Great Doddaballapura

Great Doddaballapura Knowledge

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಚೆನ್ನಮ್ಮನವರ ಅಗಲಿಕೆಯ ದುಃಖದಲ್ಲಿದ್ದ ದೇವೇಗೌಡರ ಕಣ್ಣೀರು ಒರೆಸಿ, ಸಂತೈಸಿದ ಭಾವುಕ ಕ್ಷಣ.   ...
19/07/2026

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಚೆನ್ನಮ್ಮನವರ ಅಗಲಿಕೆಯ ದುಃಖದಲ್ಲಿದ್ದ ದೇವೇಗೌಡರ ಕಣ್ಣೀರು ಒರೆಸಿ, ಸಂತೈಸಿದ ಭಾವುಕ ಕ್ಷಣ.

Great Doddaballapura

ಪೋಷಕರ ಪತ್ತೆಗೆ ಮನವಿಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕಿನ ಚನ್ನಹಳ್ಳಿ ಗ್ರಾಮದ ಸ್ಪರ್ಶ ಮಕ್ಕಳ ಧಾಮಕ್ಕೆ 14 ವರ್ಷದ ಚುಂಕಿ ಎಂಬ...
10/07/2026

ಪೋಷಕರ ಪತ್ತೆಗೆ ಮನವಿ

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕಿನ ಚನ್ನಹಳ್ಳಿ ಗ್ರಾಮದ ಸ್ಪರ್ಶ ಮಕ್ಕಳ ಧಾಮಕ್ಕೆ 14 ವರ್ಷದ ಚುಂಕಿ ಎಂಬ ಬಾಲಕಿ ಜುಲೈ 3, 2022 ರಲ್ಲಿ ದಾಖಲಾಗಿದ್ದು, ಇಲ್ಲಿವರೆಗೂ ಮಕ್ಕಳ ಪೋಷಕರು ಪತ್ತೆಯಾಗಿರುವುದಿಲ್ಲ.

ಬಾಲಕಿಯ ಪಾಲಕರು/ ಪೋಷಕರು ಕಾನೂನು ರೀತಿ ಹಕ್ಕುವುಳ್ಳವರು ಎಲ್ಲಿದ್ದರೂ 04 ತಿಂಗಳ ಅವಧಿ ಮುಗಿಯುವುದರ ಒಳಗಾಗಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಇವರನ್ನು ಸಂಪರ್ಕಿಸಬೇಕು. ಒಂದು ವೇಳೆ ಯಾರೂ ವಾರಸುದಾರರು ಬಾರದ ಪಕ್ಷದಲ್ಲಿ ಕಾನೂನು ರೀತಿಯ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Great Doddaballapura

ಕಂಬಕ್ಕೆ ಗುದ್ದಿ ನಜ್ಜುಗುಜ್ಜಾದ ಕಾರುದೊಡ್ಡಬಳ್ಳಾಪುರ: ಅತಿವೇಗವಾಗಿ ಚಲಿಸುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಲೈಟ್ ಕಂಬಕ...
07/07/2026

ಕಂಬಕ್ಕೆ ಗುದ್ದಿ ನಜ್ಜುಗುಜ್ಜಾದ ಕಾರು

ದೊಡ್ಡಬಳ್ಳಾಪುರ: ಅತಿವೇಗವಾಗಿ ಚಲಿಸುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಲೈಟ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರು ಸಂಪೂರ್ಣ ನುಜ್ಜುಗೊಜ್ಜಾಗಿದ್ದು, ಕಾರಿನಲ್ಲಿದ್ದ ಇಬ್ಬರು ಯುವಕರು ಪವಾಡ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ತಾಲ್ಲೂಕಿನ ಚೆನ್ನದೇವಿ ಅಗ್ರಹಾರದ ಭಾರತ್ ಪೆಟ್ರೋಲ್ ಬಂಕ್ ಸಮೀಪ ನಡೆದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಲೈಟ್ ಕಂಬಕ್ಕೆ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು, ವಾಹನ ನುಜ್ಜುಗೊಜ್ಜಾಗಿದೆ. ಅಪಘಾತದಲ್ಲಿ ಕಾರಿನಲ್ಲಿದ್ದ ಇಬ್ಬರು ಯುವಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

Great Doddaballapura

ದೊಡ್ಡಬಳ್ಳಾಪುರ; ನಗರದ ಸುತ್ತಲಿನ ಹಲವು ಪ್ರದೇಶಗಳಲ್ಲಿ ಇಂದು ವಿದ್ಯುತ್ ಪೂರೈಕೆ ವ್ಯತ್ಯಯ.ದೊಡ್ಡಬಳ್ಳಾಪುರ ನಗರದಲ್ಲಿ ಜುಲೈ 7ರಂದು ಕೆವಿ ಡಿಕ್ರ...
07/07/2026

ದೊಡ್ಡಬಳ್ಳಾಪುರ; ನಗರದ ಸುತ್ತಲಿನ ಹಲವು ಪ್ರದೇಶಗಳಲ್ಲಿ ಇಂದು ವಿದ್ಯುತ್ ಪೂರೈಕೆ ವ್ಯತ್ಯಯ.

ದೊಡ್ಡಬಳ್ಳಾಪುರ ನಗರದಲ್ಲಿ ಜುಲೈ 7ರಂದು ಕೆವಿ ಡಿಕ್ರಾಸ್ ಉಪ ವಿದ್ಯುತ್ ಕೇಂದ್ರದಿಂದ ಹೊರವೊಮ್ಮುವ F15-Tropical Flavours ಮತ್ತು 220/66/11 ಕೆವಿ ಕೆಐಎಡಿಬಿ ಉಪ ವಿದ್ಯುತ್ ಕೇಂದ್ರದಿಂದ ಹೊರವೊಮ್ಮುವ KF17-Jakkasandra, ಫೀಡರ್‌ಗಳಲ್ಲಿ ವಿದ್ಯುತ್ ಕಾಮಗಾರಿಗಳು ನಡೆಯುವುದರಿಂದ ಈ ಫೀಡರ್‌ಗಳ ಮಾರ್ಗದಲ್ಲಿ ಬೆಳಿಗ್ಗೆ 10:00 ಗಂಟೆ ಇಂದ ಮದ್ಯಾಹ್ನ 06:00 ಗಂಟೆವರೆಗೆ ವಿದ್ಯುತ್ ವ್ಯತ್ಯಯವಿರಲಿದೆ ಎಂದು ಬೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿದ್ಯುತ್ ಅಡಚಣೆಯಾಗುವ ಪ್ರದೇಶಗಳು:

ಕುರುಬರಹಳ್ಳಿ, ರಾಜೀವ್‌ಗಾಂಧಿ ಬಡಾವಣೆ, ಮಾದಗೊಂಡನಹಳ್ಳಿ, ಕೋಳೂರು, ಹಸನ್‌ಘಟ್ಟ, ತಳಗವಾರ, ನಾಗದೇನಹಳ್ಳಿ, ಮೋಪರಹಳ್ಳಿ, ಆದಿನಾರಾಯಣ ಹೊಸಹಳ್ಳಿ, ನಾಗದೇನಹಳ್ಳಿ, ಮೋಪರಹಳ್ಳಿ, ಆದಿನಾರಾಯಣ ಹೊಸಹಳ್ಳಿ, ಹಮಾಮ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.

Great Doddaballapura

ನಿ*ಧನ ವಾರ್ತೆದೊಡ್ಡಬಳ್ಳಾಪುರ: ನಗರದಲ್ಲಿ ಭದ್ರಣ್ಣ ಹೋಟೆಲ್ ಬ್ರಾಂಡ್ ಸೃಷ್ಟಿಸಿರುವ ಹಾಗೂ ಮಾಜಿ ಪುರಸಭಾ ಸದಸ್ಯ ರೋಜಿಪುರ ನಿವಾಸಿ ಬಿ.ಕೆ.ವೀರಭದ...
06/07/2026

ನಿ*ಧನ ವಾರ್ತೆ

ದೊಡ್ಡಬಳ್ಳಾಪುರ: ನಗರದಲ್ಲಿ ಭದ್ರಣ್ಣ ಹೋಟೆಲ್ ಬ್ರಾಂಡ್ ಸೃಷ್ಟಿಸಿರುವ ಹಾಗೂ ಮಾಜಿ ಪುರಸಭಾ ಸದಸ್ಯ ರೋಜಿಪುರ ನಿವಾಸಿ ಬಿ.ಕೆ.ವೀರಭದ್ರಯ್ಯ(83) ಸೋಮವಾರ ನಿಧನರಾಗಿದ್ದಾರೆ.
ಮೃತರಿಗೆ ಪತ್ನಿ, ಮೂರು ಜನ ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ. ಮೃತರ ಅಂತ್ಯಕ್ರಿಯೆ ಮಂಗಳವಾರ ಮಧ್ಯಾಹ್ನ 1 ಗಂಟೆಗೆ ನಗರದ ತೋಟಗಾರಿಕೆ ಇಲಾಖೆ ಸಮೀಪದ ವೀರಶೈವ ರುದ್ರಭೂಮಿಯಲ್ಲಿ ನಡೆಯಲಿದೆ.

Great Doddaballapura

ದೊಡ್ಡಬಳ್ಳಾಪುರ ನಗರದ ಈ ವಾರ್ಡ್ ಗಳಲ್ಲಿ ಇಂದು ವಿದ್ಯುತ್ ಪೂರೈಕೆ ಸ್ಥಗಿತದೊಡ್ಡಬಳ್ಳಾಪುರ ನಗರದ ಈ ಕೆಳಕಂಡ ವಾರ್ಡ್ ಗಳಲ್ಲಿ ಜುಲೈ.6ರಂದು ಇಂದು ...
06/07/2026

ದೊಡ್ಡಬಳ್ಳಾಪುರ ನಗರದ ಈ ವಾರ್ಡ್ ಗಳಲ್ಲಿ ಇಂದು ವಿದ್ಯುತ್ ಪೂರೈಕೆ ಸ್ಥಗಿತ

ದೊಡ್ಡಬಳ್ಳಾಪುರ ನಗರದ ಈ ಕೆಳಕಂಡ ವಾರ್ಡ್ ಗಳಲ್ಲಿ ಜುಲೈ.6ರಂದು ಇಂದು ಡಿ.ಕ್ರಾಸ್ ಉಪ ವಿದ್ಯುತ್ ಕೇಂದ್ರದಿಂದ Telephone Exchange, DF7-Local-1 ಕಾಮಗಾರಿಗಳು ನಡೆಯುವುದರಿಂದ ಸದರಿ, ಫೀಡರ್‌ಗಳ ಈ ಮಾರ್ಗದಲ್ಲಿ ಬೆಳಿಗ್ಗೆ 10:00 ಗಂಟೆ ಇಂದ ಮದ್ಯಾಹ್ನ 02:00 ಗಂಟೆವರೆಗೆ ವಿದ್ಯುತ್ ವ್ಯತ್ಯಯವಿರಲಿದೆ ಎಂದು ಬೆಸ್ಕಾಂ ಅಧಿಕಾರಿಗಳು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

ವಿದ್ಯುತ್ ಅಡಚಣೆಯಾಗುವ ಪ್ರದೇಶಗಳು:

ಸೋಮೇಶ್ವರ ಬಡಾವಣೆ, ರೋಜಿಪುರ, ವಿನಾಯಕನಗರ, ಗಂಗಾಧರಪುರ, ಬಸವೇಶ್ವರನಗರ, ದೊಡ್ಡಮ್ಮ ದೇವಸ್ಥಾನ, ಶಾಂತಿನಗರ, ಇಸ್ಲಾಂಪುರ, ತ್ಯಾಗರಾಜನಗರ, ಕಲ್ಲುಪೇಟೆ, ಕರೇನಹಳ್ಳಿ, ದೇವರಾಜನಗರ, ಕೊಂಗಾಡಿಯಪ್ಪ ಮೈನ್‌ರೋಡ್, ದೇವರಾಜನಗರ, ಕನಕದಾಸರಸ್ತೆ, ಬಸವಣ್ಣ ದೇವಸ್ಥಾನದ ರಸ್ತೆ, ವೀರಾಪುರ, ಖಾಸ್‌ಬಾಗ್, ರಂಗಪ್ಪ ಸರ್ಕಲ್, ಗಾಂಧಿನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.

Great Doddaballapura

ದೊಡ್ಡಬಳ್ಳಾಪುರ ನಗರದಲ್ಲಿ ಶ್ರದ್ದಾಭಕ್ತಿಯಿಂದ ಮೊಹರಂ ಆಚರಣೆದೊಡ್ಡಬಳ್ಳಾಪುರ ನಗರದ ಕೋಟೆ ರಸ್ತೆಯಲ್ಲಿರುವ ಕಿಲ್ಲಾ ಮಸೀದಿಯಲ್ಲಿ ಮೊಹರಂ (Muharr...
04/07/2026

ದೊಡ್ಡಬಳ್ಳಾಪುರ ನಗರದಲ್ಲಿ ಶ್ರದ್ದಾಭಕ್ತಿಯಿಂದ ಮೊಹರಂ ಆಚರಣೆ

ದೊಡ್ಡಬಳ್ಳಾಪುರ ನಗರದ ಕೋಟೆ ರಸ್ತೆಯಲ್ಲಿರುವ ಕಿಲ್ಲಾ ಮಸೀದಿಯಲ್ಲಿ ಮೊಹರಂ (Muharram) ಅಂಗವಾಗಿ ಹಸೇನ್-ಹುಸೇನ್ ಆಚರಣೆ ಶ್ರದ್ದಾಭಕ್ತಿಯಿಂದ ನಡೆಯಿತು.

ಅಂಜುಮನ್‌ ಎ ಹೈದರಿಯ ಸಂಘಟನೆ ನೇತೃತ್ವದಲ್ಲಿ ಹಾಗೂ ಹುಸೇನ್ ಕಮಿಟಿಯ ಸಹಕಾರದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ದೇಶದ ವಿವಿಧ ಭಾಗಗಳಿಂದ ಹಾಗೂ ವಿದೇಶಗಳಿಂದ ಆಗಮಿಸಿದ್ದ ಸಾವಿರಾರು ಮುಸ್ಲಿಂ ಬಾಂಧವರು ಭಾಗವಹಿಸಿ ಪ್ರಾರ್ಥನೆ ಸಲ್ಲಿಸಿದರು.

ದಕ್ಷಿಣ ಭಾರತದಲ್ಲಿಯೇ ದೊಡ್ಡಬಳ್ಳಾಪುರದಲ್ಲಿ ನಡೆಯುವ ಈ ಮೊಹರಂ ಆಚರಣೆ ಪ್ರಮುಖ ಧಾರ್ಮಿಕ ಸಂಪ್ರದಾಯಗಳಲ್ಲಿ ಒಂದಾಗಿದ್ದು, ಸುಮಾರು 269 ವರ್ಷಗಳ ಇತಿಹಾಸ ಹೊಂದಿದೆ.

ಪ್ರತಿವರ್ಷ ದೇಶದ ವಿವಿಧ ರಾಜ್ಯಗಳಿಂದ ಮಾತ್ರವಲ್ಲದೆ ವಿದೇಶಗಳಿಂದಲೂ ಅಬಾಲವೃದ್ಧಿಯಾಗಿ ಸಾವಿರಾರು ಭಕ್ತರು ಆಗಮಿಸಿ ಈ ಧಾರ್ಮಿಕ ಆಚರಣೆಯಲ್ಲಿ ಪಾಲ್ಗೊಳ್ಳುವುದು ವಿಶೇಷವಾಗಿದೆ.

ದೊಡ್ಡಬಳ್ಳಾಪುರ ನಗರ ಸೇರಿದಂತೆ ತಾಲ್ಲೂಕಿನ ಹಲವೆಡೆ ನಾಳೆ ವಿದ್ಯುತ್ ಪೂರೈಕೆ ಸ್ಥಗಿತದೊಡ್ಡಬಳ್ಳಾಪುರ ನಗರದ ಕೆಐಎಡಿಬಿ ಉಪ ವಿದ್ಯುತ್‌ ಕೇಂದ್ರದ ...
04/07/2026

ದೊಡ್ಡಬಳ್ಳಾಪುರ ನಗರ ಸೇರಿದಂತೆ ತಾಲ್ಲೂಕಿನ ಹಲವೆಡೆ ನಾಳೆ ವಿದ್ಯುತ್ ಪೂರೈಕೆ ಸ್ಥಗಿತ

ದೊಡ್ಡಬಳ್ಳಾಪುರ ನಗರದ ಕೆಐಎಡಿಬಿ ಉಪ ವಿದ್ಯುತ್‌ ಕೇಂದ್ರದ ಫೀಡರ್ ಗಳಲ್ಲಿ ವಿದ್ಯುತ್ ಕಾಮಗಾರಿ ನಡೆಯುವುದರಿಂದ ಜುಲೈ 5ರಂದು ಬೆಳಿಗ್ಗೆ 10:00 ಗಂಟೆ ಇಂದ ಮದ್ಯಾಹ್ನ 02:00 ಗಂಟೆವರೆಗೆ ವಿದ್ಯುತ್ ವ್ಯತ್ಯಯವಿರುತ್ತದೆ ಎಂದು ಬೆಸ್ಕಾಂ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿದ್ಯುತ್‌ ಅಡಚಣೆಯಾಗುವ ಪ್ರದೇಶಗಳು:

ಸೋಮೇಶ್ವರ ಬಡಾವಣೆ, ರೋಜಿಪುರ, ವಿನಾಯಕನಗರ, ಗಂಗಾಧರಪುರ, ಬಸವೇಶ್ವರನಗರ, ದೊಡ್ಡಮ್ಮ ದೇವಸ್ಥಾನ, ಶಾಂತಿನಗರ, ಇಸ್ಲಾಂಪುರ, ತ್ಯಾಗರಾಜನಗರ, ಕಲ್ಲುಪೇಟೆ, ಕರೇನಹಳ್ಳಿ, ದೇವರಾಜನಗರ, ಕೊಂಗಾಡಿಯಪ್ಪ ಮೈನ್‌ರೋಡ್, ದೇವರಾಜನಗರ, ಕನಕದಾಸರಸ್ತೆ, ಬಸವಣ್ಣ ದೇವಸ್ಥಾನದ ರಸ್ತೆ, ವೀರಾಪುರ, ಖಾಸ್‌ಬಾಗ್, ರಂಗಪ್ಪ ಸರ್ಕಲ್, ಗಾಂಧಿನಗರ, ತೇರಿನಬೀದಿ, ಕೊಂಗಾಡಿಯಪ್ಪ ಮೈನ್ ರೋಡ್, ಸಂಜಯನಗರ, ಕೆ.ಸಿ.ಪಿ.ಸರ್ಕಲ್, ಬಸವಣ್ಣ ದೇವಸ್ಥಾನ ರಸ್ತೆ, ಆಲಹಳ್ಳಿ, ನಾಗಸಂದ್ರ, ಕುಚ್ಚಪ್ಪನಪೇಟೆ,, ಸಂಜಯ್‌ ನಗರ, ಭುವನೇಶ್ವರಿನಗರ, ಚೈತನ್ಯನಗರ, ವೀರಾಪುರ, ಗಾಂಧಿನಗರ, ಖಾಸ್‌ಬಾಗ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.

Great Doddaballapura

ದೊಡ್ಡಬಳ್ಳಾಪುರದಲ್ಲಿ ಇಂದು ವಿದ್ಯುತ್ ಸ್ಥಗಿತದೊಡ್ಡಬಳ್ಳಾಪುರ ನಗರ ಮತ್ತು ತಾಲ್ಲೂಕಿನ ಹಲವೆಡೆ ಇಂದು ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ...
03/07/2026

ದೊಡ್ಡಬಳ್ಳಾಪುರದಲ್ಲಿ ಇಂದು ವಿದ್ಯುತ್ ಸ್ಥಗಿತ

ದೊಡ್ಡಬಳ್ಳಾಪುರ ನಗರ ಮತ್ತು ತಾಲ್ಲೂಕಿನ ಹಲವೆಡೆ ಇಂದು ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಅಧಿಕಾರಿಗಳು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

ದೊಡ್ಡಬಳ್ಳಾಪುರ ನಗರದಲ್ಲಿ ದಿನಾಂಕ:-03/07/2026 ರಂದು 66/11ಕೆವಿ ತೂಬಗೆರೆ ಉಪ ವಿದ್ಯುತ್ ಕೇಂದ್ರದಿಂದ ಹೊರವೊಮ್ಮುವ F01-Pragathi, F02-Tapasipura, ಫೀಡರ್‌ಗಳಲ್ಲಿ ಬೆಳಿಗ್ಗೆ 10:00 ಗಂಟೆ ಇಂದ ಮದ್ಯಾಹ್ನ 03:00 ಗಂಟೆವರೆಗೆ ನಿರ್ವಹಣಾ ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ ಸದರಿ ಫೀಡರ್‌ನ ಮಾರ್ಗಗಳಲ್ಲಿ ಮೇಲ್ಕಂಡ ಸಮಯದಲ್ಲಿ ವಿದ್ಯುತ್ ವ್ಯತ್ಯಯವಿರುತ್ತದೆ. ಆದ್ದರಿಂದ ಗ್ರಾಹಕರು ಸಹಕರಿಸ ಬೇಕಾಗಿ ಕೋರಲಾಗಿದೆ.

ವಿದ್ಯುತ್ ಅಡಚಣೆಯಾಗುವ ಪ್ರದೇಶಗಳು:

ಗಂಟಗಾನಹಳ್ಳಿ, ಕಾವಲಹಳ್ಳಿ, ಮಾರಹಳ್ಳಿ, ಭೂಮೇನಹಳ್ಳಿ, ಮೆಳೇಕೋಟೆ, ಚಿಕ್ಕರಾಯಪ್ಪನಹಳ್ಳಿ, ದೊಡ್ಡರಾಂಯಪ್ಪನಹಳ್ಳಿ, ಸಾಧುಮಠ, ಸೊಣ್ಣಾಪುರ, ಚೌಗೊಂಡನಹಳ್ಳಿ, ಮುಕ್ಕೇನಹಳ್ಳಿ, ಮೆಳೇಕೋಟೆ ಕ್ರಾಸ್, ಊದನಹಳ್ಳಿ, ಹೆಗ್ಗಡಿಹಳ್ಳಿ, ಕಣಿವೇಪುರ, ಸೊಣ್ಣಮಾರನಹಳ್ಳಿ, ಮಾಚಗೊಂಡನಹಳ್ಳಿ, ಗೂಳ್ಯ, ನಂದಿಗುಂದ, ದಂಡುದಾಸ ಕೊಡಿಗೇಹಳ್ಳಿ, ವಾಸುದೇವನಹಳ್ಳಿ, ಕುರುಬರಹಳ್ಳಿ, ಸೀಗೇಹಳ್ಳಿ, ಚನ್ನಾಪುರ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.

Great Doddaballapura

ವಿದ್ಯುತ್ ಸ್ಪರ್ಶ, ದಿನಸಿ ಅಂಗಡಿ ಮಾಲೀಕ ನಿಧನವಿದ್ಯುತ್‌ ಸ್ಪರ್ಶಗೊಂಡು ದಿನಸಿ ಅಂಗಡಿ ಮಾಲೀಕರೊಬ್ಬರು ಮೃತಪಟ್ಟಿರುವ ದುರ್ಘಟನೆ ಗುರುವಾರ ಸಂಜೆ ...
02/07/2026

ವಿದ್ಯುತ್ ಸ್ಪರ್ಶ, ದಿನಸಿ ಅಂಗಡಿ ಮಾಲೀಕ ನಿಧನ

ವಿದ್ಯುತ್‌ ಸ್ಪರ್ಶಗೊಂಡು ದಿನಸಿ ಅಂಗಡಿ ಮಾಲೀಕರೊಬ್ಬರು ಮೃತಪಟ್ಟಿರುವ ದುರ್ಘಟನೆ ಗುರುವಾರ ಸಂಜೆ ದೊಡ್ಡಬಳ್ಳಾಪುರದ ಚೈತನ್ಯ ನಗರ ದತ್ತಾತ್ರೇಯ ಬಡಾವಣೆಯಲ್ಲಿ ನಿರ್ಮಾಣವಾಗುತ್ತಿರುವ ನೂತನ ಲೇಔಟ್‌ನಲ್ಲಿ ನಡೆದಿದೆ.

ಅರಳುಮಲ್ಲಿಗೆ ಬಾಗಿಲು ಪ್ರೌಢಶಾಲೆ ಸಮೀಪ ನಿರ್ಮಾಣವಾಗುತ್ತಿರುವ ಲೇಔಟ್‌ನಲ್ಲಿ ಇಂದು ಸಂಜೆ ಸುಮಾರು 7 ಗಂಟೆ ವೇಳೆಗೆ ಈ ಅವಘಡ ಸಂಭವಿಸಿದೆ.

ದೇವರಾಜನಗರ ನಿವಾಸಿ ಹಾಗೂ ಅರಳುಮಲ್ಲಿಗೆ ಬಾಗಿಲು ಬಳಿ ದಿನಸಿ ಅಂಗಡಿ ನಡೆಸುತ್ತಿದ್ದ ಸತೀಶ್ (35 ವರ್ಷ) ಮೃತಪಟ್ಟವರು.

ಸ್ಥಳೀಯರ ಮಾಹಿತಿ ಪ್ರಕಾರ, ಸತೀಶ್ ಅವರು ಲೇಔಟ್ ಸಮೀಪಕ್ಕೆ ತೆರಳಿದ್ದ ವೇಳೆ ವಿದ್ಯುತ್ ಸ್ಪರ್ಶಗೊಂಡಿದ್ದು, ಗಂಭೀರವಾಗಿ ಗಾಯಗೊಂಡ ಅವರನ್ನು ತಕ್ಷಣ ದೊಡ್ಡಬಳ್ಳಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ ಎನ್ನಲಾಗಿದೆ.

Great Doddaballapura

Address

Doddaballapur
561203

Website

Alerts

Be the first to know and let us send you an email when Great Doddaballapura posts news and promotions. Your email address will not be used for any other purpose, and you can unsubscribe at any time.

Contact The School

Send a message to Great Doddaballapura:

Shortcuts

Share

Category