Flying Birds school of performing arts

Flying Birds school of performing arts Flying Birds school of performing arts Contact immediately to the following Address. Venue : Bharath Sevadala Bhavana. Contact Numbers : 9482222321

“Om Shri Ganeshaya Namah”

Jai Bharath Trust

Flying Birds school of performing arts

Those who are interested Dance & Drama.. Near Shri Lakshmivenkateshwara Temple.
7th cross , MCC “B” block , Davangere – 577004.

21/08/2015

if you are interested in short movies.. contact us.. Flying Birds Dance Institute Davangere.. !!

10/08/2015

ಬಹುಪಾಲು ಜನರನುಭವಗಳ
ಬರೆಯುವುದರಲ್ಲೇನುಪಯೋಗ
ಬಲ್ಲರೆಲ್ಲರೂ ಆಗುಹೋಗುಗಳ
ಬರೆಯುವ ಮನದ ಮೌನರಾಗ .. !!

*ಪಿಪಿಕೆ*

31/07/2015

Let's invoke Guru's grace on the occasion of Gurupournima (31 July)

Gurupournima (31st July 2015) will be celebrated throughout the world. The day of ‘Gurupournima’ is an important day in Hindu culture and the day to offer gratitude to one’s Guru. It is the day that the Guru Principle or the Teaching Principle of God is thousand times more active than on any other day of the year.

Happy Gurupournima.
(ಗುರುಪೂರ್ಣಿಮೆ ಶುಭಾಶಯಗಳು)

01/01/2014

“Om Shri Ganeshaya Namah”

Jai Bharath Trust

Flying Birds school of performing arts

Those who are interested Dance & Drama..
Contact immediately to the following Address.

Venue : Bharath Sevadala Bhavana.
Near Shri Lakshmivenkateshwara Temple.
7th cross , MCC “B” block , Davangere – 577004.
Conta...

ಬಾಲ್ಯದ ಭೂತ .. !!ಕಥೆಯನ್ನು ಬರೆಯಲು ವಿಭಿನ್ನ ವಿಚಾರಗಳ ಚಿಂತನೆಯಲ್ಲಿರುವಾಗ ನೆನಪಾದದ್ದು ನನ್ನ ಬಾಲ್ಯದ ಕೆಲವು ಕ್ಷಣಗಳು .. ಅದಕ್ಕೆ ಕೆಲವು ದಿ...
27/11/2013

ಬಾಲ್ಯದ ಭೂತ .. !!

ಕಥೆಯನ್ನು ಬರೆಯಲು ವಿಭಿನ್ನ ವಿಚಾರಗಳ ಚಿಂತನೆಯಲ್ಲಿರುವಾಗ ನೆನಪಾದದ್ದು ನನ್ನ ಬಾಲ್ಯದ ಕೆಲವು ಕ್ಷಣಗಳು .. ಅದಕ್ಕೆ ಕೆಲವು ದಿನಗಳು ಅದರ ಬಗ್ಗೆ ಹೆಚ್ಚಾಗಿ ಆಲೋಚನೆ ಮಾಡುತ್ತಾ ನೆನಪಾದ ಕೆಲವು ಸಣ್ಣ ಸಣ್ಣ ಘಟನೆಗಳನ್ನು ಒಂದುಗೂಡಿಸಿ ಕಥೆಯೊಂದನ್ನು ಕಟ್ಟುವ ಪ್ರಯತ್ನ.. ಈ ಕಥೆಯು ನನ್ನ ಬಾಲ್ಯದ ನೆನಪುಗಳಲ್ಲಿ ಒಂದು ವಿಶೇಷ ಪುಟವಾಗಿದೆ .. ಇದು ನಾನು ಹುಬ್ಬಳ್ಳಿಯ ಸರ್ಕಾರಿ ಶಾಲೆಯೊಂದರಲ್ಲಿ ಆರನೇ ತರಗತಿಯಲ್ಲಿ ಇದ್ದಾಗ ನಡೆದದ್ದು .. ಆ ವರ್ಷದಲ್ಲೇ ಅಲ್ಲಿ ಅನೇಕ ಬಗೆಯ ವಿಚಾರಗಳ ಹೊಸ ಪರಿಚಯ .. ಅದಕ್ಕೂ ಮೊದಲು ಐದನೇಯ ತರಗತಿಯವರೆಗೂ ಚಿತ್ರದುರ್ಗದಲ್ಲಿ ನನ್ನ ಬಾಲ್ಯದ ದಿನಗಳನ್ನು ಅನುಭವಿಸಿದ್ದೇನೆ .. ಆದರೆ ಚಿತ್ರದುರ್ಗದಲ್ಲಿ ಕಂಡಿದ್ದ , ಕಲಿಯುತ್ತಿದ್ದ ವಾತಾವರಣ , ದುರ್ಗದ ಕೋಟೆ ಹಾಗೂ ಇನ್ನೂ ಅನೇಕ ವಿಚಾರಗಳ ಪರಿಚಯ ಕಥೆಯ ನಡುವಲ್ಲಿ ಹೇಳುತ್ತೇನೆ.. ಅದಕ್ಕೂ ಮೊದಲು ಹುಬ್ಬಳ್ಳಿಯ ನೆನಪುಗಳ ಜೊತೆಯಲ್ಲಿ ಕಥೆಯನ್ನು ಆರಂಭಿಸುತ್ತಿರುವ ಉದ್ದೇಶವೇನೆಂದರೆ ಕಥೆಯ ಮುಖ್ಯ ಪಾತ್ರವೆಂದರೆ ನನ್ನ ಪಾತ್ರ .. ಜಗತ್ತಿನ ವಿಭಿನ್ನತೆಯ ವಿಚಿತ್ರವೆನ್ನಿಸುವ ವಿಚಾರಗಳ ಪರಿಚಯವಾದ ದಿನಗಳು .. ಆ ದಿನಗಳನ್ನು ನಾನು ಈಗ ನೆನೆದಾಗ ನೆನಪಿನಲ್ಲಿ ಉಳಿದದ್ದು ನೂರಕ್ಕೆ ನಾಲ್ಕಿರಬಹುದಾದರೂ ದೆವ್ವಗಳು ಭೂತಗಳು ಎನ್ನುವುದರ ಮಾನಸಿಕ ಒತ್ತಡ ಮತ್ತು ಕುತೂಹಲ ಉಂಟಾಗಿದ್ದು ಆ ವರ್ಷದಲ್ಲೇ ಅತೀ ಹೆಚ್ಚು .. ಮತ್ತು ಯಾವುದೋ ಒಂದು ಪಾತ್ರವನ್ನು ಕಲ್ಪನೆ ಮಾಡಿಕೊಂಡು ಬರೆಯುವುದಕ್ಕಿಂದ ಬಾಲ್ಯದ ನನ್ನ ಪಾತ್ರಕ್ಕೆ ಒಂದಷ್ಟು ಬಣ್ಣಗಳ ಹಚ್ಚಿಟ್ಟು ಓದುಗರ ಕುತೂಹಲ ಮತ್ತು ಅವರ ಬಾಲ್ಯದ ನೆನಪುಗಳಲ್ಲಿ ನನ್ನನ್ನು ಹುಡುಕುವ ಪುಟ್ಟದಾದ ಪ್ರಯತ್ನ.. ಇಲ್ಲಿ ಘಟನೆಗಳ ಸಮಯ, ವಸ್ತು, ಸ್ಥಳ ಹಾಗೂ ವ್ಯಕ್ತಿಗಳ ಪರಿಚಯದಲ್ಲಿ ಒಂದಷ್ಟು ಅದಲು ಬದಲಾಗುವ ಸಾಧ್ಯತೆಗಳು ಇವೆ .. ಕಾರಣ ಆ ದಿನಗಳ ಸಂಪೂರ್ಣ ನೆನಪುಗಳು ಇಲ್ಲದಿರುವುದು .. ಹಾಗಾಗಿ ಇಲ್ಲಿ ಪಾತ್ರಗಳ ಹೆಸರುಗಳು ಮಾತ್ರ ಕಾಲ್ಪನಿಕವಷ್ಟೇ .. ಘಟನೆಗಳು ಎಲ್ಲವೂ ಬಾಲ್ಯದ ಅನುಭವಗಳು ಎನ್ನುವುದಂತೂ ಸತ್ಯ .. !!

ಕಥೆಯನ್ನು ಪ್ರಾರಂಭಿಸುತ್ತ , ಬಾಲ್ಯದ ಆಟಗಲ್ಲಿ ಅನುಭವಿಸಿದ ವಿಚಿತ್ರ ಕ್ಷಣಗಳ ನೆನಪುಗಳು .. ದೆವ್ವ ಭೂತಗಳ ಬಗೆಗಿನ ಕೆಲವು ಅನುಮಾನಾಸ್ಪದ ಪ್ರಶ್ನೆಗಳು ಮತ್ತು ಅವುಗಳಿಗೆ ಉತ್ತರ ಹುಡುಕುವ ಯತ್ನದಲ್ಲಿ ಬದಲಾದ ಬದುಕಿನ ಆಲೋಚನೆಗಳು .. ಮೊದಲ ಬಾರಿ ಭಯ ಹುಟ್ಟಿಸಿದ್ದ ಫುಟ್ಬಾಲ್ ಆಟ .. ಚೆಂಡಾಟ ಅಂತಾನೂ ಹೇಳಬಹುದು .. ಈ ಆಟದಲ್ಲಿ ಚಿಕ್ಕದಾಗಿ ಮನದಲ್ಲಿ ಚಿಗುರೊಡೆದ ಒಂದು ರೀತಿಯ ಭಯ ಅನ್ನಬಹುದು ಅಥವಾ ಹೊಸತನ್ನು ಕಲಿಯುವ ಹುಚ್ಚು ಕುತೂಹಲ ಅಂತಲೂ ಹೇಳಬಹುದು.. ಒಟ್ಟಿನಲ್ಲಿ ಕಥೆಯನ್ನು ಓದಲು ತೊಂದರೆಯಾಗದಿರಲೆಂದು ಕೆಲವು ಭಾಗಗಳಲ್ಲಿ ವಿಂಗಡಿಸಿ ನಿಮ್ಮೆಲ್ಲರ ಮುಂದಿಡುತ್ತೇನೆ .. !!

ಆಗಷ್ಟೇ ನಾನು ಹುಬ್ಬಳಿಯ ಸರ್ಕಾರಿ ಶಾಲೆಯಲ್ಲಿ ಸೇರಿಕೊಂಡು ಒಂದೆರಡು ದಿನಗಳು ಆಗಿತ್ತು .. ಇಂಗ್ಲೀಷ್ ಮೇಷ್ಟ್ರು ಆ ದಿನ ರಜಾ .. ಹಾಗಾಗಿ ಆಡಲು ಬಿಟ್ಟರು .. ಎಲ್ಲಾ ಹುಡುಗರು ಫುಟ್ಬಾಲ್ (ಆಗ ಅಲ್ಲಿ ಅದಕ್ಕೆ ಚೆಂಡಾಟ ಅನ್ನುತ್ತಿದ್ದರು) ಆಡಲು ಹೋದರು .. ಹುಡುಗಿಯರು ಕೆಲವು ಗುಂಪುಗಳಲ್ಲಿ ಬೇರೆ ಬೇರೆ ಆಟವಾಡಲು ಹೋದರು .. ಹೊಸಾ ವಾತಾವರಣ & ಯಾರ ಪರಿಚಯವೂ ಹೆಚ್ಚಾಗಿ ಇಲ್ಲದ ಕಾರಣ ನಾನು ಸುಮ್ಮನೇ ಅವರ ಆಟವನ್ನು ನೋಡುತ್ತಾ ನಿಂತಿದ್ದೆ .. ಒಬ್ಬ ಹುಡುಗ ಬಿದ್ದು ಕಾಲಿಗೆ ಹೆಚ್ಚು ಪೆಟ್ಟಾಗಿ ರಕ್ತ ಸುರಿಯಲು ಶುರುವಾಯಿತು .. ಆಗ ಅವನ ಬದಲು ನನ್ನನ್ನು ಆಡಲು ಕರೆದರು .. ಆಗಲೇ ಎಲ್ಲರ ಪರಿಚಯ ಹೆಚ್ಚಾಗಿ ಆದದ್ದು .. ಆ ವಿಚಾರ ಆಮೇಲೆ ಹೇಳುವೆ .. ಅದರಲ್ಲಿ ಒಬ್ಬ ನನ್ನನ್ನು ಗೋಲೀ ಹತ್ರ ಹೋಗಿ ನಿಂದ್ರು ಅಂದಾ ... ನಾನೂ ಕೂಡ ಅಲ್ಲೆಲ್ಲಾ ಹುಡುಕಾಡಿದೆ ಅಲ್ಯಾವುದೇ ಗೋಲಿ ಕಾಣಲಿಲ್ಲ .. ಆಗ ಅವನು ನನ್ನ ಬಳಿ ಓಡಿ ಬಂದು ಗೆರೆಗಳನ್ನು ಹಾಕಿದ್ದ ಜಾಗ ತೋರಿಸಿ ಇಲ್ಲೇ ನಿಂದ್ರು ನಿನ್ ಕಡಿ ಚೆಂಡು ಬಂದ್ರ ಹಿಡಿಬೇಕು ಗೊತ್ತಲ್ಲಾ ಆಟ .. ಟೀವ್ಯಾಗ ನೋಡಿಲ್ವಾ ಅಂತಂದ ಅವನು .. ನಾನು ಆಗ ಓಹೋ ನಾನು ಗೋಲ್ ಕೀಪರ್ ಹಾಗಿದ್ರೆ ಅರ್ಥವಾಯಿತು ಇಲ್ಲಿ ನೀನು ಗೋಲಿ ಅಂದಾಗ ಆಡುವ ಗಾಜಿನ ಗೋಲಿ ಹುಡುಕ್ತಾ ಇದ್ದೆ .. ಈಗ ಎಲ್ಲಾ ಸರಿ ಅರ್ಥವಾಯಿತು.. ನಮ್ಮ ಚಿತ್ರದುರ್ಗದಲ್ಲಿ ಗೋಲ್ ಕಂಬಗಳು ಇರುತ್ತಿದ್ದವು ... ಬಹು ದೊಡ್ಡ ಮೈದಾನದಲ್ಲಿ ಆಡಿದ್ದೀನಿ ಫುಟ್ಬಾಲ್ ಆಟ ಗೊತ್ತು ಹೋಗು ಆಟ ಶುರು ಮಾಡು ಎಂದು ಹೇಳಿದೆ .. ಆಟ ಶುರುವಾಯಿತು .. ಚಿಕ್ಕದಾದ ಮೈದಾನದಲ್ಲಿ ನಡುವಲ್ಲಿ ಎಲ್ಲಾ ಹುಡುಗರು ಓಡುತ್ತಾ ಏನನ್ನೋ ಒದೆಯುತ್ತಿದ್ದರು .. ನಾನು ಗೋಲ್ ಕೀಪರ್ ಆಗಿ ಸುಮ್ಮನೇ ನಿಂತಿದ್ದೆ ... ಎದುರಿನಲ್ಲಿ ಒಂದು ಗೋಲ್ ಆಯಿತು ಕಿರುಚಾಟ ಹಾರಾಟ ಜೋರಾಯಿತು .. ಆದರೆ ಏನನ್ನು ಒದ್ದದ್ದು ಎಂದು ದೂರದಿಂದ ಗೊತ್ತಾಗಲಿಲ್ಲ .. ಕೂಗಿ ಕೇಳಿದೆ ಬಾಲ್ ಎಲ್ಲಿದೆ ಎಂದು .. ಸ್ವಲ್ಪ ದೂರದಿಂದ ಸದ್ದಾಯಿತು ಚೆಂಡು ಚಿಕ್ಕದು ಹತ್ರ ಬಂದ್ರ ಗೋಲು ಬಿಟ್ ಬಿಡಬ್ಯಾಡ ಹೆಂಗಾರ ಮಾಡಿ ತಡಿ ಅಂತಾ ... ನಾನು ಓಕೆ ಓಕೆ ಅಂತಂದೆ .. ಮತ್ತೆ ಆಟ ಶುರುವಾಯಿತು .. ಈಗ ನನ್ನತ್ತ ಓಡುತ್ತಾ , ಬಾಲನ್ನು ಒದೆಯುತ್ತಾ ಪಾಸ್ ಹಾಕಲೇ ಪಾಸ್ ಓದಿಯಲೇ ಅನ್ನೋ ಕಿರುಚಾಟ ಜೋರಾಯಿತು .. ಒಬ್ಬ ಜೋರಾಗಿ ಒದ್ದ ಆ ಬಾಲ್ ನನ್ನ ಹತ್ತಿರ ಬರುವಾಗ ಕ್ಯಾಚ್ ಕ್ಯಾಚ್ ಅಂತಾ ಕೂಗು ಕೇಳಿಸಿದಾಗ ನಾನೂ ಒಂದೆರಡು ಹೆಜ್ಜೆ ಮುಂದಿಟ್ಟು ಅದನ್ನು ಹಿಡಿದು ಮೇಲೆತ್ತಿಕೊಳ್ಳುವಾಗ ನನ್ನೆದೆ ಒಮ್ಮೆಲೇ ಜುಮ್ಮೆಂದು ಮನದೊಳಕೆ ಹೇಳಲಾಗದ ಭಯ .. ಅವರೆಲ್ಲಾ ಮಾತಿನಂತೆ ಅದು ನಿಜಕ್ಕೂ ಚೆಂಡಾಟ .. ಚೆಂಡು ಎಂದರೆ ಗೊಂಬೆಯ ರುಂಡ .. ತಲೆಯಲ್ಲಾ ಗಿರಗಿರನೆ ತಿರುಗಿದಂತಾಗಿ ದೂರಕ್ಕೆ ಎಸೆದು ಇದನ್ನೆಲ್ಲಾ ಆಡಲು ತರಬೇಡಿ ಒಂದು ಹೊಸಾ ಬಾಲ್ ತರಲು ಹೇಳಿದೆ .. ಅದಕ್ಕಾ ರೊಕ್ಕಾ ಬೇಕಲ್ಲಾ ಅಂದಾ ಒಬ್ಬ .. ಅದೇ ಮೊದಲು ರೊಕ್ಕಾ ಅನ್ನೋ ಪದ ಕೇಳಿದ್ದು .. ಏನದು ಹಾಗಂದ್ರೆ ಅಂತಾ ಕೇಳಿದಾಗ ಮತ್ತೊಬ್ಬ ಹೇಳಿದ್ದು ನೀನ್ಯಾವ ಸೀಮ್ಯಾಗಿಂದ ಬಂದಿಯೋ ರೊಕ್ಕಾ ಅಂದ್ರ ತಿಳಿಯಕ್ಕಿಲ್ವಾ ಕಾಸು ಹಣ ಅಂದಾಗ ಓಹೋ ಅದಕ್ಕೆ ರೊಕ್ಕಾ ಅಂತಾರಾ ಇಲ್ಲಿ .. ಸರಿ ಬಾಲಿನ ದುಡ್ಡು (ರೊಕ್ಕಾ) ನಾನು ಕೊಡ್ತೀನಿ ನಾಳೆ ತರೋಣ ಅಂತ್ಹೇಳಿ ಮತ್ತೆ ಗೋಲ್ ಬಳಿ ನಿಂತಾಗ ಒಬ್ಬ ಹುಡುಗಿ ಓಡೋಡಿ ಬಂದು ಸ್ವಲ್ಪ ದೂರದಿಂದ ಕೂಗಿದಳು .. ಆಗ ಇನ್ನಿಬ್ಬರು ಹುಡುಗಿಯರು ಅವಳ ಹಿಂದೆ ಓಡಿ ಬಂದರು .. ಸಮಾಜ ಮೇಷ್ಟ್ರು ಬಂದ್ರು ಬರ್ರಿ ಎಲ್ಲಾ ಅಂತಾ ಕೂಗಿದಾಗ ಜೊತೆಯಲ್ಲೇ ಒಬ್ಬ ಹುಡುಗಿ ನನ್ನ ಚಿನ್ನು ಬೇಬಿ ತಲೆ ಕೊಡ್ರೋ ಅಂದಾಗ ಆ ಗೊಂಬೆಯ ರುಂಡವನ್ನು ಅವಳಿಗೆ ಕೊಟ್ಟರು .. ನನಗಾಗ ಮನದೊಳಗೆ ವಿಚಿತ್ರ ಭಾವನೆಗಳು .. ಒಂದು ರುಂಡದಿಂದ ಫುಟ್ಬಾಲ್ ಆಟವೇ .. ನೆನೆದರೆ ಸಾಕು ಮೈಯೆಲ್ಲಾ ಒಂದು ಕ್ಷಣ ಜುಮ್ಮೆನ್ನುವುದು .. ಬೇರೆ ವಾತವರಣದಲ್ಲಿ ಬೆಳೆದು ಬಂದವರಿಗೆ ಹೊಸ ಜಗತ್ತಿನ ಪರಿಚಯದಲ್ಲಿ ಮೂಡುವ ಭಾವನೆಗಳು ನಡೆಯುವ ಘಟನೆಗಳು ಒಮ್ಮೊಮ್ಮೆ ಭಯ ಒಮ್ಮೊಮ್ಮೆ ಕುತೂಹಲ .. !!

OLD MEMORIES
http://www.poetryofpictures.blogspot.in/2013/11/blog-post.html

ಹೀಗೆಯೇ ಇನ್ನೂ ಅನೇಕ ಸಂಗತಿಗಳ ಮಹಾಸಾಗರ .. ಕುತೂಹಲಕಾರಿ ಆ ದಿನಗಳು .. ನನ್ನ ಬಾಲ್ಯದ ಹುಬ್ಬಳ್ಳಿಯ ಸವಿನೆನಪುಗಳು ಮುಂದುವರೆಯುತ್ತದೆ .. ಇಷ್ಟವಿದ್ದಲ್ಲಿ ಕಾದು ನೋಡಿ , ಓದಿ ನಿಮ್ಮ ಅನಿಸಿಕೆಗಳನ್ನು ತಪ್ಪದೇ ತಿಳಿಸಿ .. ಬರೆಯುವ ಆತುರದಲ್ಲಿ ಅಲ್ಲಲ್ಲಿ ಅಕ್ಷರಗಳ ಕಾಗುಣಿತ ಏರುಪೇರು ಆದಲ್ಲಿ ತಿಳಿಸಿ ಮತ್ತು ಅನುಸರಿಸಿಕೊಂಡು ಓದಬೇಕಾಗಿ ಕೇಳಿಕೊಳ್ಳುತ್ತೇನೆ .. !!

(ಕಥೆ ಮುಂದುವರೆಯುವುದು .. )

*ಪಿಪಿಕೆ*

ಕಥೆ ಕವನ ನಗೆಹನಿ ಹಾಡುಗಳು.... ಮನದಿ ಮೂಡಿದ ಸುಂದರ ಸಾಲುಗಳು.... ಹೊಸ ವಿಷಯ ಬರೆವ ಹಂಬಲ.... ಪ್ರೀತಿಯ ದೇಗುಲದ ಕದ ತೆರೆಯುವ ಕಾಲ.... ಕನಸನ್ನು ಕಥೆಯಾಗಿಸಿ , ಮನ ಮೆಚ್ಚಿಸುವ.... ಅಕ್ಷರ ರೂಪದಿ ಸತ್ಯದ ಅರಿವನ್ನು ತೋರುವ.... ಕ್ಷಣ ಮಾತ್ರದಿ ಸ್ನೇಹದ ಸಾಗರ ನಿರ್ಮಿಸುವ.... ಈ ಸುಂದರ ಸಾಹಿತ್ಯ ಲೋಕಕೆ ಸರ್ವರಿಗೂ ಸುಸ್ವಾಗತ.... :)

02/07/2013

ಸಿಂಪಲ್ಲಾಗಿ ದಿನಕ್ಕೊಂದು ಸಾಂಗು
ಬರೆಯೋವಾಗ ಅವಳದೆ ಗುಂಗು
ಆಹಾ ತುಂಬಿಹುದು ಪ್ರೀತಿಯ ರಂಗು
ಕೇಳಲಿಲ್ಲಿ ಕಾದಿದೆ ಪ್ರೇಮಿಗಳ ಗ್ಯಾಂಗು

ಹಾಡುವೆ ಹಾಡುವೆ ಪ್ರೀತಿಯ ಕಥೆಗಳ
ಹೇಳುವೆ ಹೇಳುವೆ ಅವಳ್ಯಾರು ಅವನ್ಯಾರು
ಕಣ್ಣೆದುರು ಕಂಡಂತೆ ನಾ ಕಂಡ ಜೀವಗಳ
ಒಂದಾನೊಂದು ಕಾಲದಲ್ಲಿ ಅಲ್ಲೊಂದು ಊರು

ಆ ಊರಿನಲ್ಲೊಂದು ಸೀರೆ ಅಂಗಡಿ
ಮಾಲೀಕ ಹೇಗೆಂದು ಇಲ್ಲಿ ಸ್ವಲ್ಪ ನೋಡಿ
ಹೇಳಿಕೊಳ್ಳಲು ಅವನೊಬ್ಬ ಹಳೇ ರೌಡಿ
ಹೆಸರೇನೆಂದು ಮಾತ್ರ ನೀವು ಕೇಳಬೇಡಿ .... ಆಹಾ ನೀವು ಕೇಳಬೇಡಿ .... !!

(ಕಥೆಯು ಮುಂದುವರೆಯುತ್ತದೆ .. ದಯವಿಟ್ಟು ಕಾದುನೋಡಿ ..)
ನಿಮ್ಮ ಅತ್ಯಮೂಲ್ಯ ಸಮಯವನ್ನು ಈ ನಾಲ್ಕಾರು ಪದಗಳಿಗಾಗಿ ನೀಡಿದಕ್ಕೆ , ನಿಮಗೆ ನಮ್ಮ ಹೃತ್ಪೂರ್ವಕ ಧನ್ಯವಾದಗಳು .. :)
ಪ್ರಶಾಂತ್ ಪರಶುರಾಮ್ ಖಟಾವಕರ್
ದಾವಣಗೆರೆ.

05/06/2013

ಈ ಭಾಷೆಗಳ ಹುಟ್ಟು ಹಾಗೂ ಬೆಳವಣಿಗೆ ಯಾವ ರೀತಿ...
ಕೆಲವು ಭಾಷೆಗಳನ್ನು ಕೋಟ್ಯಾಂತರ ಜನಗಳು ಬಳಸಿದರೆ
ಮತ್ತೆ ಹಲವು ಭಾಷೆಗಳನ್ನು ಲಕ್ಷಾಂತರ ಜನರು ಬಳಸುತ್ತಾರೆ
ಹಾಗೂ ಆ ಭಾಷೆಗಳ ಪದಗಳಿಗೆ ಅರ್ಥ ಬೇರೆ ಭಾಷೆಗಳಲ್ಲೂ ಕೊಡುತ್ತಾರೆ ...
ಹೆಚ್ಚಾಗಿ ಬಳಕೆಯಾಗುವ ಭಾಷೆ ಮತ್ತು ಅತೀ ಕಡಿಮೆ ಬಳಸುವ ಭಾಷೆಗಳು
ಹೀಗಿರುವಾಗ ನಾವುಗಳು ನಮ್ಮದೇ ಆದ ಸ್ವಂತ ಭಾಷೆಯೊಂದನ್ನು ಹುಟ್ಟಿಸಿಕೊಂಡು
ನಮಗಿಷ್ಟ ಬಂದಂತೆ ಭಾಷೆಯ ಅಕ್ಷರಗಳ ಆಕಾರ ಮತ್ತು ಪದಗಳ ಅರ್ಥವನ್ನು ಕಟ್ಟುವ ಮತ್ತು ಬೆಳೆಸುವ ಅವಕಾಶ ಅಥವಾ ಸ್ವಾತಂತ್ರ್ಯ ........ !!!!!

ಏನೋ ಯೋಚನೆ ಮಾಡ್ತಾ ಇದ್ದಾಗ ... ಇನ್ನೇನೋ ಆಗೋಯ್ತು .. :)

15/03/2013

Good Morning .. :)

28/02/2013

ಭಯಂಕರ
***********

ಆರಾರು ಕಣ್ಣುಗಳು
ನೋಡಲು ಕೆಂಪು
ಉರಿಯುವ ಕೆಂಡದುಂಡೆ
ನನ್ನಿಂದ ತುಸು ದೂರದಲ್ಲಿ

ಸುತ್ತಲೂ ಕಗ್ಗತ್ತಲು
ಬೇರೇನೂ ಕಾಣದು
ಹೀಗೊಮ್ಮೆ ಹಾಗೊಮ್ಮೆ
ಜೊತೆಯಲ್ಲಿ ಸ್ವಪ್ನ ಸುಂದರಿ

ಅಪ್ಸರೆಯ ಆ ಅಪ್ರತಿಮ ಬೆಳಕು
ಕ್ಷಣ ಮಾತ್ರದ ಮಿಂಚಿನ ಹೊಳಪು
ಸುತ್ತಲೂ ಭಾರೀ ಜೋರು ಕತ್ತಲು
ಆ ಕಣ್ಣುಗಳು ಯಾರವು ಎಂಬ ದಿಗಿಲು .. !!

|| ಪ್ರಶಾಂತ್ ಖಟಾವಕರ್ ||

ನಗುತಾಳೆ ನಗುತಾಳೆ ಅವಳೂ ತುಂಬಾನೇ ..!!ಯಾಕೋ ಏನೋ ಗೊತ್ತೇ ಇಲ್ಲಅವಳ ನಗುವು ನಿಲ್ಲೋದಿಲ್ಲಾ ನೋಡೋಕ್ ಅವಳು ಒಳ್ಳೇ ಹುಡ್ಗಿಹುಚ್ಚಿ ಅಲ್ಲ .. !!ಅವಳ...
18/02/2013

ನಗುತಾಳೆ ನಗುತಾಳೆ
ಅವಳೂ ತುಂಬಾನೇ ..!!

ಯಾಕೋ ಏನೋ ಗೊತ್ತೇ ಇಲ್ಲ
ಅವಳ ನಗುವು ನಿಲ್ಲೋದಿಲ್ಲಾ
ನೋಡೋಕ್ ಅವಳು ಒಳ್ಳೇ ಹುಡ್ಗಿ
ಹುಚ್ಚಿ ಅಲ್ಲ .. !!
ಅವಳೊಂದು ಮಣ್ಣಿನ ಬೊಂಬೆ .. !!

ನಗುತಾಳೆ ನಗುತಾಳೆ
ಅವಳೂ ತುಂಬಾನೇ ..!!

ನೂರಾರು ದಿನಗಳ ಹಿಂದೆ
ಒಂದ್ ಹುಡ್ಗಿ ಬಂದಿದ್ಲು ನನ್ ಮುಂದೆ
ಯಾರೋ ಏನೋ ಅವಳು ಗೊತ್ತಿಲ್ಲಾ
ಅವಳಾ ನೆನಪಲ್ಲಿ ನಾ ಗೀಚಿದ್ದ ಚಿತ್ರ
ಈಗಲೂ ನಗುತಿದೆ ನನ್ನಾ ಮನದಲ್ಲಿ .. !!

ನಗುತಾಳೆ ನಗುತಾಳೆ
ಅವಳೂ ತುಂಬಾನೇ ..!!

ಆನ್ಲೈನ್ ಸ್ನೇಹ ಪ್ರೀತಿ ಪ್ರೇಮ
ಎಲ್ಲಾ ಸುಳ್ಳು ಬರಿ ಡ್ರಾಮ
ಜೀವನ ಅಲ್ಲಾ ಇದು ಸುಳ್ಳು ಸಂತೆ
ಕಳ್ಳ ಹೆಸರಲ್ಲಿ , ಸುಳ್ಳು ಮಾತಿನಲ್ಲಿ
ಅವನವಳ ಅವಳವನ ಹುಡುಗಾಟದ
ಹುಚ್ಚು ನಗು , ಹುಚ್ಚು ನಗು , ಹುಚ್ಚು ನಗು .. !!

ನಗುತಾಳೆ ನಗುತಾಳೆ
ಅವಳೂ ತುಂಬಾನೇ ..!!

|| ಪ್ರಶಾಂತ್ ಖಟಾವಕರ್ ||

http://poetryofpictures.blogspot.in/2013/02/blog-post_18.html

ಕಥೆ ಕವನ ನಗೆಹನಿ ಹಾಡುಗಳು.... ಮನದಿ ಮೂಡಿದ ಸುಂದರ ಸಾಲುಗಳು.... ಹೊಸ ವಿಷಯ ಬರೆವ ಹಂಬಲ.... ಪ್ರೀತಿಯ ದೇಗುಲದ ಕದ ತೆರೆಯುವ ಕಾಲ.... ಕನಸನ್ನು ಕಥೆಯಾಗಿಸಿ , ಮನ ಮೆಚ್ಚಿಸುವ.... ಅಕ್ಷರ ರೂಪದಿ ಸತ್ಯದ ಅರಿವನ್ನು ತೋರುವ.... ಕ್ಷಣ ಮಾತ್ರದಿ ಸ್ನೇಹದ ಸಾಗರ ನಿರ್ಮಿಸುವ.... ಈ ಸುಂದರ ಸಾಹಿತ್ಯ ಲೋಕಕೆ ಸರ್ವರಿಗೂ ಸುಸ್ವಾಗತ.... :)

05/02/2013

Flying Birds school of performing arts

09/01/2013

{ - } ಚಿಂತನೆಯಲ್ಲಿ ...
ಮನಸ್ಸು ಏನನ್ನೋ ಹುಡುಕುತ್ತಿದೆ
*********************************

ನೋಡಲದೊಂದು ಪುಟ್ಟ ರೇಖೆಯು
ಆಗುವುದದು ಇಲ್ಲವೆನ್ನುವ ಕಥೆಯು
ಕಳೆಯಬೇಕು ಅಡ್ಡವಿದ್ದರೆ ಗೆರೆಯು
ಉದ್ದವಿದ್ದರೆ ಒಂದೆನ್ನುವ ರೀತಿಯು

ಸೃಷ್ಟಿಯೊಳು ನಾನೊಂದು ನೀನೊಂದು
ಸೇರಿದರಿಲ್ಲಿ ಸಿಗುವುದೆರಡು ಎಣಿಕೆಯು
ನಾನೂ ಇಲ್ಲ ನೀನೂ ಇಲ್ಲ ಎಂದರಿಲ್ಲಿ
ಎಲ್ಲಿಲ್ಲವೆಂದು ನೋಡುವಾಗಲ್ಲೇನೋ ಒಂದಿದೆ

ಅದುವೇ ಶೂನ್ಯ
ಏನೂ ಇಲ್ಲದ ಸೊನ್ನೆಯು ಎಣಿಕೆಯಲ್ಲಿ
ಆದರದು ಏನೂ ಇಲ್ಲದ ಇರುವ ಸ್ಥಳ
ಅದೊಂದು ಸ್ಥಳ
ಅಲ್ಲೊಂದಿದೆ ಅದೊಂದಿದೆ

ಅಡ್ಡ ಗೆರೆಯೋ ಉದ್ದ ಗೆರೆಯೋ ನಮ್ಮ ಬದುಕು
ಏನಿದೆಯೋ ಏನಿಲ್ಲವೋ ಮನಸ್ಸೇ ನೀ ಹುಡುಕು

|| ಪ್ರಶಾಂತ್ ಖಟಾವಕರ್ ||

Address

Davangere
577004

Telephone

9482222321

Website

Alerts

Be the first to know and let us send you an email when Flying Birds school of performing arts posts news and promotions. Your email address will not be used for any other purpose, and you can unsubscribe at any time.

Shortcuts

Share

Category