02/08/2026
SHREERAKSHA......... Rtn SHREERAKSHA.....
Was the student of our First Grade College Murnad
*ರೋಟರಿ ವುಡ್ಸ್ ಗೆ ಅಭಿನಂದನೆಗಳು.* 🥰👍💐👌👌
5 ವಷ೯ಗಳ ಹಿಂದೆ ಪ್ರಾರಂಭವಾದ ರೋಟರಿ ವುಡ್ಸ್ ಅಂದಿನ ಅಧ್ಯಕ್ಷರಾದ ಎಸ್.ಎಸ್. ಸಂಪತ್ ಕುಮಾರ್ ಮಾಗ೯ದಶ೯ನದಲ್ಲಿ ಮೂನಾ೯ಡು ವಿದ್ಯಾಸಂಸ್ಥೆಯಲ್ಲಿ ರೋಟರ್ಯಾಕ್ಟ್ ಪ್ರಾರಂಭಿಸಿದ ಸಂದಭ೯ ಅಂದು ಅದರ ಅಧ್ಯಕ್ಷೆಯಾಗಿ ಶ್ರೀರಕ್ಷಾ ಪ್ರಭಾಕರ್ ಅವರನ್ನು ನಿಯೋಜಿಸಲಾಗಿತ್ತು. ಶ್ರೀರಕ್ಷಾ ನಿರೀಕ್ಷೆಗೂ ಮೀರಿದ ಸಾಧನೆಯನ್ನು ಆ ವಷ೯ ಸಾಧಿಸಿದ್ದರು.
ನಂತರ ಮೈಸೂರಿಗೆ ಶಿಕ್ಷಣಕ್ಕಾಗಿ ತೆರಳಿದ ಶ್ರೀರಕ್ಷಾ ಅಲ್ಲಿಯೂ ರೋಟರ್ಯಾಕ್ಟ್ ನಲ್ಲಿ ಸಕ್ರಿಯರಾಗಿ ವಿವಿಧ ಪ್ರಮುಖ ಹುದ್ದೆಗಳಲ್ಲಿ ಕಾಯ೯ನಿವ೯ಹಿಸಿ ಗಮನ ಸೆಳೆದಿದ್ದರು.
ಇಂದು ಇದೇ ಶ್ರೀರಕ್ಷಾ ರೋಟರ್ಯಾಕ್ಟ್ ಜಿಲ್ಲಾ ಪ್ರತಿನಿಧಿಯಾಗಿ ಮೈಸೂರಿನಲ್ಲಿ ಅಧಿಕಾರ ವಹಿಸಿಕೊಂಡರು. ರೋಟರಿ ಜಿಲ್ಲೆ 3181 ನ ಡಿಜಿ ರೊ. ಸತೀಶ್ ಬೋಳಾರ್, ಪ್ರಮುಖರಾದ ಎಚ್.ಆರ್.ಕೇಶವ್, ಯಶಸ್ವಿ ಸೋಮಶೇಖರ್, ಡಾ.ಸೂಯ೯ನಾರಾಯಣ ಸೇರಿದಂತೆ ಹಲವರು ಶ್ರೀರಕ್ಷಾಳಿಗೆ ಶುಭ ಹಾರೈಸಿದರು.
ನಾನು ರೋಟರಿ ವುಡ್ಸ್ ಮೂಲಕ ಈ ಸೇವಾ ಸಂಸ್ಥೆಗೆ ಸಸಿಯಾಗಿ ಬಂದವಳು ಈಗ ಗಿಡವಾಗಿ ನಿಮ್ಮ ಮುಂದೆ ನಿಂತಿದ್ದೇನೆ ಎಂದು ಶ್ರೀ ರಕ್ಷಾ ಭಾವುಕಳಾಗಿ ಹೇಳಿದಾಗ ಚಪ್ಪಾಳೆಯ ಸುರಿಮಳೆ ಕೇಳಿಬಂತು.. *ರೋಟರಿ ವುಡ್ಸ್ ನಿಜಕ್ಕೂ ಗ್ರೇಟ್…* 👌👌👌
ಓವ೯ ಯುವ ನಾಯಕಿಯನ್ನು 5 ವಷ೯ಗಳ ಹಿಂದೆಯೇ ಗುರುತಿಸಿ ಆಕೆಗೆ ಹೊಣೆ ನೀಡಿದ ಪರಿಣಾಮವೇ ಇಂದು ಈಕೆ 54 ರೋಟರ್ಯಾಕ್ಟ್ ಕ್ಲಬ್ ಗಳಿಗೆ ಜಿಲ್ಲಾ ಪ್ರತಿನಿಧಿಯಾದ ಹಿರಿಮೆಗೆ ಕಾರಣಳಾಗಿದ್ದಾಳೆ.
ಇದೇ ಮೊದಲ ಬಾರಿಗೆ ಕೊಡಗು ಜಿಲ್ಲೆಯಿಂದ ಡಿಆರ್ ಆರ್ ಆದ ಖ್ಯಾತಿಯೂ ಶ್ರೀರಕ್ಷಾಳದ್ದು
ಶ್ರೀರಕ್ಷಾಳಿಗೆ ನಾನು, ಎಸ್.ಎಸ್. ಸಂಪತ್ ಕುಮಾರ್,ಡಾ. ಪ್ರಶಾಂತ್ ಇಂದು ಅಭಿನಂದನೆ ಸಲ್ಲಿಸಿ ಶುಭಹಾರೈಸಿದೆವು
ಜಿಲ್ಲಾ ರೋಟರ್ಯಾಕ್ಟ್ ತಂಡದ ಸಲಹೆಗಾರನಾಗಿ ನಾನು ಕಾಯ೯ನಿವ೯ಹಿಸಲಿದ್ದೇನೆ. ಹೊಸ ಹೊಣೆಯೂ ನನ್ನ ಹೆಗಲಿಗೇರಿದೆ. !!!
( ತನ್ನ ಭಾಷಣದಲ್ಲಿ ಶ್ರೀರಕ್ಷಾ,
ವಸಂತ್ ಕುಮಾರ್ ಅನಂತಶಯನ, ಹರೀಶ್ ಕಿಗ್ಗಾಲು, ಧನಂಜಯ್ ಅವರನ್ನು ಸ್ಮರಿಸಿಕೊಂಡರು. ಆಕೆಯನ್ನು ಇಂಡಕ್ಟ್ ಮಾಡಿದ ಸಂದಭ೯ ಪದಗ್ರಹಣ ಅಧಿಕಾರಿಯಾಗಿದ್ದ ಡಾ.ಸಿ.ಆರ್. ಪ್ರಶಾಂತ್ ಇಂದು ರೋಟರ್ಯಾಕ್ಟ್ ಗಳಿಗೆ ಅತ್ಯುತ್ತಮ ತರಬೇತಿ ನೀಡಿದ್ದರು.)
ಶ್ರೀರಕ್ಷಾಳ ಸಂಭ್ರಮಕ್ಕೆ ಕಾರಣವಾದ ರೋಟರಿ ವುಡ್ಸ್ ಗೆ ಸವ೯ರ ಪರವಾಗಿ ಅಭಿನಂದನೆಗಳು.🥰
*ರೊ. ಅನಿಲ್ ಹೆಚ್.ಟಿ.*