19/01/2026
Geetali Gupta is the 17-year-old from Sri Ganganagar, Rajasthan, who secured the All India Rank 1 in the CLAT 2026 examination. She achieved an outstanding score of 112.75 out of 119 marks, one of the highest ever in the exam's history.
Achievement: All India Rank (AIR) 1 in the Common Law Admission Test (CLAT) 2026.
Score: 112.75 out of a total of 119 marks.
Hometown: Sri Ganganagar, Rajasthan.
Significance: She is reportedly the first girl in five years to top the highly competitive law entrance exam.
10/12/2025
*ಸರ್ಕಾರಿ ಶಾಲೆಗೆ ಸೇರುವುದರಿಂದ ಆಗುವ ಲಾಭಗಳು..........*
೧. ಉಚಿತವಾದ ಶಿಕ್ಷಣ.
೨. ಪ್ರತಿಭಾವಂತ ಶಿಕ್ಷಕರಿಂದ ಬೋಧನೆ.
೩. ಪೋಷಕರಿಗೆ ಆರ್ಥಿಕ ಹೊರೆ ಇಲ್ಲ.
೪. ಉಚಿತವಾದ ಸಮವಸ್ತ್ರಗಳು.
೫. ಉಚಿತವಾದ ಪಠ್ಯಪುಸ್ತಕಗಳು.
೬. ಉಚಿತವಾದ ಸೈಕಲ್ಗಳು.
೭. ವಾರದ ೫ ದಿನ ಕ್ಷೀರಭಾಗ್ಯ.
೮. ಉತ್ತಮ ಕಂಪನಿಯ ಒಂದು ಜೊತೆ ಶೂ.
೯. ವಿದ್ಯಾರ್ಥಿ ವೇತನ.
೧೦. ವಿಕಲಚೇತನರಿಗೆ ವಿಶೇಷ ಸೌಲಭ್ಯಗಳು.
೧೧. ಗ್ರಂಥಾಲಯ ಸೌಲಭ್ಯ.
೧೨. ಪ್ರಯೋಗಾಲಯ.
೧೪. ಸುಸಜ್ಜಿತ ಕೊಠಡಿಗಳು..
೧೫. ನವೀನ ಶೌಚಾಲಯಗಳು.
೧೬. ಆಟದ ಮೈದಾನ.
೧೭. ಉಚಿತ ಕ್ರೀಡಾ ಸಾಮಗ್ರಿಗಳು.
೧೮. ನಲಿ-ಕಲಿ ಮೂಲಕ ಬೋಧನೆ.
೧೯. ೧ನೇ ತರಗತಿಯಿಂದಲೇ ಇಂಗ್ಲೀಷ್ ಬೋಧನೆ.
೨೦. ಹೊಸದಾಗಿ LKG/UKG ಆರಂಭ.
೨೧. ಪ್ರತಿಭಾಕಾರಂಜಿ ಕ್ರೀಡಾಕೂಟ ಆಯೋಜನೆ.
೨೨. CCE ಮೂಲಕ ಬೋಧನೆ.
೨೩. TLM ಮೂಲಕ ಬೋಧನೆ.
೩೪. ಇನ್ಸಪೈರ್ ಅವಾರ್ಡ್ ಮೂಲಕ ಭಾವಿ ವಿಜ್ಞಾನಿಗಳಿಗೆ ಪ್ರೋತ್ಸಾಹ..
೨೫. ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ ಯೋಜನೆಯಡಿ ಉಚಿತ ಆರೋಗ್ಯ ತಪಾಸಣೆ.
೨೬. ವಿದ್ಯಾರ್ಥಿನಿಯರಿಗೆ ಉಚಿತ ಶುಚಿ ಪ್ಯಾಡ್.
೨೭. ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ.
೨೮. ರೇಡಿಯೋ ಮೂಲಕ ಚುಕ್ಕಿ ಚಿನ್ನ, ಕೇಳಿ ಕಲಿ ಕಾರ್ಯಕ್ರಮ
೨೯. ಉಚಿತವಾದ ಕಂಪ್ಯೂಟರ್ ಶಿಕ್ಷಣ.
೩೦. ಮೌಲ್ಯಶಿಕ್ಷಣ..
೩೧. ಮಕ್ಕಳಿಂದಲೇ ನಿರ್ಮಿತವಾದ ಸುಂದರ ಕೈ ತೋಟ.
೩೨. ಅಕ್ಷರ ಪೌಂಡೇಷನ್ ಸಹಯೋಗದಲ್ಲಿ ಗಣಿತ ಕಲಿಕೆಗೆ ಉಚಿತ ಸಾಮಗ್ರಿಗಳು.
೩೪. ಶಿಕ್ಷಣ ಕಲಿಕೆಯ ತಪಾಸಣೆಗಾಗಿ ದಕ್ಷ ಅಧಿಕಾರಿ/ ಮಾರ್ಗದರ್ಶಕರು.
೩೫. ಕಾಲ ಕಾಲಕ್ಕೆ ಶಿಕ್ಷಕರಿಗೆ ತರಬೇತಿ.
೩೬. ಮಕ್ಕಳ ಕಲಿಕೆ ಹಾಜರಾತಿ ದಾಖಲಿಸಲು SATS
೩೭. ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಪರಿಹಾರ ಬೋಧನೆ.
೭೮. ಉಚಿತ ಮಧ್ಯಾಹ್ನದ ಬಿಸಿಯೂಟ ಯೋಜನೆ.
೩೯. ಸಂಸತ್ ರಚನೆಯ ಮೂಲಕ ಪ್ರಜಾಪ್ರಭುತ್ವ ಪರಿಚಯ
೪೦. ಶಾಲೆ ಉಸ್ತುವಾರಿಗಾಗಿ sdmc ರಚನೆ.
೪೧. ವಿವಿಧ ಸಂಘಗಳ ರಚನೆಯ ಮೂಲಕ ಮಕ್ಕಳಲ್ಲಿ ಜಾಗೃತಿ.
೪೨. ಶಾಲಾ ವಾರ್ಷಿಕೋತ್ಸವ
೪೩. ನವೋದಯ ಆದರ್ಶ, ಮೊರಾರ್ಜಿ, ಕಸ್ತೂರಿಬಾ, ಕಿತ್ತೂರು ರಾಣಿ ಚೆನ್ನಮ್ಮ , ಇಂದಿರಾ, ಏಕಲವ್ಯ, ವಾಜಪೇಯಿ kps ವಸತಿ ಶಾಲೆಗಳು.
೪೪. ಮಕ್ಕಳಿಗೆ ಎಲ್ಲ ರೀತಿಯ ಮೌಲ್ಯಗಳ ಬೆಳವಣಿಗೆಗೆ ಮುಕ್ತ ಅವಕಾಶ.
೪೫. ದೈರ್ಯ, ಆತ್ಮವಿಶ್ವಾಸ, ನಾಯಕತ್ವ, ಕಷ್ಟ ಸಹಿಷ್ಣುತೆ, ಬಡತನ ಸಿರಿತನ ಇತ್ಯಾದಿಗಳ ನೈಜ ಅನುಭವ.
೪೬. ಸರ್ಕಾರಿ ವೃತ್ತಿಯಲ್ಲಿ ಕನ್ನಡ ಮಾಧ್ಯಮ, ಗ್ರಾಮಾಂತರ ಕೋಟಾ
*ಇಷ್ಟೊಂದು ಸೌಲಭ್ಯಗಳನ್ನು ಹೊಂದಿರುವ ಸರ್ಕಾರಿ ಶಾಲೆಗೆ ನಿಮ್ಮ ಮಕ್ಕಳನ್ನು ಸೇರಿಸಿ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಸಹಕರಿಸಿ.*
ನಿಮ್ಮಲ್ಲಿರುವ ಎಲ್ಲಾ
ಗ್ರೂಪ್ ಗಳಿಗೆ ಇದನ್ನು ಶೇರ್ ಮಾಡಿ ಸರಕಾರಿ ಶಾಲೆಗಳನ್ನು ಉಳಿಸುವ ಪುಟ್ಟ ಪ್ರಯತ್ನ ನಮ್ಮಿಂದಲೇ ಪ್ರಾರಂಭವಾಗಲಿ 🙏🙏
10/12/2025
ಹಿಂದಿನ ಶಿಕ್ಷಣದಿಂದ
ಮಕ್ಕಳು ಸಂಸ್ಕಾರ
ಸಂ-ಸಾರವನ್ನು
ಕಲಿತರೇ ; ಇಂದಿನ
ಶಿಕ್ಷಣದಿಂದ ಹಟ ಮತ್ತು
ವಾದ ಮಾಡುವುದನ್ನು
ಕಲಿಯುತ್ತಿದ್ದಾರೆ !
*ಹಾ ಮ ಸತೀಶ ಬೆಂಗಳೂರು*
06/11/2025
💥 ನಗುಮುಖದ ಡಾ ನಾ ಸೋಮೇಶ್ವರ ಸಾಧನೆ 💥
5 ಸಾವಿರ ಹೊಸ್ತಿಲಲ್ಲಿ ʼಥಟ್ ಅಂತ ಹೇಳಿ
ಹೊಸ ಮೈಲಿಗಲ್ಲಿನ ಸಂಚಿಕೆಯನ್ನು 11ರಂದು
"ಜಿಕೆವಿಕೆ ಆವರಣದಲ್ಲಿರುವ ಡಾ.ಬಾಬು ರಾಜೇಂದ್ರ ಪ್ರಸಾದ್ ಅಂತಾರಾಷ್ಟ್ರೀಯ ಕನ್ವೆನ್ಷನ್ ಕೇಂದ್ರದಲ್ಲಿ" ಚಿತ್ರೀಕರಣವಾಗಲಿದೆ. ಈ ಮಹತ್ವದ ಕಾರ್ಯಕ್ರಮದಲ್ಲಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಥ್, ಅರಣ್ಯ ಸಚಿವ ಈಶ್ವರ ಖಂಡ್ರೆ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ ಎನ್ನಲಾಗಿದೆ.
ವಿಶೇಷ ಸಂಚಿಕೆಯಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಥ್ ಭಾಗಿ
ಬೆಂಗಳೂರು: ಕನ್ನಡ ಕಿರುತೆರೆಯಲ್ಲಿ ತಮ್ಮದೇಯಾದ ಛಾಪು ಮೂಡಿಸಿರುವ ‘ಥಟ್ ಅಂತ ಹೇಳಿ’ ಕ್ವಿಜ್ ಕಾಯಕ್ರಮ ಐದು ಸಾವಿರ ಸಂಚಿಕೆಯ ಸನಿಹದಲ್ಲಿದೆ. ಈಗಾಗಲೇ ಹಲವು ದಾಖಲೆಗಳನ್ನು ಬರೆದಿರುವ ಥಟ್ ಅಂತ ಹೇಳಿ ಕ್ವಿಜ್ ಕಾರ್ಯಕ್ರಮ ಐದು ಸಾವಿರ ಸಂಚಿಕೆಗಳನ್ನು ಪೂರೈಸುತ್ತಿರುವ ದೇಶದ ವಾಹಿನಿಗಳ ಇತಿಹಾಸದಲ್ಲಿಯೇ ಮೊದಲ ಕಾರ್ಯಕ್ರಮ ಎನ್ನುವ ‘ದಾಖಲೆ’ ನಿರ್ಮಿಸಿದೆ.
ಈಗಾಗಲೇ ಲಿಮ್ಕಾ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ ದಾಖಲಾಗಿರುವ ಈ ಕಾರ್ಯಕ್ರಮ ಇದೀಗ ಗಿನ್ನಿಸ್ ವಿಶ್ವದಾಖಲೆಯತ್ತ ದಾಪುಗಾಲಿಟ್ಟಿದೆ. 2002ರ ಜನವರಿ 4ರಂದು ಪ್ರಾರಂಭವಾದ ಥಟ್ ಅಂತಾ ಹೇಳಿ ಕಾರ್ಯಕ್ರಮ ಅ.13ರಂದು ಐದು ಸಾವಿರದ ಸಂಚಿಕೆಯ ಪ್ರಸಾರಕ್ಕೆ ಸಜ್ಜಾಗಿದೆ.
ಹೊಸ ಮೈಲಿಗಲ್ಲಿನ ಸಂಚಿಕೆಯನ್ನು 11ರಂದು ಜಿಕೆವಿಕೆ ಆವರಣದಲ್ಲಿರುವ ಡಾ.ಬಾಬು ರಾಜೇಂದ್ರ ಪ್ರಸಾದ್ ಅಂತಾರಾಷ್ಟ್ರೀಯ ಕನ್ವೆನ್ಷನ್ ಕೇಂದ್ರದಲ್ಲಿ ಚಿತ್ರೀಕರಣವಾಗಲಿದೆ. ಈ ಮಹತ್ವದ ಕಾರ್ಯಕ್ರಮದಲ್ಲಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಥ್, ಅರಣ್ಯ ಸಚಿವ ಈಶ್ವರ ಖಂಡ್ರೆ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ ಎನ್ನಲಾಗಿದೆ.
ಡಾ.ನಾ.ಸೋಮೇಶ್ವರ ಅವರು ನಡೆಸಿಕೊಡುವ ಈ ಕಾರ್ಯಕ್ರಮದ ಉಸ್ತುವಾರಿ ಹಾಗೂ ನಿರ್ವಹಣೆ ಯ ಜವಾಬ್ದಾರಿಯನ್ನು ನಿಭಾಯಿಸುತ್ತಿರುವ ಎಚ್.ಎನ್.ಆರತಿ, ಕಾರ್ಯಕ್ರಮ ನಿರ್ಮಾಪಕರಾದ ಎಂ.ಎನ್.ಚಂದ್ರಕಲಾ ಇದೀಗ 500ನೇ ಸಂಚಿಕೆಯ ಸಿದ್ಧತೆಯನ್ನು ತೊಡಗಿದ್ದಾರೆ. 23 ವರ್ಷಗಳ ಹಿಂದೆ ಉಷಾಕಿಣಿ ಅವರು ಈ ಕಾರ್ಯಕ್ರಮ ಆರಂಭಿಸಿದ್ದರು. 100ನೇ ಸಂಚಿಕೆಯಲ್ಲಿ ರಾಜ್ಯಸಭಾ ಸದಸ್ಯರಾದ ಸುಧಾಮೂರ್ತಿ ಅವರು ಪಾಲ್ಗೊಂಡಿದ್ದರು.
ಕೋವಿಡ್‌ನಲ್ಲಿ ಮಾತ್ರ ಸ್ಥಗಿತ: ಚಂದನ ವಾಹಿನಿಯಲ್ಲಿ ಕಳೆದ 13 ವರ್ಷಗಳಿಂದ ನಿರಂತರವಾಗಿ ಪ್ರಸಾರವಾಗುತ್ತಿರುವ ಥಟ್ ಅಂತ ಹೇಳಿ ಕಾರ್ಯಕ್ರಮ ಕೋವಿಡ್ ಸಮಯಲ್ಲಿ ಕೆಲ ಕಾಲ ಸ್ಥಗಿತಗೊಂಡಿತ್ತು. ಇದನ್ನು ಹೊರತುಪಡಿಸಿ, ಇನ್ಯಾವ ಸಮಯದಲ್ಲಿಯೂ ಸ್ಥಗಿತವಾಗಿರಲಿಲ್ಲ. ನಿತ್ಯ 30 ನಿಮಿಷಗಳ ಕಾಲ ನಡೆಯುವ ಈ ಕಾರ್ಯಕ್ರಮ ಈವರೆಗೆ 2500 ಗಂಟೆಗಳ ಕಾಲ ಪ್ರಸಾರ ವಾಗಿದ್ದು, ಈ ಅವಧಿಯಲ್ಲಿ 75 ಸಾವಿರ ಪ್ರಶ್ನೆಗಳನ್ನು ಕೇಳಿದ್ದು, 15 ಸಾವಿರ ಸ್ಪರ್ಧಿಗಳು ಭಾಗ ವಹಿಸಿ 70 ಸಾವಿರ ಕನ್ನಡದ ವಿವಿಧ ಪ್ರಕಾರಗಳ ಪುಸ್ತಕಗಳನ್ನು ಬಹುಮಾನವಾಗಿ ಪಡೆದಿದ್ದಾರೆ. ವಿಶೇಷ ಸನ್ನಿವೇಶಗಳಲ್ಲಿ ವಿಭಿನ್ನ ರೀತಿಯಲ್ಲಿ ಈ ಕಾರ್ಯಕ್ರಮ ಮೂಡಿಬಂದಿದೆ.
*
ಕಾರಾಗೃಹ ವಾಸಿಗಳಿಗೆ ವಿಶೇಷ ಸ್ಪರ್ಧೆ, ಅಂಧರು, ಎಚ್‌ಐವಿ ಸೋಂಕಿತರು, ಐಟಿ ತಜ್ಞರು, ಅನಿವಾಸಿ ಭಾರತೀಯರು ಹೀಗೆ ಹತ್ತು ಹಲವು ವಿಭಾಗಗಳಲ್ಲಿ ವೈಶಿಷ್ಟ್ಯಪೂರ್ಣ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಾಗಿದೆ. ಇದೀಗ ಈ ಕಾರ್ಯಕ್ರಮ ಮತ್ತೊಂದು ಹೆಗ್ಗುರುತು ಮೂಡಿಸಲು ಸರ್ವ ಸನ್ನದ್ಧವಾಗಿದೆ.
-ಭಾಗ್ಯವಾನ್ ದೂರದರ್ಶನ ಕೇಂದ್ರ
ದಕ್ಷಿಣ ವಲಯದ ಉಪ ಮಹಾನಿರ್ದೇಶಕ
*
ಲಿಮ್ಕಾ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ದಾಖಲು
ಇದೀಗ ಗಿನ್ನಿಸ್ ವಿಶ್ವದಾಖಲೆಯತ್ತ ದಾಪುಗಾಲಿಡುತ್ತಿರುವ ಕಾರ್ಯಕ್ರಮ
23 ವರ್ಷಗಳ ಹಿಂದೆ ಆರಂಭವಾದ ಕನ್ನಡದ ಕಾರ್ಯಕ್ರಮ
20/11/2023
ವಿದ್ಯಾ ವಿನಯ ಸಂಪನ್ನಂ
ವೀತರಾಗಂ ವಿವೇಕಿನಮ್ |
ವಂದೇ ವೇದಾಂತ ತತ್ವಜ್ಞಂ
ವಿಧುಶೇಖರಭಾರತೀಮ್ ||🙏