Ramakrishna Vivekananda Ashrama Kalaburagi

Ramakrishna Vivekananda Ashrama Kalaburagi Ramakrishna Vivekananda Ashrama,
Kusnoor Road,opp.

PKG Babnk, Rajapur, Kalaburagi-585105
[email protected]
Contact No-9632322577/7760040411
President:- Swamy Maheshwaranandaji Maharaj.

ರಾಮಕೃಷ್ಣ ವಿವೇಕಾನಂದ ಆಶ್ರಮ ರಾಜಾಪುರ, ಕಲಬುರ್ಗಿ ಅಡಿಯಲ್ಲಿ ನಡೆಯುತ್ತಿರುವ ವಿವೇಕಾನಂದ ವಿದ್ಯಾಪೀಠ ಸಂಸ್ಥೆಯ ಬೆಳ್ಳಿ ಮಹೋತ್ಸವ ಕಾರ್ಯಕ್ರಮ ಹಾ...
24/11/2025

ರಾಮಕೃಷ್ಣ ವಿವೇಕಾನಂದ ಆಶ್ರಮ ರಾಜಾಪುರ, ಕಲಬುರ್ಗಿ ಅಡಿಯಲ್ಲಿ ನಡೆಯುತ್ತಿರುವ ವಿವೇಕಾನಂದ ವಿದ್ಯಾಪೀಠ ಸಂಸ್ಥೆಯ ಬೆಳ್ಳಿ ಮಹೋತ್ಸವ ಕಾರ್ಯಕ್ರಮ ಹಾಗೂ ಲೋಕ ಕಲ್ಯಾಣಾರ್ಥಿವಾಗಿ, ದೇಶದ ಸೈನಿಕರಿಗೆ ಶಕ್ತಿ ತುಂಬಲು ಮತ್ತು ರೈತರ ಶ್ರೇಯಸ್ಸಿಗಾಗಿ ಹಮ್ಮಿಕೊಂಡಿರುವ ಆಯತ ಚಂಡಿಕಾ ಮಹಾಯಾಗ ಕಾರ್ಯಕರ್ಮದಲ್ಲಿ ಬಂದು ಪಾಲ್ಗೊಂಡು, ತಾಯಿಯ ಕೃಪೆಗೆ ಪಾತ್ರರಾಗಿ.

"ಶ್ರೀ ಶತಚಂಡಿಕಾ ಯಾಗ"ಮಹಾಯಾಗದಲ್ಲಿ ಪಾಲ್ಗೊಂಡು ತಾಯಿ ದುರ್ಗೆಯ ಕೃಪೆಗೆ ಪಾತ್ರರಾಗಿ... ಸರ್ವರಿಗೂ ಸುಸ್ವಾಗತ.💐
24/07/2024

"ಶ್ರೀ ಶತಚಂಡಿಕಾ ಯಾಗ"

ಮಹಾಯಾಗದಲ್ಲಿ ಪಾಲ್ಗೊಂಡು ತಾಯಿ ದುರ್ಗೆಯ ಕೃಪೆಗೆ ಪಾತ್ರರಾಗಿ... ಸರ್ವರಿಗೂ ಸುಸ್ವಾಗತ.💐

ಶಿಕ್ಷಕರು ಬೇಕಾಗಿದ್ದಾರೆ...ರಾಮಕೃಷ್ಣ ವಿವೇಕಾನಂದ ಆಶ್ರಮ ರಾಜಾಪೂರ ಕಲಬುರಗಿ, ಅಡಿಯಲ್ಲಿ ನಡೆಯುತ್ತಿರುವ ಸೇವಾಸಂಸ್ಥೆ ವಿವೇಕಾನಂದ ವಿದ್ಯಾಪೀಠ ವ...
17/05/2023

ಶಿಕ್ಷಕರು ಬೇಕಾಗಿದ್ದಾರೆ...

ರಾಮಕೃಷ್ಣ ವಿವೇಕಾನಂದ ಆಶ್ರಮ ರಾಜಾಪೂರ ಕಲಬುರಗಿ, ಅಡಿಯಲ್ಲಿ ನಡೆಯುತ್ತಿರುವ ಸೇವಾಸಂಸ್ಥೆ ವಿವೇಕಾನಂದ ವಿದ್ಯಾಪೀಠ ವಿದ್ಯಾಸಂಸ್ಥೆಯಲ್ಲಿ ಕನ್ನಡ ಮತ್ತು ಆಂಗ್ಲ ಮಾಧ್ಯಮದ ಶಿಕ್ಷಕರು ಬೇಕಾಗಿದ್ದಾರೆ.

ವಿವೇಕಾನಂದರ ಚಿಂತನೆ ನಮಗೆ ಆದರ್ಶ...ಫೋನ್-ಇನ್ ಕಾರ್ಯಕ್ರಮ... 11 ಜನವರಿ. 10.30 ಬೆಳಗ್ಗೆ
11/01/2023

ವಿವೇಕಾನಂದರ ಚಿಂತನೆ ನಮಗೆ ಆದರ್ಶ...
ಫೋನ್-ಇನ್ ಕಾರ್ಯಕ್ರಮ...
11 ಜನವರಿ. 10.30 ಬೆಳಗ್ಗೆ

ವಿಶ್ವ ವಿಜೇತ "ಸ್ವಾಮಿ ವಿವೇಕಾನಂದರ 160ನೇ ಜಯಂತಿ" ಹಾಗೂ "ರಾಷ್ಟ್ರೀಯ ಯುವ ದಿನಾಚರಣೆ" ಕಾರ್ಯಕ್ರಮಕ್ಕೆ ಸರ್ವರಿಗೂ ಸ್ವಾಗತ...⚘
11/01/2023

ವಿಶ್ವ ವಿಜೇತ "ಸ್ವಾಮಿ ವಿವೇಕಾನಂದರ 160ನೇ ಜಯಂತಿ" ಹಾಗೂ "ರಾಷ್ಟ್ರೀಯ ಯುವ ದಿನಾಚರಣೆ" ಕಾರ್ಯಕ್ರಮಕ್ಕೆ ಸರ್ವರಿಗೂ ಸ್ವಾಗತ...⚘

I tell you one thing. If you want peace of mind, do not find fault with others. Rather learn to see your own faults. Lea...
15/12/2022

I tell you one thing. If you want peace of mind, do not find fault with others. Rather learn to see your own faults. Learn to make the whole world your own. No one is a stranger, my child; this whole world is your own.

Sarada Devi

ಶಿಕ್ಷಕರು ಬೇಕಾಗಿದ್ದಾರೆ.
29/07/2022

ಶಿಕ್ಷಕರು ಬೇಕಾಗಿದ್ದಾರೆ.

ಆಷಾಢ ಶುದ್ದ ಪೂರ್ಣಿಮೆಯ ದಿನವಾದ ಇಂದು ಸಮಸ್ತ ಪ್ರಪಂಚಕ್ಕೆ ಪರಮೋಚ್ಚ ಸಂದೇಶ ನೀಡಿದ ವ್ಯಾಸ ಮಹರ್ಷಿಗಳನ್ನು ಸ್ಮರಿಸುವ ದಿನ. ನಮ್ಮ ಭಾರತೀಯ ಸಂಸ್ಕ...
13/07/2022

ಆಷಾಢ ಶುದ್ದ ಪೂರ್ಣಿಮೆಯ ದಿನವಾದ ಇಂದು ಸಮಸ್ತ ಪ್ರಪಂಚಕ್ಕೆ ಪರಮೋಚ್ಚ ಸಂದೇಶ ನೀಡಿದ ವ್ಯಾಸ ಮಹರ್ಷಿಗಳನ್ನು ಸ್ಮರಿಸುವ ದಿನ. ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಪ್ರಥಮ ಸ್ಥಾನವಿದೆ. ಗುರುಗಳು ಜನರಲ್ಲಿ ಆವರಿಸಿರುವ ಅಜ್ಞಾನ, ಅಂಧಕಾರವನ್ನು ಹೋಗಲಾಡಿಸಿ ಜ್ಞಾನದ ಬೆಳಕನ್ನು ನೀಡುತ್ತಾರೆ. ನವಗ್ರಹಗಳ ಪೈಕಿ ಗುರು ಬೃಹಸ್ಪತಿಯೇ ದೊಡ್ಡ ಗ್ರಹವಾಗಿದೆ. ಗುರುವಿಗೆ ನಮಃ. ಗುರುವಿನಷ್ಟು ಹಿರಿಯದಾದುದು ಬೇರಾವುದೂ ಇಲ್ಲ. ಮಾತೃದೇವೋ ಭವ, ಪಿತೃ ದೇವೋ ಭವ, ಆಚಾರ್ಯ ದೇವೋ ಭವ ಎನ್ನುವಂತೆ ಆಚಾರ್ಯರನ್ನು ದೇವರಿಗೆ ಸಮಾನವೆಂದೇ ಪರಿಗಣಿಸಲಾಗಿದೆ.

ಪುರಂದರದಾಸರು ಹೇಳಿದೆ ಹಾಗೆ " ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣಾ ಮುಕುತಿ" ಯಾವುದೇ ವಿದ್ಯೆ ಫಲಪ್ರದವಾಗಬೇಕಾದರೆ ಗುರುಕೃಪೆ , ಆಶೀರ್ವಾದ ಬೇಕೇ ಬೇಕು. ಯಾಕೆಂದರೆ ಗುರುಕೊಟ್ಟ ವಿದ್ಯೆಯೇ ಸಂಪತ್ತು, ಗುರು ನೀಡುವ ಸಂಪತ್ತು ಕಳೆದುಹೋಗದು. ಗುರುಗಳು ಜನರಿಗೆ ಮಾತ್ರವಲ್ಲದೆ ದೇವತೆಗಳಿಗೂ ಇದ್ದರು ಎನ್ನುವುದನ್ನು ಪುರಾಣಗಳಿಂದ ಓದಿದ್ದೇವೆ. ಶ್ರೀರಾಮಚಂದ್ರನಿಗೆ ವಸಿಷ್ಠ ಮಹರ್ಷಿಗಳಿದ್ದಂತೆ ಎಲ್ಲಾ ರಾಜ ಮಹಾರಾಜರಿಗೂ ರಾಜಗುರುಗಳಿದ್ದರು. ಜನರಿಗೆ ವಿದ್ಯೆ ಮತ್ತು ಜ್ಞಾನದ ಬೆಳಕನ್ನು ನೀಡಿ ಮನಸ್ಸನ್ನು ಶುದ್ದಗೊಳಿಸಿ ಉತ್ತಮ ಮಾರ್ಗ ತೋರುವ ಗುರುಗಳನ್ನು ಶ್ರದ್ದಾ ಭಕ್ತಿಯಿಂದ ಗೌರವಿಸುವ ದಿನವಾದ ಇಂದು ಶಿಷ್ಯರೆಲ್ಲಾ ಸೇರಿ ತಮ್ಮ ಗುರುಗಳನ್ನು ಪೂಜಿಸಿ ಗೌರವಿಸಿ ಭಕ್ತಿ ಸಮರ್ಪಿಸುವುದು ಭಾರತೀಯ ಪರಂಪರೆಯ ಅವಿಭಾಜ್ಯ ಅಂಗ.ನೀವು ನಿಮ್ಮ ಗುರುಗಳಿಗೆ 'ಗುರುವಂದನೆ' ಸಲ್ಲಿಸಿ. ಗುರು ಪೂರ್ಣಿಮೆಯ ಶುಭಾಶಯಗಳು.
💐

ಇಂದು ಕರ್ನಾಟಕದ ಸಿಡಿಲ ಸಂನ್ಯಾಸಿ ಪರಮಪೂಜ್ಯ  #ಸ್ವಾಮಿ_ಪುರುಷೋತ್ತಮಾನಂದಜಿ_ಮಹಾರಾಜರವರ ಜನ್ಮದಿನದ ಶುಭಾಶಯಗಳು. #ಜೈ_ರಾಮಕೃಷ್ಣhttps://en.m.w...
14/06/2022

ಇಂದು ಕರ್ನಾಟಕದ ಸಿಡಿಲ ಸಂನ್ಯಾಸಿ ಪರಮಪೂಜ್ಯ #ಸ್ವಾಮಿ_ಪುರುಷೋತ್ತಮಾನಂದಜಿ_ಮಹಾರಾಜರವರ ಜನ್ಮದಿನದ ಶುಭಾಶಯಗಳು.
#ಜೈ_ರಾಮಕೃಷ್ಣ

https://en.m.wikipedia.org/wiki/Swami_Purushottamananda

ಪುರುಷೋತ್ತಮಾನಂದ ಮಹಾರಾಜರ ಜಯಂತಿ , ಇಂದು ಕರ್ನಾಟಕದಲ್ಲಿ ದಿವ್ಯತ್ರಯರ ಸಾಹಿತ್ಯ ಹಾಗೂ ಶ್ರೀ ರಾಮಕೃಷ್ಣ ಮಠ ಮತ್ತು ಮಿಷನ್ ಗಳು ಸ್ಥಾಪನೆಯಾಗಿ ನಾಡಿನಾದ್ಯಂತ ಅದರ ಪರಿಮಳ
ಹರಡಲು ಅದಕ್ಕೆ ಮೂಲ ಕಾರಣ ಪೂಜ್ಯ ಶ್ರೀಗಳು ,ಅಪಾರವಾದ ಯುವ ಸನ್ಯಾಸಿಗಳನ್ನು ತಮ್ಮ ಗರಡಿಯಲ್ಲಿ ತರಬೇತಿ ನೀಡಿ ದಿವ್ಯತ್ರಯರ ಸೇವೆಗೆ ವಿಶ್ವಕ್ಕೆ ಶಿಷ್ಯವೃಂದವನ್ನು ನೀಡಿದ ಮಹಾನ್ ಚೇತನ ಪೂಜ್ಯ ಸ್ವಾಮೀಜಿ , ವಿಶ್ವದಾದ್ಯಂತ ಅನೇಕ ರಾಮಕೃಷ್ಣ ಮಠ ಮಿಷನ್ ನಲ್ಲಿ ಶಿಷ್ಯ ವೃಂದ ಸೇವೆಯನ್ನು ಸಲ್ಲಿಸುತ್ತಿದ್ದಾರೆ , ಪೂಜ್ಯರ ದಿವ್ಯತ್ರಯರ ಕುರಿತಾದ ಸಾಹಿತ್ಯ ಅಪಾರವಾಗಿದೆ, ಅದರಂತೆ ವಿದ್ಯಾರ್ಥಿಗಳಿಗೆ, ಯುವ ಸಮುದಾಯಕ್ಕೆ ಸ್ವಾಮೀಜಿಯವರ ಪುಸ್ತಕಗಳಾದ ವಿದ್ಯಾರ್ಥಿಗಾಗಿ, ಯುವಶಕ್ತಿಯ ರಹಸ್ಯ ಮುಂತಾದ ಕೃತಿಗಳು ಯುವ ಸಮುದಾಯದವನ್ನು ಸರಿ ದಾರಿಯಲ್ಲಿ ಕೈ ಹಿಡಿದು ನಡೆಸುತ್ತಿವೆ , ಸಂಸಾರಿಗಳಿಗೂ ದಿವ್ಯತ್ರಯರ ಮಾರ್ಗದರ್ಶನ ನೀಡಿ ಸದೃಡ ಸಮಾಜ ಕಟ್ಟಲು ಪೂಜ್ಯರ ನೀಡಿದ ಆಶೀರ್ವಾದವಾಗಿದೆ.

ದಿವ್ಯತ್ರಯರ ಜೀವನ ಚರಿತ್ರೆಗಳು ಸ್ವಾಮೀಜಿಯವರಿಂದ ಮೂಡಿಬಂದ ಅದ್ಭುತ ಪುಸ್ತಕಗಳು , ಕನ್ನಡ ಸಾಹಿತ್ಯ ಲೋಕದಲ್ಲಿ ಪೂಜ್ಯ ಸ್ವಾಮೀಜಿಯವರ ಲೇಖನಗಳು ಎಲೆಯ ಮರಿಯ ಕಾಯಿಯಂತೆ ದಿವ್ಯತ್ರಯರ ಸಾಹಿತ್ಯವನ್ನು ಕರ್ನಾಟಕದ ಜನರಿಗೆ ಉಣಬಡಿಸಿದ್ದಾರೆ , ದುಂಬಿಗೆ ಮಕರಂದವನ್ನು ಸವಿಯುವುದು ಹೇಗೆ ಆಸೆಯೋ ಹಾಗೆ ಪೂಜ್ಯ ಶ್ರೀಗಳ ಸಾಹಿತ್ಯ ಕೂಡಾ ಅಷ್ಟೇ ಇಷ್ಟದ ಸಾಹಿತ್ಯವಾಗಿದೆ,
ಕರ್ನಾಟಕದಲ್ಲಿ ಇಂದು ಶ್ರೀ ರಾಮಕೃಷ್ಣರು, ಶ್ರೀ ಶಾರಾದಾಮಾತೆ, ಶ್ರೀ ವಿವೇಕಾನಂದರ ಸಾಹಿತ್ಯ, ಶ್ರೀ ರಾಮಕೃಷ್ಣ ಮಠ,ಮಿಷನ್ ಗಳ ಸೇವಾ ಕಾರ್ಯಗಳನ್ನು ಇಂದು ಪ್ರಸ್ತುತ ನೆನಪಿಸುವ ಕಾರ್ಯದ ಹಿಂದಿನ ಶಕ್ತಿ ದಿವ್ಯತ್ರಯರ ಆದರೂ ‌ಕೂಡ ಒಬ್ಬರು ಸಮರ್ಥ ಗುರುಗಳು ಅಪಾರವಾದ ಶಿಷ್ಯವೃಂದ ತರಬೇತಿ ನೀಡಿ ಮಹಾಸಂಘದ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಪ್ರಸ್ತುತ ಸ್ವಾಮೀಜಿಗಳು ಅವರುಗಳ ಸೇವಾ ಕಾರ್ಯಗಳನ್ನು ನೋಡಿದರೆ ಶಿಷ್ಯರುಗಳೆ ಹೀಗೆ ಇರುವಾಗ ಆ ಮಹಾನ್ ಗುರುಗಳಾದ ಪೂಜ್ಯ ಶ್ರೀ ಸ್ವಾಮಿಯವರು ಅದ್ಭುತ, ಮಹಾನ್ ಪ್ರೀತಿಯ ಸಾಗರ ಇದ್ದಂತೆ, ಪೂಜ್ಯರ ಆಶೀರ್ವಾದ ಸದಾಕಾಲವೂ ನಮ್ಮ ಮೇಲೆ ಇರಲಿ .
*ಜೈ ರಾಮಕೃಷ್ಣ* *ಜೈ ಮಾ* 🙏🙏🙏🙏🙏

ಧರ್ಮ ಸಮನ್ವಯ ದೀಕ್ಷೆಯ ತೊಟ್ಟುಧರೆಗಿಳಿದಿರುವ ದೊರೆಯೇಎಲ್ಲ ಧರ್ಮಗಳ ಸಾರ ಸ್ವರೂಪನೇಶ್ರೀರಾಮಕೃಷ್ಣ ಗುರುವೇದಕ್ಷಿಣೇಶ್ವರದ ದಿವ್ಯ ದೇಗುಲದಪರಮ ಶ್ರ...
04/03/2022

ಧರ್ಮ ಸಮನ್ವಯ ದೀಕ್ಷೆಯ ತೊಟ್ಟು
ಧರೆಗಿಳಿದಿರುವ ದೊರೆಯೇ
ಎಲ್ಲ ಧರ್ಮಗಳ ಸಾರ ಸ್ವರೂಪನೇ
ಶ್ರೀರಾಮಕೃಷ್ಣ ಗುರುವೇ

ದಕ್ಷಿಣೇಶ್ವರದ ದಿವ್ಯ ದೇಗುಲದ
ಪರಮ ಶ್ರೇಷ್ಠ ಅರ್ಚಕನೇ
ಶಿಲೆಯ ತಾಯಿಯನು ಚಲಿಸುವಂತೆ
ನೀ ಮಾಡಿದೆ ಚಿರಸಾಧಕನೇ

ಎಷ್ಟು ಮತಗಳೋ ಅಷ್ಟು ಪಥಗಳು
ಎಂದು ನುಡಿದ ಗುರುವರನೆ
ಎಲ್ಲಾ ಪಥಗಳು ಒಂದೇ ಗುರಿಯೆಡೆ
ಸಾಗುವುದ ತೋರಿದವನೆ

ಜೀವನ ಸೇವೆಯೇ ಈಶನ ಸೇವೆಯು
ಎಂದು ಅರುಹಿದ ಪ್ರಭುವೇ
ಸಕಲ ಜೀವರಾಶಿಗಳಲು ಶಿವನ
ಇರುವಿಕೆಯ ಸಾರಿದವನೆ

ನರನವತಾರಿಯೇ ಜನುಮದಿನದ
ಶುಭನ ನಮನವ ಗಯ್ಯುವೆ ನಿನಗೆ
ಜನುಮ ಜನುಮದಲು ನಿನ್ನಯ ಸ್ಮರಣೆಯ
ಭಾಗ್ಯವು ದೊರಕಲಿ ನನಗೆ

*ಎಲ್ಲರಿಗೂ ಭಗವಾನ್ ಶ್ರೀರಾಮಕೃಷ್ಣ ಪರಮಹಂಸರ 187ನೇ ಜನ್ಮ ಜಯಂತಿಯ ಶ್ರದ್ಧಾಪೂರ್ಣ ನಮನಗಳು.*

Address

Ramakrishna Vivekananda Ashrama, , Kusnoor Road, Opp. PKG Babnk, Rajapur, Kalaburagi-585105, Ashramagulbarga@gmail. Com, Contact No-9632322577/7760040411, President:/Swamy Maheshwaranandaji Maharaj
Gulbarga
585105

Telephone

+919632322577

Website

Alerts

Be the first to know and let us send you an email when Ramakrishna Vivekananda Ashrama Kalaburagi posts news and promotions. Your email address will not be used for any other purpose, and you can unsubscribe at any time.

Contact The School

Send a message to Ramakrishna Vivekananda Ashrama Kalaburagi:

Shortcuts

Share

Category