24/08/2026
*ಪಾಲಕರ ಸಭೆ*
ನಮ್ಮ ಶ್ರೀ ಸಾಯಿ ಕಾಲೇಜಿನಲ್ಲಿ ವಿದ್ಯಾರ್ಥಿಗಳ *ಪಾಲಕರ ಸಭೆ* ಯನ್ನು
19-08-2026 ರಂದು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳ ಪಾಲಕರಿಗೆ
ಹಾಗೂ
20-08-2026 ರಂದು ವಿಜ್ಞಾನ ವಿಭಾಗದ ವಿದ್ಯಾರ್ಥಿಗಳ ಪಾಲಕರಿಗೆ
ಏರ್ಪಡಿಸಲಾಯಿತು.
ವಿದ್ಯಾರ್ಥಿಗಳ ಅಭ್ಯಾಸ, ಕಿರು ಪರೀಕ್ಷೆಗಳಲ್ಲಿ ಪಡೆದ ಅಂಕಗಳ ಕುರಿತು, ಮುಂದಿನ ಪರೀಕ್ಷೆಗೆ ಪಾಲಕರು ಮಕ್ಕಳನ್ನು ಮನೆಯಲ್ಲಿ ತಯಾರಿ ಮಾಡುವ , SATS, KSEAB, ಆಂತರಿಕ ಅಂಕಗಳ ಕುರಿತು, ಹಾಜರಾತಿ, ಪರೀಕ್ಷಾ ಮಾರ್ಗಸೂಚಿಗಳ ಕುರಿತು ಎಲ್ಲರಿಗೂ ವೈಯಕ್ತಿಕವಾಗಿ ತಿಳಿಸಲಾಯಿತು.
ಸಂಸ್ಥೆಯ ಅಧ್ಯಕ್ಷರಾದ
ಡಾ. ವೀಣಾ ಬಿರಾದಾರ ಮೇಡಂ ಇವರು ಮಕ್ಕಳನ್ನು ಬೆಳೆಸುವ ಬಗೆ, ವಿದ್ಯಾರ್ಥಿಗಳ ನಿರಂತರ ಅಧ್ಯಯನ, ಅವರ ಕ್ರಿಯಾಶೀಲತೆ, ಸೃಜನಾತ್ಮಕತೆ ಬೆಳೆಸುವ ರೀತಿ ,
ಹಾಗೂ ನಮ್ಮ ಕಾಲೇಜಿನಲ್ಲಿ ಮಾಡುತ್ತಿರುವ ವಿನೂತನ ಯೋಜನೆಗಳ ಬಗ್ಗೆ ಪಾಲಕರಿಗೆ ತಿಳಿಸಿದರು.
ವೈಯಕ್ತಿಕ ಕಾಳಜಿಯೊಂದಿಗೆ ವಿದ್ಯಾರ್ಥಿಗಳನ್ನು ಬೆಳೆಸುವ ಪರಿ ಹಾಗೂ ಸಂಸ್ಥೆಯ ಕಾರ್ಯಗಳನ್ನು ಅರಿತ ಪಾಲಕರು ಅನಿಸಿಕೆಗಳನ್ನು ಹಂಚಿಕೊಂಡು ಹರ್ಷ ವ್ಯಕ್ತಪಡಿಸಿದರು.
ಪಾಲಕರ ಸಭೆಯಲ್ಲಿ ಸಂಸ್ಥೆಯ ಅಧ್ಯಕ್ಷರು, ಪ್ರಾಚಾರ್ಯರು, ಉಪನ್ಯಾಸಕರು, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಹಾಗೂ ಪಾಲಕರು ಉಪಸ್ಥಿತರಿದ್ದರು.