AQSA

AQSA WELCOME

ಮುಸ್ಲಿಮನ ಬದುಕು ಶಿಸ್ತುಬದ್ಧವಾಗಿರಬೇಕು; ತನ್ನ ಯಾವುದೇ ಕಾರ್ಯ ಧಾರ್ಮಿಕ ಚೌಕಟ್ಟು ಮೀರಬಾರದೆಂಬ ಪ್ರಜ್ಞೆ ಪ್ರತಿಯೊಬ್ಬ ಮುಸ್ಲಿಮನಿಗೆ ಇರುತ್ತದೆ...
16/10/2024

ಮುಸ್ಲಿಮನ ಬದುಕು ಶಿಸ್ತುಬದ್ಧವಾಗಿರಬೇಕು; ತನ್ನ ಯಾವುದೇ ಕಾರ್ಯ ಧಾರ್ಮಿಕ ಚೌಕಟ್ಟು ಮೀರಬಾರದೆಂಬ ಪ್ರಜ್ಞೆ ಪ್ರತಿಯೊಬ್ಬ ಮುಸ್ಲಿಮನಿಗೆ ಇರುತ್ತದೆ. ಈ ನಿಟ್ಟಿನಲ್ಲಿ ಕರ್ಮಶಾಸ್ತ್ರ ಮುಖ್ಯವೆನಿಸುತ್ತದೆ. ಕರ್ಮಶಾಸ್ತ್ರದ ಪಂಚ ವಿಧಿಗಳಲ್ಲಿ (ವಾಜಿಬ್, ಸುನ್ನತ್,ಕರಾಹತ್, ಹಲಾಲ್, ಹರಾಮ್) ಮುಸ್ಲಿಮನ ಬದುಕು ಕೇಂದ್ರಿತವಾಗಿರುವುದು ವಿಶೇಷ. ಇಸ್ಲಾಮಿನ ಸೌಂದರ್ಯ ಇರುವುದು ಇದರಲ್ಲೇ. ಯಾವ ಆಯಾಮದಲ್ಲಿ ನೋಡಿದರೂ ಮುಸ್ಲಿಮನ ಚಲನ- ವಲನ ಈ ಐದು ವಿಧಿಗಳ ಹೊರಗಿರುವುದಿಲ್ಲ. ಹಾಗಾಗಿ, ಪ್ರತಿಯೊಬ್ಬರೂ ಕರ್ಮಶಾಸ್ತ್ರದ ಕೆಲವು ಪ್ರಮುಖ ವಿಚಾರಗಳನ್ನು ತಿಳಿದಿರಲೇ ಬೇಕು.

ಕರಾವಳಿ ಕರ್ನಾಟಕದ ಬಹುತೇಕ ಕಡೆಗಳಲ್ಲಿ ಶಾಫಿಈ ಮದ್ಹಬ್ ಆಧಾರಿತ ಕರ್ಮಶಾಸ್ತ್ರದ ನಿಮಯಗಳನ್ನು ಅನುಸರಿಸಲಾಗುತ್ತದೆ. ಜನ ಸಾಮಾನ್ಯರಲ್ಲಿ ಸರಳ ಕನ್ನಡದಲ್ಲಿ ಕರ್ಮಶಾಸ್ತ್ರವನ್ನು ವಿವರಿಸುವ ಪುಸ್ತಕಗಳಿಗೆ ಬೇಡಿಕೆಗಳಿವೆ. ಈ ಕೆಲಸವನ್ನು ಮಾಡಬೇಕಿರುವುದು ಈ ನೆಲದ ಉಲಮಾಗಳು. ಕಾಲಕಾಲಕ್ಕೆ ಅವರದನ್ನು ಮಾಡುತ್ತಿರುವರು.

ಕರ್ನಾಟಕ ಜ‌ಮ್‌ಇಯ್ಯತುಲ್ ಉಲಮಾ ಇದರ ಕಾರ್ಯದರ್ಶಿ, ಬರಹಗಾರರೂ ಆದ ಎಸ್‌‌.ಪಿ. ಹಂಝ ಸಖಾಫಿ ಉಸ್ತಾದರು ಫಿಖ್ಹುಲ್ ಇಸ್ಲಾಮ್ ಎಂಬ ಹೆಸರಿನಲ್ಲಿ ಶಾಫಿಈ ಕರ್ಮಶಾಸ್ತ್ರವನ್ನು ಕನ್ನಡಲ್ಲಿ ವಿವರಿಸುವ ಪ್ರಯತ್ನಕ್ಕೆ ತೊಡಗಿ ವರ್ಷಗಳೇ ಕಳೆದಿವೆ. ಇದೀಗ ಅದರ ಎರಡನೇ ಭಾಗ 'ಫಿಖ್ಹುಲ್ ಇಸ್ಲಾಂ ಭಾಗ-2' ಮಾರುಕಟ್ಟೆಯಲ್ಲಿ ಲಭ್ಯವಿದೆ. ನಮ್ಮ ಸಣ್ಣ ಪುಟ್ಟ ಗೊಂದಲಗಳ ನಿವಾರಣೆ ಮತ್ತು ಧರ್ಮಬದ್ಧ ಆರಾಧನೆಗೆ ಈ ಕೃತಿ ಖಂಡಿತಾ ಸಹಕಾರಿಯಾಗಲಿದೆ. ಈ ಎರಡು ಭಾಗಗಳು ನಮ್ಮ ಬಳಿಯಿರಲಿ. +91 9108443304 ಈ ಸಂಖ್ಯೆಯನ್ನು ಸಂಪರ್ಕಿಸಿದರೆ ಕೃತಿ ನಿಮ್ಮ ಕೈ ಸೇರಲಿದೆ.

-ಅಮ್ಮಾರ್ ಮುಈನಿ ನೀರಕಟ್ಟೆ

ಎಸ್.ಪಿ. ಉಸ್ತಾದರ ಇತರ ಪ್ರಮುಖ ಕೃತಿಗಳು

ಮುಸಾಫಿರನ ಸ್ವಗತಗಳು
ಮಂಖೂಸ್ ಮೌಲಿದ್ (2 editions)
ಪ್ರವಾದಿ ಸಂಕ್ಷಿಪ್ತ ಚರಿತ್ರೆ
ಯಾಸೀನ್ ವ್ಯಾಖ್ಯಾನ (3 editions)
ರಮಳಾನ್ ಪ್ರಶ್ನೋತ್ತರಗಳು
ತಂಗಿಗೆ ಪತ್ರ
ಹಜ್ಜ್ ಗೈಡ್ (5 editions)
ಹದ್ದಾದ್ ಅರ್ಥ ಮತ್ತು ವ್ಯಾಖ್ಯಾನ
ಅಲ್ ಫಾತಿಹಾ ಅರ್ಥ ಮತ್ತು ವ್ಯಾಖ್ಯಾನ

Address

BENGATHODI, POST MOODUPADUKODI, KAVALKATTE
Bantwall
574265

Alerts

Be the first to know and let us send you an email when AQSA posts news and promotions. Your email address will not be used for any other purpose, and you can unsubscribe at any time.

Contact The School

Send a message to AQSA:

Shortcuts

Share