28/01/2025
ಇದೊಂದು ಉತ್ತಮ ಅವಕಾಶ...
ಶೈಖುಲ್ ಹದೀಸ್ ಮುಫ್ತಿ ಅಯ್ಯೂಬ್ ಹಝ್ರತ್
ಉತ್ತರ ಭಾರತದ ಪ್ರಕಾಂಡ ವಿದ್ವಾಂಸ. ಶತಮಾನಗಳ ಇತಿಹಾಸವುಳ್ಳ ಉತ್ತರ ಪ್ರದೇಶದ ಜಾಮಿಆ ನಈಮಿಯಾ ಮುರಾದಾಬಾದ್ ಶರೀಅತ್ ಕಾಲೇಜಿನ ಸ್ಥಾಪಕರಾದ ಸದ್‌ರುಲ್ ಅಫಾಳಿಲ್ ನಈಮುದ್ದೀನ್ ಮುರಾದಾಬಾದ್ ಅವರ ಶಿಷ್ಯರಾಗಿ, ಅದೇ ಸಂಸ್ಥೆಯಲ್ಲಿ ದೀರ್ಘಕಾಲ ಮುದರ್ರಿಸರಾಗಿ, ಪ್ರಸ್ತುತ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಖುರ್ಆನಿನ ಬಳಿಕ ಅತ್ಯಂತ ಶ್ರೇಷ್ಠ ಗ್ರಂಥ ಎಂದು ಗೌರವಿಸಲ್ಪಡುವ 'ಸ್ವಹೀಹುಲ್ ಬುಖಾರಿ'ಯನ್ನು ಪ್ರತಿ ವರ್ಷವೂ ಸಂಪೂರ್ಣವಾಗಿ ಓದಿಕೊಡಲು ಭಾಗ್ಯ ಲಭಿಸಿದ ಅನುಗ್ರಹೀತ ವಿದ್ವಾಂಸ. ಬೆಳಿಗ್ಗೆ ಸುಬ್‌ಹಿ ನಮಾಝ್ ಬಳಿಕ ಆರಂಭಿಸಿದರೆ ಮಧ್ಯಾಹ್ನದವರೆಗೂ ನಿರಂತರವಾದ ದರ್ಸ್. ಬುಖಾರಿ ಶರೀಫ್ ಸಂಪೂರ್ಣವಾಗಿ ದರ್ಸ್ ನಡೆಸಬೇಕೆಂಬ ಇರಾದೆಯಿಂದ ವರ್ಷದ ಕೊನೆಯ ಒಂದೆರಡು ತಿಂಗಳಲ್ಲಿ ಏಳೆಂಟು ಗಂಟೆಗಳ ತರಗತಿ!
ಶೈಖುಲ್ ಹದೀಸ್ ಅಲ್ಲಾಮಾ ಮುಫ್ತಿ ಅಯ್ಯೂಬ್ ಹಝ್ರತ್ ಅವರ ಅಪಾರವಾದ ಜ್ಞಾನ, ತಖ್ವಾ, ಪ್ರವಾದಿ ಪ್ರೇಮ, ಸರಳ ವ್ಯಕ್ತಿತ್ವ ಅವರ್ಣನೀಯ.
ಹಾವೇರಿ ಮುಈನುಸ್ಸುನ್ನಾ ಹನಫೀ ಶರೀಅತ್ ಕಾಲೇಜ್ ಆರಂಭಿಸುವಾಗ ಆಶೀರ್ವದಿಸಿ ಪ್ರಾರ್ಥಿಸಿದ್ದ ಹಝ್ರತ್ ಅವರು, ಇದೀಗ 'ಖತ್ಮುಲ್ ಬುಖಾರಿ'ಗೆ ಆಗಮಿಸುತ್ತಿದ್ದಾರೆ. ಕಳೆದ ಬಾರಿ ಶೈಖುನಾ ಸುಲ್ತಾನುಲ್ ಉಲಮಾ ಎ ಪಿ ಉಸ್ತಾದರು ಮುಈನುಸ್ಸುನ್ನಾ ಶರೀಅತ್ ಕಾಲೇಜ್‌ನ 33 ವಿದ್ಯಾರ್ಥಿಗಳಿಗೆ 'ಹುಸ್ನೀ' ಪದವಿ ಪ್ರದಾನ ಮಾಡಿದ್ದರೆ, ಈ ಬಾರಿ ಮುಫ್ತಿ ಅಲ್ಲಾಮಾ ಅಯ್ಯೂಬ್ ಹಝ್ರತ್ ಬರುತ್ತಿರುವುದು ನಮ್ಮ ಭಾಗ್ಯವೇ ಸರಿ. ಇದೇ ಬರುವ ಜನವರಿ 30, ಗುರುವಾರ ಸಂಜೆ 7 ಗಂಟೆಗೆ ಮುಈನುಸ್ಸುನ್ನಾದ ಸವನೂರು ಕ್ಯಾಂಪಸ್‌ನಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಪುಣ್ಯ ಪಡೆಯೋಣ. ಆ ಮಹಾತ್ಮರ ಮುಖ ದರ್ಶಿಸಿ, ಪ್ರಾರ್ಥನೆಯಲ್ಲಿ ಸೇರಿ ಧನ್ಯರಾಗೋಣ.
ಮರೆಯಬೇಡಿ, 30-01-2025 ಗುರುವಾರ 7pm @ ಸವನೂರ, ಹಾವೇರಿ
Mueenussunna Academy Haveri MUEENUSSUNNA ACADEMY HAVERI Make Foundation Kayar Saquafi كايار الثقافي Km Siddeeq KM Musthafa Naeemi Haveri Mueenussunna Karnataka J Amanulla Khan