Morarji Desai Residential School, Kandali, Hassan

Morarji Desai Residential School, Kandali, Hassan A digital porch for everyone who walked the halls of Morarji Desai School. Created by ex-students, for ex-students. Walk in as students, stay as family.

Join us as we take a trip down memory lane, celebrate our milestones, and reconnect with old friends.

ನೆಚ್ಚಿನ ಪ್ರಾಂಶುಪಾಲರಾದ ಜೆ ಬಿ ತಮ್ಮಣ್ಣಗೌಡರಿಗೆ ಅಭಿನಂದನಾ ಗ್ರಂಥ ಸಮರ್ಪಣೆಯ ಪತ್ರಿಕಾ ವರದಿ
19/08/2024

ನೆಚ್ಚಿನ ಪ್ರಾಂಶುಪಾಲರಾದ ಜೆ ಬಿ ತಮ್ಮಣ್ಣಗೌಡರಿಗೆ ಅಭಿನಂದನಾ ಗ್ರಂಥ ಸಮರ್ಪಣೆಯ ಪತ್ರಿಕಾ ವರದಿ

ಮರಳಿ ಗೂಡಿಗೆ..... ❤️ತರಗತಿಯ ಪಾಠಗಳ ಜೊತೆ ಜೀವನ ಪಾಠ ಕಲಿಸಿದ ನೆಚ್ಚಿನ ಪ್ರಾಂಶುಪಾಲರಿಗೆ ಅಭಿನಂದನಾ ಗ್ರಂಥ ಸಮರ್ಪಣೆಯ ಸಮಾರಂಭ ಸಿದ್ಧತೆಯಲ್ಲಿ....
19/08/2024

ಮರಳಿ ಗೂಡಿಗೆ..... ❤️

ತರಗತಿಯ ಪಾಠಗಳ ಜೊತೆ ಜೀವನ ಪಾಠ ಕಲಿಸಿದ ನೆಚ್ಚಿನ ಪ್ರಾಂಶುಪಾಲರಿಗೆ ಅಭಿನಂದನಾ ಗ್ರಂಥ ಸಮರ್ಪಣೆಯ ಸಮಾರಂಭ ಸಿದ್ಧತೆಯಲ್ಲಿ....

19/08/2024
ಗುರು ಮತ್ತು ಶಿಷ್ಯ ಹಾಗೂ ಬಹಿರಂಗ ಪತ್ರ
22/12/2022

ಗುರು ಮತ್ತು ಶಿಷ್ಯ ಹಾಗೂ ಬಹಿರಂಗ ಪತ್ರ

ನೋಸ್ಟಲಾಜಿಕ್ ನೆನಪುಗಳು ❤️ನಮ್ಮ ಶಾಲೆಯ 25 ವರ್ಷ ಹಿಂದಿನ ಸಾಂಸ್ಕೃತಿಕ ಸಮಾರಂಭದ ಆಹ್ವಾನ ಪತ್ರಿಕೆ 🥰
26/11/2022

ನೋಸ್ಟಲಾಜಿಕ್ ನೆನಪುಗಳು ❤️

ನಮ್ಮ ಶಾಲೆಯ 25 ವರ್ಷ ಹಿಂದಿನ ಸಾಂಸ್ಕೃತಿಕ ಸಮಾರಂಭದ ಆಹ್ವಾನ ಪತ್ರಿಕೆ 🥰

28/10/2020

TV5 ನ ನಮ್ಮ ಬಾಹುಬಲಿ ಕಾರ್ಯಕ್ರಮದಲ್ಲಿ ನಮ್ಮ ಶಾಲೆಯ ಹೆಮ್ಮೆಯ ಪ್ರಾಂಶುಪಾಲರಾದ ಶ್ರೀ ತಮ್ಮಣ್ಣಗೌಡರನ್ನು ಸಂದರ್ಶಿಸಲಾಯಿತು.

26/10/2020

TV5 ನ ನಮ್ಮ ಬಾಹುಬಲಿ ಕಾರ್ಯಕ್ರಮದಲ್ಲಿ ಈ ದಿನ ಸಂಜೆ 7 ರಿಂದ 8 ರವರೆಗೆ ವೀಕ್ಷಿಸಿ.

18/10/2020

ನಿಸ್ವಾರ್ಥ ಸೇವೆಯ ಮೇಷ್ಟ್ರಿಗೆ ಒಲಿದ ರಾಜ್ಯ ಪ್ರಶಸ್ತಿ.
ಗಿಡ,ಮರಗಳನ್ನೇ ಮಕ್ಕಳೆಂದ
ಮಕ್ಕಳನ್ನೇ ದೇವರೆಂದ
ಶಾಲೆಯನ್ನೇ ದೇಗುಲವೆಂದ
ಆದರ್ಶ ಶಿಕ್ಷಕ
ಬಡ ವಿದ್ಯಾರ್ಥಿಗಳಿಗೆ ರಕ್ಷಕ
ಲಕ್ಷಕ್ಕೂ ಅಪರೂಪ
ಇವರು ದೇವರ ಪ್ರತಿರೂಪ

ಶ್ರೀ ಜೆ.ಬಿ. ತಮ್ಮಣ್ಣಗೌಡರು, ಕಂದಲಿ ಮೊರಾರ್ಜಿ ಶಾಲೆಯ ಪ್ರಾಂಶುಪಾಲರು. ಎರಡು ಸಾವಿರ ಗಿಡಗಳನ್ನು ಮಕ್ಕಳಂತೆ ಪೋಷಣೆ ಮಾಡಿದ್ದಾರೆ. ಅವೆಲ್ಲವೂ ಫಲ ಕೊಡುತ್ತಿವೆ.
ಇವರಿಂದ ಕಲಿತ ಸಾವಿರಾರು ವಿದ್ಯಾರ್ಥಿಗಳು ದೇಶ ವಿದೇಶಗಳಲ್ಲಿ ಶಾಲೆಯ ಕೀರ್ತಿ ಬೆಳಗಿಸುತ್ತಿದ್ದಾರೆ.
ಇವರೆಂದು ಪ್ರಶಸ್ತಿ ಬಿರುದುಗಳನ್ನು ಹುಡುಕಿ ಹೊರಟವರಲ್ಲ. ಇವರಿಗೆ ಪ್ರಶಸ್ತಿ ಬಿರುದುಗಳನ್ನು ನೀಡಿದರೆ ಆ ಪ್ರಶಸ್ತಿಯ ಮೌಲ್ಯವೇ ಹಿಗ್ಗುತ್ತದೆ.
ಅಂತಹ ಚೇತನಕ್ಕೆ ಮತ್ತೊಂದು ರಾಜ್ಯ ಪ್ರಶಸ್ತಿ ಒಲಿದು ಬಂದಿದೆ. ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಇವರಿಗೆ ಉನ್ನತ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಿದೆ. ಇವರಿಗೆ ಇನ್ನೂ ಹತ್ತು ಹಲವು ಪ್ರಶಸ್ತಿಗಳು ಬರುವಂತಾಗಲಿ ಎಂದು ಆಶಿಸುತ್ತೇವೆ.

23/03/2020

ಆತ್ಮೀಯರೇ....

ಭಾರತದಲ್ಲಿ ಕೊರೋನಾ 3ನೇ ಹಂತವನ್ನು ಯಾವುದೇ ಕ್ಷಣದಲ್ಲಿ ಪ್ರವೇಶ ಮಾಡಬಹುದು. ಈಹಂತಕ್ಕೆ ತಲುಪಿದರೆ ಯಾರಿಂದಲೂ ಅದನ್ನು ತಡೆಯಲು ಸಾಧ್ಯವಿಲ್ಲ. ಕೊರೋನಾ ವೈರಸ್ ಬಗ್ಗೆ ನಿರ್ಲಕ್ಷ್ಯ ಮಾಡಬೇಡಿ. ಇದೊಂದು ಯಮರೂಪಿ ವೈರಸ್. ಇದು ನಮ್ಮ ಸಾವು-ಬದುಕಿನ ನಡುವಿನ ಹೋರಾಟದ ಸಮಯ.

ನನ್ನ ಎಲ್ಲ ಸ್ನೇಹಿತರಲ್ಲಿ ಮನವಿ, ಮುಂದಿನ ಕೆಲವು ದಿನಗಳು ನಮ್ಮ ಪಾಲಿಗೆ ಅತ್ಯಂತ ನಿರ್ಣಾಯಕವಾಗಿವೆ. ನಿಮ್ಮ ತಲೆಹರಟೆ, ಉಡಾಫೆ, ಬೇಜವಾಬ್ದಾರಿತನದಿಂದಾಗಿ, ನಿಮ್ಮ ಅಥವಾ ನಿಮ್ಮ ಕುಟುಂಬದ ಸದಸ್ಯರ ಬದುಕು ನರಕವಾಗದಿರಲಿ.

ಬೀಡಿ-ಸಿಗರೇಟು ಅಭ್ಯಾಸ, 60 ವರ್ಷ ಮೇಲ್ಪಟ್ಟವರು, ಬಿಪಿ ಶುಗರ್ ಆಸ್ತಮಾ ಅಥವಾ ಹೃದಯ ಸಂಬಂಧಿ ರೋಗ ಇವುಗಳಲ್ಲಿ ಯಾವುದೊಂದು ನಿಮಗಿದ್ದರೆ, ಮನೆಯ ಬಾಗಿಲಿನಿಂದ ಹೊರಗೆ ಕಾಲಿಡಬೇಡಿ ಹಾಗೂ ಮನೆಯಲ್ಲೂ ಕೂಡ ಚಿಕ್ಕವಯಸ್ಸಿನವರಿಂದ ದೂರವಿರಿ.

ಅಗತ್ಯ ಸೇವೆ ನೀಡುವ ವ್ಯಾಪಾರ ನಿಮ್ಮದಲ್ಲದಿದ್ದಲ್ಲಿ, ನಿಮ್ಮ ವ್ಯಾಪಾರ ವಹಿವಾಟನ್ನು ಈ ಕೂಡಲೇ ಸ್ವಲ್ಪ ದಿನಗಳ ಮಟ್ಟಿಗೆ ನಿಲ್ಲಿಸಿ. ರಜೆ ಸೌಲಭ್ಯ ಇರುವ ಕೆಲಸದಲ್ಲಿದ್ದರೆ ಮುಲಾಜಿಲ್ಲದೇ ರಜೆ ಹಾಕಿ. ನೀವು ಬದುಕಿದ್ದರಷ್ಟೇ ನಿಮ್ಮ ವ್ಯಾಪಾರ, ಆಸ್ತಿ, ಹಣಕ್ಕೆ ಬೆಲೆ. ಆದ್ದರಿಂದ ಅನವಶ್ಯಕವಾಗಿ ಅಪಾಯ ಮೈಮೇಲೆ ಎಳೆದುಕೊಳ್ಳಬೇಡಿ.

ಕೊರೋನಾ ಸೋಂಕು ತಗುಲದಂತೆ ನೋಡಿಕೊಳ್ಳುವುದೊಂದೇ ಈಗ ನಮಗಿರುವ ಆಯ್ಕೆ. ಅದರಲ್ಲೂ ಬೆರಳೆಣಿಕೆಯಷ್ಟು ವೈದ್ಯರು, ವೆಂಟಿಲೇಟರ್, ಕಡಿಮೆ ಐಸಿಯುಗಳ ಸೌಲಭ್ಯವಿರುವ ಕಡೆ ವಾಸಿಸುತ್ತಿರುವ ನಾವುಗಳು ಆರೋಗ್ಯದ ವಿಷಯದಲ್ಲಿ ಅತ್ಯಂತ ಜಾಗರೂಕರಾಗಿರಬೇಕು.

ನಾನು ಹೇಳುತ್ತಿರುವುದು ಅತಿರೇಕ ಅನ್ನಿಸಿದರೆ, ನಿಮ್ಮ ಕುಟುಂಬದ ವೈದ್ಯರೊಂದಿಗೆ ಒಮ್ಮೆ ಪೋನಿನಲ್ಲಿ ಮಾತನಾಡಿ ಕೊರೋನಾ ಅಪಾಯದ ಬಗ್ಗೆ ಮಾಹಿತಿ ಪಡೆದುಕೊಳ್ಳಿ.

ಸರ್ಕಾರ, ಆರೋಗ್ಯ ಇಲಾಖೆ ಹಾಗೂ ನಮ್ಮ ಕುಟುಂಬದ ವೈದ್ಯರುಗಳು ನೀಡುವ ಮಾರ್ಗದರ್ಶನವನ್ನು ಅಕ್ಷರಶಃ ಪಾಲಿಸೋಣ. ಕೊರೋನಾದಿಂದ ನಮ್ಮನ್ನು ರಕ್ಷಿಸಿಕೊಳ್ಳೋಣ.

"ಬದುಕೋಣ, ಬದುಕಿ ಬಾಳೋಣ."

ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಡೆದ 18ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರಾಂಶುಪಾಲರಾದ ಶ್ರೀ ತಮ್ಮಣ್ಣಗೌಡರನ್ನು ಸನ್ಮಾನಿ...
01/02/2020

ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಡೆದ 18ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರಾಂಶುಪಾಲರಾದ ಶ್ರೀ ತಮ್ಮಣ್ಣಗೌಡರನ್ನು ಸನ್ಮಾನಿಸಲಾಯಿತು.

ರಾಜ್ಯದ ಅತ್ಯುತ್ತಮ ಪ್ರಾಂಶುಪಾಲ ಪ್ರಶಸ್ತಿ ಪಡೆದ ಶ್ರೀ ಜೆ.ಬಿ.ತಮ್ಮಣ್ಣಗೌಡ ಅವರನ್ನು ಹಾಸನ ಜಿಲ್ಲಾ ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಂಘದಿಂದ ಅಭಿ...
23/01/2020

ರಾಜ್ಯದ ಅತ್ಯುತ್ತಮ ಪ್ರಾಂಶುಪಾಲ ಪ್ರಶಸ್ತಿ ಪಡೆದ ಶ್ರೀ ಜೆ.ಬಿ.ತಮ್ಮಣ್ಣಗೌಡ ಅವರನ್ನು ಹಾಸನ ಜಿಲ್ಲಾ ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಂಘದಿಂದ ಅಭಿನಂದಿಸಿದ ಕ್ಷಣ.

Address

Near Yagachi Vidya Peeta, Kandali
Hassan
573217

Website

Alerts

Be the first to know and let us send you an email when Morarji Desai Residential School, Kandali, Hassan posts news and promotions. Your email address will not be used for any other purpose, and you can unsubscribe at any time.

Shortcuts

Share

Category