08/03/2020
*ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆ ಹಳ್ಳಿಬೈಲ್ (ತುರಬಿಗುಡ್ಡ)
ಹಳೆವಿದ್ಯಾರ್ಥಿ ಮತ್ತು ಶಿಕ್ಷಕರ ಸ್ನೇಹಕೂಟ ಮತ್ತು ಶಿಕ್ಷಕರಿಗೆ ಸನ್ಮಾನ*
ಮುಖ್ಯವಾಗಿ ಆಗಬೇಕಾದ ಕೆಲಸಗಳು.
ಅವುಗಳಲ್ಲಿ ಯಾವುದನ್ನು ಆಯ್ಕೆ ಮಾಡಬೇಕು!. ಏನೆಲ್ಲ ಮಾಡಬಹುದು?.
ನನ್ನ ಅನಿಸಿಕೆ ಹಿಗಿದೆ
೧). ಹಳೆಯ ವಿದ್ಯಾರ್ಥಿಗಳ ಸಂಘ ಕಟ್ಟುವುದು ( ಇದಕ್ಕೆ ಸಂಬಂಧಿಸಿದಂತೆ ಪರ್ಮಿಷನ್ ?. ರೂಲ್ಸ್ ರೆಗುಲೇಶನ್) ಎಪ್ರಿಲ್ ಅಥವಾ ಮೇ ಒಳಗಾಗಿ ಈ ಕೆಲಸ ಮುಗಿಸಬೇಕು .
೨). ಕೂಟಕ್ಕೆ ಸ್ಥಳ ಮತ್ತು ದಿನಾಂಕ ನಿಗದಿ ಪಡಿಸುವುದು. ವಾರ ಮುಂಚಿತವಾಗಿ ಸ್ಥಳ ಬೇಟಿ ಪರಿಶೀಲನೆ ಆಗಬೇಕಾದ ಕೆಲಸಗಳ ಬಗ್ಗೆ ಸಭೆ ನಡೆಸುವುದು.
೩). ಯಾವ್ಯಾವ ಬ್ಯಾಚ್ ಗಳನ್ನು ಕೂಟಕ್ಕೆ ಒಳಪಡಿಸಬೇಕೆಂದು ನಿರ್ಧರಿಸುವುದು (ಮೊದಲ ೫-೧೦ ಬ್ಯಾಚ್ ಗಳು ಕಂಪಲ್ಸರಿ ಇರುತ್ತದೆ
ಮಿಕ್ಕ ಬ್ಯಾಚ್ ವಿದ್ಯಾರ್ಥಿಗಳ ಓಪಿನಿಯನ್ ಕೇಳುವುದು & ಅವರ ಪಾಲ್ಗೊಳ್ಳುವಿಕೆ ಮೇಲೆ ನಿರ್ಧಾರ ಆಗಿರುತ್ತದೆ.10+ ಬ್ಯಾಚು ಮೇಲೆ ಇದ್ದರೆ ಇನ್ನೂ ಸಂತೋಷದ ವಿಷಯ!.. )
೪). *ಪ್ರತಿ ವಿದ್ಯಾರ್ಥಿಗಳಿಂದ ನಿಗದಿಪಡಿಸಿದ ಹಣದ ಮೊತ್ತವನ್ನು ಶೇಖರಿಸುವುದು. ಹಾಗೂ ಜಾಸ್ತಿ ಮೊತ್ತ ಕೊಡುವವರು ಧಾರಾಳವಾಗಿ ಕೊಡಬಹುದು ಇದರಿಂದ ಬಹಳ ಅನುಕೂಲವಾಗುತ್ತದೆ. ಎಲ್ಲರೂ ಹಣದ ಅನುಕೂಲತೆ ಅವರ ಪರಿಸ್ಥಿತಿ ಮೇಲೆ ಅವಲಂಬಿತವಾಗಿರುತ್ತದೆ ಹೀಗಾಗಿ*
(ಕಾರ್ಯಕ್ರಮವಾಗಿ ಉಳಿದ ಹಣವನ್ನು ವಿದ್ಯಾರ್ಥಿ ಸಂಘದ ಬ್ಯಾಂಕ್ ಖಾತೆಗೆ ಕಟ್ಟಬೇಕು)
೫). ಎಲ್ಲಾ ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಮಾಹಿತಿ ತಲುಪಿಸುವುದು. ಅವರಿಗೆ ಬಿಡುವು ಮಾಡಿಕೊಳ್ಳಲು ಮುಂಚಿತವಾಗಿ ತಿಳಿಸಬೇಕು.
ನಿಗದಿಪಡಿಸಿದ ಬ್ಯಾಚ್ ಗಳ ವಿದ್ಯಾರ್ಥಿಗಳು ಬರಲೇಬೇಕು! ಬಂದಿಲ್ಲವೆಂದರೆ?
೬). ಹಳೆ ವಿದ್ಯಾರ್ಥಿ ಸಂಘದಿಂದ ಶಾಲೆಗೆ ಏನಾದರೂ ಕೊಡಿಸುವುದು. ಈ ಸ್ನೇಹದ ಕೂಟದ ಅಂಗವಾಗಿ ಏನಾದರೂ ನೆನಪುಳಿಯುವಂತೆ . ( ಹಾಗೂ ಜೊತೆಗೆ ಮರಗಳನ್ನು ನೆಡಬಹುದು, ಹಳೆ ವಿದ್ಯಾರ್ಥಿಗಳ ಸಂಘ ಲೊಗೊ ಬಗ್ಗೆ ನನ್ನ ಆಲೊಚನೆ ಇದೆ 😅 ಅದನ್ನು ಕೂಡ ಸಿದ್ಧಪಡಿಸುತ್ತೆನೆ )
೭). ಕಾರ್ಯಕ್ರಮವನ್ನು ಯಾವ ಮಟ್ಟದಲ್ಲಿ ಮಾಡಬೇಕೆಂದು ಎಲ್ಲರೂ ಕೂಡ ನಿರ್ಧರಿಸುವುದು. ಪೆಂಡಾಲ್ ಅವಶ್ಯಕತೆ ಎಲ್ಲಾ?. ಕಾರ್ಯಕ್ರಮಕ್ಕೆ ಎಷ್ಟು ಹಣ ಬೇಕೆಂಬುದನ್ನು ಕೂಡ ನಿರ್ಧರಿಸಬೇಕು. ಹಣವನ್ನು ವಿದ್ಯಾರ್ಥಿಗಳ ಸಂಘ ಮಾತ್ರ ಬರಿಸತಕ್ಕದ್ದು( ಯಾರಾದರೂ ದಾನಿಗಳು ಮುಂದೆ ಬಂದರೆ ಸಂತೋಷದ ವಿಷಯ)
೮) ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಬಗ್ಗೆ ಚರ್ಚೆಯಾಗಬೇಕು.ಹಳೆಯ ಶಾಲೆಯ ಈಗಿನ ವಿದ್ಯಾರ್ಥಿಗಳನ್ನು ಬಳಸಿಕೊಳ್ಳಬಹುದು ಹಾಗೂ ನಮ್ಮ ಹಳೆಯ ವಿದ್ಯಾರ್ಥಿಗಳು ಕೂಡ ಪಾಲ್ಗೊಳ್ಳಬಹುದು
೯). ಕಾರ್ಯಕ್ರಮದಲ್ಲಿ ಊಟ ಮತ್ತು ಆಟೋಪಚಾರಗಳ ಬಗ್ಗೆ ವಿಚಾರಗಳ ಬಗ್ಗೆ ಚರ್ಚೆಯಾಗಬೇಕಿದೆ .
೧೦). ಕಾರ್ಯಕ್ರಮವನ್ನು ಎಷ್ಟು ದಿನ ಮಾಡಬೇಕು ಒಂದು ಅಥವಾ ಎರಡು ದಿನ? .
ಒಂದು ರಾತ್ರಿ ಎಲ್ಲರೂ ಕಳೆದರೆ ಫೈರ್ ಕ್ಯಾಂಪ್ ಇತರ ಚಟುವಟಿಕೆಗಳನ್ನು ಮಾಡಬಹುದು. ಇದನ್ನು ನಿರ್ಧರಿಸಬೇಕಿದೆ!.
೧೧.ಹಳೆವಿದ್ಯಾರ್ಥಿಗಳ ಸಂಘಕ್ಕೆ ಪ್ರತಿ ಬ್ಯಾಚ್ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಬೇಕು ಅವರಿಗೆ ಎಲ್ಲ ಕೆಲಸಗಳನ್ನು ವಹಿಸಬೇಕು. ಒಂದು ಬ್ಯಾಚ್ ನಿಂದ ಇಬ್ಬರಿಂದ ಮೂವರು ಕಂಪಲ್ಸರಿ ಆ ಬ್ಯಾಚ್ ಸದಸ್ಯನಿಗೆ ಸಹಾಯಕ್ಕೆ ಬರಬೇಕು.
೧೨). ಒಬ್ಬ ಸರ್ಕಾರಿ ಅಧಿಕಾರಿ / ಖ್ಯಾತ ವ್ಯಕ್ತಿಗಳನ್ನು ಆಹ್ವಾನಿಸಬಹುದೆ?..
ಇಂತಿ ನಿಮ್ಮ
- ನಟರಾಜ್ ಕೆವ್ಹಿ
ಹಳೆಯ ವಿದ್ಯಾರ್ಥಿ
ಬ್ಯಾಚ್: ೫ (೨೦೦೧-೨೦೦೭)