Sri Idagunji Mela Keremane

Sri Idagunji Mela Keremane Sri Idagunji Mahaganapathi Yakshagana Mandali Keremane ® was established in 1934 by Late Sri KeremaneShivarama Hegde and is steadily growing over the year.

Mission of the Troupe

Sri Idagunji Mahaganapathi Yakshagana Mandali Keremane ® was established in 1934 by Late Sri Keremane
Shivarama Hegde and is steadily growing over the years. His son, late Sri Keremane Shambhu Hegde led the troupe to new heights during the last 40 years. Today the troupe is striding towards new goals under the dynamic stewardship of his grandson, Sri Keremane Shivananda Hegd

e. Mission of the troupe: * SHIKSHANA (Education) * RAKSHANA (Protection) * PRASARANA (Popularize)

ವಿಜಯನಗರ ಜಿಲ್ಲೆಯ, ಹೂವಿನ ಹಡಗಲಿ ತಾಲೂಕಿನ, ಹರಪನಹಳ್ಳಿ ಹತ್ತರದ ಒಂದು ಚಿಕ್ಕ ಗ್ರಾಮ  'ಕೋಮಾರನ ಹಳ್ಳಿ ತಾಂಡಾ'. ಈಗ ಸುಮಾರು 10 ವರ್ಷಗಳಿಂದ ಕೋ...
26/04/2026

ವಿಜಯನಗರ ಜಿಲ್ಲೆಯ, ಹೂವಿನ ಹಡಗಲಿ ತಾಲೂಕಿನ, ಹರಪನಹಳ್ಳಿ ಹತ್ತರದ ಒಂದು ಚಿಕ್ಕ ಗ್ರಾಮ 'ಕೋಮಾರನ ಹಳ್ಳಿ ತಾಂಡಾ'. ಈಗ ಸುಮಾರು 10 ವರ್ಷಗಳಿಂದ ಕೋಮಾರನಹಳ್ಳಿಯಲ್ಲಿ ಬಂಜಾರ ತಾಂಡದ ಸದಸ್ಯರು ಊರಿನವರನ್ನ ಒಗ್ಗೂಡಿಸಿ ಒಂದು ದಿನ ಕಾಲಾ ಮೆರವಣಿಗೆ, ಉತ್ಸವ, ಬಂಜಾರ ನೃತ್ಯ ಮತ್ತೆ ಸನ್ಮಾನ ಗೌರವ ಇತ್ಯಾದಿ ಇಲ್ಲಿನ ಹುಡುಗರು ಮಾಡಿಕೊಂಡು ಬರುತ್ತಿದ್ದಾರೆ. ಸರ್ ಈ ಉತ್ಸವಕ್ಕೆ ತಾವು ನಮ್ಮೂರಿಗೆ ಬರಬೇಕು ಎಂದು ಸಂಘಟಕ ಮತ್ತು ದೊಡ್ಡಾಟದ ಯುವ ಕಲಾವಿದ ಚೇತನ್ ರಾಜ್ ಪ್ರೀತಿಯಿಂದ ಕರೆಯುತ್ತಿದ್ದರು. ಆದರೆ ಹೋಗಲು ಆಗಿರಲಿಲ್ಲ.

ಸರ್ ಈಗ 2-3 ವರ್ಷದಿಂದ ತಮ್ಮನ್ನ ಕರೆಯುತ್ತಿದ್ದೇವೆ. ತಾವು ಪ್ರತೀ ವರುಷ ತಪ್ಪಿಸಿಕೊಳ್ಳುತ್ತಿದ್ದೀರಿ,
ಈ ಸಲ ಈ ಉತ್ಸವದಲ್ಲಿ “Folk Confluence International Award”ನ್ನು ತಮಗೆ ನೀಡುತ್ತಿದ್ದೇವೆ ಎಂದು ಚೇತನರಾಜ್‌ ಹೇಳಿದಾಗ; ಚೇತನ್‌.. ಈ ವರುಷ ಬೇಡ. ಮುಂದಿನ ವರ್ಷ ನೋಡುವಾ ಎಂದೆ. “ಸರ್ ಈ ಸಲ ತಾವು ತಪ್ಪಸುವ ಹಾಗೇ ಇಲ್ಲ. ನಾವೆಲ್ಲಾ ಹುಡುಗರು ಬೇರೆ ಬೇರೆ ಕಡೆಗೆ ಚದುರಿ ಹೋಗುತ್ತೇವೆ. ಮುಂದಿನ ವರುಷ ಈ ಉತ್ಸವ ಮಾಡುವ ಭರವಸೆ ಇಲ್ಲ. ದಯವಿಟ್ಟು ನಿರಾಕರಿಸಬೇಡಿ ಎಂದು ದುಗುಡ ಮತ್ತು ಒತ್ತಾಯದಿಂದ ಹೇಳಿದಾಗ ಏನೂ ಹೇಳಲು ತಿಳಿಯಲಿಲ್ಲ.

ಚೇತನರಾಜ್‌ ತನ್ನ ಪೋಸ್ಟರ್ ಗಳಲ್ಲಿ "ಪ್ರಶಸ್ತಿಗಳು ಮಾರಾಟಕ್ಕಿಲ್ಲ" ಎಂದು ಬರೆದ ಒಂದು ವಾಕ್ಯ ನನಗೆ ಕುತೂಹಲ ತಂದಿತು. ಇದೇನು ಅಂಥ ತಿಳಿಯಲಿಲ್ಲ ಎಂದೆ.
ಸರ್‌ , ಇಲ್ಲೆಲ್ಲಿ ಕೆಲವು ಕಡೆ ಹಣ ಕೊಟ್ಟು ಪ್ರಶಸ್ತಿ ನೀಡಿದ ಒಂದಿಷ್ಟು ಸಂಸ್ಥೆಗಳಿವೆ. ಹಾಗಾಗಿ ನನಗೂ ಅಂತಹ ಕರೆ ಬರಬಹುದು ಎಂದು ಮೊದಲೇ ಬ್ಯಾನರ್‌ಗಳಲ್ಲಿ ಹಾಕಿಬಿಟ್ಟಿದ್ದೇವೆ. ಯಾವುದೇ ಕಾರಣಕ್ಕೂ ಆಮಿಷಕ್ಕೆ ನಾವು ಬಲಿಯಾಗಬಾರದು ಎಂದು ಪೋಸ್ಟರ್ ನಲ್ಲೇ ಬರೆದಿದ್ದೇವೆ
ಎಂದಾಗ ನನಗೆ ಇವರ ನಿಲುವು ತುಂಬಾ ಇಷ್ಟವಾಯಿತು. ಈ ಹುಡುಗರ ಪ್ರಾಮಾಣಿಕತೆಗೆ ಬಹಳ ಗಟ್ಟಿತನ ಇದೆ. ಒಂದು ಒಳ್ಳೆಯ ಆಶಯ ಇದೆ ಎಂದು, ಓಕೆ ಬರುತ್ತೇನೆ ಎಂದೆ.
ಸ್ವತಹ ದೊಡ್ಡಾಟದ ಕಲಾವಿದ ಈ ಚೇತನ್ ರಾಜ್. ಅವರದ್ದೇ ಒಂದು ದೊಡ್ಡಾಟದ ತಂಡ ಕೂಡಾ ಇದೆ. ಈಗ ನಾಲ್ಕಾರು ವರ್ಷಗಳ ಹಿಂದೆ ಶ್ರೀಮತಿ ಸುಮಾ ವಿಜಯ್ (ಮಾನ್ಯ ಎಂ.ಪಿ. ಪ್ರಕಾಶರ ಸುಪುತ್ರಿ) ಅವರೊಂದಿಗೆ ಬಂದು ನಮ್ಮ ನಾಟ್ಯೋತ್ಸವದಲ್ಲಿ ಇವರು ಭಾಗವಹಿಸಿದ್ದರು. ಅದೇ ಪರಿಚಯದ ಆಧಾರದಲ್ಲಿ ಅವರು ನನಗೆ ನಮ್ಮೂರಿಗೆ ಬನ್ನಿ ಎಂದು ಪದೇ ಪದೇ ಕರೆದರೂ ಯಾಕೋ ಹೋಗಲು ಆಗಿರಲಿಲ್ಲ.
ನಮ್ಮೂರಿಂದ ಸಿರ್ಸಿ, ಹಾವೇರಿ, ಹೂವಿನ ಹಡಗಲಿಗೆ ಹೋಗಿ ಅಲ್ಲಿಂದ ಕೋಮಾರನಹಳ್ಳಿ ತಾಂಡಕ್ಕೆ ಹೋಗಬೇಕು!!. ದೂರ ಬೇರೆ. ಆದರೆ ಪ್ರೀತಿಯ ಕರೆಯನ್ನ ಎಷ್ಟು ನಿರಾಕರಿಸಲು ಸಾಧ್ಯ..
ಅಂತೂ ಅವರು ಕೊಟ್ಟ ದಿನಾಂಕ ಮಾರ್ಚ್‌ 21ಕ್ಕೆ ಅಲ್ಲಿಗೆ ಹೋದೆ.

ಒಟ್ಟಾರೆಯಾಗಿ ಒಂದು ಗ್ರಾಮೀಣ ಪ್ರದೇಶದ ಯುವಕರು ಮಾಡುವ ಈ ಉತ್ಸವಕ್ಕೆ ಬೇರೆ ಬೇರೆ ದೇಶದಿಂದ ಕೂಡ ಈ ಸಲ ಪ್ರಶಸ್ತಿ ಸ್ವೀಕರಿಸಲು ಸಾಧಕರು ಬಂದಿದ್ದರು. ಬಂಜಾರ ಸಮಾಜದವರು ಈ ದೇಶದಲ್ಲಿ ಸುಮಾರು 5 ಕೋಟಿಯಷ್ಟು ಇದ್ದಾರಂತೆ. ಈ ಕೋಮಾರನಹಳ್ಳಿ ತಾಂಡದಲ್ಲಿ ಸುಮಾರು 6-7 ಸಾವಿರ ಜನ ಇದ್ದಾರೆ. ಅಂದಿನ ಇಡೀ ಊರೇ ಅಲ್ಲಿ ನೆರೆದಿತ್ತು. ವೇದಿಕೆಯಲ್ಲಿ ಹಲವರಿಗೆ ಸನ್ಮಾನ, ಹಾಡು, ಕುಣಿತ, ಬಂಜಾರ ಸ್ತ್ರೀಯರ ಗಾಯನ ಹೀಗೆ ಹತ್ತು ಹಲವು. ಚಂದ ಚಂದದ ಬಂಜಾರಾ ಕಸೂತಿಯ ಬಟ್ಟೆ ಧರಿಸಿ ಅನೇಕರು ಸಂಭ್ರಮದಿಂದ ಉತ್ಸವದಲ್ಲಿ ಭಾಗವಹಿಸಿದರು. ಒಂದು ಸಮುದಾಯದ ಸಂಭ್ರಮ, ಬಂಜಾರಾ ಸಾಂಸ್ಕೃತಿಕ ಬದುಕು ಅನಾವರಣಗೊಂಡಿತು. ಪದ್ಮಶ್ರೀ ಮಂಜಮ್ಮ ಜೋಗತಿ ತಮ್ಮ ಮಾತುಗಳಲ್ಲಿ ಬಂಜಾರಾ ಸಮಾಜ ಎದ್ದು ನಿಲ್ಲುವಂತೆ ಕರೆನೀಡಿದರು .ತನ್ನ ಪ್ರಭಲ ಮಾತುಗಳಿಂದ ಆ ಸಮಾಜಕ್ಕೆ ಉತ್ತಮ ಸಂದೇಶ ನೀಡಿದರು. ಆತ್ಮ ವಿಶ್ವಾಸ ತುಂಬುವ ಅವರ ಭಾಷಣ ಸರ್ವರ ಗಮನ ಸೆಳೆಯಿತು.

ಅಂತೂ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು. ನಿಂತಲ್ಲಿ ಕೂತಲ್ಲಿ ಒಬ್ಬರಲ್ಲ ಒಬ್ಬರು ಇದ್ದು ಏನು ಬೇಕು ಎಂದು ಯಾವೂದೇ ಕೊರತೆ ಆಗದಂತೆ ನೋಡಿಕೊಂಡರು. ಅವರೆಲ್ಲರ ಪ್ರೀತಿಯ ಗೌರವ, ಆತ್ಮೀಯತೆ ಬಹುದೊಡ್ಡದು. ಚೇತನರಾಜ್‌ ಸ್ವತಹ ದೊಡ್ಡಾಟಕ್ಕೆ ತನ್ನನ್ನ ಅರ್ಪಿಸಿಕೊಂಡ ಒಳ್ಳೆಯ ಕಲಾವಿದ.

ಈ ಊರ ಮುಖ್ಯ ದೇವತೆ "ಸಾಮಕಿ ಮಾತಾ" ಒಂದು ಸುಂದರ ಕಪ್ಪು ವಿಗ್ರಹ. ಸಾಮಕಿ ಅಂದರೆ ಶಾಮ ವರ್ಣಕ್ಕೆ ಸಂಬಂಧಿಸಿದ ಶಬ್ದ. ಅಂದರೆ ಸಂಜೆಯ ದೇವತೆ ಇರಬಹುದು ಎಂದು ನನ್ನ ಊಹೆ. ಕಪ್ಪು ಶಿಲೆಯ ಈ ಮೂರ್ತಿಗೆ ಕೈಮುಗಿದು
ಊರಿಗೆ ಹೊರಡುವಾಗ ಸುತ್ತಲೂ ಕತ್ತಲೆ! ಆದರೆ ಒಟ್ಟಿಗೆ ಸಂಭ್ರಮ ಕೂಡಾ ತುಂಬಿತ್ತು !! ಶ್ಯಾಮ ಕಿ ಮಾತಾ ಮುಖದ ಮಂದಹಾಸ ನೆನೆಯುತ್ತಾ ಚೇತನ್ ರಾಜ್ ಹಾಗೂ ಅವರ ತಂಡಕ್ಕೆ ಧನ್ಯವಾದ ಹೇಳಿದೆ. ಅವರಿಗೆಲ್ಲಾ ನಮ್ಮೂರಿಗೆ ಬಂದು ದೊಡ್ಡಾಟ ಆಡಬೇಕಂತೆ. ಓಹೋ..ಖಂಡಿತಾ ಬನ್ನಿ ಮಾಡೋಣ ಎಂದು ಹೇಳಿ ಬೀಳ್ಗೊಂಡೆ. ಚೇತನ್ ರಾಜ್ ಹಾಗೂ ಅವರ ತಂಡಕ್ಕೆ ಧನ್ಯವಾದಗಳು.🙏🤝

25/01/2026

Yakshangana Idagunj Mahaganpati Temple today.
All are welcome 🙏💐

ಮೊನ್ನೆ ದಿನಾಂಕ  ಜನವರಿ ೧೪ ರಂದು ದೇಶದ ರಾಜಧಾನಿ ದೆಹಲಿಯ ಪ್ರತಿಷ್ಠಿತ ಕಲಾಮಂದಿರವಾದ  #ಕಮಾನಿ ಯಲ್ಲಿ ಸಂಪನ್ನಗೊಂಡ ಮಂಡಳಿಯ ನೂತನ ಪ್ರಸಂಗ  #ಗಿ...
17/01/2026

ಮೊನ್ನೆ ದಿನಾಂಕ ಜನವರಿ ೧೪ ರಂದು ದೇಶದ ರಾಜಧಾನಿ ದೆಹಲಿಯ ಪ್ರತಿಷ್ಠಿತ ಕಲಾಮಂದಿರವಾದ #ಕಮಾನಿ ಯಲ್ಲಿ ಸಂಪನ್ನಗೊಂಡ ಮಂಡಳಿಯ ನೂತನ ಪ್ರಸಂಗ #ಗಿರಿಜಾ #ಕಲ್ಯಾಣ ಯಕ್ಷಗಾನ ನೆರೆದ ಪ್ರೇಕ್ಷಕರ ಮನ ಮೆಚ್ಚಿಸುವಲ್ಲಿ ಯಶಸ್ಸು ಪಡೆಯಿತು ಎಂದು ಅಲ್ಲಿ ನೆರೆದಿದ್ದ ಅನೇಕ ಗಣಮಾನ್ಯ ಕಲಾವಿದರು, ವಿಮರ್ಶಕರು, ಸಹ್ರದಯಿ ಪ್ರೇಕ್ಷಕರು ಅಭಿಪ್ರಾಯ ತಿಳಿಸಿದರು. ಇದು ಸಮಗ್ರ ಯಕ್ಷಗಾನಕ್ಕೆ ಸಂದ ಗೌರವ. 🤗
ಪದ್ಮ ವಿಭೂಷಣ ಡಾ ಸೋನಾಲ್ ಮಾನಸಿಂಗ್ ಅವರ ಘನ ಮಾರ್ಗದರ್ಶನ ಮತ್ತು ಉಸ್ತುವಾರಿಯಲ್ಲಿ ದೇಶದ ವಿವಿಧ ಕಲಾಪ್ರಕಾರಗಳ ಗಣ್ಯಾತಿಗಣ್ಯರು ತಮ್ಮ ಕಲಾತಂಡದ ಹೊಸ ಪ್ರಯೋಗವನ್ನ ಈ ಉತ್ಸವಕ್ಕಾಗಿಯೇ ವಿಶೇಷವಾಗಿ ರೂಪಿಸಿಕೊಂಡು ಬಂದಿದ್ದರು. ಕೇವಲ ೪೫ ನಿಮಿಷಗಳ ಅವಧಿಯಲ್ಲಿ ತಮ್ಮ ತಮ್ಮ ಕಲಾಪ್ರಕಾರದ ಶಕ್ತಿ, ಸಾಮರ್ಥ್ಯವನ್ನ ಅನೇಕ ಕಲಾಸಾಧಕರ ಸಮ್ಮುಖದಲ್ಲಿ ಪ್ರಸ್ತುತ ಪಡಿಸುವುದು ಒಂದು ಸವಾಲು. ನಮ್ಮ ಮಂಡಳಿಗೆ ಅದರಲ್ಲೂ ಇಂಥ ವೇದಿಕೆಯಲ್ಲಿ ಯಕ್ಷಗಾನಕ್ಕೆ ಸಿಕ್ಕ ಅವಕಾಶ ಅಪರೂಪ ಮತ್ತು ಅಪೂರ್ವ. ಎಲ್ಲಾ ಪ್ರಶಂಸೆಗಳು ಯಕ್ಷಗಾನ ಕಲಾ ದೇವಿಗೆ ಅರ್ಪಣೆ.👏
ಈ ಅವಕಾಶ ಮತ್ತು ಅಪೂರ್ವ ಕಲ್ಪನೆಯ ಉತ್ಸವದ ರೂವಾರಿ ಡಾ ಸೋನಾಲ್ ಮಾನಸಿಂಗ್ ಅವರಿಗೆ ಮತ್ತು ಅಂದು ಅಲ್ಲಿ ನೆರೆದ ಎಲ್ಲಾ ಕಲಾಪ್ರೇಮಿಗಳ ಪ್ರೋತ್ಸಾಹಕ್ಕೆ ಮಂಡಳಿಯ ಸಮಸ್ತ ಕಲಾವಿದರ ಪರವಾಗಿ ವಿಶೇಷ ಕ್ರತಜ್ಞತೆ ಸಲ್ಲಿಸುತ್ತೇನೆ.🙏🥰🙏

On the 14th of this month, at Kamani Auditorium—one of the most prestigious cultural venues in the nation’s capital, New Delhi—the Mandali’s new Yakshagana production ” was successfully staged as part of the Festival of New Choreographies (KalaYatra 2026), a prestigious cultural celebration featuring eminent dance groups from across India. The presentation was deeply appreciated by the audience, with several eminent artists, critics, and discerning art lovers expressing that the performance truly touched their hearts. This stands as a great honor to Yakshagana as an art form as a whole.🤗

This renowned festival, curated by the Centre for Indian Classical Dances (Shri Kamakhya Kalapeeth) and Padma Vibhushan Dr. , is a rare platform that showcases excellence in Indian classical and traditional performing arts. Distinguished exponents from various art forms across the country specially curated and presented new experimental works exclusively for this festival.

To present the strength and depth of one’s art form before numerous accomplished artistes—within a limited duration of just 45 minutes—is in itself a great challenge. For our Mandali, and especially for Yakshagana, receiving such an opportunity on a platform of this stature is both rare and extraordinary.👍

All the appreciation and accolades received are humbly dedicated to the divine spirit of Yakshagana. I express my heartfelt gratitude to the Centre for Indian Classical Dances (Shri Kamakhya Kalapeeth) and Dr. Sonal Mansingh for curating and presenting this visionary festival, and to all the art lovers who were present for their encouragement and support. 🙏

In conclusion, with immense joy, I express my heartfelt gratitude to the festival organizers, the distinguished audience, and the entire art fraternity for their encouragement and support.

The festival continues with its final two days on 28th and 29th January, featuring outstanding performances by eminent groups from across India. On 28th January, “Duryodhana” by Srijan – Guru Kelucharan Mohapatra Odissi Nrityabasa, Odisha, and “Chakravyuh” by Shriram Bharatiya Kala Kendra, New Delhi. On 29th “Saugandhikaharanam” by Chidakash Kalalay, Bengal, and “Matrika” by the Rainbow Dance Group, Bengal. Art lovers are warmly invited to join and support these inspiring presentations.🤗🙏



https://www.facebook.com/share/p/17nqVg8DQg/

ಹಿರಿಯ ಪ್ರಸಂಗಕರ್ತ, ಅರ್ಥಧಾರಿ,ಸಹೃದಯಿ ಕವಿ,ನಾಟಕಕಾರ, ಶಿಕ್ಷಕರು ಆದ ಮಾನ್ಯ ಕಂದಾವರ ರಘುರಾಮ ಶೆಟ್ಟರು ಮೊನ್ನೆ ದಿ ೨೬-೧೧-೨೦೨೫ ರಂದು ನಮ್ಮನ್ನ...
29/11/2025

ಹಿರಿಯ ಪ್ರಸಂಗಕರ್ತ, ಅರ್ಥಧಾರಿ,ಸಹೃದಯಿ ಕವಿ,ನಾಟಕಕಾರ, ಶಿಕ್ಷಕರು ಆದ ಮಾನ್ಯ ಕಂದಾವರ ರಘುರಾಮ ಶೆಟ್ಟರು ಮೊನ್ನೆ ದಿ ೨೬-೧೧-೨೦೨೫ ರಂದು ನಮ್ಮನ್ನ ಅಗಲಿದ್ದಾರೆ. ಮಾನ್ಯರಿಗೆ #ಕೆರಮನೆ #ಶಂಭು #ಹೆಗಡೆ #ರಾಷ್ಟ್ರೀಯ #ನಾಟ್ಯೋತ್ಸವ ೧೪ ರ ಎರಡನೇ ದಿನ ದಿನಾಂಕ:೧೭.0೩.೨೦೨೪ ಭಾನುವಾರದಂದು ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ #ನಾಟ್ಯೋತ್ಸವ #ಸಂಮಾನ ನೀಡಿ ಗೌರವಿಸಲಾಗಿತ್ತು.
ಶ್ರೀಯುತರು ತಮ್ಮ ಮನೆಗೆ ಬನ್ನಿ ಎಂದು ಎಷ್ಟೋ ಸಲ ಹೇಳಿದ್ದರೂ ನನಗೆ ಅವರನ್ನ ಮನೆಯಲ್ಲಿ ಭೇಟಿ ಆಗಲು ಸಾಧ್ಯವಾಗಿಲ್ಲ. ಅವರ ಸಹ್ರದಯತೆ,ಸಿದ್ಧಿ, ಸಾಧನೆಗೆ ತಲೆಬಾಗಿ ನಮಿಸುವೆ. ಯಕ್ಷಗಾನ ಕ್ಷೇತ್ರಕ್ಕೆ ಅವರ ಕೊಡುಗೆ ಅಮರ. 👏
ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಕೆರೆಮನೆ (ರಿ)ಯ ಸಮಸ್ತರ ಪರವಾಗಿ ಪೂಜ್ಯ ರಘುರಾಮ ಶೆಟ್ಟಿ ಇವರಿಗೆ ಗೌರವದಿಂದ ಶ್ರದ್ಧಾಂಜಲಿ ಸಮರ್ಪಿಸುತ್ತೇನೆ. ಅವರ ಕುಟುಂಬದ ಸರ್ವರಿಗೂ ಭಗವಂತ ಈ ಅಗಲುವಿಕೆಯನ್ನ ಸಹಿಸಲು ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ 🙏 🙏

28/01/2025

15th edition of KSH Rastriya Natyothsava..🥰🙏🤝

Subhadra Kalyan..
25/09/2024

Subhadra Kalyan..

Subadra Kalyana 3-Jul-11 @ Havyaka Bangalore- A program by SapthakKeremane Shivanand Hegde - KrishnaHadinbala Sripad Hegde - BalaramaAnant Hegde Dantalike - ...

Address

Gunavante
Honavar
581348

Alerts

Be the first to know and let us send you an email when Sri Idagunji Mela Keremane posts news and promotions. Your email address will not be used for any other purpose, and you can unsubscribe at any time.

Contact The School

Send a message to Sri Idagunji Mela Keremane:

Shortcuts

Share