Lion's Swamy Vivekananda English Medium School, Koppal

Lion's Swamy Vivekananda English Medium School, Koppal Contact information, map and directions, contact form, opening hours, services, ratings, photos, videos and announcements from Lion's Swamy Vivekananda English Medium School, Koppal, Near KSRTC Bus Stop, Club Road, Koppal.

ಲಯನ್ಸ್ ಸ್ವಾಮಿ ವಿವೇಕಾನಂದ ಶಾಲೆಯಲ್ಲಿ ತರಬೇತಿ ಕಾರ್ಯಗಾರಕೊಪ್ಪಳ, 11: ನಗರದ ಲಯನ್ಸ್ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರ...
11/10/2023

ಲಯನ್ಸ್ ಸ್ವಾಮಿ ವಿವೇಕಾನಂದ ಶಾಲೆಯಲ್ಲಿ ತರಬೇತಿ ಕಾರ್ಯಗಾರ

ಕೊಪ್ಪಳ, 11: ನಗರದ ಲಯನ್ಸ್ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ಮತ್ತು ಅರಿಹಂತ ಸಂಸ್ಥೆ ಕೊಪ್ಪಳ ಇವರ ಸಂಯುಕ್ತ ಆಶ್ರಯದಲ್ಲಿ ಶಿಕ್ಷಕರಿಗೆ ಮೂರು ದಿನದ ಕಾರ್ಯಗಾರವನ್ನು ಏರ್ಪಡಿಸಲಾಗಿತ್ತು. ದಿನಾಂಕ: ೧೧/೧೦/೨೦೨೩ ರಂದು ಬೆಳಿಗ್ಗೆ 11.೦೦ ಗಂಟೆಗೆ ಲಯನ್ಸ್ ಸ್ವಾಮಿ ವಿವೇಕಾನಂದ ಶಾಲೆಯಲ್ಲಿ ಲಯನ್ಸ ಚಾರಿಟೇಬಲ್ ಟ್ರಸ್ಟಿನ ಅಧ್ಯಕ್ಷರಾದ ಲಯನ್ ಮಲ್ಲಿಕಾರ್ಜುನ ಬಳ್ಳೊಳ್ಳಿ ಇವರು ಕಾರ್ಯಗಾರವನ್ನು ಉದ್ಘಾಟಿಸಿದರು.
ಕಾರ್ಯಗಾರದಲ್ಲಿ ಶಿಕ್ಷಕರಿಗೆ ತರಬೇತಿ ನೀಡಲು ಬೆಂಗಳೂರಿನ Indian Institute of Science ಸಂಸ್ಥೆಯ ಸಂಶೋಧಕರಾಗಿ ಮತ್ತು ಪಿ.ಎಚ್.ಡಿ ಸ್ಕಾಲರ್ ಮಾಡುತ್ತಿರುವ ಶ್ರೀ ಕೌಶಲ್ ತಿವಾರಿ ಬೆಂಗಳೂರು ಆಗಮಿಸಿ, ಶಿಕ್ಷಕರಿಗೆ STEAM (Science, Technology, Engineering, Arts, Maths) ನೈಪುಣ್ಯತೆ ಬಗ್ಗೆ ತರಬೇತಿ ನೀಡುವುದರ ಜೊತೆಗೆ ತರಬೇತಿ ಪಡೆದ ಶಿಕ್ಷಕರಿಗೆ ಪ್ರಶಸ್ತಿ ಪತ್ರಗಳನ್ನು ನೀಡಲಾಯಿತು. ಹಾಗೆಯೇ ನಮ್ಮ ಶಾಲೆಯ 8, 9, 10 ನೇ ತರಗತಿಯ ವಿದ್ಯಾರ್ಥಿಗಳಿಗೆ ಚಂದ್ರಯಾನ-3ರ ಉಡಾವಣೆಯ ಮಾಹಿತಿ ನೀಡಿದರು.
ದಿನಾಂಕ 13-10-2023 ರಂದು ಕಾರ್ಯಗಾರದ ಮುಕ್ತಾಯ ಸಮಾರಂಭವನ್ನು ಏರ್ಪಡಿಸಲಾಯಿತು. ಈ ಸಮಾರಂಭದಲ್ಲಿ ಶಿಕ್ಷಕರಿಗೆ ತರಬೇತಿ ನೀಡಿದ ಶ್ರೀ ಕೌಶಲ್ ತಿವಾರಿ ಮತ್ತು ಅರಿಹಂತ ಸಂಸ್ಥೆಯ ಅಧ್ಯಕ್ಷರಾದ ಲಯನ್ ಲಲಿತ್ ಜೈನ್ ಇವರಿಗೆ ನಮ್ಮ ಶಾಲೆಯ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.
ಸಮಾರಂಭದಲ್ಲಿ ನಮ್ಮ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಲಯನ್ ಬಸವರಾಜ ಬಳ್ಳೊಳ್ಳಿ, ಕಾರ್ಯದರ್ಶಿ ಲಯನ್ ಗವಿಸಿದ್ದಪ್ಪ ಮುದಗಲ್, ಲಯನ್ಸ್ ಕ್ಲಬ್ನ ಅಧ್ಯಕ್ಷರು ಲಯನ್ ಚಂದ್ರಕಾಂತ ತಾಲೆಡಾ, ಕಾರ್ಯದರ್ಶಿ ಲಯನ್ ಮನೋಹರ ದಾದ್ಮಿ, ಲಯನ್ ಶ್ರೀನಿವಾಸ ಗುಪ್ತಾ, ಲಯನ್ ಪರಮೇಶ್ವರಪ್ಪ ಕೊಪ್ಪಳ, ಲಯನ್ ವೆಂಕಟೇಶ ಶ್ಯಾನಬಾಗ್, ಲಯನ್ ಅರವಿಂದ ಅಗಡಿ, ಲಯನ್ ಪ್ರಭು ಹೆಬ್ಬಾಳ, ಲಯನ್ ಶರಣು ಅಗಡಿ, ಲಯನ್ ಶಿವಕುಮಾರ ತಂಬ್ರಳ್ಳಿ, ಲಯನ್ಸ್ ಕ್ಲಬ್ಬಿನ ಸರ್ವಸದಸ್ಯರು ಭಾಗವಹಿಸಿದ್ದರು. ಪ್ರಾಚಾರ್ಯರಾದ ಶ್ರೀಮತಿ ವೈ ಪದ್ಮಜಾ ಇವರು ಮುಕ್ತಾಯ ಸಮಾರಂಭವನ್ನು ಕುರಿತು ಮಾತನಾಡಿ, ಈ ಸಭೆಯಲ್ಲಿ ಭಾಗಿಯಾದವರಿಗೆ ಅಭಿನಂದನೆಯನ್ನು ಸಲ್ಲಿಸಿದರು. ಕಾರ್ಯಕ್ರಮದಲ್ಲಿ ನಮ್ಮ ಶಾಲೆಯ ಎಲ್ಲಾ ಸಿಬ್ಬಂದಿ ವರ್ಗದವರು ಭಾಗಿಯಾಗಿ ಕಾರ್ಯಗಾರವನ್ನು ಯಶಸ್ವಿಗೊಳಿಸಿದರು.

ಶ್ರೀಮತಿ ವೈ ಪದ್ಮಜಾ, 9900366452
ಪ್ರಾಚಾರ್ಯರು,
ಲಯನ್ಸ್ ಎಸ್.ವಿ.ಇ.ಎಮ್. ಶಾಲೆ, ಕೊಪ್ಪಳ

17/09/2023
ಸ್ವಾಮಿ ವಿವೇಕಾನಂದ ಶಾಲೆಯಲ್ಲಿ ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆಯ ಸಂಭ್ರಮಾಚರಣೆನಗರದ ಪ್ರತಿಷ್ಠಿತ ಲಯನ್ಸ್ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ...
17/09/2023

ಸ್ವಾಮಿ ವಿವೇಕಾನಂದ ಶಾಲೆಯಲ್ಲಿ ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆಯ ಸಂಭ್ರಮಾಚರಣೆ

ನಗರದ ಪ್ರತಿಷ್ಠಿತ ಲಯನ್ಸ್ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ 76 ನೇ ವಾರ್ಷಿಕ ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆಯನ್ನು ಸಂಭ್ರiದಿಂದ ಧ್ವಜಾರೋಹಣ ಮಾಡುವುದರ ಮೂಲಕ ಆಚರಿಸಲಾಯಿತು.

ಲಯನ್ಸ್ ಕ್ಲಬ್ನ ಅಧ್ಯಕ್ಷರಾದ ಲಯನ್ ಚಂದ್ರಕಾಂತ ತಾಲೇಡಾರವರು ಧ್ವಜಾರೋಹಣ ಮಾಡಿ ಹೈದರಾಬಾದ ಕರ್ನಾಟಕ ವಿಮೋಚನೆಗೆ ಹೋರಾಡಿದ ನಾಯಕರನ್ನು ನೆನೆದು ಅಧ್ಯಕ್ಷೀಯ ನುಡಿಗಳನ್ನಾಡಿದರು. ಇದೇ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಶಾಲಾ ಪ್ರಾಚಾರ್ಯರಾದ ವೈ. ಪದ್ಮಜಾ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದು ಕಾರ್ಯಕ್ರಮ ಯಶಸ್ವಿಗೊಳಿಸಿದರು.

ಇದೇ ಸಂದರ್ಭದಲ್ಲಿ ಕೊಪ್ಪಳ ತಾಲೂಕಿನ ಅನುದಾನರಹಿತ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟದಿಂದ ಭಾಗ್ಯನಗರದ ಪಾನಘಂಟಿ ಕಲ್ಯಾಣ ಮಂಟಪದಲ್ಲಿ ಶಿಕ್ಷಕರ ದಿನಾಚರಣೆ ಮತ್ತು ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಿತು. ಈ ಸಮಾರಂಭದಲ್ಲಿ ನಮ್ಮ ಲಯನ್ಸ್ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಕನ್ನಡ ಭಾಷಾ ಶಿಕ್ಷಕರಾದ ಶ್ರೀ ವಿರೇಶ ಕೊಪ್ಪಳ ಹಾಗೂ ಸಿ.ಬಿ.ಎಸ್.ಇ. ಶಾಲೆಯ ದೈಹಿಕ ಶಿಕ್ಷಕರಾದ ಶ್ರೀ ದ್ಯಾಮಪ್ಪ ಕುರಿ ಇವರುಗಳಿಗೆ ಉತ್ತಮ ಶಿಕ್ಷಕರ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಸನ್ಮಾನಿತರನ್ನು ಕೊಪ್ಪಳ ಲಯನ್ಸ್ ಕ್ಲಬ್ನ ಅಧ್ಯಕ್ಷರಾದ ಲಯನ್ ಚಂದ್ರಕಾಂತ ತಾಲೇಡಾ ಮತ್ತು ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಲಯನ್ ಬಸವರಾಜ ಬಳ್ಳೋಳ್ಳಿ, ಕಾರ್ಯದರ್ಶಿ ಲಯನ್ ಗವಿಸಿದ್ದಪ್ಪ ಮುದಗಲ್ ಮತ್ತು ಸರ್ವಸದಸ್ಯರು ಹಾಗೂ ಶಾಲಾ ಪ್ರಾಚಾರ್ಯೆ ವೈ. ಪದ್ಮಜಾ ಮತ್ತು ಸಿಬ್ಬಂದಿ ವರ್ಗದವರು ಅಭಿನಂದನೆ ಸಲ್ಲಿಸಿದರು.

ಶ್ರೀಮತಿ ವೈ. ಪದ್ಮಜಾ, ಪ್ರಾಚಾರ್ಯರು,
ಲಯನ್ಸ್ ಸ್ವಾ.ವಿ.ಆಂ.ಮಾ. ಶಾಲೆ,
ಕೊಪ್ಪಳ – 583 231
ಮೊಬೈಲ್: +91-9900366452 (ಪ್ರಾಚಾರ್ಯರು)
8050874631 (ವಿನಾಯಕ ಹತ್ತಿಕಾಳ)

ಕೊಪ್ಪಳ ನಗರದ ಲಯನ್ಸ್ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ಶ್ರೀ ಶಿವಶಾಂತವೀರ ಪ್ರೌಢ ಶಾಲೆಯ ಪ್ರಾಚಾರ್ಯರಾದ ಶ್ರೀ ರುದ್ರಸ್ವಾ...
21/03/2016

ಕೊಪ್ಪಳ ನಗರದ ಲಯನ್ಸ್ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ಶ್ರೀ ಶಿವಶಾಂತವೀರ ಪ್ರೌಢ ಶಾಲೆಯ ಪ್ರಾಚಾರ್ಯರಾದ ಶ್ರೀ ರುದ್ರಸ್ವಾಮಿಯವರು ವಿದ್ಯಾರ್ಥಿಗಳನ್ನು ಕುರಿತು ಮಾತನಾಡುತ್ತ ವಿದ್ಯಾರ್ಥಿಗಳು ಪರೀಕ್ಷಗಳಿಗೆ ಭಯ ಪಡದೆ ದೈರ್ಯದಿಂದ ಎದುರಿಸಬೇಕು. ಪ್ರಶ್ನೆ ಪತ್ರಿಕೆಯನ್ನು ಓದಿ ಸರಿಯಾಗಿ ಅರ್ಥ ಮಾಡಿಕೊಂಡು ನೀಡಿರುವ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಬೇಕು ಎಂದು ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿ ಉತ್ತಮ ಅಂಕಗಳನ್ನು ಗಳಿಸುವಂತೆ ತಿಳುವಳಿಕೆ ನೀಡಿದರು.

ನಂತರ ಶಾಲಾ ಪ್ರಾಚಾರ್ಯರಾದ ಶ್ರೀ ಎ. ಧನಂಜಯನ್ರವರು ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರಗಳನ್ನು ವಿತರಿಸಿ, ವಿದ್ಯಾರ್ಥಿಗಳು ಜ್ಞಾನದ ಗಣಿಗಳಾಗಬೇಕು, ಜ್ಞಾನ ತಣಿಸಿಕೊಳ್ಳಲು ನಿರಂತರ ಓದನ್ನು ಮೈಗೂಡಿಸಿಕೊಳ್ಳಬೇಕು. ದೇಶದ ಪ್ರಗತಿಯ ಕುರಿತು ಮಕ್ಕಳು ಚಿಂತನೆ ಹೊಂದಿರಬೇಕು ಎಂದು ಹೇಳಿ ಅತಿಥಿಗಳಿಗೆ ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ಶಿಕ್ಷಕರಾದ ಶ್ರೀ ಶರಣಗೌಡ, ಶ್ರೀ ಸಮೀರ ಜೋಷಿ, ಶ್ರೀಮತಿ ಆಶಾ ವೈದ್ಯ, ಶ್ರೀ ಶಂಕರ, ಶ್ರೀ ಅಶೋಕ ಮತ್ತು ಇತರರು ಉಪಸ್ಥಿತರಿದ್ದರು.

ಆರಂಭದಲ್ಲಿ ಶಾಲಾ ಕನ್ನಡ ಉಪನ್ಯಾಸಕರಾದ ಶ್ರೀ ವೀರೇಶ ಕೊಪ್ಪಳರವರು ಅತಿಥಿಗಳನ್ನು ಸ್ವಾಗತಿಸಿದರು. ಕೊನೆಯಲ್ಲಿ ಶಾಲಾ ಹಿರಿಯ ಶಿಕ್ಷಕರಾದ ಶ್ರೀ ಎಸ್.ಸಿ. ಹಿರೇಮಠ ವಂದಿಸಿದರು.

SVEM School Education Excursion 2015 to Chitradurga with SSLC Students on 05-12-2015
12/12/2015

SVEM School Education Excursion 2015 to Chitradurga with SSLC Students on 05-12-2015

Our PM Mr. Narendra Modi Speach on account of "Teacher's Day" in our Lions Swamy Vivekananda English Medium School, Kopp...
04/09/2015

Our PM Mr. Narendra Modi Speach on account of "Teacher's Day" in our Lions Swamy Vivekananda English Medium School, Koppal

Address

Near KSRTC Bus Stop, Club Road
Koppal
583231

Website

Alerts

Be the first to know and let us send you an email when Lion's Swamy Vivekananda English Medium School, Koppal posts news and promotions. Your email address will not be used for any other purpose, and you can unsubscribe at any time.

Contact The School

Send a message to Lion's Swamy Vivekananda English Medium School, Koppal:

Shortcuts

Share