Shubham Karoti Maitreyi Gurukula

Shubham Karoti Maitreyi Gurukula Contact information, map and directions, contact form, opening hours, services, ratings, photos, videos and announcements from Shubham Karoti Maitreyi Gurukula, Education, ramohalli, Kengeri.

a registered charitable trust serving to impart holistic Gurukula system of education, imbibing Indian culture, ethos and aiming to empower under privileged girls.

ಸನಾತನ ಸಂಸ್ಕಾರ ಸಂಸ್ಕೃತಿ ಶಿಕ್ಷಣ ಶಿಬಿರ - 2026🚩🚩🚩🚩🚩🚩🚩🚩🚩🚩🚩🚩🚩🚩🚩ಕಳೆದ ವರ್ಷದ ಯಶಸ್ಸಿನ ನಂತರ, ಈ ವರ್ಷವೂ ನಮ್ಮ ಗುರುಕುಲದಲ್ಲಿ “ಸನಾತನ ಸಂಸ್...
25/04/2026

ಸನಾತನ ಸಂಸ್ಕಾರ ಸಂಸ್ಕೃತಿ ಶಿಕ್ಷಣ ಶಿಬಿರ - 2026

🚩🚩🚩🚩🚩🚩🚩🚩🚩🚩🚩🚩🚩🚩🚩

ಕಳೆದ ವರ್ಷದ ಯಶಸ್ಸಿನ ನಂತರ, ಈ ವರ್ಷವೂ ನಮ್ಮ ಗುರುಕುಲದಲ್ಲಿ “ಸನಾತನ ಸಂಸ್ಕಾರ ಸಂಸ್ಕೃತಿ ಶಿಕ್ಷಣ ಶಿಬಿರ”ವನ್ನು ಆಯೋಜಿಸಲಾಯಿತು.

ಈ ವರ್ಷ ನಮ್ಮ ನಿರೀಕ್ಷೆಗೂ ಮೀರಿದಂತೆ ಸುಮಾರು 50 ಮಕ್ಕಳು ಭಾಗವಹಿಸಿದ್ದು, ನಮಗೆ ಅಪಾರ ಸಂತೋಷವನ್ನು ತಂದಿದೆ. ಅನೇಕ ಕುಟುಂಬಗಳಿಗೆ ಗುರುಕುಲದ ಜೀವನಪದ್ಧತಿ, ಸಂಸ್ಕಾರ, ಮೌಲ್ಯಗಳು ಮತ್ತು ಶಿಕ್ಷಣದ ವಿಶಿಷ್ಟ ದೃಷ್ಟಿಕೋನವನ್ನು ತಲುಪಿಸಲು ಸಾಧ್ಯವಾಗಿದೆ.

ಈ 10 ದಿನಗಳ ಅವಧಿಯಲ್ಲಿ, ಶಿಬಿರಾರ್ಥಿಗಳು ಗುರುಕುಲದ ಮಕ್ಕಳಂತೆಯೇ ಬೆರೆತು ಹೋಗಿ, ಇಲ್ಲಿ ನಡೆಯುವ ಪ್ರತಿಯೊಂದು ಚಟುವಟಿಕೆಯನ್ನು – ಪ್ರಾರ್ಥನೆ, ಯೋಗ, ಶ್ಲೋಕ, ಕಥೆ, ಆಟ, ಸೇವೆ, ಸಂಸ್ಕಾರ ಮತ್ತು ಸಹಜ ಜೀವನವನ್ನು – ಅತ್ಯಂತ ಹರ್ಷದಿಂದ ಸ್ವೀಕರಿಸಿದರು.

ವಿಶೇಷವಾಗಿ ಮನಸಿಗೆ ತಟ್ಟಿದ ಸಂಗತಿ ಏನೆಂದರೆ, ಹಿರಿಯ ಗುರುಕುಲದ ವಿದ್ಯಾರ್ಥಿನಿಯರೇ ಶಿಕ್ಷಕಿಯರಾಗಿ, ಅಕ್ಕಂದಿರಾಗಿ, ಮಾರ್ಗದರ್ಶಕರಾಗಿ ಮಕ್ಕಳ ಜೊತೆ ಬೆರೆತು ಹೋದರು. ಅವರ ಸ್ನೇಹ, ಸಹನೆ, ಪ್ರೀತಿ ಮತ್ತು ತಮ್ಮ ಬದುಕಿನ ಮೂಲಕವೇ ಕಲಿಸುವ ವಿಧಾನ, ಶಿಬಿರಾರ್ಥಿಗಳ ಮನಸ್ಸಿನ ಮೇಲೆ ಆಳವಾದ ಸ್ಪರ್ಶ ಬೀರಿತು.

ಗುರುಕುಲದ ವಾತಾವರಣವೇ ಹಾಗೆ ಅಲ್ಲವೇ?

ಅದು ಉಪದೇಶ ಮಾಡುವುದಕ್ಕಿಂತ ಹೆಚ್ಚು, ಮೌನವಾಗಿ ನಮ್ಮೊಳಗೆ ಕೆಲಸ ಮಾಡುತ್ತದೆ...
ನಮಗೆ ತಿಳಿಯದಂತೆ, ನಮ್ಮನ್ನು ಮೃದುವಾಗಿ ರೂಪಿಸುತ್ತದೆ...
ತಾಯಿಯಂತೆ... ಗುರುವಿನಂತೆ... 🙏

ಈ ಶಿಬಿರದ ಕೊನೆಯ ದಿನ, ಭಾಗವಹಿಸಿದ ಮಕ್ಕಳ ಕುಟುಂಬದವರು, ಬಂಧುಗಳು ಹಾಗೂ ಸ್ನೇಹಿತರೂ ಆಗಮಿಸಿ, ಈ 10 ದಿನಗಳಲ್ಲಿ ಮಕ್ಕಳು ಕಲಿತಿದ್ದನ್ನು, ಅವರಲ್ಲಾದ ಬದಲಾವಣೆಯನ್ನು ಕಣ್ಣಾರೆ ನೋಡಿ ಸಂತೋಷಪಟ್ಟರು. ಅದು ನಮ್ಮೆಲ್ಲರಿಗೂ ಅತ್ಯಂತ ಹರ್ಷದ ಕ್ಷಣವಾಗಿತ್ತು.

ಈ ಶಿಬಿರವನ್ನು ಯಶಸ್ವಿಗೊಳಿಸಿದ ಎಲ್ಲ ಮಕ್ಕಳಿಗೂ, ಪೋಷಕರಿಗೂ, ಕುಟುಂಬದವರಿಗೂ, ಗುರುಕುಲದ ಹಿರಿಯ ವಿದ್ಯಾರ್ಥಿನಿಯರಿಗೂ ಮತ್ತು ಹೃತ್ಪೂರ್ವಕವಾಗಿ ಬೆಂಬಲಿಸಿದ ಪ್ರತಿಯೊಬ್ಬರಿಗೂ ನಮ್ಮ ನಮನಗಳು. 🙏💐

Dear Friends,

Following the success of last year’s camp, we were happy to organize the second edition of the “Sanatana Samskaara Samskruti Shikshana Shibhira” this year at our Gurukula.

The response has gone far beyond our expectations. 50 children participated in this 10-day camp, and through this effort we have been able to reach many families and share with them the Gurukula way of life, its values and its unique educational vision.

During these 10 days, the children blended so naturally into the Gurukula environment that they began to feel like Gurukula children themselves. They joyfully took part in prayers, yoga, shlokas, stories, games, seva, samskaaras and the simple rhythm of Gurukula life.

One of the most touching aspects of the camp was that our senior Gurukula girls themselves became teachers, elder sisters and guides to the younger children. Their affection, patience, warmth and their way of teaching through their own lives left a deep impression on the participants.

Is this not the very nature of the Gurukula environment?

More than through instruction, it quietly works within us...
Without our even realizing it, it gently shapes us...
Like a mother... Like a Guru... 🙏

On the final day of the camp, parents, relatives, friends and family members visited the Gurukula and witnessed what the children had learnt and experienced over these 10 days. Seeing their joy and appreciation was one of the happiest moments for all of us.

We offer our heartfelt gratitude to all the children, parents, families, senior Gurukula girls and everyone who helped make this second Shibhira such a meaningful and memorable success. 🙏💐

ಆತ್ಮೀಯರೇ, ನಮಸ್ತೆ,ನಮ್ಮ ಶುಭಂ ಕರೋತಿ ಮೈತ್ರೇಯೀ ಗುರುಕುಲದಲ್ಲಿ ಕಳೆದ ಮೂರು ದಶಕಗಳಿಂದ ಆಚರಿಸಿಕೊಂಡು ಬರುತ್ತಿರುವ ಸಂಕಷ್ಟಹರ ಗಣೇಶ ಚತುರ್ಥಿ ಹ...
03/04/2026

ಆತ್ಮೀಯರೇ, ನಮಸ್ತೆ,
ನಮ್ಮ ಶುಭಂ ಕರೋತಿ ಮೈತ್ರೇಯೀ ಗುರುಕುಲದಲ್ಲಿ ಕಳೆದ ಮೂರು ದಶಕಗಳಿಂದ ಆಚರಿಸಿಕೊಂಡು ಬರುತ್ತಿರುವ ಸಂಕಷ್ಟಹರ ಗಣೇಶ ಚತುರ್ಥಿ ಹೋಮವನ್ನು, ಈ ವರ್ಷದಿಂದ ಸಮಾಜವನ್ನು ಇನ್ನಷ್ಟು ವ್ಯಾಪಕವಾಗಿ ಜೋಡಿಸಿಕೊಳ್ಳುವ ಉದ್ದೇಶದಿಂದ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ.
ಸಹೃದಯರಾದ ತಾವು ಈ ಸತ್ಕಾರ್ಯದಲ್ಲಿ ಭಾಗಿಯಾಗಿ, ಭಗವಂತನ ಕೃಪೆಗೆ ಪಾತ್ರರಾಗುವುದರೊಂದಿಗೆ ಗುರುಕುಲದ ಶ್ರೇಯೋಭಿವೃದ್ಧಿಗೆ ಕೈಜೋಡಿಸಬೇಕಾಗಿ ವಿನಂತಿಸುತ್ತೇವೆ.
ತಾವು ತಮ್ಮ ಪೂಜಾ ಕಾಣಿಕೆಯನ್ನು ಕೆಳಗೆ ನೀಡಿರುವ ಮಾಹಿತಿಯ ಮೂಲಕ ನಮಗೆ ತಲುಪಿಸಬೇಕಾಗಿ ಕೋರಿಕೊಳ್ಳುತ್ತೇವೆ.
ಹಾಗೂ, ಪೂಜೆಯಲ್ಲಿ ನಿಮ್ಮ ಹೆಸರು, ಗೋತ್ರ, ನಕ್ಷತ್ರ ಮತ್ತು ವಿಳಾಸವನ್ನು ಸೇರಿಸಲು ದಯವಿಟ್ಟು ಈ ವಿವರಗಳನ್ನು ನಮಗೆ ಹಂಚಿಕೊಳ್ಳುವಂತೆ ವಿನಂತಿ.

Dear Friends, Namaste,
At Shubham Karoti Maitreyee Gurukula, the Sankashtahara Ganesha Chaturthi Homa has been observed for the past three decades. From this year onwards, we wish to expand its reach and connect more deeply with society, and hence we are sharing this message with you.
We sincerely invite you to participate in this noble activity, receive the blessings of the Lord, and contribute to the growth and well-being of the Gurukula.
We request you to kindly send your pooja offering through the details provided below.
We also request you to kindly share your name, gotra, nakshatra, and address so that they may be included in the pooja.

"ಸನಾತನ ಸಂಸ್ಕಾರ ಶಿಕ್ಷಣ ಶಿಬಿರ "ಇನ್ನೇನು ಕೆಲವು ದಿನಗಳಲ್ಲಿ ಆರಂಭವಾಗಲಿದೆ...ಸಂಖ್ಯೆಗಳು ಭರ್ತಿಯಾಗುತ್ತಿವೆ...💐🚩🚩ಈ ತಿಂಗಳ 30 ರ ವರೆಗೂ ಹೆಸ...
25/03/2026

"ಸನಾತನ ಸಂಸ್ಕಾರ ಶಿಕ್ಷಣ ಶಿಬಿರ "

ಇನ್ನೇನು ಕೆಲವು ದಿನಗಳಲ್ಲಿ ಆರಂಭವಾಗಲಿದೆ...
ಸಂಖ್ಯೆಗಳು ಭರ್ತಿಯಾಗುತ್ತಿವೆ...💐🚩🚩

ಈ ತಿಂಗಳ 30 ರ ವರೆಗೂ ಹೆಸರನ್ನು ನೋಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ..

ಇನ್ನೊಂದು ವಿಶೇಷತೆಯೆಂದರೆ, ಮುಂದಿನ ದಿನಗಳಲ್ಲಿ ಬರುವ ಅರ್ಜಿದಾರರು, RSS ಸ್ವಯಂಸೇವಕ ಗಣದವರಾಗಿದ್ದಲ್ಲಿ 2500/- ರೂಪಾಯಿಗಳ ವಿನಾಯಿತಿಯನ್ನು ನೀಡಲಾಗುತ್ತದೆ..

ತ್ವರೆ ಮಾಡಿ... ಒಂದು ಒಳ್ಳೆಯ ಅನುಭವ ನಿಮ್ಮ ಮಗುವಿನದ್ದಾಗಲಿ..💐💐💐🎉

ಹರಿಃ ಓಮ್...🙏💐ನೋಡುತ್ತಾ ನೋಡುತ್ತಾ ದಿನಗಳು ಕಳೆದೇ ಹೋದವು..ಎಷ್ಟೊಂದು ವಿಚಾರಣೆಗಳು... ಎಷ್ಟೊಂದು ಕರೆಗಳು... ಭೇಟಿಗಳು...🙏ಇನ್ನೂ ಮುಗಿಯುತ್ತಲ...
25/03/2026

ಹರಿಃ ಓಮ್...🙏💐

ನೋಡುತ್ತಾ ನೋಡುತ್ತಾ ದಿನಗಳು ಕಳೆದೇ ಹೋದವು..

ಎಷ್ಟೊಂದು ವಿಚಾರಣೆಗಳು... ಎಷ್ಟೊಂದು ಕರೆಗಳು... ಭೇಟಿಗಳು...🙏

ಇನ್ನೂ ಮುಗಿಯುತ್ತಲೇ ಇಲ್ಲ...

ಆಗಲಿ.. ಎಲ್ಲರಿಗೂ ಅನುಕೂಲವಾಗಬೇಕು..
ಯಾರ ಅದೃಷ್ಟ ಎಲ್ಲಿ ಬರೆದಿದೆಯೋ.....!!

ಇನ್ನೂ 5 ದಿನಗಳ ಕಾಲ ಅರ್ಜಿ ಸಲ್ಲಿಸುವ ಸಮಯವನ್ನು ವಿಸ್ತರಿಸುತ್ತಿದ್ದೇವೆ...💐💐

ಆಸಕ್ತರು ಉಪಯೋಗಿಸಿಕೊಳ್ಳಿ..💐🚩

Il ಶುಭಂ ಭವತು ll

💐🚩 ಗುರುಕುಲದ ಪ್ರವೇಶಕ್ಕಾಗಿ ಅರ್ಜಿ 💐🚩

# 2026 - 27 ನೆಯ ಸಾಲಿನ , 5 ನೆಯ ತರಗತಿ ಮುಗಿಸಿದ ಹೆಣ್ಣು ಮಕ್ಕಳಿಗಾಗಿ, ಗುರುಕುಲಕ್ಕೆ ಪ್ರವೇಶ ಅರ್ಜಿಯನ್ನು ಆಹ್ವಾನಿಸುತ್ತಿದ್ದೇವೆ...💐🙏

ಉಚಿತ ಊಟೋಪಚಾರ ವಸತಿಯೊಂದಿಗೆ ಸಂಸ್ಕೃತಿ - ಸಂಸ್ಕಾರ - ಸಂಸ್ಕೃತ ದ ಜೊತೆಗೆ ಆಧುನಿಕ ಶಿಕ್ಷಣ....🕉️

ಇದನ್ನು ಸಾಧ್ಯವಾದಷ್ಟು ಜನರಿಗೆ ತಲುಪಿಸೋಣ..🚩💐

ಅರ್ಹ - ಅಗತ್ಯತೆಯುಳ್ಳ ಮಕ್ಕಳಿಗೆ ಅವಕಾಶ ಮಾಡಿಕೊಡೋಣ...🍀🎉

ನಿಮ್ಮ ನಿಮ್ಮ ಪರಿಚಿತರಿಗೆ ... ಸಂಬಂಧಿಗಳಿಗೆ ... ಆತ್ಮೀಯರಿಗೆ ತಲುಪಿಸಿ ...ಗುರುಕುಲ ಶಿಕ್ಷಣವನ್ನು ಬಲಪಡಿಸಿ...✊

https://shubhamkarotigurukula.com/wp-content/uploads/2026/02/AdmissionApplication-2026-2027.pdf

☝️ ಇಲ್ಲಿ ಅಪ್ಲಿಕೇಶನ್ ಅನ್ನು ನೇರವಾಗಿ ಡೌನ್ಲೋಡ್ ಮಾಡಿಕೊಳ್ಳಬಹುದು...

https://youtube.com/?si=s8xP3lAhGZPczVaf

☝️ ಹೆಚ್ಚಿನ ಮಾಹಿತಿಗೆ ನಮ್ಮ ಯು ಟ್ಯೂಬ್ ಲಿಂಕ್..

www.shubhamkarotigurukula.com

☝️ ನಮ್ಮ ವೆಬ್ಸೈಟ್...

Ilಜಯತು ಭಾರತಮ್ ll ಜಯತು ಗುರುಕುಲಮ್ ll 🚩

"ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.."🎉💐💐ಪರಾಭವ ನಾಮ ಸಂವತ್ಸರವು ಎಲ್ಲರಿಗೂ ಶುಭವನ್ನು ಉಂಟುಮಾಡಲಿ...🙏🙏💐ಸರ್ವರಿಗೂ ಮಂಗಳವಾಗಲಿ..🎉💐ದೇಶವು ಸು...
19/03/2026

"ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.."🎉💐💐

ಪರಾಭವ ನಾಮ ಸಂವತ್ಸರವು ಎಲ್ಲರಿಗೂ ಶುಭವನ್ನು ಉಂಟುಮಾಡಲಿ...🙏🙏💐

ಸರ್ವರಿಗೂ ಮಂಗಳವಾಗಲಿ..🎉💐

ದೇಶವು ಸುಭಿಕ್ಷವಾಗಲಿ...🙏🙏🙏

"ಸರ್ವೇ ಜನಾಃ ಸುಖಿನೋ ಭವಂತು"

ನಿನ್ನೆಯಿಂದ SSLC ಪರೀಕ್ಷೆಯ ಆರಂಭ...💐ಎಲ್ಲಾ ಮಕ್ಕಳೂ ಶ್ರದ್ಧೆಯಿಂದ ದೇವಿಗೆ ನಮಿಸಿ, ಅಗ್ರಜರಿಂದ ಪ್ರವೇಶಪತ್ರವನ್ನು ಪಡೆದು ಪರೀಕ್ಷೆಗೆ ಹೊರಟರು...
19/03/2026

ನಿನ್ನೆಯಿಂದ SSLC ಪರೀಕ್ಷೆಯ ಆರಂಭ...💐

ಎಲ್ಲಾ ಮಕ್ಕಳೂ ಶ್ರದ್ಧೆಯಿಂದ ದೇವಿಗೆ ನಮಿಸಿ, ಅಗ್ರಜರಿಂದ ಪ್ರವೇಶಪತ್ರವನ್ನು ಪಡೆದು ಪರೀಕ್ಷೆಗೆ ಹೊರಟರು...🎉

ಗುರುಕುಲದ ಶಿಕ್ಷಣದಲ್ಲಿ ಜೀವನವೆಂಬ ನಿತ್ಯ ಪರೀಕ್ಷೆಯನ್ನು ಎದುರಿಸಲು ಸಿದ್ಧರಾಗುತ್ತಿರುವ ಮಕ್ಕಳಿಗೆ, ಅಂಕ ಮಾನ್ಯದ ಪರೀಕ್ಷೆಯ ಕಾಲ...💐

ಎಲ್ಲರಿಗೂ ಶುಭವಾಗಲಿ..

" ನೈಸರ್ಗಿಕ ಹೋಳಿ ಬಣ್ಣ " 🫟 🚩😍😍ಈ ಬಾರಿಯ ಹೋಳಿ ಹಬ್ಬ ನಮಗೆ ಬಹಳ ವಿಶಿಷ್ಟವಾದದ್ದು..ಯಾಕೆನ್ನುವಿರಾ...??ಮಕ್ಕಳು Venugopal Sreeram Rajaiah...
06/03/2026

" ನೈಸರ್ಗಿಕ ಹೋಳಿ ಬಣ್ಣ " 🫟 🚩😍😍

ಈ ಬಾರಿಯ ಹೋಳಿ ಹಬ್ಬ ನಮಗೆ ಬಹಳ ವಿಶಿಷ್ಟವಾದದ್ದು..

ಯಾಕೆನ್ನುವಿರಾ...??

ಮಕ್ಕಳು Venugopal Sreeram Rajaiah ಅಗ್ರಜರ ಮಾರ್ಗದರ್ಶನದಲ್ಲಿ , ಶುದ್ಧವಾದ ನೈಸರ್ಗಿಕ ಬಣ್ಣಗಳನ್ನು ತಯಾರಿಸಿದರು...😍😍

ನೋಡಿ... ವಿಜ್ಞಾನದ ಕಲಿಕೆ... ಜೊತೆಗೆ ಹೋಳಿ ಬಣ್ಣದ ತಯಾರಿಕೆ..

ಇದರ ಪ್ರಕ್ರಿಯೆಯನ್ನು ವೇಣುಗೋಪಾಲ್ರವರು ಹೀಗೆ ವರ್ಣಿಸುತ್ತಾರೆ..👉

"ಗುರುಕುಲದಲ್ಲಿ ಮಕ್ಕಳು ಕೆಲವು ದಿನಗಳ ಹಿಂದೆ ಪ್ರಾಯೋಗಿಕವಾಗಿ ನೈಸರ್ಗಿಕ ಬಣ್ಣಗಳನ್ನು ತಯಾರಿಸುವ ಕಾರ್ಯವನ್ನು ಆರಂಭಿಸಿದ್ದರು.
ಹೂವುಗಳು, ಎಲೆಗಳು, ಬೀಟ್ರೂಟ್ ಹಾಗೂ ಅರಿಶಿನವನ್ನು ಸಂಗ್ರಹಿಸಿ, ಅವನ್ನು ಒಣಗಿಸಿ, ಪುಡಿ ಮಾಡಿ, ಹೆಚ್ಚಿನ ಪ್ರಮಾಣದಲ್ಲಿ ಇಂದು ಬಣ್ಣಗಳನ್ನು ಸಿದ್ಧಪಡಿಸಿಕೊಂಡರು. ಇವುಗಳನ್ನು ಹೋಳಿ ಹಬ್ಬದಂದು ಬಳಸಲಿದ್ದಾರೆ.

ಬಣ್ಣಗಳನ್ನು ಮಿಶ್ರಣ ಮಾಡುವ ಸಂದರ್ಭದಲ್ಲಿ “Non-Newtonian Fluid”ನ ಅನುಭವವನ್ನೂ ಸಂತೋಷದಿಂದ ಅನುಭವಿಸಿದರು. ದ್ರವ ಮತ್ತು ಘನದ ನಡುವಿನ ವಿಶೇಷ ಗುಣವನ್ನು ತಮ್ಮ ಕೈಯಿಂದಲೇ ಮಾಡಿ ಅರಿತುಕೊಂಡರು."

ಹೀಗೆ ಮಕ್ಕಳಿಗೆ ನಿಧಾನವಾಗಿ ಪ್ರಕೃತಿಯತ್ತ ಮರಳುವ ಪಾಠವೂ ಗುರುಕುಲ ಶಿಕ್ಷಣದಿಂದ ಆಗುತ್ತಿದೆ..

ನಮ್ಮ ಮೂಲವನ್ನು ಅರಿಯುವುದೂ ದೊಡ್ಡ ವಿಜ್ಞಾನವೇ ಅಲ್ಲವೇ..??!

#ಹೋಳಿ

🫟 ಹೋಳಿ ಹಬ್ಬ.....😍😍😍🚩💐💐🕉️ಬಣ್ಣದ ಹಬ್ಬವನ್ನು ಗುರುಕುಲದ ಮಕ್ಕಳು ಬಹಳ ವಿಶೇಷವಾಗಿ ಆಚರಿಸಿದರು...🎊🌻ಈ ಬಾರಿ ಗುರುಕುಲದಲ್ಲಿ ತಯಾರಿಸಿದ ಶುದ್ಧವಾ...
04/03/2026

🫟 ಹೋಳಿ ಹಬ್ಬ.....😍😍😍🚩💐💐🕉️

ಬಣ್ಣದ ಹಬ್ಬವನ್ನು ಗುರುಕುಲದ ಮಕ್ಕಳು ಬಹಳ ವಿಶೇಷವಾಗಿ ಆಚರಿಸಿದರು...🎊🌻

ಈ ಬಾರಿ ಗುರುಕುಲದಲ್ಲಿ ತಯಾರಿಸಿದ ಶುದ್ಧವಾದ ಬಣ್ಣಗಳೂ ಈ ಹಬ್ಬಕ್ಕೆ ವಿಶೇಷ ಮೆರಗನ್ನು ತಂದವು...💐

ರಾಮಕೃಷ್ಣಾಶ್ರಮದ ಸ್ವಾಮೀಜಿಯವರು, ಅಗ್ರಜ.. ಆಚಾರ್ಯ.. ಮಾತೃಶ್ರೀಯವರುಗಳು.. ಮಕ್ಕಳೊಂದಿಗೆ ಸೇರಿ ಸಂಭ್ರಮದಿಂದ ಹಬ್ಬದ ಆಚರಣೆಯನ್ನು ಮಾಡಿದರು..🍀🎉

Holi Festival Celebrations at Shubham Karoti Gurukula 🎉🎨💐

This year, the children at Shubham Karoti Gurukula celebrated the festival of colors with immense joy and enthusiasm! 🌸✨

The vibrant, pure colors prepared by the Gurukula made this occasion even more special, adding a unique charm to the festivities. 🌺🌿

Our beloved Swamiji of Ramakrishna Ashrama, along with Acharya and Matru Shree, joined the children in this joyous celebration, making it an unforgettable event for all. 🕉️💫

#ಹೋಳಿ

ಕಾಮದಹನ..💐ನಮ್ಮೆಲ್ಲಾ ದೋಷಗಳ ನಿವಾರಣೆಗಾಗಿ..ಬಣ್ಣದ ಹಬ್ಬ ಹೋಳಿಯ ಪೂರ್ವಭಾವಿಯಾಗಿ ಕಾಮದಹನ ಹಬ್ಬವನ್ನು ಗುರುಕುಲದಲ್ಲಿ 3ನೆಯ ದಿನಾಂಕ ಚತುರ್ದಶಿಯ...
04/03/2026

ಕಾಮದಹನ..💐

ನಮ್ಮೆಲ್ಲಾ ದೋಷಗಳ ನಿವಾರಣೆಗಾಗಿ..

ಬಣ್ಣದ ಹಬ್ಬ ಹೋಳಿಯ ಪೂರ್ವಭಾವಿಯಾಗಿ ಕಾಮದಹನ ಹಬ್ಬವನ್ನು ಗುರುಕುಲದಲ್ಲಿ 3ನೆಯ ದಿನಾಂಕ ಚತುರ್ದಶಿಯಂದು ಆಚರಿಸಲಾಯಿತು...🙏💐🚩

✅ ಬೇಸಿಗೆ ಶಿಬಿರ 2026 🚩🚩💐  🚩"ಸನಾತನ ಸಂಸ್ಕಾರ ಶಿಕ್ಷಣ ಶಿಬಿರ" - ಶುಭಂ ಕರೋತಿ ಮೈತ್ರೇಯಿ ಗುರುಕುಲದ ವತಿಯಿಂದ ...👉 ಏಪ್ರಿಲ್ 2 ರಿಂದ 11 ರ ವ...
02/03/2026

✅ ಬೇಸಿಗೆ ಶಿಬಿರ 2026 🚩🚩💐

🚩"ಸನಾತನ ಸಂಸ್ಕಾರ ಶಿಕ್ಷಣ ಶಿಬಿರ" - ಶುಭಂ ಕರೋತಿ ಮೈತ್ರೇಯಿ ಗುರುಕುಲದ ವತಿಯಿಂದ ...

👉 ಏಪ್ರಿಲ್ 2 ರಿಂದ 11 ರ ವರೆಗೆ...🚩🚩✅

📌ಗುರುಕುಲ ಶಿಕ್ಷಣದ ಬಗ್ಗೆ ಆಸಕ್ತಿ ಹೊಂದಿರುವ / ಸಾಮಾನ್ಯ ಶಾಲೆಗಳಲ್ಲಿ ಶಿಕ್ಷಣ ಪಡೆಯುತ್ತಿರುವ ಮಕ್ಕಳಿಗೆ...

📌ನಮ್ಮ ಹೆಣ್ಣುಮಕ್ಕಳಿಗೆ ನಮ್ಮ ಸಂಸ್ಕೃತ ಸಂಸ್ಕೃತಿಯ ಪರಿಚಯವಾಗಬೇಕು ಎಂಬ ಕನಸುಳ್ಳ ಪಾಲಕರಿಗೆ..

📌 ಗುರುಕುಲ ಪದ್ಧತಿಯು ಎಲ್ಲೆಡೆಯಲ್ಲಿ ಪಸರಿಸಬೇಕು ಆ ಮೂಲಕ ಸ್ವಸ್ಥ ಸುಸಂಸ್ಕೃತ ಸಮಾಜ ನಿರ್ಮಾಣಗೊಳ್ಳಬೇಕು ಎಂದು ಆಶಿಸುವ ಸಜ್ಜನರಿಗೆ...

" ಇದೊಂದು ಅತ್ಯುತ್ತಮ ಅವಕಾಶ "

ಸದುಪಯೋಗಪಡಿಸಿಕೊಳ್ಳೋಣ...🙏💐💐💐🚩

"ಹಿಂದೂ ಸಮಾಜದ ಸಿಂಹಿಣಿಯರು..."🚩🚩 ಹತ್ತಿರದ ರಾಮೋಹಳ್ಳಿಯಲ್ಲಿ ನಡೆದ ಹಿಂದೂ ಸಮಾಜೋತ್ಸವದಲ್ಲಿ ನಮ್ಮ ಗುರುಕುಲದ ಮಕ್ಕಳು ಅಕ್ಷರಶಃ ಸಿಂಹಿಣಿಯರಂತೆ...
27/02/2026

"ಹಿಂದೂ ಸಮಾಜದ ಸಿಂಹಿಣಿಯರು..."🚩🚩

ಹತ್ತಿರದ ರಾಮೋಹಳ್ಳಿಯಲ್ಲಿ ನಡೆದ ಹಿಂದೂ ಸಮಾಜೋತ್ಸವದಲ್ಲಿ ನಮ್ಮ ಗುರುಕುಲದ ಮಕ್ಕಳು ಅಕ್ಷರಶಃ ಸಿಂಹಿಣಿಯರಂತೆ ರಾರಾಜಿಸಿದರು..🙏🚩

ಎಲ್ಲೆಡೆಯಲ್ಲಿಯೂ ಕೇಸರಿಯ ಸಮುದ್ರ...
ರಾಷ್ಟ್ರೀಯತೆ ಸಾರುವ ಘೋಷಣೆಗಳು...
ಪುಷ್ಪವೃಷ್ಟಿ... ಕರತಾಡನಗಳು...💐

ಸಮಾಜದ ಗಣ್ಯಮಾನ್ಯರೆದುರಿಗೆ ಗುರುಕುಲದ ಹೆಣ್ಣುಮಕ್ಕಳು ಧ್ವನಿಯೆತ್ತಿ , ರಾಷ್ಟ್ರದ ನಿರ್ಮಾಣದ ಕುರಿತು, ವಿವೇಕಾನಂದರ ಕುರಿತು ಮಾತನಾಡುತ್ತಿದ್ದರೆ ..

ಆಹ್...!! ಎಂತಹ ದೃಶ್ಯ ...

ಇಂದಿನ ಸಮಾಜಕ್ಕೆ ಇಂತಹ ಸಂಸ್ಕಾರ ಬೇಕು.. ಹೆಣ್ಣುಮಕ್ಕಳ ಸಮಾನತೆಯ ಬಗ್ಗೆ ಮಾತನಾಡುವವರು ಇದನ್ನು ನೋಡಿ ಕಲಿತುಕೊಳ್ಳಬೇಕು...

ಈ ರೀತಿಯ ಶಿಕ್ಷಣ ಭಾರತದ ಭವ್ಯತೆಗಾಗಿ ಬೇಕು...🚩💐💐

Il ಜೈ ಶ್ರೀರಾಮ್ ll

" ಮಹಾಶಿವರಾತ್ರಿ " ....🚩💐💐🙏ಮಕ್ಕಳಿಂದಲೇ ನಿರ್ಮಿಸಲ್ಪಟ್ಟ ಶಿವನಂದಿಯರು..ಜಾಗರಣೆ ಪೂಜೆ..🙏 ಯಾಮ ಭಜನೆಗಳು..🙏ಈ ಸಲದ ಶಿವರಾತ್ರಿಯು ಅಪಾರ ಭಕ್ತಿ ...
25/02/2026

" ಮಹಾಶಿವರಾತ್ರಿ " ....🚩💐💐🙏

ಮಕ್ಕಳಿಂದಲೇ ನಿರ್ಮಿಸಲ್ಪಟ್ಟ ಶಿವನಂದಿಯರು..

ಜಾಗರಣೆ ಪೂಜೆ..🙏 ಯಾಮ ಭಜನೆಗಳು..🙏

ಈ ಸಲದ ಶಿವರಾತ್ರಿಯು ಅಪಾರ ಭಕ್ತಿ ಶ್ರದ್ಧೆಯಿಂದ ಗುರುಕುಲದಲ್ಲಿ ಆಚರಿಸಲ್ಪಟ್ಟಿತು...

ಮಕ್ಕಳು ಮಹಾಮೃತ್ಯುಂಜಯ ಮಂತ್ರವನ್ನು ಪಠಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು..💐

Address

Ramohalli
Kengeri

Alerts

Be the first to know and let us send you an email when Shubham Karoti Maitreyi Gurukula posts news and promotions. Your email address will not be used for any other purpose, and you can unsubscribe at any time.

Contact The School

Send a message to Shubham Karoti Maitreyi Gurukula:

Shortcuts

Share

Category