02/10/2026
ದೇಶಪ್ರೇಮಿ ಬ್ರಾಹ್ಮಣರೆನ್ನುವ ಕಾರಣಕ್ಕಾಗಿ ಅವರನ್ನು ಮರೆಯಲು ಸಾಧ್ಯವೇ?
ಮಹಾತ್ಮ ನಾತೂರಾಮ ಗೋಡ್ಸೆಯವರು ದೇಶಕ್ಕಾಗಿ ಮಾಡಿದ ತ್ಯಾಗ ಇಂದು ದೇಶದ ಬಹುತೇಕ ಮಂದಿಗೆ ತಿಳಿಯದಿರುವುದು ದುರಂತ. ಇದು ವಾಸ್ತವವನ್ನು ಸಾರುವ ಪುಸ್ತಕ. ಹಿಂದೊಮ್ಮೆ ಗುಲಾಮ ಸರ್ಕಾರ "ನಾನೇಕೆ ಗಾಂಧಿಯವರನ್ನು ಕೊಂದೆ?" ಎನ್ನುವ ಹೆಸರಿನಿಂದಿದ್ದ ಈ ಪುಸ್ತಕವನ್ನು ಬ್ಯಾನ್ ಮಾಡಿತ್ತು. ಆದರೆ ಪುಸ್ತಕ ಪ್ರಕಾಶಕರು ಅದರಿಂದ ವಿಚಲಿತರಾಗದೆ "ಕೊಂದೆ" ಶಬ್ದಕ್ಕೆ ಬದಲಾಗಿ "ವಧೆ" ಶಬ್ದವನ್ನು ಬಳಸಿ ತಮ್ಮ ಶಬ್ದದೋಷವನ್ನು ಸರಿ ಮಾಡಿಕೊಂಡು ಪುನಃ ಪುಸ್ತಕವನ್ನು ಬೆಳಕಿಗೆ ತಂದಿದ್ದಾರೆ. "ವಧೆ"ಯೇ ಸೂಕ್ತವಾದ ಶಬ್ದ. ಅಮಾಯಕ ವ್ಯಕ್ತಿಯ ಜೀವ ತೆಗೆದರೆ " ಕೊಲೆ" ಎನ್ನಲಾಗುತ್ತದೆ; ದುಷ್ಟನ ಜೀವ ತೆಗೆದರೆ "ವಧೆ" ಎನ್ನಲಾಗುತ್ತದೆ. ಇವಕ್ಕೆ ಎರಡು ಉದಾಹರಣೆಗಳನ್ನೂ ಕೊಡುತ್ತೇನೆ- "ಕಳ್ಳನೊಬ್ಬ ಸರ ಕದಿಯಲು ಮಹಿಳೆಯ ಕೊಲೆ ಮಾಡಿದ", " ದೇವಿಯು ಚಂಡ-ಮುಂಡರೆಂಬ ರಾಕ್ಷಸರನ್ನು ವಧೆ ಮಾಡಿದಳು". ಸತ್ಯ ಎಂದಿಗೂ ಸಾಯುವುದಿಲ್ಲ. ಹಾಗಾಗಿಯೇ ಈ ಪುಸ್ತಕ ಇನ್ನೂ ಬದುಕಿದೆ, ಮಾರುಕಟ್ಟೆಯಲ್ಲೂ ಲಭ್ಯವಿದೆ.
ನಾತೂರಾಮ್ ಗೋಡ್ಸೆಯವರನ್ನು ಒಬ್ಬ ಮಹಾನ್ ವ್ಯಕ್ತಿ ಎಂದೇ ಹೇಳಬಹುದು. ಇಂದಿರಾ ಗಂದಿ ಮತ್ತು ರಾಜೀವ್ ಗಂದಿಯ ವಧೆ ಆದಾಗ ಇಡೀ ದೇಶವೇ ನಿಟ್ಟುಸಿರು ಬಿಟ್ಟಿತ್ತು ನಿಜ. ಆದರೆ ಆ ವಧೆಗಳಿಗೆ ಕಾರಣ ವೈಯಕ್ತಿಕವೇ ಆಗಿತ್ತು.
ಪಂಜಾಬ್ ನ ಸಿಖ್ ಪಂಥದವರ ಪವಿತ್ರ ಕ್ಷೇತ್ರವಾದ ಸ್ವರ್ಣಮಂದಿರದ ಸಂಕೀರ್ಣದಿಂದ ಸಿಖ್ಖರನ್ನು ಹೊರಹಾಕಲು ೧೯೮೪ರಲ್ಲಿ ಇಂದಿರಾ ಗಂದಿ ಭಾರತೀಯ ಸೇನೆಗೆ ಆದೇಶ ನೀಡಿದ್ದಳು. ಆಕೆಯ ಆದೇಶದಿಂದ ಸಿಖ್ಖರ ಮಾರಣಹೋಮವೇ ನಡೆದಿತ್ತು. ಸಿಖ್ಖರ ಪರಮ ಪವಿತ್ರವಾದ 'ಅಕಾಲ್ ತಖ್ತ್' ಕಟ್ಟಡಕ್ಕೆ ತೀವ್ರ ಹಾನಿಯಾಗಿತ್ತು ಮತ್ತು ಹಲವು ನಾಗರಿಕರು ಸಾವನ್ನಪ್ಪಿದ್ದರು. ಅಲ್ಲಿ ನಡೆದಿದ್ದ ರಕ್ತಪಾತಕ್ಕೆ ಪ್ರತಿಕಾರವಾಗಿ ಇಂದಿರಾ ಗಂದಿಯ ಭದ್ರತಾ ಸಿಬ್ಬಂದಿಯಾಗಿದ್ದ ಬಿಯಾಂತ್ ಸಿಂಗ್ ಮತ್ತು ಸತ್ವಂತ್ ಸಿಂಗ್ ಎಂಬ ಇಬ್ಬರು ಸಿಖ್ ಅಂಗರಕ್ಷಕರು ಆಕೆಯ ವಧೆ ಗೈದರು. ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಸೇರಿಸಲು ಬಯಸಿದ್ದ ಮೊಟ್ಟಮೊದಲ ವ್ಯಕ್ತಿಯಾಗಿದ್ದ ಇಂದಿಳಾರ ವಧೆ ನಿಜವಾದ ದೇಶಪ್ರೇಮಿಗಳಲ್ಲಿ ಸಂತಸವನ್ನು ತಂದಿದ್ದರೂ, ಸಿಖ್ ಸಹೋದರರು ಮಾಡಿದ್ದ ಆ ವಧೆ ತಮ್ಮ ಸಮುದಾಯದವರಿಗಾದ ಅನ್ಯಾಯಕ್ಕೆ ಪ್ರತೀಕಾರ ತೆಗೆದುಕೊಳ್ಳುವುದಾಗಿತ್ತು
ಶ್ರೀಲಂಕಾದಲ್ಲಿ ತಮಿಳಿಯನ್ನರಿಗಾಗುತ್ತಿದ್ದ ತೀವ್ರ ಶೋಷಣೆಗಳ ವಿರುದ್ಧ ಒಂದೂ ಶಬ್ದವೆತ್ತದಿದ್ದ ರಾಜೀವ್ ಗಂದಿ ೧೯೮೭ ರಲ್ಲಿ ಶ್ರೀಲಂಕಾ ಸರ್ಕಾರದೊಂದಿಗೆ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ್ದ. ಶ್ರೀಲಂಕಾದ ಸಿಂಹಳೀಯರನ್ನು ಬೆಂಬಲಿಸುತ್ತಿದ್ದ ರಾಜೀವ್ ಗಂದಿ ಅಲ್ಲಿಯ ಅಂತರ್ಯುದ್ಧವನ್ನು ನಿಲ್ಲಿಸಲು ಭಾರತೀಯ ಶಾಂತಿ ಪಾಲನಾ ಪಡೆಯನ್ನು (IPKF) ) ಶ್ರೀಲಂಕಾಕ್ಕೆ ಕಳುಹಿಸಿದ್ದ. ಆದರೆ ಅದರ ಉದ್ದೇಶ ತಮಿಳಿಯನ್ನರನ್ನು ಮತ್ತಷ್ಟು ದುರ್ಬಲವಾಗಿಸುವುದು ಎನ್ನುವ ಸತ್ಯವನ್ನು ಅರಿತ ಎಲ್‌ಟಿಟಿಇ ಮುಖ್ಯಸ್ಥ ವೇಲುಪಿಳ್ಳೈ ಪ್ರಭಾಕರನ್ ಧನು(ಕಾಲೈವಣಿ ರಾಜರತ್ನಂ) ಎನ್ನುವ ಬಾಲಕಿಯ ಮುಖಾಂತರ ಮಾನವಬಾಂಬ್ ಇರಿಸಿ ರಾಜೀವ್ ಗಂದಿಯ ವಧೆ ಗೈದರು. ದೇಶಾಭಿಮಾನ ಚೂರೂ ಇಲ್ಲದಿದ್ದ ರಾಜೀವ್ ಗಂದಿಯ ಅಂತ್ಯ ದೇಶವಾಸಿಗಳಲ್ಲಿ, ಅದರಲ್ಲೂ ಹೆಚ್ಚಾಗಿ ತಮಿಳಿಯನ್ನರಲ್ಲಿ ಸಂತಸವನ್ನು ತಂದಿದ್ದರೂ, ಪ್ರಭಾಕರನ್ ಮಾಡಿದ್ದ ವಧೆ ತಮ್ಮ ಭಾಷೆಗರಿಗಾದ ಅನ್ಯಾಯಕ್ಕೆ ಪ್ರತೀಕಾರ ತೆಗೆದುಕೊಳ್ಳುವುದಾಗಿತ್ತು.
ಚಿತ್ಪಾವನ ಬ್ರಾಹ್ಮಣ ಸಮುದಾಯದಲ್ಲಿ ಮಹಾರಾಷ್ಟ್ರದಲ್ಲಿ ಜನಿಸಿದ್ದ ಮಹಾತ್ಮ ನಾತೂರಾಮ ಗೋಡ್ಸೆಯಯವರಿಗೆ ಮೋಕ ಗಂದಿಯನ್ನು ಕೊಲ್ಲಲು ಯಾವ ಸ್ವಾರ್ಥವಿತ್ತು? ತಮ್ಮ ಸಮುದಾಯಕ್ಕಾದ ಅನ್ಯಾಯವೇ ಅಥವಾ ತಮ್ಮ ಭಾಷಿಗರಿಗಾದ ಅನ್ಯಾಯವೇ? ಯಾವುದೂ ಅಲ್ಲವಲ್ಲ! ಅವರಿಗೆ ಇದದ್ದು ತಮ್ಮ ದೇಶ ಉಳಿಯಬೇಕು ಎನ್ನುವ ಸ್ವಾರ್ಥ. ಇಂತಹ ದೇಶಭಕ್ತಿಗೂ ಮರಣದಂಡನೆಯಾಗಿದ್ದು ಈ ದೇಶದ ದುರಂತ ಹೇಗೋ ಹಾಗೆಯೇ ಮೋಕ ಗಂದಿಯನ್ನು 'ಗಾಂಧಿ' ಎಂದೂ, 'ಮಹಾತ್ಮ' ಎಂದೂ ಕರೆದದ್ದು ಅದಕ್ಕಿಂತಲೂ ದೊಡ್ಡ ದುರಂತ.
ಜನ ಇಂದು ಜಾತಿ-ಜಾತಿ ಅಂತ ಹೊಡೆದಾಡಿಕೊಳ್ಳುತ್ತಾರೆ, ಕೊನೆಗೆ ಗಟ್ಟಿಗರೊಂದಿಗೆ ಸೆಣಸಾಡಲು ಸಾಧ್ಯವಾಗದಿರುವ ನಪುಂಸಕತೆಯಿಂದ ಬ್ರಾಹ್ಮಣರನ್ನು ನಿಂದಿಸುತ್ತಾರೆ. ಆದರೆ ದೇಶವನ್ನೇ ಇಬ್ಭಾಗ ಮಾಡಿದವನನ್ನು ಸಂಹಾರ ಮಾಡುವ ಧೈರ್ಯವನ್ನು ಬ್ರಾಹ್ಮಣರನ್ನು ನಿಂದಿಸುವ ಸಮುದಾಯದ ಯಾವೊಬ್ಬನೂ ತೋರಿಸಲಿಲ್ಲ. ನಾಚಿಕೆಯಾಗಬೇಕು ಬ್ರಾಹ್ಮಣರನ್ನು ನಿಂದಿಸುವವರ ಹೀನಾಯ ಜನ್ಮಕ್ಕೆ. ಮಾತೆತ್ತಿದರೆ ಸಾಕು, ಅಂಬೇಡ್ಕರ್, ಸಂವಿಧಾನ ಅಂತೆಲ್ಲಾ ಉದ್ದುದ್ದ ಬುರುಡೆ ಇಲ್ಲದೆ ವಾಂತಿ ಮಾಡುತ್ತಾರೆ. ಆದರೆ ಅಂತಹ ಯಾವೊಬ್ಬನೂ ಅಂಬೇಡ್ಕರ್ ಅವರನ್ನು ತಿಳಿದುಕೊಂಡಿಲ್ಲ, ಸಂವಿಧಾನವನ್ನು ಪಾಲಿಸುತ್ತಿಲ್ಲ. ದೇಶಕ್ಕೆ ಹಾಗೂ ಧರ್ಮಕ್ಕೆ ಯಾರು ಸೇವೆಯನ್ನು ಸಲ್ಲಿಸುತ್ತಾರೋ ಅಂಥವರ ಜಾತಿಯನ್ನು ನೋಡದೆ ಗೌರವಿಸುವವರೆಂದರೆ ಬ್ರಾಹ್ಮಣರು ಮಾತ್ರ. ಹಾಗಾಗಿಯೇ ಇತ್ತೀಚಿನ ಹೋರಾಟಗಾರ, ಚಿಂತಕ ಹಾಗೂ ಪಶುಪ್ರೇಮಿ ಶ್ರೀಯುತ ಪುನೀತ್ ಕೆರೆಹಳ್ಳಿಯವರನ್ನು ಅವರ ಜಾತಿ ಯಾವುದು ಎನ್ನುವ ಕ್ಷುಲ್ಲಕ ಚಿಂತನೆ ಮಾಡದೆ ನನ್ನಂತಹ ಅನೇಕರು ಗೌರವಿಸುತ್ತಿರುವುದು.
ಮಹಾತ್ಮ ನಾತೂರಾಮ ಗೋಡ್ಸೆಯವರಂತಹ ಒಬ್ಬ ವ್ಯಕ್ತಿ ಅಂದು ಇಲ್ಲದಿದ್ದರೆ ನಾವು ಇರುವ ದೇಶ ಭಾರತವಾಗಿ ಇರುತ್ತಿರಲಿಲ್ಲ. ಭಾರತವೇ ಇಲ್ಲದಿದ್ದರೆ ಯಾವ ಸಂವಿಧಾನವೂ ಇರುತ್ತಿರಲಿಲ್ಲ, ಸಂವಿಧಾನ ಶಿಲ್ಪಿ ಬೆನೆಗಲ್ ನರಸಿಂಗ ರಾಯರೂ ಇರುತ್ತಿರಲಿಲ್ಲ, ಮತ್ತೊಮ್ಮೆ ಸಂವಿಧಾನ ಬರೆದ ಅಂಬೇಡ್ಕರ್ ಅವರೂ ಇರುತ್ತಿರಲಿಲ್ಲ; ಮೊಘಲರ ಆಳ್ವಿಕೆಯಲ್ಲಿ ನಾವು ಹೊಡೆಸಿಕೊಂಡು ಜೀತ ಮಾಡಬೇಕಿತ್ತು. ದೇಶಪ್ರೇಮಿಯಾಗಿದ್ದ ನಾತೂರಾಮ್ ಗೋಡ್ಸೆಯವರನ್ನು ಅವರು ಬ್ರಾಹ್ಮಣರು ಎನ್ನುವ ಕಾರಣಕ್ಕೆ ಉರಿ ಪಟ್ಟುಕೊಂಡು ಅವರನ್ನು ಮರೆಯಲು ಸಾಧ್ಯವೇ?
ವಯಸ್ಸಿನಲ್ಲಿ ಹಿರಿಯರಿಗೆ ಗೌರವ ಕೊಡಬೇಕಾದದ್ದು ಸಂಸ್ಕಾರ. ಇಲ್ಲಿ ನಾನು ಕೆಲವು ಹಿರಿಯರಿಗೆ (ಕೇವಲ ವಯಸ್ಸಿನಲ್ಲಿ) ಏಕವಚನದಲ್ಲಿ ಕರೆದಿದ್ದೇನೆ. ದೇಶ ಬೇರೆಯಲ್ಲ, ಜನ್ಮ ಕೊಟ್ಟ ತಾಯಿ ಬೇರೆಯಲ್ಲ. ತಾಯಿಯನ್ನೇ ಕೆಣಕಿದವರನ್ನು ಅರ್ಥಾತ್ ದೇಶದ್ರೋಹ ಮಾಡಿದವರನ್ನು ಸ್ವಂತ ಅಪ್ಪನಿಗೇ ಹುಟ್ಟಿದ ಯಾವೊಬ್ಬ ಮಗನೂ ಗೌರವ ಕೊಡಲು ಸಾಧ್ಯವಿಲ್ಲ. ಹಾಗಾಗಿಯೇ ಏಕವಚನದಲ್ಲಿ ಕರೆದದ್ದು.
ಜೈ ಶ್ರೀರಾಮ್.
ವಂದೇ ಮಾತರಂ.
- ಲಕ್ಷ್ಮಣ ಆಕಾಶೆ, ಕಾರ್ಕಳ