸಿದರು.

ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರಾಜ್ಯಮಟ್ಟದಲ್ಲಿ ರಾಘವ ಹೆಗಡೆ ತೃತೀಯ ಸ್ಥಾನ, ಸಿಂಚನಾ ಭಟ್ಟ 7ನೇ ಸ್ಥಾನ, ಲಹರಿ ನಾಯಕ 8ನೇ ಸ್ಥಾನ ಹಾಗೂ ನೀರಜ ಆಚಾರಿ 10ನೇ ಸ್ಥಾನ ಪಡೆದು ರಾಜ್ಯ ಟಾಪ ಟೆನ್ ರ್ಯಾಂಕ್ ಪಟ್ಟಿಯಲ್ಲಿ ಸ್ಥಾನ ಪಡೆದಿರುತ್ತಾರೆ.ಈ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಶೇ. 95 ಕ್ಕಿಂತ ಅಧಿಕ ಅಂಕಗಳಿಸಿದ ಹಾಗೂ ವಿಷಯವಾರು ಪೂರ್ಣಾಂಕ ಗಳಿಸಿದ ವಿದ್ಯಾರ್ಥಿಗಳೂ ಪುರಸ್ಕಾರಕ್ಕೆ ಭಾಜನರಾದರು. ಸರಸ್ವತಿ ಪಿಯು ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ರಾಜ್ಯಮಟ್ಟದ 7ನೇ ರ್ಯಾಂಕ ಪಡೆದ ದಿಶಾ ಶೆಟ್ಟಿ , ರಾಜ್ಯಕ್ಕೆ 8ನೇ ರ್ಯಾಂಕ ಪಡೆದ ಕನ್ನಿಕಾ ಭಟ್ಟ, ವೈಷ್ಣವಿ ಹೆಗಡೆ ಹಾಗೂ ಇತರ ಅತ್ಯುತ್ತಮ ಅಂಕಗಳಿಸಿ ಸಾಧನೆಗೈದ ಉಳಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ಹತ್ತನೇ ಸ್ಥಾನ ಪಡೆದ ನಮೃತಾ ಭಂಡಾರ್ಕರ್,ಸ್ನೇಹಾ ಭಟ್ಟ ಇವರನ್ನು ಸನ್ಮಾನಿಸಲಾಯಿತು. ಪ್ರತಿ ವಿಷಯದಲ್ಲೂ ಪೂರ್ಣಾಂಕಗಳಿಸಿದ ಅಧಿಕ ಅಂಕಗಳಿಸಿ ಸಾಧನೆಗೈದ ಉಳಿದ ವಿದ್ಯಾರ್ಥಿಗಳನ್ನೂ ಗೌರವಿಸಲಾಯಿತು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಸಾಧನೆಗೆ ಕಾರಣೀಭೂತರಾದ ಸಂಸ್ಥೆಯ ಅಂಗಸಂಸ್ಥೆಗಳ ಮುಖ್ಯ ಶಿಕ್ಷಕರನ್ನು ಗೌರವಿಸಿ ಸನ್ಮಾನಿಸಲಾಯಿತು. ಸಂಸ್ಥೆಯ ಎಲ್ಲಾ ಗುರುವೃಂದದವರನ್ನೂ ಗೌರವಿಸಲಾಯಿತು.

ಕೊಂಕಣ ಎಜುಕೇಶನ್ ಟ್ರಸ್ಟ್ ನ ಉಪಾಧ್ಯಕ್ಷರಾದ ಹಾಗೂ ಹಿರಿಯ ವಿಶ್ವಸ್ಥ ರಮೇಶ ಪ್ರಭು ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಮುರುಳೀಧರ ಪ್ರಭು ಕಾರ್ಯಕ್ರಮದ ಕುರಿತು ಪ್ರಸ್ತಾವಿಕ ಮಾತುಗಳನ್ನಾಡಿದರು. ವಿಶ್ವಸ್ಥರಾದ ಡಿ.ಡಿ.ಕಾಮತ, ಸಂಸ್ಥೆಯ ಶೈಕ್ಷಣಿಕ ಸಲಹೆಗಾರ ಆರ್.ಎಚ್. ದೇಶಭಂಡಾರಿ ಉಪಸ್ಥಿತರಿದ್ದರು.ಕಾಲೇಜಿನ ಪ್ರಾಂಶುಪಾಲ ಜಿ.ಎಸ್.ಹೆಗಡೆ ಹಾಗೂ ಸಿ.ವಿ.ಎಸ್.ಕೆ ಪ್ರೌಢಶಾಲೆಯ ಪ್ರಾಂಶುಪಾಲೆ ಸುಮಾ ಪ್ರಭು ಸಾಧನೆಯ ವಿವರ ನೀಡಿದರು. ಪ್ರಮುಖರುಗಳಾದ ಸುಜಾತಾ ನಾಯ್ಕ, ಸಾವಿತ್ರಿ ಹೆಗಡೆ, ವಿಧಾತ್ರಿ ಅಕಾಡೆಮಿಯ ಸಹಸಂಸ್ಥಾಪಕ ಗುರುರಾಜ ಶೆಟ್ಟಿ,ಸರಸ್ವತಿ ಪಿ.ಯು.ಕಾಲೇಜಿನ ಉಪಪ್ರಾಂಶುಪಾಲೆ ಸುಜಾತಾ ಹೆಗಡೆ ವೇದಿಕೆಯಲ್ಲಿದ್ದರು. ಪ್ರಾಥಮಿಕ ವಿಭಾಗದ ಮುಖ್ಯಶಿಕ್ಷಕ ಗಣೇಶ ಜೋಶಿ ಗಣ್ಯರನ್ನು ಸ್ವಾಗತಿಸಿ ಪರಿಚಯಿಸಿದರು. ವಿಸ್ವಸ್ಥ ಡಿ.ಡಿ.ಕಾಮತ ಧನ್ಯವಾದ ಸಮರ್ಪಿಸಿದರು. ವಿದ್ಯಾರ್ಥಿಗಳ ಪರವಾಗಿ ಸಿಂಚನ ಭಟ್ಟ ಹಾಗೂ ಅಗಸ್ತ್ಯ ನಾಯ್ಕ, ಶಿಕ್ಷಕರ ಪರವಾಗಿ ಶಿವಾನಂದ ಭಟ್ಟ ಅನಿಸಿಕೆ ವ್ಯಕ್ತಪಡಿಸಿದರು. ಗೌರೀಶ ಭಂಡಾರಿ, ವಿನಯಾ ಶಾನಭಾಗ ನಿರೂಪಿಸಿದರು.

04/07/2026
💢ಅಂತರರಾಷ್ಟ್ರೀಯ ಮಾದಕ ವ್ಯಸನ ಮತ್ತು ಕಳ್ಳಸಾಗಾಣೆಕೆ ವಿರೋಧಿ ದಿನಾಚರಣೆಯ ಅಂಗವಾಗಿ ಯುವಜನರಲ್ಲಿ ಜಾಗೃತಿ ಮೂಡಿಸಿದ ಕಾರ್ಯಕ್ರಮ 💢ಕುಮಟಾ ಜೂನ್ 30...
01/07/2026

💢ಅಂತರರಾಷ್ಟ್ರೀಯ ಮಾದಕ ವ್ಯಸನ ಮತ್ತು ಕಳ್ಳಸಾಗಾಣೆಕೆ ವಿರೋಧಿ ದಿನಾಚರಣೆಯ ಅಂಗವಾಗಿ ಯುವಜನರಲ್ಲಿ ಜಾಗೃತಿ ಮೂಡಿಸಿದ ಕಾರ್ಯಕ್ರಮ 💢

ಕುಮಟಾ ಜೂನ್ 30 :
ಅಂತರರಾಷ್ಟ್ರೀಯ ಮಾದಕ ವ್ಯಸನ ಮತ್ತು ಕಳ್ಳಸಾಗಾಣೆಕೆ ವಿರೋಧಿ ದಿನಾಚರಣೆಯ ಅಂಗವಾಗಿ ಕುಮಟಾದ ಕೊಂಕಣ ಎಜ್ಯುಕೇಷನ್ ಟ್ರಸ್ಟ್ ನ ಸಿ.ವಿ.ಎಸ್.ಕೆ ಪ್ರೌಢಶಾಲೆಯ ಪ್ರಾರ್ಥನಾ ಮಂದಿರದಲ್ಲಿ ವಿದ್ಯಾರ್ಥಿಗಳಿಗಾಗಿ ಇಂದು ವಿಶೇಷ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕುಮಟಾದ ಪಿ.ಎಸ್.ಐ ಶ್ರೀ ರವಿ ಎನ್ ಗುಡ್ಡಿ ಮಾದಕ ವ್ಯಸನದ ದುಷ್ಪರಿಣಾಮಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಮಾದಕ ವಸ್ತುಗಳ ಸೇವನೆಯಿಂದ ವ್ಯಕ್ತಿಯ ಆರೋಗ್ಯ, ಕುಟುಂಬ ಹಾಗೂ ಸಮಾಜದ ಮೇಲೆ ಉಂಟಾಗುವ ದುಷ್ಪರಿಣಾಮಗಳನ್ನು ವಿವರಿಸಿ, ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿದ್ದು ಉತ್ತಮ ಜೀವನ ಮೌಲ್ಯಗಳನ್ನು ಅಳವಡಿಸಿಕೊಳ್ಳುವಂತೆ ಕರೆ ನೀಡಿದರು.
ವಿದ್ಯಾರ್ಥಿಗಳಲ್ಲಿ ಮಾದಕ ವ್ಯಸನದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಭಾಷಣ, ಪ್ರಶ್ನೋತ್ತರ ಹಾಗೂ ಜಾಗೃತಿ ಸಂದೇಶಗಳ ಮೂಲಕ ಮಾಹಿತಿ ಹಂಚಿಕೊಳ್ಳಲಾಯಿತು.ಇದೇ ಸಂದರ್ಭದಲ್ಲಿ ಅಂತರಾಷ್ಟ್ರೀಯ ಮಾದಕ ವ್ಯಸನ ಮತ್ತು ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆ ಅಂಗವಾಗಿ ಬೆಂಗಳೂರಿನಲ್ಲಿ ಕರ್ನಾಟಕ ರಾಜ್ಯದ ಮಾನ್ಯ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರ ಉಪಸ್ಥಿತಿಯಲ್ಲಿ ನಡೆದ ಜಾಗೃತಿ ಕಾರ್ಯಕ್ರಮದ ನೇರ ಪ್ರಸಾರವನ್ನು ವಿದ್ಯಾರ್ಥಿಗಳು ವೀಕ್ಷಿಸಿದರು.
ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿ ಮಾದಕ ವಸ್ತುಗಳಿಂದ ದೂರವಿರುವ ಪ್ರತಿಜ್ಞೆ ಸ್ವೀಕರಿಸಿದರು.ಹಿರಿಯ ಕನ್ನಡ ಭಾಷಾ ಶಿಕ್ಷಕರಾದ ಶಿವಾನಂದ ಭಟ್ಟ ಮಾದಕ ವ್ಯಸನದಿಂದ ಎದುರಾಗುವ ಸಮಸ್ಯೆಗಳ ಕುರಿತು ಮಕ್ಕಳಿಗೆ ಹೆಚ್ಚಿನ ಮಾಹಿತಿ ನೀಡಿದರು.
ಸಿ.ವಿ.ಎಸ್.ಕೆ ಪ್ರೌಢಶಾಲೆಯ ಪ್ರಾಂಶುಪಾಲರಾದ ಸುಮಾ ಪ್ರಭು,ಶಿಕ್ಷಕರ ವೃಂದದವರು,ಶಾಲಾ ವಾಹನಗಳ ಚಾಲಕ - ನಿರ್ವಾಹಕರು, ಎ.ಎಸ್.ಐ ಮಾರುತಿ ಎನ್ ಎಮ್,ಇನ್ನಿತರ ಪೊಲೀಸ್ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮವು ಯುವಜನರಲ್ಲಿ ಮಾದಕ ವ್ಯಸನದ ವಿರುದ್ಧ ಜಾಗೃತಿ ಮೂಡಿಸುವಲ್ಲಿ ಪರಿಣಾಮಕಾರಿಯಾಗಿ ನೆರವೇರಿತು.

Address

Vidyagiri, Kalbhag
Kumta
581332

Alerts

Be the first to know and let us send you an email when Konkan CVSK High School, Kumta posts news and promotions. Your email address will not be used for any other purpose, and you can unsubscribe at any time.

Contact The School

Send a message to Konkan CVSK High School, Kumta:

Shortcuts

Share

Category