22/03/2018
ಇತ್ತೀಚಿಗೆ ನಿವೃತ್ತಿ ಹೊಂದಿದ ಕುಲಕರ್ಣಿ ಸರ್ ಸಂದೇಶ ನಿಮಗೆಲ್ಲರಿಗೂ.
ಎಲ್ಲ ನನ್ನ ಪ್ರೀತಿಯ ವಿದ್ಯಾರ್ಥಿಗಳೇ,
ಪ್ರತಿಯೊಬ್ಬ ಶಿಕ್ಷಕರಿಗೂ ನಮ್ಮ ವಿದ್ಯಾರ್ಥಿಗಳೇ ನಮ್ಮ ಸಂಪತ್ತು. ಮಕ್ಕಳೇ ನಮ್ಮ ಅವಿಭಾಜ್ಯ ಅಂಗ. ತಾವು ಎಲ್ಲಿಯೇ ಇರಲಿ, ಹೇಗೆ ಇರಲಿ ಸುಖವಾಗಿರಲಿ ಎಂಬುದು ನಮ್ಮ ಆಸೆ. ನಿಮ್ಮ ಹೆಸರು ನೆನಪಾದಾಗ, ನಿಮ್ಮನ್ನು ಹಾಗು ನಿಮ್ಮ ಕುಟುಂಬದವರನ್ನು ನೋಡಬೇಕೆನಿಸಿದಾಗ ಈಗಿನ ತಂತ್ರಜ್ಞಾನ “facebook” ಆದರಣೀಯ. ಇಲ್ಲಿಂದಲೇ ನಿಮ್ಮೆಲ್ಲರನ್ನೂ ನೋಡಿ ಸಂತೋಷಪಡುತ್ತೇನೆ.
ನಿಮ್ಮನು ಸಾಕು ಬೆಳೆಸಿ, ನಿಮಗೆ ಕೈ ತುತ್ತು ನೀಡಿ ಬೆಳೆಸಿದ ನಿಮ್ಮ ತಂದೆ ತಾಯಿಯರನ್ನು ಜೋಪಾನವಾಗಿ ಕಾಪಾಡಿರಿ. ನೀವು ನಿಮ್ಮ ಮಕ್ಕಳನ್ನು ಜೋಪಾನ ಮಾಡುವಾಗ ನಿಮ್ಮ ತಂದೆ ತಾಯಿ ಮಾಡಿದ ತ್ಯಾಗ ನೆನದಾಗ ನಿಮ್ಮ ಕಣ್ಣಂಚಿನಲ್ಲಿ ಒಂದು ಕಣ್ಣೀರು ಬಾರದೆ ಇರದು. ಅವರೇ ದೇವರು ಅವರನ್ನು ಆದರಿಸಿ ಗೌರವಿಸಿ.
ಮಕ್ಕಳ ಅಭಿವೃದ್ದಿಗಾಗಿ ತನ್ನ ಕಷ್ಟವನ್ನು ಇನ್ನೊಬ್ಬರಿಗೆ ಹಂಚಿಕೊಳ್ಳದೇ ನೀವು ಮಲಗಿದಾಗ , ನೀವು ಸುಖ ನಿದ್ರೆಯಲ್ಲಿದ್ದಾಗ, ನಿಮ್ಮ ತಂದೆ ತಾಯಿ ರಾತ್ರಿ ಕಣ್ಣೀರು ಸುರಿಸಿದ ದಿನಗಳು ಅದೆಷ್ಟೋ?. ನಿಮ್ಮ ಶ್ರೇಯಸ್ಸಿಗಾಗಿ ಸಾಲ ಮಾಡಿ , ಓದಿಸಿ ವಿದ್ಯಾವಂತರನ್ನಾಗಿ ಮಾಡಿ, ಮದುವೆ ಮಾಡಿಸಿ ನಿಮ್ಮ ಸುಖದಲ್ಲಿ ತಮ್ಮ ನೋವನ್ನು ಮರೆತ ಆ ಜೀವಿಯ ಪ್ರೀತಿಗೆ ಬೆಲೆ ಕಟ್ಟಬಲ್ಲೀರಾ ? ನಿಮ್ಮ ಮಕ್ಕಳನ್ನು ತಮ್ಮ ಪಕ್ಕದಲ್ಲಿಯೇ ಮಲಗಿಸಿಕೊಂಡು ನಿದ್ದೆಗೆಟ್ಟ ಆ ಕಂಗಳ ಕಣ್ಣೀರ ಒರಸುವರಾರು?. ನೀವು ಲಕ್ಷ ಲಕ್ಷ ಗಳಿಸಿರಬಹುದು, ದೊಡ್ಡ ಮನೆ ಕಟ್ಟಿರಬಹುದು ಇದೆಲ್ಲ ನಿಮ್ಮ ತಂದೆ ತಾಯಿಗಳು ಮಾಡಿದ ಪ್ರೀತಿಯ ಆಶೀರ್ವಾದವೇ ಕಾರಣ. ಚಿಕ್ಕವರಿದ್ದಾಗ ನಿಮ್ಮ ಮೃದು ಕಾಲಿನಿಂದ ತಂದೆ ತಾಯಿಗೆ ಒದ್ದಾಗ ಆನಂದಪಟ್ಟರು. ಅದೇ ಈಗ ನಿಮ್ಮ ಕೈಗಳು ಸ್ವಲ್ಪ ಬಲಿತಾಗ , ನಿಮ್ಮ ನಿಂದನೆಯ ಮಾತೇ ಸಾಕು ಅಂದು ಸಂತೋಷಪಟ್ಟವರು ಇಂದು ಕಣ್ಣೀರು ಹಾಕುತ್ತಾರೆ. ನಮ್ಮಂತೆ ನಮ್ಮ ಸಂಸ್ಕೃತಿ ನಾವು ಇಂದು ಗೌರವಿಸಿದರೆ, ನಾಳೆ ನಮ್ಮ ವೃಧ್ಯಾಪದಲ್ಲಿ ನಮ್ಮನ್ನು ನಮ್ಮ ಮಕ್ಕಳು ಗೌರವಿಸುತ್ತಾರೆ. ನಿಮ್ಮ ಕಣ್ನನಂಚಿನಲ್ಲಿ ಒಂದು ಹನಿ ಬಂದರೆ ಸಾಕು.
ನಾವು ಈಗ ತಂದೆ ತಾಯಿ ಆಗಿದ್ದೇವೆ ನಿಜ, ನಮ್ಮ ಮಕ್ಕಳು ಅತೀ ಚಿಕ್ಕವರಿದ್ದಾಗ ನಮ್ಮ ಎದೆಗೆ ಒಡೆಯುತ್ತವೆ, ಮೈಮೇಲೆ ಹೇಸಿಗೆ ಮಾಡುತ್ತವೆ, ಆಗ ಎಂದೂ ಮಕ್ಕಳನ್ನು ದೂಷಿಸುದಿಲ್ಲ ಬದಲಾಗಿ ಆ ಮುಗ್ದ ನಗುವಿನಲ್ಲಿ ನಮ್ಮೆಲ್ಲ ದುಃಖಗಳನ್ನು ಮರೆಯುತ್ತೇವೆ. ಪ್ರತಿ ದಿನ ಆ ಮಕ್ಕಳನ್ನು ಎತ್ತಿಕೊಂಡು ಆ ಪುಟ್ಟ ಕೈಯಿಂದ ನಾವೇ ಹೊಡೆಸಿಕೊಂಡು ನಗುತ್ತೇವೆ. ಹಾಗೆ ತಾಯಿ ಮಗು ಅತ್ತಾಗ ಇಡೀ ಸಮಾಜವನ್ನು ಧಿಕ್ಕರಿಸಿ ಹಾಲು ಕೊಡುತ್ತಾಳಲ್ಲವೇ ? ನಮಗೆ ಅನಾರೋಗ್ಯವಾದಾಗ ಹಗಲು, ರಾತ್ರಿ ಅನ್ನದೆ ನಮ್ಮನ್ನು ಆರೈಕೆ ಮಾಡುವ ಆ ತಾಯಿಗೆ .. ನಮಗೆ ಹಬ್ಬಗಳಲ್ಲಿ , ಬಟ್ಟೆ ಕೊಡಿಸಿ, ನಮ್ಮ ಸಂತೋಷದಲ್ಲಿ ತಮ್ಮನ್ನೇ , ತಮ್ಮ ಬಡತನವನ್ನು ಮರೆತು ಸಂತೋಷ ಪಡುತ್ತಾರೆ. ಇದಕ್ಕೆ ಎಷ್ಟು ಬೆಲೆ ಕಟ್ಟಬಲ್ಲಿರಿ?.
ಧನ್ಯವಾದಗಳು.
ವಿ.ಸೂ: ಈ ಲೇಖನವನ್ನು ಶ್ರೀ ಕುಲಕರ್ಣಿ ಸರ್ ಪರವಾನಿಗೆ ಪಡೆದು ಪ್ರಕಟಿಸಲಾಗಿದೆ.
Murlidhar Kulkarni