26/01/2022
ಅದರಗುಂಚಿಯ ಸಿ ಅಯ್ ಸಿ ಗ್ರಾಮೀಣ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ವಿಜೃಂಭಣೆಯ ಗಣರಾಜ್ಯೋತ್ಸವ
73 ನೇಯ ಗಣರಾಜ್ಯೋತ್ಸವದ ಅಂಗವಾಗಿ ಅದರಗುಂಚಿಯ ಸಿ ಅಯ್ ಸಿ ಗ್ರಾಮೀಣ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ವಿವಿಧ ವಿಭಾಗಗಳ ಸಮ್ಮುಖದಲ್ಲಿ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಲಾಯಿತು. ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ, ಕರ್ನಾಟಕ ಸರಕಾರ, ಬೆಂಗಳೂರು ಇವರ ಅಧ್ಯಕ್ಷರೂ ಹಾಗೂ ಸಿ ಅಯ್ ಸಿ ಗ್ರಾಮೀಣ ಶಿಕ್ಷಣ ಸಂಸ್ಥೆಯ ಅಧ್ಯಕ್ಷರೂ ಆದ ಶ್ರೀ ಎಸ್ ಅಯ್ ಚಿಕ್ಕನಗೌಡ್ರ ಇವರು ಧ್ವಜಾರೋಹಣ ನೆರವೇರಿಸಿದರು. ನಂತರ ರಾಷ್ಟ್ರ ಗೀತೆಯನ್ನು ಹಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಿ ಅಯ್ ಸಿ ಗ್ರಾಮೀಣ ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಆರ್ ಎಫ್ ಭರಮಗೌಡ್ರ ಅವರು ಅಧ್ಯಕ್ಷರನ್ನು, ಮುಖ್ಯ ಅತಿಥಿಗಳನ್ನು ಪುಷ್ಪ ಗುಚ್ಛ ನೀಡುವುದರ ಮೂಲಕ ಸ್ವಾಗತ ಕೋರಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪದವಿ ವಿಭಾಗ, ಪದವಿ ಪೂರ್ವ ವಿಭಾಗ, ಆಂಗ್ಲ ಮಾಧ್ಯಮ ಶಾಲೆ ಹಾಗೂ ಸ್ನಾತಕೋತ್ತರ ಪದವಿ ವಿಭಾಗ ಹೀಗೆ ವಿವಿಧ ವಿಭಾಗಗಳ ವಿದ್ಯಾರ್ಥಿ ವಿದ್ಯಾರ್ಥಿನೀಯರು ಭಾಷಣ ಮಾಡಿದರು. ಹಾಗೂ ದೇಶ ಭಕ್ತಿ ಗೀತೆಗಳನ್ನು ಹಾಡಿದರು. ಚಿಕ್ಕ ಮಕ್ಕಳು ಸ್ವಾತಂತ್ರ್ಯ ಹೋರಾಟಗಾರರ ಉಡುಪುಗಳನ್ನು ತೊಟ್ಟು ರಂಜಿಸಿದರು. ಧ್ವಜಾರೋಹಣವನ್ನು ಮಾಡಿ ಮಾತನಾಡಿದ ಶ್ರೀ ಎಸ್ ಅಯ್ ಚಿಕ್ಕನಗೌಡ್ರ ಅವರು ಮಾತನಾಡುತ್ತ ಒಂದು ದೇಶ ಸುಭದ್ರವಾಗಿ ಸಾಗಬೇಕಾದರೆ ಪ್ರಜೆಗಳ ಕರ್ತವ್ಯ ಏನು ಎಂಭುವದನ್ನು ತಿಳಿಸಿಕೊಟ್ಟರು
ಈ ಒಂದು ಕಾರ್ಯಕ್ರಮದಲ್ಲಿ ಶ್ರೀ ಜಿ ವಿ ಕಳ್ಳಿಮನಿ, ಖಜಾಂಚಿ, ಸಿ ಅಯ್ ಸಿ ಗ್ರಾಮೀಣ ಶಿಕ್ಷಣ ಸಂಸ್ಥೆ ಹಾಗೂ ಧಾರವಾಡದ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರು, ಶ್ರೀ ಎಮ್ ವಿ ಕಳ್ಳಿಮನಿ, ಅಧ್ಯಕ್ಷರು ಗ್ರಾಮ ಪಂಚಾಯತಿ, ಅದರಗುಂಚಿ, ಶ್ರೀಮತಿ ಬಸಮ್ಮ ಮಾಳಗಿ ಉಪಾಧ್ಯಕ್ಷರು, ಗ್ರಾಮ ಪಂಚಾಯತಿ, ಅದರಗುಂಚಿ, ಶ್ರೀ ಎಸ್ ಎಮ್ ಕಳಸೂರ, ಸಿಬ್ಬಂದಿ ಕಾರ್ಯದರ್ಶಿಗಳು, ಸಿ ಅಯ್ ಸಿ ಗ್ರಾಮೀಣ ಶಿಕ್ಷಣ ಸಂಸ್ಥೆ, ಶ್ರೀಮತಿ ಎಸ್ ಅಯ್ ಉಣಕಲ್ಲ, ಪ್ರಾಚಾರ್ಯರು, ಸಿ ಅಯ್ ಸಿ ಪದವಿ ಮಹಾ ವಿದ್ಯಾಲಯ, ಶ್ರೀ ಎಸ್ ಬಿ ತಮ್ಮಣ್ಣವರ, ಪ್ರಾಚಾರ್ಯರು,, ಸಿ ಅಯ್ ಸಿ ಪದವಿ ಪೂರ್ವ ಮಹಾವಿದ್ಯಾಲಯ, ಶ್ರೀಮತಿ ಎಮ್ ಆರ್ ಕಮ್ಮಾರ, ಮುಖೋಪಾದ್ಯಾಯನೀಯರು, ಸಿ ಅಯ್ ಸಿ ಆಂಗ್ಲ ಮಾಧ್ಯಮ ಶಾಲೆ ಹಾಗೂ ಸ್ನಾತಕೋತ್ತರ ಪದವಿ ವಿಭಾಗದ ಮುಖ್ಯಸ್ಥರು ಶ್ರೀಮತಿ ಆರ್ ಪ್ರಾನ್ಸಿಸ್ ಉಪಸ್ಥಿತರಿದ್ದರು.
ವಿವಿಧ ವಿಭಾಗಗಳ ಸಮಸ್ತ ಶಿಕ್ಷಕ ವೃಂದ, ಶಿಕ್ಷಕೇತರ ಸಿಬ್ಬಂದಿ ವರ್ಗದವರು ಹಾಗೂ ವಿವಿಧ ವಿಭಾಗಗಳ ಎಲ್ಲ ವಿದ್ಯಾರ್ಥಿ ವಿದ್ಯಾರ್ಥಿನೀಯರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮವನ್ನು ಪದವಿ ಪೂರ್ವ ವಿಭಾಗದವರು ನಡೆಸಿಕೊಟ್ಟರು ಒಂದನಾರ್ಪಣೆಯನ್ನು ಕನ್ನಡ ಉಪನ್ಯಾಸಕೀಯರಾದ ಶ್ರೀಮತಿ ಪುಷ್ಪ ಪಾಟೀಲ ಅವರು ಹಾಗೂ ನಿರೂಪಣೆಯನ್ನು ಆಂಗ್ಲ ಉಪನ್ಯಾಸಕರಾದ ಶ್ರೀ ಜಿ ಎಸ್ ಹಿರೇಮಠ ಅವರು ನೆರವೇರಿಸಿಕೊಟ್ಟರು