Sahitya Prakashana

Sahitya Prakashana Contact information, map and directions, contact form, opening hours, services, ratings, photos, videos and announcements from Sahitya Prakashana, Koppikar Road, Hubli.

01/02/2025

ಸಾಹಿತ್ಯ ಪ್ರಕಾಶನಕ್ಕೆ ಒಂದು ಬಗೆಯ ತೃಪ್ತಿ, ಕೆಲಸದಲ್ಲಿ ಸಮಾಧಾನ, ಮಾಗುವಿಕೆಗಳಿಗೆ ಕಾರಣರಾದ ಎಲ್ಲರೂ ನನ್ನ ನಿತ್ಯಸ್ಮರಣೆಯಲ್ಲಿರುವವರೇ! ಅಂಥ ಮಹನೀಯರಲ್ಲಿ ಹೆಚ್ಚಿನವರನ್ನು ನಾನು ಅಂಗಡಿ ಪ್ರವೇಶಿಸುತ್ತಿರುವಂತೆ ನೋಡುವಂತಾಗಬೇಕೆಂಬುದು ನನ್ನ ನಿಡುಗಾಲದ ಆಸೆ ಮೊನ್ನೆತಾನೆ ಈಡೇರಿದ ಸಂಭ್ರಮ!!

ಕನ್ನಡ ಪುಸ್ತಕಗಳನ್ನು ಓದುವವರ, ಕೊಳ್ಳುವವರ ಸಂಖ್ಯೆ ಕಡಿಮೆಯಾಗುತ್ತಿದೆಯೇ ಎಂದು ಕೇಳುವವರಿಗಾಗಿ 👇
31/08/2024

ಕನ್ನಡ ಪುಸ್ತಕಗಳನ್ನು ಓದುವವರ, ಕೊಳ್ಳುವವರ ಸಂಖ್ಯೆ ಕಡಿಮೆಯಾಗುತ್ತಿದೆಯೇ ಎಂದು ಕೇಳುವವರಿಗಾಗಿ 👇

https://www.youtube.com/live/hHqFaME3yoc?si=MTsdc8hl9yszcQDw
26/05/2024

https://www.youtube.com/live/hHqFaME3yoc?si=MTsdc8hl9yszcQDw

ಎಸ್.ಎಲ್. ಭೈರಪ್ಪನವರ ಇಂಗ್ಲಿಷ್ ಅನುವಾದಿತ ೩ ಕಾದಂಬರಿಗಳ ಲೋಕಾರ್ಪಣೆ ಡಾ|| ವಿಕ್ರಮ್ ಸಂಪತ್ ಅವರಿಂದಉಪಸ್ಥಿತಿ: ಎಲ್.ವಿ. ಶಾಂತಕುಮಾರಿ &...

24/05/2024

ಕೊನೆಯ ದಿನ ಸಮೀಪಿಸುತ್ತಿದೆ. ಆಸಕ್ತರು ತ್ವರೆ ಮಾಡಿ !

ವಿಕ್ರಮ್ ಸಂಪತ್ ಅವರ ಮತ್ತೊಂದು ಕೃತಿ ಕನ್ನಡಕ್ಕೆ ಬರುತ್ತಿದೆ: ಇದೇ 26 ನೇ ತಾರೀಕು ಭಾನುವಾರ ಬೆಳಗ್ಗೆ 10.30 ಕ್ಕೆ ಎಸ್ ಎಲ್ ಭೈರಪ್ಪನವರೇ ಲೋಕಾರ್ಪಣ ಮಾಡುತ್ತಾರೆ. ಇಂಗ್ಲಿಷ್ ನಲ್ಲಿ ಪ್ರಚಂಡ ಮಾರಾಟ ಕಂಡಿರುವ Bravehearts of Bharat ಇದರ ಅನುವಾದ ಮಾಡಿದವರು ಕನ್ನಡದ ಹಿರಿಯ ಲೇಖಕಿ - ಅನುವಾದಕಿ ಎಲ್ ವಿ ಶಾಂತಕುಮಾರಿ. ಅವರೂ ಅಲ್ಲಿ ಇರುತ್ತಾರೆ. “ಭಾರತದ ಧೀರ ಚೇತನಗಳು”. ಭೈರಪ್ಪನವರ ಬೆನ್ನುಡಿ ನೋಡಿ:
ವಿಕ್ರಮ್ ಸಂಪತ್ ಅವರು ಬರೆಯುವ ಇತಿಹಾಸಕ್ಕೆ ಸಂಬಂಧಿಸಿದ ಯಾವುದೇ ಲೇಖನಗಳಾದರೂ ತುಂಬ ಯೋಗ್ಯತೆಯುಳ್ಳದ್ದೂ ನಂಬಿಕೆಗೆ ಅಹ೯ವಾದುದೂ ಆಗಿರುತ್ತವೆ. ಅವರು ತುಂಬ ಆಳವಾಗಿಯೂ ವ್ಯಾಪಕವಾಗಿಯೂ ಅಧ್ಯಯನ ಮಾಡದೇ ತಿಳಿದುಕೊಳ್ಳದೇ ಏನನ್ನೂ ಬರೆಯುವುದಿಲ್ಲ. ಅವರ ಅಧ್ಯಯನ ಮತ್ತು ಅಧ್ಯಯನ ಸಾಮಗ್ರಿಗಳ ಸಂಗ್ರಹಗಳೇ ತುಂಬ ಪರಿಶ್ರಮದಾಯಕವಾದುದು. ಇತಿಹಾಸಕ್ಕೆ ಸಂಬಂಧಪಟ್ಟ ಸಂಗತಿಯನ್ನೋ ವ್ಯಕ್ತಿಯನ್ನೋ ಕುರಿತು ಅವರು ಸಾಕಷ್ಟು ಆಧಾರಗಳಿಲ್ಲದೇ ಬರೆಯುವುದಿಲ್ಲ. ಸತ್ಯವೇ ಅವರ ಬರಹದ ಜೀವಾಳ. ಶೈಲಿಯೂ ಅಷ್ಟೇ ಮೊನಚಾಗಿರುತ್ತದೆ. ಇತಿಹಾಸವಾದರೂ ಕತೆಕಾದಂಬರಿಯಂತೆ ಓದಿಸಿಕೊಳ್ಳುತ್ತದೆ.
ನಮ್ಮ ದೇಶದ ಸ್ವಾತಂತ್ರ್ಯಾನಂತರದ ರಾಜಕಾರಣದ ದುರುದ್ದೇಶಗಳಿಂದಾಗಿ, ದೇಶಕ್ಕೆ ದಾಳಿಯಿಟ್ಟು, ಕ್ರೌರ್ಯ - ಲೂಟಿ- ಮತಾಂತರಗಳೇ ಅವರ ಆಡಳಿತದ ನೀತಿಯನ್ನಾಗಿಸಿಕೊಂಡು ನಮ್ಮ ಸನಾತನ ದೇಶದ ಸಂಸ್ಕೃತಿಯನ್ನು ಹಾಳುಮಾಡಿದವರನ್ನೇ ವೈಭವೀಕರಿಸಲಾಯಿತು. ದೇಶಕ್ಕಾಗಿ ಸಮಾಜಕ್ಕಾಗಿ ಆತ್ಮಗೌರವಕ್ಕಾಗಿ ಅಂತಹ ದಾಳಿಕೋರರೊಂದಿಗೆ ಹೋರಾಡಿದ ನಮ್ಮ ವೀರರನ್ನು ನಮ್ಮ ಮಕ್ಕಳಿಂದಲೂ ಓದುಗರಿಂದಲೂ ದೂರವೇ ಇರಿಸಲಾಯಿತು. ವಿಕ್ರಮ್ ಸಂಪತ್ ಮತ್ತು ಇಂತಹ ಹೊಸ ತಲೆಮಾರಿನ ಸ್ವತಂತ್ರ ಮನೋಭಾವದ ಅಧ್ಯಯನಶೀಲರ ಬರಹಗಳಿಂದಾಗಿ ವಿಸ್ಮೃತಿಗೊಳಗಾಗಿದ್ದ ಅಂತಹ ವೀರರೂ ಸತ್ಯಸಂಗತಿಗಳೂ ನಮ್ಮ ತಿಳಿವಳಿಕೆಗೆ ಎಟುಕುತ್ತಿರುವುದು ನಿಜಕ್ಕೂ ಸಂತೋಷದ ವಿಷಯ.
- ಎಸ್ ಎಲ್ ಭೈರಪ್ಪ

ಕಾರ್ಯಕ್ರಮದ ವಿಶೇಷವೆಂದರೆ, ಈ ಸಲ ವಿಕ್ರಮ್ ಅವರೊಂದಿಗೆ ಸಂವಾದವೂ ಇರುತ್ತದೆ. ಊಟದ ಯೋಚನೆಬಿಟ್ಟು ಬನ್ನಿ ಅವತ್ತು. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿಪಿ ವಾಡಿಯಾ ರಸ್ತೆ, ಬಸವನಗುಡಿ, ಬೆಂಗಳೂರು.

ಪುಸ್ತಕದ ಬೆಲೆ 450/-
25 ನೇ ತಾರೀಕಿನವರೆಗೂ ಬುಕ್ ಮಾಡುವವರಿಗೆ ರಿಯಾಯ್ತಿ. 375/- ಮಾತ್ರ. ಹಣವನ್ನು 9448110034 (subbu/Subramanya) ನಂಬರಿಗೆ ಫೋನ್ ಪೇ/ ಗೂಗಲ್ ಪೇ ಮಾಡಿ ವಿಳಾಸವನ್ನು ಅದೇ ನಂಬರಿಗೆ ವಾಟ್ಸಾಪ್ ಮಾಡಿದರೆ ಸಾಕು. 27 ನೇ ತಾರೀಕು ರವಾನೆಯಾಗಲಿರುವ ಪುಸ್ತಕಕ್ಕೆ ಅಂಚೆವೆಚ್ಚವೂ ಉಚಿತ. ಅಂದಹಾಗೆ: ಆ ಪುಸ್ತಕದಲ್ಲಿ ವಿಕ್ರಮ್ ಸಂಪತ್ ಅವರ ಹಸ್ತಾಕ್ಷರ ಕೂಡ ಇರುತ್ತದೆ.
ನಮ್ಮ ವೆಬ್ ಸ್ಟೋರಿನಲ್ಲೂ ಬುಕ್ ಮಾಡಬಹುದು. ಲಿಂಕ್: https://sahityaprakashan.com/product/bh/

24/05/2024
27/02/2024

ಸಾಹಿತ್ಯ ಪ್ರಕಾಶನದ ಇತ್ತೀಚಿನ ಒಂದು ತುಂಬ ಮಹತ್ವದ ಪ್ರಕಟನೆ. ಇಂಗ್ಲಿಷ್ ಲೇಖಕರಾಗಿ, ಇತಿಹಾಸಕಾರರಾಗಿ ತುಂಬ ಖ್ಯಾತಿ ಪಡೆದವರೂ ಭೈರಪ್ಪ , ಶತಾವಧಾನಿ ಆರ್ ಗಣೇಶ, ಎಸ್ ಆರ್ ರಾಮಸ್ವಾಮಿ ಮುಂತಾಗಿ ಖ್ಯಾತನಾಮರ ಮೆಚ್ಚಿಕೆಯನ್ನು ಪಡೆದಂಥ - ಸಂದೀಪ್ ಬಾಲಕೃಷ್ಣ ಅವರ ಲೇಖನಿಯ ಐತಿಹಾಸಿಕ ಕಾದಂಬರಿಯಿದು. ಸೊಗಸಾದ ಕನ್ನಡದಲ್ಲಿ ಬರೆದ ಅವರ ಮೊದಲ ಕೃತಿಯಿದು. ಮೊಘಲರ ಕಾಲದ ಭಾರತದ ಚಿತ್ರಣ, ಸಾಮಾಜಿಕ ತಲ್ಲಣ, ಆಡಳಿತ- ದುರಾಡಳಿತ, ಅವರ ಸ್ವೇಚ್ಛಾಚಾರ, ಅಂತಃಪುರದ ಹಾದರಗಳು, ಯಾವುದರ ಸನ್ನಿವೇಶ, ಚಿತ್ರಣಗಳನ್ನೇ ಆಗಲಿ, ಕಟೆದು ನಿಲ್ಲಿಸಿದ ಈ ಪರಿ ಹಾಗೆ ಸುಲಭಕ್ಕೆ ಸಿದ್ಧಿಸುವಂಥದಲ್ಲ. ಅಧ್ಯಯನ, ತಪಸ್ಸು, ಕ್ಷೇತ್ರ ಸಂಚಾರಗಳಿದ್ದವರಿಗೆ ಮಾತ್ರ ಸಾಧಿಸುವಂಥದು. ತುಂಬ ಸೊಗಸಾದ ಮನತಟ್ಟುವಂಥ , ಬಹುಕಾಲ ಮನಸ್ಸಿನಲ್ಲಿ ತಾಕಲಾಟವುಂಟುಮಾಡುವಂಥ ಕಥಾನಕವದು. ನೀವು ಖಂಡಿತವಾಗಿ ಓದಬೇಕಾದಂಥ ಕಾದಂಬರಿಯೀ “ದೂತವಾಕ್ಯ”!
ಓದಿದ ಅಷ್ಟಾವಧಾನಿ ಗಣೇಶಭಟ್ಟ ಕೊಪ್ಪಲತೋಟ ಅವರು ಸಂದೀಪರಿಗೆ ಬರೆದ ಒಕ್ಕಣೆ ನೋಡಿ:

ನಮಸ್ಕಾರ ಸಂದೀಪ್,
ನಿಮ್ಮ ದೂತವಾಕ್ಯ ಕಾದಂಬರಿ ಓದಿದೆ. ಚೆನ್ನಾಗಿ ಮೂಡಿ ಬಂದಿದೆ. ಜಹಾಂಗೀರನ ಕಾಲದ ಭಾರತ, ಅದರಲ್ಲಿ ಅವನ ಆಡಳಿತ, ಅದರಲ್ಲಿ ಅವನ ವೈಫಲ್ಯ, ಒಳಗಿನ ರಾಜಕೀಯ, ಇವೆಲ್ಲ ಬಹಳ ಚೆನ್ನಾಗಿ ಮೂಡಿ ಬಂದಿವೆ.
ನನಗೆ ಆರಂಭದಲ್ಲಿ ಉರ್ದು ಶಬ್ದಗಳು ಸ್ವಲ್ಪ ನಿಧಾನವಾಗಿ ಓದುವಂತಾದರೂ ಜೊತೆಗೇ ಬಂದ ಕನ್ನಡ ಶಬ್ದಗಳು ಎಲ್ಲೂ ಗೊಂದಲ ಉಂಟು ಮಾಡಲಿಲ್ಲ.

ಹೇಗೆ ಸನಾತನ ಧರ್ಮದ ರಾಜರು ನಡೆದುಕೊಳ್ಳುತ್ತಾರೆ- ಹೇಗೆ ಸಮಾಜದಲ್ಲಿ ನಮ್ಮ ರಾಜರಿಗೆ ಬೇಕಾದದ್ದು ಶಾಂತಿ ಸುವ್ಯವಸ್ಥೆ - ಹಾಗೂ ಮುಸ್ಲಿಂ ರಾಜರಿಗೆ ಬೇಕಾದದ್ದು ಭೋಗ, ಲಂಪಟತೆ ಎಂದೂ, ಈ ಮೂಲಕ ಸಮಾಜದಲ್ಲಿ ಹೇಗೆ ಅವರ ಆಡಳಿತ ಇರುತ್ತದೆ ಎಂದೆಲ್ಲ ಸ್ಪಷ್ಟವಾಗಿ ಚಿತ್ರಿಸಿದ್ದೀರಾ.. ಹಾಗಾಗಿ ಮೊಘಲರ glorified ಇತಿಹಾಸವನ್ನೇ ಎಲ್ಲಾ ಕಡೆ ಓದಿ ಓದಿ ಬೇಸರವಾಗಿದ್ದದ್ದು ಈ ಕಾದಂಬರಿಯಲ್ಲಿ ನಿವಾರಣೆ ಆದಂತಾಯ್ತು.

ಮತ್ತೆ ನೆನಪಿಸಲು 👇
15/02/2024

ಮತ್ತೆ ನೆನಪಿಸಲು 👇

Address

Koppikar Road
Hubli
580028

Telephone

+918362367676

Website

Alerts

Be the first to know and let us send you an email when Sahitya Prakashana posts news and promotions. Your email address will not be used for any other purpose, and you can unsubscribe at any time.

Shortcuts

Share