Saraswathi Vidyanikethan School

Saraswathi Vidyanikethan School S.V.N Group of Institutions is the dream projects of its Founder, Chairman Sri C M Nagaraj, a visio

School is a temple of learning and a training ground for future citizens. S.V.N Group of Institutions is the dream projects of its Founder, Chairman Sri C M Nagaraj, a visionary, an acknowledged educationist, a philanthropist, a social worker and an elected prominent Mayor of Bangalore city for the year 2002-2003. S.V.N Group of Institutions came into existence in the year 1968, in the enviable garden city, Bangalore and made commendable progress in developing fine tune positive children’s & providing them the best equality of education- thanks to the committed and untiring efforts of its charismatic chairman Sri C M Nagaraj, enthusiastic and dynamic Secretary Smt. Chitrakala Nagaraj, optimistic and ever active Joint Secretary Sri C N Shashikiran.

ಸರಸ್ವತಿ ವಿದ್ಯಾನಿಕೇತನದಲ್ಲಿ ಓದಿದ ಹಳೆಯ ವಿದ್ಯಾರ್ಥಿಗಳು
07/02/2026

ಸರಸ್ವತಿ ವಿದ್ಯಾನಿಕೇತನದಲ್ಲಿ ಓದಿದ ಹಳೆಯ ವಿದ್ಯಾರ್ಥಿಗಳು

ಸರಸ್ವತಿ ವಿದ್ಯಾನಿಕೇತನ ಶುರುವಾದಾಗ ಮೊದಲ ವರ್ಷ ಸೇರಿದ ವಿದ್ಯಾರ್ಥಿ ಶ್ರೀ.ನಿಡವಂದ ಜಗದೀಶ್ !
07/02/2026

ಸರಸ್ವತಿ ವಿದ್ಯಾನಿಕೇತನ ಶುರುವಾದಾಗ ಮೊದಲ ವರ್ಷ ಸೇರಿದ ವಿದ್ಯಾರ್ಥಿ ಶ್ರೀ.ನಿಡವಂದ ಜಗದೀಶ್ !

23/10/2025

I gained 1,187 followers in the past 90 days! Thank you all for your continued support. I could not have done it without you. 🙏🤗🎉

ಸವಿ ಸವಿ ನೆನಪು ಸಾವಿರ ನೆನಪು !
05/02/2025

ಸವಿ ಸವಿ ನೆನಪು ಸಾವಿರ ನೆನಪು !

ನೆರವೇರಿಕೆ ! ಪುಲ್ಫಿಲ್ಮೆಂಟ್ ! ಬದುಕಿನಲ್ಲಿ ನಮಗೆ ಏನೇನು ಪ್ರಾಪ್ತಿಯೋ ಅದೆಲ್ಲವೂ ನೆರವೇರಬೇಕಾದರೂ ಅದಕ್ಕೆ ದೈವ ಪ್ರೇರಣೆ,ಅನುಗ್ರಹ ಮತ್ತು ಆಶೀ...
28/01/2025

ನೆರವೇರಿಕೆ ! ಪುಲ್ಫಿಲ್ಮೆಂಟ್ !

ಬದುಕಿನಲ್ಲಿ ನಮಗೆ ಏನೇನು ಪ್ರಾಪ್ತಿಯೋ ಅದೆಲ್ಲವೂ ನೆರವೇರಬೇಕಾದರೂ ಅದಕ್ಕೆ ದೈವ ಪ್ರೇರಣೆ,ಅನುಗ್ರಹ ಮತ್ತು ಆಶೀರ್ವಾದ ತುಂಬಾ ಮುಖ್ಯ.ಕೆಲವೊಮ್ಮೆ ಅಂದುಕೊಂಡಿದ್ದೆಲ್ಲಾ ನೆರವೇರುತ್ತದೆ.ಬಯಸಿದ್ದೆಲ್ಲಾ ಪ್ತಾಪ್ತವಾಗುತ್ತದೆ.ಮೇಲಾಗಿ ಅದಕ್ಕಾಗಿ ಹೆಚ್ಚಿನ ಪರಿಶ್ರಮ ಇಲ್ಲದೆ ಹೋದರೂ ತಾನೇ ತಾನಾಗಿ ಲಭಿಸುತ್ತದೆ.ಅದನ್ನು ಅದೃಷ್ಟ ಎನ್ನಬಹುದು.ಯೋಗ ಎನ್ನಬಹುದು.ಒಟ್ಟಿನಲ್ಲಿ ಅದೆಲ್ಲವೂ ನಮ್ಮ ಬದುಕಿನ ನೆರವೇರಿಕೆಗಳು.

ನನ್ನ ಸ್ನೇಹಿತರಾದ ಎಸ್ ಅರವಿಂದ್ ಅವರು ಕರೆ ಮಾಡಿ ತಮ್ಮ ವಯಸ್ಸಾದ ಹಿರಿಯ ತಂದೆಯನ್ನು ಅಯೋಧ್ಯೆ ಕಾಶಿ ಪ್ರಯಾಗ ಕುಂಭಮೇಳ ಹೀಗೆ ಕರೆದುಕೊಂಡು ಹೋಗುತ್ತಿದ್ದೇವೆ.ಹದಿನಾರನೇ ಫೆಬ್ರವರಿ ದಿನ ಕುಂಭಮೇಳದಲ್ಲಿ ಪಾಲ್ಗೊಳ್ಳಲು ತಂದೆಯವರಿಗೆ ಒಂದು ವೀಲ್ ಚೇರ್ ವ್ಯವಸ್ಥೆ ಮಾಡಬಹುದಾ ಎಂದರು.ಮಾಧ್ಯಮ ಮಿತ್ರರಿಂದ ಮಾತ್ರ ಇದು ಸಾಧ್ಯ ಎಂದರು. ಅವರ ಅಭಿಲಾಶೆ ನೆರವೇರಲಿ ಎಂದು ಬಯಸುತ್ತೇನೆ.ಯಾರಿಂದಲಾದರೂ ವ್ಯವಸ್ಥೆ ಮಾಡಲು ಸಾಧ್ಯವಾದರೆ ಉಪಕೃತ.

ನಮ್ಮ ಬದುಕಿನ ಅನುಭವಗಳು ಎಷ್ಟೊಂದು ನಿಗೂಢ.ನಮಗೇ ತಿಳಿಯದೆ ನಾನಾ ಘಟಿಸುವಿಕೆಗಳನ್ನು ನಾವು ಕಾಣುತ್ತೇವೆ.ನಮ್ಮ ಕೈಯಲ್ಲಿ ಸಾಧ್ಯವೇ ಇಲ್ಲ ಅಂದುಕೊಂಡಿದ್ದೂ ಕೂಡಾ ನೆರವೇರಿ ಬಿಡುತ್ತದೆ.ಆ ನೆರವೇರಿಕೆ ಅಥವಾ ಪುಲ್ಫಿಲ್ಮೆಂಟ್ ಅಥವಾ ಆ ತೃಪ್ತಿ ನಿಜಕ್ಕೂ ಬದುಕಿನಲ್ಲಿ ಅನುಭವಿಸಬಹುದೇ ಹೊರತು ವರ್ಣಿಸುವುದು ಖಂಡಿತಾ ಸಾಧ್ಯವಿಲ್ಲ.ಬದುಕು ನಮಗೆ ಏನನ್ನೆಲ್ಲಾ ಕೊಡುತ್ತದೆ.ಏನನ್ನೆಲ್ಲಾ ನೆರವೇರುವಂತೆ ನೋಡಿಕೊಳ್ಳುತ್ತದೆ ಅಂತ ಯೋಚಿಸಿದಾಗ ಬದುಕು ಪ್ರತಿಕ್ಷಣದ ಅಚ್ಚರಿ ಎನಿಸುತ್ತದೆ.

ಜಮಾನ ಹೀಗಿತ್ತು ! ಬೆಳಗಿನ ಜಾವದ ಕನಸಿನಲ್ಲಿ ಮನೆಯಲ್ಲಿ ಯಾವುದೋ ಕಾರ್ಯಕ್ರಮ ಅಂತ ತುಂಬಾ ಜನರು ನಮ್ಮ ಮನೆಗೆ ಬಂದಿದ್ದಾರೆ.ಯಾರದೂ ಸ್ನಾನ ಆಗಿಲ್ಲ....
27/01/2025

ಜಮಾನ ಹೀಗಿತ್ತು !

ಬೆಳಗಿನ ಜಾವದ ಕನಸಿನಲ್ಲಿ ಮನೆಯಲ್ಲಿ ಯಾವುದೋ ಕಾರ್ಯಕ್ರಮ ಅಂತ ತುಂಬಾ ಜನರು ನಮ್ಮ ಮನೆಗೆ ಬಂದಿದ್ದಾರೆ.ಯಾರದೂ ಸ್ನಾನ ಆಗಿಲ್ಲ.ಹಂಡೆಯಲ್ಲಿ ನೀರು ಕಾದಿಲ್ಲ.ಒಲೆ ಉರಿಗೆ ಹಿಂದಿನ ರಾತ್ರಿ ಹಾಕಿ ಹಚ್ಚಿದ್ದ ಹೊಟ್ಟು ಹತ್ತಿಲ್ಲ.ಸೌದೆ ಒಲೆ ಉರಿ ಹಾಕಿ ಒಬ್ಬೊಬ್ಬರದೇ ಸ್ನಾನ ಆದ ಮೇಲೆ ಎಲ್ಲೆಂದರಲ್ಲಿ ಸಾಲಾಗಿ ಕುಳಿತು ಕೈಯಲ್ಲಿ ಬಾಳೆ ಎಲೆ ಹಿಡಿದು ಅದಕ್ಕೆ ಬಿಸಿ ಬಿಸಿ ಅವರೇಕಾಳು ಉಪ್ಪಿಟ್ಟು ಬಡಿಸಿ ಎಲ್ಲರೂ ಸಂಭ್ರಮದಿಂದ ತಿನ್ನುತ್ತಿದ್ದುದ್ದು.ಮನೆ ತುಂಬಾ ಜನ ಎಲ್ಲಿ ನೋಡಿದರೂ ನೆಂಟರು.ಎಲ್ಲರೊಂದಿಗೆ ಮಾತನಾಡುವುದೇ ಸಂಭ್ರಮ.ಇದು ಕೇವಲ ಕನಸು ಮಾತ್ರವಲ್ಲ.ಇದೇ ತರಹ ನಮ್ಮ ಬಾಲ್ಯದ ನಿಜ ಜೀವನ ಕೂಡಾ ಇತ್ತು. ಎಲ್ಲರಿಗೂ ಇದ್ದ ಮನೋರಂಜನೆ ಎಂದರೆ ಸಿನಿಮಾ.

ಮನೆಯ ಕಾರ್ಯಕ್ರಮ ಮುಗಿದ ಮೇಲೆ ಊಟ ಆದ ಮೇಲೆ ಯಾವುದಾದರೂ ಸಿನಿಮಾ ನೋಡೋಣ ಅಂತ ಎಲ್ಲರೂ ಒಟ್ಟಾಗಿ ಹೋದಾಗ "ಚಿತ್ರಮಂದಿರ ಭರ್ತಿಯಾಗಿದೆ" ಎಂಬ ಹೌಸ್ಫುಲ್ ಬೋರ್ಡು.ಸರಿ ಮಾರನೇ ದಿನ ಬೆಳಿಗ್ಗೆ ಅಡ್ವಾನ್ಸ್ ಬುಕಿಂಗ್ ಕೊಡುತ್ತಾರೆ ಬೆಳಿಗ್ಗೆಯೇ ಹೋಗಿ ತರೋಣ ಎಂದು ಕೊಂಡರೆ "ಒಬ್ಬರಿಗೆ ಒಂದೇ ಟಿಕೇಟ್ " ನಿಯಮ.ಎಷ್ಟೋ ಸಲ ಟಿಕೇಟ್ ಕೌಂಟರ್ ಹತ್ತಿರ ಬರುತ್ತಿದ್ದ ಹಾಗೆ ಸೋಲ್ಡ್ ಔಟ್ ಆಗಿ ಬಿಟ್ಟರೆ ಎಷ್ಟೊಂದು ಬೇಸರವಾಗುತ್ತಿತ್ತು. ಅದರಲ್ಲೂ ಅಣ್ಣಾವ್ರ ಸಿನಿಮಾ.ಬಾಲ್ಕನಿ ಸಿಗದೇ ಹೋದರೆ ಸೆಕೆಂಡ್ ಕ್ಲಾಸ್ ಅದೂ ಸಿಗದೇ ಹೋದರೆ ಗಾಂಧಿ ಕ್ಲಾಸ್ ಅದೂ ಸಿಗದೇ ಹೋದಾಗ ಸಿಕ್ಕಾಪಟ್ಟೆ ಬೇಸರ !

ಯಾವುದೋ ಸಿನಿಮಾ.ಅಲ್ಲಿ ಪಾಪ್ ಕಾರ್ನ್,ಚಿಪ್ಸ್, ಸಮೋಸ,ಕೂಲ್ ಡ್ರಿಂಕ್ಸ್ ಹೀಗೇನೋ ದುಬಾರಿಯಾಗಿ ಪಾವತಿಸಿ ಸಿನಿಮಾ ಮುಗಿದ ಮೇಲೆ ಯಾವುದಾದರೂ ಹೋಟೆಲ್ಲಿಗೆ ಹೋಗಿ ಕುಳಿತು ಆರ್ಡರ್ ಮಾಡಿದ ನಂತರ ನಮ್ಮ ಆರ್ಡರ್ ಯಾವಾಗ ಬರುತ್ತದೋ ಎಂದು ಕಾದು ಕುಳಿತು ನೋಡುತ್ತಿದ್ದ ಕುತೂಹಲ.ರೋಮಾಂಚಕ ಮತ್ತು ಅದ್ಭುತ ಅನುಭವ.ಮಾಲ್ ಸಂಸ್ಕೃತಿ,ಐನಾಕ್ಸ್ ,ಪಿ ವಿ ಆರ್ ಚಿತ್ರಮಂದಿರಗಳು ಬಂದು ಐಷಾರಾಮಿ ಮೊತ್ತ ಪಾವತಿಸಿ ಟಿಕೇಟು ಪಡೆದು ನಿರೀಕ್ಷೆ ಮೀರಿದ ಬೆಲೆಗೆ ತಿಂಡಿ ತಿನಿಸು ತಿನ್ನುವಂತೆ ನಾವು ಒಗ್ಗಿಹೋಗಿದ್ದು ಮಾತ್ರ ನಂಬಲಾಗದ ಮತ್ತು ಒಪ್ಪಿಕೊಳ್ಳಲೇ ಬೇಕಾದ ಸತ್ಯ !

ನಿನ್ನೆ ಜನವರಿ 26, 2025 ರಂದು 1999 ಸಾಲಿನ ಸರಸ್ವತಿ ವಿದ್ಯಾನಿಕೇತನ ವಿದ್ಯಾರ್ಥಿಗಳು ಶಾಲೆ ಬಿಟ್ಟ 25 ವರ್ಷದ ಸಂಭ್ರಮ ಆಚರಿಸಿದರು.ಶಾಲೆಗೆ ಈಗ ...
27/01/2025

ನಿನ್ನೆ ಜನವರಿ 26, 2025 ರಂದು 1999 ಸಾಲಿನ ಸರಸ್ವತಿ ವಿದ್ಯಾನಿಕೇತನ ವಿದ್ಯಾರ್ಥಿಗಳು ಶಾಲೆ ಬಿಟ್ಟ 25 ವರ್ಷದ ಸಂಭ್ರಮ ಆಚರಿಸಿದರು.ಶಾಲೆಗೆ ಈಗ 56 ವರ್ಷ...

27/01/2025

ನಿನ್ನೆ ಜನವರಿ 26, 2025 ರಂದು 1999 ಸಾಲಿನ ಸರಸ್ವತಿ ವಿದ್ಯಾನಿಕೇತನ ವಿದ್ಯಾರ್ಥಿಗಳು ಶಾಲೆ ಬಿಟ್ಟ 25 ವರ್ಷದ ಸಂಭ್ರಮ ಆಚರಿಸಿದರು.ಶಾಲೆಗೆ ಈಗ 56 ವರ್ಷ...

ಹಸಿರು ಆತ್ಮಗಳು ! ಬಾಲ್ಯದ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಯ ವಾಟ್ಸಪ್ ಗುಂಪಿನಲ್ಲಿ ಮಾತುಬಾರದ ಕಿವಿ ಕೇಳದ ಸಹಪಾಠಿಯಾಗಿದ್ದ ಶ್ರೀಮತಿ ಜ್ಯೋತಿ ...
26/01/2025

ಹಸಿರು ಆತ್ಮಗಳು !

ಬಾಲ್ಯದ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಯ ವಾಟ್ಸಪ್ ಗುಂಪಿನಲ್ಲಿ ಮಾತುಬಾರದ ಕಿವಿ ಕೇಳದ ಸಹಪಾಠಿಯಾಗಿದ್ದ ಶ್ರೀಮತಿ ಜ್ಯೋತಿ ಒಂದು ವರ್ಷಕ್ಕೂ ಹಿಂದೆ ಕಳುಹಿಸಿದ್ದ ನಮ್ಮ ಶಾಲೆಯ ಶಿಕ್ಷಕ ವೃಂದದ ಮತ್ತು ಬೋಧಕೇತರ ವೃಂದದ ಈ ಭಾವಚಿತ್ರದಲ್ಲಿ ಅಲ್ಲಲ್ಲಿ ಹಸಿರು ಚುಕ್ಕೆಗಳು ಕಂಡಿದ್ದವು.ಏನದು ಚುಕ್ಕೆಗಳು ಅಂತ ಮತ್ತೊಮ್ಮೆ ಗಮನಿಸಿದಾಗ ಆ ಹಸಿರು ಚುಕ್ಕೆಗಳು ಯಾರ ಮೇಲಿದೆಯೋ ಅವರುಗಳು ನಮ್ಮನ್ನು ಅಗಲಿದ್ದಾರೆ ಅಂತ ತಿಳಿಯಿತು.ಹಸಿರು ಚುಕ್ಕೆಗಳು ಹಸಿರು ಆತ್ಮಗಳಾಗಿದ್ದಾರೆ ಅನ್ನಿಸಿತು.ಕಾಲಕ್ರಮೇಣ ಚುಕ್ಕೆಗಳು ಹೆಚ್ಚುತ್ತವೆ ಅಲ್ವಾ ಎಂಬ ಸೂಕ್ಷ್ಮ ಆವರಿಸಿತು.ಮತ್ತೊಂದಷ್ಟು ಜನರು ಈಗಾಗಲೇ ಅಗಲಿದ್ದಾರೆ ಕೂಡಾ ಹಸಿರು ಚುಕ್ಕೆ ಇತ್ತೀಚಿನವರ ಸಾವುಗಳಿಗೆ ನಮೂದಿಸಿಲ್ಲ.

ಬದುಕಿನಲ್ಲಿ ಎಷ್ಟೊಂದು ಜನ ಬಂಧು ಬಳಗ ಸ್ನೇಹಿತರು ಶಿಕ್ಷಕರು ನೆರೆ ಹೊರೆ ಹೀಗೆ ತಮ್ಮ ನೆನಪುಗಳನ್ನು ಬಿಟ್ಟು ಬಾರದ ಲೋಕಕ್ಕೆ ಹೋಗಿ ಬಿಡುತ್ತಾರೆ.ನನ್ನ ಅಮ್ಮ ಇಲ್ಲ ಅಂತ ಇಂದಿಗೂ ನನಗೆ ನಂಬಲಾಗುವುದಿಲ್ಲ.ಅವರು ನಿಧನರಾಗಿ ಒಂದೂವರೆ ವರ್ಷಗಳೇ ಕಳೆದು ಹೋದರೂ ಅವರಿನ್ನೂ ಇದ್ದಾರೆ ಅಂತಲೇ ಅನ್ನಿಸುತ್ತದೆ.ಅವರಿಲ್ಲ ಅಲ್ವಾ ಎಂದುಕೊಂಡಾಗ ಆ ಕ್ಷಣದ ಬೇಸರ ಹೆಚ್ಚಾಗುತ್ತದೆ. ಯಾಕೋ ಕೆಲವು ಸಲ ಏನೂ ಬೇಡ ಅನ್ನಿಸಿ ಬಿಡುತ್ತದೆ. ಅಮ್ಮ ಬದುಕಿದ್ದಾಗ ಮತ್ತಷ್ಟು ಅವರೊಂದಿಗೆ ಅರ್ಥಪೂರ್ಣ ಸಮಯ ಕಳೆಯಬೇಕಿತ್ತು ಅಂತ ಅನ್ನಿಸುತ್ತದೆ.ಅದೇ ತರಹ ಹೆಚ್ಚುತ್ತಿರುವ ಹಸಿರು ಚುಕ್ಕೆಗಳು ಬದುಕಿನ ಅಂತಿಮ ಮತ್ತು ಕಹಿ ಸತ್ಯದ ಅರಿವು ಮೂಡಿಸುತ್ತದೆ.

ಒಂಭತ್ತನೇ ಕ್ರಾಸಿನ ಬಾಳೆ ಮಂಡಿ ! ದಿನಪತ್ರಿಕೆ ಹುಡುಗ ! ಮಲ್ಲೇಶ್ವರದ ಬಗ್ಗೆ ಸಾಕಷ್ಟು ಬರೆದಿದ್ದೇನೆ."ಮಲ್ಲೇಶ್ವರ ಸುತ್ತ ಮುತ್ತ" ಎಂಬ ಹೆಚ್ಚುವ...
24/01/2025

ಒಂಭತ್ತನೇ ಕ್ರಾಸಿನ ಬಾಳೆ ಮಂಡಿ ! ದಿನಪತ್ರಿಕೆ ಹುಡುಗ !

ಮಲ್ಲೇಶ್ವರದ ಬಗ್ಗೆ ಸಾಕಷ್ಟು ಬರೆದಿದ್ದೇನೆ."ಮಲ್ಲೇಶ್ವರ ಸುತ್ತ ಮುತ್ತ" ಎಂಬ ಹೆಚ್ಚುವರಿ ಪುರವಣಿ ಪತ್ರಿಕೆಯಲ್ಲಿ ಪ್ರಕಟಿಸಿದ್ದು ಇವರೇ ಆ ಪುರವಣಿಯ ಮೂಲ ಪತ್ರಿಕೆ "ವಾರ್ತಾ ಜಾಲ" ದ ಸಂಪಾದಕರಾದ ಶ್ರೀ.ಬಿ ಕೆ ಪ್ರಸನ್ನ ಅವರು.ಅವರಿಗೊಂದು ಥ್ಯಾಂಕ್ಸ್. ಈಗ ಆ ಪತ್ರಿಕೆ ಮತ್ತು ಹೆಚ್ಚುವರಿ ಪುರವಣಿ ಎರಡೂ ಪ್ರಕಟವಾಗುತ್ತಿಲ್ಲ.ಅದು ಮುಂದುವರೆದಿದ್ದರೆ ಮತ್ತಷ್ಟು ಬರೆದು ದಾಖಲೆಯಾಗುತ್ತಿತ್ತು. "ಮಲ್ಲೇಶ್ವರದ ಹುಡುಗ" ಎಂಬ ಗುರುತಿಸುವಿಕೆ ಈ ಪತ್ರಿಕೆ ಬರೆಯುವ ಮೊದಲೂ ಇತ್ತು.ಇಂದಿಗೂ ಇದೆ.ಮುಂದೆಯೂ ಇರುತ್ತದೆ.ಮಲ್ಲೇಶ್ವರದ ಪ್ರಭಾವ ಅಷ್ಟರ ಮಟ್ಟಿಗೆ ನನ್ನಲ್ಲಿ ಅಂತರ್ಗತವಾಗಿದೆ.ಅದೇ ನನ್ನ ಖುಶಿ !

ನಿಮಗೆ ಮಲ್ಲೇಶ್ವರದ ಒಂಭತ್ತನೇ ಕ್ರಾಸಿನ ಆರನೇ ಮುಖ್ಯರಸ್ತೆಗೆ ಸಮೀಪ ರಸ್ತೆಯಲ್ಲಿದ್ದ ಹಸಿರು ಬಣ್ಣದ ಪೆಟ್ಟಿ ಅಂಗಡಿ ನೆನಪಿದ್ಯಾ ? ಆ ಪೆಟ್ಟಿ ಅಂಗಡಿ ಬಾಳೆ ಹಣ್ಣಿನ ಮಂಡಿಯಾಗಿತ್ತು.ನನ್ನ ಪ್ರೈಮರಿ ಶಾಲೆಯ ಗೆಳೆಯ ಗೋವಿಂದರಾಜನ ಮನೆಯವರ ಅಂಗಡಿ ಅದಾಗಿತ್ತು.ಅವರ ಮನೆ ಗಾಯತ್ರಿನಗರದಲ್ಲಿ ರಾಮಮಂದಿರದ ಎರಡು ರಸ್ತೆಗಳ ಪಕ್ಕಕ್ಕೂ ಹಿಂಭಾಗಕ್ಕೂ ಇತ್ತು.ಗೋವಿಂದರಾಜ ಮತ್ತು ಸೋದರರು ಶಾಲೆ ಶುರುವಾಗುವ ಮೊದಲು ಮತ್ತು ಶಾಲೆ ಬಿಟ್ಟ ನಂತರ ಈ ಹಸಿರು ಬಣ್ಣದ ಪೆಟ್ಟಿ ಅಂಗಡಿ ಬಾಳೆ ಮಂಡಿಯಲ್ಲಿ ಬಾಳೆಗೊನೆಗಳನ್ನು ಜೋಡಿಸುತ್ತಿದ್ದರು.ದಿನದ ಸಮಯದಲ್ಲಿ ಅವರ ಅಪ್ಪ ಅಮ್ಮ ನೋಡಿಕೊಳ್ಳುತ್ತಿದ್ದರು.ತಳ್ಳುವ ಗಾಡಿಗಳಲ್ಲಿ ಬಾಳೆ ಹಣ್ಣುಗಳನ್ನು ತುಂಬಿಕೊಂಡು ಮಲ್ಲೇಶ್ವರದ ರಸ್ತೆಗಳಲ್ಲಿ ಮಾರಾಟ ಮಾಡುತ್ತಿದ್ಧರು.

ಬಾಳೆಹಣ್ಣು ಅಂತ ಗೋವಿಂದರಾಜ ಕೂಗುತ್ತಿದ್ದ ಧ್ವನಿಯೂ ನೆನಪಿದೆ. ಒಬ್ಬ ವ್ಯಕ್ತಿ.ಒಂದು ಧ್ವನಿ.ಒಂದು ಅಂಗಡಿ ಹೀಗೆ ಎಷ್ಟೊಂದು ನೆನಪಿಗೆ ಬರುತ್ತದೆ ಅಲ್ವಾ ? ಗಾಯತ್ರಿನಗರದ ರಸ್ತೆಗಳಲ್ಲಿ ಊಟಿ ಆ್ಯಪಲ್ ಅಂತ ಕೂಗಿಕೊಂಡು ಸೈಕಲ್ ಮೇಲೆ ಹಣ್ಣನ್ನು ಇಟ್ಟುಕೊಂಡು ಬರುತ್ತಿದ್ದ ವ್ಯಕ್ತಿಯ ಧ್ವನಿ ಕೂಗಿ ಕೂಗಿ ಕೀರಲಾಗಿ ಹೋಗಿತ್ತು ! ಹೀಗೆ ನೆನಪಿಸಿಕೊಂಡರೆ ಎಷ್ಟೊಂದು ವಿಚಾರಗಳು ನೆನಪಾಗುತ್ತವೆ.ಇಂದಿಗೂ ಮಲ್ಲೇಶ್ವರದ ಹಲವಾರು ರಸ್ತೆಗಳ ಮನೆಗಳಿಗೆ ನಮ್ಮ ಪ್ರೈಮರಿ ಶಾಲೆಯಲ್ಲಿ ಓದಿದ ಹಿರಿಯರೊಬ್ಬರು ಸೈಕಲ್ಲಿನಲ್ಲಿ ದಿನಪತ್ರಿಕೆಗಳನ್ನು ಹಾಕುತ್ತಾರೆ.ಸುಮಾರು ಅರವತ್ತು ವರ್ಷ ದಾಟಿರುವ ವ್ಯಕ್ತಿ.ಕಳೆದ ಐವತ್ತು ವರುಷಗಳಿಂದಲೂ ಪೇಪರ್ ಹಾಕುವ ಹುಡುಗ ! ಬಿ ಕೆ ಪ್ರಸನ್ನ ಅವರು ಇಂತಹ ಪತ್ರಿಕೆ ಹಾಕುವ ಹುಡುಗರು.ಪತ್ರಿಕೆಗಳ ಮುದ್ರಣದಲ್ಲಿ ನೆರವಾಗುವ ಹುಡುಗರು ಹೀಗೆ ಹಲವಾರು ಮಂದಿ ಪತ್ರಿಕಾ ಸರಬರಾಜು ಮಂದಿಯನ್ನು ಸೇವಾ ಸದನದ ಕಾರ್ಯಕ್ರಮದಲ್ಲಿ ಗುರುತಿಸಿ ಸನ್ಮಾನಿಸಿದ್ದರು ನಿಜಕ್ಕೂ ಹೆಮ್ಮೆ ಎನಿಸಿತ್ತು. ಹೀಗೆ ಬರೆಯುತ್ತಾ ಹೋದಷ್ಟೂ ವಿಚಾರಗಳು ಬರುತ್ತಲೇ ಇರುತ್ತವೆ.ಬತ್ತುವುದಿಲ್ಲ.

Address

S. V. N Group Of Institutions, 7th Cross Maruthi Extension, Gayathri Nagar
Bangalore
560021

Opening Hours

Monday 9:45am - 4:30pm
Tuesday 9:45am - 4:30pm
Wednesday 9:45am - 4:30pm
Thursday 9:45am - 4:30pm
Friday 9:45am - 4:30pm
Saturday 9:15am - 12:30pm

Telephone

+91 80 2332 1002

Website

Alerts

Be the first to know and let us send you an email when Saraswathi Vidyanikethan School posts news and promotions. Your email address will not be used for any other purpose, and you can unsubscribe at any time.

Shortcuts

Share

Category