Prerana Educational Social and Cultural Trust - Reg

Prerana Educational Social and Cultural Trust - Reg

Share

To helping rural students for education, doing some social works in both rural & urban area and encouraging cultural activities in rural.

Photos from Prerana Educational Social and Cultural Trust - Reg's post 13/07/2022

ಪ್ರೇರಣಾ ಸಂಸ್ಥೆಯಿಂದ ಕೊಡಮಾಡುವ ಅಣುವಿಜ್ಞಾನಿ ,ದಾರ್ಶನಿಕ ಪರಮಪೂಜ್ಯ "ಮಾನ್ಯಾವಾರ್ ದಾದಾಸಾಹೇಬ್ ಕಾನ್ಸಿರಾಂ "
ರಾಜ್ಯ ಪ್ರಶಸ್ತಿಯ ಪುರಸ್ಕೃತರಾದ ಚಳುವಳಿಯ ಹಿರಿಯ ಕಟ್ಟಾಳುಗಳಿಗೆ ಹೃದಯ ಸ್ಪರ್ಶಿ ಭೀಮನಮನಗಳು

Photos from Prerana Educational Social and Cultural Trust - Reg's post 05/06/2018

ಬೆಂಗಳೂರು:- ಪ್ರೇರಣಾ ಶೈಕ್ಷಣಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯ ವಿದ್ಯಾರ್ಥಿಗಳು ದಿನಾಂಕ 04-06-2018 ರಂದು ರಾಜರ್ಷಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ಜಯಂತಿ ಹಾಗು ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳಾದ ದೇವರಾಜು ಎಂ ಸಿ ರವರ ಹುಟ್ಟುಹಬ್ಬವನ್ನು ಆಚರಿಸಿದರು. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ನಾಲ್ವಡಿರವರ ವಿಚಾರಧಾರೆಗಳನ್ನು ತಿಳಿಸಲಾಯಿತು. ಈ ಕಾರ್ಯಕ್ರಮಕ್ಕೆ ಪದವಿಯಿಂದ ಪ್ರೀಕೆಜಿ ವರೆಗಿನ ವಿದ್ಯಾರ್ಥಿಗಳು ಹಾಗು ಸಂಸ್ಥೆಯ ಟ್ರಸ್ಟಿಗಳು ಸಾಕ್ಷಿಯಾದರು.

30/05/2018

ಬೆಂಗಳೂರು:-ಪ್ರೇರಣಾ ಶೈಕ್ಷಣಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ನ ಅವಿಭಾಜ್ಯ ಅಂಗವಾಗಿರುವ ಪ್ರೇರಣಾ ಟುಟೋರಿಯಲ್ ನಲ್ಲಿ 2017-2018 ನೇ ಸಾಲಿನಲ್ಲಿ ಅತ್ತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳು.

Photos from Prerana Educational Social and Cultural Trust - Reg's post 11/03/2018

ಎಸ್ ಎಸ್ ಎಲ್ ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿರುವಾ ಪ್ರೇರಣಾ ಕಲಿಗಳು ಸಹಕರಿಸುತ್ತಿರುವ ಶಿಕ್ಷಕರು

Photos from Prerana Educational Social and Cultural Trust - Reg's post 08/03/2018

ಬೆಂಗಳೂರು:ಪ್ರೇರಣಾ ಶೈಕ್ಷಣಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯು ಗ್ರಾಮೀಣ ಮತ್ತು ನಗರ ಭಾಗದ ವಿದ್ಯಾರ್ಥಿಗಳ ಉಜ್ವಲ ಭವಿಷ್ಯ ವನ್ನು ರೂಪಿಸುವ ಸಲುವಾಗಿ ಸತತ ನಾಲ್ಕು ವರ್ಷಗಳಿಂದಲೂ ಸಂಸ್ಥೆಯಲ್ಲಿನ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ರಾತ್ರಿ ವೇಳೆಯಲ್ಲಿಯೂ ಪರೀಕ್ಷಾ ತಯಾರಿ ಮಾಡಿಸುತ್ತಿರುವುದು.ವಿದ್ಯಾರ್ಥಿಗಳ ಜೊತೆಯಲ್ಲಿ ಪ್ರತಿನಿತ್ಯವೂ ಅಧ್ಯಕ್ಷರಾದ ಮಹೇಶ್ ಎಂ ,ಪ್ರಧಾನ ಕಾರ್ಯದರ್ಶಿಗಳಾದ ದೇವರಾಜು ಎಂ ಸಿ ಮತ್ತು ಉಪಾಧ್ಯಕ್ಷ ರಾದ ಚೇತನ್ ಕುಮಾರ್ ಪಿ ಎಂ ರವರು ಉಳಿದುಕೊಂಡು ಯೋಗಕ್ಷೇಮ ವನ್ನು ನೋಡಿಕೊಳ್ಳುತ್ತಿದ್ದು ಪೋಷಕರು ಅಭಿನಂದನೆ ವ್ಯಕ್ತಪಡಿಸುತ್ತಿದ್ದಾರೆ.ಈ ಶ್ರಮದ ಫಲವಾಗಿ ಅತ್ಯುತ್ತಮ ಫಲಿತಾಂಶ ಬರುತ್ತಿದ್ದು, ವಿದ್ಯಾರ್ಥಿಗಳ ಪಾಲಿಗೆ ಪ್ರೇರಣಾ ಸಂಸ್ಥೆ ವರದಾನವಾಗಿದೆ ಎಂದು ಹಾಗೂ ಜನಾನುರಾಗಿಯಾಗಿದೆ ಎಂಬ ಅಭಿಪ್ರಾಯವು ಸಂಸ್ಥಾಪಕ ಟ್ರಸ್ಟಿಗಳಿಗೆ ಇಂಬು ನೀಡುತ್ತಲಿದೆ. ಈ ಸಂಸ್ಥೆಯು ಇನ್ನೂ ಅತ್ಯುತ್ತಮ ವಾಗಿ ಬೆಳೆಯಲಿ ಎಂಬುದೇ ಜನರ ಆಶಯ ಮತ್ತು ಹಾರೈಕೆ.

01/03/2018

All the best to 2nd PU students

Photos from Prerana Educational Social and Cultural Trust - Reg's post 26/02/2018

ಬೆಂಗಳೂರು:ಪ್ರೇರಣಾ ಶೈಕ್ಷಣಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯು ದಿನಾಂಕ-25-02-2018 ರಂದು ಎಸ್ ಎಸ್ ಎಲ್ ಸಿ ಹಾಗು ದ್ವಿತೀಯ ಪಿ ಯು ಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭವನ್ನು ಹಮ್ಮಿಕೊಂಡಿತ್ತು.ಈ ಸಮಾರಂಭವು ಬುದ್ಧರ ನುಡಿಯೊಂದನ್ನು ಸ್ಮರಿಸುವುದರ ಮೂಲಕ ವಿಶಿಷ್ಟವಾಗಿ ಚಾಲನೆಗೊಂಡಿತು. ಮುಖ್ಯ ಅಥಿತಿಗಳಾಗಿ ಆಗಮಿಸಿದ್ದ ಬೆಂಗಳೂರು ತಾಲೋಕು ಪಂಚಾಯಿತಿ ಸದಸ್ಯರಾದ ಶ್ರೀಯುತ ಲಕ್ಷ್ಮೀಪತಿ ರವರು ಸಮಾರಂಭವನ್ನು ಉದ್ಘಾಟಿಸಿ , ಮಾತನಾಡುತ್ತಾ ವಿದ್ಯಾರ್ಥಿಗಳಿಗೆ ಶುಭಾವಾಗಲಿ ಎಂದು ಹರಸಿದರು.ಅಧ್ಯಕ್ಷರಾದ ಮಹೇಶ್ ರವರು ,ಪ್ರಧಾನ ಕಾರ್ಯದರ್ಶಿಗಳಾದ ದೇವರಾಜು ಎಂಸಿ ರವರು, ಉಪಾಧ್ಯಕ್ಷರಾದ ಚೇತನ್ ಕುಮಾರ್ ಪಿ ಎಂ ರವರು, ಖಜಾಂಚಿಗಳಾದ ಚಂದ್ರಶೇಖರ್ ಜಿ ರವರು ಮತ್ತು ಕಾರ್ಯನಿರ್ವಾಹಕ ಸದಸ್ಯರಾದ ಕೃಷ್ಣರವರು ಮಾತನಾಡಿ ವಿದ್ಯಾರ್ಥಿಗಳ ಉಜ್ವಲ ಭವಿಷ್ಯದ ಕುರಿತು ಹಾಗು ಪರೀಕ್ಷೆಗಳನ್ನು ಹೇಗೆ ಬರೆಯಬೇಕೆಂಬ ರೀತಿ ಮತ್ತು ಪರೀಕ್ಷಾ ಕೇಂದ್ರಗಳಲ್ಲಿ ನಿಮ್ಮಗಳ ಶಿಸ್ತು ಎಂಬುದನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು. ಹಾಗೆಯೆ ವಿದ್ಯಾರ್ಥಿಗಳಿಗೆ ಲೇಖನಿಗಳನ್ನು ವಿತರಿಸಲಾಗಿ ಎಲ್ಲಾರೂ ತಮ್ಮ ಪ್ರೇರಣಾ ಸಂಸ್ಥೆಯ ಒಡನಾಟ ,ಅವಿನಾವಭಾವ ಸಂಬಂಧ ಮತ್ತು ಕಲಿತ ವ್ಯಾಸಾಂಗ ಕುರಿತು ಅಭಿಪ್ರಾಯಗಳನ್ನು ಹಂಚಿಕೊಂಡರು. ಈ ಸಮಾರಂಭದಲ್ಲಿ ಶಿಕ್ಷಕ/ಕಿ ಬಂಧುಗಳಾದ ಸುಧಾರಾಣಿ ಎಲ್, ಚೇತನ್ ಕುಮಾರ್, ಪ್ರೇಮ ಹಾಗು ರವಿಕಿರಣ್ ಮತ್ತು ಪೋಷಕ ಬಾಂಧವರು ಉಪಸ್ಥಿತರಿದ್ದು ಯಶಸ್ವಿಗೊಳಿಸಿ ಎಲ್ಲಾ ವಿದ್ಯಾರ್ಥಿಗಳಿಗೆ ಹಾರೈಸಿದರು.

Photos from Prerana Educational Social and Cultural Trust - Reg's post 09/02/2018

ಬೆಂಗಳೂರು: ಮಹಾತ್ಮ ಜ್ಯೋತಿಬಾಫುಲೆ ಮತ್ತು ಮಾತೆ ಸಾವಿತ್ರಿ ಬಾಫುಲೆ ಜನ್ಮದಿನದ ಅಂಗವಾಗಿ ದೇಶದಲ್ಲೆ ಮೊಟ್ಟಮೊದಲ ಬಾರಿಗೆ ಸರ್ಕಾರೇತರ ಸಂಸ್ಥೆಯು ರಾಜ್ಯಮಟ್ಟದ ಶಿಕ್ಷಕ ಪ್ರಶಸ್ತಿ ಸ್ಥಾಪಿಸಿದ ಹೆಗ್ಗಳಿಕೆ ಪಡೆದ ನಮ್ಮ ಪ್ರೇರಣಾ ಶೈಕ್ಷಣಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯು ನೀಡುವ "ಮಹಾತ್ಮ ಜ್ಯೋತಿ ಬಾಫುಲೆ ಮತ್ತು ಮಾತೆ ಸಾವಿತ್ರಿ ಬಾಯಿ ಫುಲೆ ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕ/ಕಿ ಪ್ರಶಸ್ತಿ" ಗೆ ಆಯ್ಕೆ ಸಮಿತಿಯಿಂದ ಬಳ್ಳಾರಿಯ ಸಿ ರಮೇಶ್ ರವರು ಆಯ್ಕೆಯಾಗಿ ತುಂಬು ಮನಸ್ಸಿನಿಂದ ಪ್ರಶಸ್ತಿ ಸ್ವೀಕರಿಸಿದ್ದರು. ಈ ಪರಿವರ್ತನಾ ಶಿಕ್ಷಕರಿಗೆ ಬಳ್ಳಾರಿಯ ಸಮಸ್ತ ಜನರು ಮತ್ತು ಶಿಕ್ಷಕ ವೃಂದ ಶ್ಲಾಘಿಸಿರುವುದು ಸಂತೋಷಕರ ಸಂಗತಿಯಾಗಿದ್ದು, ನಮ್ಮ ಸಂಸ್ಥೆಯ ಇನ್ನಷ್ಟು ಜವಾಬ್ದಾರಿಯನ್ನು ಹೆಚ್ಚಿಸಿದೆ. ನಾಡಿನ ಸಮಸ್ತ ಬಂಧುಗಳು ಸಂಸ್ಥೆಯ ಬೆನ್ನೆಲುಬಾಗಿ ನಿಲ್ಲುತ್ತಾರೆ ಎಂಬ ನಂಬಿಕೆಯೇ ಸಂಸ್ಥೆ ಸ್ಥಾಪಿಸಿದ ಉಪನ್ಯಾಸಕ ವೃತಿಯ ಟ್ರಸ್ಟಿಗಳಾದ ಮಹೇಶ್ ಎಂ, ದೇವರಾಜು ಎಂ. ಸಿ ದ್ರಾವಿಡ, ಚಂದ್ರಶೇಖರ್ ಜಿ, ಚೇತನ್ ಕುಮಾರ್ ಪಿ.ಎಂ ,ಕೃಷ್ಣ ರವರಿಗೆ ಮತ್ತಷ್ಟು ಬಲನೀಡಿದೆ ಎಂಬ ಆಶಾಭಾವನೆಯನ್ನು ವ್ಯಕ್ತಪಡಿಸುತ್ತಾ ದೇಶದ ಸಮಸ್ತರಿಗೂ ಸಂಸ್ಥೆಯು ಧನ್ಯವಾದಗಳನ್ನು ತಿಳಿಸುತ್ತದೆ.

Photos from Prerana Educational Social and Cultural Trust - Reg's post 31/01/2018

ಬೆಂಗಳೂರು: ಪ್ರೇರಣಾ ಶೈಕ್ಷಣಿಕ ,ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯ ವತಿಯಿಂದ ದಿನಾಂಕ-31-01-2018 ರ ಬುಧವಾರ ನಡೆದ"ಚಂದ್ರಗ್ರಹಣ ಕುರಿತು ಒಂದು ಚಿಂತನ-ಮಂಥನ" ಎಂಬುದನ್ನು ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳು ಹಾಗು ರಾಜ್ಯ ಸಂಪನ್ಮೂಲ ವ್ಯಕ್ತಿಯಾದ ದೇವರಾಜು ಎಂ ಸಿ ರವರು ಸುಧೀರ್ಘವಾಗಿ ಮಾತನಾಡಿದರು. ಈ ಚರ್ಚೆಯಲ್ಲಿ ಪ್ರೌಢಶಾಲಾ ಮತ್ತು ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.ಭಾರತೀಯರು ಈ ವಿಚಾರದಲ್ಲಿ ಮೌಢ್ಯಕ್ಕೆ ಒಳಗಾಗಿದ್ದಾರೆ ಎಂಬ ಅಭಿಪ್ರಾಯಕ್ಕೆ ಒಟ್ಟಾರೆಯಾಗಿ ಬರಲಾಯಿತು. ಈ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ಚೇತನ್ ಕುಮಾರ್ ಪಿ.ಎಂ ರವರು ಉಪಸ್ಥಿತರಿದ್ದರು.

Photos from Prerana Educational Social and Cultural Trust - Reg's post 30/01/2018

ಬೆಂಗಳೂರು: ಸಂವಿಧಾನ ದಿನಾಚರಣೆಯ ನೆನಪಿನಲ್ಲಿ ಪ್ರೇರಣಾ ಸಂಸ್ಥೆಯು ಸಾಂಸ್ಕೃತಿಕ ಮತ್ತು ಕ್ರೀಡಾತ್ಮಕ ಚಟುವಟಿಕೆಗಳಲ್ಲಿ ಗೆಲುವು ಕಂಡ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ನೀಡಿತು .ಈ ಪವಿತ್ರವಾದ ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಮಹೇಶ್ ಎಂ ರವರು, ಪ್ರಧಾನ ಕಾರ್ಯದರ್ಶಿಗಳಾದ ದೇವರಾಜು ಎಂ ಸಿ ರವರು ಹಾಗು ಶಿಕ್ಷಕರು ಹಾಜರಿದ್ದರು.

Photos from Prerana Educational Social and Cultural Trust - Reg's post 27/01/2018

ಬೆಂಗಳೂರು: ಪ್ರೇರಣಾ ಶೈಕ್ಷಣಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯ ವತಿಯಿಂದ ದಿನಾಂಕ-26-01-2018 ರ ಶುಕ್ರವಾರದಂದು "ಸಂವಿಧಾನ ದಿನಾಚರಣೆ"ಯನ್ನು ಹಮ್ಮಿಕೊಳ್ಳಲಾಯಿತು.ಸಂಸ್ಥೆಯ ಅಧ್ಯಕ್ಷರಾದ ಮಹೇಶ್ ಎಂ ರವರು, ಕಾರ್ಯದರ್ಶಿಗಳಾದ ದೇವರಾಜು ಎಂ ಸಿ ರವರು, ಉಪಾಧ್ಯಕ್ಷರಾದ ಚೇತನ್ ಕುಮಾರ್ ಹಾಗು ಶಿಕ್ಷಕರಾದ ಸುಧಾಮಣಿ,ಪ್ರೇಮ, ರವಿಕಿರಣ್ ರವರು ಭಾಗವಹಿಸಿ ವಿದ್ಯಾರ್ಥಿಗಳಿಗೆ ಸಂವಿಧಾನದ ಆಶಯಗಳ ಕುರಿತು ಮನವರಿಕೆ ಮಾಡಿದರು.

Want your school to be the top-listed School/college in Bangalore?

Click here to claim your Sponsored Listing.

Location

Category

Telephone

Website

Address


Kengeri , Mysore Road
Bangalore