Creative Computer Education Centre

Creative Computer Education Centre Computer Courses, Spoken English, Banking, Retailing Classes and Soft skill Trainings offered...

Creative Computer Education Centre is founded to provide IT education, Spoken English and Soft skill training to the people, especially to the Rural Students, so that they can enhance their knowledge and develop their personality which makes them capable of competing with the urban students.

19/04/2017

🌹✍🌹
🍃 *ಪ್ರಪಂಚವು ಬಹಳಷ್ಟು ವಿಶಾಲವಾಗಿದೆ.* *ಒತ್ತಾಯವಾಗಿ ಯಾರಾ* *ಜೊತೆಯೂ ಬದುಕುವ ಪ್ರಯತ್ನ* *ಮಾಡಬೇಡಿರಿ. ನಿಮ್ಮನ್ನು*
*ಗೌರವಿಸುವವರು ನಿಮ್ಮನ್ನೇ ಹುಡುಕಿಕೂಂಡು* *ಬರುತ್ತಾರೆ*.
🙏 *ಮುಂಜಾನೆಯ ನಮಸ್ಕಾರ* 🙏
✍🌹✍

01/04/2017

ಅದುವೇ ಆತ್ಮವಿಶ್ವಾಸ!
ವ್ಯವಹಾರದಲ್ಲಿ ತುಂಬಲಾರದ ನಷ್ಟ ಕಂಡ ಬಿಜಿನೆಸ್‌ಮ್ಯಾನ್ ಒಬ್ಬ ಪಾರ್ಕಿನ ಕಲ್ಲುಬೆಂಚಿನ ಮೇಲೆ ಕುಳಿತಿದ್ದ. ಇನ್ನೇನು ಆಕಾಶವೇ ಕಳಚಿ ತಲೆಮೇಲೆ ಬೀಳುತ್ತದೆ ಎಂಬಂತಿತ್ತು ಅವನ ಮುಖ. ಸಾಲಗಾರರು ಬೆನ್ನ ಹಿಂದೆ ಬಿದ್ದಿದ್ದರು, ಪಾಲುದಾರರು ಹಣ ಕೇಳುತ್ತಿದ್ದರು, ಕೆಲಸಗಾರರಿಗೆ ಸಂಬಳ ಕೊಡಬೇಕಿತ್ತು….ಹೀಗೆ ಸಮಸ್ಯೆಗಳ ಸರಮಾಲೆ ಆತನ ಕುತ್ತಿಗೆಗೆ ಸುತ್ತಿಕೊಂಡಿತ್ತು. ಆಗ ಅಲ್ಲಿಗೆ ಮುದುಕನೊಬ್ಬ ಬಂದ. ಬಿಜಿನೆಸ್‌ಮ್ಯಾನ್‌ನ ಮುಖ ನೋಡಿದರೆ ಆತ ಕಷ್ಟದಲ್ಲಿದ್ದಾನೆಂದು ಯಾರು ಬೇಕಾದರೂ ಸುಲಭವಾಗಿ ಹೇಳಬಹುದಿತ್ತು. ‘ಏನಪ್ಪಾ ನಿನ್ನ ಸಮಸ್ಯೆ?’ ಅಂತ ಮುದುಕ ನೇರವಾಗಿ ವಿಷಯಕ್ಕೆ ಬಂದ. ಈತ ತನ್ನೆಲ್ಲ ಕಷ್ಟಗಳನ್ನು ಹೇಳಿಕೊಂಡ. ಸಾಯುವುದೊಂದೇ ಈಗ ಕಾಣಿಸುತ್ತಿರುವ ದಾರಿಯೆಂದು ಹೇಳಿ ಕಣ್ಣೀರಾದ.

ಆಗ ಮುದುಕ ‘ನಾನು ನಿನಗೆ ಸಹಾಯ ಮಾಡುತ್ತೇನೆ. ಯೋಚಿಸಬೇಡ’ ಎಂದು ಹೇಳಿ ಈತನ ಹೆಸರಿನಲ್ಲಿ ಚೆಕ್ ಒಂದನ್ನು ಬರೆದುಕೊಟ್ಟ. ‘ಈ ಹಣ ತೆಗೆದುಕೋ. ನಿನ್ನ ಆರ್ಥಿಕ ಸಮಸ್ಯೆಗಳನ್ನೆಲ್ಲ ಮೊದಲು ಬಗೆ ಹರಿಸಿಕೋ. ಒಂದು ವರ್ಷದ ನಂತರ ಇದೇ ದಿನ, ಇದೇ ಜಾಗಕ್ಕೆ ಬಾ. ಆಗ ನನಗೆ ಹಣ ವಾಪಸ್ ಮಾಡು. ಒಂದು ವರ್ಷ ಸಮಯವಿದೆ, ಬೇಕಾದಷ್ಟು ಹಣವಿದೆ. ನೋಡು ಏನು ಮಾಡ್ತೀಯ’ ಅಂತ ಹೇಳಿ ಬೆನ್ನು ತಿರುಗಿಸಿ ಹೊರಟೇ ಬಿಟ್ಟ!

ಬಿಜಿನೆಸ್‌ಮ್ಯಾನ್ ಚೆಕ್ ತೆಗೆದು ನೋಡಿ ಅವಾಕ್ಕಾದ. 5,00,000 ಡಾಲರ್‌ನ ಚೆಕ್‌ನ ಕೊನೆಗೆ ಅತ್ಯಂತ ಶ್ರೀಮಂತನಾಗಿದ್ದ ಜಾನ್ ಡಿ ರಾಕ್ಫೆಲ್ಲರ್‌ನ ಸಹಿ ಇತ್ತು! ಅರೇ, ಅವರನ್ನು ನಾನು ಗುರುತಿಸಲೇ ಇಲ್ಲವಲ್ಲ ಎಂದು ಬಿಜಿನೆಸ್‌ಮ್ಯಾನ್ ಕೈ ಕೈ ಹಿಸುಕಿಕೊಂಡ. ನನ್ನೆಲ್ಲ ಕಷ್ಟಗಳು ಒಂದೇ ಕ್ಷಣದಲ್ಲಿ ನಿವಾರಣೆಯಾದವೆಂದು ಹಿಗ್ಗಿದ. ಆದರೂ ಆ ಚೆಕ್‌ಅನ್ನು ನಗದು ಮಾಡಿಸಿಕೊಳ್ಳಬಾರದೆಂದು ನಿರ್ಧರಿಸಿದ. ಅಷ್ಟೊಂದು ದೊಡ್ಡ ಚೆಕ್ ಇದೆ ಎಂಬುದೇ ಆತನಿಗೆ ಬೆಟ್ಟದಷ್ಟು ಆತ್ಮವಿಶ್ವಾಸ ನೀಡಿತ್ತು. ಆತ ಹೊಸ ಹುರುಪಿನೊಂದಿಗೆ ವ್ಯವಹಾರ ಶುರುಮಾಡಿದ. ಹೊಸ ಸಾಲಗಳನ್ನು ಮಾಡಿ, ಹಳೆಯ ಬಾಕಿಗಳನ್ನು ತೀರಿಸಿದ. ಕೆಲವೊಂದಿಷ್ಟು ಮಹತ್ವದ ನಿರ್ಧಾರಗಳ ಮೂಲಕ ವ್ಯವಹಾರವನ್ನು ಹಂತ ಹಂತವಾಗಿ ಮೇಲಕ್ಕೆ ತಂದ. ಮೂರು-ನಾಲ್ಕು ತಿಂಗಳುಗಳಲ್ಲಿ ಆತ ಸಾಲದ ಹೊರೆಯಿಂದ ಮುಕ್ತನಾದ. ವ್ಯವಹಾರ ಸುಗಮವಾಗಿ ನಡೆಯತೊಡಗಿತು.

ಕೊಟ್ಟ ಮಾತಿನಂತೆ ಸರಿಯಾಗಿ ಒಂದು ವರ್ಷದ ಬಳಿಕ ಬಿಜಿನೆಸ್‌ಮ್ಯಾನ್ ಅದೇ ಪಾರ್ಕ್‌ಗೆ ಹೋದ. ಕೈಯಲ್ಲಿ ನಗದು ಮಾಡಿಸಿಕೊಳ್ಳದ ಚೆಕ್ ಇತ್ತು. ಹೇಳಿದ ಸಮಯಕ್ಕೆ ಆ ಶ್ರೀಮಂತ ಮುದುಕನೂ ಬಂದ. ಇನ್ನೇನು ಚೆಕ್ ವಾಪಸ್ ಮಾಡಿ, ತನ್ನ ಯಶಸ್ಸಿನ ಕಥೆ ಹೇಳಬೇಕೆನ್ನುವಷ್ಟರಲ್ಲಿ ಹಿಂದಿನಿಂದ ನರ್ಸ್ ಒಬ್ಬಳು ಓಡಿ ಬರುತ್ತಿರುವುದು ಕಾಣಿಸಿತು. ಆಕೆ ಏದುಸಿರು ಬಿಡುತ್ತಾ ಓಡಿ ಬಂದು ಮುದುಕನನ್ನು ಗಟ್ಟಿಯಾಗಿ ಹಿಡಿದುಕೊಂಡಳು. ‘ಅಬ್ಬಾ ದೇವರೇ ಕೊನೆಗೂ ಈತನನ್ನು ಹಿಡಿದುಬಿಟ್ಟೆ!’ ಎಂದು ಜೋರಾಗಿ ಉಸಿರಾಡುತ್ತಾ ಉದ್ಘರಿಸಿದಳು. ‘ನಿಮಗೆ ಈತ ಏನೂ ತೊಂದರೆ ಕೊಟ್ಟಿಲ್ಲ ಎಂದು ಭಾವಿಸಿದ್ದೇನೆ. ಅಯ್ಯೋ ಈತನೊಬ್ಬ ಹುಚ್ಚು ಮುದುಕ. ಪದೇ ಪದೆ ಆಸ್ಪತ್ರೆಯಿಂದ ತಪ್ಪಿಸಿಕೊಂಡು ಹೋಗುವ ಚಟ. ತನ್ನನ್ನು ತಾನು ಜಾನ್ ಡಿ. ರಾಕ್ಫೆಲ್ಲರ್ ಅಂತ ಕಂಡವರಿಗೆಲ್ಲ ಪರಿಚಯಿಸಿಕೊಳ್ಳುತ್ತಾನೆ. ಅದನ್ನು ಹೌದು ಎಂದು ನಂಬುವ ಹುಚ್ಚರೂ ಇದ್ದಾರೆ’ ಎಂದು ಹೇಳಿ ಮುದುಕನನ್ನು ಎಳೆದು ಕರೆದುಕೊಂಡು ಹೋದಳು.

ಈ ಬಿಜಿನೆಸ್‌ಮ್ಯಾನ್ ತನ್ನ ಮುಂದೆ ನಡೆದಿದ್ದು ಕನಸೋ, ನಿಜವೋ ಎಂದು ತಿಳಿಯದೆ ಬೆಪ್ಪನಂತೆ ನಿಂತಿದ್ದ. ಒಂದಿಡೀ ವರ್ಷ ಆತ ತನ್ನ ಬಳಿ ಅರ್ಧ ಮಿಲಿಯನ್ ಡಾಲರ್ ಹಣ ಇದೆ ಎಂದು ಭ್ರಮಿಸಿ ವ್ಯಾಪಾರ- ವ್ಯವಹಾರವನ್ನು ವಿಸ್ತರಿಸುತ್ತಾ, ಸಾಲ ಮಾಡಿ, ಸಾಲ ತೀರಿಸುತ್ತಾ ಹೋದ. ಆದರೀಗ ಗೊತ್ತಾಗಿದ್ದೇನೆಂದರೆ ಇವನ ಬಳಿ ಇದ್ದದ್ದು ಅರ್ಧ ಮಿಲಿಯನ್ ಡಾಲರ್ ಚೆಕ್ ಅಲ್ಲ, ಯಾವನೋ ಒಬ್ಬ ಹುಚ್ಚ ಕೊಟ್ಟಿದ್ದ ಕಾಗದದ ಚೂರು! ಹಾಗಾದರೆ ತನ್ನ ಕೈಯಲ್ಲಿ ಇನ್ನೇನೂ ಮಾಡಲು ಸಾಧ್ಯವಿಲ್ಲ ಅಂದುಕೊಂಡಿದ್ದವನಿಂದ ಅಭೂತಪೂರ್ವ ಕೆಲಸಗಳನ್ನು ಮಾಡಿಸಿದ ಆ ಶಕ್ತಿ ಯಾವುದು? ಅದುವೇ ಆತ್ಮವಿಶ್ವಾಸ! ಅದೊಂದು ನಿಮ್ಮ ಜತೆಯಿದ್ದರೆ ಎಂಥ ಅಸಾಧ್ಯವನ್ನೂ ಸಾಧ್ಯಗೊಳಿಸಬಹುದು.
ಕೃಪೆ: ವಿಶ್ವವಾಣಿ

01/04/2017

🎞🌸🌸🌸🌸🌸🌸🌸🌸🌸🎞

🦋 *ಮಾಹಿತಿ ವೇದಿಕೆ* 🦋

*ಭಾರತದ_ಸಂವಿಧಾನದ_ಕೆಲವು_ಕಲಂಗಳು*
★★★★★★★★★

* 341 to 342 –ಪರಿಶಿಷ್ಟ ಜಾತಿ ಮತ್ತು ಪಂಗಡ*

* 45 -ಸಾರ್ವತ್ರಿಕ ಶಿಕ್ಷಣ*

* 51 –ಅಂತರಾಷ್ಟ್ರೀಯ ಶಾಂತಿ ಮತ್ತುಭದ್ರತೆ ಹೆಚ್ಚಿಸುವುದು*

* 368- ಸಂವಿದಾನದ ತಿದ್ದುಪಡಿ*

* 366- ಆಂಗ್ಲೋ ಇಂಡಿಯನ್ ಬಗ್ಗೆವ್ಯಾಖ್ಯಾಯನ*

* 222- ಸರ್ವೋಚ್ಚ ನ್ಯಾಯಾಲಯದನ್ಯಾಯಾಧೀಶರ ವರ್ಗಾವಣೆ*
★★★★★★★★★★★★★★

* - ಹಣಕಾಸು ಆಯೋಗದ ರಚನೆ*

* 155 –ರಾಜ್ಯಪಾಲರ ನೇಮಕ*

* -352- ರಾಷ್ಟ್ರೀಯ ತುರ್ತು ಪರಿಸ್ಥಿತಿ*

* 356-ರಾಜ್ಯ ತುರ್ತು ಪರಿಸ್ಥಿತಿ*

* 360- ಹಣಕಾಸಿನ ತುರ್ತು ಪರಿಸ್ಥಿತಿ*
★★★★★★★★★★★★

* 36 to 51- ರಾಜ್ಯ ನಿರ್ದೇಶಕ ತತ್ವಗಳು*

* 169- ರಾಜ್ಯ ವಿದಾನ ಪರಿಷತ್ತುರದ್ದುಗೊಳಿಸುವ ಅಧಿಕಾರ ಸಂಸತ್ತಿಗಿದೆ*

* -53- ರಾಷ್ಟ್ರಪತಿಯವರಿಗೆ ಕೇಂದ್ರಕಾರ್ಯಾಂಗ ಅದಿಕಾರ*

* -143- ಸುಪ್ರಿಮ್ ಕೋರ್ಟ್ ಗೆ ಸಲಹಾಧಿಕಾರ*

* - ಆಂಗ್ಲ ಭಾಷೆಗೆ ರಾಜಕೀಯ ಹಾಗೂಕಾನೂನು ಪಟ್ಟ ದೊರೆತದ್ದು*
★★★★★★★★★★★★

* 49- ರಾಷ್ಟ್ರೀಯ ಸ್ಮಾರಕಗಳ ರಕ್ಷಣೆ*

* -79- ಸಂಸತ್ತೆಂದರೆ ರಾಜ್ಯ ಸಭೆ ,ಲೊಕಸಭೆ,ರಾಷ್ಟ್ರಪತಿ*

* 103-ರಾಷ್ಟ್ರಪತಿ ಅಧಿಕಾರ ಮತ್ತು ಕಾರ್ಯಗಳಬಗ್ಗೆ*

* 36- ರಾಜ್ಯ ಎಂಬ ಅರ್ಥ ಕೊಡುವ ಕಲಮ್*

* -51-ಅಂತರಾಷ್ಟ್ರೀಯ ಶಾಂತಿ ಮತ್ತುಭದ್ರತೆ ಹೆಚ್ಚಿಸುವ ಕಲಮ್*
★★★★★★★★★★★★★★

* - 78-ರಾಷ್ಟ್ರಪತಿ ಮತ್ತು ಪ್ರದಾನಮಂತ್ರಿಯವರ ಸಂಬಂದದ ಕುರಿತು*

* to 300- ಕೇಂದ್ರ ರಾಜ್ಯಗಳ ಸಂಬಂದ*

* 243-ಪಂಚಾಯತ್ ರಾಜ್ಯಗಳ ಬಗ್ಗೆ*

* 315 to 323-ಲೋಕಸೇವಾ ಆಯೋಗ*

* 324-329- ಚುನಾವಣ ಆಯೋಗ*
★★★★★★★★★★★★

* 268 to 281- ಕೇಂದ್ರ ಮತ್ತು ರಾಜ್ಯಗಳಹಣಕಾಸು*

* 309-323 – ಸಾರ್ವಜನಿಕ ಸೇವೆ*

* -370- ಜಮ್ಮು ಕಾಶ್ಮೀರದ ಬಗ್ಗೆ*

* 51 (a)- ಮೂಲಭೂತ ಕರ್ತವ್ಯ*

* 54/55- ರಾಷ್ಟ್ರಪತಿ ಚುನಾವಣೆ*
★★★★★★★★★★★★★★

* 61- ರಾಷ್ಟ್ರಪತಿ ಪದಚ್ಯುತಿ*

* 274- ರಾಷ್ಟ್ರಪತಿ ಅನುಮತಿ ಇಲ್ಲದೆ ತೆರಿಗೆ ಇನ್ನಿತರಮಸೂದೆಯನ್ನು ಪಾರ್ಲಿಮೆಂಟಿನಲ್ಲಿಮಂಡಿಸುವಂತಿಲ್ಲ*

* 72-ಕ್ಷಮಾದಾನ ನೀಡುವ ಅಧಿಕಾರರಾಷ್ಟ್ರಪತಿಗಿದೆ*

* 75- ಮಂತ್ರಿಗಳು ರಾಷ್ಟ್ರಪತಿಯವರ ವಿಶ್ವಾಸದಮೇರೆಗೆ ಅಧಿಕಾರದಲ್ಲಿರತಕ್ಕದು*

* 333- ರಾಜ್ಯಪಾಲರಿಗೆ ಆಂಗ್ಲೋಇಂಡಿಯನ್ನ್ ಸಮುದಾಯಕ್ಕೆ ಸೇರಿದ ಒಬ್ಬವ್ಯಕ್ತಿಯನ್ನು ವಿದಾನ ಸಬೆಗೆ ನಾಮಕರಣ ಮಾಡುವಾಧಿಕಾರ*
★★★★★★★★★★★★★★

* -164- ಮುಖ್ಯಮಂತ್ರಿಗಳ ನೇಮಕ*

* 171- ವಿದಾನ ಪರಿಷತ್ ರಚನೆ*

* 226-ರಿಟ್ ಜಾರಿ*

* 170- ವಿದಾನ ಸಭೆಯ ರಚನೆ*

* 123- ಸುಗ್ರೀವಾಜ್ನೆ*

🎞🎊🎊🎊🎊🎊🎊🎊🎊🎊🎞

16/03/2017

*ಬೆಳಕಾಗುತ್ತೆ ದಿನ ಇರುಳಾಗುತ್ತೆ ಇದು ಪ್ರಕೃತಿ ನಿಯಮ*
*ಬಾಳಿನಲ್ಲೂ ಸೋಲಿನ ಕಾರ್ಗತ್ತಲು ಕವಿಯುತ್ತೆ ನಂತರ ಯಶಸ್ಸಿನ ಬೆಳ್ಳಿ ಬೆಳಕಿನ ತೇಜಸ್ಸು ಕಂಡೇ ಕಾಣುತ್ತೆ*
*ಕಾಯುವಂತ ಸಂಯಮ ನಮ್ಮಲ್ಲಿರುವುದು ಅತ್ಯಗತ್ಯ*....
*💐🙏🏻ಶುಭೊದಯ🙏🏻*💐

16/03/2017

*🙏🏻💞🤗ಸುಪ್ರಭಾತ🤗💞🙏🏻*

*ಬದುಕೆಂಬ ಪಯಣದಲಿ ಅನೇಕ ಜನರು ಜೋತೆಯಾಗುತ್ತಾರೆ,ಕೆಲವರು ಪ್ರೀತಿಸುತ್ತಾರೆ,ಕೆಲವರು ಪರೀಕ್ಷೀಸುತ್ತಾರೆ,ಕೆಲವರು ಆಶೀವ೯ದಿಸುತ್ತಾರೆ.ಇನ್ನೂ ಕೆಲವರು ಬೆಂಬಲವಾಗಿ ನಿಲ್ಲುತ್ತಾರೆ.ಕೆಲವರು ಕಾರಣವಿಲ್ಲದೇ ಬಿಟ್ಟು ಹೋಗುತ್ತಾರೆ.ಆದರೆ ತಾಳ್ಮೆಯುತ ಬದುಕು ನಮ್ಮದ್ದಾಗಲಿ.ಯಾಕೆಂದರೆ ಇಲ್ಲಿ "ಕಾರಣವಿಲ್ಲದೇ ಯಾವ ಕಾರ್ಯವೂ ಸಾಗದು."*

*💐👏🏻🍀ಶುಭೋದಯ🍀👏🏻💐*

My bday lasted just for a day but the wishes u sent me are going to make me special for the rest of the year.. thanku lo...
04/03/2017

My bday lasted just for a day but the wishes u sent me are going to make me special for the rest of the year.. thanku love u all.

 # we solute u sir #
28/01/2017

# we solute u sir #

27/01/2017

👉ಪಿಡಿಒ👈

ಉತ್ತರಗಳೊಂದಿಗೆ✍

1) ಗ್ರಾಮೀಣ ವಿಕಾಸ ಯೋಜನೆಯು ಎಷ್ಟು ವರ್ಷದ ಯೋಜನೆಯಾಗಿದೆ?
A. 2 ವರ್ಷ
B. 3 ವರ್ಷ✅
C. 4 ವರ್ಷ
D. 5 ವರ್ಷ

2) ಗ್ರಾಮ ವಿಕಾಸ ಯೋಜನೆಯಲ್ಲಿ ಒಟ್ಟು ಒಂದು ವಿಧಾನ ಸಭಾ ಕ್ಷೇತ್ರದಿಂದ ಎಷ್ಟು ಗ್ರಾಮಗಳನ್ನು ಆಯ್ಕೆ ಮಾಡಲಾಗುತ್ತಿತ್ತು?

A. 6 ಗ್ರಾಮಗಳು
B. 4 ಗ್ರಾಮಗಳು
C. 5 ಗ್ರಾಮಗಳು✅
D. 7 ಗ್ರಾಮಗಳು

3) ಗ್ರಾಮ ವಿಕಾಸ ಯೋಜನೆಯನ್ನು ಈ ಕೆಳಗಿನ ಯಾವ ಕ್ಷೇತ್ರಗಳಿಗೆ ಜಾರಿಗೊಳಿಸಲಾಯಿತು?

A. ರಾಜ್ಯದ ಎಲ್ಲಾ 224 ವಿಧಾನ ಸಭಾ ಕ್ಷೇತ್ರಗಳಿಗೆ
B. ರಾಜ್ಯದ 189 ಗ್ರಾಮೀಣ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಾರಂಬಿಸಲಾಯಿತು✅
C. ರಾಜ್ಯದ ಹಿಂದುಳಿದ ವಿಧಾನ ಸಭಾ ಕ್ಷೇತ್ರಗಳಿಗೆ
D. ರಾಜ್ಯದ ಉತ್ತರ ಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳಿಗೆ

4) ಗ್ರಾಮ ವಿಕಾಸ ಯೋಜನೆಯನ್ನು ಈ ಕೆಳಗಿನ ಯಾವ ಆಯವ್ಯಯದಲ್ಲಿ ಕರ್ನಾಟಕ ಸರ್ಕಾರವು ಯೋಜನೆಯನ್ನು ಘೋಷಿಸಿತು?

A. 2014 - 15✅
B. 2015 - 16
C. 2011 - 12
D. 2010 - 11

5) ಗ್ರಾಮ ವಿಕಾಸ ಯೋಜನೆಯನ್ನು ಗ್ರಾಮಗಳಲ್ಲಿ ಅನುಷ್ಠಾನಕ್ಕೆ ತರಲು ಈ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಯಿತು ?

A. ಮುಖ್ಯಮಂತ್ರಿಗಳ 20 ಅಂಶಗಳ ಕಾರ್ಯಕ್ರಮ
B. ಮುಖ್ಯಮಂತ್ರಿಗಳ 21ಅಂಶಗಳ ಕಾರ್ಯಕ್ರಮ✅
C. ಮುಖ್ಯಮಂತ್ರಿಗಳ 15 ಅಂಶಗಳ ಕಾರ್ಯಕ್ರಮ
D. ಮುಖ್ಯಮಂತ್ರಿಗಳ 40ಅಂಶದ ಕಾರ್ಯಕ್ರಮಗಳು

6) ಈ ಕೆಳಗಿನ ಯಾವುದು 21 ಅಂಶಗಳ ಕಾರ್ಯಕ್ರಮ ಪಟ್ಟಿಯಲ್ಲಿ ಸೇರಿಲ್ಲ?

A.ಸೇತುಬಂಧ ಯೋಜನೆ✅
B.ಸಂಜೀವಿನಿ - ಜೀವನೋಪಾಯ ಅಭಿಯಾನ
C.ಕೊಳವೆಭಾವಿ ಮರು ಪೂರಣ ಕಾರ್ಯಕ್ರಮ
D. ಫುಟ್ ಬ್ರಿಡ್ಜ್ ಗಳ ನಿರ್ಮಾಣ

7) ಜಿಲ್ಲಾ ಪಂಚಾಯಿತಿ ಕಛೇರಿಯು ಈ ಕೆಳಗಿನ ಯಾವ ಸ್ಥಳದಲ್ಲಿ ಇರಬೇಕು?

A . ಜಿಲ್ಲಾ ಪಂಚಾಯತಿಯು ಜಿಲ್ಲೆಯ ಕೇಂದ್ರದಲ್ಲಿ ಸ್ಥಾಪಿತವಾಗಿರತಕ್ಕದ್ದು✅
B. ಜಿಲ್ಲೆಯ ಯಾವುದಾದರೊಂದು ಗ್ರಾಮದಲ್ಲಿ ಸ್ಥಾಪಿತವಾಗಿರಬೇಕು
C. ಜಿಲ್ಲೆಯ ಯಾವುದಾದರೊಂದು ಹೋಬಳಿ ಕೇಂದ್ರದಲ್ಲಿ ಸ್ಥಾಪಿತವಾಗಿರಬೇಕು
D.ಜಿಲ್ಲಾ ಕಛೇರಿಯ ಆ ರಾಜ್ಯದ ಕೇಂದ್ರ ಕಛೇರಿಯಲ್ಲಿ ಸ್ಥಾಪಿತವಾಗಿರಬೇಕು

8) ಹಿಂದುಳಿದ ವರ್ಗಕ್ಕೆ ಸಂಬಂಧಿಸಿದ ಸ್ಥಾನಗಳನ್ನು ಜಿಲ್ಲಾ ಪಂಚಾಯತಿಯಲ್ಲಿ ಈ ಕೆಳಗಿನ ಯಾರು ನಿರ್ಧರಿಸುತ್ತಾರೆ ?

A. ರಾಜ್ಯ ಚುನಾವಣಾ ಆಯೋಗ✅
B.ಕೇಂದ್ರ ಚುನಾವಣಾ ಆಯೋಗ
C.ಡೆಪ್ಯೂಟಿ ಕಮೀಷನರ್
D.ಅಸಿಸ್ಟೆಂಟ್ ಕಮೀಷನರ್

9) ಗ್ರಾಮ ಪಂಚಾಯತಿಗೆ ನೇಮಕವಾದ ಯಾವುದೇ ನೌಕರನ ದರ್ಜೆಯಲ್ಲಿ ಇಳಿಸುವುದು, ಕೆಲಸದಿಂದ ತೆಗೆದು ಹಾಕುವುದು ಅಥವಾ ವಜಾ ಮಾಡುವ ಅಧಿಕಾರವನ್ನು ಈ ಕೆಳಗಿನ ಯಾರು ಹೊಂದಿರುತ್ತಾರೆ?

A.ಗ್ರಾಮ ಪಂಚಾಯತಿ ಕಾರ್ಯದರ್ಶಿ
B.ಗ್ರಾಮ ಪಂಚಾಯತಿ ಅಭಿವೃಧ್ಧಿ ಅಧಿಕಾರಿ✅
C.ಗ್ರಾಮ ಪಂಚಾಯತಿಯ ಲೆಕ್ಕಾಧಿಕಾರಿ
D. ಗ್ರಾಮ ಪಂಚಾಯತಿ

10)ಕೋರಂ ಇಲ್ಲದೆ ಮುಂದೂಡಿದ ಸಭೆಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವುದು ಸರಿಯಾದ ಹೇಳಿಕೆಯಾಗಿದೆ?

A. ಮುಂದೂಡಿದ ಸಭೆಗೆ ಯಾವುಧೇ ಕೋರಂ ಅಗತ್ಯವಿಲ್ಲ✅
B. ಮುಂದೂಡಿದ ಸಭೆಗೆ ನಿಗದಿತಗಕ್ಕಿಂತ 1/2 ದಷ್ಟು ಕೋರಂ ಅಗತ್ಯ
C.ಮುಂದೂಡಿದ ಸಭೆಗೆ ಕೋರಂ ಕಡ್ಡಾಯವಾಗಿರುತ್ತದೆ
D.ಮುಂದೂಡಿದ ಸಭೆಗೆ ಕೋರಂನ್ನು ಅಧ್ಯಕ್ಷರು ನಿರ್ಧರಿಸುತ್ತಾರೆ

11)ಬ್ರಿಟೀಷರ ಕಾಲದಲ್ಲಿ 1907 ರಲ್ಲಿ ಆಡಳಿತ ವಿಕೇಂದ್ರೀಕರಣಕ್ಕೆ ಸಂಬಂಧಿಸಿದಂತೆ ಶಿಫಾರಸ್ಸು ನೀಡಲು ಯಾರ ನೇತೃತ್ವದಲ್ಲಿ ಆಯೋಗವನ್ನು ರಚಿಸಲಾಯಿತು?

A. ಲಾರ್ಡ್ ಮಯೊ
B. ಸಿ.ಇ.ಎಚ್. ಹಬ್ ಹೌಸ್✅
C.ಲಾರ್ಡ್ ರಿಪ್ಪನ್
D.ಲಾರ್ಡ್ ಕ್ಯಾನಿಂಗ್

12) ಮೇ-8 , 1882 ರಲ್ಲಿ ಹೊರಡಿಸಿದ ಸ್ಥಳೀಯ ಸರ್ಕಾರಗಳ ಘೋಷಣೆಯನ್ನು ಹೀಗೆನ್ನುತ್ತಾರೆ?

A. ಭಾರತದ ಸ್ಥಳೀಯ ಸರ್ಕಾರಗಳ ಮ್ಯಾಗ್ನಕಾರ್ಟ✅
B. ಭಾರತದ ಮ್ಯಾಗ್ನಕಾರ್ಟ್
C. ಭಾರತದ ಆಡಳಿತದ ಮ್ಯಾಗ್ನಕಾರ್ಟ
D. ಭಾರತದ ನ್ಯಾಯಾಲಯಗಳ ಮ್ಯಾಗ್ನಕಾರ್ಟ

13)ಜಗತ್ತಿನ ಮೊದಲ ಕಾರ್ಪೋರೇಷನ್ ಸ್ಥಾಪನೆಯಾಗಿದ್ದು?

A.ಲಂಡನ್✅
B.ನ್ಯೂಯಾರ್ಕ್
C.ವಾಷಿಂಗ್ಟನ್
D.ಬೀಜಿಂಗ್

14) ಪಿ.ವಿ. ನರಸಿಂಹರಾವ್ ರವರ ನೇತೃತ್ವದ ಸರ್ಕಾರದಲ್ಲಿ ನಗರ ಪಾಲಿಕೆಗೆ ಸಂಬಂಧಿಸಿದಂತೆ ಮಂಡಿಸಿದ ಮಸೂದೆ?

A.74 ನೇ ಸಂವಿಧಾನಾತ್ಮಕ ಮಸೂದೆ✅
B.73 ನೇ ಸಂವಿಧಾನಾತ್ಮಕ ಮಸೂದೆ
C.75 ನೇ ಸಂವಿಧಾನಾತ್ಮಕ ಮಸೂದೆ
D.76 ನೇ ಸಂವಿಧಾನತ್ಮಕ ಮಸೂದೆ

15) 243ಇ ವಿಧಿಯು ಈ ಕೆಳಗಿನ ಯಾವ ವಿಷಯವನ್ನು ಚರ್ಚಿಸುತ್ತದೆ?

A.ಪಂಚಾಯತಿಯ ಸದಸ್ಯರ ಅನರ್ಹತೆ
B. ಪಂಚಾಯತಿ ಅವಧಿ✅
C.ಪಂಚಾಯತಿ ತೆರಿಗೆ ವಿಧಿಸುವುದು
D. ಪಂಚಾಯತಿ ಲೆಕ್ಕ ಪರಿಶೀಲನೆ

16)ಮೈಸೂರು ಸಂಸ್ಥಾನದಲ್ಲಿ 1914 ಫೆಬ್ರವರಿಯಲ್ಲಿ ನೇಮಕಗೊಂಡ ಲೋಕಲ್ ಸೆಲ್ಫ್ ಗೌರ್ನಮೆಂಟಿನ ಸಮಿತಿ ನೇತೃತ್ವ ವಹಿಸಿದವರು?

A.ಕಾಂತರಾಜೇ ಅರಸು✅
B.ಕೆ.ಆರ್. ಶ್ರೀನಿವಾಸ ಅಯ್ಯಂಗಾರ್
C.ದಿವಾನ್ ಪೂರ್ಣಯ್ಯ
D.ರಂಗಾಚಾರ್ಲು

17)ಮೈಸೂರಿನಲ್ಲಿ ನಡೆದ ರಾಷ್ಟ್ರಮಟ್ಟದ ಸಮ್ಮೇಳನದ ಅದ್ಯಕ್ಷತೆಯನ್ನು ವಹಿಸಿದ್ದವರು ಯಾರು?

A.ಮಾಜಿ ದಿವಾನ್ ಶ್ರೀ ಪುಟ್ಟಣ್ಣ ಶೆಟ್ಟಿ✅
B.ಮಾಜಿ ದಿವಾನ್ ಪೂರ್ಣಯ್ಯ
C.ಮಿರ್ಜಾ ಇಸ್ಮಾಯಿಲ್
D.ಲಾರ್ಡ್ ಕಬ್ಬನ್

18) ಗಾಂಧಿ ಗ್ರಾಮ ಪುರಸ್ಕಾರವನ್ನು ಪ್ರಧಾನ ಮಾಡುವವರು?

A.ಪ್ರಧಾನ ಮಂತ್ರಿ
B.ಗೃಹ ಸಚಿವರು
C.ಪಿ.ಡಿ.ಒ
D.ಮುಖ್ಯಮಂತ್ರಿಗಳು✅

19)ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಕಾರ್ಯಕ್ರಮದ ಫಲಾನುಭವಿಗಳು ಯಾರು?

A.ಬಿ.ಪಿ.ಎಲ್ ಕುಟುಂಬದ ಮಹಿಳಾ ಸ್ವ ಸಹಾಯ ಗುಂಪಿನ ಸದಸ್ಯರು✅
B.ಪರಿಶಿಷ್ಟ ಜಾತಿ & ಪಂಗಡದ ಮಹಿಳಾ ಸದಸ್ಯರ ಕುಟುಂಬಗಳಿಗೆ
C.ಗ್ರಾಮೀಣ ಭಾಗದ ಎಲ್ಲಾ ಕುಟುಂಬಗಳಿಗೆ
D.ಮೇಲಿನ ಎಲ್ಲವು

20) ಸ್ಥಾಯಿ ಸಮಿತಿಗಳಿಗೆ ಈ ಕೆಳಗಿನ ಯಾರು ಪದನಿಮಿತ್ತ ಕಾರ್ಯದರ್ಶಿಯಾಗಿರತಕ್ಕದ್ದು?

A.ಜಿಲ್ಲಾ ಪಂಚಾಯತಿ ಅದ್ಯಕ್ಷ
B. ಜಿಲ್ಲಾ ಪಂಚಾಯತಿ ಉಪಾದ್ಯಕ್ಷ
C.ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣ ಅಧಿಕಾರಿ✅
D.ಜಿಲ್ಲಾ ಪಂಚಾಯತಿ ಹಿರಿಯ ಸದಸ್ಯ

21)ಏಕಕಾಲದಲ್ಲಿ ಚುನಾಯಿತರಾದ ವ್ಯಕ್ತಿಗೆ ಒಂದು ಚುನಾವಣಾ ಕ್ಷೇತ್ರವನ್ನು ನಿರ್ಧರಿಸಿದ ನಂತರ ಖಾಲಿ ಸ್ಥಾನವನ್ನು ಈ ಕೆಳಗಿನ ಯಾವ ವಿಧಾನದ ಮೂಲಕ ಭರ್ತಿ ಮಾಡತಕ್ಕದ್ದು?

A.ನಾಮ ನಿರ್ದೇಶನ ಣಮಾಡುವುದು
B.ಚುನಾವಣೆ ನಡೆಸುವುದು✅
C.ಆಡಳಿತಾಧಿಕಾರಿ ನೇಮಿಸುವುದು
D.ನೇರವಾಗಿ ಡಿ.ಸಿ ರವರ ನಿಯಂತ್ರಣದಲ್ಲಿರುವುದು

22) ಜಿಲ್ಲಾ ಪಂಚಾಯತಿಯಲ್ಲಿ ಜಿಲ್ಲೆಯ ಪ್ರತಿಯೊಂದು ತಾಲೂಕಿನಿಂದ ಚುನಾಯಿತರಾಗಬೇಕಾದ ಸದಸ್ಯರ ಸಂಖ್ಯೆಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಜಿಲ್ಲೆಗಳಿಗೆ ವಿನಾಯಿತಿ ನೀಡಲಾಗಿದೆ?

A.ಕೊಡಗು, ಉತ್ತರ ಕನ್ನಡ, ಚಿಕ್ಕಮಗಳೂರು, ಬೆಂಗಳೂರು ನಗರ✅
B.ಕೊಡಗು, ಬೀದರ್, ಚಿಕ್ಕಮಗಳೂರು, ಬೆಂಗಳೂರು ನಗರ
C.ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು, ತುಮಕೂರು
D.ಬಿಜಾಪುರ, ಬೀದರ್, ಚಿಕ್ಕಮಗಳೂರು,ಕೊಡಗು

23)ತಾಲ್ಲೂಕು ಮಂಡಳಿಯ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದವರು?

A.ಶಿರಸ್ತೇದಾರ
B.ಉಪ ವಿಭಾಗಾಧಿಕಾರಿ
C.ಜಿಲ್ಲಾಧಿಕಾರಿ
D.ಅಮಾಲ್ದಾರ✅

24) ಕರ್ನಾಟಕ ಪಂಚಾಯತ್ ರಾಜ್ (ಎರಡನೇ ತಿದ್ದುಪಡಿ)-2015 ಕ್ಕೆ ರಾಜ್ಯಪಾಲರು ಅಂಕಿತ ಹಾಕಿದ್ದು?

A.ಮಾರ್ಚ್ -31
B.ಏಪ್ರಿಲ್ - 4
C.ಏಪ್ರಿಲ್ -29✅
D.ಜೂನ್ -1

25)ಮತ ಕೇಂದ್ರದ ಬಳಿ ಅನುಚಿತ ವರ್ತನೆ ಮಾಡುತ್ತಿದ್ದಾನೆಂದು ನಂಬಲು ಕಾರಣವಿದ್ದರೆ ಅಂತಹ ವ್ಯಕ್ತಿಯನ್ನು ದಸ್ತಗಿರಿ ಮಾಡುವಂತೆ ಪೋಲೀಸ್ ಅಧಿಕಾರಿಗಳಿಗೆ ನಿರ್ದೇಶಿಸಬಹುದು?

A.ಮತಕ್ಷೇತ್ರದ ಪ್ರಿಸೈಡಿಂಗ್ ಆಫೀಸರ್✅
B.ಮತಕೇಂದ್ರದ ರಿಟರ್ನಿಂಗ್ ಆಫೀಸರ್
C.ತಹಸೀಲ್ದಾರು
D.ಅಸಿಸ್ಟೆಂಟ್ ಕಮೀಷನರ್

26)ಗ್ರಾಮ ಪಂಚಾಯತಿ ಪಿಡಿಒ ತನ್ನ ಮಾಸಿಕ ಲೆಕ್ಕ ಪತ್ರಗಳನ್ನು ಯಾವ ದಿನಾಂಕದೊಳಗೆ ಗ್ರಾಮ ಪಂಚಾಯತಿಗೆ ಸಲ್ಲಿಸತಕ್ಕದ್ದು?

A.ಮುಂಬರುವ ತಿಂಗಳ 15 ನೇ ದಿನಾಂಕದೊಳಗೆ
B.ಮುಂಬರುವ ತಿಂಗಳ 10 ನೇ ದಿನಾಂಕದೊಳಗೆ✅
C.ಮುಂಬರುವ ತಿಂಗಳ 20 ನೇ ದಿನಾಂಕದೊಳಗೆ
D.ಮುಂಬರುವ ತಿಂಗಳ 25 ನೇ ದಿನಾಂಕದೊಳಗೆ

27)ಸಮಿತಿಗಳ ಕಾರ್ಯವಿಧಾನವನ್ನು ಈ ಕೆಳಗಿನ ಯಾರು ರಚಿಸುತ್ತಾರೆ?

A.ಜಿಲ್ಲಾ ಪಂಚಾಯತಿ✅
B.ಸರ್ಕಾರ
C.ತಾಲ್ಲೂಕು ಪಂಚಾಯತಿ
D.ಗ್ರಾಮ ಪಂಚಾಯತಿ

28) ಸರ್ಕಾರವು ಪ್ರತಿಯೊಂದು ಜಿಲ್ಲಾ ಪಂಚಾಯತಿಗೆ ಈ ಕೆಳಕಂಡವರನ್ನು ಕೂಡ ನೇಮಕ ಮಾಡಬಹುದು

A.ಒಬ್ಬ ಮುಖ್ಯ ಲೆಕ್ಕಾಧಿಕಾರಿ
B.ಒಬ್ಬ ಯೋಜನಾಧಿಕಾರಿ
C.ಒಬ್ಬರು ಅಥವಾ ಹೆಚ್ಚು ಉಪಕಾರ್ಯದರ್ಶಿ
D.ಮೇಲಿನ ಎಲ್ಲರನ್ನು✅

29)ರಮೇಶ್ ಕುಮಾರ್ ರವರು ಈ ಕೆಳಗಿನ ಯಾವ ಹುದ್ದೆಯನ್ನು ಅಲಂಕರಿಸಿದ್ದರು?

A.ವಿಧಾನ ಸಭೆಯ ಸಭಾಪತಿ✅
B.ವಿಧಾನ ಪರಿಷತ್ ನ ಸಭಾಪತಿ
C.ವಿಧಾನ ಸಭೆ ಉಪ ಸಭಾಪತಿ
D.ವಿಧಾನ ಪರಿಷತ್ ನ ಉಪ ಸಭಾಪತಿ

30) ಕರ್ನಾಟಕ ಪಂಚಾಯತ್ ರಾಜ್ (2ನೇ ತಿದ್ದುಪಡಿ) -2015 ರಲ್ಲಿ ಗೊತ್ತುಪಡಿಸಿದ ನ್ಯಾಯಾಲಯ ಎಂಬುದು ಜಿಲ್ಲಾ ಪಂಚಾಯತಿಗೆ ಸಂಬಂಧಿಸಿದಂತೆ ಇದಾಗಿದೆ?

A.ಸಿವಿಲ್ ನ್ಯಾಯಾಧೀಶ ಹಿರಿಯ ವರ್ಗ
B.ಸಿವಿಲ್ ನ್ಯಾಯಾಧೀಶ ಕಿರಿಯ ವರ್ಗ
C.ಸೆಷನ್ ನ್ಯಾಯಾಧೀಶ✅
D.ಹೈಕೋರ್ಟ್ ನ್ಯಾಯಾಧೀಶರು

*CREATIVE COMPUTERS - HOSADURGA*

27/01/2017

knowledge #

⚽:
ವಿಶ್ವಸಂಸ್ಥೆಯ ಒಂದಿಷ್ಟು ಮಾಹಿತಿ
ವಿಶ್ವ ಸಂಸ್ಥೆ

ಮೂರನೇ ಮಹಾಯುದ್ದ ನಡೆಯಬಾರದೆಂದೂ ವಿಶ್ವದ ಪ್ರಮುಖ ವ್ಯಕ್ತಿಗಳು ಚರ್ಚಿಸಿದರ ಫಲವಾಗಿ 1945 ಅಕ್ಟೋಬರ್ 24 ರಂದು ವಿಶ್ವಸಂಸ್ಥೆ ಸ್ಥಾಪನೆಯಾಯಿತು.
ಅಕ್ಟೋಬರ್ 24ನ್ನು ವಿಶ್ವಸಂಸ್ಥೆಯ ದಿನಾಚರಣೆಯಾಗಿ ಆಚರಿಸುತ್ತಾರೆ
ವಿಶ್ವಸಂಸ್ಥೆಯ ಸ್ಥಾಪನೆಗೆ ಕಾರಣರಾದ ವ್ಯಕ್ತಿಗಳು
1) ಅಮೇರಿಕಾದ ಅಧ್ಯಕ್ಷ ಪ್ರಾಂಕ್ಲಿನ್ ಡಿ ರೂಸವೆಲ್ಟ್
2) ಇಂಗ್ಲೇಂಡ್ ನ ಚರ್ಚಿಲ್
3) ರಷ್ಯಾದ ಜೋಸೆಪ್ ಸ್ಟಾಲಿನ್

ವಿಶ್ವಸಂಸ್ಥೆಯ ಖಾಯಂ ಸದಸ್ಯ ರಾಷ್ಟ್ರಗಳು
1) ಅಮೇರಿಕಾ ಅದರ ರಾಜಧಾನಿ ವಾಷಿಂಗಟನ್ ಡಿಸಿ ಕರೆನ್ಸಿ ಡಾಲರ್
2) ರಷ್ಯಾ ಅದರ ರಾಜಧಾನಿ ಮಾಸ್ಕೋ ಕರೆನ್ಸಿ ರೋಬಾಲ್
3) ಚೀನಾ ರಾಜಧಾನಿ ಬೀಜಿಂಗ್ ಕರೆನ್ಸಿ ಯೆಯನ್
4) ಪ್ರಾನ್ಸ್ ರಾಜಧಾನಿ ಪ್ಯಾರಿಸ್ ಕರೆನ್ಸಿ ಪ್ರಾಂಕ್ (ಯುರೋ)
5) ಇಂಗ್ಲೇಂಡ್ ಅದರ ರಾಜಧಾನಿ ಲಂಡನ್ ಕರೆನ್ಸಿ ಪೌಲ್

ವಿಶ್ವಸಂಸ್ಥೆಯ ಧ್ವಜ:
ಆಲೀವ್ ರೆಂಬೆಗಳ ಮಧ್ಯದಲ್ಲಿ ನೀಲಿ ಮತ್ತು ಬಿಳಿ ಬಣ್ಣದ ಬಾವುಟವಿರುವ ವಿಶ್ವದ ನಕಾಶೆ. ಇದನ್ನು 1945 ಅಕ್ಟೋಬರ್ 20 ರಂದು ಅಂಗೀಕರಿಸಲಾಯಿತು

*ವಿಶ್ವಸಂಸ್ಥೆ ಕಟ್ಟಲು ಸ್ಥಳ ಕೊಟ್ಟ ವ್ಯಕ್ತಿ: ಅಮೇರಿಕಾದ ಶ್ರೀಮಂತ ರಾಂಕ್ ಪಿಲ್ಲರ್
* ವಿಶ್ವಸಂಸ್ಥೆ ಎಂದು ಮೊದಲ ಬಾರಿಗೆ ಕರೆದಂತಹ ವ್ಯಕ್ತಿ: ಪ್ರಾಂಕ್ಲಿನ್ ಡಿ ರೂಸವೆಲ್ಟ್
ವಿಶ್ವಸಂಸ್ಥೆಯ ಗುರಿ ಮತ್ತು ಉದ್ಧೇಶಗಳು
* ರಾಷ್ಟ್ರ ರಾಷ್ಟ್ರಗಳ ಮಧ್ಯೆ ಬಾತೃತ್ವ ಭಾವನೆ ಮೂಡಿಸುತ್ತದೆ
* ಭಯೋತ್ಪಾದನೆ ನಿಗ್ರಹಿಸಲು ಎಲ್ಲಾ ರಾಷ್ಟ್ರಗಳಿಗೆ ಕರೆ ನೀಡುತ್ತದೆ
* ಮಾರಕ ರೋಗಗಳ ವಿರುದ್ದ ಜಾಗೃತಿ ಮೂಡಿಸುತ್ತದೆ
* ವಿಶ್ವದ ಸ್ತ್ರೀಯರ, ಮಕ್ಕಳ, ಕಾರ್ಮಿಕರ ಕಲ್ಯಾಣ ಸಾಧಿಸುತ್ತದೆ
* ಹವಮಾನ ವೈಪರಿತ್ಯವನ್ನು ತಡೆಯಲು ತನ್ನದೇ ಆದ ಸಲಹೆ ನೀಡುತ್ತದೆ
* ಸಾಂಸ್ಕೃತಿಕ ಮೌಲ್ಯಗಳನ್ನು ರಕ್ಷಣೆ ಮಾಡುತ್ತದೆ
* ವಿಶ್ವದ ಸಾಮಾಜಿಕ ಮತ್ತು ಆರ್ಥಿಕ ಸಮನ್ವಯ ಸಾಧಿಸುತ್ತದೆ

ವಿಶ್ವಸಂಸ್ಥೆಯ ಅಂಗ ಸಂಸ್ಥೆಗಳು
1) ಸಾಮಾನ್ಯ ಸಭೆ
2) ಭಧ್ರತಾ ಮಂಡಳಿ
3) ಸಾಮಾಜಿಕ ಮತ್ತು ಆರ್ಥಿಕ ಮಂಡಳಿ
4) ಅಂತರಾಷ್ಟ್ರೀಯ ನ್ಯಾಯಲಯ
5) ಧರ್ಮದರ್ಶಿ ಮಂಡಳಿ
6) ಸಚಿವಾಲಯ

ವಿಶ್ವಸಂಸ್ಥೆಯ ವಿಶೇಷ ಅಂಶಗಳು
* ಅಂತರಾಷ್ಟ್ರೀಯ ನ್ಯಾಯಲಯವೊಂದನ್ನು ಹೊರತು ಪಡಿಸಿ ಉಳಿದ ಐದೂ ಅಂಗ ಸಂಸ್ಥೆಗಳ ಕೇಂದ್ರ ಕಛೇರಿ ನ್ಯೂಯಾರ್ಕ್
* ವಿಶ್ವಸಂಸ್ಥೆ ಸಂಪೂರ್ಣವಾಗಿ ನಿವಾರಿಸಿದ ರೋಗ ಸಿಡುಬು
* ವಿಶ್ವಸಂಸ್ಥೆಯಲ್ಲಿ ಮೊದಲು ಚರ್ಚಿಸಲ್ಪಟ್ಟ ವಿಷಯ ರೋಗ ಏಡ್ಸ್
* ವಿಶ್ವಸಂಸ್ಥೆಗೆ ಸವಾಲಾಗಬಹುದಾದ ಪ್ರಸ್ತುತ ರೋಗ ಎಬೋಲಾ
* ವಿಶ್ವಸಂಸ್ಥೆಯ ಪರಿಸರ ರಾಯಭಾರಿಯಾಗಿ ಸೇವೆ ಸಲ್ಲಿಸದ ಭಾರತೀಯ ವ್ಯಕ್ತಿ ಎಪಿಜೆ ಅಬ್ದುಲ್ ಕಲಾಂ
* ವಿಶ್ವಸಂಸ್ಥೆಯ ಶಿಕ್ಷಣದ ಮಾರ್ಗದರ್ಶಕರಾಗಿ ಸೇವೆ ಭಾರತದ ವ್ಯಕ್ತಿ ಡಾ: ರಾಧಕೃಷ್ಣನ್
* ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಸೇವೆ ಸಲ್ಲಿಸಿದ ಬಾರತದ ಮಹಿಳೆ ಕಿರಣ್ ಬೇಡಿ
* ವಿಶ್ವಸಂಸ್ಥೆಯ ಏಡ್ಸ್ ರಾಯಭಾರಿಯಾಗಿ ನೇಮಕವಾದ ಭಾರತದ ಮಹಿಳೆ ಐಶ್ವರ್ಯಾ ರೈ
* ವಿಶ್ವಸಂಸ್ಥೆಯ ಮಕ್ಕಳ ರಾಯಭಾರಿಯಾಗಿ ಸೇವೆ ಸಲ್ಲಿಸಿದ ಭಾರತೀಯ ವ್ಯಕ್ತಿ ರವಿಶಾಸ್ತ್ರೀ
* ವಿಶ್ವಸಂಸ್ಥೆಯ ಹವಮಾನ ವೈಪರಿತ್ಯದ ಕುರಿತು ಭಾಷಣ ಮಾಡಿದ ಭಾರತದ ಬಾಲಕಿ ಯುಗರತ್ನ ಶ್ರೀವಾಸ್ತವ
* ವಿಶ್ವಸಂಸ್ಥೆಯ ವಿಶೇಷ ಪ್ರಶಸ್ತಿ ಪಡೆದ ಮಹಿಳೆಯರು (ಇತ್ತೀಚೆಗೆ) ಕರ್ನಾಟಕದ ಅಶ್ವಿನಿ ಅಂಗಡಿ ಉತ್ತರ ಪ್ರದೇಶದ ರಜಿಯಾ

27/01/2017

1. ‘ನಿಮ್ಮ ಹೃದಯವನ್ನು ಪ್ರೀತಿಗೆ, ಕೈಗಳನ್ನು ಸೇವೆಗೆ ಮೀಸಲಿರಿಸಿ’ ಎಂದು ಇಡೀ ವಿಶ್ವಕ್ಕೆ ಸಾರಿದ ಮಹಿಳೆ ಯಾರು?

a) ನೀರಜಾ ಬಾನೋಟ್
b) ಹೆಲೆನ್ ಕೆಲ್ಲರ್
c) ಮದರ್ ತೆರೇಸಾ🌑
d) ಸರೋಜಿನಿ ನಾಯ್ಡು

2. "ಮೈಕಲ್‌ ಟೇಮರ್‌" ಯಾವ ದೇಶದ ನೂತನ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದರು?
a) ಸಿಂಗಾಪೂರ್
b) ಬ್ರಿಟನ್
c) ಬ್ರೆಜಿಲ್🌑
d) ಓಮನ್

3. ಇದೇ ಮೊದಲ ಬಾರಿಗೆ ಭಾರತದ ಶತಕೋಟಿ ಶ್ರೀಮಂತರ ಸಾಲಿಗೆ ಸೇರುವ ಮೂಲಕ ಅಚ್ಚರಿ ಮೂಡಿಸಿರುವ ಪತಂಜಲಿ ಆಯುರ್ವೇದ ಸಂಸ್ಥೆಯ ಸಹ ಸ್ಥಾಪಕ ಯಾರು?
a) ಆಚಾರ್ಯ ವಿಷ್ಣುದೇವ್
b) ಆಚಾರ್ಯ ಬಾಲಕೃಷ್ಣ 🌑
c) ಆಚಾರ್ಯ ಗುರುಮೂರ್ತಿ
d) ಇವರಾರೂ ಅಲ್ಲ

4. ಜಗತ್ತಿನಲ್ಲಿಯೇ ಅತಿ ಹೆಚ್ಚು ಗೋಧಿ, ಭತ್ತ ಬೆಳೆಯುವ ದೇಶ ಯಾವುದು?

a) ಜಪಾನ್
b) ಚೀನಾ🌑
c) ರಷ್ಯಾ
d) ಭಾರತ

5. ಆಡಿಟ್ ಬ್ಯೂರೋ ಆಪ್ ಸರ್ಕ್ಯೂಲೇಷನ್ ಆಧ್ಯಕ್ಷರಾಗಿ ಆಯ್ಕೆಯಾದವರು ಯಾರು?

a) ವೆಂಕಟ್ 🌑
b) ಎಂ. ಸುನೀಲ್
c) ಶ್ರೀವಾತ್ಸವ್
d) ಶ್ರೀಕಾಂತ್

6. "ಜೀನ್ ವೆಸ್ ಲಿ ಡ್ರಿಯಾನ್" ಇವರು ಯಾವ ದೇಶದ ರಕ್ಷಣಾ ಸಚಿವರಾಗಿದ್ದಾರೆ?

a) ಫ್ರಾನ್ಸ್🌑
b) ಇರಾನ್
c) ರಷ್ಯಾ
d) ಇಂಗ್ಲೆಂಡ

7. ಪ್ರಸ್ತುತ ಕೇಂದ್ರ ವಿದೇಶಾಂಗ ಖಾತೆ ರಾಜ್ಯ ಸಚಿವರು ಯಾರು?

a) ಸುದೇಶ್ ಮೆಹ್ತಾ
b) ಸಂದೇಶ್ ಎಮ್ ಜಿ
c) ಎಂ.ಜೆ. ಅಕ್ಬರ್ 🌑
d) ಸಿ.ಜೆ ವೆಂಕಟ್

8. "ವರ್ಲ್ಡ್ ಹಾರ್ಟ್ ಡೇ" (ವಿಶ್ವ ಹೃದಯ ದಿನ) ವನ್ನು ಎಂದು ಆಚರಿಸಲಾಗುತ್ತದೆ?

a) ಆಗಷ್ಟ್ 18
b) ಸೆಪ್ಟೆಂಬರ್ 29🌑
c) ಎಪ್ರೀಲ್ 10
d) ಸೆಪ್ಟೆಂಬರ್ 26

9. 2016 ರ ನೇ ಸಾಲಿನಲ್ಲಿ 7 ನೇ ಶುದ್ಧ ಇಂಧನ ಶೃಂಗ ಸಭೆ ಎಲ್ಲಿ ಜರುಗಿತು?
a) ಫ್ರಾನ್ಸ್
b) ಚೀನಾ
c) ಟೋಕಿಯೋ
d) ಸ್ಯಾನ್ ಫ್ರಾನ್ಸಿಸ್ಕೋ🌑

10. ಉತ್ತರ ಕೊರಿಯಾದಲ್ಲಿ ಇತ್ತೀಚೆಗೆ ಪರೀಕ್ಷಿಸಿದ ಎರಡೂ ಪರಮಾಣು ಬಾಂಬ್​ಗಳನ್ನು ಎಲ್ಲಿ ತಯಾರಿಸಲಾಗಿತ್ತು ಎಂದು ಸಂಡೇ ಗಾರ್ಡಿಯನ್ ಪತ್ರಿಕೆ ವರದಿ ಮಾಡಿದೆ?

a) ಇರಾನ್
b) ಇರಾಕ್
c) ಉತ್ತರ ಕೋರಿಯಾ
d) ಪಾಕಿಸ್ತಾನ🌑

11. ವಿಶ್ವ ಕುಟುಂಬ ದಿನ ಎಂದು ಆಚರಿಸಲಾಗುತ್ತದೆ?

a) ಜನವರಿ 2
b) ಜನವರಿ 3
c) ಜನವರಿ 1🌑
d) ಜನವರಿ 5

12. ಅಂತರರಾಷ್ಟ್ರೀಯ ತೆರಿಗೆ ದಿನ ............

a) ಜನವರಿ 26🌑
b) ಜನವರಿ 10
c) ಡಿಸೆಂಬರ್ 20
d) ಜೂನ್ 2

13. ರಾಷ್ಟ್ರೀಯ ತಂತ್ರಜ್ಞಾನ ದಿನವನ್ನು ಎಂದು ಆಚರಿಸಲಾಗುತ್ತದೆ?

a) ಮೇ 11 🌑
b) ಮೇ17
c) ಎಪ್ರೀಲ್ 23
d) ಎಪ್ರೀಲ್ 9

14. ವಿಶ್ವ ಪುಸ್ತಕದಿನವನ್ನು ಎಂದು ಆಚರಿಸುತ್ತಾರೆ?

a) ಡಿಸೆಂಬರ್ 2
b) ಜನವರಿ 28
c) ಜುಲೈ 30
d) ಎಪ್ರೀಲ್ 23🌑

15. ಕರ್ನಾಟಕದ ಗಾಂಧಿ ಎಂದೇ ಖ್ಯಾತರಾಗಿರುವ ಹರ್ಡೀಕರ್ ಮಂಜಪ್ಪನವರ ಸ್ಮಾರಕ ಭವನವನ್ನು ಜುಲೈ 2016 ರಂದು ಎಲ್ಲಿ ಲೋಕಾರ್ಪಣೆ ಮಾಡಲಾಯಿತು?

a) ಆಲಮಟ್ಟಿ ಡ್ಯಾಂ ಸೈಟ್ ನಲ್ಲಿ🌑
b) ತುಂಗಭದ್ರಾ ಡ್ಯಾಂ ಸೈಟ್ ನಲ್ಲಿ
c) ಕೆ.ಆರ್.ಎಸ್. ನಲ್ಲಿ
d) ಗದಗನಲ್ಲಿ

16. ಕರ್ನಾಟಕದ ಈಜುಗಾರ್ತಿ ದಾಮಿನಿ ಗೌಡ 70ನೇ ಗ್ಲೆನ್​ವಾರ್ಕ್ ಸೀನಿಯರ್ ರಾಷ್ಟ್ರೀಯ ಈಜು ಚಾಂಪಿಯನ್​ಷಿಪ್​ನಲ್ಲಿ ಯಾವ ಪದಕ ಪಡೆದುಕೊಂಡಿದ್ದಾರೆ?

a) ಸ್ವರ್ಣ
b) ಬೆಳ್ಳಿ🌑
c) ಕಂಚು
d) ಯಾವುದೂ ಅಲ್ಲ

17. ಭಾರತೀಯ ಬಾಕ್ಸಿಂಗ್ ಸಂಸ್ಥೆಯ ನೂತನ ಅಧ್ಯಕ್ಷರು ಯಾರು?

a) ರೋಹಿತ್ ಜೈನ್
b) ಅಜಯ್ ಸಿಂಗ್🌑
c) ಸುಶ್ಮಿತಾ ಜ್ಯೋತ್ಸಿ
d) ರಾಕೇಶ್ ಥಾಕ್ರನ್

18. ಜನವರಿ 10 ನ್ನು ಏನೆಂದು ಆಚರಿಸಲಾಗುತ್ತದೆ?

a) ವಿಶ್ವ ಮಂಕರ ದಿನ
b) ವಿಶ್ವ ಜಾಣರ ದಿನ
c) ವಿಶ್ವ ಕುಟುಂಬ ದಿನ
d) ವಿಶ್ವ ನಗುವಿನ ದಿನ🌑

19. ವಸತಿ ರಹಿತ ಭಾರತೀಯರ ದಿನ ಎಂದು ಆಚರಿಸಲಾಗುತ್ತದೆ?

a) ಜನವರಿ 9🌑
b) ಜನವರಿ 8
c) ಜನವರಿ 7
d) ಜನವರಿ 1

20. "ಒನ್ ಲೈಫ್ ಈಸ್ ನಾಟ್ ಎನಫ್ : ಆನ್ ಆಟೋಬಯಾಗ್ರಫಿ" ಎಂಬ ಕೃತಿಯ ಇವರ ಆತ್ಮ ಚರಿತ್ರೆಯಾಗಿದೆ....

a) ಕೆ ನಟವರ್ ಸಿಂಗ್🌑
b) ವಿನೋದ್ ರಾಯ್
c) ಪಿ ಸಿ ಪಾರೇಖ್
d) ಸಂಜಯ್ ಬರು

21. "ಆಲ್ ಫ್ರಂ ಮೆಮೂರಿ" ಎಂಬ ಪುಸ್ತಕದ ಲೇಖಕರು ಯಾರು?

a) ನಾಸಿರುದ್ದೀನ್ ಷಾ
b) ಫರಾಜ್ ಅಹಮದ್
c) ಬಿ ವಿ ಆಚಾರ್ಯ🌑
d) ಅರುಣ್ ಶೌರಿ

22. "Dark Star: The Loneliners of Being Rajesh Khanna" ಕೃತಿಯ ಲೇಖಕರು ಯಾರು?

a) ಸ್ಟೀವನ್ ಸನ್
b) ಜೋಸೆಫ್ ಪ್ರೀಸ್ಲೆ
c) ಯು ಡಿ ಚುಬೆ
d) ಗೌತಮ್ ಚಿಂತಾಮಣಿ🌑

23. "Final Test: Exit Sachin Tendulkar" ಕೃತಿಯ ಲೇಖಕರು....

a) ಸಂಜಯ್ ಬರು
b) ದಿಲೀಪ್ ಡಿಸೋಜಾ🌑
c) ಕೆ ನಟವರ್ ಸಿಂಗ್
d) ವಿನೋದ್ ರಾಯ್

24. "ಮಾಯ್ ಇಯರ್ಸ್ ವಿತ್ ರಾಜೀವ್ ಆಂಡ್ ಸೋನಿಯಾ" ಕೃತಿಯನ್ನು ಬರೆದವರು ಯಾರು?

a) ರಿಚರ್ಡ್ ಎನ್ ಪ್ಯಾಟರ್ ಸನ್
b) ಜವಾಹರ್ ಲಾಲ್ ನೆಹರು
c) ಆರ್. ಡಿ. ಪ್ರಧಾನ್🌑
d) ಯಾರೂ ಅಲ್ಲ

25. "ಯಸ್ಟರ್ಡೆ ಆಂಡ್ ಟುಡೆ" ಕೃತಿ ಬರೆದವರು...

a) ಎಫ್ ಬಂಟಿಂಗ್
b) ಸಿಡ್ನಿ ಶೆಲ್ಡೋನ್
c) ಜೆ. ಸಿ. ಭೋಸ್
d) ಕೆ.ಪಿ.ಎಸ್ ಮೆನನ್🌑

26. ’ಸರೋಜಿನಿ ನಾಯ್ಡು’ ಅವರು ಬರೆದ ಗ್ರಂಥ ಯಾವುದು?

a) ದಿ ಸಾಂಗ್ ಆಫ್ ಇಂಡಿಯಾ🌑
b) ದಿ ಸಾಂಗ್ ಆಫ್ ಕರ್ನಾಟಕ
c) ದಿ ಸಾಂಗ್ ಆಫ್ ಹಿಮಾಲಯಾ
d) ದಿ ಸಾಂಗ್ ಆಫ್ ಹಿಂದುಸ್ತಾನ

27. "ಮ್ಯಾಥ್ಯೂ" ಎಂಬ ಚಂಡಮಾರುತಕ್ಕೆ ಸಿಕ್ಕಿ ಆಂತರಿಕ ತುರ್ತು ಪರಿಸ್ಥಿತಿ ಘೋಷಿಸಿದ ದೇಶ ಯಾವುದು?

a) ರಷ್ಯಾ
b) ಜಪಾನ್
c) ಇಂಗ್ಲೆಂಡ್
d) ಅಮೇರಿಕಾ🌑

28. ಕೆಳಕಂಡ ಯಾವ ರಾಷ್ಟ್ರದಲ್ಲಿ ಪ್ರತಿನಿಧಿ ಪ್ರಜಾಪ್ರಭುತ್ವವಿದೆ.
a) ಇಂಗ್ಲೆಡ್
b) ಯು.ಎಸ್.ಎ
c) ಭಾರತ
d) ಮೇಲಿನ ಎಲ್ಲವೂ🌑

29. ಸಂವಿಧಾನದಲ್ಲಿ ವಿವರಣಾ ಪಟ್ಟಿಗಳಿವೆ .

a) 12🌑
b) 20
c) 10
d) 25

30. ಆಸ್ತಿಯ ಹಕ್ಕು ಒಂದು.

a) ಮೂಲಭೂತ ಹಕ್ಕು
b) ನಾಗರೀಕ ಹಕ್ಕು
c) ರಾಜಕೀಯ ಹಕ್ಕು
d) ನೈತಿಕ ಹಕ್ಕು🌑

31. ಕೆಳಕಂಡ ಯಾವುದು ನಾಗರೀಕ ಹಕ್ಕಲ್ಲ.

a) ಜೀವಿಸುವ ಹಕ್ಕು
b) ಉದ್ಯೋಗದ ಹಕ್ಕು
c) ಆತ್ಮಗೌರವ ಹಕ್ಕು
d) ದೂರು ಕೊಡುವಹಕ್ಕು🌑

32. 1949ರ ನವೆಂಬರ್ 26 ರಂದು ರೂಪಿತಗೊಂಡ ಭಾರತ ಗಣರಾಜ್ಯದ ಸಂವಿಧಾನವು ಒಳಗೊಂಡ ವಿಭಾಗಗಳು.
a) 22🌑
b) 21
c) 20
d) 19

33. ಚಿತ್ತರಂಜನ್ ಕ್ಯಾನ್ಸರ್ ಇನ್ಸ್ಟಿಟ್ಯೂಟ್ ಎಲ್ಲಿದೆ?
1. ಡೆಹರಾಡೂನ್
2. ಚಿತ್ತರಂಜನ್
3. ಮುಂಬೈ
4. ಕೋಲ್ಕತಾ🌑

34. ಕೆಳಗಿನ ವಿದೇಶಿ ದಾಳಿಕೋರರನ್ನು ಕಾಲಾನುಕ್ರಮದಲ್ಲಿ ಬರೆಯಿರಿ
1. ಬ್ಯಾಕ್ಟಿಯನ್ನರು
2. ಕುಷಾಣರು
3. ಶಕರು
ಎ. 3,2,1
ಬಿ. 1,3,2 🌑
ಸಿ. 2,1,3
ಡಿ. ಎಲ್ಲವೂ ಒಮ್ಮೆಗೆ

35. ಚಿತ್ತಗಾಂಗ್ ನ ಶಸ್ತ್ರಾಗಾರವನ್ನು ವಶಪಡಿಸಿಕೊಂಡ ಕ್ರಾಂತಿಕಾರಿಗಳ ನಾಯಕ ಯಾರು?
1. ಸೂರ್ಯಸೇನ್ 🌑
2. ಜನಿತ್ ದಾಸ್
3. ಚಂದ್ರಶೇಖರ ಆಜಾದ್
4. ಭಗತ್ ಸಿಂಗ

36. ಭಾರತ ಅರಬ್ ಒಕ್ಕೂಟದ 5ನೇ ಆವೃತ್ತಿಯ ಪಾಲುದಾರಿಕೆ ಸಮ್ಮೇಳನಕ್ಕೆ (Partnership Conference) ಕೆಳಕಂಡ ಯಾವ ನಗರ ಆತಿಥ್ಯ ವಹಿಸಲಿದೆ?
A. ನವದೆಹಲಿ
B. ಮಸ್ಕತ್🌑
C. ದುಬೈ
D. ಮುಂಬೈ

37. ಇ-ಟೂರಿಸ್ಟ್ (e-Tourist) ವೀಸಾ ಸೌಲಭ್ಯವನ್ನು ಭಾರತ ಸರ್ಕಾರ ಈಗ ಎಷ್ಟು ದೇಶಗಳಿಗೆ ವಿಸ್ತರಿಸಿದೆ?
A. 141
B. 151
C. 161🌑
D. 171

38. ಭಾರತದ ಕೆಳಕಂಡ ಯಾವ 38. ಮಹಾನಗರ ಪಾಲಿಕೆ ಡಿಜಿಟಲ್ ಇಂಡಿಯಾ ರಜತ ಪ್ರಶಸ್ತಿಗೆ (Digital India Silver Award) ಪಾತ್ರವಾಯಿತು?
A. ಮೈಸೂರು
B. ಕೊಯಂಬತ್ತೂರ್🌑
C. ಪುಣೆ
D. ಜೈಪುರ

39. ವಿಶ್ವಸಂಸ್ಥೆ ಕೆಳಕಂಡ ಯಾವ ದೇಶದಲ್ಲಿ ಶಾಂತಿಪಾಲನಾ ಕಾರ್ಯಾಚರಣೆಯನ್ನು (Peacekeeping Mission) ಡಿಸೆಂಬರ್ 2017ರವರೆಗೂ ಮುಂದುವರಿಸಲು ನಿರ್ಧರಿಸಿದೆ?
A. ದ. ಸುಡಾನ್🌑
B. ನೈಜಿರಿಯಾ
C. ಘಾನಾ
D. ಚಿಲಿ

40. ಪುರುಷರ ಜೂನಿಯರ್ ಹಾಕಿ ವಿಶ್ವಕಪ್'ನ್ನು ಭಾರತದ ಕೆಳಕಂಡ ಯಾವ ನಗರದಲ್ಲಿ ಆಯೋಜಿಸಲಾಗುತ್ತದೆ?
A. ಹೈದರಾಬಾದ್
B. ಅಹಮದಾಬಾದ್
C. ಲಖನೌ🌑
D. ಪುಣೆ

41. ಭಾರತದ ಅತಿದೊಡ್ಡ ಕ್ರೀಡಾಂಗಣ ಕೆಳಕಂಡ ಯಾವ ರಾಜ್ಯದಲ್ಲಿ ನಿರ್ಮಾಣಗೊಳ್ಳುತ್ತಿದೆ?
A. ಪಶ್ಚಿಮ ಬಂಗಾಳ🌑
B. ತಮಿಳುನಾಡು
C. ಕೇರಳ
D. ಪಂಜಾಬ

42. ಐಎಚ್ಎಸ್ ಜಾನೆ'ಸ್ ರಕ್ಷಣಾ ಆಯವ್ಯಯ ವರದಿ 2016ರ (IHS Jane's defence budgets report) ಪ್ರಕಾರ, ರಕ್ಷಣೆಗಾಜಿ ಅತಿಹೆಚ್ಚು ವೆಚ್ಚ ಮಾಡುತ್ತಿರುವ ದೇಶಗಳಲ್ಲಿ ಭಾರತದ ಕ್ರಮಾಂಕ ಎಷ್ಟು?
A. 2ನೇ
B. 3ನೇ
C. 4ನೇಯ🌑
D. 5ನೇ

43. 7ನೇ ವರ್ಷದ ಎಕುವೆರಿನ್ (EKUVERIN) ಸಮರಾಭ್ಯಾಸ ಭಾರತ ಹಾಗೂ ಕೆಳಕಂಡ ಯಾವ ದೇಶದ ನಡುವೆ ನಡೆಯಿತು?
A. ಶ್ರೀಲಂಕಾ
B. ಮಾರಿಸಸ್
C. ಮಾಲ್ದೀವ್ಸ್🌑
D. ಕಾಂಬೋಡಿಯಾ

44. 'ICFA'ಯ ಗ್ಲೋಬಲ್ ಅಗ್ರಿಕಲ್ಚರಲ್ ಲೀಡರ್'ಷಿಪ್ ಅವಾರ್ಡ್ -2016 ಕೆಳಕಂಡ ಯಾರಿಗೆ ದೊರಕಿತು?
A. ಎಂಎಸ್ ಸ್ವಾಮಿನಾಥನ್
B. ರತನ್ ಟಾಟಾ🌑
C. ಅಜೀಂ ಪ್ರೇಮ್'ಜೀ
D. ವೇಣುಗೋಪಾಲ್

45. ಅನಧಿಕೃತ ಮದ್ಯ ಮಾರಾಟ ಹಾಗೂ ಖರೀದಿ ಕುರಿತು ಇನ್ನಷ್ಟು ಬಿಗಿ ಕ್ರಮ ಜರುಗಿಸಲು ಯಾವ ರಾಜ್ಯ ಸರ್ಕಾರ ನಿರ್ಧರಿಸಿದೆ?
A. ಕೇರಳ
B. ಗುಜರಾತ್ 🌑
C. ತಮಿಳುನಾಡು
D. ಮಣಿಪುರ

46. ಕನ್ನಡದ ಕೆಳಕಂಡ ಯಾವ ಹಿರಿಯ ಸಾಹಿತಿಗೆ 2016ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ?
A. ನಾ ಡಿಸೋಜಾ
B. ಹಂ. ಪ. ನಾಗರಾಜಯ್ಯ
C. ಬೋಳುವಾರು ಮಹಮ್ಮದ್ ಕುಂಞ🌑

47. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಿಗೆ ಸ್ಮರಣಿಕೆ ಜತೆಗೆ ನೀಡುವ ಮೊತ್ತ ಎಷ್ಟು?
A. 25,000ರೂ.
B. 50,000ರೂ.
C. 1 ಲಕ್ಷ ರೂ. 🌑
D. 2 ಲಕ್ಷ ರೂ.

48. ಆರ್ ಅಶ್ವಿನ್ ಹಾಗೂ ರವೀಂದ್ರ ಜಡೇಜಾ 42 ವರ್ಷಗಳ ಬಳಿಕ ಐಸಿಸಿ ಟೆಸ್ಟ್ ರ್ಯಾಂಕಿಂಗ್'ನಲ್ಲಿ ಮೊದಲೆರಡು ಸ್ಥಾನಗಳನ್ನು ಪಡೆದುಕೊಂಡರು. 1974ರಲ್ಲಿ ಈ ಗೌರವಕ್ಕೆ ಪಾತ್ರರಾದ ಬೌಲರ್'ಗಳು ಯಾರು?
A. ಕಪಿಲ್ ದೇವ್ - ಚಂದ್ರಶೇಖರ್
B. ಬಿಷನ್'ಸಿಂಗ್ ಬೇಡಿ - ಚಂದ್ರಶೇಖರ್ 🌑
C. ಬಿಷನ್'ಸಿಂಗ್ ಬೇಡಿ - ಪ್ರಸನ್ನ
D. ಚಂದ್ರಶೇಖರ್ - ಬಿಷನ್'ಸಿಂಗ್ ಬೇಡಿ -

49. ಪ್ರಧಾನಿ ನರೇಂದ್ರ ಮೋದಿ ಕೆಳಕಂಡ ಯಾವ ನಗರದಲ್ಲಿ ಭಾರತದ ಮೊದಲ 'ಇಂಡಿಯನ್ ಇನಸ್ಟಿಟ್ಟೂಟ್ ಆಫ್ ಸ್ಕಿಲ್ಸ್'ಗೆ ಶಂಕುಸ್ಥಾಪನೆ ನೆರವೇರಿಸಿದರು?
A. ಅಲಹಾಬಾದ್
B. ಅಹಮದಾಬಾದ್
C. ಹೈದರಾಬಾದ್
D. ಕಾನಪುರ್🌑

50. 66ನೇ ವಿಶ್ವಸುಂದರಿ ಕಿರೀಟ ಧರಿಸಿದ ಸ್ಟೆಫನಿ ಡೆಲವಲ್ಲೆ ಕೆಳಕಂಡ ಯಾವ ದೇಶದವರು?
A. ಇಂಡೋನೇಶಿಯಾ
B. ಪೋರ್ಟರಿಕೊ🌑
C. ಪೆರು
D. ಹಂಗೇರಿ

51. ಭಾರತ ಕ್ರಿಕೆಟ್ ತಂಡ ಇಂಗ್ಲೆಂಡ್ ತಂಡವನ್ನು ಎಷ್ಟು ಅಂತರದಿಂದ ಸೋಲಿಸಿ 2016ನ್ನು ಅದ್ಭುತ ಗೆಲುವಿನ ವರ್ಷ ಎಂದು ಸಾಬೀತಪಡಿಸಿತು?
A. 5 - 0
B. 4 - 1
C. 4 - 0🌑
D. 3 - 1

52. ಭಾರತದ ಗುಪ್ತಚರ ಸಂಸ್ಥೆ 'ರಾ'ದ ಮುಖ್ಯಸ್ಥರನ್ನಾಗಿ ಕೆಳಕಂಡ ಯಾರನ್ನು ನೇಮಕ ಮಾಡಲಾಗಿದೆ?
A. ರಾಜೀವ ಜೈನ್
B. ಅನಿಲ್ ಧಸ್ಮಾನಾ🌑
C. ಬಿ. ಎಸ್. ಧನೋವಾ
D. ಬಿಪಿನ್ ರಾವತ್

53. "ಖುಸಾಲತ್ - ಉಲ್ - ತವಾರಿಕ್ " ಗ್ರಂಥದ ಕರ್ತೃ ಯಾರು?
1. ಮಹಮ್ಮದ್ ಸಾಖಿ
2. ದಾರಾಷಿಕೋ
3. ಸುರ್ಜಸ್ ರಾಯ್ ⚫
4. ಖಾಫಿಖಾನ್

54. ಯಾವ ಸಮಿತಿಯಲ್ಲಿ ಎರಡು ಸದನದ ಸದಸ್ಯರಿರುತ್ತಾರೆ?
1. ಯೋಜನಾ ಸಮಿತಿ
2. ಸಾರ್ವಜನಿಕ ಲೆಕ್ಕ ಪತ್ರಸಮಿತಿ ⚫
3. ಹಣಕಾಸು ಸಮಿತಿ
4. ರಕ್ಷಣಾ ಸಮಿತಿ

55. ಮೂಲಭೂತ ಹಕ್ಕುಗಳು ಮೂಲಭೂತವಾದವು ಎಂದು ಕರೆಯಲ್ಪಡಲು ಕಾರಣವೇನು?
1. ಸರ್ವೋಚ್ಚ ನ್ಯಾಯಾಲಯದಿಂದ ರಕ್ಷಿಸಲ್ಪಡುವುದು
2. ಸರ್ಕಾರದ ಕಾನೂನಿನ ಮೂಲಕ ತೆಗೆದು ಹಾಕಲು ಸಾಧ್ಯವಿಲ್ಲ
3. ಸಂವಿಧಾನದತ್ತವಾದವು
4. ಮಾನವನ ಬೆಳವಣಿಗೆಗೆ ಅಗತ್ಯವಾದ ಅಂಶಗಳು⚫

56. ಯೋಗಿನಾಥ ಎಂಬ ಅಂಕಿತನಾಮವನ್ನು ಹೊಂದಿದ್ದ ವಚನಕಾರರು ಯಾರು ?
1. ಸಿದ್ಧರಾಮ
2. ಸಕಲೇಶ ಮಾದರಸ
3. ಅಂಬಿಗರ ಚೌಡಯ್ಯ
4. ನಿಜಗುಣ ಶಿವಯೋಗಿ⚫

57. ತಮ್ಮ ಕ್ರೈಂ ಕಾದಂಬರಿಗಳ ಮೂಲಕ ಪ್ರಸಿದ್ಧಿ ಪಡೆದಿದ್ದ ಲೇಖಕಿಯರೊಬ್ಬರು ಇತ್ತೀಚೆಗೆ ನಿಧನರಾದರು. ಅವರು ಯಾರು ?
1. ಅರ್ಥರ್ ಮಿಲ್ಲರ್
2. ಸ್ಟ್ಯಾನ್ಲಿ ಗಾರ್ಡನರ್
3. ಅಗಥಾ ಕ್ರಿಸ್ಟೇ
4. ಪಿ.ಡಿ.ಜೇಮ್ಸ್⚫

23/01/2017
23/01/2017

DistrictsBagalkotBELAKUKarnatakaNewsಕಡುಬಡತನದಲ್ಲಿರೋ ಶಿವಪ್ಪ ಶಸ್ತ್ರಚಿಕಿತ್ಸೆಗೆ ಬೇಕಿದೆ ಸಹಾಯ By admin - January 21, 2017 Share on Facebook Tweet on Twitter tweet ಬಾಗಲಕೋಟೆ: ಒಂದು ಕಡೆ ಬೆಂಬಿಡದೇ ಕಾಡ್ತಿರೋ ಬಡತನ, ಇನ್ನೊಂದೆಡೆ ಮೂವರು ಮಕ್ಕಳು ಹಾಗೂ 35 ವರ್ಷದ ಗಂಡನನ್ನ ಸಾಕುವ ಜವಾಬ್ದಾರಿ ಮನೆಯ ಗೃಹಿಣಿಯ ಹೆಗಲೇರಿದೆ. ಆಕೆ ಕೂಲಿ ಮಾಡಿ ಜ...

Address

1st Floor, Radha Krishna Chowtry, Above Syndicate Bank
Hosadurga
577527

Opening Hours

Monday 9am - 6pm
Tuesday 9am - 6pm
Wednesday 9am - 6pm
Thursday 9am - 6pm
Friday 9am - 6pm
Saturday 9am - 6pm

Telephone

9686838482

Website

Alerts

Be the first to know and let us send you an email when Creative Computer Education Centre posts news and promotions. Your email address will not be used for any other purpose, and you can unsubscribe at any time.

Contact The School

Send a message to Creative Computer Education Centre:

Shortcuts

Share