31/05/2024
*ಕರ್ನಾಟಕ ಶಿಕ್ಷಣ ರತ್ನ ಪ್ರಶಸ್ತಿ ಸ್ವಿಕರಿಸಿದ ಜೈ ರಂಗನಾಥ*
ಕಾರವಾರ- ಜನತಾ ವಿದ್ಯಾಲಯ ಮುದಗಾ ವಿಜ್ಞಾನ ಶಿಕ್ಷಕರು ಹಾಗೂ ಕಾರವಾರ ತಾಲ್ಲೂಕು ಮಾಧ್ಯಮಿಕ ಶಾಲಾ ನೌಕರರ ಸಂಘದ ಅಧ್ಯಕ್ಷರಾದ ಜೈ ರಂಗನಾಥ ಬಿ.ಎಸ್ ರವರು ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಭವ್ಯ ಸಮಾರಂಭದಲ್ಲಿ ಕರ್ನಾಟಕ ಶಿಕ್ಷಣ ರತ್ನ ಪ್ರಶಸ್ತಿ ಸ್ವಿಕರಿಸಿದರು.
ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಮಹನೀಯರುಗಳಿಗೆ ಕರ್ನಾಟಕ ಶಿಕ್ಷಣ ರತ್ನ ಪ್ರಶಸ್ತಿಯನ್ನು ನೀಡುವ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು ಉತ್ತರ ಕನ್ನಡ ಜಿಲ್ಲೆಯಿಂದ ಈ ಗೌರವವು ಇವರಿಗೆ ಸಿಕ್ಕಿರುವದು ಹೆಮ್ಮೆ ಎನಿಸಿದೆ.ಪ್ರತಿಷ್ಠಿತ ಪ್ರಶಸ್ತಿಯನ್ನು ದೇಶ ಕಂಡ ಅಪರೂಪದ ನ್ಯಾಯಾಧೀಶರು ಹಾಗೂ ಕರ್ನಾಟಕದ ನಿವೃತ್ತ ಲೋಕಾಯುಕ್ತರಾದ ಸಂತೋಷ್ ಕುಮಾರ್ ಹೆಗಡೆಯವರು ನೀಡಿ ಗೌರವಿಸಿದರು ಮತ್ತು ದಕ್ಷ ಅಧಿಕಾರಿಗಳಾದ ಜಾಕಿರ್ ಹುಸೇನ್ ರವರು ಪ್ರೋತ್ಸಾಹಿಸಿ ತಮ್ಮ ಅಮೃತ ಹಸ್ತದಿಂದ ದಿಂದ ಕರ್ನಾಟಕ ಶಿಕ್ಷಣ ರತ್ನ ಪ್ರಶಸ್ತಿ ಯ ಸ್ಮರಣಿಕೆಯನ್ನು ವಿತರಿಸಿದರು.