08/03/2025
ತಮಗೆಲ್ಲರಿಗೂ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಶಯಗಳು,
ಅವಳಿಲ್ಲದಿದ್ದರೆ ಜೀವನವೊಂದು ಖಾಲಿ ಹಾಳೆ,
ಅವಳಿಂದಲೇ ಸುಂದರವು ನಮ್ಮಯ ಬಾಳೆ,
ಅವಳೊಮ್ಮೆ ಮುನಿಸಿಕೊಂಡರೆ ಬೀದಿ ಊಟವೇ ದಿನದ ಕೂಳೆ,
ಅವಳೆಂದೂ ಹೊಂದುವುದಿಲ್ಲ ಮನಸಿನಲಿ ಕೊಳೆ,
ಅವಳ ಬಗ್ಗೆ ಅಗೌರವ ಹೊಂದಿದ್ದರೆ ಓ ಮನುಜ ಅದನಿಂದೇ ತೊಳೆ,
ಗೌರವಿಸಿದ್ದಾದರೆ ನಿನ್ನ ಬಾಳಲ್ಲಿ ಸುರಿಯುವುದು ದಿನವೂ ಸಂತಸದ ಮಳೆ,
ನಾ ವರ್ಣಿಸುತ್ತಿರುವುದು ಯಾರನ್ನೆಂದು ತಿಳಿದಿರುವಿ ಓ ಮರುಳೇ, ಬ್ರಹ್ಮಾಂಡದಲೇ ವರ್ಣನೆಗೆ ಸಿಗಲಾರದ ಏಕೈಕ ಜೀವಿಯೇ ಈ ಮಹಿಳೆ.
ರಚನೆ : ಶ್ರೀ ಹುಸೇನಪ್ಪ ಬಳ್ಳಾರಿ